ಕರಡು ಚರ್ಚೆಪುಟ:ಬಿ.ಆರ್.ಮಂಜುನಾಥ್

ಏನು ಬದಲಾವಣೆ ಅಗತ್ಯ ವಿದೆ ? ಬದಲಾಯಿಸಿ

ತಿಳಿಸಿ. ಸರಿಪಡಿಸಿ. ಮುಂದೆ ಸಾಗಿ. (````) (ಚರ್ಚೆ) ೦೮:೫೬, ೧೩ ಜುಲೈ ೨೦೨೩ (IST)Reply

ನಿಮ್ಮದು ಅತಿಯಾದ ಹೊಗಳಿಕೆಯ ಭಾಷೆ. ಪತ್ರಿಕಾವರದಿಯ ರೂಪದಲ್ಲಿದೆ. ದಯವಿಟ್ಟು ವಿಕಿಪೀಡಿಯ:ಉತ್ತಮ ಲೇಖನ ನೋಡಿ.--ಪವನಜ ಯು. ಬಿ. (ಚರ್ಚೆ) ೦೯:೫೬, ೧೩ ಜುಲೈ ೨೦೨೩ (IST)Reply
ಸ್ವಾಮಿ, ಭಾಷೆ ಅವರವರ ಅನುಭವ,ಗ್ರಹಿಕೆ, ಮತ್ತು ಮಾಡಿರುವ ಕೃಷಿಯಮೇಲೆ ಅವಲಂಭಿತವಾಗಿರುತ್ತದೆ. ಪತ್ರಿಕಾ ವರದಿ ಎನ್ನುವ ಮಾತನ್ನು ಸ್ವಲ್ಪ ವಿವರಿಸುವಿರಾ ? ಲೇಖನಗಳು ಗುಣಮಟ್ಟದಲ್ಲಿ ಉತ್ತಮವಾಗಬೇಕು ನಿಜ. ನಾನೂ ನಿಮ್ಮಂತ ಮತ್ತು ಇತರೆ ಅತ್ಯುತ್ತಮ ಲೇಖನ ಬರೆಯುವವರ ತರಹ. ಒಮ್ಮೆ ನನಗೆ ಲೇಖನ ಬರೆಯಲೇ ಬೇಡಿ ಎನ್ನುವ ಸುಗ್ರೀವಾಜ್ಞೆ ಕೊಟ್ಟು ನನ್ನ ಸೃಜನಶೀಲತೆಯನ್ನು ಹಾಳುಮಾಡಿದಿರಿ. ಕೇವಲ ಏನೋ ಮಾನದಂಡ ಕೆಲವರಿಗೆ ಮಾತ್ರ ಹೇಳುವ ಪರಿಪಾಠ ನಿಮಗೆ ಶೋಭೆ ತರುವುದಲ್ಲ. ಒಳ್ಳೆಯ ಮನಸ್ಸು ಬಹಳ ಮುಖ್ಯ. ಅದೇ ನಿಮ್ಮಲ್ಲಿ ನಾನು ಕಾಣದಿರುವುದು. ನನಗೆ ಒಂದು ಅತ್ಯುತ್ತಮ ಲೇಖನವೆಂದು ನೀವು ಪರಿಗಣಿಸಿದ್ದರ ಕೊಂಡಿ ಕೊಡಿ. ನಾವು ಬರೆಯುವುದೆಲ್ಲಾ ಕೇವಲ ಚಿಕ್ಕ ಪುಟ್ಟ ವ್ಯಕ್ತಿಚಿತ್ರಗಳು. ಅವುಗಳ ಸಂಖ್ಯೆಯನ್ನು ಹೆಚ್ಚಿಸುವುದನ್ನು ಬಿಟ್ಟು ನಿಮ್ಮ ಓಬಿರಾಯನ ಕಾಲದ ಮಾನದಂಡಗಳನ್ನು ಹಿಡಿದು ಜೋಕಾಲೆ ಹೊಡೆಯುವುದನ್ನು ಈಗಲಾದರೂ ನಿಲ್ಲಿಸಿ. ನೈಜತೆಗೆ ಒತ್ತುಕೊಡಿ. (````) (ಚರ್ಚೆ) ೦೭:೨೪, ೧೪ ಜುಲೈ ೨೦೨೩ (IST)Reply
ಕನ್ನಡದಲ್ಲಿ ಇಂದಿಗೂ ಲೇಖನಗಳ ಸಂಖ್ಯೆ ಬೆಳೆಯದಿರುವುದಕ್ಕಿ ನೀವೇ ಒಬ್ಬ ಮಾಹಾಸಾಕ್ಷಿ. ಒಬ್ಬ ನಾಯಕ ತನ್ನ ಎಲ್ಲ ಸಹವರ್ಗದವರನ್ನೂ ಒಟ್ಟಿಗೆ ಬೆನ್ನುತಟ್ಟಿ ಕೊಂಡೊಯ್ಯುವ ನಮ್ಮ ಶ್ರೀ ನರೇಂದ್ರ ಮೋದಿಯವರನ್ನು ನೀವು ಹೋಲದಿರುವುದೇ ಇದಕ್ಕೆ ಕಾರಣ. ನನ್ನ ಮಗನನ್ನು ನನ್ನದೇ ತರಹದ ಮಾನದಂಡಗಳನ್ನು ಹೊಂದು ಎಂದು ಪೀಡಿಸುವುದು ಯಾವ ನ್ಯಾಯ ? ನಮ್ಮ ಇನ್ಫೊಸಿಸ್ ಕಂಪೆನಿಯ ಮೇರು ರುವಾರಿ ಎನ್. ಆರ್. ನಾರಾಯಣಮೂರ್ತಿಯವರ ತರಹ ಅವರ ಮಗ ಇಲ್ಲವೇ ಇಲ್ಲ. ಇರಲೂಬಾರದು. ರೋಹನ್ ಈಗಿನ ಕಾಲದ ಯುವಪೀಡಿಯವ. ಅವನದೇ ರೀತಿಯಲ್ಲಿ ಮುಂದೆ ಅವನ ತಂದೆಯವರನ್ನು ಮೀರಿಸಿ ಬೆಳೆಯುತ್ತಾನೆ. ಅವನಲ್ಲಿ ಪ್ರತಿಭೆಯಿದೆ. ವಿಕಿಪೀಡಿಯವನ್ನು ಮೇರುಮಟ್ಟಕ್ಕೆ ಎಳೆದೊಯ್ಯುವ ಕೆಲಸವನ್ನು ಅನೇಕರು ಮಾಡುತ್ತಿದ್ದಾರೆ. ಇನ್ನು ಸಾಕು ತಾವು ಹೊರಗೆ ಬನ್ನಿ. ನಿಮಗಿಂತ ಹಿಮಾಲಯದ ಮಟ್ಟದ ಪ್ರತಿಭೆಗಳಿಗೆ ಜಾಗ ಕೊಟ್ಟು ವಿರಮಿಸಿ. ವಿಕಿಪೀಡಿಯ ಅದರ ಗತಿಯಲ್ಲಿ ಬೆಳೆಯಲು ಬಿಡಿ ಸ್ವಾಮಿ. ತಮಗೆ ಕೈಮುಗಿದು ಬೇಡುತ್ತೇನೆ. ಎನಫ಼್ ಈಸ್ ಎನಫ಼್ ! ವಿಕಿಪೀಡಿಯಕ್ಕೆ ಮುಕ್ತಿ ದಯಪಾಲಿಸಿ. (````) (ಚರ್ಚೆ) ೦೮:೦೩, ೧೪ ಜುಲೈ ೨೦೨೩ (IST)Reply
ವಿಕಿಪೀಡಿಯ ಸಂಪಾದಕರು ಒಬ್ಬರನ್ನೊಬ್ಬರು ಗೌರವದಿಂದ ನೋಡಬೇಕು, ನಡೆಸಿಕೊಳ್ಳಬೇಕು. ಎಂಬುದು ವಿಕಿಪೀಡಿಯದ ೫ ಮೂಲಭೂತ ಸಿದ್ಧಾಂತಗಳಲ್ಲೊಂದು. ಹೆಚ್ಚಿನ ವಿವರಗಳಿಗೆ ನೋಡಿ. ನೀವು ಈ ನಿಯಮವನ್ನು ಉಲ್ಲಂಘಿಸಿದ್ದೀರಿ. ನಿಮ್ಮನ್ನು ಕನ್ನಡ ವಿಕಿಪೀಡಿಯದಿಂದ ಯಾಕೆ ನಿರ್ಬಂಧಿಸಬಾರದು ಎಂಬುದಕ್ಕೆ ಸಕಾರಣವಾಗಿ ವಿವರಿಸಿ.--ಪವನಜ ಯು. ಬಿ. (ಚರ್ಚೆ) ೦೯:೫೮, ೧೪ ಜುಲೈ ೨೦೨೩ (IST)Reply
ನಿಮ್ಮ ಮಾತುಗಳೆಲ್ಲಾ ಅತಿರೇಕವಾಗಿವೆ. ನಿಧಾನವಾಗಿ ಪರಿಶೀಲಿಸಿ. ಹಿರಿಯ ಸಂಪಾದಕರಿಗೆ ನೀವುಕೊಟ್ಟಿರುವ ಗೌರವವೇನು ಎಂದು ನಿಮ್ಮನ್ನೇ ನೀವು ಕೇಳಿಕೊಳ್ಳಿ. ನಿಮಗಿಂತ ಮೊದಲು ೨೦೦೫ ರಿಂದ ವಿಕಿಪೀಡಿಯಕ್ಕೆ ಸೇವೆಸಲ್ಲಿಸುತ್ತಿರುವ ಒಬ್ಬ ಹಿರಿಯ (೮೦) ವರ್ಷ ವಯಸ್ಸಿನ ವ್ಯಕ್ತಿಯನ್ನು ನಿಮ್ಮನ್ನು ಯಾಕೆ ನಿರ್ಬಂಧಿಸಬಾರದು ಎನ್ನುವ ನಿಲವು ವಿಕಿಪೀಡಿಯ ಇಂದು ಎದುರಿಸುತ್ತಿರುವ ಒಂದು ಅಪಾಯ. ಉತ್ತರ ಕೊಡಿ. ನಿಯಮ ಉಲ್ಲಂಘನೆ ನನಗೆ ಗೊತ್ತು. ನಿಮಗಿಂತ ಹೆಚ್ಚಿಗೆ ಪ್ರಪಂಚವನ್ನು ನಾನು ನೋಡಿದ್ದೇನೆ. ಗೌರವ ಕೊಡಿ ಗೌರವ ಪಡೆಯಲು ಅಪೇಕ್ಷಿಸಬೇಡಿ. ಅದಕ್ಕಾಗಿ ಕೊರಗುತ್ತಿರಬೇಡಿ. ಯೋಗ್ಯ ವ್ಯಕ್ತಿಗೆ ಅದಾಗದೇ ಗೌರವ ಸಿಕ್ಕೇ ಸಿಗುತ್ತದೆ. (````) (ಚರ್ಚೆ) ೧೧:೧೨, ೧೪ ಜುಲೈ ೨೦೨೩ (IST)Reply
ನಮಸ್ಕಾರ @Atmalinga , ಯಾವುದೇ ವ್ಯಕ್ತಿಯ ಮೇಲೆ ವೈಯಕ್ತಿಕ ದಾಳಿಯನ್ನು ಬದಿಗಿಡಲು ವಿನಂತಿಸುತ್ತೇನೆ, ಹಾಗೂ ಕನ್ನಡ ವಿಕಪೀಡಿಯದಲ್ಲಿ ಲೇಖನಗಳ ಗುಣಮಟ್ಟ ಕಡಿಮೆಯಿದ್ದರೂ ಯಾವುದೇ ನಿರಾಸಕ್ತಿಯಿಲ್ಲದೆ ವಿಕಿಪೀಡಿಯಾವನ್ನು ಅಭಿವೃದ್ಧಿಪಡಿಸಲು ಸ್ವಯಂಪ್ರೇರಿತರಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಬೇರೆ ಭಾಷೆಯ ವಿಕಿಗಳ ( ಉದಾಹರೆಗೆ ಆಂಗ್ಲ ವಿಕಪೀಡಿಯ ) ಹಾಗೆ ಇಲ್ಲಿ ತುಂಬ ಕಟ್ಟುನಿಟ್ಟಾದ ನೀತಿ ಪಾಲನೆ ನಿಬಂಧನೆಗಳಿಲ್ಲ, ವಿಕಿಪೀಡಿಯ:ಉತ್ತಮ ಲೇಖನ ಪುಟದಲ್ಲಿರುವ ಹೊಸ ಪುಟವನ್ನು ರಚಿಸಲು ಕನಿಷ್ಠ ಅವಶ್ಯಕತೆಗಳ ನೀತಿಗಳನ್ನು ದಯವಿಟ್ಟು ಅದನ್ನು ಅನುಸರಿಸಲು ಪ್ರಯತ್ನ ಮಾಡಬೇಕೆಂದು ವಿನಂತಿ.~aanzx © ೧೧:೨೮, ೧೪ ಜುಲೈ ೨೦೨೩ (IST)Reply
ನಿಮ್ಮ ಕರಡು ಪುಟದಲ್ಲಿರುವ ಯಾವುದೇ ಉಲ್ಲೇಖ ಗಮನಾರ್ಹವಲ್ಲ ಎಂದು ನನ್ನ ಅನಿಸಿಕೆ ಉದಾಹರಣೆಗೆ ಫೇಸ್ಬುಕ್ ಚಿತ್ರವನ್ನು ಉಲ್ಲೇಖಿಸಿರುವುದು ಮುರಿದ/ಅಸ್ತಿತ್ವದಲ್ಲಿಲ್ಲದ ಲಿಂಕ್‌ಗಳನ್ನು ಉಪಯೋಗಿಸಲಾಗಿದೆ, ಹಾಗೂ ಆ ಪುಟ ಲೇಖನದ ಬದಲಿಗೆ ರೆಸ್ಯೂಮ್ ನಂತೆ ತೋರುತ್ತಿದೆ.~aanzx © ೧೧:೨೮, ೧೪ ಜುಲೈ ೨೦೨೩ (IST)Reply
ಸರಿಯಪ್ಪ. ಇಂತಹ ಜವಾಬ್ದಾರಿಯುತ ಉತ್ತರವನ್ನು ಯಾವುದೇ ಇಂದಿನ ಪ್ರತಿಭೆಗಳು ಅಪೇಕ್ಷಿಸುತ್ತವೆ. ದಬ್ಬಾಳಿಕೆ, ಕಾನೂನು ಈ ಮೀಡಿಯದಲ್ಲಿ ಕೆಲಸಮಾಡುವುದಿಲ್ಲ. ಗಮನವಿರಲಿ. 'ಸಬ್ ಕ ಸಾಥ್ ಸಬ್ ಕ ವಿಕಾಸ್' ಎನ್ನುವ ನಮ್ಮ ಪ್ರಧಾನಿಯವರ ಪ್ರೇರಣಾದಾಯಕ ಮಾತುಗಳು, ನಿಮ್ಮ ಬತ್ತಳಿಕೆಯಲ್ಲಿ ಇಲ್ಲದಿರುವಂತಿದೆ. ಇದು ಅಪೇಕ್ಷಣೀಯ ; ಮತ್ತು ಇಂದಿನ ಜಗತ್ತು ಬೇಡುವುದು ಅದನ್ನೇ ! (````) (ಚರ್ಚೆ) ೧೧:೩೭, ೧೪ ಜುಲೈ ೨೦೨೩ (IST)Reply
ಇಷ್ಟು ವರ್ಷ ಮಣ್ಣುಹೊತ್ತು ಇಷ್ಟೊಂದು ಲೇಖನಗಳನ್ನು ಬರೆದಮೇಲೂ, ನನಗೆ ಕಾಡುತ್ತಿರುವ ಪ್ರಶ್ನೆ ಅದೆಂತಹ ಲೇಖನ ನೀವು ಬಯಸುವುದು ? ಮೇಲಿನ ಲೇಖನವನ್ನು ನನಗೆ ಮಾದರಿಯ ಲೇಖನಕ್ಕೆ ಅಳವಡಿಸಿ ಕಳಿಸಿ, ಇ-ಮೇಲ್ ಮಾಡಿ. ಅದರಂತೆ ಅನುಸರಿಸುವೆ. ಯಾವುದಾದರೂ ಒಂದು ವೈಜ್ಞಾನಿಕ ಪದ್ಧತಿ ತಿಳಿಸಿ. (````) (ಚರ್ಚೆ) ೧೧:೪೨, ೧೪ ಜುಲೈ ೨೦೨೩ (IST)Reply
ಮತ್ತೊಮ್ಮೆ ದಯವಿಟ್ಟು ವೈಯಕ್ತಿಕ ಅಭಿಪ್ರಾಯವನ್ನು ಬದಿಗಿರಿಸಿ ನಿಮ್ಮ ಪುಟ ವಿಷಯ ಬಿಟ್ಟು ಬೇರೆ ಚರ್ಚೆ ಬೇಡ, ಆ ಪುಟವನ್ನು ಹೇಗೆ ಸುಧಾರಿಸುವುದು ಎಂಬುದನ್ನು ನಾನು ಮೇಲೆ ವಿವರಿಸಿದ್ದೇನೆ, ಮತ್ತೊಮ್ಮೆ ಹೇಳುತ್ತೇನೆ ನೀವು ಒದಗಿಸಿದ ಯಾವುದೇ ಉಲ್ಲೇಖಗಳು ಮಾನ್ಯವಲ್ಲ , ಆದ್ದರಿಂದ ಅ ಪುಟ ಸರಿಪಡಿಸಲು ಆಗುವುದಿಲ್ಲ, ಯಾವುದಾದರು ಗಮನಾರ್ಹ ವಿಷಯದ ಬಗ್ಗೆ ಲೇಖನ ಬರೆಯಬಹುದು.~aanzx © ೧೪:೩೪, ೧೪ ಜುಲೈ ೨೦೨೩ (IST)Reply
ನಮಸ್ಕಾರ @Atmalingaರೆ, ನಾನು ನೀವು ಈ ಹಿಂದೆ ಒಮ್ಮೆ ಚರ್ಚಿಸಿದ್ದ ನೆನಪು. ಪುನಃ ಅದೇ ಹೇಳಬೇಕಾಗಿದೆ. ದಯವಿಟ್ಟು ಹೊಗಳಿಕೆ ಶೈಲಿಯಿಂದ ವಿಶ್ವಕೋಶ ಶೈಲಿಗೆ ಬದಲಾಯಿಸಿ. ಗಮನಾರ್ಹ ವಿಷಯಗಳ ಬಗ್ಗೆ ಪುಟಗಳನ್ನು ರಚಿಸಿ. ವರದಿಗಾರಿಕೆಯ ಶೈಲಿಯು, ಪತ್ರಿಕಾ ಲೇಖನ ಶೈಲಿಯು (ಕಾರ್ಯಕ್ರಮ ಕೊಟ್ಟರು, ಕೊಡಲಿದ್ದಾರೆ, ಸಕ್ರಿಯವಾಗಿ ಪಾಲ್ಗೊಂಡಿದ್ದರು ಮುಂತಾದವು) ಮಾನ್ಯವಲ್ಲ. ಸರಿಯಾದ ಉಲ್ಲೇಖಗಳನ್ನು ಕೊಟ್ಟು ಉತ್ತಮ ಲೇಖನ ಮಾನದಂಡಗಳನ್ನು ಅನುಸರಿಸಿ ಎಂದು ಕೋರಿಕೆ.--ವಿಕಾಸ್ ಹೆಗಡೆ| Vikas Hegde (ಚರ್ಚೆ) ೧೩:೨೫, ೧೫ ಜುಲೈ ೨೦೨೩ (IST)Reply
Return to "ಬಿ.ಆರ್.ಮಂಜುನಾಥ್" page.