ಭಾರತೀಯ ಪಾಕಪದ್ಧತಿಯಲ್ಲಿ, ಕಟ್ಲೆಟ್ ಪದವು ನಿರ್ದಿಷ್ಟವಾಗಿ ಹಿಟ್ಟಿನ ಹೊದಿಕೆಯೊಂದಿಗೆ ಕರಿಯಲಾದ ಚೂರ್ಣಮಾಡಿದ ತರಕಾರಿಗಳು (ಆಲೂಗಡ್ಡೆ, ಕ್ಯಾರಟ್, ಹುರುಳಿಕಾಯಿ) ಅಥವಾ ಬೇಯಿಸಿದ ಮಾಂಸದ ಹೂರಣವನ್ನು ಸೂಚಿಸುತ್ತದೆ.[೧][೨] ಮಾಂಸವನ್ನು ಸ್ವತಃ ಸಂಬಾರ ಪದಾರ್ಥಗಳೊಂದಿಗೆ ಬೇಯಿಸಲಾಗುತ್ತದೆ - ಉದಾಹರಣೆಗೆ ಈರುಳ್ಳಿ, ಏಲಕ್ಕಿ, ಲವಂಗ, ದಾಲ್ಚಿನ್ನಿ, ಕೊತ್ತುಂಬರಿ, ಹಸಿರು ಮೆಣಸಿನಕಾಯಿ, ನಿಂಬೆ ಮತ್ತು ಉಪ್ಪು. ಇದನ್ನು ನಂತರ ಮೊಟ್ಟೆಯ ಮಿಶ್ರಣ ಅಥವಾ ಮೆಕ್ಕೆಜೋಳದ ಹಿಟ್ಟಿನಲ್ಲಿ ಮತ್ತು ನಂತರ ಬ್ರೆಡ್‍ನ ಚೂರುಗಳಲ್ಲಿ ಅದ್ದಿ ತುಪ್ಪ ಅಥವಾ ತರಕಾರಿ ಎಣ್ಣೆಯಲ್ಲಿ ಕರಿಯಲಾಗುತ್ತದೆ. ಕೊಲ್ಕತ್ತ ನಗರದಲ್ಲಿ ಬಹುತೇಕವಾಗಿ ಕೊಳಿಮಾಂಸ ಮತ್ತು ಆಡಿನಮಾಂಸದ ಕಟ್ಲೆಟ್‍ಗಳು ಬಹಳ ಜನಪ್ರಿಯವಾದ ಲಘು ಆಹಾರಗಳಾಗಿವೆ.

ಚಿತ್ರ:Kabiraji Cutlet.jpg
ಭಾರತದ ಪ್ರಸಿದ್ಧ ಚಿಕನ್ ಕಬಿರಾಜಿ ಕಟ್ಲೆಟ್

ಸಸ್ಯಾಹಾರಿ ಬಗೆಯ ಕಟ್ಲೆಟ್‍ನಲ್ಲಿ ಮಾಂಸವಿರುವುದಿಲ್ಲ, ಬದಲಾಗಿ ಹೂರಣವು ಸ್ವಲ ಕಾಲ ಒಟ್ಟಾಗಿ ಬೇಯಿಸಲಾದ ಚೂರ್ಣಮಾಡಿದ ಆಲೂಗಡ್ಡೆ, ಈರುಳ್ಳಿ, ಹಸಿರು ಮೆಣಸಿನಕಾಯಿ, ಸಂಬಾರ ಪದಾರ್ಥಗಳು ಮತ್ತು ಉಪ್ಪಿನ ಸಂಯೋಜನೆಯಾಗಿರುತ್ತದೆ. ಈ ಬಗೆಯು ಭಾರತದ ಸಸ್ಯಾಹಾರಿ ಜನರಲ್ಲಿ ಹೆಚ್ಚು ಜನಪ್ರಿಯವಾಗಿದೆ. ಒಂದು ಉದಾಹರಣೆಯೆಂದರೆ ಆಲೂ ಟಿಕ್ಕಿ.

ಉಲ್ಲೇಖಗಳು ಬದಲಾಯಿಸಿ

"https://kn.wikipedia.org/w/index.php?title=ಕಟ್ಲೆಟ್&oldid=991372" ಇಂದ ಪಡೆಯಲ್ಪಟ್ಟಿದೆ