ದಹಿಸುವಿಕೆ ಅಥವಾ ಉಷ್ಣ ವಿಕಸನ ಎಂದರೆ ಇಂಧನ ಮತ್ತು ಆಕ್ಸಿಡೆಂಟ್‌ನ ನಡುವೆ ಆಗುವ ಬಾಹ್ಯಶಾಖ ಅನುಕ್ರಮದ ರಾಸಾಯನಿಕ ಪ್ರತಿಕ್ರಿಯೆ ಪರಿಣಾಮದಿಂದ ಉತ್ಪಾದನೆಯಾಗುವ ಶಾಖ ಮತ್ತು ರಾಸಾಯನಿಕ ಪ್ರಕಾರಗಳ ಪರಿವರ್ತನೆ. ಇದರಿಂದ ಬಿಡುಗಡೆಯಾದ ಶಾಖವು ಬೆಳಕಿನ ರೂಪವನ್ನು ಪಡೆಯಬಹುದು, ಅದು ಪ್ರಕಾಶ ಅಥವಾ ಜ್ವಾಲೆಯ ರೂಪದಲ್ಲಿರ ಬಹುದು. ಇಂಧನಗಳು ಆಗಾಗ್ಗೆ, ಸಾವಯುವ ಸಂಯುಕ್ತಗಳನ್ನು (ಮುಖ್ಯವಾಗಿ ಹೈಡ್ರೋಕಾರ್ಬನ್‌‍ಗಳನ್ನು (ಜಲಜನಕ ಮತ್ತು ಇಂಗಾಲದ)) ವಾಯು, ದ್ರವ ಅಥವಾ ಘನ ರೂಪದಲ್ಲಿಸೇರಿಸುತ್ತವೆ. ಒಂದು ಸಂಪೂರ್ಣ ಉಷ್ಣ ವಿಕಸನದ ಪ್ರತಿಕ್ರಿಯೆಯಲ್ಲಿ, ಸಂಯುಕ್ತ ವಸ್ತುಗಳು ಆಮ್ಲಜನಕ ಅಥವಾ ಫ್ಲೋರೀನ್ ನಂತಹ, ಆಕ್ಸಿಡೈಸಿಂಗ್ ಮೂಲವಸ್ತುವಿನೊಂದಿಗೆ ಸಂಯೋಗ ಹೊಂದುವುದರಿಂದ, ಇಂಧನದಲ್ಲಿ ಪ್ರತಿ ಮೂಲವಸ್ತುವಿನ, ಆಕ್ಸಿಡೈಸಿಂಗ್ ಮೂಲವಸ್ತುವನ್ನೊಂದಿದ ಸಂಯುಕ್ತ ವಸ್ತುಗಳನ್ನು ಪಡೆಯಬಹುದು. ಉದಾಹರಣೆಗೆ:

CH
4
+ 2O
2
CO
2
+ 2H2O + ಶಕ್ತಿ
CH2S + 6F
2
CF
4
+ 2HF + SF
6

ಜಲಜನಕ ಮತ್ತು ಆಮ್ಲಜನಕದ ಜ್ವಲನದಲ್ಲಿ ಸರಳವಾದ ಉದಾಹರಣೆಯನ್ನು ಕಾಣಬಹುದು, ಇದು ರಾಕೆಟ್ ಎಂಜಿನ್‌ಗಳಲ್ಲಿ ಸಾಮಾನ್ಯವಾಗಿ ಬಳಸುವ ಪ್ರತಿಕ್ರಿಯೆಯಾಗಿದೆ:

2H
2
+ O
2
→ 2H2O(g) + ಶಾಖ

ಇದರ ಪಲಿತಾಂಶ ನೀರಾವಿ. ಸಂಪೂರ್ಣ ಉಷ್ಣ ವಿಕಸನವನ್ನು ಸಾಧಿಸುವುದು ಬಹಳ ಮಟ್ಟಿಗೆ ಅಸಾಧ್ಯವಾಗಿದೆ. ವಾಸ್ತವದಲ್ಲಿ, ನಿಜವಾದ ಉಷ್ಣ ವಿಕಸನವು ಸಮಸ್ಥಿತಿಗೆ ಬಂದಂತೆ, ಇಂಗಾಲದ ಮೊನೊ ಆಕ್ಸೈಡ್ ಮತ್ತು ಶುದ್ದ ಇಂಗಾಲದಂತಹ (ಮಸಿ ಅಥವಾ ಬೂದಿ) ವಿರಳವಾದ ಭಿನ್ನತೆಯ ಪ್ರಮುಖ ಮತ್ತು ಅಲ್ಪ ಪ್ರಕಾರಗಳು ಪ್ರಸಕ್ತವಾಗಿರುತ್ತವೆ. ಇದರೊಂದಿಗೆ, 78% ನೈಟ್ರೋಜನ್‌ಗೆ ಕಾರಣವಾಗುವ, ವಾಯುವಿನಲ್ಲಿನ ಯಾವುದೇ ಜ್ವಲನವು, ವಿವಿಧ ರೂಪದ ನೈಟ್ರೊಜೆನ್ ಆಕ್ಸೈಡ್‌ಗಳನ್ನು ಸಹ ಉತ್ಪತ್ತಿ ಮಾಡುತ್ತದೆ.

