ಕಾಕನಕೋಟೆ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿಗೆ ಸೇರಿದ ಸ್ಥಳ. ಖೆಡ್ಡಾಗಳಿಗೆ ಪ್ರಸಿದ್ಧ. ಮೈಸೂರಿಗೆ 48 ಮೈ. ದೂರದಲ್ಲಿದೆ.
ದಟ್ಟವಾದ ಕಾಡಿನಿಂದ ಕೂಡಿದ ಈ ಪ್ರದೇಶದಲ್ಲಿ ತೇಗ, ಹೊನ್ನೆ, ನಂದಿ, ಬೀಟೆ ಮುಂತಾದ ಮರಗಳು ಹುಲುಸಾಗಿ ಬೆಳೆದಿವೆ. ಇಲ್ಲಿ ತೇಗದ ಮರಗಳನ್ನು ಬೆಳೆಯುವ ಸರ್ಕಾರಿ ಪ್ಲಾಂಟೇಷನ್ನುಗಳಿವೆ.
ಕಾಕನಕೋಟೆಯ ಕಾಡು ಆನೆಗಳ ಬೀಡು. ಆನೆಗಳಿಂದ ಬೆಳೆಗಳಿಗೂ ಜನಜೀವನಕ್ಕೂ ಆಗಾಗ ತೊಂದರೆ ಆಗುವುದು ಸಾಮಾನ್ಯ. 1873-1971ರ ವರೆಗೆ ನಡೆಸಿದ 36 ಖೆಡ್ಡಾಗಳಲ್ಲಿ 24ನ್ನು ಕಾಕನಕೋಟೆ ಪ್ರದೇಶದಲ್ಲೇ ನಡೆಸಲಾಯಿತು. 1968ರಲ್ಲಿ ಹಿಡಿಯಲಾದ ಆನೆಗಳ ಸಂಖ್ಯೆ 88; 1971ರಲ್ಲಿ 41. ಕಪಿಲಾ ಯೋಜನೆ ಪೂರ್ಣಗೊಂಡಾಗ ಈ ಪ್ರದೇಶ ನೀರಿನಲ್ಲಿ ಮುಳುಗಿಹೋಗುವುದೆಂದು ನಿರೀಕ್ಷಿಸಲಾಗಿದೆ.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: