ಕಬಿನಿ ಅಣೆಕಟ್ಟನ್ನು ಬೀದರಹಳ್ಳಿಯಲ್ಲಿರುವ ಕಬಿನಿ ನದಿಯ ಮೇಲೆ ನಿರ್ಮಿಸಲಾಗಿದೆ. ಕರ್ನಾಟಕದ ಮೈಸೂರು ಜಿಲ್ಲೆಯ ಹೆಗ್ಡಾದೇವನಕೋಟೆ ತಾಲ್ಲೂಕಿನ ಬೀದರಹಳ್ಳಿ ಮತ್ತು ಬೀಚನಾಹಳ್ಳಿ ಗ್ರಾಮಗಳ ನಡುವೆ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಅಣೆಕಟ್ಟು ೯೬೬ ಮೀಟರ್ (೩,೧೬೯ ಅಡಿ) ಉದ್ದವನ್ನು ಹೊಂದಿದೆ. ಇದನ್ನು ೧೯೭೪ ರಲ್ಲಿ ನಿರ್ಮಿಸಲಾಯಿತು.[೧] ಅಣೆಕಟ್ಟಿನ ಮುಖ್ಯ ಉದ್ದೇಶವು ೨೨ ಹಳ್ಳಿಗಳು ಮತ್ತು ೧೪ ಕುಗ್ರಾಮಗಳಿಗೆ ಕುಡಿಯುವ ನೀರು, ನೀರಾವರಿವ್ಯವಸ್ಥೆಯನ್ನು ಒದಗಿಸುವುದು ಮತ್ತು ವಿದ್ಯುತ್ ಉತ್ಪಾದಿಸುವುದು. ಈ ಅಣೆಕಟ್ಟು ದೊಡ್ಡಕೆರೆ ಮತ್ತು ಅಪ್ಪರ್ ನುಗು ಅಣೆಕಟ್ಟುಗಳಿಗೆ ನೀರನ್ನು ಒದಗಿಸುತ್ತದೆ.[೨] ಇದು ಮಣ್ಣಿನ ಅಣೆಕಟ್ಟು ಆಗಿದ್ದು, ಎಡದಂಡೆಯ ಮೇಲೆ ಕಲ್ಲಿನ ಸ್ಪಿಲ್‌ವೇ ಇದೆ. ಅಣೆಕಟ್ಟು ೧೬೬ ಅಡಿ (೫೧ ಮೀ) ಎತ್ತರ ಮತ್ತು ೧೨,೯೩೭ ಅಡಿ (೩,೯೪೦ ಮೀ) ಉದ್ದವನ್ನು ಹೊಂದಿದೆ. ಸ್ಪಿಲ್‌ವೇಯ ಉದ್ದವು ೨೫೦ ಅಡಿಗಳು (೭೬ ಮೀ), ಮತ್ತು ಇದು ೪ ಸ್ಪಿಲ್‌ವೇ ಗೇಟ್‌ಗಳನ್ನು ಹೊಂದಿದೆ. ಜಲಾಶಯ ಭರ್ತಿಯಾಗುವ ಅವಧಿ ಜೂನ್‌ನಿಂದ ನವೆಂಬರ್‌ವರೆಗೆ ಮತ್ತು ಖಾಲಿಯಾಗುವ ಅವಧಿ ನವೆಂಬರ್‌ನಿಂದ ಮೇ. ಇದು ಸಣ್ಣ ಜಲವಿದ್ಯುತ್ ಯೋಜನೆಯ ಭಾಗವಾಗಿದೆ.

ಕಬಿನಿ ಅಣೆಕಟ್ಟು

ಉಲ್ಲೇಖಗಳು ಬದಲಾಯಿಸಿ

  1. starofmysore.com/tag/kabini-reservoir/
  2. https://www.karnataka.com/kabini/kabini-dam/