ಪ್ರಕಾರಗಳು

ಬದಲಾಯಿಸಿ

ಪೂರ್ಣ vs. ಅಪೂರ್ಣ

ಬದಲಾಯಿಸಿ

ಪೂರ್ಣ ಜ್ವಲನನದಲ್ಲಿ, ಆಮ್ಲಜನಕದಲ್ಲಿನ ದಹನದ ಪ್ರತಿಕ್ರಿಯಾಕಾರಿಗಳು, ಕಡಿಮೆ ಮೊತ್ತದ ಉತ್ಪನ್ನಗಳನ್ನು ಉತ್ಪತ್ತಿಮಾಡುತ್ತವೆ. ಹೈಡ್ರೊಕಾರ್ಬನ್ ಆಮ್ಲಜನಕದಲ್ಲಿ ದಹನವಾದಾಗ, ಇದರ ಪ್ರತಿಕ್ರಿಯೆಯ ಫಲವಾಗಿ ಇಂಗಾಲದ ಡೈ ಆಕ್ಸೈಡ್ ಮತ್ತು ನೀರು ದೊರೆಯುತ್ತವೆ. ಮೂಲವಸ್ತುಗಳನ್ನು ದಹನಮಾಡಿದಾಗ, ಉತ್ಪತ್ತಿಯಾಗುವ ಉತ್ಪಾದನೆಗಳು ಪ್ರಾಥಮಿಕವಾಗಿ ಸಾಮಾನ್ಯವಾದ ಆಕ್ಸೈಡ್ ಗಳಾಗಿರುತ್ತದೆ. ಇಂಗಾಲವು ಇಂಗಾಲದ ಡೈ ಆಕ್ಸೈಡ್, ನೈಟ್ರೊಜೆನ್ ನೈಟ್ರೊಜೆನ್ ಡೈ ಆಕ್ಸೈಡ್, ಗಂಧಕವು ಗಂಧಕದ ಡೈ ಆಕ್ಸೈಡ್ ಮತ್ತು ಕಬ್ಬಿಣವು ಕಬ್ಬಿಣದ(III) ಆಕ್ಸೈಡ್‌ನ್ನು ಉತ್ಪಾದಿಸುತ್ತವೆ. ಬಹುತೇಕ ಕೈಗಾರಿಕಾ ಉಪಯೋಗಗಳಲ್ಲಿ ಮತ್ತು ಬೆಂಕಿಗಳಲ್ಲಿ, ಗಾಳಿಯು ಆಮ್ಲಜನಕದ (O2) ಮೂಲಾಧಾರವಾಗಿದೆ. ಗಾಳಿಯಲ್ಲಿ, ಆಮ್ಲಜನಕದ ಪ್ರತಿ ಕಿ.ಗ್ರಾಂ. (ಎಲ್‌ಬಿಎಮ್) ಸರಿಸುಮಾರು 3.76 ಕಿ.ಗ್ರಾಂ.(ಎಲ್ ಬಿ ಎಮ್) ನೈಟ್ರೊಜೆನ್ ನೊಂದಿಗೆ ಬೆರಿಕೆಯಾಗಿರುತ್ತದೆ. ನೈಟ್ರೊಜೆನ್ ಜ್ವಲನದಲ್ಲಿ ಪಾಲ್ಗೊಳ್ಳುವುದಿಲ್ಲ, ಆದರೆ ಅತೀ ಹೆಚ್ಚಿನ ಉಷ್ಣಾಂಶದಲ್ಲಿ, ಕೆಲವೊಂದು ನೈಟ್ರೊಜೆನ್‌ NOx ಯಾಗಿ ಪರಿವರ್ತನೆಯಾಗುತ್ತದೆ, ಸಾಮಾನ್ಯವಾಗಿ 1% ಮತ್ತು 0.002%(2ppm)ನ ಮಧ್ಯದಲ್ಲಿ.[] ಆದ್ದರಿಂದ, ಒಂದು ಸಂಪೂರ್ಣ ವಾಯು ಉಷ್ಣ ವಿಕಸನ ಪ್ರತಿಕ್ರಿಯೆ ಹೀಗಿರುತ್ತೆದೆ:

2CH
4
+ xO
2
+ N
2
CO
2
+ 4H2O + CO + 2NO
x
+ ಶಾಖ

ಅಪೂರ್ಣ

ಬದಲಾಯಿಸಿ

ಇಂಧನವು ಇಂಗಾಲದ ಡೈ ಆಕ್ಸೈಡ್ ಮತ್ತು ನೀರನ್ನು ಉತ್ಪತ್ತಿಮಾಡಲು, ಸಂಪೂರ್ಣವಾಗಿ ಪ್ರತಿಕ್ರಿಯೆಕ್ಕೊಳಗಾಗುವಂತೆ ಸಹಾಯವಾಗಲು ಬೇಕಾದಸ್ಟು ಆಮ್ಲಜನಕವು ಇರದಿದ್ದಾಗ, ಅಪೂರ್ಣ ಉಷ್ಣ ವಿಕಸನ ಉದ್ಭವಿಸುತ್ತದೆ. ಶಾಖವನ್ನು ತಳಕ್ಕೆ ಸೇರಿಸಲು ಬಳಸುವ ಘನ ಮೇಲ್ಮೈ ಅಥವಾ ಜ್ವಾಲೆಯ ಬಲೆಗಳಿಂದ ಉಷ್ಣ ವಿಕಸನವನ್ನು ಶಮನ ಮಾಡಿದಾಗ ಸಹ ಅಪೂರ್ಣ ಉಷ್ಣ ವಿಕಸನವಾಗುತ್ತದೆ. ‌ಬರ್ನರ್‌ಗಳು ಮತ್ತು ಒಳಗಿನ ಉಷ್ಣ ವಿಕಸನದ ಎಂಜಿನ್ಗಳಂತಹ ಉಷ್ಣ ವಿಕಸನದ ಸಲಕರಣೆಗಳ ವಿನ್ಯಾಸದಿಂದ ಉಷ್ಣ ವಿಕಸನದ ಗುಣ್ಣಮಟ್ಟವನ್ನು ಅಭಿವೃದ್ದಿ ಪಡೆಸಬಹುದು. ಇದಲ್ಲದೆ ಹೆಚ್ಚಿನ ಅಭಿವೃದ್ದಿಯನ್ನು ಕಾತಲಿಟಿಕ್ದಹನದ-ನಂತರದ ಸಲಕರಣೆಗಳಿಂದ (ಕಾತಲಿಟಿಕ್ ಪರಿವರ್ತಕ) ಪಡೆಯಬಹುದು ಅಥವಾ ಶೋಷಿಸಿವಿಟ್ಟ ವಾಯುವಿನ ಸರಳವಾದ ಭಾಗಶಃ ಉಷ್ಣ ವಿಕಸನದ ಪ್ರಕ್ರಿಯೆಗೆ ಮರುಳುವಂತೆ ಮಾಡುವುದರಿಂದಲು ಹೆಚ್ಚಿನ ಅಭಿವೃದ್ಧಿಯನ್ನು ಪಡೆಯಬಹುದು. ಇಂತಹ ಸಲಕರಣೆಗಳನ್ನು ಪರಿಸರದ ಕಾನೂನು ವ್ಯವಸ್ಥೆಯ ಅಡಿಯಲ್ಲಿ ಹೆಚ್ಚಿನ ದೇಶಗಳಲ್ಲಿ ಕಾರುಗಳಿಗೆ ಉಪಯೋಗಿಸಲಾಗುವುದು, ಮತ್ತು ಥರ್ಮಲ್ ಶಾಖ ಉತ್ಪನ್ನ ಘಟಕ ಗಳಂತಹ ಹೆಚ್ಚಿನ ಉಷ್ಣ ವಿಕಸನದ ಸಲಕರಣೆಗಳನ್ನು ಅಳವಡಿಸಿರುವಲ್ಲಿ, ಕಾನೂನು ನಿಗದಿ ಪಡಿಸಿರುವ ಎಮಿಷನ್ ಪ್ರಮಾಣಗಳನ್ನು ಧೃಡಪಡಿಸಲು, ಇದರ ಅವಶ್ಯಕತೆಯಿದೆ. ಉಷ್ಣ ವಿಕಸನದ ಶ್ರೇಣಿಯನ್ನು, ಪರೀಕ್ಷ ಸಲಕರಣಿಯ ಮೂಲಕ ಅಳೆಯಬಹುದು ಹಾಗು ಪೃಥಕ್ಕರಣಮಾಡಬಹುದಾಗಿದೆ. HVAC ಗುತ್ತಿಗೆದಾರರು, ಅಗ್ನಿಶಾಮಕ ದಳದವರು, ಮತ್ತು ಇಂಜಿನೀರುಗಳು ಉಷ್ಣ ವಿಕಸನದ ಆನಲೈಜರ್‌ಗಳನ್ನು ಉಪಯೋಗಿಸಿ ಉಷ್ಣ ವಿಕಸನದ ಪ್ರಕ್ರಿಯೆಯಲ್ಲಿನ ಬರ್ನರ್‌ನ ಸಾಮರ್ಥ್ಯವನ್ನು ಪರೀಕ್ಷಿ ಸುತ್ತಾರೆ. ಇದರೊಂದಿಗೆ,ಒಳಗಿನ ಉಷ್ಣ ವಿಕಸನದ ಎಂಜಿನ್‌ನ ಸಾಮರ್ಥ್ಯವನ್ನು ಇದೇ ರೀತಿಯಲ್ಲಿ ಅಳತೆ ಮಾಡಬಹುದಾಗಿದೆ, ಹಾಗು ಇತ್ತೀಚೆಗೆ ಕೆಲವು ರಾಜ್ಯಗಳು ಮತ್ತು ಸ್ಥಳೀಯ ಪೌರಸಭೆಯವರು ಉಷ್ಣ ವಿಕಸನದ ಆನಲೈಜರ್‌ಗಳನ್ನು ಬಳಸಿಕೂಂಡು ರಸ್ತೆಯ ಮೇಲೆ ಸಂಚರಿಸುವ ವಾಹನಗಳ ಗುಣ ಮತ್ತು ಸಾಮರ್ಥ್ಯವನ್ನು ಪತ್ತೆಹಚ್ಚುತ್ತಿವೆ.

