ಕಿರಣ್ ಮೋರೆ
ಕಿರಣ್ ಶಂಕರ್ ಮೋರೆ ಅವರು ಸೆಪ್ಟೆಂಬರ್ ೪, ೧೯೬೨ ರಲ್ಲಿ ಗುಜರಾತ್ ರಾಷ್ಟ್ರದ, ವಡೋದರಾ ಜಿಲ್ಲೆಯಲ್ಲಿ ಜನಿಸಿದರು. ಮೋರೆಯವರು ೧೯೮೩ ರಿಂದ ೧೯೯೩ ರವರೆಗೆ ಭಾರತೀಯ ಕ್ರಿಕೆಟ್ ತಂಡದ ವಿಕೆಟ್-ಕೀಪರ್ ಆಗಿ ಸೇವೆ ಸಲ್ಲಿಸಿದರು. ಕಿರಣ್.ಎಸ್.ಮೋರೆ ಅವರ ಧರ್ಮಪತ್ನಿ ರಾವಿ ಮೋರೆ. ೨೦೦೬ ರಲ್ಲಿ ಕಿರಣ್ ಮೋರೆ ಅವರು ದಿಲೀಪ್ ವೆಂಗ್ಸರ್ಕಾರ್ ಅವರ ನಂತರ, ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ (ಬಿಸಿಸಿಐ) ಸಮಿತಿಯ ಅಧ್ಯಕ್ಷರಾದರು. ಜುಲೈ ೨೦೧೯ ರಲ್ಲಿ ಅವರು ಯುನೈಟೆಡ್ ಸ್ಟೇಟ್ಸ್ ರಾಷ್ಟ್ರೀಯ ಕ್ರಿಕೆಟ್ ತಂಡದ ಹಿರಿಯ ಸಲಹೆಗಾರರಾಗಿ ನೇಮಕಗೊಂಡರು.[೧] ಮೋರೆ ಅವರ ವಿದ್ಯಾಭ್ಯಾಸ ಬರೋಡದ, ಮಹಾರಾಜಾ ಸಯ್ಯಜಿರಾವ್ ವಿಶ್ವವಿದ್ಯಾಲಯದಲ್ಲಿ ನಡೆಯಿತು. ಭಾರತದ ಕ್ರಿಕೆಟ್ ಕ್ಷೇತ್ರದಲ್ಲಿ, ಕಿರಣ್ ಮೋರೆಯವರ ಅಪಾರ ಕೊಡುಗೆಯನ್ನು ಗುರುತಿಸಿ, ಅವರಿಗೆ ೧೯೯೩ರಲ್ಲಿ ಅತ್ಯುನ್ನತವಾದ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ವಯಕ್ತಿಕ ಮಾಹಿತಿ | ||||||||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪೂರ್ಣ ಹೆಸರು | ಕಿರಣ್ ಶಂಕರ್ ಮೋರೆ | |||||||||||||||||||||||||||||||||||||||||||||||||||||||||||||||||
ಹುಟ್ಟು | ಬರೋಡ, ಗುಜರಾತ್, ಭಾರತ | ೪ ಸೆಪ್ಟೆಂಬರ್ ೧೯೬೨|||||||||||||||||||||||||||||||||||||||||||||||||||||||||||||||||
ಬ್ಯಾಟಿಂಗ್ | ಬಲಗೈ | |||||||||||||||||||||||||||||||||||||||||||||||||||||||||||||||||
ಬೌಲಿಂಗ್ | ಬಲಗೈ ಲೆಗ್ ಸ್ಪಿನ್ | |||||||||||||||||||||||||||||||||||||||||||||||||||||||||||||||||
ಪಾತ್ರ | ವಿಕೆಟ್-ಕೀಪರ್ | |||||||||||||||||||||||||||||||||||||||||||||||||||||||||||||||||
