ಊರ್ಮಿಳಾ ಮಾತೋಂಡ್ಕರ್
ಊರ್ಮಿಳಾ ಮಾತೋಂಡ್ಕರ್ (ಮರಾಠಿ:उर्मिला मातोंडकर) (ಜನಸಿದ್ದು 1974ರ ಫೆಬ್ರವರಿ 4ರಂದು, ಇಂಡಿಯಾದ ಮಹಾರಾಷ್ಟ್ರದ ಮುಂಬಯಿನಲ್ಲಿ )ಅವರು ಬಾಲಿವುಡ್‌ನ ಹೆಸಾರಾಂತ ನಟಿ. ಮಾತೋಂಡ್ಕರ್, 1980ರಲ್ಲಿ ಕಲಿಯುಗ್ ಚಿತ್ರದ ಮೂಲಕ ಬಾಲನಟಿಯಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು, ನರಸಿಂಹ {1991} ಚಿತ್ರದಲ್ಲಿ ನಾಯಕಿ ನಟಿಯಾದರು. ರಂಗೀಲಾ , ಜುದಾಯಿ ಮತ್ತು ಸತ್ಯ ಚಿತ್ರಗಳ ತಮ್ಮ ಪಾತ್ರಗಳ ಜನಪ್ರಿಯತೆಯಿಂದ ಹಿಂದಿ ಚಲನಚಿತ್ರರಂಗದ ಮುಖ್ಯಧಾರೆಯಲ್ಲಿ ಸ್ಥಾನ ಪಡೆದರು. ಈ ಚಿತ್ರಗಳೆಲ್ಲವೂ ಆಕೆಯನ್ನು ಫಿಲಂಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಳ್ಳುವಂತೆ ಮಾಡಿದವು. ಮಾದ್ಯಮಗಳಲ್ಲಿ ಊರ್ಮಿಳಾ ಭಾರತದ ಸೆಕ್ಸ್ ಸಿಂಬಲ್ ಎಂದೇ ಬಿಂಬಿತವಾಗಿದ್ದಳು. ಆದರೆ, ಈ ಚಿತ್ರಗಳಲ್ಲಿ ತನ್ನದೇ ಆದ ವಿಶಿಷ್ಠ ನಟನೆ,ನೃತ್ಯ ನೈಪುಣ್ಯತೆಯಿಂದ ಜನಮನದಲ್ಲಿ ಮೂಡಿದ್ದ ಅಭಿಪ್ರಾಯ ಬದಲು ಮಾಡಲು ಸಫಲಳಾದಳು.[೧][೨][೩][೪] ಮನೋವಿಜ್ಞಾನ ಕುರಿತ ಸಿನಿಮಾಗಳಲ್ಲೂ ಪ್ರಬುದ್ಧ ನಟನೆ ಮಾಡಿ ಸೈ ಎನಿಸಿಕೊಂಡರು. ಅದರಲ್ಲಿ ಮುಖ್ಯವಾದವು ಮನೋರೋಗಿ ಪಾತ್ರದ ಚಿತ್ರ ಕೌನ್ (1999), ಎಡಬಿಡದೆ ಕಾಡುವ ಪ್ರೇಮಿಯಾಗಿ ಪ್ಯಾರ್ ತೂನೆ ಕ್ಯಾ ಕಿಯಾ (2001), ದೆವ್ವ ಹಿಡಿದ ಹೆಂಗಸಾಗಿ ನಟಿಸಿದ ಭೂತ್ (2003), ದಯಾರಹಿತ ಸೇಡು ತೀರಿಸಿಕೊಳ್ಳುವ ಎಕ್ ಹಸೀನಾ ತಿ (2004) . ಭೂತ್ ಚಿತ್ರದ ಅತ್ಯುತ್ತಮ ನಟನೆಗಾಗಿ ಮೂದಲ ಬಾರಿಗೆ ಫಿಲಂಫೇರ್ ಪ್ರಶಸ್ತಿ ಪಡೆದಳು. ಹಾಗೆಯೇ ಬಹಳಷ್ಟು ಅವಾರ್ಡ್ ಸಮಾರಂಭಗಳಲ್ಲಿ ಹಲವಾರು ಚಿತ್ರಗಳಿಗೆ ಉತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ತೆಹಝಿಬ್ (2003), ಪಿಂಜಾರ್ (2003), ಮೈನೆ ಗಾಂಧಿ ಕೊ ನಹಿ ಮಾರ (2005), ಬಸ್ ಏಕ್ ಪಲ್ (2006)ನಂತಹ ಕಲಾ ಮತ್ತು ಸ್ವತಂತ್ರ ಸಿನಿಮಾಗಳಲ್ಲಿನ ಮುಖ್ಯಪಾತ್ರಗಳು ಈಕೆಯನ್ನು ಹುಡುಕಿಕೊಂಡು ಬಂದವು.