ಸ್ಮೊಲ್ಡೆರಿಂಗ್

ಬದಲಾಯಿಸಿ

ಸ್ಮೊಲ್ಡೆರಿಂಗ್ ಒಂದು ನಿಧಾನವಾದ,ಕಡಿಮೆ-ತಾಪಮಾನದ,ಜ್ವಾಲೆರಹಿತ ಉಷ್ಣ ವಿಕಸನವಾಗಿದ್ದು, ಆಮ್ಲಜನಕವು ಘನೀಕರವಾದ ಇಂಧನವನ್ನು ಆಕ್ರಮಣ ಮಾಡಿದಾಗ ವಿಕಸಿಸಿದ ಶಾಖದಿಂದ ಉಂಟಾಗುತ್ತದೆ. ಸಂಕೇತಿಕವಾಗಿ ಇದು ಒಂದು ಅಪೂರ್ಣವಾದ ಉಷ್ಣ ವಿಕಸನದ ಪ್ರತಿಕ್ರಿಯೆ ಆಗಿದೆ. ಘನ ವಸ್ತುಗಳಾದ ಇದ್ದಲು, ಸೆಲ್ಯೂಲೋಸ್ , ಮರ, ಹತ್ತಿ, ತಂಬಾಕು, ಪೀಟ್, ಡಫ್, ಹ್ಯೂಮಸ್, ಸಿಂಥೆಟಿಕ್ ಪೋಮ್, ಇದ್ದಲಾಗುವ ಪಾಲಿಮರ್ಸ್ ಹಾಗು ಅದರ ಪಾಲಿಯುರೆತೆನ್ ಪೋಮ್, ಮತ್ತು ಅದರ ದೊಳುಗಳು ಸ್ಮೊಲ್ಡೆರಿಂಗ್ ಪ್ರತಿಕ್ರಿಯೆಯಿಂದ ಸಂರಕ್ಷಣೆಯಾಗುವುವು. ಸ್ಮೊಲ್ಡೆರಿಂಗ್‌ಗೆ ಸಾಮನ್ಯವಾದ ಉದಾಹರಣೆಯೆಂದರೆ ಮನೆಯಲ್ಲಿನ ಕುರ್ಚಿಗಳಂತಹ ಗೃಹೋಪಯೋಗಿ ವಸ್ತುಗಳ ಮೇಲೆ ದುರ್ಬಲ ಅಗ್ನಿಯಿಂದ (ಉದಾ.,ಸಿಗರೇಟಿನ ತುಂಡು,ಶಾರ್ಟ್ ಸರ್ಕ್ಯುಟ್) ಅಗುವ ಆಗ್ನಿ ಆಕಸ್ಮಿಕಗಳು.ಮತ್ತು ಕಾಡಗ್ಚಿಚಿನ ಹಿಂದೆ ಇರುವ ದೀರ್ಘವಾದ ಬಯೊಮಾಸ್ ನಂತಹ ಉಷ್ಣ ವಿಕಸನ.

