ಕಾರ್ಯಾಚರಣೆಗಳ ನಿರ್ವಹಣೆ

ಕಾರ್ಯಾಚರಣೆಗಳ ನಿರ್ವಹಣೆ ಸರಕು ಮತ್ತು ಸೇವೆಗಳ ಉತ್ಪಾದನೆಗೆ ಸಂಬಂಧಿಸಿದ ವ್ಯಾಪಾರದ ಒಂದು ಭಾಗವಾಗಿದೆ ಹಾಗೂ ಈ ವ್ಯವಹಾರ ಕಾರ್ಯಾಚರಣೆಗಳು ಎಷ್ಟು ಕಡಿಮೆ ಸಾಧ್ಯವೋ ಅಷ್ಟು ಸಂಪನ್ಮೂಲಗಳನ್ನು ಮಾತ್ರ ಸಮರ್ಥವಾಗಿ ಬಳಸಿಕೊಳ್ಳುವಂತೆ ನೋಡಿಕೊಳ್ಳುವ ಹಾಗೂ ಗ್ರಾಹಕರ ಅಗತ್ಯತೆಗಳನ್ನು ಪೂರೈಸುವಲ್ಲಿ ಸಫಲವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಇದು ಒಳಗೊಂಡಿದೆ. ಇದು ಕಚ್ಚಾವಸ್ತು (ವಸ್ತು, ದುಡಿಮೆ ಮತ್ತು ಶಕ್ತಿಯ ರೂಪದಲ್ಲಿರುವ)ಗಳನ್ನು ಉತ್ಪಾದನೆ(ಸರಕು ಮತ್ತು ಸೇವೆಗಳ ರೂಪಕ್ಕೆ)ಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆಯ ನಿರ್ವಹಣೆಗೆ ಸಂಬಂಧಿಸಿದೆ. 'ಕಾರ್ಯಾಚರಣೆಗಳು’ ಎಂದರೆ ಸಾಂಪ್ರದಾಯಿಕವಾಗಿ ಸರಕು ಮತ್ತು ಸೇವೆಗಳ ಉತ್ಪಾದನೆಗೆ ಪ್ರತ್ಯೇಕವಾಗಿ ಅನ್ವಯಿಸುತ್ತಾದರೂ, ಉತ್ಪಾದಕರು ಉತ್ಪಾದನೆ ಮತ್ತು ಸೇವೆಗಳನ್ನು ಸೇರಿಸಿ ಗ್ರಾಹಕರ ಮುಂದೆ ಒಡ್ಡುವುದರಿಂದ, ಕಾರ್ಯಾಚರಣೆಗಳ ಈ ಎರಡು ಪ್ರಮುಖ ವಿಧಗಳನ್ನು ಬೇರ್ಪಡಿಸುವುದು ದಿನದಿನಕ್ಕೂ ಕಷ್ಟವಾಗುತ್ತಿದೆ. ಇನ್ನೂ ಸಾಮಾನ್ಯವಾಗಿ ಹೇಳಬೇಕೆಂದರೆ, ಯಾವುದೇ ಪ್ರಕ್ರಿಯೆಯಲ್ಲಿ ಮೌಲ್ಯ-ವರ್ಧಿತ ಚಟುವಟಿಕೆಗಳನ್ನು