ಊರ್ಮಿಳಾ ಮಾತೋಂಡ್ಕರ್ | |
---|---|
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
ಮುಂಬಯಿ, ಮಹಾರಾಷ್ಟ್ರ, ಭಾರತ | ಫೆಬ್ರವರಿ ೪, ೧೯೭೪
ವೃತ್ತಿ | ನಟಿ, ಕಿರುತೆರೆ ನಿರೂಪಕಿ |
ವರ್ಷಗಳು ಸಕ್ರಿಯ | 1980 - 1991 - ಪ್ರಸ್ತುತ |
ವೃತ್ತಿಜೀವನ
ಬದಲಾಯಿಸಿಊರ್ಮಿಳಾ ವೃತ್ತಿ ಜೀವನ ಆರಂಭಿಸಿದ್ದು ಬಾಲನಟಿಯಾಗಿ, ಶೇಖರ್ ಕಪೂರ್ ನ ‘ಮಾಸೂಮ್ ’ (1983)ಚಿತ್ರದಲ್ಲಿ. ‘ಬಡೇ ಘರ್ ಕಿ ಬೇಟಿ’ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಟಿಯಾಗಿ ಸಿನಿಮಾ ಪ್ರಪಂಚಕ್ಕೆ ಪರಿಚಿತರಾದರು. ನಂತರ ಈಕೆ ನಾಯಕಿಯಾಗಿ ನಟಿಸಿದ್ದು ಫ್ಯಾಂಟಸಿ ಸಿನೆಮಾ ಚಮತ್ಕಾರ್ ಚಿತ್ರದಲ್ಲಿ, ಶಾರೂಖ್ ಖಾನ್ ಜೊತೆ. ರೋಮಾಂಚನಕಾರಿ ಸಿನೆಮಾಗಳ ಮೂಲಕವೇ ಪರಿಚಿತರಾಗಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮನ ಹಲವಾರು ಸಿನೆಮಾಗಳಲ್ಲಿ ನಟಿಸಿದಳು. ರಾಮ್ ಗೋಪಾಲ್‌ವರ್ಮ ನಿರ್ದೇಶನದಲ್ಲಿ ಊರ್ಮಿಳಾ ನಟಿಸಿದ ಮೊದಲ ಸಿನೆಮಾ ತೆಲುಗಿನ ಅಂತಂ ಇದೇ ಸಿನೆಮಾ 1992ರಲ್ಲಿ ದ್ರೋಹಿ (ಹಿಂದಿ) ಎಂಬ ಹೆಸರಿನಲ್ಲಿ ಡಬ್ ಆಯಿತು. ಅಂದಿನಿಂದ ಊರ್ಮಿಳಾ ರಾಮ್ ಗೋಪಾಲ್ ವರ್ಮನ RGV ಪಿಕ್ಚರ್ಸ್‌ನ ಆನೇಕ ಸಿನೆಮಾಗಳಲ್ಲಿ ನಟಿಸಿದಳು. ಪ್ರಮುಖವಾಗಿ ತೆಲುಗಿನ ಗಾಯಂ ಹಾಗೂ ಈಕೆಗೆ ಅತೀ ಹೆಚ್ಚು ಖ್ಯಾತಿ ತಂದುಕೊಟ್ಟದ್ದು 1995 ರಲ್ಲಿ ತೆರೆ ಕಂಡ ಸಂಗೀತ ಪ್ರಧಾನ ಸಿನೆಮಾ ರಂಗೀಲಾ . ಊರ್ಮಿಳಾಳ ಚಿತ್ತಾಕರ್ಷಕ ನೃತ್ಯದಿಂದ ಕೂಡಿದ್ದ ಈ ಸಿನೆಮಾ ಆಕೆಗೆ ಮೊದಲ ಬಾರಿಗೆ ಫಿಲಂಫೇರ್ ಅತ್ಯುತ್ತಮ ನಟಿ ವಿಭಾಗದ ಪ್ರಶಸ್ತಿಗೆ ನಾಮನಿರ್ದೇಶನಗೊಳ್ಳುವಂತೆ ಮಾಡಿತು. RGV ಕಲ್ಪನೆಯ ಪ್ರಮುಖ ಚಿತ್ರಗಳೆಂದರೆ ದೌಡ್ (1997), ಸತ್ಯ (1999), ಕೌನ್ (1999), ಮಸ್ತ್ (2000), ಜಂಗಲ್ (2000), ಪ್ಯಾರ್ ತೂನೆ ಕ್ಯಾ ಕಿಯಾ (2001), ಭೂತ್ (2003), ಮತ್ತು ಏಕ್ ಹಸೀನಾ ತಿ (2004). 