ಕರ್ಣಂ ಮಲ್ಲೇಶ್ವರಿ

ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಪ್ರಮುಖ ಕ್ರೀಡಾಪಟು ಕರ್ಣಂ ಮಲ್ಲೇಶ್ವರಿ. ಇವರ ಜನನ ಜೂನ್ ೧,೧೯೭೫ರಂದು, ಆಂಧ್ರಪ್ರದೇಶದ ಶ್ರೀಕಾಕುಳಂ‌ನಲ್ಲಿ ಆಯಿತು.

ಸಾಧನೆಗಳುಸಂಪಾದಿಸಿ

  • ೧೯೯೫ರಲ್ಲಿ ವಿಶ್ವ ಭಾರ ಎತ್ತುವ ಸ್ಪರ್ಧೆಯ ೫೪ ಕೆ.ಜಿ.ವಿಭಾಗದಲ್ಲಿ ,೧೧೩ ಕೆ.ಜಿ.ಭಾರ ಎತ್ತುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
  • ೧೯೯೫ರ ಏಷ್ಯನ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲೂ ಭಾಗವಹಿಸಿ,ವಿಜಯಶಾಲಿಗಳಾದರು.
  • ೧೯೯೮ರಲ್ಲಿ ನಡೆದ ಏಷ್ಯನ್ ಗೇಮ್ಸ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿದರು.
  • ೨೦೦೦ನೇ ಇಸವಿಯಲ್ಲಿ ಸಿಡ್ನಿಯಲ್ಲಿ ನಡೆದ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗಳಿಸಿದರು.

ಒಲಂಪಿಕ್ಸ್‌ನಲ್ಲಿ ಪದಕ ಪಡೆದ ಭಾರತದ ಪ್ರಥಮ ಮಹಿಳಾ ಕ್ರೀಡಾಪಟು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಪ್ರಶಸ್ತಿಗಳುಸಂಪಾದಿಸಿ