ಹೆಚ್ಚಿಸುವುದು ಕಾರ್ಯಾಚರಣೆಗಳ ನಿರ್ವಹಣೆಯ ಉದ್ದೇಶ. ಮೂಲತಃ, ಈ ಮೌಲ್ಯ-ವರ್ಧಕ ಸೃಜನಶೀಲ ಚಟುವಟಿಕೆಗಳನ್ನು 'ಮಾರುಕಟ್ಟೆಯ ಅವಕಾಶ’ಗಳ ಸಾಲಿನಲ್ಲಿ ಸೇರಿಸಬೇಕು (ನೋಡಿ: ವ್ಯಾಪಾರೋದ್ಯಮ) ಸಂಸ್ಥೆಯ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಮಾರಾಟ ವ್ಯವಸ್ಥೆ. ಯುಎಸ್‌ನ ಶಿಕ್ಷಣಶಾಖೆಯ ಪ್ರಕಾರ, ಕಾರ್ಯಾಚರಣೆಗಳ ನಿರ್ವಹಣೆ [ನಿರ್ವಹಣೆ ಮತ್ತು ನಿರ್ದೇಶನಕ್ಕೆ ಸಂಬಂಧಿಸಿದ ಕ್ಷೇತ್ರ] ಸಂಸ್ಥೆಯ ದೈಹಿಕ ಮತ್ತು/ಅಥವಾ ತಾಂತ್ರಿಕ ಕೆಲಸಗಳ, ಅದರಲ್ಲೂ ನಿರ್ದಿಷ್ಟವಾಗಿ ಅಭಿವೃದ್ಧಿ, ಉತ್ಪಾದನೆ ಮತ್ತು ತಯಾರಿಕೆಗೆ ಸಂಬಂಧಪಟ್ಟ ಕ್ಷೇತ್ರ. [ಕಾರ್ಯಾಚರಣೆಗಲ ನಿರ್ವಹಣೆ ಸಾಧಾರಣವಾಗಿ ಇವುಗಳನ್ನು ಒಳಗೊಂಡಿರುತ್ತದೆ] ಸಾಮಾನ್ಯ ನಿರ್ವಹಣೆಯ ಸಾರ್ವತ್ರಿಕ ತತ್ತ್ವಗಳು, ತಯಾರಿಕೆ ಮತ್ತು ಉತ್ಪಾದನೆಯ ವ್ಯವಸ್ಥೆಗಳು, ಯಂತ್ರೋಪಕರಣದ ನಿರ್ವಹಣೆ, ಸಲಕರಣೆಗಳ ದುರಸ್ಥಿ ಮತ್ತು ನಿರ್ವಹಣೆ, ಉತ್ಪಾದನಾ ನಿರ್ವಹಣೆ, ಔದ್ಯೋಗಿಕ ಕಾರ್ಮಿಕ ಸಂಬಂಧಗಳು ಮತ್ತು ಕುಶಲ ವ್ಯಾಪಾರಗಳ ಮೇಲ್ವಿಚಾರಣೆ, ಕೌಶಲ್ಯಯುತ ತಯಾರಿಕೆ ವ್ಯವಸ್ಥೆ, ವ್ಯವಸ್ಥೆಗಳ ವಿಶ್ಲೇಷಣೆ, ಉತ್ಪಾದನಾ ವಿಶ್ಲೇಷಣೆ ಮತ್ತು ವೆಚ್ಚ ನಿಯಂತ್ರಣ, ಮತ್ತು ವಸ್ತುಗಳ ಯೋಜನೆ.[೧][೨]

