ಕರ್ಟ್ನಿ ವಾಲ್ಷ್
ಕರ್ಟ್ನಿ ಆಂಡ್ರೂ ವಾಲ್ಷ್ ಇವರು ವೆಸ್ಟ್ ಇಂಡೀಜ್ ಕ್ರಿಕೆಟ್ ತಂಡದ ವೇಗದ ಬೌಲರಾಗಿದ್ದರು. ಇವರು ೧೯೮೪ರಿಂದ ೨೦೦೧ರ ವರೆಗೆ ವೆಸ್ಟ್ ಇಂಡೀಜ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದರು ಮತ್ತು ೨೨ ಟೆಸ್ಟ್ ಪಂದ್ಯಗಳಲ್ಲಿ ತಂಡದ ನಾಯಕರಾಗಿದ್ದರು. ಕಪಿಲ್ ದೇವರ ಟೆಸ್ಟ್ ಪಂದ್ಯಗಳಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಮುರಿದುದಕ್ಕೆ ಇವರು ಪ್ರಸಿದ್ಧರಾಗಿದ್ದರು, ಈ ವಿಶ್ವ ದಾಖಲೆಯು ೨೦೦೦ರಿಂದ ೨೦೦೪ರ ವರ್ಗೆ ಇವರ ಹೆಸರಿನಲ್ಲಿತ್ತು, ೨೦೦೪ರಲ್ಲಿ ಶ್ರೀಲಂಕಾದ ಮುರಳೀಧರನ್ ಈ ದಾಖಲೆಯನ್ನು ಮುರಿದರು.
Courtney Walsh | ||||
ಚಿತ್ರ:West Indies Cricket Board Flag.svg ವೆಸ್ಟ್ ಇಂಡೀಸ್ | ||||
ವೈಯಕ್ತಿಕ ಮಾಹಿತಿ | ||||
---|---|---|---|---|
ಪೂರ್ಣಹೆಸರು | Courtney Andrew Walsh | |||
ಹುಟ್ಟು | 10 30 1962 | |||
Kingston, ಜಮೈಕ | ||||
ಪಾತ್ರ | Bowler | |||
ಬ್ಯಾಟಿಂಗ್ ಶೈಲಿ | Right-hand batsman | |||
ಬೌಲಿಂಗ್ ಶೈಲಿ | Right-arm fast | |||
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ | ||||
ಟೆಸ್ಟ್ ಪಾದಾರ್ಪಣೆ (cap 183) | 9 November 1984: v Australia | |||
ಕೊನೆಯ ಟೆಸ್ಟ್ ಪಂದ್ಯ | 19 April 2001: v South Africa | |||
ODI ಪಾದಾರ್ಪಣೆ (cap 45) | 10 January 1985: v Sri Lanka | |||
ಕೊನೆಯ ODI ಪಂದ್ಯ | 11 January 2000: v New Zealand | |||
ಪ್ರಾದೇಶಿಕ ತಂಡದ ಮಾಹಿತಿ | ||||
ವರ್ಷಗಳು | ತಂಡ | |||
1981/82–2000/01 | Jamaica | |||
1984–1998 | Gloucestershire | |||
ವೃತ್ತಿಜೀವನದ ಅಂಕಿಅಂಶಗಳು | ||||
ಟೆಸ್ಟ್ | ODI | FC | List A | |
ಪಂದ್ಯಗಳು | 132 | 205 | 429 | 440 |
ಒಟ್ಟು ರನ್ನುಗಳು | 936 | 321 | 4530 | 1304 |
ಬ್ಯಾಟಿಂಗ್ ಸರಾಸರಿ | 7.54 | 6.97 | 11.32 | 8.75 |
