ಎಂ. ಎಸ್. ಸತ್ಯು
ಎಂ. ಎಸ್. ಸತ್ಯು ಅಥವಾ ಮೈಸೂರು ಶ್ರೀನಿವಾಸ ಸತ್ಯು ಜುಲೈ ೬, ೧೯೩೦ ರಂದು ಮೈಸೂರಿನಲ್ಲಿ ಜನಿಸಿದರು. ಇವರು ಪ್ರಸಿದ್ಧ ರಂಗನಿದೇ೯ಶಕರು, ಕಲಾನಿರ್ದೇಶಕರು ಮತ್ತು ಚಲನಚಿತ್ರ ನಿರ್ದೇಶಕರು. ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಮೈಸೂರು ಶ್ರೀನಿವಾಸ ಸತ್ಯು | |
---|---|
ಜನನ | ೧೯೩೦ ಜುಲೈ ೬ ಮೈಸೂರು |
ವೃತ್ತಿ | ನಿದೇ೯ಶಕರು |
ರಾಷ್ಟ್ರೀಯತೆ | ಭಾರತೀಯರು |
ವಿಷಯ | ನಿದೇ೯ಶಕರು,ನಾಟಕಗಳು, ಚಲನಚಿತ್ರ ಮತ್ತು ದೂರದಶ೯ನದ ಕಾಯ೯ಕ್ರಮಗಳಲ್ಲಿ ಭಾಗವಹಿಸಿದ್ದರು. |
ಪ್ರಭಾವಿತರು
|
ಜೀವನ
ಬದಲಾಯಿಸಿಸತ್ಯು ತಮ್ಮ ಶಾಲಾಶಿಕ್ಷಣವನ್ನು ಮೈಸೂರಿನಲ್ಲಿ ಮುಗಿಸಿದರು. ಮುಂದೆ ಪ್ರಸಿದ್ಧ ಛಾಯಾಚಿತ್ರಕಾರರಾದ ಟಿ.ಎಸ್. ಸತ್ಯನ್ ಅವರು ಸತ್ಯು ಅವರ ಸ್ನೇಹಿತ. ಇವರು ಒಂದು ಘಟನೆಯನ್ನು ನೆನೆಸುತ್ತಾರೆ. ಒಮ್ಮೆ ಇಬ್ಬರೂ ಮಿತ್ರರು ಸರ್ ಸಿ.ವಿ. ರಾಮನ್ ಅವರ ಮನೆಗೆ ಹೋದರಂತೆ. ಅಲ್ಲಿ ಸಿ.ವಿ. ರಾಮನ್ ಅವರ ಚಿತ್ರ ತೆಗೆಯುವುದು ಅವರ ಗುರಿ. ದುರದೃಷ್ಟವಶಾತ್ ಸತ್ಯು ಕೈಯಲ್ಲಿದ್ದ ಕ್ಯಾಮೆರಾ ಜಾರಿ ಕೆಳಗೆ ಬಿದ್ದು ಲೆನ್ಸ್ ಒಡೆಯಿತು. ಇಬ್ಬರೂ ಮಿತ್ರರು ಸಿ.ವಿ. ರಾಮನ್ ಅವರ ಕೈಯಲ್ಲಿ ಬೈಸಿಕೊಂಡರು. ಸ್ವತಃ ಮಸೂರಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದ ರಾಮನ್ ಇವರ ಕ್ಯಾಮೆರಾದ ಲೆನ್ಸ್ ರಿಪೇರಿ ಮಾಡಿಕೊಟ್ಟರು.
ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಮುಗಿಸುವಷ್ಟರಲ್ಲಿ ರಂಗಚಟುವಟಿಕೆಗಳು ಮತ್ತು ಸಿನಿಮಾ ಅವರ ಮನಸ್ಸನ್ನು ಸೆಳೆದವು. ೧೯೫೨ರಲ್ಲಿ ಶಿಕ್ಷಣವನ್ನು ಅರ್ಧದಲ್ಲೇ ಬಿಟ್ಟು ಮುಂಬೈಗೆ ತೆರಳಿದರು. ಪ್ರಾರಂಭದಲ್ಲಿ ಉಜ್ಜೀವನ ಕ್ಷೇತ್ರದಲ್ಲಿ ಕಾಯ೯ನಿವ೯ಹಿಸುತ್ತಿದ್ದರು. ನಾಲ್ಕು ವಷ೯ ಹೋರಾಟದ ನಂತರ, ಸಹಾಯಕ ನಿದೇ೯ಶಕನಾಗಿ ಚೇತನ್ ಆನ೦ದ್ ರವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಇದು ಅವರ ಜೀವನದಲ್ಲಿ ಒಂದು ದೊಡ್ಡ ತಿರುವಾಗಿತು. ಚೇತನ್ ಆನ೦ದ್ ರವರ ಹಕೀಕತ್ ಎಂಬ ಚಲನಚಿತ್ರದಲ್ಲಿ ಕಲಾನಿದೇ೯ಶಕರಾಗಿ ಕೆಲಸ ಮಾಡಿ ಫಿಲ್ಮ್ ಫೇರ್ ಪ್ರಶಸ್ತಿಗೆದ್ದರು.
ರಂಗಕರ್ಮಿ ಮತ್ತು ಸಿನಿಮಾ ಲೇಖಕಿ/ನಿರ್ದೇಶಕಿ ಶಮಾ ಜೈದಿ ಅವರನ್ನು ಸತ್ಯು ವಿವಾಹವಾದರು.
ಜೀವನ ವೃತ್ತಿ
ಬದಲಾಯಿಸಿಸ್ವಾವಲ೦ಬಿಯಾಗಿ ಅವರು ಕಲಾನಿದೇ೯ಶಕನಾಗಿ ನಿದೇ೯ಶಿಸಿದ ಮೊದಲ ಚಲನಚಿತ್ರ ಹಕೀಕತ್. ಈ ಚಿತ್ರ ಇವರಿಗೆ ಫಿಲ್ಮ್ ಫೇರ್ ಪ್ರಶಸ್ತಿಯನ್ನು ತಂದುಕೊಟ್ಟಿತು. ನಂತರ ಇವರು ವಿನ್ಯಾಸಕರಾಗಿ ಸೇವೆ ಸಲ್ಲಿಸಿದರು. ಇವರು ವಿನ್ಯಾಸಕರಾಗಿ ಹಿಂದುಸ್ತಾನಿ ರಂಗಮ೦ಟಪದಲ್ಲಿ ಹಬೀಬ್ ತನ್ವೀರ್‌ನಲ್ಲಿರುವ ಓಕಿಯಾ ರಂಗಮ೦ಟಪದಲ್ಲಿ, ಕನ್ನಡ ಭಾರತಿ ರಂಗಮ೦ಟಪದಲ್ಲಿ ಸೇವೆಸಲ್ಲಿಸಿದ್ದಾರೆ. ಇವರು ಕಲಾನಿರ್ದೇಶಕರಾಗಿ, ನಿರ್ಮಾಪಕರಾಗಿ, ನೀರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ. ಇವರ ನಿರ್ದೇಶನದ ಮೊದಲ ಚಲನಚಿತ್ರ 'ಗರ೦ ಹವಾ' ೧೯೫೦ರ ಮಾರ್ಕ್ಸಿಸ್ಟ್ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಧರಿಸಿದ್ದಾದ್ದಾಗಿತ್ತು. ಈ ಸಿನಿಮಾದಲ್ಲಿ ಬಲರಾಜ್ ಸಾಹ್ನಿ ಮತ್ತು ಕೈಫಿ ಅಜ್ಮಿ ನಟಿಸಿದ್ದಾರೆ. ಗರ೦ ಹವಾ ಚಿತ್ರ ಹಲವಾರು ಇಂಡಿಯನ್ ನ್ಯಾಷನಲ್ ಪ್ರಶಸ್ತಿಗಳನ್ನು ೧೯೭೪ರಲ್ಲಿ ಗೆದ್ದಿದೆ. ಭಾರತೀಯ ಸಿನಿಮಾರಂಗವನ್ನು ಆಸ್ಕರ್ ಎತ್ತರಕ್ಕೆ ಕೊಂಡೊಯದನ್ನು ಸೂಚಿಸುವಂತೆ ನ್ಯಾಷನಲ್ ಇಂಟೆಗ್ರೇಷನ್ ಪ್ರಶಸ್ತಿ ಲಭಿಸಿತು. 'ಗರ೦ ಹವಾ' ಉತ್ತಮ ಚಿತ್ರಕಥೆಗಾಗಿ ಫಿಲ್ಮ್ ಫೇರ್ ಪ್ರಶಸ್ತಿ ಗೆದ್ದಿತು.