ಮ‌ೂಲಗಳು ಬದಲಾಯಿಸಿ

ಕಾರ್ಯಾಚರಣೆಗಳ ನಿರ್ವಹಣೆಯ ಉಗಮವನ್ನು, ಔದ್ಯಮಿಕ ಕ್ರಾಂತಿ, ಅದಲು-ಬದಲು ಮಾಡಬಹುದಾದ ಉತ್ಪಾದನೆಯ ಅಭಿವೃದ್ಧಿ, ವಾಲ್ದಮ್‌-ಲೋಲ್‌ ವ್ಯವಸ್ಥೆ, ಅಮೆರಿಕಾದ ಉತ್ಪಾದನಾ ವ್ಯವಸ್ಥೆ,ವೈಜ್ಞಾನಿಕ ನಿರ್ವಹಣೆ[೩], ಜೋಡಣೆ ಪದ್ಧತಿಯ ಅಭಿವೃದ್ಧಿ ಮತ್ತು ಸಾಮೂಹಿಕ ಉತ್ಪಾದನೆ, ಮತ್ತು ಟೊಯೋಟಾ ಉತ್ಪಾದನಾ ವ್ಯವಸ್ಥೆ, ಇವುಗಳನ್ನೊಳಗೊಂಡ 18, 19, ಮತ್ತು 20ನೇ ಶತಮಾನಗಳ ಸಾಂಸ್ಕೃತಿಕ ಬದಲಾವಣೆಗಳಲ್ಲಿ ಗುರುತಿಸಬಹುದು. ಒಟ್ಟಾರೆ, ಈ ವಿಚಾರಗಳು ಉತ್ಪಾದನಾ ಪ್ರಕ್ರಿಯೆಗಳ ಅಳತೆಗೋಲು ನಿರ್ಧಾರ ಮತ್ತು ನಿರಂತರ ಸುಧಾರಣೆಗೆ ಅನುವು ಮಾಡಿಕೊಟ್ಟಿತು. ಈ ಮೊದಮೊದಲ ಉತ್ಪಾದನಾ ವ್ಯವಸ್ಥೆಗಳ ಪ್ರಮುಖ ಉಪಾಧಿಗಳೆಂದರೆ, ’ಕುಶಲಕರ್ಮಿಗಳು’ ಎಂಬುದರಿಂದ ಹೊರಬಂದು ಸಂಪೂರ್ಣ ’ದುಡಿಮೆಯ ವಿಭಜನೆ’ಯ ವ್ಯವಸ್ಥೆಯನ್ನು ಹೊಕ್ಕದ್ದು ಮತ್ತು ಕುಶಲ ಮತ್ತು ಅನುಭವಸ್ಥ ವ್ಯಕ್ತಿಗಳಲ್ಲಿಯೇ ಇದ್ದ ಜ್ಞಾನವನ್ನು ಉಪಕರಣಗಳಿಗೆ, ದಾಖಲಾತಿಗಳಿಗೆ ಮತ್ತು ವ್ಯವಸ್ಥೆಗಳಿಗೆ ರವಾನೆ ಮಾಡಿದ್ದು.ಯೋಚನಾ ನಾಯಕರು ಎನ್ನಬಹುದಾದ ಹಲವಾರು ವ್ಯಕ್ತಿಗಳ ಜೀವಮಾನದ ಕೆಲಸಗಳು’ (ಇವರಲ್ಲಿ ಕೆಲವರು ಮಾತ್ರ ಸಾಮಾನ್ಯ ಜನರ ನಡುವೆ ಹೆಸರನ್ನು ಗಳಿಸಿದ್ದಾರೆ) ’ಕಾರ್ಯಾಚರಣೆಗಳ ನಿರ್ವಹಣೆ’ಗೆ ಅಡಿಪಾಯವನ್ನು ಹಾಕಿತು. ಒಂದು ಮೇಲ್ಮೈ ಪಟ್ಟಿ ಮಾಡಿದರೆ, ಈ ಹೆಸರುಗಳನ್ನು ಸೇರಿಸಬಹುದು - ಆಡಮ್‌ ಸ್ಮಿತ್‌, ಜೀನ್‌-ಬಾಪ್ಟಿಸ್ಟ್‌ ವ್ಯಾಕ್ವೆಟ್ ಡೆ ಗ್ರಿಬ್ಯೂವಲ್, ಲೂಯಿಸ್‌ ಡೆ ತೌಸರ್ಡ್‌, ಹೊನೊರ್‌ ಬ್ಲಾಂಕ್‌, ಎಲಿ ವಿಟ್ನಿ, ಜಾನ್‌ ಎಚ್‌. ಹಾಲ್‌, ಸಿಮಿಯೋನ್‌ ನಾರ್ತ್‌, ಫ್ರೆಡೆರಿಕ್‌ ವಿನ್‌ಸ್ಲೋ ಟೇಲರ್‌, ಹೆನ್ರಿ ಗಂಟ್‌, ಹೆನ್ರಿ ಫೋರ್ಡ್‌, ಸಕಿಚಿ ಟೊಯೊಡ, ಆಲ್‌ಫ್ರೆಡ್‌ ಸ್ಲೋನ್‌, ಫ್ರ್ಯಾಂಕ್‌ ಮತ್ತು