1997ರ ಆಕೆಯ ಚಿತ್ರ ಜುದಾಯಿ ಯು ಹಿಟ್ ಆಯಿತು ಆದರೆ ಬಿಡುಗಡೆಯಾದ ಆಕೆಯ ಉಳಿದ ಚಿತ್ರಗಳಾದ ದೌಡ್ ಮತ್ತು ಆಫ್ಲಟೂನ್ ಯಶಸ್ಸು ಕಾಣಲಿಲ್ಲ.[೫] ಆಕೆಯ ಅಭಿನಯವು ಫಿಲ್ಮ್‌ಫೇರ್‌ನ ಉತ್ತಮ ಸಪೋರ್ಟಿಂಗ್ ನಟಿಯ ಅವಾರ್ಡ್‌ಗೆ ನಾಮನಿರ್ದೇಶನವಾಯಿತು.[೬] 1998ರಲ್ಲಿ ತೆರೆಕಂಡ ಸಿನೆಮಾ ಸತ್ಯ ಈಕೆಗೆ ಮತ್ತೊಂದು ಫಿಲಂಫೇರ್ ಪ್ರಶಸ್ತಿ ತಂದು ಕೊಟ್ಟಿತು, ಅಲ್ಲದೆ ಚಿತ್ರದಲ್ಲಿನ ಈಕೆಯ ನಟನೆ ವಿಮರ್ಶಕರ ಮೆಚ್ಚುಗೆ ಗಳಿಸಿತು. ಸತ್ಯ ವ್ಯವಹಾರಿಕವಾಗಿ ಮತ್ತು ವಿಮರ್ಶಾತ್ಮಕವಾಗಿ ಚಿತ್ರೋದ್ಯಮದಲ್ಲಿ ಯಶಸ್ಸುಗಳಿಸಿದ ಚಿತ್ರ.[೭] 1999ರಲ್ಲಿ ತೆರೆ ಕಂಡ ಕೌನ್ ಚಿತ್ರದ ಮನೋರೋಗಿಯಾಗಿ ಮಾಡಿದ ನಟನೆಗೆ ವ್ಯಾಪಕ ಪ್ರಶಂಸೆ ಲಭಿಸಿತು. ಇದೇ ಯಶಸ್ಸು ಹಾಗೂ ಪ್ರಶಂಸೆ ಜಾನಮ್ ಸಮಜಾ ಕರೋ , ಹಮ್ ತುಮ್ ಪೆ ಮರ್ ತೇ ಹೈ ಮತ್ತು ಕೂಬ್ಸೂರತ್ ಚಿತ್ರಗಳಲ್ಲೂ ಮುಂದುವರೆಯಿತು- ಬಾಕ್ಸ್ ಆಫೀಸ್‌ನಲ್ಲೂ ಗೆಲವು ಸಾಧಿಸಿತು. 2000ರಲ್ಲಿ ಮಾತೋಂಡ್ಕರ್ ನಾಟಕೀಯ ಹಾಗೂ ಮನೋವೈಜ್ಞಾನಿಕ ಪಾತ್ರಗಳ ಮೂಲಕ ಚಿತ್ರಪ್ರೇಮಿಗಳ, ವಿಮರ್ಶಕರ ಮೆಚ್ಚುಗೆಗೆ ಪಾತ್ರಳಾದಳು. ಎಡಬಿಡದೆ ಕಾಡುವ ಪ್ರೇಮಿಯಾಗಿ ಪ್ಯಾರ್ ತೂನೆ ಕ್ಯಾ ಕಿಯಾ (2001), ಚಿತ್ರದಲ್ಲಿನ ನಟನೆಗಾಗಿ ಪ್ರೋತ್ಸಾಹದಾಯಕ ವಿಮರ್ಶೆ ಜೊತೆಗೆ ಅಕೆಯ ಅಭಿನಯಕ್ಕಾಗಿ ಅತ್ಯುತ್ತಮ ಖಳನಾಯಕಿ ಎಂಬ ಪ್ರಶಸ್ತಿಗೆ ನಾಮನಿರ್ದೇಶನಗೊಂಡಳು. 2003ರಲ್ಲಿ ವೈವಿದ್ಯಮಯ ಪಾತ್ರಗಳಲ್ಲಿ ನಟಿಸಿದರು. ಉತ್ತರ ಭಾರತದ ಬಾಲೆಯೂಬ್ಬಳು 1947ರಲ್ಲಿ ನಡೆದ ದೇಶ ವಿಭಜನೆ ಸಂದರ್ಭದಲ್ಲಿ ಅನುಭವಿಸಿದ ತಲ್ಲಣ ಕುರಿತ ಪಿಂಜಾರ್ ; ಖಾಲೀದ್ ಮೂಹಮದ್ ಅವರ ನಾಟಕದ ಸಿನೆಮಾ ರೂಪಾಂತರ ತೆಹಝೀಬ್ ನಲ್ಲಿ ಶಬಾನಾ ಅಜ್ಮಿ ಜೊತೆ ನಟಿಸಿದರು; ಇವುಗಳೊಂದಿಗೆ ಭಯಾನಕ ಭೂತ್ ಚಿತ್ರದ ನಟನೆಯಿಂದ ಪ್ರಮುಖಳಾಗಿ ಗುರುತಿಸಲ್ಪಟ್ಟಳು.
