ಎರಡು ರೇಖೆಗಳು
ಕನ್ನಡ ಚಲನಚಿತ್ರ
ಟೆಂಪ್ಲೇಟು:Infobox film/short description
ಎರಡು ರೇಖೆಗಳು |
---|
ಎರಡು ರೇಖೆಗಳು - ೧೯೮೪ ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ವಾಗಿದ್ದು ಇದನ್ನು ಕೆ. ಬಾಲಚಂದರ್ ನಿರ್ದೇಶಿಸಿದ್ದರು. ಚಂದೂಲಾಲ್ ಜೈನ್ ಇದರ ನಿರ್ಮಾಪಕರು. ಎಂ. ಎಸ್. ವಿಶ್ವನಾಥನ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಚಲನಚಿತ್ರದ ತಾರಾಗಣದಲ್ಲಿ ಸರಿತಾ, ಶ್ರೀನಾಥ್ ಮತ್ತು ಗೀತಾ ಪ್ರಮುಖರು.ಇದು ೧೯೬೯ ರ ತಮಿಳು ಚಿತ್ರವಾದ "ಇರು ಕೋಡುಗಳ್" ದ ರಿಮೇಕ್ ಆಗಿದೆ. ಇದರ ಕಥೆಯು ಪರಿಸ್ಥಿತಿಗಳಿಂದಾಗಿ ಇಬ್ಬರನ್ನು ಮದುವೆಯಾಗಬೇಕಾಗಿ ಬಂದ ನಾಯಕನ ಭಾವನಾತ್ಮಕ ಏಳು-ಬೀಳುಗಳ ಕುರಿತಾಗಿದೆ. ಈ ಚಿತ್ರವನ್ನು ನಂತರ ತೆಲುಗಿನಲ್ಲಿ "ಕಲೆಕ್ಟರ್ ಜಾನಕಿ " ಹೆಸರಿನಲ್ಲಿಯೂ ಹಿಂದಿಯಲ್ಲಿ "ಸಂಜೋಗ್ " ಹೆಸರಿನಲ್ಲಿಯೂ ಮರುನಿರ್ಮಾಣ ಮಾಡಲಾಯಿತು.
ಪಾತ್ರವರ್ಗ
ಬದಲಾಯಿಸಿ- ಸರಿತಾ
- ಶ್ರೀನಾಥ್
- ಗೀತಾ
- ಕೆ.ಎಸ್. ಅಶ್ವಥ್
- ಲೋಕನಾಥ್
- ಉಮಾ ಶಿವಕುಮಾರ್
- ಎನ್. ಎಸ್. ರಾವ್
- ಶಿವರಾಂ
- ಸದಾಶಿವ ಬ್ರಹ್ಮಾವರ್
ಹಿನ್ನೆಲೆ ಸಂಗೀತ
ಬದಲಾಯಿಸಿಕ್ರಮ ಸಂಖ್ಯೆ # | ಹಾಡು | ಗಾಯಕರು | ರಚನೆಕಾರರು |
---|---|---|---|
೧ | " ನೀಲ ಮೇಘ ಶಾಮ" | ವಾಣಿ ಜಯರಾಂ, ಪಿ. ಸುಶೀಲ | ಆರ್.ಎನ್.ಜಯಗೋಪಾಲ್ |
೨ | "ಗಂಗೆಯ ಕರೆಯಲಿ" | ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ | ಆರ್.ಎನ್.ಜಯಗೋಪಾಲ್ |