ಎಥಿಲೀನ್ ಡೈಕ್ಲೋರೈಡ್

ಎಥಿಲೀನ್ ಡೈಕ್ಲೋರೈಡ್ ಒಂದು ಸಾವಯವ ಸಂಯುಕ್ತ. ಇದರ ರಚನಾ ಸೂತ್ರ CICH2-CH2CI. ಇದಕ್ಕೆ ಎಥಿಲೀನ್ ಕ್ಲೋರೈಡ್ ಎಂಬ ಹೆಸರೂ ಇದೆ.

ಎಥಿಲೀನ್ ಡೈಕ್ಲೋರೈಡ್‍ನ ರಚನೆ

ತಯಾರಿಕೆ ಬದಲಾಯಿಸಿ

ಎಥಿಲೀನ್ ಮತ್ತು ಕ್ಲೋರಿನುಗಳ ನೇರ ಸಂಯೋಗದಿಂದ ಇದನ್ನು ತಯಾರಿಸುತ್ತಾರೆ. ಎರಡು ಅನಿಲಗಳನ್ನೂ ಸರಿಯಾದ ಪ್ರಮಾಣದಲ್ಲಿ ಬೆರೆಸಿ, ಮಿಶ್ರಣವನ್ನು ೮೦-೧೦೦ ಸೆಂ. ಗ್ರೇ. ಉಷ್ಣತೆಗೆ ಕಾಯಿಸಿದ ತಾಮ್ರಕಬ್ಬಿಣ ಅಥವಾ ಜಲರಹಿತ ಕ್ಯಾಲ್ಸಿಯಂ ಕ್ಲೋರೈಡಿನ ಮೇಲೆ ಹಾಯಿಸಿದರೆ ಎಥಿಲೀನ್ ಡೈಕ್ಲೋರೈಡ್ ಉತ್ಪತ್ತಿಯಾಗುತ್ತದೆ.

C2H4 + CI2 → C2H4CI2

ಸೂಕ್ತವಾದ ಕ್ಲೋರಿನೀಕರಿಸಿದ ಒಂದು ಹೈಡ್ರೊಕಾರ್ಬನ್ನನ್ನು ದ್ರಾವಕವಾಗಿ ಉಪಯೋಗಿಸುವುದಾದರೆ ದ್ರಾವಣದಲ್ಲಿ ೪೦ ಸೆಂ. ಗ್ರೇ. ಉಷ್ಣತೆಯಲ್ಲಿಯೇ ಈ ಕ್ರಿಯೆಯನ್ನು ಆಗಮಾಡಬಹುದು.

ಗುಣಗಳು ಬದಲಾಯಿಸಿ

ಎಥಿಲೀನ್ ಡೈಕ್ಲೋರೈಡ್ ಬಣ್ಣವಿಲ್ಲದ ದ್ರವಪದಾರ್ಥ. ಇದರ ಕುದಿಬಿಂದು ೮೪ ಸೆಂ. ಗ್ರೇ. ಇದು ಒಳ್ಳೆಯ ದ್ರಾವಕ (ಸಾಲ್ವೆಂಟ್).

ಉಪಯೋಗಗಳು ಬದಲಾಯಿಸಿ

ಒಣ ಒಗೆತಕ್ಕೆ ಅಂದರೆ ಜಲರಹಿತಮಾರ್ಜನಕ್ಕೆ (ಡ್ರೈಕ್ಲೀನಿಂಗ್) ಇದನ್ನು ಬಳಸುತ್ತಾರೆ. ಮೋಟಾರು ವಾಹನಗಳ ಎಂಜಿನ್ನುಗಳಲ್ಲಿ ಆಗುವ ಕುಕ್ಕಾಟವನ್ನು (ನಾಕಿಂಗ್) ತಪ್ಪಿಸುವುದಕ್ಕಾಗಿ ಪೆಟ್ರೋಲಿಗೆ ಬೆರೆಸುವ ಈಥೈಲ್ ಫ್ಲೂಯ್ಡಿನಲ್ಲಿ ಸಾಮಾನ್ಯವಾಗಿ ೧೦% ಎಥಿಲೀನ್ ಡೈಕ್ಲೋರೈಡ್ ಇರುತ್ತದೆ.[೧] ಅಲ್ಲದೆ ಪ್ಲಾಸ್ಟಿಕ್ಕುಗಳ ತಯಾರಿಕೆಯಲ್ಲಿ ಬಳಸುವ ವೀನೈಲ್ ಕ್ಲೋರೈಡ್ (CH2-CHCI),[೨] ಥಯೊಕಾಲ್-ಎ ಎಂಬ ಕೃತಕ ರಬ್ಬರ್, ಎಥಿಲೀನ್ ಡಯಮೀನ್ (H2N.CH2-CH2.NH2) ಇವನ್ನು ಎಥಿಲೀನ್ ಡೈಕ್ಲೋರೈಡಿನಿಂದ ತಯಾರಿಸುತ್ತಾರೆ.

ಉಲ್ಲೇಖಗಳು ಬದಲಾಯಿಸಿ

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. Seyferth, D. (2003). "The Rise and Fall of Tetraethyllead. 2". Organometallics. 22 (25): 5154–5178. doi:10.1021/om030621b.
  2. "Toxic Substances – 1,2-Dichloroethane". ATSDR. Retrieved 2015-09-23.

ಹೊರಗಿನ ಕೊಂಡಿಗಳು ಬದಲಾಯಿಸಿ