೧೦೦/೫೦ | 0/0 | 0/0 | 0/8 | 0/0 |
ಅತೀ ಹೆಚ್ಚು ರನ್ನುಗಳು | 30* | 30 | 66 | 38 |
ಬೌಲ್ ಮಾಡಿದ ಚೆಂಡುಗಳು | 30019 | 10822 | 85443 | 21881 |
ವಿಕೆಟ್ಗಳು | 519 | 227 | 1807 | 551 |
ಬೌಲಿಂಗ್ ಸರಾಸರಿ | 24.44 | 30.47 | 21.71 | 25.14 |
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ | 22 | 1 | 104 | 5 |
೧೦ ವಿಕೆಟುಗಳು ಪಂದ್ಯದಲ್ಲಿ | 3 | n/a | 20 | n/a |
ಶ್ರೇಷ್ಠ ಬೌಲಿಂಗ್ | 7-37 | 5-1 | 9-72 | 6-21 |
ಕ್ಯಾಚುಗಳು /ಸ್ಟಂಪಿಂಗ್‍ಗಳು | 29/– | 27/– | 117/– | 68/– |
ದಿನಾಂಕ 21 August, ೨೦೦೮ ವರೆಗೆ. |
ಪ್ರಥಮ ದರ್ಜೆ ಕ್ರಿಕೆಟ್ ಜೀವನ
ಬದಲಾಯಿಸಿ೧೯೭೯ರಲ್ಲಿ ಶಾಲಾ ಕ್ರಿಕೆಟ್ನಲ್ಲಿ ಇನ್ನಿಂಗ್ವೊಂದರಲ್ಲಿ ೧೦ವಿಕೆಟ್ಗಳನ್ನು ಕಬಳಿಸಿದಾಗ ಇವರು ಮೊದಲ ಬಾರಿಗೆ ಬೆಳಕಿಗೆ ಬಂದರು. ಇದರ ೨ ವರ್ಷದ ತರುವಾಯ ಇವರು ಪ್ರಥಮ ದರ್ಜೆ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಇವರು ಜಮೈಕಾ ತಂಡವನ್ನು ಪ್ರತಿನಿಧಿಸುತ್ತಿದ್ದರು.
ಅಂತರ್ರಾಷ್ಟ್ರೀಯ ಕ್ರಿಕೆಟ್ ಜೀವನ
ಬದಲಾಯಿಸಿ೧೯೮೪ರ ನವ್ಹೆಂಬರ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಇವರು ಟೆಸ್ಟ್ ರಂಗಕ್ಕೆ ಪಾದಾರ್ಪಣೆ ಮಾಡಿದರು., ಆ ಪಂದ್ಯದಲ್ಲಿ ಇವರು ೪೩ರನ್ನುಗಳನ್ನಿತ್ತು ೨ಹುದ್ದರಿಗಳನ್ನು ಪಡೆದರು. ಅದೇ ಕ್ರಿಕೆಟ್ ಸುಗ್ಗಿಯಲ್ಲಿಯೇ ೧೯೮೫ರ ಜನೇವರಿಯಲ್ಲಿ ಹೋಬರ್ಟ್ನಲ್ಲಿ ಶ್ರೀಲಂಕಾ ವಿರುದ್ಧ ಅಂತರ್ರಾಷ್ಟ್ರೀಯ ಒಂದು ದಿನದ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದರು. ೧೯೮೪ರಲ್ಲಿಯೇ ಅವರು ಇಂಗ್ಲೆಂಡ್ನ ಕೌಂಟಿ ಪಂದ್ಯಾವಳಿಗಳಲ್ಲಿ ಗ್ಲೌಸ್ಟರ್ ಶೈರ್ ತಂಡವನ್ನು ಪ್ರತಿನಿಧಿಸಿದರು, ೧೯೯೮ರ ವರೆಗೆ ಅವರು ಈ ತಂಡದೊಂದಿಗೆ ತಮ್ಮನ್ನು ಗುರುತಿಸಿಕೊಂಡರು ಮತ್ತು ತಂಡದ ಬೆನ್ನೆಲುಬಾಗಿದ್ದರು ಕೂಡಾ.
ವಿಸ್ಡೆನ್ ಮತ್ತು ಹ್ಯಾಟ್ರಿಕ್
ಬದಲಾಯಿಸಿ೧೯೮೭ರಲ್ಲಿ ಇವರಿಗೆ ವಿಸ್ಡೆನ್ ವರ್ಷದ ಕ್ರಿಕೆಟಿಗ ಪ್ರಶಸ್ತಿಯು ಲಭಿಸಿತು.