ಅಂತಾರಾಷ್ಟ್ರೀಯ ಮಾಹಿತಿ | ||||||||||||||||||||||||||||||||||||||||||||||||||||||||||||||||||
ರಾಷ್ಟೀಯ ತಂಡ |
| |||||||||||||||||||||||||||||||||||||||||||||||||||||||||||||||||
ಟೆಸ್ಟ್ ಚೊಚ್ಚಲ (ಕ್ಯಾಪ್ ೧೭೩) | ೪ ಜೂನ್ ೧೯೮೬ v ಇಂಗ್ಲೆಂಡ್ | |||||||||||||||||||||||||||||||||||||||||||||||||||||||||||||||||
ಕೊನೆಯ ಟೆಸ್ಟ್ | ೯ ಆಗಸ್ಟ್ ೧೯೯೩ v ಶ್ರೀಲಂಕಾ | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಚೊಚ್ಚಲ (ಕ್ಯಾಪ್ ೫೦) | ೫ ಡಿಸೆಂಬರ್ ೧೯೮೪ v ಇಂಗ್ಲೆಂಡ್ | |||||||||||||||||||||||||||||||||||||||||||||||||||||||||||||||||
ಕೊನೆಯ ಅಂ. ಏಕದಿನ | ೫ ಮಾರ್ಚ್ ೧೯೯೩ v ಇಂಗ್ಲೆಂಡ್ | |||||||||||||||||||||||||||||||||||||||||||||||||||||||||||||||||
ದೇಶೀಯ ತಂಡದ ಮಾಹಿತಿ | ||||||||||||||||||||||||||||||||||||||||||||||||||||||||||||||||||
ವರ್ಷಗಳು | ತಂಡ | |||||||||||||||||||||||||||||||||||||||||||||||||||||||||||||||||
೧೯೮೦/೮೧–೧೯೯೭/೯೮ | ಬರೋಡ | |||||||||||||||||||||||||||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | ||||||||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||||||||
ಮೂಲ: CricketArchive, ೩೦ ಸೆಪ್ಟೆಂಬರ್ ೨೦೦೮ |
ಆರಂಭಿಕ ವೃತ್ತಿ
ಬದಲಾಯಿಸಿ೧೯೭೦ ರಲ್ಲಿ ಇಂಡಿಯ ಅಂಡರ್ - ೧೯ ತಂಡಕ್ಕಾಗಿ ಆಡಿದರು.[೨] ಬಾಂಬೆಯಲ್ಲಿನ ಟೈಮ್ಸ್ ಶೀಲ್ಡ್ ನಲ್ಲಿ ಟಾಟಾ ಸ್ಪೋರ್ಟ್ಸ್ ಕ್ಲಬ್ ಮತ್ತು ೧೯೮೨ ರಲ್ಲಿ, ನಾರ್ತ್ ಲ್ಯಾಂಕಾಷೈರ್ ಲೀಗ್‍ನಲ್ಲಿ ಬ್ಯಾರೋಗಾಗಿ ಅವರು ಆಡಿದರು. ಅವರು ೧೯೮೨ – ೮೩ ರಲ್ಲಿನ ಟೆಸ್ಟ್‌ನಲ್ಲಿ ಆಡದೆ ವೆಸ್ಟ್ ಇಂಡೀಸ್ ಸೈಯದ್ ಕಿರ್ಮಾನಿಗೆ ಅಂಡರ್‌ಸ್ಟಡಿಯಾಗಿ ಪ್ರವಾಸ ಮಾಡಿದರು.