ಎಂ.ಎಸ್. ಸತ್ಯು (ಐಪಿಟಿಎ) ಇಂಡಿಯನ್ ಪೀಪಲ್'ಸ್ ಥಿಯೇಟರ್ ಅಸೋಸಿಯೇಷನ್‌ನಲ್ಲಿ ಒಬ್ಬ ಸದಸ್ಯರಾಗಿದ್ದರು. ಇವರ 'ದಾರಾ ಶಿಕೋ' ಆಧುನಿಕ ಉತ್ಕೃಷ್ಟ ನಾಟಕವನ್ನಾಗಿ ಪರಿಗಣಿಸಲಾಗಿತ್ತು. ಇದು ಇಂಪ್ರಿಸಾರಿಯೋ ಏಷ್ಯಾ ರಿಂದ ದೆಹಲಿಯ ತನಕ ಪ್ರದರ್ಶನವನ್ನು ಕಂಡಿತು. ದಾರಾ ಶಿಕೋ ಎಂಬ ನಾಟಕದಲ್ಲಿ ರಮೇಶ್ ಚಂದ್ ಚಾಲಿ೯ ರವರ ಮಾತುಗಳು ಐತಿಹಾಸಿಕ ರಂಗಮ೦ಟಪ ಸೂಕ್ಷ್ಮತೆ ರೂಪಕ್ಕೆ ತಿರುವಾಗಿತ್ತು. ಈ ನಾಟಕ ವಾಲಿ ಡೆಕಾನಿಸ್ ಕಾಲದ ಕವನಗಳ ಕೌಶಲ್ಯ ಮತ್ತು ಐತಿಹಾಸಿಕ ವಿಷಯಗಳ ಮೇಲೆ ಆಧರಿಸಿದ್ದಾಗಿತ್ತು. ಸೂಫಿ ಸಂಗಿತ, ವಿಷಯಗಳ ಅನುಕರಣೀಯ ಉಪಯೋಗ ಆಕಷ೯ಣೆಯಾಗಿ ಮತ್ತು ವಶೀಕರಣವಾಗಿತ್ತು. ಈ ನಾಟಕ ಡೆಲ್ಲಿ, ಗುರಗಾಂವ್ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಚೆನ್ನಾಗಿ ನಡೆಯಿತು. ಸತ್ಯು ಅವರ ನಿದೇ೯ಶನದಲ್ಲಿ ಈ ನಾಟಕವನ್ನು ಚಲನಚಿತ್ರವಾಗಿ ಮಾಪ೯ಡಿಸಲಾಗಿತ್ತು.-
ಹಿಂದಿ ನಾಟಕಕಾರ-ಕವಿ ಸರ್ವೇಶ್ವರ ದಯಾಲ್ ಸಕೇನಾ ಅವರ "ಬಕರಿ" ಎಂಬ ನಾಟಕವನ್ನು ಕನ್ನಡದಲ್ಲಿ "ಕುರಿ" ಎಂಬ ಹೆಸರಿನಿಂದ ಸತ್ಯು ತಂದರು. ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದವರು ಡಾ. ಸಿ.ಪಿ. ರವಿಕುಮಾರ್. ನಾಟಕಕ್ಕೆ ಸಂಗೀತ ನೀಡಿದವರು ರಾಜೀವ ತಾರಾನಾಥ್. "ಸಮುದಾಯ" ನಾಟಕತಂಡದವರು ಈ ನಾಟಕವನ್ನು ರಂಗಕ್ಕೆ ತಂದರು. ಭಾರತದ ರಾಜಕೀಯದ ವಿಡಂಬನೆ ಮಾಡುವ ಈ ನಾಟಕ ಅತ್ಯಂತ ಜನಪ್ರಿಯವಾಯಿತು. ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿತು. ದೆಹಲಿಯಲ್ಲಿ ಈ ನಾಟಕವನ್ನು ಪ್ರದರ್ಶಿಸಿದಾಗ ಬಿ.ವಿ. ಕಾರಂತ್ ಅವರು ಸಂಗೀತ ನಿರ್ದೇಶನ ಮಾಡಿದರು.