ಲಿಲಿಯನ್‌ ಗಿಲ್‌ಬ್ರೆತ್‌, ಟೆಕ್ಸ್‌ ತ್ರಾಂಟನ್ ಮತ್ತು ಆತನ ವಿಜ್‌ ಕಿಡ್ಸ್‌ ತಂಡ, ಮತ್ತು ಡಬ್ಲ್ಯೂ. ಎಡ್‌ವರ್ಡ್ಸ್ ಡೆಮಿಂಗ್‌ಮತ್ತು ಟೊಯೊಟಾ ಉತ್ಪಾದನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದವರು (ತಾಯ್‌ಚಿ ಒಹ್ನೊ, ಶಿಗಿಯೊ ಶಿಂಗೊ, ಈಜಿ ಟೊಯೊಡ, ಕೀಚಿರೊ ಟೊಯೊಡ, ಮತ್ತು ಇತರರು). ಕೆಲವು ಪ್ರಭಾವಗಳು ಪ್ರಾಥಮಿಕ ಪ್ರಾಮುಖ್ಯತೆಯನ್ನು ಉಪಕರಣಗಳ ಮೇಲೆ ಕೊಟ್ಟು, ಜನರನ್ನು ಸರ್ವೇ ಸಾಮಾನ್ಯವಾಗಿ ವ್ಯವಸ್ಥೆಯ ಅವಿಧೇಯ ತಡೆಗಳು ಎನ್ನುವಂತೆ ನೋಡಿದರೆ (ಉದಾಹರಣೆಗೆ ಟೇಲರ್‌ ಮತ್ತು ಫೋರ್ಡ್), ಕಾಲಾಂತರದಲ್ಲಿ, ಮನುಷ್ಯರು ಮತ್ತು ಯಂತ್ರಗಳನ್ನು ಉಚಿತವಾಗಿ ಪರಿಗಣಿಸಿ ಉತ್ಪಾದನಾ ವ್ಯವಸ್ಥೆಯನ್ನು ಸಾಮಾಜಿಕ-ತಾಂತ್ರಿಕ ವ್ಯವಸ್ಥೆಯನ್ನಾಗಿ ನೋಡುವ ಅಗತ್ಯತೆಯನ್ನು ಹೆಚ್ಚುಹೆಚ್ಚು ಮೆಚ್ಚಲಾಯಿತು ಮತ್ತು ಅದರ ಕಡೆ ಗಮನ ಕೊಡಲಾಯಿತು.[೪][೫][೬]ಕಾರ್ಯಾಚರಣೆಗಳ ಸಂಶೋಧನೆಯುಯು ಒಂದು ಉಪ-ಶಿಸ್ತಾಗಿ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಪ್ರಾಮುಖ್ಯತೆಯನ್ನು ಪಡೆಯಿತು, ಆಗ ಗಣಿತಕಾರರು ಕಾರ್ಯಾಚರಣೆಗಳ ಪ್ರಶ್ನೆಗಳನ್ನು ಅತ್ಯುತ್ತಮಗೊಳಿಸಲು ವಿಶ್ಲೇಷಣಾ ತಂತ್ರಗಳನ್ನು ಬಳಸಿಕೊಂಡರು, ಮೊದಮೊದಲಿಗೆ ಮಿಲಿಟರಿ ಸಂದರ್ಭದಲ್ಲಿ, ಮತ್ತು ನಂತರದಲ್ಲಿ ಸಾಮಾನ್ಯ ಕಾರ್ಯಾಚರಣೆಗಳೊಳಗೆಯೂ ಸಹ. ಐತಿಹಾಸಿಕವಾಗಿ, ಔದ್ಯೋಗಿಕ ಇಂಜಿನಿಯರಿಂಗ್‌ನಿಂದ ಹುಟ್ಟಿದ ಜ್ಞಾನವು, ಮೊದಮೊದಲು ಎಂಬಿಎ ಕಾರ್ಯಾಚರಣೆಗಳಿಗೆ ಅಡಿಪಾಯವನ್ನು ಕೊಟ್ಟಿತು, ಮತ್ತು ಅದು ಕಾರ್ಯಕ್ರಮಗಳ ನಿರ್ವಹಣೆಯನ್ನು ವಿವಿಧ ವ್ಯಾಪಾರಿ ಕ್ಷೇತ್ರಗಳು, ಉದ್ಯಮ, ಸಲಹೆಗಾರ ಮತ್ತು ನಿರ್ಲಾಭ (ಲಾಭ-ರಹಿತ) ಸಂಸ್ಥೆಗಳು ಬಳಸುವ ರೀತಿಗೆ ಇದೇ ಕೇಂದ್ರಬಿಂದು.[ಸಾಕ್ಷ್ಯಾಧಾರ ಬೇಕಾಗಿದೆ]

