ಕುಲದೀಪ್ ಯಾದವ್
ಕುಲದೀಪ್ ಯಾದವ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಎಡಗೈ ಚೈನಮ್ಯಾನ್ ಬೌಲರ್. ರಣಜಿ ಟ್ರೋಫೀಯಲ್ಲಿ ಉತ್ತರ ಪ್ರದೇಶದ ತಂಡಕ್ಕೆ ಆಡುತ್ತಾರೆ.[೧]
ವಯಕ್ತಿಕ ಮಾಹಿತಿ | ||||||||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪೂರ್ಣ ಹೆಸರು | ಕುಲದೀಪ್ ಯಾದವ್ | |||||||||||||||||||||||||||||||||||||||||||||||||||||||||||||||||
ಹುಟ್ಟು | ಉನ್ನಾವೊ, ಉತ್ತರ ಪ್ರದೇಶ, ಭಾರತ | ೧೪ ಡಿಸೆಂಬರ್ ೧೯೯೪|||||||||||||||||||||||||||||||||||||||||||||||||||||||||||||||||
ಬ್ಯಾಟಿಂಗ್ | ಎಡಗೈ | |||||||||||||||||||||||||||||||||||||||||||||||||||||||||||||||||
ಬೌಲಿಂಗ್ | ನಿಧಾನವಾದ ಎಡಗೈ ಚೈನಾಮನ್ | |||||||||||||||||||||||||||||||||||||||||||||||||||||||||||||||||
ಪಾತ್ರ | ಬೌಲರ್ | |||||||||||||||||||||||||||||||||||||||||||||||||||||||||||||||||
ಅಂತಾರಾಷ್ಟ್ರೀಯ ಮಾಹಿತಿ | ||||||||||||||||||||||||||||||||||||||||||||||||||||||||||||||||||
ರಾಷ್ಟೀಯ ತಂಡ | ||||||||||||||||||||||||||||||||||||||||||||||||||||||||||||||||||
ಟೆಸ್ಟ್ ಚೊಚ್ಚಲ (ಕ್ಯಾಪ್ ೨೮೮) | ೨೬ ಮಾರ್ಚ್ ೨೦೧೭ v ಆಸ್ಟ್ರೇಲಿಯಾ | |||||||||||||||||||||||||||||||||||||||||||||||||||||||||||||||||
ಕೊನೆಯ ಟೆಸ್ಟ್ | ೯ ಆಗಸ್ಟ್ ೨೦೧೮ v ಇಂಗ್ಲೆಂಡ್ | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಚೊಚ್ಚಲ (ಕ್ಯಾಪ್ ೨೧೭) | ೨೩ ಜೂನ್ ೨೦೧೭ v ವೆಸ್ಟ್ ಇಂಡೀಸ್ | |||||||||||||||||||||||||||||||||||||||||||||||||||||||||||||||||
ಕೊನೆಯ ಅಂ. ಏಕದಿನ | ೧೭ ಜುಲೈ ೨೦೧೮ v ಇಂಗ್ಲೆಂಡ್ | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಅಂಗಿ ನಂ. | ೨೩ | |||||||||||||||||||||||||||||||||||||||||||||||||||||||||||||||||
ಟಿ೨೦ಐ ಚೊಚ್ಚಲ | ೯ ಜುಲೈ ೨೦೧೭ v ವೆಸ್ಟ್ ಇಂಡೀಸ್ | |||||||||||||||||||||||||||||||||||||||||||||||||||||||||||||||||
ಕೊನೆಯ ಟಿ೨೦ಐ | ೬ ಜುಲೈ ೨೦೧೮ v ಇಂಗ್ಲೆಂಡ್ | |||||||||||||||||||||||||||||||||||||||||||||||||||||||||||||||||
ಟಿ೨೦ಐ ಅಂಗಿ ನಂ. | ೨೩ | |||||||||||||||||||||||||||||||||||||||||||||||||||||||||||||||||
ದೇಶೀಯ ತಂಡದ ಮಾಹಿತಿ | ||||||||||||||||||||||||||||||||||||||||||||||||||||||||||||||||||
ವರ್ಷಗಳು | ತಂಡ | |||||||||||||||||||||||||||||||||||||||||||||||||||||||||||||||||
೨೦೧೨ | ಮುಂಬೈ ಇಂಡಿಯನ್ಸ್ | |||||||||||||||||||||||||||||||||||||||||||||||||||||||||||||||||
೨೦೧೪-೧೮ | ಕೊಲ್ಕತ್ತಾ ನೈಟ್ ರೈಡರ್ಸ್ (squad no. ೨೩ (formerly 18)) | |||||||||||||||||||||||||||||||||||||||||||||||||||||||||||||||||
೨೦೧೪-ಇಂದಿನವರೆಗೆ | ಉತ್ತರ ಪ್ರದೇಶ | |||||||||||||||||||||||||||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | ||||||||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||||||||
ಮೂಲ: ESPNCricinfo, ೯ ಆಗಸ್ಟ್ ೨೦೧೮ |
ಆರಂಭಿಕ ಜೀವನ
ಬದಲಾಯಿಸಿಕುಲದೀಪ್ ಯಾದವ್‍ರವರು ಡಿಸೆಂಬರ್ ೧೪, ೧೯೯೪ರಲ್ಲಿ ಉತ್ತರ ಪ್ರದೇಶದ ಕಾನ್ಪುರ್‍ನಲ್ಲಿ ಜನಿಸಿದರು. ಆರಂಭದಲ್ಲಿ ಕುಲದೀಪ್ ವೇಗದ ಬೌಲರ ಆಗಿದ್ದರು, ಆದರೆ ತಮ್ಮ ಕೋಚ್ ರವರ ಸಲಹೆಯ ಮೇರೆಗೆ ಇವರು ಚೈನಮ್ಯಾನ್ ಬೌಲರಾಗಿ ತಮ್ಮ ಶೈಲಿಯನ್ನು ಬದಲಾಯಿಸಿಕೊಂಡರು. ಇವರು ೨೦೧೪ರಲ್ಲಿ ನಡೆದ ೧೯ರ ವಯ್ಯೋಮಿತಿಯ ವಿಶ್ವಕಪ್‍ನಲ್ಲಿ ಸ್ಕಾಟ್ ಲ್ಯಾಂಡ್ ವಿರುದ್ಧದ ಪಂಡ್ಯದಲ್ಲ್ಲಿ ಹ್ಯಾಟ್ರಿಕ್ ವಿಕೆಟ ಪಡೆದರು. ಈ ಮೂಲಕ ೧೯ರ ವಯ್ಯೋಮಿತಿ ವಿಶ್ವಕಪ್‍ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಭಾರತೀಯ ಎಂಬ ಹಿರಿಮೆಗೆ ಪಾತ್ರರಾದರು. ಇದೆ ಸರಣಿಯೆಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಕೂಡ ಆಗಿದ್ದರು.[೨]
ವೃತ್ತಿ ಜೀವನ
ಬದಲಾಯಿಸಿಐಪಿಎಲ್ ಕ್ರಿಕೆಟ್
ಬದಲಾಯಿಸಿ೨೦೧೨ರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದರು, ಆದರೆ ೧೧ರ ಬಳಗದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಹೀಗೆ ೨೦೧೪ರಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದಲ್ಲಿದ್ದರೂ ೧೧ರ ಬಳಗದಲ್ಲಿ ಸ್ಥಾನ ಪಡೆಯಲಿಲ್ಲ. ೨೦೧೬ರ ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಪರ ಐಪಿಎಲ್‍ನಲ್ಲಿ ಪಾದಾರ್ಪಣೆ ಮಾಡಿದರು. ತಾವು ಆಡಿದ ೦೩ ಪಂದ್ಯಗಳಿಂದ ೦೬ ವಿಕೆಟ್ ಪಡೆದರು. ಅದೇ ವರ್ಷ (೨೦೧೬) ಅವರನ್ನು ದುಲೀಪ್ ಟ್ರೋಫಿಗೂ ಆಯ್ಕೆ ಮಾಡಲಾಯಿತು. ದುಲೀಪ್ ಟ್ರೋಫಿಯಲ್ಲಿ ಮೂರು ಪಂದ್ಯಗಳನ್ನಾಡಿ ೧೭ ವಿಕೆಟ್‍ಗಳನ್ನ ಪಡೆದರು.[೩]
ಅಂತರರಾಷ್ತ್ರೀಯ ಕ್ರಿಕೆಟ್
ಬದಲಾಯಿಸಿಮಾರ್ಚ್ ೨೫, ೨೦೧೭ರಂದು ಧರ್ಮಶಾಲದಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆದ ೪ನೇ ಟೆಸ್ಟ್ ಪಂದ್ಯದ ಮೂಲಕ ಅಂತರರಾಷ್ತ್ರೀಯ ಕ್ರಿಕೆಟ್‍ಗೆ ಪಾದಾರ್ಪನೆ ಮಾಡಿದರು. ತಮ್ಮ ಚೊಚ್ಚಲ ಪಂದ್ಯದಲ್ಲಿ ೦೪ ವಿಕೆಟ್‍ಗಳನ್ನ ಪಡೆದರು. ಜೂನ್ ೨೩, ೨೦೧೭ರಲ್ಲಿ ವೆಷ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದ ಮೂಲಕ ಇವರು ಏಕದಿನ ಕ್ರಿಕೆಟ್‍ಗೆ ಪಾದಾರ್ಪನೆ ಮಾಡಿದರು. ಈ ಸರಣಿಯಲ್ಲಿ ಇವರು ಜಂಟಿ ಅತೀಹೆಚ್ಚು ವಿಕೆಟ್ ಪಡೆದ ಬೌಲರಾಗಿದ್ದರು. ನಂತರ ಶ್ರೀಲಂಕಾ ವಿರುದ್ಧದ ಸರಣಿಗೆ ಕೂಡ ಆಯ್ಕೆ ಆದರು. ಜುಲೈ ೦೯, ೨೦೧೭ರಲ್ಲಿ ವೆಷ್ಟ್ ಇಂಡೀಸ್ ವಿರುದ್ಧ ನಡೆದ ಏಕೈಕ ಟಿ-೨೦ ಪಂದ್ಯದ ಮೂಲಕ ಟಿ-೨೦ ಜಗತ್ತಿಗೂ ಪಾದಾರ್ಪನೆ ಮಾಡಿದರು.[೪][೫][೬]
