ಕಚ : ದೇವಗುರುವಾದ ಬೃಹಸ್ಪತಿಯ ಮಗ. ದೇವತೆಗಳ ಪ್ರಾರ್ಥನೆಯಂತೆ ಅಸುರಗುರುವಾದ ಶುಕ್ರಾಚಾರ್ಯನ ಶಿಷ್ಯನಾಗಿ ಮೃತಸಂಜೀವಿನೀ ವಿದ್ಯೆಯನ್ನು ಪಡೆಯುವ ಪ್ರಯತ್ನ ಮಾಡಿದ. ಅಲ್ಲಿ ಗುರುಪುತ್ರಿ ದೇವಯಾನಿ ಕಚನನ್ನು ಕಂಡು ಮೋಹಿತಳಾದಳು. ಇದನ್ನರಿತ ದಾನವರು ಎರಡು ಬಾರಿ ಕಚನನ್ನು ಕೊಲೆಮಾಡಿದರು. ಆದರೆ ಮಗಳಾದ ದೇವಯಾನಿಯ ಅಪೇಕ್ಷೆಯಂತೆ ಸಂಜೀವಿನೀ ಮಂತ್ರಬಲದಿಂದ ಶುಕ್ರಾಚಾರ್ಯ ಎರಡು ಬಾರಿಯೂ ಕಚನನ್ನು ಬದುಕಿಸಿದ. ಮತ್ತೆ ಮತ್ತೆ ಬದುಕಿಬಂದ ಕಚನನ್ನು ಮೂರನೆಯ ಬಾರಿ ಕೊಂದು ಅವನ ಮಾಂಸವನ್ನು ಮದ್ಯದೊಡನೆ ಕಲಸಿ ತಮ್ಮ ಗುರುವಾದ ಶುಕ್ರಾಚಾರ್ಯನಿಗೆ ಅವರು ಉಣಬಡಿಸಿದರು. ಶುಕ್ರನಾದರೋ ತನ್ನ ಮಗಳಾದ ದೇವಯಾನಿಯ ಬೇಡಿಕೆಯಂತೆ ತನ್ನ ಉದರದಲ್ಲಿ ಪ್ರವೇಶಿಸಿದ್ದ ಕಚನಿಗೆ ಸಂಜೀವಿನಿ ವಿದ್ಯೆಯನ್ನು ಪುರ್ಣವಾಗಿ ಉಪದೇಶಿಸಿ ಅವನನ್ನು ಬದುಕಿಸಿದ. ಬದುಕಿಬಂದ ಕಚ ಗುರುಪುತ್ರಿಯೆಂಬ ಕಾರಣದಿಂದ ದೇವಯಾನಿಯನ್ನು ಮದುವೆಯಾಗಲು ಒಪ್ಪಲಿಲ್ಲ. ಕುಪಿತಳಾದ ದೇವಯಾನಿ ಕಚ ಕಲಿತ ದಿವ್ಯಮಂತ್ರ ಫಲಿಸದಿರಲೆಂದು ಶಪಿಸಿದಳು. ಈ ವಿಚಾರ ಮಹಾಭಾರತದ ತೋಯಸಂಭವ ಪರ್ವದಲ್ಲಿದೆ.ಅಂತೆಯೇ ಅಗ್ನಿ ಪುರಾಣ ಮತ್ತು ಮತ್ಸ್ಯ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ..[೧]

ಚಿತ್ರ:Shukracharya and Kacha.jpg
ಶುಕ್ರಾಚಾರ್ಯ ಮತ್ತು ಕಚ

ಉಲ್ಲೇಖಗಳು ಬದಲಾಯಿಸಿ

  1. Pargiter, F.E. (1972). Ancient Indian Historical Tradition, Delhi: Motilal Banarsidass, pp.196, 196ff.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕಚ&oldid=788858" ಇಂದ ಪಡೆಯಲ್ಪಟ್ಟಿದೆ