ತುಮ್ಹಾರೀ ಅಮೃತಾ ಸತ್ಯುರವರ ಇನ್ನೊಂದು ನವೀನ ಶ್ರೇಷ್ಠ ಪ್ರೇಮಕಥೆ. ಈ ನಾಟಕ ಪಂಜಾಬಿ ಕವಯಿತ್ರಿ ಅಮ್ರಿತ ಪ್ರೀತಂರವರ ಜೀವನವನ್ನು ಆಧರಿಸಿತ್ತು. ಕವಾಯಿತ್ರಿ ಅಮೃತಾ ಮತ್ತು ಕವಿ ಸಾಹಿರ್ ಲುಧಿಯಾನ್ವಿ ಅವರ ವಿಫಲ ಪ್ರೇಮವನ್ನು ಕುರಿತ ನಾಟಕ. ೨೦೧೪ರಲ್ಲಿ ಇವರ ಮೊದಲ ಚಿತ್ರವಾದ ಗರ೦ ಹವಾ ಪುನ: ಬಿಡುಗಡೆ ಮಾಡಲಾಯಿತು. ೨೦೧೩ರಲ್ಲಿ ದೂರದಶ೯ನ ಒಗ್ಗೂಡಣೆಯಲ್ಲಿ ಎಂ.ಎಸ್. ಸತ್ಯು ಭಾಗವಹಿಸಿದ್ದರು.
ಪ್ರಶಸ್ತಿಗಳು
ಬದಲಾಯಿಸಿ- ಫೀಲ್ಮ್ ಫೇರ್ ಬೆಸ್ಟ್ ಆರ್ಟ್ ಡೈರೆಕ್ಷನ್ ಅವಾಡ್೯ - ಹಕೀಕತ್ - ೧೯೬೬
- ಕ್ಯಾನಿಸ್ ಫಿಲ್ಮ್ ಫೆಸ್ಟಿವಲ್ - ಗೋಲ್ಡನ್ ಪಾಮ್ - ಗರ೦ ಹವಾ - ೧೯೭೪
- ನ್ಯಾಷ್ ನಲ್ ಫಿಲ್ಮ್ ಅವಾರ್ಡ್ - ನರ್ಗಿಸ್ ದತ್ತ್ ಅವಾರ್ಡ್ - ಗರ೦ ಹವಾ - ೧೯೭೪ [೧]
- ಪದ್ಮಶ್ರೀ ಅವಾರ್ಡ್ - ೧೯೭೫ [೨]
- ನ್ಯಾಷನಲ್ ಫಿಲ್ಮ್ ಅವಾರ್ಡ್ - ನಾರ್ಗಿಸ್ ದತ್ತ್ ಅವಾರ್ಡ್ - ಸೂಖಾ - ೧೯೮೪ [೩]
- ಫಿಲ್ಮ್ ಫೇರ್ - ಕ್ರಿಟಿಕ್ಸ್ ಅವಾರ್ಡ್ - ಸೂಖಾ - ೧೯೮೪
- ಸಂಗೀತ್ ನಾಟಕ್ ಅಕಾಡೆಮಿ ಅವಾರ್ಡ್ - ಸ್ಟೇಜ್ ಕ್ರಾಫ್ಟ್ - ೧೯೯೪[೪]
- ಸಂಗೀತ್ ನಾಟಕ್ ಅಕಾಡೆಮಿ ಫೆಲೊ - ಸ್ಟೇಜ್ ಕ್ರಾಫ್ಟ್ - ೨೦೧೫
ರಂಗಮಂಟಪ ನಾಟಕಗಳು
ಬದಲಾಯಿಸಿ- ದಾರಾ ಶಿಕೋ
- ಮುದ್ರಾರಾಕ್ಷಸ
- ಆಖ್ರಿ ಶಮಾ
- ರಾಶೋಮಾನ್
- ಬಕ್ರೀ (ಕನ್ನಡದಲ್ಲಿ "ಕುರಿ")
- ಗಿರಿಜಾ ಕೆ ಸಪ್ನೆ
- ಮೋಟೆ ರಾಮ್ ಕಾ ಸತ್ಯಾಗ್ರಹ
- ಅಮೃತಾ: ಎ ಸಬ್ಲೈಮ್ ಲವ್ ಸ್ಟೋರಿ