೧೯೮೩ - ೮೪ ರಲ್ಲಿ ರಣಜಿ ಟ್ರೋಫಿಯಲ್ಲಿ ಬರೋಡಾ ಪರವಾಗಿ ಮೋರೆ ಎರಡು ಪ್ರಮುಖ ಇನ್ನಿಂಗ್ಸ್‌ಗಳನ್ನು ಆಡಿದರು - ಮಹಾರಾಷ್ಟ್ರ ವಿರುದ್ಧ ೧೫೩* ಮತ್ತು ಉತ್ತರ ಪ್ರದೇಶ ವಿರುದ್ಧ ೧೮೧*. ನಂತರದ ದಿನಗಳಲ್ಲಿ, ಅವರು ವಾಸುದೇವ್ ಪಟೇಲ್ ಅವರೊಂದಿಗೆ ಕೊನೆಯ ವಿಕೆಟ್‍ಗೆ ೧೪೫ ರನ್‍ಗಳನ್ನು ಗಳಿಸಿದರು. ಇದು ಸುಮಾರು ಒಂದು ದಶಕದ ಕಾಲ ರಣಜಿ ದಾಖಲೆಯಾಗಿ ನಿಂತಿತು. ದೆಹಲಿಗೆ ಸೋಲುವ ಮೊದಲು, ಬರೋಡಾ ಸೆಮಿಫೈನಲ್‍ಗೆ ಅರ್ಹತೆ ಪಡೆದರು. ೧೯೮೪-೮೫ ರಲ್ಲಿ ಇಂಗ್ಲೆಂಡ್‍ನ ವಿರುದ್ಧ ನಡೆದ ಎರಡು ಏಕದಿನ ಪಂದ್ಯಗಳಲ್ಲಿ ಮೋರೆಯವರು ಕಾಣಿಸಿಕೊಂಡರು.
ಅಂತರರಾಷ್ಟ್ರೀಯ ಕ್ರಿಕೆಟ್
ಬದಲಾಯಿಸಿ೧೯೮೫-೮೬ ರಲ್ಲಿ ಕಿರಣ್ ಮೋರೆಯವರು ಭಾರತದ ಕ್ರಿಕೆಟ್ ತಂಡದೊಂದಿಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋದರು. ವರ್ಲ್ಡ್ ಸೀರೀಸ್ ಕಪ್‍ನ ಆರಂಭಿಕ ಪಂದ್ಯದಲ್ಲಿ ಸ್ಯೆದ್ ಕಿರ್ಮಾನಿಗೆ ಆದ ಗಾಯವು ಅಂತರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸಿತು, ಆಗ ಪಂದ್ಯಾವಳಿಯ ಉಳಿದ ಪಂದ್ಯಗಳಲ್ಲಿ ಮೋರೆಯವರು ಆಡಿದರು. ೧೯೮೫ ರ ಅಂತ್ಯದ ವೇಳೆಗೆ, ಪ್ರಾರಂಭವಾಗುವ ಈ ಪ್ರವಾಸ ೧೯೮೫ ರ ಆರಂಭದಲ್ಲಿ ಆಸ್ಟ್ರೇಲಿಯಾದಲ್ಲಿ ವಿಶ್ವ ಚಾಂಪಿಯನ್‍ಶಿಪ್ ಕ್ರಿಕೆಟ್‍ಗೆ ಪ್ರಸಿದ್ಧ ವಿಜೇತ ಪ್ರವಾಸದೊಂದಿಗೆ ಗೊಂದಲಕ್ಕೀಡಾಗಬಾರದು. ಅಂದಿನಿಂದ ೧೯೯೩ ರವರೆಗೂ, ಟೆಸ್ಟ್ ಪಂದ್ಯಗಳಲ್ಲಿ ಭಾರತಕ್ಕೆ ವಿಕೆಟ್ ಕೀಪರ್ ಆಗಿ ಮೋರೆಯವರು ಆಯ್ಕೆಯಾಗಿದ್ದರು. ಒಂದು ದಿನದ ಪಂದ್ಯದಲ್ಲಿ ಮೋರೆಯವರು ತಮ್ಮ ಉತ್ತಮ ವಿಕೆಟ್-ಕೀಪರ್ ಸ್ಥಾನವನ್ನು ಕಳೆದುಕೊಂಡರು, ಏಕೆಂದರೆ, ಇತರ ವಿಕೆಟ್-ಕೀಪರ್ ಒಳ್ಳೆಯ ಬ್ಯಾಟ್ಸ್ ಮ್ಯಾನ್‍ಗಳು ಕೂಡ ಆಗಿದ್ದರು .