ಸಂಸ್ಥೆಗಳು ಬದಲಾಯಿಸಿ

ಈ ಕೆಳಕಂಡ ಸಂಸ್ಥೆಗಳು ಕಾರ್ಯಾಚರಣೆ ನಿರ್ವಹಣೆಗಳನ್ನು ಬೆಂಬಲಿಸುತ್ತವೆ ಮತ್ತು ಉತ್ತೇಜಿಸುತ್ತವೆ:

ಪ್ರಕಟಣೆಗಳು ಬದಲಾಯಿಸಿ

ಈ ಕೆಳಕಂಡ ಶೈಕ್ಷಣಿಕ ನಿಯತಕಾಲಿಕೆಗಳು ಕಾರ್ಯಾಚರಣೆಯ ನಿರ್ವಹಣೆ ವಿಷಯಗಳನ್ನು ಕುರಿತಾಗಿವೆ:

ಇದನ್ನೂ ಗಮನಿಸಿ ಬದಲಾಯಿಸಿ

ಪ್ರೊಡಕ್ಷನ್ ಆ‍ಯ್೦ಡ್ ಇನ್ವೆಂಟರಿ ಮ್ಯಾನೇಜ್‌ಮೆಂಟ್ ಜರ್ನಲ್

ಹೊರಗಿನ ಕೊಂಡಿಗಳು ಬದಲಾಯಿಸಿ

ಆಕರಗಳು ಬದಲಾಯಿಸಿ

  1. ಯು.ಎಸ್.ಡಿಪಾರ್ಟ್‌ಮೆಂಟ್ ಆಫ್ ಎಜ್ಯುಕೇಷನ್ ಇನ್ಸ್‌ಟಿಟ್ಯೂಟ್ ಆಫ್ ಎಜ್ಯುಕೇಷನ್ ಸೈನ್ಸನ್: ಕ್ಲಾಸಿಫಿಕೇಷನ್ ಆಫ್ ಇನ್ಸ್‌ಟ್ರಕ್ಷನಲ್ ಪ್ರೊಗ್ರಾಮ್ಸ್ (CIP). http://nces.ed.gov/pubs2002/cip2000/occupationallookup6d.ASP?CIP=52.0205 ರಿಂದ ಅಕ್ಟೋಬರ್ 26, 2009 ರಲ್ಲಿ ಪತ್ತೇ ಮಾಡಲಾಗಿದೆ.
  2. ATMAE ಮೆಂಬರ್‌ಶಿಪ್ ವೆನ್ ಡೈಯಾಗ್ರಮ್. http://atmae.org/index.php?option=com_content&view=article&id=227&Itemid=48
  3. ಅಲಾನ್ ಪಿಲ್ಕಿಂಗ್ಟನ್, ಜಾಕ್ ಮೆರೆಡಿತ್, "ದ ಇವೊಲುಷನ್ ಆಫ್ ದ ಇಂಟೆಲೆಕ್ಚುಯೆಲ್ ಸ್ಟ್ರಕ್ಚರ್ ಆಫ್ ಆಪರೇಷನ್ಸ್ ಮ್ಯಾನೇಜ್‌ಮೆಂಟ್—1980-2006: ಎ ಸಿಟಾಟೇಷನ್/ಕೊ-ಸಿಟಾಟೇಷನ್ ಅನಾಲಿಸಿಸ್,” ಜರ್ನಲ್ ಆಫ್ ಆಪರೇಷನ್ ಮ್ಯಾನೇಜ್‍ಮೆಂಟ್, (2009) ಸಂಪುಟ. 27, ನಂ. 3, pp.185-202.
  4. Hartness, James (1912). The Human Factor in Works Management. New York and London: McGraw-Hill. {{cite book}}: Cite has empty unknown parameter: |coauthors= (help) ಹೈವ್ ಪಬ್ಲಿಷಿಂಗ್ ಕೊ ನಿಂದ ಮರುಪ್ರಕಟಗೊಂಡಿದೆ (ಹೈವ್ ಮ್ಯಾನೇಜ್‌ಮೆಂಟ್ ಹಿಸ್ಟರಿ ಸಿರೀಸ್, ನಂ. 46) (ISBN 978-0879600471)
  5. ಜೇಮ್ಸ್ ಎಮ್.ವಿಲ್ಸನ್, (1995) ಆನ್ ಹಿಸ್ಟಾರಿಕಲ್ ಪರ್ಸ್‌ಪೆಕ್ಟಿವ್ ಆನ್ ಆಪರೇಷನ್ಸ್ ಮ್ಯಾನೇಜ್‌ಮೆಂಟ್ , ಪ್ರೊಡಕ್ಷನ್ ಆ‍ಯ್೦ಡ್ ಇನ್ವೆಂಟರಿ ಮ್ಯಾನೇಜ್‌ಮೆಂಟ್ ಜರ್ನಲ್
  6. ರಿಚರ್ಡ್ ಚೇಸ್,ಎಫ್. ರಾಬರ್ಟ್ ಜೇಕಬ್ಸ್, ನಿಕೊಲಸ್ ಅಕ್ವಿಲಾನೊ, ಎಟ್ ಆಲ್.,ಆಪರೇಷನ್ಸ್ ಮ್ಯಾನೇಜ್‌ಮೆಂಟ್ ಫಾರ್ ಕಾಂಪಿಟೇಟಿವ್ ಅಡ್ವಾಂಟೇಜ್ , (2001), ISBN 0072506369