ಎ.ಎನ್. ಪ್ರಹ್ಲಾದ ರಾವ್

(ಎ.ಎನ್.ಪ್ರಹ್ಲಾದ ರಾವ್ ಇಂದ ಪುನರ್ನಿರ್ದೇಶಿತ)

ಅ.ನಾ.ಪ್ರಹ್ಲಾದ ರಾವ್‌ರವರು, ಕನ್ನಡದ ಪದಬಂಧ ಲೇಖಕರಲ್ಲಿ ಪ್ರಮುಖರು. ಇವರು ಕನ್ನಡದಲ್ಲಿ ಸುಮಾರು 40,000 ಪದಬಂಧಗಳನ್ನು ರಚಿಸಿದ್ದಾರೆ. ಇದುವರೆವಿಗೂ ಇವರು ರಚಿಸಿರುವ ಪದಬಂಧಗಳಿಗಾಗಿ ಆರು ಲಕ್ಷ ಸುಳುಹುಗಳನ್ನು ನೀಡಿದ್ದಾರೆ. ಇವರ ಪದಬಂಧಗಳು ಕನ್ನದದ ಪ್ರಮುಖ ಪ್ರತ್ರಿಕೆಗಳು ಹಾಗು ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಪದಬಂಧ ರಚನೆಯಲ್ಲಿ ಭಾರತದಲ್ಲೇ ಇವರು ಅಗ್ರಗಣ್ಯರು ಎಂದು ಹೇಳಲಾಗಿದೆ.

ಜೀವನ ಜುಲೈ 24,1953ರಂದು ಕನಾ೯ಟಕ ರಾಜ್ಯದ ಕೋಲಾರ ಜಿಲ್ಲೆಯ ಅಬ್ಬಣಿ ಗ್ರಾಮದಲ್ಲಿ ಜನಿಸಿದರು. ಪತ್ರಕರ್ತರಾಗಿ ತಮ್ಮ ವೃತ್ತಿ ಜೀವನವನ್ನು 1975ರಲ್ಲಿ ಆರಂಭಿಸಿದರು. ೧೯೮೩ರಲ್ಲಿ ಕರ್ನಾಟಕ ಸರ್ಕಾರದ ಮಾಹಿತಿ ಇಲಾಖೆಗೆ ಸೇರಿಕೊಂಡರು.