೧೯೮೬ ರಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಮೋರೆಯವರು ಇಂಗ್ಲೆಂಡಿನ ವಿರುದ್ಧದ ಪಂದ್ಯದಲ್ಲಿ ಯಶಸ್ವಿಯಾದರು. ಟೆಸ್ಟ್ ಗಳಲ್ಲಿ ೧೬ ಕ್ಯಾಚ್‍ಗಳನ್ನು ತೆಗೆದುಕೊಂಡರು. ಸಾಮಾನ್ಯ ಬ್ಯಾಟ್ಸ್ ಮ್ಯಾನ್‍ಗಳು ವಿಫಲವಾದಾಗ, ಮೋರೆಯವರು ಪ್ರಮುಖ ಇನ್ನಿಂಗ್ಸ್ ಅನ್ನು ಆಡಿದ ಸಣ್ಣ, ನಿರತ ಬ್ಯಾಟುಗಾರರಾಗಿದ್ದರು. ೧೯೮೮ - ೮೯ ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅವರು ೫೦ ರನ್‍ಗಳನ್ನು ಬಾರಿಸಿದರು, ಭಾರತವು ೬೩ ರಲ್ಲಿ ಮೊದಲ ಆರು ವಿಕೆಟ್‍ಗಳನ್ನು ಕಳೆದುಕೊಂಡಿತು, ಮತ್ತು ಪಾಕಿಸ್ತಾನದ ವಿರುದ್ಧ ಕರಾಚಿಯಲ್ಲಿ ಭಾರತವು ಫಾಲೋ-ಆನ್ ಅನ್ನು ಉಳಿಸಲು ಹೆಣಗಾಡುತ್ತಿರುವಾಗ ೫೮ ರನ್ ಗಳಿಸಿತು. ಕರಾಚಿಯ ಇನ್ನಿಂಗ್ಸ್ ಅವರ ವೃತ್ತಿಜೀವನದ ಅತ್ಯುತ್ತಮವಾದ ಪಂದ್ಯವೆಂದು ಪರಿಗಣಿಸಲಾಗಿದೆ.[೨] ೧೯೮೮ - ೮೯ ರಲ್ಲಿ ಮದ್ರಾಸ್‍ನಲ್ಲಿ, ವೆಸ್ಟ್ ಇಂಡೀಸ್ ವಿರುದ್ಧ, ಅವರು ಆರು ಬ್ಯಾಟ್ಸ್ ಮ್ಯಾನ್‍ಗಳನ್ನು ಸ್ಟಂಪ್ ಮಾಡಿದರು, ಅವರಲ್ಲಿನ ಐದು ಬ್ಯಾಟ್ಸ್ ಮ್ಯಾನ್‍ಗಳನ್ನು ಎರಡನೆಯ ಇನ್ನಿಂಗ್ಸ್ ನಲ್ಲಿ ಸ್ಟಂಪ್ ಮಾಡಿದರು, ಇವೆರಡೂ ಟೆಸ್ಟ್ ದಾಖಲೆಗಳಾಗಿ ಉಳಿದಿವೆ.
