ಇದೊಂದು ಸಾವಯವ ಆಮ್ಲ. ಇದರ ಅಣುಸೂತ್ರ (C5H4N2O4)[]. ರಚನಾಸೂತ್ರ ಚಿತ್ರದಲ್ಲಿ ತೋರಿಸಿದೆ.

ಒರಾಟಿಕ್ ಅಮ್ಲ

ಆವಿಷ್ಕಾರ

ಬದಲಾಯಿಸಿ

ಹಸುವಿನ ಹಾಲಿನಲ್ಲಿ ಇದನ್ನು ಮೊದಲು ಗುರುತಿಸಿದ್ದು ಮತ್ತು ಅದರಿಂದ ಬೇರ್ಪಡಿಸಿದ್ದು 1905ರಲ್ಲಿ. ಮೇಲ್ಮಟ್ಟದ ಜೀವಿಗಳಲ್ಲಿಯೂ ಕೆಳಮಟ್ಟದ ಜೀವಿಗಳಲ್ಲಿಯೂ ಇದು ಆರ್ಎನ್ಎ ಮತ್ತು ಡಿಎನ್ಎ ಪಿರಿಮಿಡೀನುಗಳ ಪುರ್ವಗಾಮಿಯಾಗಿರುವುದೆಂದು 1958ರಲ್ಲಿ ಗೊತ್ತಾಯಿತು. ಆಹಾರದಲ್ಲಿ ಒರಾಟಿಕ್ ಆಮ್ಲ ಶೇಕಡ ಒಂದರಷ್ಟಿದ್ದರೆ ಬಿಳಿ ಇಲಿಗಳಲ್ಲಿ ಮೇದೋಭರಿತ ಯಕೃತ್ತನ್ನುಂಟುಮಾಡುವುದು; ಆದರೆ ಸಾದಾ ಇಲಿಗಳಲ್ಲಿ, ಕೋತಿಗಳಲ್ಲಿ ಮತ್ತು ಕೋಳಿಗಳಲ್ಲಿ ಉಂಟುಮಾಡುವುದಿಲ್ಲ.

ವಿಶಿಷ್ಟತೆ

ಬದಲಾಯಿಸಿ

ಈ ಮೇದೋಭರಿತ ಯಕೃತ್ತು ಅನೇಕ ರೀತಿಯಲ್ಲಿ ವಿಶಿಷ್ಟತೆಯುಳ್ಳದ್ದು.

  • (1) ಅಧಿಕ ಪ್ರೋಟೀನು, ಕಡಿಮೆ ಮೇದಸ್ಸು ಮತ್ತು ಸಾಕಷ್ಟು ಕೋಲೀನ್ ಉಳ್ಳ ಆಹಾರವಿದ್ದಾಗ ಇದು ಕಂಡುಬಂದಿದೆ.
  • (2) ಸಂಗ್ರಹವಾದ ಲಿಪಿಡ್ಡಿನಲ್ಲಿ ಹೆಚ್ಚಿನ ಪ್ರಮಾಣ ಕೊಲೆಸ್ಟೆರಾಲ್ ಇರುತ್ತದೆ. ಸೀರಮ್ಮಿನಲ್ಲಿ ಕೊಲೆಸ್ಟೆರಾಲ್ ಪ್ರಮಾಣ ಕಡಿಮೆ.
  • (3) ಲಿಪಿಡ್ಡು ಯಕೃತ್ತಿನ ಬಾಯ ಸುತ್ತಲೂ ಹಂಚಿಕೊಂಡಿರುತ್ತದೆ.
  • (4) ಅಡನೀನ್ ನ್ಯೂಕ್ಲಿಯೊಟೈಡುಗಳು ಕಡಿಮೆಯಾದಷ್ಟೂ ದ್ರಾವ್ಯ ಯುರಿಡೀನ್ ನ್ಯೂಕ್ಲಿಯೊಟೈಡು ಯಕೃತ್ತಿನಲ್ಲಿ ಹೆಚ್ಚಾಗುತ್ತದೆ.
  • (5) ಅಡೆನೀನ್, ಆಕ್ಟಿನೊಮೈಸಿನ್ ಡಿ, ಗ್ಲೂಕೋಸಮೀನ್ 6-ಅಸಾಯೂರಸಿಲ್, ಲ್ಯಾಕ್ಟೋಸ್, ಕ್ಯಾಲ್ಸಿಯಂ ಲ್ಯಾಕ್ಟೇಟುಗಳೂ ಅಡ್ರಿನಲ್ ಗ್ರಂಥಿಛೇದನೆಯೂ ಮೇದೋಭರಿತ ಯಕೃತ್ತನ್ನು ಪುರ್ವಸ್ಥಿತಿಗೆ ತರುತ್ತವೆ

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2018-01-20. Retrieved 2016-10-20.