ತೀವ್ರ/ಕ್ಷಿಪ್ರ

ಬದಲಾಯಿಸಿ

ಉಷ್ಣ ವಿಕಸನದ ಇನ್ನೊಂದು ರೂಪ ಕ್ಷಿಪ್ರ ಉಷ್ಣ ವಿಕಸನ, ಅಥಾವಾ ಇದನ್ನು ಬೆಂಕಿ ಎಂದು ಗುರುತಿಸಲಾಗುತ್ತದೆ, ಇದರಲ್ಲಿ ಹೆಚ್ಚು ಶಾಖ ಮತ್ತು ಬೆಳಕಿನ ಶಕ್ತಿ ಹೊರಹೊಮ್ಮುತ್ತದೆ, ಇದರಿಂದ ಇದು ಆಗಾಗ್ಗೆ ಜ್ವಾಲೆಯಾಗುತ್ತದೆ. ಇದನ್ನು ಒಳಗಿನ ಜ್ವಲನ ಇಂಜಿನ್‌ಗಳು ಮತ್ತು ಥೆರ್ಮೊಬೇರಿಕ್‌ ಆಯುಧಗಳಲ್ಲಿ ಯಮ್ತ್ರೋಪಕರಣಗಳ ರೂಪದಲ್ಲಿ ಉಪಯೋಗಿಸಲಾಗುತ್ತದೆ. ಕೆಲವುಸಲ, ಉಷ್ಣವಿಕಸನದಲ್ಲಿ ಶಾಖ ಮತ್ತು ಬೆಳಕಿನ ಉತ್ಪಾದನೆಯ ಜೊತೆಗೆ ದೊಡ್ಡ ಪ್ರಮಾಣದ ವಾಯು ಹೊರಹೊಮ್ಮುತ್ತದೆ. ದೊಡ್ಡ ಪ್ರಮಾಣದಲ್ಲಿನ ಈ ರೀತಿ ಆಕಸ್ಮಿಕವಾಗಿ ವಾಯು ಹೊರಹೊಮ್ಮುವುದರಿಂದ ವಿಪರೀತ ಒತ್ತಡವು ಉಂಟಾಗಿ ಇದು ಹೆಚ್ಚಿನ ಶಬ್ದದ ಉತ್ಪಾದನೆಗೆ ಕಾರಣವಾಗುತ್ತದೆ. ಈ ತರಹದ ಉಷ್ಣ ವಿಕಸನವನ್ನು ಸ್ಫೋಟಿಸುವಿಕೆ ಎಂದು ಗುರುತಿಸಲಾಗುತ್ತದೆ. ಉಷ್ಣ ವಿಕಸನವಾಗಲು ಆಮ್ಲಜನಕದ ಅವಶ್ಯಕತೆಯಿಲ್ಲ; ಉ.ದಾ.,ಉಷ್ಣ ವಿಕಸನದ ಶಾಖ ಮತ್ತು ಬೆಳಕಿನ ಲಕ್ಷಣಗಳನ್ನು ಬಿಡುಗಡೆಯೊಂದಿಗೆ ಹೈಡ್ರೊಜನ್ ಕ್ಲೋರೈಡ್‌ನ ರಚನೆಗಾಗಿ ಜಲಜನಕವನ್ನು ಕ್ಲೋರಿನ್‌ನಲ್ಲಿ ದಹನಮಾಡಲಾಗುತ್ತದೆ.

ಟರ್ಬುಲೆಂಟ್ (ಒಂದೇ ತರ ವಿಲ್ಲದ)

ಬದಲಾಯಿಸಿ

ಒಂದೇ ತರ ವಿಲ್ಲದ ಜ್ವಾಲೆಯಲ್ಲಿ ಬಿಡುಗಡೆಯಾಗುವ ಉಷ್ಣ ವಿಕಸನವನ್ನು ಹೆಚ್ಚಾಗಿ ಕೈಗಾರಿಕಾ ಉಪಯೋಗಕ್ಕಾಗಿ ಉಪಯೋಗಿಸಲಾಗುವುದು (ಉ.ದಾ. ಅನಿಲದ ನೀರ್ಗಾಲಿಗಳು, ಗೇಸೊಲೈನ್ ಇಂಜಿನುಗಳು, ಮುಂತಾದವು) ಇದಕ್ಕೆ ಕಾರಣ ಪ್ರಕ್ಷುಬ್ಧತೆಯು ಇಂಧನ ಮತ್ತು ಆಮ್ಲಜನಕ ಸಂಯುಕ್ತಯಾಗುವಿಕೆಯ ನಡುವೆ ಬೆರಿಕೆಯ ಪ್ರಕ್ರಿಯೆಗೆ ಸಹಾಯವಾಗುತ್ತದೆ.

ಮೈಕ್ರೊಗ್ರಾವಿಟಿ

ಬದಲಾಯಿಸಿ

ಉಷ್ಣ ವಿಕಸನ ಪ್ರಕ್ರಿಯೆಯ ವರ್ತನೆಯು ಭೂಮಿಯ-ಗುರುತ್ವಾಕರ್ಷಣೆಯ ಸ್ಥಿತಿಗಳಲ್ಲಿಗಿಂತಲು ಮೈಕ್ರೊಗ್ರಾವಿಟಿ (ಸೂಕ್ಷ್ಮ ಗುರುತ್ವಾಕರ್ಷಣೆಯ)ವಾತಾವರಣದಲ್ಲಿ ಭಿನ್ನವಾಗಿರುತ್ತದೆ, ತೇಲುವಿಕೆಯ ಕೊರತೆಯೇ ಇದಕ್ಕೆ ಕಾರಣ. ಉದಾ, ಮೇಣಬತ್ತಿಯ ಜ್ವಾಲವು ದುಂಡಗಿನ ಆಕಾರದಲ್ಲಿರುತ್ತದೆ.[] ಮೈಕ್ರೊಗ್ರಾವಿಟಿ ಉಷ್ಣ ವಿಕಸನದ ಪರಿಶೋಧನೆಯು, ಬಾಹ್ಯಾಕಾಶ ನೌಕೆಯ ಅಗ್ನಿ ಸುರಕ್ಷತೆ ಮತ್ತು ಉಷ್ಣ ವಿಕಸನ ಭೌತಶಾಸ್ರದ ವಿವಿಧ ನೋಟಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸಹಾಯವಾಗುತ್ತದೆ.

ರಾಸಾಯನಿಕ ಸಮೀಕರಣ

ಬದಲಾಯಿಸಿ

ಸಾಮಾನ್ಯವಾಗಿ, ಜಲಜನಕದಲ್ಲಿ ಹೈಡ್ರೊಕಾರ್ಬನ್‌ನ ಸ್ಟಾಕಿಯೊಮೆಟ್ರಿಕ್ ದಹನದ ರಾಸಾಯನಿಕ ಸಮೀಕರಣವು ಈ ಕೆಳಗಿನಂತಿದೆ.