ಸಾಧನೆ 1984ರಲ್ಲಿ ಪತ್ರಿಕೆಗಳಿಗೆ ಪದಬಂಧಗಳನ್ನು ರಚಿಸಲು ಆರಂಭಿಸಿದ ಇವರು, ಚಲನಚಿತ್ರ, ಕ್ರೀಡೆ, ಸಾಮಾನ್ಯ ಜ್ಞಾನ, ಪೌರಾಣಿಕ ಹಾಗು ವಿಜ್ಞಾನ ವಿಷಯಗಳಲ್ಲಿ ಪದಬಂಧಗಳನ್ನು ರಚಿಸಿದರು. ಇವರು ರಚಿಸಿದ ಪದಬಂಧಗಳು, ಕರ್ನಾಟಕದ ಪ್ರಮುಖ ಪತ್ರಿಕೆಗಳಾದ, ಪ್ರಜಾವಾಣಿ, ವಿಜಯ ಕರ್ನಾಟಕ, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಮಂಗಳ, ಬಾಲಮಂಗಳ, ಪ್ರಿಯಾಂಕ, ಚಿತ್ರ, ತರಂಗ, ಈ ಸಂಜೆ, ಅರಗಿಣಿ, ಪ್ರಿಯಾಂಕ, ಚಿತ್ರ, ಕಂದಾಯವಾತೆ೯ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಪುಸ್ತಕಗಳು ಬಂಗಾರದ ಮನುಷ್ಯ (ಆತ್ಮಚರಿತ್ರೆ) - ಕನ್ನಡದ ಮೇರುನಟ ಡಾ.ರಾಜಕುಮಾರ್ ಅವರ ಆತ್ಮಚರಿತ್ರೆಯಾದ ಬಂಗಾರದ ಮನುಷ್ಯ ಪುಸ್ತಕವನ್ನು ಇವರು ರಚಿಸಿದ್ದಾರೆ. ಡಾ.ರಾಜ್‌ಕುಮಾರ ಅಭಿನಯದ ೨೦೮ ಚಲನಚಿತ್ರಗಳ ಸಮಗ್ರ ಮಾಹಿತಿಯನ್ನು ಹಾಗೂ ಡಾ.ರಾಜಜಕುಮಾರ್ ಅವರ ಜೀವನ ಸಾಧನೆಯನ್ನು ಈ ಪುಸ್ತಕ ಒಳಗೊಂಡಿದೆ. ಬೆಳ್ಳಿತೆರೆ ಬೆಳಗಿದವರು ಇವರ ಎರಡನೆಯ ಪುಸ್ತಕ. ಕನ್ನಡ ಚಲನಚಿತ್ರ ರಂಗದ ವಿವಿಧ ಕ್ಷೇತ್ರಗಳಲ್ಲಿ ದುಡಿದ ೧೧೫ ಮಂದಿ ಮಹಾನುಭಾವರ ವ್ಯಕ್ತಿ ಚಿತ್ರಣವನ್ನು ಈ ಪುಸ್ತಕ ಒಳಗೊಂಡಿದೆ. ಕನ್ನಡ ಚಲನಚಿತ್ರರಂಗಕ್ಕೆ 75 ವಷ೯ಗಳು ಸಂದ ಸಂದಭ೯ದಲ್ಲಿ ಕನ್ನಡ ಚಿತ್ರರಂಗದ ಮಹಾನುಭಾವರನ್ನು ಕುರಿತು ಕನಾ೯ಟಕ ಚಲನಚಿತ್ರ ವಾಣಿಜ್ಯ ಮಂಡಲಿ ಪ್ರಕಟಿಸಿದ 75 ಪುಸ್ತಕಗಳಲ್ಲಿ ಡಾ.ರಾಜಕುಮಾರ್ ಮತ್ತು ಟಿ.ಎಸ್.ಕರಿಬಸಯ್ಯನವರನ್ನು ಕುರಿತ ಎರಡು ಪುಸ್ತಕಗಳನ್ನು ಅ.ನಾ.ಪ್ರಹ್ಲಾದರಾವ್ ರಚಿಸಿದ್ದಾರೆ. ಕನ್ನಡದ ಮೊದಲ ಪದಬಂಧ ಪುಸ್ತಕಗಳು ೨೦೦೮ರ ಫಬ್ರವರಿಯಲ್ಲಿ ಇವರು ವಿವಿಧ ಪತ್ರಿಕೆಗಳಿಗೆ ರಚಿಸಿದ ಪದಬಂಧಗಳನ್ನು ಆಧರಿಸಿದ ೫ ಪದಬಂಧ ಪುಸ್ತಕಗಳು ಬಿಡುಗಡೆಯಾದವು. ಕನ್ನಡ ಭಾಷೆಯಲ್ಲಿ ಪ್ರಕಟಗೊಂಡ ಮೊದಲ ಕನ್ನಡ ಪದಬಂಧ ಪುಸ್ತಕಗಳು ಇವಾಗಿವೆ. ಕನ್ನಡ ಭಾಷೆಯ ಮಟ್ಟಿಗೆ ಇದೊಂದು ದಾಖಲೆ. ೫ ಪುಸ್ತಕಗಳಲ್ಲಿ ೨ ಸಾಮಾನ್ಯ, ೧ ಕನ್ನಡ ಸಿನಿಮಾ ಹಾಗೂ ಮತ್ತೊಂದು ಮಕ್ಕಳನ್ನು ದೃಷ್ಟಿಯಲ್ಲಿರಿಸಿಕೊಂಡು ಸಿದ್ಡಪಡಿಸಿದ ಪದಬಂಧ ಪುಸ್ತಕಗಳಾಗಿವೆ. ಇಂಗ್ಲಿಷ್ ಭಾಷೆಯಲ್ಲಿ ಪದಬಂಧ ಪುಸ್ತಕ ಪ್ರಕಟಗೊಂಡ ೮೮ ವಷ೯ಗಳ ನಂತರ ಕನ್ನಡ ಭಾಷೆಯಲ್ಲಿ ಪದಬಂಧ ಪುಸ್ತಕ ಪ್ರಕಟಗೊಂಡಿರುವುದು ವಿಶೇಷವಾಗಿದೆ. ಬಂಗಾರದ ಮನುಷ್ಯ ಇಂಗ್ಲಿಷ್ ಭಾಷಾಂತರ ಇವರು ರಚಿಸಿದ ಡಾ.ರಾಜಕುಮಾರ್ ಅವರ ಆತ್ಮಚರಿತ್ರೆಯಾದ ಬಂಗಾರದ ಮನುಷ್ಯ ಪುಸ್ತಕ 'ಡಾ.ರಾಜಕುಮಾರ್: ದಿ ಇನ್ಮಿಟಬಲ್ ಆಕ್ಟರ್ ವಿಥ್ ಗೋಲ್ಡನ್ ವಾಯ್ಸ್'ಹೆಸರಿನಲ್ಲಿ ಇಂಗ್ಲಿಷ್ ಭಾಷೆಗೆ ಭಾಷಾಂತರಗೊಂದಿದೆ. ಈ ಪುಸ್ತಕ ಅಮೆರಿಕ ದೇಶದ ನ್ಯೂಜಸಿ೯ ನಗರದಲ್ಲಿ ಬಿಡುಗಡೆಗೊಂಡಿತು. ಆ ಸಂದಭ೯ದಲ್ಲಿ ಅ.ನಾ.ಪ್ರಹ್ಲಾದ ರಾವ್‌ ಅವರನ್ನು ಅಮೆರಿಕದ ನ್ಯೂಜಸಿ೯ ನಗರದ ಕನ್ನಡ ಸಂಘ ಬೃಂದಾವನ ಅಮೆರಿಕೆಗೆ ಕರೆಸಿಕೊಂಡು ಸನ್ಮಾನ ಮಾಡಿತು. ನಟರೊಬ್ಬರನ್ನು ಕುರಿತ ಮೊದಲ ಇಂಗ್ಲಿಷ್ ಪುಸ್ತಕ ಇದಾಗಿದ್ದು,ವಿದೇಶದಲ್ಲಿ ಬಿಡುಗಡಯಾದ ಡಾ.ರಾಜಕುಮಾರ್ ಕುರಿತ ಮೊದಲ ಪುಸ್ತಕವೂ ಆಗಿದೆ. ವಸಂತ ಮಲ್ಲಿಕಾ ಅ.ನಾ.ಪ್ರಹ್ಲಾದ ರಾವ್‌ ಕವಿಗಳು ಆಗಿದ್ಫ್ದು ಇವರು ಬರೆದ ೯ ಭಾವಗೀತೆಗಳ ಸಿ.ಡಿ ವಸಂತ ಮಲ್ಲಿಕಾ ೨೦೦೮ರ ಡಿಸೆಂಬರ್ ತಿಂಗಳಿನಲ್ಲಿ ಲೋಕಾಪ೯ಣೆಗೊಂಡಿತು. ಅಮೆರಿಕ ದೇಶದ ನ್ಯೂಜಸಿ೯ ನಗರದಲ್ಲಿ ನೆಲೆಸಿರುವ ಐ.ಟಿ ಎಂಜನಿಯರ್ ಶ್ರೀಮತಿ ವಸಂತ ಶಶಿ ಅವರು ಗೀತೆಗಳನ್ನು ಹಾಡಿದ್ದು, ಖ್ಯಾತ ಗಾಯಕ ಪುತ್ತೂರು ನರಸಿಂಹ ನಾಯಕ್ ಸಂಗೀತ ಸಂಯೋಜಿಸಿದ್ದಾರೆ.