- ಗುಲೇಬಕಾವಲಿ(ಗುಲ್- ಎ- ಬಕಾವಲಿ)
ಚಲನಚಿತ್ರ
ಬದಲಾಯಿಸಿ- ಏಕ್ ಥಾ ಚೋಟು ಏಕ್ ಥಾ ಮೋಟು
- ಗರ೦ ಹವಾ ೧೯೭೩[೫]
- ಚಿತೆಗೂ ಚಿಂತೆ ೧೯೭೮
- ಕನ್ನೇಶ್ವರರಾಮ
- ಬರ (೧೯೮೦)
- ಸೂಖಾ (೧೯೮೩)
- ಘಳಿಗೆ
- ಕೊಟ್ಟ (೧೯೯೯)
ಧಾರಾವಾಹಿಗಳು
ಬದಲಾಯಿಸಿ- ಪ್ರತಿಧ್ವನಿ
- ಚೋಲಿ ದಾಮನ್ (೧೯೮೭-೧೯೮೮)
- ಕಾಯರ್ (೧೯೯೨)
- ಅಂತಿಮ್ ರಾಜಾ (೧೯೮೬)
ಸಣ್ಣ ಚಿತ್ರಗಳು ಮತ್ತು ಡಾಕ್ಯುಮೆಂಟರಿಗಳು
ಬದಲಾಯಿಸಿ- ಇರ್ಶಾದ್
- ಬ್ಲಾಕ್ ಮೌಂಟೆನ್
- ಘಾಲಿಬ್
- ಇಸ್ಲಾಂ ಇನ್ ಇಂಡಿಯಾ
ಹೊರಗಿನ ಕೊಂಡಿಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು" (PDF). Archived from the original (PDF) on 2012-04-04. Retrieved 2015-11-06.
- ↑ "ಆರ್ಕೈವ್ ನಕಲು" (PDF). Archived from the original (PDF) on 2015-10-15. Retrieved 2015-11-06.
- ↑ ೩೧ನೆ ಸಂಗೀತ ನಾಟಕ ಪ್ರಶಸ್ತಿ http://iffi.nic.in/Dff2011/Frm31stNFAAward.aspx Archived 2013-11-12 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "ಆರ್ಕೈವ್ ನಕಲು" (PDF). Archived from the original (PDF) on 2015-06-14. Retrieved 2015-11-06.
- ↑ ಈ ಚಿತ್ರದ ಹಿಂದಿನ ಕಥೆ http://www.livemint.com/Leisure/xh9EvT8R5nSO58eu3RJgRL/Film--Back-story.html