 

ಉದಾಹರಣೆಗೆ, ಪ್ರೊಪೇನ್‌ನ ದಹನವು

 

ಸಾಮಾನ್ಯವಾಗಿ, ಆಮ್ಲಜನಕದಲ್ಲಿನ ಹೈಡ್ರೊಕಾರ್ಬನ್‌ನ ಸ್ಟಾಕಿಯೊಮೆಟ್ರಿಕ್ ಅಪೂರ್ಣ ಉಷ್ಣ ವಿಕಸನದ ರಾಸಾಯನಿಕ ಸಮೀಕರಣವು ಈ ಕೆಳಗಿನಂತಿದೆ:

 

ಉದಾಹರಣೆಗೆ,ಪ್ರೊಪೇನ್‌ನ ಅಪುರ್ಣ ಉಷ್ಣ ವಿಕಸನವು:

 

ಆಮ್ಲಜನಕದಲ್ಲಿನ ಹೈಡ್ರೊಕಾರ್ಬನ್‌ನ ಉಷ್ಣ ವಿಕಸನದ ಸರಳ ಪದ ಸಮೀಕರಣವು:

 

ಆಮ್ಲಜನಕದ ಮೂಲಾಧಾರವಾಗಿ ವಾಯುವನ್ನು ಉಪಯೋಗಿಸಿ ಉಷ್ಣ ವಿಕಸನ ವಾದರೆ, ನೈಟ್ರೋಜೆನ್‌ನ್ನು ಸಮೀಕರಣಕ್ಕೆ ಸೇರಿಸಬಹುದು, ಇದು ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ತೋರಿಸುವುದಿಲ್ಲವಾದ್ದರಿಂದ, ಪ್ಲೂ ವಾಯುವಿನ ಸಂಯೋಜನೆಯನ್ನು ತೋರಿಸಲು ಸೇರಿಸಲಾಗುವುದು:

 

ಉದಾಹರಣೆಗೆ, ಪ್ರೊಪೇನ್‌ನ ದಹನವಾಗುವಿಕೆಯು:

 

ಗಾಳಿಯಲ್ಲಿನ ಹೈಡ್ರೊಕಾರ್ಬನ್‌ನ ಉಷ್ಣ ವಿಕಸನದ ಸರಳ ಪದ ಸಮೀಕರಣವು:

 

ಮಿತಿಮೀರಿದ ಆಮ್ಲಜನಕವಿದ್ದಾಗ ನೈಟ್ರೋಜೆನ್ ಸಹ ಆಮ್ಲಜನಕದೊಂದಿಗೆ ಸಂಯುಕ್ತವಾಗಬಹುದಾಗಿದೆ. ಇದರ ಪ್ರತಿಕ್ರಿಯೆಯು ಅಧಿಕ ಉಷ್ಣತೆಯಲ್ಲಿ ಮಾತ್ರ ಉಷ್ಣಗತಿ ಶಾಸ್ತ್ರಕ್ಕನುಗುಣವಗಿ ಉಪಯುಕ್ತವಾಗಿರುತ್ತದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿನ ಒಕ್ಕೂಟಗಳೆರಡು ನೈಟ್ರೋಜನ್ ಆಕ್ಸೈಡ್ ಹೊರಸೂಸುವಿಕೆಗಳಿಗೆ ಮಿತಿಗಳನ್ನು ಹೇರುವ ಯೋಜನೆಯಲ್ಲಿವೆ.

ಇಂಧನಗಳು

ಬದಲಾಯಿಸಿ

ದ್ರವ ಇಂಧನಗಳು

ಬದಲಾಯಿಸಿ

ಆಕ್ಸಿಡೈಸಿಂಗ್ ವಾತಾವರಣದಲ್ಲಿ ದ್ರವ ಇಂಧನದ ಉಷ್ಣ ವಿಕಸನವು ಅನಿಲ ಹಂತದಲ್ಲಿ ಸಂಭವಿಸುತ್ತದೆ. ದ್ರವ ಅಲ್ಲ, ಇದು ಹಬೆ ಉರಿಯುವುದಾಗಿದೆ. ಆದ್ದರಿಂದ, ದ್ರವವು ಸಾಮಾನ್ಯವಾಗಿ ಒಂದು ಉಷ್ಣಾಂಶಕ್ಕಿಂತ ಹೆಚ್ಚಾದಾಗ ಬೆಂಕಿ ಹತ್ತಿಕೊಳ್ಳುತ್ತವೆ: ಅದರ ಫ್ಲ್ಯಾಶ್ ಪಾಯಿಂಟ್. ದ್ರವದ ಫ್ಲ್ಯಾಶ್ ಪಾಯಿಂಟ್ ಎಂದರೆ, ಅದು ಗಾಳಿಯೊಂದಿಗೆ ಸೇರಿ ಉರಿಯಬಹುದಾದ ಅತಿ ಕಡಿಮೆ ಉಷ್ಣಾಂಶ. ಇದು ದ್ರವವು ಉರಿದು ಆವಿಯಾಗಲು ಪ್ರಾರಂಭಿಸುವ ಕನಿಷ್ಟ ಉಷ್ಣಾಂಶ ಕೂಡಾ ಆಗಿದೆ.

ಘನ ಇಂಧನ

ಬದಲಾಯಿಸಿ

ಉಷ್ಣ ವಿಕಸನ ಪ್ರಕ್ರಿಯೆಯು ಮೂರು ವಿವಿಧ ಆದರೆ ಒಂದರೆ ಮೇಲೊಂದು ಬರುವಂತ ಹಂತಗಳನ್ನು ಹೊಂದಿದೆ:

  • ಕಾಯಿಸುವುದಕ್ಕಿಂತ ಮೊದಲಿನ ಹಂತ , ಉರಿಸದೆ ಇರುವ ಇಂಧನವನ್ನು ಅದರ ಫ್ಲ್ಯಾಶ್ ಪಾಯಿಂಟ್‌ವರೆಗೆ ಬಿಸಿ ಮಾಡಿ ನಂತರ ಅದರ ಫೈರ್ ಪಾಯಿಂಟ್‌ವರೆಗೆ ಉರಿಸಿದಾಗ. ಡ್ರೈ ಡಿಸ್ಟಿಲೇಶನ್‌ನಲ್ಲಿ ಹೊರಸೂಸುವಂತಹ ಸುಲಭವಾಗಿ ಉರಿಯಬಲ್ಲಂತಹ ಅನಿಲಗಳು ಉತ್ಪತ್ತಿಯಾಗುತ್ತವೆ.
  • ಭಟ್ಟಿ ಇಳಿಸುವಿಕೆಯ ಹಂತ ಅಥವಾ ಅನಿಲದ ಹಂತ , ದಹಿಸಬಲ್ಲ ಅನಿಲಗಳು ಆಮ್ಲಜನಕದೊಂದಿಗೆ ಸೇರಿ ಉರಿಯುವಾಗ, ಶಾಖ ಮತ್ತು ಬೆಳಕಿನ ರೂಪದಲ್ಲಿ ಶಕ್ತಿಯ ಬಿಡುಗಡೆಯಾಗುತ್ತದೆ. ಜ್ವಾಲೆಗಳು ಕಾಣಿಸುತ್ತವೆ. ದಹಿಸುವಿಕೆಯಿಂದಾದ ಶಾಖದ ವರ್ಗಾವಣೆಯಾಗುತ್ತದೆ, ಘನವು ಉರಿಯಬಲ್ಲಂತಹ ಆವಿಯನ್ನು ಹೊರಸೂಸುತ್ತದೆ.
  • ಕಲ್ಲಿದ್ದಲು ಹಂತ ಅಥವಾ ಘನ ಹಂತ , ಒಂದು ವಸ್ತುವಿನಿ೦ದ ಬಿಡುಗಡೆಯಾಗುವ ದಹಿಸುವ ಗಾಳಿಯ ಪ್ರಮಾಣವು ಸ್ಥಿರ ಇ೦ಧನದ ಉಪಸ್ಥಿತಿಯಲ್ಲಿ ಅತೀ ಕಡಿಮೆಯಾಗುತ್ತದೆ ಹಾಗು ಸುಟ್ಟುಹೋದ ಇ೦ಧನವು ಹೆಚ್ಚಾಗಿ ದಹಿಸುವುದಿಲ್ಲ ಆದರೆ ಹೊಳೆಯುತ್ತದೆ ಹಾಗು ನಂತರದಲ್ಲಿ ಪ್ರಕಾಶಿಸುತ್ತದೆ.
 
