ಎಸ್ಕಿಮೋ-ಅಲ್ಯೂಟ್ ಭಾಷೆಗಳು
(ಎಸ್ಕೀಮೋ-ಅಲ್ಯೂಟ್ ಭಾಷೆಗಳು ಇಂದ ಪುನರ್ನಿರ್ದೇಶಿತ)
ಎಸ್ಕಿಮೋ-ಅಲ್ಯೂಟ್' ಗ್ರೀನ್‍ಲ್ಯಾಂಡ್, ಕೆನಡಾದ ಆರ್ಕ್ಟಿಕ್ ಪ್ರದೇಶ, ಅಲಾಸ್ಕಾ ಮತ್ತು ಸೈಬೀರಿಯಾದ ಕೆಲ ಭಾಗಗಳಲ್ಲಿ ಸ್ಥಳೀಯವಾಗಿರುವ ಭಾಷೆಗಳನ್ನು ಒಳಗೊಂಡಿರುವ ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು. ಈ ಕುಟುಂಬದೊಳಗೆ ಉತ್ತರ ಅಲಾಸ್ಕಾ, ಕೆನಡಾ ಮತ್ತು ಗ್ರೀನ್‍ಲ್ಯಾಂಡ್ ಪ್ರದೇಶಗಳಲ್ಲಿ ಉಪಯೋಗದಲ್ಲಿರುವ ಇನ್ಯುಇಟ್ ಭಾಷೆಗಳು, ಪಶ್ಚಿಮ ಅಲಾಸ್ಕಾ ಮತ್ತು ಸೈಬೀರಿಯಗಳಲ್ಲಿ ಉಪಯೋಗದಲ್ಲಿರುವ ಯುಪ್ಯಿಕ್ ಭಾಷೆಗಳು ಹಾಗು ಅಲ್ಯೂಷ್ಯನ್ ದ್ವೀಪಗಳಲ್ಲಿ ಉಪಯೋಗದಲ್ಲಿರುವ ಅಲ್ಯೂಟ್ ಭಾಷೆ ಸೇರುತ್ತವೆ.
ಎಸ್ಕಿಮೋ-ಅಲ್ಯೂಟ್ | ||
---|---|---|
ಭೌಗೋಳಿಕ ವ್ಯಾಪಕತೆ: |
ಗ್ರೀನ್‍ಲ್ಯಾಂಡ್, ಉತ್ತರ ಕೆನಡ, ಅಲಾಸ್ಕಾ ಮತ್ತು ಸೈಬೀರಿಯಾ | |
ವಂಶವೃಕ್ಷ ಸ್ಥಾನ: | ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು | |
ವಿಭಾಗಗಳು: |
| |
ವಿಂಗಡಣೆ
ಬದಲಾಯಿಸಿಎಸ್ಕಿಮೋ-ಅಲ್ಯೂಟ್
- ಅಲ್ಯೂಟ್ ಭಾಷೆ
- ಎಸ್ಕಿಮೋ (ಯುಪ್ಯಿಕ್, ಯುಇಟ್ ಮತ್ತು ಇನ್ಯುಇಟ್)
- ಮಧ್ಯ ಅಲಾಸ್ಕಾದ ಯುಪ್ಯಿಕ್ ಭಾಷೆ (10,000 ಜನ)
- ಅಲುಟೀಇಕ್ ಭಾಷೆ (400 ಜನ)
- ಸೈಬೀರಿಯದ ಯುಪ್ಯಿಕ್ ಭಾಷೆ ಅಥವಾ ಯುಇಟ್ (1400 ಜನ)
- ನೌಕನ್ (70 ಜನ)
- ಇನ್ಯುಇಟ್ ಭಾಷೆಗಳು ಅಥವಾ ಇನುಪಿಕ್ (75,000 ಜನ)
- ಸಿರೆನಿಕ್ (ಅಳಿದುಹೋಗಿರುವ ಭಾಷೆ)