೧೯೯೦ ಮತ್ತು ನಂತರ
ಬದಲಾಯಿಸಿ೧೯೮೯ - ೯೦ ರಲ್ಲಿ ನ್ಯೂಜಿಲೆಂಡ್ ಪ್ರವಾಸ ಮಾಡಿದ ತಂಡದ ಮೊಹಮ್ಮದ್ ಅಜರುದ್ದೀನ್ ಅವರ ಉಪನಾಯಕನಾಗಿ ಮೋರೆಯವರು ಆಯ್ಕೆಯಾದರು. ನೇಪಿಯರ್ನಲ್ಲಿ ನಡೆದ ಎರಡನೇ ಟೆಸ್ಟ್ ನಲ್ಲಿ ಅವರು ೭೩ ರನ್‍ಗಳನ ಗರಿಷ್ಠ ಸ್ಕೋರ್ ಗಳಿಸಿದರು. ಆ ವರ್ಷದಲ್ಲಿ, ಇಂಗ್ಲೆಂಡ್ನಲ್ಲಿ, ರವಿ ಶಾಸ್ತ್ರಿಯವರ ಉಪ ನಾಯಕತ್ವ ಕಳೆದುಕೊಂಡರು. ಅವರು ೩೬ ರ ಹರೆಯದವರಾಗಿದ್ದಾಗ, ಲಾರ್ಡ್ಸ್ ಟೆಸ್ಟ್ ನಲ್ಲಿ ೩೩೩ ರನ್‍ಗಳನ್ನು ಗಳಿಸಿದರು ಮತ್ತು ಆಂಗ್ಲರ ಆರಂಭಿಕ ಆಟಗಾರ ಗ್ರಹಾಂ ಗೂಚ್‍ರನ್ನು ಮೋರೆ ಕೈಬಿಟ್ಟರು. ೧೯೯೨ ರ ವಿಶ್ವಕಪ್‍ನಲ್ಲಿ ಮೋರೆಯವರು ಸಣ್ಣ ವಿವಾದದಲ್ಲಿ ಭಾಗಿಯಾಗಿದ್ದರು.[೩] (ಜಾವೆದ್ ಮಿಯಾಂದಾದ್ ಅವರು ಮಿತಿಮೀರಿದ ಮನವಿಗೆ ಕಾರಣದಿಂದಾಗಿ 'ಜಂಪ್-ಫ್ರಾಗ್' ಅನ್ನು ಹಾರಿಸುವ ಮೂಲಕ ಅವರನ್ನು ಗೇಲಿ ಮಾಡಿದರು.)
೧೯೯೪ ರ ಆರಂಭದ ವೇಳೆಗೆ, ಅವರು ತಮ್ಮ ಬರೋಡ ತಂಡದ ಸಹಆಟಗಾರ ನಯಾನ್ ಮೊಂಗಿಯಾಗೆ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟರು. ಇದರಿಂದ ಹೆಚ್ಚಾಗಿ ರಾಜ್ಯ ತಂಡದ ಬ್ಯಾಟುಗಾರನಾಗಿ ಮೋರೆಯವರು ಆಡಿದರು. ಅವರು ೧೯೯೮ ರವರೆಗೆ ಬರೋಡದ ನಾಯಕತ್ವ ವಹಿಸಿದರು.
೧೯೯೭ ರಲ್ಲಿ ಕಿರಣ್ ಮೋರೆ-ಅಲೆಂಬಿಕ್ ಕ್ರಿಕೆಟ್ ಅಕಾಡೆಮಿಯನ್ನೂ ಪ್ರಾರಂಭಿಸಿದರು. ಅವರು ೨೦೦೨ - ೨೦೦೬ ರಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.
ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಅವರು ಹಳೆಯ ಮತ್ತು ಅನುಭವಿ ಆಟಗಾರರನ್ನು ತೆಗೆದುಹಾಕಿದರು. ಈ ಮೂಲಕ ಭಾರತೀಯ ತಂಡದಲ್ಲಿ ಯುವ ಕ್ರಿಕೆಟಿಗರಿಗೆ ಅವಕಾಶ ಕಲ್ಪಿಸುವ ಮೂಲಕ, ಅವರನ್ನು ಉತ್ತೇಜಿಸಲು ಮತ್ತು ಪ್ರೋತ್ಸಾಹಿಸಲು ಪ್ರತಿಜ್ಞೆ ಮಾಡಿದರು.
ಚಲನಚಿತ್ರಕಲೆ
ಬದಲಾಯಿಸಿಚಲನಚಿತ್ರ
ಬದಲಾಯಿಸಿದೂರದರ್ಶನ
ಬದಲಾಯಿಸಿ- ತಮನ್ನಾ (ಟಿವಿ ಸರಣಿ)[೪] (೨೦೧೬)
ಬಾಹ್ಯಕೊಂಡಿಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "USA Cricket Announces New National Team Coaching Structure". USA Cricket. 13 July 2019. Retrieved 13 July 2019.
- ↑ ೨.೦ ೨.೧ Interview with More
- ↑ The 'frog incident'
- ↑ "Kiran More To Do Cameo on Cricket-Based TV Show". Mid Day. 5 March 2016.