ಕರ್ನಾಟಕದ ಲಾಂಛನವು ಭಾರತದ ಕರ್ನಾಟಕದ ರಾಜ್ಯ ಲಾಂಛನವಾಗಿದೆ . ಲಾಂಛನವು ಮೈಸೂರು ಸಾಮ್ರಾಜ್ಯ ಮತ್ತು ಯುನೈಟೆಡ್ ಕಿಂಗ್‌ಡಂನ ಕೋಟ್ ಆಫ್ ಆರ್ಮ್ಸ್ ಅನ್ನು ಆಧರಿಸಿದೆ ಮತ್ತು ಇದನ್ನು ಕರ್ನಾಟಕ ಸರ್ಕಾರವು ಮಾಡಿದ ಎಲ್ಲಾ ಅಧಿಕೃತ ಪತ್ರವ್ಯವಹಾರಗಳ ಮೇಲೆ ಉಪಯೋಗಿಸಲಾಗುತ್ತದೆ.

ಕರ್ನಾಟಕದ ಲಾಂಛನ
Armigerಕರ್ನಾಟಕ ಸರಕಾರ
Crestಸಾರನಾಥದ ಸಿಂಹ ಲಾಂಛನ
Blazonಗಂಡಭೇರುಂಡ
Supporters2 ಸಿಂಹ-ಆನೆ (ದೇಹ ಸಿಂಹದ್ದು, ತಲೆ ಆನೆಯದ್ದು) ಶರಭ
ಧ್ಯೇಯ"सत्यमेव जयते" (ಸತ್ಯಮೇವ ಜಯತೇ - ಸತ್ಯವೇ ಎಂದಿಗೂ ಗೆಲ್ಲುವುದು)

ವಿನ್ಯಾಸ

ಬದಲಾಯಿಸಿ

ಲಾಂಛನವು ಮಧ್ಯದಲ್ಲಿ ಕೆಂಪು ಗುರಾಣಿಯನ್ನು ಹೊಂದಿದ್ದು, ಎರಡು ತಲೆಯ ಬಿಳಿಯ ಹಕ್ಕಿ, ಗಂಡಭೇರುಂಡವು ನೀಲಿ ಬಣ್ಣದ ಸುತ್ತಕಟ್ಟಿನ ಒಳಗಿದೆ. ಇದರ ಮೇಲಿನ ಚಿಹ್ನೆಯು ಅಶೋಕನ ಸಿಂಹ ಲಾಂಛನವನ್ನು ಹೊಂದಿದೆ. (ನಾಲ್ಕು ದಿಕ್ಕಿಗೆ ಮುಖ ಮಾಡಿ ನಾಲ್ಕು ಸಿಂಹ ಇರುವ ಅದನ್ನು ಭಾರತ ಸರ್ಕಾರದ ಲಾಂಛನವಾಗಿಯೂ ಸಹ ಬಳಸಲಾಗುತ್ತದೆ), ನೀಲಿ ವೃತ್ತಾಕಾರದ ವೇದಿಕೆಯಲ್ಲಿ ನೀಲಿ ಬಣ್ಣದ ನೀಲಿ ಅಲಂಕರಣ ಪಟ್ಟಿಯಿದೆ. ಶಿಲ್ಪಗಳಪಟ್ಟಿಗಳ ನಡುವೆ ಎಡ ಮತ್ತು ಬಲಭಾಗದಲ್ಲಿ ಕುದುರೆ ಮತ್ತು ಎತ್ತು ಇವೆ; ಅವುಗಳ ಮಧ್ಯದಲ್ಲಿ ಧರ್ಮಚಕ್ರವಿದೆ. ಧರ್ಮಚಕ್ರದ ವೇದಿಕೆಯ ಮೇಲೆ ಎಡ ಮತ್ತು ಬಲ ಭಾಗವಾಗಿ ಸಾರನಾಥದ ಅಶೋಕ ಸ್ಥಂಬ ಇದೆ. ಗುರಾಣಿಯನ್ನು ಕೆಂಪು ಕೇಸರಕೂದಲಿನ, ಹಳದಿಬಣ್ಣದ ಸಿಂಹ ದೇಹದ ಆನೆತಲೆಯ ಎರಡು ಶರಭಗಳು ಎತ್ತಿಹಿಡಿದಿವೆ. (ಸಿಂಹ ಮತ್ತು ಆನೆಗಳಿಗಿಂತ ಬಲವಾದ ಶರಬವು ಸದಾಚಾರವನ್ನು ಎತ್ತಿಹಿಡಿಯುವುವು ಎಂದು ನಂಬಲಾಗಿದೆ). ಅವು ಹಸಿರು ಎಲೆಗಳ ವಿನ್ಯಾಸದ ಚಿತ್ರದಮೇಲೆ ನಿಂತಿವೆ. ಎಲೆಗಳ ವಿನ್ಯಾಸದ ಚಿತ್ರದ ಕೆಳಗೆ ಭಾರತದ ರಾಷ್ಟ್ರೀಯ ಧ್ಯೇಯವಾಕ್ಯವಾದ ಶೈಲೀಕೃತ ದೇವನಾಗರಿ ಲಿಪಿಯಲ್ಲಿ ಸತ್ಯಮೇವ ಜಯತೆ ಎಂದು ಸಂಸ್ಕೃತದಲ್ಲಿ ಸಮ್ಮಿತೀಯ ವಿನ್ಯಾಸದ ಹಳದಿ ಪಟ್ಟಿಯ ಮೇಲೆ ಬರೆಯಲಾಗಿದೆ. ಅರ್ಥ:"ಸತ್ಯ ಮಾತ್ರ ವಿಜಯಗಳಿಸುವುದು"). [] .

ಐತಿಹಾಸಿಕ ಲಾಂಛನಗಳು

ಬದಲಾಯಿಸಿ

ಸರ್ಕಾರಿ ಬ್ಯಾನರ್

ಬದಲಾಯಿಸಿ

ಕರ್ನಾಟಕ ಸರ್ಕಾರವನ್ನು ರಾಜ್ಯದ ಲಾಂಛನವನ್ನು ಬಿಳಿ ಹಿನ್ನೆಲೆಯಲ್ಲಿ ಚಿತ್ರಿಸುವ ಬ್ಯಾನರ್ ಮೂಲಕ ಪ್ರತಿನಿಧಿಸಬಹುದು.

ಉಲ್ಲೇಖಗಳು

ಬದಲಾಯಿಸಿ
  1. "Archived copy". Archived from the original on 2013-10-05. Retrieved 2013-09-17.{{cite web}}: CS1 maint: archived copy as title (link)