ದೆವ್ವ-ಹಿಡಿದ ಹೆಂಗಸಾಗಿ ಅಭಿನಯಿಸಿದ ಊರ್ಮಿಳಾ ಮಾತೋಂಡ್ಕರ್, ವಿಮರ್ಶಕರ ಮತ್ತು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಲ್ಲದೆ ಅತ್ಯುತ್ತಮ ಅಭಿನಯ ವಿಭಾಗದ ಮೊದಲ ಫಿಲಂಫೇರ್ ಪ್ರಶಸ್ತಿ ಪಡೆದರು. ಇದಲ್ಲದೆ ಸ್ಟಾರ್ ಸ್ಕ್ರೀನ್ ಪ್ರಶಸ್ತಿ, ಝೀ ಸಿನಿ ಪ್ರಶಸ್ತಿ, ಬಾಲಿವುಡ್ ಸಿನಿಮಾ ಪ್ರಶಸ್ತಿ ಗಳಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ಬಾಲಿವುಡ್‌ನಲ್ಲಿ ಮಾಡಿದ ಗಣನೀಯ ಸಾಧನೆಗಾಗಿ ದೇಶದ ಅತ್ಯುನ್ನತ ಪ್ರಶಸ್ತಿಯಾದ ರಾಜೀವ್ ಗಾಂಧಿ ಅವಾರ್ಡ್ ಪಡೆದಳು. ತರಣ್ ಆದರ್ಶ್ ಅವರು ಆಕೆಯ ಅಭಿನಯದ ಬಗ್ಗೆ ಹೀಗೆ ಬರೆಯುತ್ತಾರೆ, "...ಊರ್ಮಿಳಾ ಮಾತೋಂಡ್ಕರ್ ಅಭಿನಯಿಸಿದ ಚಿತ್ರಗಳು ಸಂಪೂರ್ಣವಾಗಿ ಆಕೆಗೇ ಸೇರುತ್ತವೆ. ಅವಳನ್ನು ಉತ್ತಮ ಎಂದರೆ ಆಕೆಯ ಕೆಲಸಕ್ಕೆ ನ್ಯಾಯ ಒದಗಿಸಿದಂತಾಗುವುದಿಲ್ಲ. ಸನ್ನಿವೇಶಗಳಲ್ಲಿ ಆಕೆ ಸರಳ ಆಶ್ಚರ್ಯಕರ ರೀತಿಯಲ್ಲಿ ನಿಭಾಯಿಸುವುದು ನಿಜಕ್ಕೂ ಅತ್ಯದ್ಭುತ ಈ ಅಭಿನಯವು ಪ್ರಶಸ್ತಿಗೆ ಪಾತ್ರವಾಗದೆ ಇದ್ದಲ್ಲಿ ಯಾವ ಅಭಿನಯಕ್ಕೂ ಸಿಗಬಾರದು. ಇದು ಎಲ್ಲವಿಧದ ಸ್ಪರ್ಧೆಯಲ್ಲೂ ಜಯಶಾಲಿಯಾಗುತ್ತದೆ"[೮] 2004 ರಲ್ಲಿ ರಾಮ್ ಗೋಪಾಲ್ ವರ್ಮರ ಎಕ್ ಹಸೀನಾ ತಿ ಚಿತ್ರದಲ್ಲಿ ಸೇಡು ತೀರಿಸಿಕೊಳ್ಳುವ ಹೆಣ್ಣಾಗಿ, ಸೈಫ್ ಅಲಿಖಾನ್ ಜೊತೆ ಊರ್ಮಿಳಾ ನಟನೆ ವಿಮರ್ಶಕರ ಗಮನ ಸೆಳೆಯಿತು. ತನ್ನ ಪ್ರಿಯಕರನ ಕಾರಣದಿಂದ ಜೈಲು ಪಾಲಾಗಿ, ಅಲ್ಲಿಂದ ತಪ್ಪಿಸಿಕೊಂಡು ಬಂದು ಸೇಡು ತೀರಿಸಿಕೂಳ್ಳುವ ಹೆಣ್ಣಿನ ಪಾತ್ರವನ್ನು ಆಕೆ ಅಭಿನಯಿಸಿದ್ದಾಳೆ. ಈ ಚಿತ್ರದ ಅತ್ಯುತ್ತಮ ನಟನೆಗಾಗಿ ಮತ್ತೊಮ್ಮೆ ಮಾತೋಂಡ್ಕರ್ ಫಿಲಂಫೇರ್ ಪ್ರಶಸ್ತಿಗೆ ನಾಮಿನೇಟ್ ಆದಳು. ನಂತರ 2005ರಲ್ಲಿ ಮತ್ತೊಮ್ಮೆ ಭಯಾನಕ ಚಿತ್ರ ನೈನಾ ದಲ್ಲಿ ನಾಯಕಿಯಾಗಿ ಅಭಿನಯಿಸಿದಳು . ಆದರಿ ಚಿತ್ರ ಯಶಸ್ವಿಯಾಗಲಿಲ್ಲ ಎರಡನೇ ಬಾರಿಗೆ ಅತ್ಯುತ್ತಮ ನಟನೆಗಾಗಿ ಬಾಲಿವುಡ್ ಮೂವಿ ಪ್ರಶಸ್ತಿ gಗಳಿಸಿದ್ದು ಜಾನ್ ಬರುವಾನ ಮೈನೆ ಗಾಂಧಿ ಕೊ ನಹಿ ಮಾರ ಕಲಾತ್ಮಕ ಚಿತ್ರದಿಂದ. ಹಿರಿಯ ನಟ ಅನುಪಮ್ ಖೇರ್‌ರ ಮಗಳಾಗಿ ಅಭಿನಯಿಸಿದ ಇದರಲ್ಲಿ ತಂದೆ ಬಗ್ಗೆ ಕಾಳಜಿ ತೋರುವ ಮಗಳಾಗಿ ಮನೋಜ್ಞ ಅಭಿನಯ ನೀಡಿದ್ದಾರೆ. ಯಶಸ್ವಿ ನಟನೆಯ ಹೊರತಾಗಿ ಹಲವಾರು ಬಾಲಿವುಡ್ ಚಿತ್ರಗಳಲ್ಲಿ ಐಟಂ ಸಾಂಗ್ ಗಳಿಗೆ ನೃತ್ಯ ಮಾಡಿ ಶ್ರೇಷ್ಠ ನೃತ್ಯಗಾತಿ ಎನಿಸಿಕೊಂಡಳು. 1998ರಲ್ಲಿ ಬಿಡುಗಡೆಯಾದ ಚೈನಾಗೇಟ್ ಚಿತ್ರದ ಚಮ್ಮಾಚಮ್ಮಾ ಹಾಡು ಈಕೆಗೆ ಅತಿ ಹೆಚ್ಚು ಖ್ಯಾತಿ ತಂದುಕೊಟ್ಟಿತು. ಇದರೊಂದಿಗೆ ಲಜ್ಜಾ ದ ಆಯಿಯೇ ಆಜಾಯಿಯೇ ಮತ್ತಿತರ ಹಾಡುಗಳು ಈಕೆಗೆ ಖ್ಯಾತಿ ತಂದು ಕೊಟ್ಟವು. 1975ರ ಬ್ಲಾಕ್‌ಬಸ್ಟರ್ 0}ಶೋಲೆಯ ರೀಮೇಕ್ ಚಿತ್ರವಾದ ರಾಮ್ ಗೋಪಾಲ್ ವರ್ಮಾರ ಆಗ್ ನಲ್ಲಿ ಐಟಂ ಹಾಡೊಂದಕ್ಕೆ ನೃತ್ಯ ಮಾಡಲು ಆಕೆ ಸಹಿ ಹಾಕಿದರು. ಈ ಪಾತ್ರವನ್ನು ಮೂಲ ಚಿತ್ರದಲ್ಲಿ ಹೆಲೆನ್ ಅವರು ಅಭಿನಯಿಸಿದ್ದರು 2007ರಲ್ಲಿ ಬಿಡುಗಡೆಯಾದ ಆಶಾ ಭೋಂಸ್ಲೆಯ ಅಲ್ಬಮ್ ಆಶಾ ಅಂಡ್ ಫ್ರೆಂಡ್ಸ್ ವ್ಯಾಲೂಮ್ 1 ರಲ್ಲಿ ಯೂಂದಿಗೆ ಯುಗಳ ಗೀತೆ "ಮೆಹಬೂಬ ದಿಲ್ ರುಬಾ"ದಲ್ಲಿ ಮಾತೋಂಡ್ಕರ್ ಅವರು ಬೋಂಸ್ಲೆಯವರ ಜೊತೆಯಲ್ಲಿ ಹಾಡಿದ್ದಾರೆ. ವಿಶೇಷವೆಂದರೆ, 1990- 2000 ರಲ್ಲಿ ಆಶಾಭೋಂಸ್ಲೆ ಅತೀ ಹೆಚ್ಚು ಸಂಖ್ಯೆಯ ಹಾಡುಗಳನ್ನು ಊರ್ಮಿಳಾಗಾಗಿ ಹಾಡಿದ್ದಾರೆ. 2008ರಲ್ಲಿ ಮಾತೋಂಡ್ಕರ್ ಅವರು ಹಿಮೇಶ್ ರೇಷ್ಮಿಯಾ ಅವರ ಜೊತೆಯಲ್ಲಿ ರೀಮೇಕ್ ಚಿತ್ರ ಕರ್ಝ್ , ಕರ್ಝ್‌ಝ್ ನಲ್ಲಿ ಕಾಣಿಸಿಕೊಂಡರು. 2008ರಲ್ಲಿ ಇಂಡಿಯನ್ ಟೆಲಿವಿಶನ್‌ನ ರಿಯಾಲಿಟಿ ಶೋ ವಾರ್ ಪರಿವಾರ್‌ನ ನಿರೂಪಕಿಯಾಗಿದ್ದರು.