External links http://www.thehindubusinessline.com/2001/05/14/stories/101444g3.htm

http://www.hindu.com/2005/07/10/stories/2005071016170100.htm Archived 2007-10-01 ವೇಬ್ಯಾಕ್ ಮೆಷಿನ್ ನಲ್ಲಿ.

http://www.hinduonnet.com/thehindu/fr/2005/12/02/bangindx.htm Archived 2009-07-30 ವೇಬ್ಯಾಕ್ ಮೆಷಿನ್ ನಲ್ಲಿ.

http://www.hinduonnet.com/thehindu/thscrip/print.pl?file=2007070650300400.htm&date=2007/07/06/&prd=fr&

http://www.hinduonnet.com/thehindu/lf/2002/09/22/stories/2002092200070200.htm Archived 2013-01-03 at Archive.is

http://www.hindu.com/2006/04/14/stories/2006041416600500.htm Archived 2006-04-15 ವೇಬ್ಯಾಕ್ ಮೆಷಿನ್ ನಲ್ಲಿ.

http://www.hindu.com/2008/02/17/stories/2008021753500400.htm Archived 2009-07-24 ವೇಬ್ಯಾಕ್ ಮೆಷಿನ್ ನಲ್ಲಿ.

http://www.hindu.com/2008/05/02/stories/2008050262220400.htm Archived 2008-05-06 ವೇಬ್ಯಾಕ್ ಮೆಷಿನ್ ನಲ್ಲಿ.

http://www.deccanherald.com/content/May12008/state2008050165714

http://www.silobreaker.com/DocumentClusterReader.aspx?Item=16_852455189

http://beta.hindustantimes.com/Redir.aspx?ID=3dab8699-c964-40f0-af59-58bdbd8ab70f