ಒಹಾಯೊ ನದಿ
ಒಹಾಯೊ ನದಿ : ಅಮೆರಿಕ ಸಂಯುಕ್ತ ಸಂಸ್ಥಾನದ ಒಂದು ನದಿ. ಒಹಾಯೊ ರಾಜ್ಯದ ದಕ್ಷಿಣ ಪರ್ವಗಳಲ್ಲಿ ಗಡಿರೇಖೆಯಂತೆ ಹರಿಯುತ್ತದೆ. ಮಿಸಿಸಿಪಿಯ ಏಕೈಕ ಮುಖ್ಯ ಉಪನದಿ. ಅಲೆಘನಿ ಮತ್ತು ಮನೊಗೆಹಲ ನದಿಗಳು ಪಿಟ್ಸ್‌ಬರ್ಗ್‌ನಲ್ಲಿ ಕೂಡಿ ಸಂಭವಿಸಿರುವ ಈ ನದಿಗೆ ಸುಮಾರು ೫೫೪೨೫೮ ಚಕಿಮೀ ಜಲಾನಯನ ಪ್ರದೇಶವಿದೆ. ಉತ್ತರಾಭಿಮುಖವಾಗಿ ಹರಿಯುತ್ತಿದ್ದ ಅಪಲೇಷಿಯನ್ ತೊರೆಗಳಿಗೆ ಮಂಜುಗೆಡ್ಡೆಯಿಂದ ತಡೆಯುಂಟಾಗಿ, ತುಂಬಿದ ನೀರು ಒಂದು ಕಣಿವೆಯಿಂದ ಇನ್ನೊಂದು ಕಣಿವೆಗೆ ಬಿರುಕುಗಳ ಮೂಲಕ ಹರಿದದ್ದರಿಂದ ಸಂಭವಿಸಿದ ಕಣಿವೆಯಲ್ಲಿ ಈ ನದಿ ಹರಿಯುತ್ತದೆ. ತತ್ಫಲವಾಗಿ ಕೆಲವು ಕಡೆಗಳಲ್ಲಿ ಕಮರಿಗಳೇ ನದಿಯ ಪಾತ್ರ. ಒಮ್ಮೊಮ್ಮೆ ಇದು ಥಟ್ಟನೆ ತನ್ನ ದಿಕ್ಕನ್ನು ಬದಲಿಸುತ್ತದೆ. ಎತ್ತರದ ನೆಲದಿಂದ ಅತಿ ಹಳ್ಳದ ಪ್ರದೇಶಕ್ಕೆ ಅಂಬಿನಂತೆ ಜಾರುತ್ತದೆ. ಹೀಗಾಗಿ ಜಲಪಾತಗಳು ಸಂಭವಿಸಿವೆ.
ಒಹಾಯೊ ನದಿ ಒಳ್ಳೆಯ ಜಲಮಾರ್ಗವೂ ಆಗಿದೆ. ಪ್ರವಾಹ ಕಾಲದಲ್ಲಿ ಜಲಪಾತದ ಮೇಲೂ ಹಡಗುಗಳು ಸಾಗುತ್ತವೆ. ಇಂಥೆಡೆಗಳಲ್ಲಿ ಕಾಲುವೆ ತೋಡಿರುವುದರಿಂದ ೧೮೨೮ರಿಂದ ಜಲಪಾತಗಳ ಅಡಚಣೆಯೂ ಇಲ್ಲ. ಕೆಳ ಮಿಸಿಸಿಪಿಗೆ ಬರುವ ನೀರಿನ ಮುಕ್ಕಾಲು ಭಾಗ ಒಹಾಯೊವಿನಿಂದ ಲಭಿಸುತ್ತದೆ. ಒಹಾಯೊ ಕಣಿವೆಯಲ್ಲಿ ವಾರ್ಷಿಕ ಮಳೆಯ ಸರಾಸರಿ ೪೪.೭". ನದಿ ಪ್ರವಾಹ ಸು. ೦.೬೦೯೬ ಮೀ.ಗಳಿಂದ ೧೩-೧೬ ಮೀ.ಗಳವರೆಗೆ ವ್ಯತ್ಯಾಸವಾಗುವುದುಂಟು. ಚಳಿಗಾಲದ ಕೊನೆಯಲ್ಲಿ ಅಥವಾ ವಸಂತದ ಆದಿಯಲ್ಲಿ ಪ್ರವಾಹದ ಹೆಚ್ಚಳ ಕಂಡು ಬರುತ್ತದೆ. ಬೇಸಗೆಯಲ್ಲಿ ನೀರು ಆವಿಯಾಗುವುದರಿಂದ ಆ ಋತುವಿನ ಕೊನೆಯಲ್ಲಿ ಪ್ರವಾಹ ಬಹಳ ಇಳಿಯುತ್ತದೆ. ಪರಮಾವಧಿ ಪ್ರವಾಹ ಬಂದಿದ್ದದು ೧೯೨೭ರಲ್ಲಿ. ಒಹಾಯೊ ನದಿಯ ಮೇಲೆ ೧೭೮೨ರಷ್ಟು ಹಿಂದಿನಿಂದಲೂ ದೋಣಿಗಳು ಸಂಚರಿಸುತ್ತಿವೆ. ಪ್ರಯಾಣಿಕ ನೌಕೆ ಮೊಟ್ಟಮೊದಲು ಸಿನ್ಸಿನ್ಯಾಟಿಯಿಂದ ಪಿಟ್ಸ್‌ಬರ್ಗಿಗೆ ೧೭೯೪ರಲ್ಲಿ ಸಂಚಾರ ಮಾಡಿತು. ೧೮೮೦ರಲ್ಲಿ ಪಿಟ್ಸ್‌ಬರ್ಗ್ ಪ್ರದೇಶ ಕೈಗಾರಿಕೆಯಲ್ಲಿ ಮುಂದುವರಿದಂತೆ ಈ ಜಲಮಾರ್ಗವನ್ನು ಕಲ್ಲಿದ್ದಲು, ಮರದ ದಿಮ್ಮಿ ಮುಂತಾದವುಗಳನ್ನು ಸಾಗಿಸುವುದಕ್ಕೆ ಹೆಚ್ಚಾಗಿ ಬಳಸಿಕೊಳ್ಳಲಾಯಿತು. ೧೯೧೦ರಲ್ಲಿ ಅಮೆರಿಕ ಕಾಂಗ್ರೆಸ್ ಈ ಜಲಮಾರ್ಗವನ್ನು ಅಭಿವೃದ್ಧಿಪಡಿಸಲು ಯೋಚಿಸಿ ಅದಕ್ಕಾಗಿ ಒಂದು ಯೋಜನೆ ತಯಾರಿಸಿತು. ಅಲ್ಲಲ್ಲಿ ಕಟ್ಟೆಗಳನ್ನು ಕಟ್ಟಿ ಸದಾಕಾಲವೂ ೩ ಮೀ ನೀರುಳ್ಳ ಕಾಲುವೆಯನ್ನು ಜಲಮಾರ್ಗಕ್ಕೆ ಒದಗಿಸಲಾಯಿತು. [೧]
ಚಿತ್ರಶಾಲೆ
ಬದಲಾಯಿಸಿ-
ಅಲ್ಲಿಘೆನಿ ನದಿ(ಎಡ) ಮತ್ತು ಮೊನೊಂಗಹೇಲಾ ನದಿಗಳು ಓಹಿಯೊ ನದಿಗೆ ಸೇರಿ, ಪಿಟ್ಸ್‌ಬರ್ಗ್, ಪೆನ್ಸಿಲ್ವೇನಿಯದಲ್ಲಿ, ನದಿಮೇಲಿನ ದೊಡ್ಡ ಮಹಾನಗರ ನಿರ್ಮಾಣವಾಗಿದೆ.
-
ಲೂಯಿಸ್ವಿಲ್ಲೆ, ಕೆಂಟುಕಿ: ಓಹಿಯೋ ನದಿಯ ಅತೀ ಆಳಬಿಂದುವು ಕ್ಯಾನೆಲ್ಟನ್ ಲೊಕ್ಸ್ ಮತ್ತು ಅಣೆಕಟ್ಟುಗಳ ಕೆಳಗಿರುವ ಒಂದು ರಂಧ್ರವಾಗಿದೆ.
-
ಓಹಿಯೋ ನದಿಯ ಏಕೈಕ ಕೃತಕ ಭಾಗವಾದ ಲೂಯಿಸ್ವಿಲ್ಲೆ ಮತ್ತು ಪೋರ್ಟ್ಲ್ಯಾಂಡ್ ಕಾಲುವೆಯಲ್ಲಿ ಕಲ್ಲಿದ್ದಲು ಸಾಗಿಸುತ್ತಿರುವ ಒಂದು ದೋಣಿ .
-
"ಜಾನ್ ಎ ರೋಬ್ಲಿಂಗ್ ಸಸ್ಪೆನ್ಷನ್ ಬ್ರಿಡ್ಜ್"ನಿಂದ ಕೆವಿಂಗ್ಟನ್, ಕೆಂಟುಕಿಯ ನಡುವಣದ ಸಿನ್ಸಿನ್ನಾಟಿಯ ದಿಗಂತದ ಒಂದು ನೋಟ
-
ಓಹಿಯೋ ನದಿ ಮತ್ತು ಸಿಯಾಟೋ ಉಪನದಿ (ಬಲ)ಗಳ ನಡುವಿನ ಕಾರ್ಲ್ ಪರ್ಕಿನ್ಸ್ ಸೇತುವೆ (ಪೊರ್ಟ್ಸ್ಮೌತ್, ಓಹಿಯೋ)
ಉಲ್ಲೇಖಗಳು
ಬದಲಾಯಿಸಿ