ಪ್ರಶಸ್ತಿಗಳು
ಬದಲಾಯಿಸಿವರ್ಷ | ಪ್ರಶಸ್ತಿ ಸಮಾರಂಭ | ವಿಭಾಗ | ಸಿನಿಮಾ | ಫಲಿತಾಂಶ |
---|---|---|---|---|
1996 | ಫಿಲ್ಮ್‌ಫೇರ್ ಪ್ರಶಸ್ತಿಗಳು | ಉತ್ತಮ ನಟಿ[೯] | ರಂಗೀಲಾ | ನಾಮನಿರ್ದೇಶನ |
1998 | ಫಿಲ್ಮ್‌ಫೇರ್ ಪ್ರಶಸ್ತಿಗಳು | ಉತ್ತಮ ಪೋಷಕ ನಟಿ | ಜುದಾಯಿ | ನಾಮನಿರ್ದೇಶನ |
1999). | ಫಿಲ್ಮ್‌ಫೇರ್ ಪ್ರಶಸ್ತಿಗಳು | ಉತ್ತಮ ನಟಿ[೧೦] | ಸತ್ಯ | ನಾಮನಿರ್ದೇಶನ |
2002 | ಫಿಲ್ಮ್‌ಫೇರ್ ಪ್ರಶಸ್ತಿಗಳು | ಉತ್ತಮ ಖಳನಟಿ | ಪ್ಯಾರ್ ತೂನೆ ಕ್ಯಾ ಕಿಯಾ | ನಾಮನಿರ್ದೇಶನ |
ಸ್ಟಾರ್ ಸ್ಕ್ರೀನ್ ಪ್ರಶಸ್ತಿಗಳು | ಉತ್ತಮ ನಟಿ | ನಾಮನಿರ್ದೇಶನ | ||
ಬಾಲಿವುಡ್ ಚಲನಚಿತ್ರ ಪ್ರಶಸ್ತಿಗಳು | ಭಾವನಾತ್ಮಕ ನಟಿ | ಗೆಲುವು | ||
೨೦೦೪ | ಫಿಲ್ಮ್‌ಫೇರ್ ಪ್ರಶಸ್ತಿಗಳು | ಉತ್ತಮ ನಟಿ (ವಿಮರ್ಶಾತ್ಮಕ) | ಭೂತ್ | ಗೆಲುವು[೧೧] |
ಫಿಲ್ಮ್‌ಫೇರ್ ಪ್ರಶಸ್ತಿಗಳು | ಉತ್ತಮ ನಟಿ | ನಾಮನಿರ್ದೇಶನ | ||
ಸ್ಟಾರ್ ಸ್ಕ್ರೀನ್ ಪ್ರಶಸ್ತಿಗಳು | ಉತ್ತಮ ನಟಿ | ಗೆಲುವು | ||
ಅಪ್ಸರಾ ಅವಾರ್ಡ್‌ಗಳು | ಉತ್ತಮ ನಟಿ | ಗೆಲುವು | ||
IIFA ಪ್ರಶಸ್ತಿ | ಉತ್ತಮ ನಟಿ | ನಾಮನಿರ್ದೇಶನ | ||
ಝೀ ಸಿನಿ ಪ್ರಶಸ್ತಿಗಳು | ಉತ್ತಮ ನಟಿ | ಗೆಲುವು | ||
ಬಾಲಿವುಡ್ ಚಲನಚಿತ್ರ ಪ್ರಶಸ್ತಿಗಳು | ಉತ್ತಮ ನಟಿ | ಗೆಲುವು | ||
ರಾಜೀವ್ ಗಾಂಧಿ ಸ್ಮಾರಕ ಅವಾರ್ಡ್ಸ್ | ಬಾಲಿವುಡ್‌ನಲ್ಲಿ ಮಾಡಿದ ಸಾಧನೆಗಾಗಿ[೧೨] | ಗೆಲುವು | ||
2005 | ಫಿಲ್ಮ್‌ಫೇರ್ ಪ್ರಶಸ್ತಿಗಳು | ಉತ್ತಮ ನಟಿ | ಏಕ್ ಹಸೀನಾ ಥಿ | ನಾಮನಿರ್ದೇಶನ |
ಸ್ಟಾರ್ ಸ್ಕ್ರೀನ್ ಪ್ರಶಸ್ತಿಗಳು | ಉತ್ತಮ ನಟಿ | ನಾಮನಿರ್ದೇಶನ | ||
ಝೀ ಸಿನಿ ಪ್ರಶಸ್ತಿಗಳು | ಉತ್ತಮ ನಟಿ | ನಾಮನಿರ್ದೇಶನ | ||
IIFA ಪ್ರಶಸ್ತಿ | ಉತ್ತಮ ನಟಿ | ನಾಮನಿರ್ದೇಶನ | ||
2006 | ಬಾಲಿವುಡ್ ಚಲನಚಿತ್ರ ಪ್ರಶಸ್ತಿಗಳು | ಉತ್ತಮ ನಟಿ | ಮೈನೆ ಗಾಂಧಿ ಕೊ ನಹಿ ಮಾರಾ | ಗೆಲುವು |
ಅಪ್ಸರಾ ಅವಾರ್ಡ್ಸ್ | ಉತ್ತಮ ನಟಿ | ನಾಮನಿರ್ದೇಶನ | ||
ಝೀ ಸಿನಿ ಪ್ರಶಸ್ತಿಗಳು | ಉತ್ತಮ ನಟಿ | ನಾಮನಿರ್ದೇಶನ |
ಚಲನಚಿತ್ರಗಳ ಪಟ್ಟಿ
ಬದಲಾಯಿಸಿವರ್ಷ | ಶೀರ್ಷಿಕೆ | ಪಾತ್ರ | ಟಿಪ್ಪಣಿಗಳು |
---|---|---|---|
1980 | ಕಲಿಯುಗ್ | ||
ಜಕೊಲ್ | |||
1983 | ಮಾಸೂಮ್ | ಪಿಂಕಿ | |
1985 | ಸುರ್ ಸಂಗಮ್ | ||
1987 | ಡಕಾಯಿತ್ | ||