ಪಾಲಿಮರ್ ದಹಿಸುವಿಕೆಯ ಒಂದು ಜನರಲ್ ಸ್ಕೀಮ್

ಪ್ರತಿಕ್ರಿಯೆಯ ವ್ಯವಸ್ಥೆ

ಬದಲಾಯಿಸಿ

ಆಮ್ಲಜನಕದ ಉಷ್ಣ ವಿಕಸನವು ಒಂದು ಮೂಲಾ೦ಕುರ ಸರಪಳಿಯ ಪ್ರತಿಕ್ರಿಯೆಯಾಗಿದೆ ಅಲ್ಲದೆ ಇದರಲ್ಲಿ ವಿವಿಧ ರೀತಿಯ ಮೂಲಾ೦ಕುರಗಳು ಪಾಲ್ಗೊ೦ಡಿರುತ್ತದೆ. ಈ ಪ್ರತಿಕ್ರಿಯೆಯ ಆರ೦ಭದಲ್ಲಿ ಬೇಕಾದ೦ತಹ ಹೆಚ್ಚಿನ ಶಕ್ತಿಯನ್ನು ಅಸಾಮಾನ್ಯ ರಚನೆಯಾದ ಎರಡು ಆಮ್ಲಜನಕದ ಸ೦ಯುಕ್ತಗಳಿ೦ದ ಪಡೆಯುತ್ತದೆ. ಎರಡು ಆಮ್ಲಜನಕದ ಸ೦ಯುಕ್ತಗಳು ಅತೀ ಕಡಿಮೆ-ಶಕ್ತಿಯ ರಚನೆಯನ್ನು ಹೊ೦ದಿರುವುದರಿ೦ದ ಸ್ಥಿರವಾಗಿರುತ್ತದೆ, ಆದರೆ ಟ್ರಿಪ್ಲೆಟ್ ಸ್ಪಿನ್ ಸ್ಟೇಟ್‌ನಲ್ಲಿ ಎರಡು ಮೂಲಾ೦ಕುರಗಳು ಸಾಮಾನ್ಯವಾಗಿ ಪ್ರತಿಕ್ರಿಯೆಯನ್ನು ತೋರಿಸುವುದಿಲ್ಲ. ಸ೦ಯುಕ್ತಗಳ ಜೋಡಣೆಯನ್ನು ವರ್ಣಿಸಲು, ಮೂರು ಎಲೆಕ್ಟ್ರಾನ್ ಜೋಡನೆಗಳನ್ನು ಹಾಗು ಎರಡು ಪ್ರತಿ ಜೋಡನೆಗಳುಳ್ಳ ಎಲೆಕ್ಟ್ರಾನ್‌ಗಳನ್ನು ಬಳಸಲಾಗುತ್ತದೆ, ಅಲ್ಲದೆ ಮೊದಲು ಅದರ ಸ೦ಯುಕ್ತಗಳನ್ನು ಸ್ಪಿನ್‌ಗಳಾಗಿ ಜೋಡಿಸಿ ನಂತರ ಕೋನಗಳುಳ್ಳ ಮೊಮೆ೦ಟಮ್ ಅನ್ನು ಸ೦ಪೂರ್ಣವಾಗಿ ಸೊನ್ನೆಗಿ೦ತ ಕಡಿಮೆಗೆ ತರಬೇಕು. ಬೇರೊ೦ದು ರೀತಿಯಲ್ಲಿ, ಬಹಳಷ್ಟು ಇ೦ಧನಗಳು ಸಾಮಾನ್ಯವಾಗಿ ಏಕರೂಪದಲ್ಲಿ, ಜೋಡಣೆಯಾದ ಸ್ಪಿನ್‌ಗಳಲ್ಲಿ ಇರುತ್ತವೆ, ಹಾಗು ಅವುಗಳ ಕೋನಗಳುಳ್ಳ ಮೊಮೆ೦ಟಮ್ ಪೂರ್ಣವಾಗಿ ಸೊನ್ನೆಯಾಗಿರುತ್ತದೆ. ಸಾಮಾನ್ಯವಾಗಿ ಎರಡರ ನಡುವಿನ ಪ್ರತಿಕ್ರಿಯೆ ಯಾ೦ತ್ರಿಕವಾಗಿ ಬೇಕಾದ ಮಿತಿಯಲ್ಲಿರುತ್ತದೆ, ಅ೦ದರೆ "ಫಾರ್ಬಿಡನ್ ಟ್ರಾನ್ಸಿಶನ್", ಅ೦ದರೆ ಇದರ ಸಾಧ್ಯತೆ ಸಾಕಷ್ಟು ಕಡಿಮೆ ಸ೦ಭವನೀಯವಾಗಿರುತ್ತದೆ. ಉಷ್ಣ ವಿಕಸನವನ್ನು ಆರ೦ಭಿಸುವಾಗ, ಎರಡು ಆಮ್ಲಜನಕದ ಸಯು೦ಕ್ತಗಳನ್ನು ಸ್ಪಿನ್-ಜೋಡಣೆಯ ಸ್ಥಿತಿಗೆ, ಅಥವಾ ಏಕರೂಪದ ಆಮ್ಲಜನಕ ವಾಗಿ ಪರಿವರ್ತಿಸಲು ಶಕ್ತಿಯ ಅವಶ್ಯಕತೆ ಇರುತ್ತದೆ. ಇದರ ನಡುವಿನ ಮಧ್ಯವರ್ತಿಯು ಹೆಚ್ಚು ಪ್ರತಿಕ್ರಿಯಾತ್ಮಕವಾಗಿರುತ್ತದೆ. ಶಕ್ತಿಯನ್ನು ಶಾಖದ ರೂಪದಲ್ಲಿ ನೀಡಲಾಗುತ್ತದೆ. ಪ್ರತಿಕ್ರಿಯೆಯು ಶಾಖವನ್ನು ಉತ್ಪಾದಿಸುವುದರಿ೦ದ, ಕ್ರಿಯೆಯು ಮು೦ದುವರಿಯುತ್ತಿರುತ್ತದೆ. ಹೈಡ್ರೋಕಾರ್ಬನ್‌ನ ದಹಿಸುವಿಕೆಯ ಆರ೦ಭವು ಸಾಮಾನ್ಯವಾಗಿ ಹೈಡ್ರೋಜನ್ ಕಣದ ರಚನೆಯ (ಆದರೆ ಪ್ರೋಟಾನ್ ರಚನೆಯಿ೦ದಲ್ಲ) ಇ೦ಧನದಿ೦ದ ಆಮ್ಲಜನಕವಾಗಿ ಪರಿವರ್ತನೆಯಾಗುವ ಮೂಲಕ ಹೈಡ್ರೋಪೆರಾಕ್ಸೈಡ್ (HOO) ಮೂಲಾ೦ಕುರಗಳನ್ನು ಬಿಡುಗಡೆಗೊಳಿಸುತ್ತದೆ. ಇದು ನಂತರದಲ್ಲಿ ಪ್ರತಿಕ್ರಿಯಿಸಿ ಹಡ್ರೋಪೆರಾಕ್ಸೈಡ್‌ಗಳನ್ನು ಬಿಡುಗಡೆಗೊಳಿಸುತ್ತದೆ, ಅಲ್ಲದೆ ಹೈಡ್ರೋಕ್ಸಿಲ್ ಮೂಲಾ೦ಕುರಗಳನ್ನು ನೀಡುತ್ತದೆ. ಈ ವ್ಯವಸ್ಥೆಯಲ್ಲಿ ಅತೀ ಹೆಚ್ಚಿನ ವಿವಿಧ ರೀತಿಯ ಇ೦ಧನ ಮೂಲಾ೦ಕುರಗಳನ್ನು ಹಾಗು ಆಕ್ಸಿಡೈಸಿ೦ಗ್ ಮೂಲಾ೦ಕುರಗಳನ್ನು ಬಿಡುಗಡಗೊಳಿಸುತ್ತದೆ. ಆಕ್ಸಿಡೈಸಿ೦ಗ್ ವರ್ಗಗಳು ಏಕರೂಪದ ಆಮ್ಲಜನಕವನ್ನು, ಹೈಡ್ರಾಕ್ಸಿಲ್, ಮೊನಾಟೊಮಿಕ್ ಆಮ್ಲಜನಕ, ಹಾಗು ಹೈಡ್ರೋಪೆರಾಕ್ಸಿಲ್‌ ಗಳನ್ನು ಒಳಗೊ೦ಡಿರುತ್ತದೆ. ಆತರಹದ ಮದ್ಯವರ್ತಿಗಳು ಕಡಿಮೆ ಕಾಲದವರೆಗೆ ಜೀವಿಸುತ್ತವೆ ಹಾಗು ಅವುಗಳನ್ನು ಪ್ರತ್ಯೇಕಿಸಲು ಸಾಧ್ಯವಾಗುವುದಿಲ್ಲ. ಹೇಗಾದರೂ, ಮೂಲಾ೦ಕುರಗಳಲ್ಲದ ಮಧ್ಯವರ್ತಿಗಳು ಸ್ಥಿರವಾಗಿರುತ್ತವೆ ಹಾಗು ಅಪೂರ್ಣ ಉಷ್ಣ ವಿಕಸನದಲ್ಲಿ ಇವುಗಳು ಉತ್ಪತ್ತಿಯಾಗುತ್ತವೆ. ಇಥನಾಲ್ನ ಉಷ್ಣ ವಿಕಸನದಲ್ಲಿ ಉತ್ಪತ್ತಿಯಾಗುವ ಅಸಿಟಾಲ್ಡಿಹೈಡ್ ಒಂದು ಉದಾಹರಣೆಯಾಗಿದೆ. ಕಾರ್ಬನ್ ಹಾಗು ಹೈಡ್ರೋಕಾರ್ಬನ್‌ನ ಉಷ್ಣ ವಿಕಸನದಲ್ಲಿ ಉತ್ಪತ್ತಿಯಾಗುವ ಮಧ್ಯವರ್ತಿ ಕಾರ್ಬನ್ ಮಾನಾಕ್ಸೈಡ್,ಇದು ವಿಷಕಾರಿ ಅನಿಲವಾಗಿದೆ ಅಲ್ಲದೆ, ಅದು ಸಿನ್‌ಗ್ಯಾಸ್ ಅನ್ನು ಆರ್ಥಿಕವಾಗಿ ಉತ್ಪತ್ತಿ ಮಾಡುವುದರಲ್ಲಿ ಸಹಾಯಕವಾಗಿರುವುದರಿ೦ದ ಅದಕ್ಕೆ ಒಂದು ವಿಶಿಷ್ಟವಾದ ಪ್ರಾಮುಖ್ಯತೆ ಇದೆ. ಘನ ಇ೦ಧನಗಳು ಸಹ ಪೈರೋಲೈಸಿಸ್ ಪ್ರತಿಕ್ರಿಯೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಡೈಸ್ಡ್ ಹಾಗು ಅನಿಲ ಇ೦ಧನಗಳನ್ನು ಹೆಚ್ಚಾಗಿ ಉತ್ಪಾದಿಸುತ್ತದೆ. ಈ ಪ್ರತಿಕ್ರಿಯೆಗಳು ಸಾಮಾನ್ಯವಾಗಿ ಎ೦ಡೊಥರ್ಮಿಕ್ ಹಾಗು ಸ್ಥಿರವಾದ ಶಕ್ತಿಯ ಬಳಕೆಯನ್ನು ಉಷ್ಣ ವಿಕಸನ ಪ್ರತಿಕ್ರಿಯೆಗಳಿ೦ದ ಪಡೆಯುತ್ತವೆ. ಆಮ್ಲಜನಕದ ಕೊರತೆ ಅಥವಾ ಇನ್ನಿತರ ಕಡಿಮೆ ಮಟ್ಟದ ಕಾರಣಗಳಿ೦ದಾಗಿ ಹಾನಿಕಾರಕ ಹಾಗು ಕ್ಯಾನ್ಸರ್ ಜನಕ ಉತ್ಪಾದನೆಗಳನ್ನು ಪೈರೋಲಿಸಿಸ್ ನ ಕ್ರಿಯೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾಗು ಕಪ್ಪು ಹೊಗೆಯನ್ನು ಉತ್ಪಾದಿಸುತ್ತದೆ.

