ಕಾನಿಕಾ ಅನ್ನದ ಪರಿಮಳಯುಕ್ತ ಸಿಹಿ ಖಾದ್ಯವಾಗಿದೆ. ಇದು ಒಂದು ಒರಿಸ್ಸಾದ ಖಾದ್ಯವಾಗಿದ್ದು ಸಾಂಪ್ರದಾಯಿಕವಾಗಿ ಹಬ್ಬಗಳು ಮತ್ತು ಪೂಜೆಗಳ ವೇಳೆ ಇದನ್ನು ತಯಾರಿಸಲಾಗುತ್ತದೆ. ಜಗನ್ನಾಥ ದೇವಾಲಯದಲ್ಲಿ ಮಹಾಪ್ರಸಾದ ಅಥವಾ ಛಪ್ಪನ್ ಭೋಗದ ಭಾಗವಾಗಿ ತಯಾರಿಸಲಾದ ೫೬ ಬೇಯಿಸಿದ ಖಾದ್ಯಗಳಲ್ಲಿ ಇದೂ ಒಂದು.[೧] ಇದನ್ನು ಜಗನ್ನಾಥ ದೇವರಿಗೆ ಸಕಲ ಧೂಪವೆಂದು ಕರೆಯಲ್ಪಡುವ ಬೆಳಿಗ್ಗೆಯ ಊಟದ ಭಾಗವಾಗಿ ಅರ್ಪಿಸಲಾಗುತ್ತದೆ.[೨]

ಇದನ್ನು ತಯಾರಿಸಲು ಬಳಸಲಾದ ಮುಖ್ಯ ಪದಾರ್ಥಗಳೆಂದರೆ ಪರಿಮಳಯುಕ್ತ ಅಕ್ಕಿ, ತುಪ್ಪ, ಒಣದ್ರಾಕ್ಷಿ, ಗೋಡಂಬಿ, ಕರಿ ಹಾಗೂ ಹಸಿರು ಏಲಕ್ಕಿ, ದಾಲ್ಚಿನ್ನಿ, ಲವಂಗ, ಜಾಪತ್ರೆ ಪುಡಿ, ಪುಲಾವ್ ಎಲೆ, ಸಕ್ಕರೆ, ಉಪ್ಪು ಮತ್ತು ಅರಿಸಿನ.[೩]

ಉಲ್ಲೇಖಗಳು ಬದಲಾಯಿಸಿ

  1. http://magazines.odisha.gov.in/Orissareview/2019/Jun-July/engpdf/Biggest-wonder-of-the-World-55-63.pdf
  2. "Daily Rituals in Jagannatha Temple | Holy Dham". www.holydham.com. Retrieved 2020-01-23.
  3. MyYellowApron (2019-01-31). "Odisha Kanika |Mitha Pulao |Sweet Rice". MyYellowApron (in ಇಂಗ್ಲಿಷ್). Archived from the original on 2019-10-07. Retrieved 2020-01-23.
"https://kn.wikipedia.org/w/index.php?title=ಕಾನಿಕಾ&oldid=1129011" ಇಂದ ಪಡೆಯಲ್ಪಟ್ಟಿದೆ