ಜಿಂದಗಿ | |||
1989 | ಬಡೆ ಘರ್ ಕಿ ಬೇಟಿ | ||
ಚಾಣಕ್ಯನ್ | ರೇಣು | ಮಲಯಾಳಂ ಚಿತ್ರ | |
1991 | ನರಸಿಂಹ | ಹಿಂದಿಯಲ್ಲಿ ಮೊದಲ ವಯಸ್ಕರ ಪಾತ್ರ | |
1992 | ಚಮತ್ಕಾರ್ | ಮಾಲಾ | |
ಅಂತಮ್ | ತೆಲುಗು ಚಿತ್ರ | ||
ದ್ರೋಹಿ | ಭಾವನಾ | ||
1993 | ಶ್ರೀಮಾನ್ ಆಶಿಕ್ | ||
ಗಾಯಮ್ | ತೆಲುಗು ಚಿತ್ರ | ||
ಬೇದರ್ದಿ | |||
1994). | ಕಾನೂನ್ | ||
ಆ ಗಲೇ ಲಗ್ ಜಾ | ರೋಶನಿ | ||
1995 | ರಂಗೀಲಾ | ಮಿಲಿ ಜೋಶಿ | ಆಯ್ಕೆಪಟ್ಟಿಯಲ್ಲಿ, ಫಿಲ್ಮ್‌ಫೇರ್ ಶ್ರೇಷ್ಠ ಕಲಾವಿದೆ |
ಟಚೋಲಿ ವರ್ಗೆಸೆ ಚೆಕವರ್ | ಮಾಯಾ | ಮಲಯಾಳಂ ಚಿತ್ರ | |
ಮನಿ ಮನಿ | ತೆಲುಗು ಚಿತ್ರ | ||
1996 | ಭಾರತೀಯರು | ಸಪ್ನಾ | ತಮಿಳು ಚಲನಚಿತ್ರದಿಂದ ಡಬ್ಬಿಂಗ್ ಮಾಡಿದ ಹಿಂದಿ ಚಿತ್ರಹಿಂದುಸ್ಥಾನಿ |
1997 | ಜುದಾಯಿ | ಜಾಹ್ನವಿ ಸಾಹ್ನಿ | ನಾಮನಿರ್ದೇಶನ, ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ |
ಮೇರೆ ಸಫ್ನೋ ಕಿ ರಾಣಿ | |||
ದೌಡ್ | ಭವಾನಿ | ||
ಅಫ್ಲಾಟೂನ್ | |||
ಅನಗಾನಗಾ ಓಕ ರಾಜು | ಮಧು | ತೆಲುಗು ಚಿತ್ರ | |
1998 | ಸತ್ಯ | ವಿದ್ಯಾ | ಆಯ್ಕೆಪಟ್ಟಿಯಲ್ಲಿ, ಫಿಲ್ಮ್‌ಫೇರ್ ಶ್ರೇಷ್ಠ ಕಲಾವಿದೆ |
ಕುದರತ್ | ಮಾಲಾ | ||
ಚೈನಾ ಗೇಟ್ | ಐಟಂ ಹಾಡು | ||
ಛೋಟಾ ಚೇತನ್ | |||
1999). | ಜಾನಮ್ ಸಂಜ್ಹಾ ಕರೊ | ಚಾಂದಿನಿ | |
ಹಮ್ ತುಮ್ ಪೆ ಮರ್ತೆ ಹೈ | ರಾಧಿಕಾ | ||
ಮಸ್ತ್ | ಮಲ್ಲಿಕಾ | ||
ದಿಲ್ಲಗಿ | ಶಾಲಿನಿ | ||
ಖೂಬ್‌ಸೂರತ್ | ಶಿವಾನಿ | ||
ಕೌನ್ | ಹೆಸರಿಲ್ಲದ ಪಾತ್ರ | ಮೊದಲನೆಯ ಖಳನಾಯಕಿಯ ಪಾತ್ರ | |
2000 | ಜಂಗಲ್ | ಅನು | |
ದೀವಾನೆ | ಸಪ್ನಾ | ||
ಕುವಾರಾ | ಊರ್ಮಿಳಾ | ||
2001 | ಪ್ಯಾರ್ ತೂನೆ ಕ್ಯಾ ಕಿಯಾ | ರಿಯಾ | ಖಳನಾಯಕಿ ಪಾತ್ರ ನಾಮಾಂಕಿತ, ಫಿಲ್ಮ್‌ಫೇರ್ ಅತ್ಯುತ್ತಮ ಖಳನಟ ಪ್ರಶಸ್ತಿ |
ಲಜ್ಜಾ | (ಐಟಮ್ ನಂಬರ್) ವಿಶೇಷ ಪಾತ್ರದಲ್ಲಿ | ||
2002 | ಕಂಪನಿ | ಹಾಡಿನಲ್ಲಿ ಕಾಣಿಸಿಕೊಂಡ
ವಿಶೇಷ ಅತಿಥಿ ನಟಿ | |
ಓಂ ಜೈ ಜಗದೀಶ್ | ನೀತು | ||
ದೀವಾನಗಿ | ಸರ್‌ಗಮ್ | ||
2003 | ಭೂತ್ | ಸ್ವಾತಿ | |
ತೆಹ್‌ಝೀಬ್ | ತೆಹ್ಜೀಬ್ ಮಿಶ್ರಾ | ||
ಪಿಂಜಾರ್ | ಪುರೋ | ||
೨೦೦೪ | ಏಕ್ ಹಸೀನಾ ಥಿ | ಸಾರಿಕಾ ವರ್ತಕ್ | ಆಯ್ಕೆಪಟ್ಟಿಯಲ್ಲಿ, ಫಿಲ್ಮ್‌ಫೇರ್ ಶ್ರೇಷ್ಠ ಕಲಾವಿದೆ |
2005 | ನೈನಾ | ನೈನಾ | |