ಸಾಧನೆಗಳು
ಬದಲಾಯಿಸಿ- ೧೯ರ ವಯ್ಯೋಮಿತಿಯ ವಿಶ್ವಕಪ್‍ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಭಾರತೀಯ ಕ್ರಿಕೆಟಿಗ. (೨೦೧೪ರ ಸ್ಕಾಟ್ ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ)[೭]
- ಏಕದಿನ ಕ್ರಿಕೆಟ್‍ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ೩ನೇ ಭಾರತೀಯ ಕ್ರಿಕೆಟಿಗ. (೨೦೧೭ರ ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ)[೮]
ಪಂದ್ಯಗಳು
ಬದಲಾಯಿಸಿ- ಏಕದಿನ ಕ್ರಿಕೆಟ್ : ೧೦ ಪಂದ್ಯಗಳು[೯][೧೦][೧೧][೧೨]
- ಟೆಸ್ಟ್ ಕ್ರಿಕೆಟ್ : ೦೨ ಪಂದ್ಯಗಳು
- ಟಿ-೨೦ ಕ್ರಿಕೆಟ್ : ೦೨ ಪಂದ್ಯಗಳು
- ಐಪಿಎಲ್ ಕ್ರಿಕೆಟ್ : ೧೫ ಪಂದ್ಯಗಳು
ವಿಕೆಟ್‍ಗಳು
ಬದಲಾಯಿಸಿ- ಏಕದಿನ ಪಂದ್ಯಗಳಲ್ಲಿ : ೧೮ ವಿಕೆಟ್‍ಗಳು
- ಟೆಸ್ಟ್ ಪಂದ್ಯಗಳಲ್ಲಿ : ೦೯ ವಿಕೆಟ್‍ಗಳು
- ಟಿ-೨೦ ಪಂದ್ಯಗಳಲ್ಲಿ : ೦೩ ವಿಕೆಟ್‍ಗಳು
- ಐಪಿಎಲ್ ಪಂದ್ಯಗಳಲ್ಲಿ : ೧೮ ವಿಕೆಟ್‍ಗಳು
ಉಲ್ಲೇಖಗಳು
ಬದಲಾಯಿಸಿ- ↑ https://en.wikipedia.org/wiki/Kuldeep_Yadav
- ↑ http://www.timesnownews.com/sports/article/kuldeep-yadavs-maiden-hat-trick-in-india-colours-watch-video/94262
- ↑ http://www.cricbuzz.com/profiles/8292/kuldeep-yadav#profile
- ↑ http://www.cricbuzz.com/live-cricket-scorecard/17402/india-vs-australia-4th-test-australia-test-tour-of-india-2017
- ↑ http://www.cricbuzz.com/live-cricket-scorecard/18361/windies-vs-india-1st-odi-india-tour-of-west-indies-2017
- ↑ http://www.cricbuzz.com/live-cricket-scorecard/18366/windies-vs-india-only-t20i-india-tour-of-west-indies-2017
- ↑ https://circleofcricket.co/2017/Sep/23/Watch-Kuldeep-Yadavs-first-Hat-trick-playing-for-India-U-19/[ಶಾಶ್ವತವಾಗಿ ಮಡಿದ ಕೊಂಡಿ]
- ↑ http://indiatoday.intoday.in/story/kuldeep-yadav-hat-trick-india-vs-australia/1/1053190.html
- ↑ http://www.espncricinfo.com/india/content/player/559235.html
- ↑ http://www.news18.com/cricketnext/profile/kuldeep-yadav/63187.html
- ↑ https://sports.ndtv.com/cricket/players/63624-kuldeep-yadav-playerprofile
- ↑ "ಆರ್ಕೈವ್ ನಕಲು". Archived from the original on 2017-09-24. Retrieved 2017-10-01.