ಮೈನೆ ಗಾಂಧಿ ಕೊ ನಹಿ ಮಾರಾ | ತ್ರಿಶಾ | ||
2006 | ಬನಾರಸ್ | ಶ್ವೇತಾಂಬರಿ | |
ಬಸ್ ಏಕ್ ಪಲ್ | ಅನಾಮಿಕಾ | ||
೨೦೦೭ | ರಾಮ್ ಗೋಪಾಲ್ ವರ್ಮಾ ಕಿ ಆಗ್ | ಜಿಪ್ಸಿ ಡ್ಯಾನ್ಸರ್ | ಐಟಮ್ ನಂಬರ್ |
ಓಂ ಶಾಂತಿ ಓಂ | ಆಕೆ | ವಿಶೇಷ ಪಾತ್ರ | |
ಸ್ಪೀಡ್ | ರಿಚಾ | ||
2008 | ಕರ್ಝ್ | ಕಾಮಿನಿ | ಬಿಡುಗಡೆಯಾಗಿದೆ |
2009 | ಅಬ್ ದಿಲ್ಲಿ ದೂರ್ ನಹೀನ್ | ಪರೂಟ್‌ನ ಧ್ವನಿ | ಅನಿಮೇಟೆಡ್ ಚಿತ್ರ ಎಂದು ಘೋಷಿತವಾಗಿದೆ |
ನಾನ್ ಸ್ಟಾಪ್ ಫನ್ | ಸಂಗೀತ ಶಿಕ್ಷಕಿ | ಚಿತ್ರೀಕರಣ | |
ಗುಲೆಲ್ | ಪ್ರಿ-ಪ್ರೊಡಕ್ಷನ್[೧೩] |
Khalandar sha
ಬದಲಾಯಿಸಿಆಕರಗಳು
ಬದಲಾಯಿಸಿ- ↑ Verma, Sukanya (2002). "Star of the Week". Rediff.com. Retrieved 2008-11-10.
- ↑ Verma, Sukanya (29 May 2003). "'My knuckles would turn white'". Rediff.com. Retrieved 2008-11-10.
- ↑ Srinivasan, V S (16 January 1998). "Rangeela Re!". Rediff.com. Retrieved 2008-11-11.
- ↑ Kulkarni, Ronjita (2008). "Bollywood's top 5, 2003: Urmila Matondkar". Rediff.com. Retrieved 2008-11-11.
- ↑ "Box Office 1997". Archived from the original on 2012-01-11. Retrieved 2010-02-09.
- ↑ "Filmfare Nominations 1997". Archived from the original on 2018-12-25. Retrieved 2010-02-09.
- ↑ "Box Office 1999". Archived from the original on 2012-07-13. Retrieved 2010-02-09.
- ↑ "Bhoot Review".
- ↑ "Filmfare Nominations 1995". Archived from the original on 2012-07-09. Retrieved 2010-02-09.
- ↑ "Filnfare Nominations 1998". Archived from the original on 2018-12-25. Retrieved 2010-02-09.
- ↑ "Filmfare Winners 2003". Archived from the original on 2012-07-09. Retrieved 2010-02-09.
- ↑ "Rajiv Gandhi Awards". Rajivgandhiawards.com. Archived from the original on 2008-05-28. Retrieved 2008-11-22.
- ↑ India.fm. "Gulel Cast And Crew".