ಉಷ್ಣಾಂಶ

ಬದಲಾಯಿಸಿ

ಉಷ್ಣ ವಿಕಸನ ಕ್ರಿಯೆಯ ಸರಿಯಾದ ಕಾರಣಗಳಾದ, ಅ೦ದರೆ ಅಡಿಯಾಬಿಟಿಕ್‌ನ ಸಮ್ಮುಖದಲ್ಲಿ (ಅ೦ದರೆ, ಶಾಖದ ನಷ್ಟ ಅಥವಾ ಉತ್ಪಾದನೆ ಇರುವುದಿಲ್ಲ) ಪೂರ್ಣ ಉಷ್ಣ ವಿಕಸನ ಕ್ರಿಯೆಯಲ್ಲಿ, ಅಡಿಯಾಬಿಟಿಕ್ ಉಷ್ಣ ವಿಕಸನದ ಉಷ್ಣಾ೦ಶವನ್ನು ಕ೦ಡುಹಿಡಿಯಬಹುದಾಗಿದೆ. ಫಸ್ಟ್ ಲಾ ಆಫ್ ಥರ್ಮೋಡೈನಮಿಕ್ಸ್‌ನ ಸೂತ್ರದ ಮುಖಾ೦ತರ ಉಷ್ಣಾ೦ಶವನ್ನು ಕ೦ಡುಹಿಡಿಯಬಹುದಾಗಿದೆ ಹಾಗು ಉಷ್ಣ ವಿಕಸನ ದ ಶಾಖ ದಿ೦ದ ಇ೦ಧನವನ್ನು ಸ೦ಪೂರ್ಣವಾಗಿ ದಹಿಸಬಹುದಾಗಿದೆ, ಅಲ್ಲದೆ ವಾಯು ಅಥವಾ ಆಮ್ಲಜನಕದ ಉಷ್ಣವಿಕಸನ, ಹಾಗು ಫಲಿತಾ೦ಶ ಉತ್ಪಾದಕ ವಾಯುವಿನ ಉಷ್ಣ (ಸಾಮಾನ್ಯವಾಗಿ ಇದನ್ನು ಫ್ಲು ಗ್ಯಾಸ್ ಎಂದು ಕರೆಯಲಾಗುತ್ತದೆ) ವಿಕಸನದಲ್ಲು ಸಹ ಇದರ ಬಳಕೆಯಾಗುತ್ತದೆ. ಪಳೆಯುಳಿಕೆಗಳ ಇ೦ಧನಗಳು ಗಾಳಿಯೊಡನೆ ದಹಿಸಿದಾಗ, ಊಷ್ಣವಿಕಸನದ ಉಷ್ಣಾ೦ಶವು ಈ ಕೆಳಕ೦ಡವುಗಳ ಮೇಲೆ ಅವಲ೦ಬಿತವಾಗಿರುತ್ತದೆ:

ಅಡಿಯಾಬಾಟಿಕ್‌ನ ಉಷ್ಣ ವಿಕಸನದ ಉಷ್ಣಾ೦ಶವು (ಅಡಿಯಾಬಾಟಿಕ್ ಫ್ಲೇಮ್ ಉಷ್ಣಾ೦ಶ ವೆ೦ದು ಸಹ ಹೆಸರಿಸಲಾಗುತ್ತದೆ) ಹೆಚ್ಚಿನ ಶಾಖ ದೊರೆತಾಗ ಹೆಚ್ಚಾಗುತ್ತದೆ ಹಾಗು ಒಳಭಾಗದ ಗಾಳಿ ಹಾಗು ಇ೦ಧನದ ಉಷ್ಣಾ೦ಶ ಹಾಗು ಸ್ಟಾಕಿಯೋಮೆಟ್ರಿಕ್ ಗಾಳಿಯ ಪ್ರಮಾಣದ ಮೇಲೂ ಸಹ ಅದು ಅವಲ೦ಬಿಸಿರುತ್ತದೆ. ಸಾಮಾನ್ಯವಾಗಿ,ಕಲ್ಲಿದ್ದಲಿನ ಅಡಿಯಾಬಾಟಿಕ್ ಉಷ್ಣ ವಿಕಸನದ ಉಷ್ಣಾ೦ಶವು ಸುಮಾರು 2,200 °C (3,992 °F)ರಷ್ಟು (ಗಾಳಿಯ ಒಳಭಾಗ ಹಾಗು ಇ೦ಧನದ ಸುತ್ತುವರಿದ ಉಷ್ಣಾ೦ಶಗಳು ಸುಮಾರು  ), ಹಾಗು ಎಣ್ಣೆಗೆ ಸುಮಾರು 2,150 °C (3,902 °F) ಹಾಗು ನೈಸರ್ಗಿಕ ಗಾಳಿಗೆ ಸುಮಾರು 2,000 °C (3,632 °F)ರಷ್ಟಿರುತ್ತದೆ. ಕಾರ್ಖಾನೆಗಳ ದಹಿಸಿದ ಶಾಖೋತ್ಪನ್ನಗಳು, ಶಕ್ತಿ ಕೇ೦ದ್ರಗಳಲ್ಲಿನ ಹಬೆಯ ಉತ್ಪಾದಕಗಳಲ್ಲಿ, ಹಾಗು ದೊಡ್ಡ ಗಾಳಿಯ ಟರ್ಬೈನ್ಸ್ಗಳಲ್ಲಿ,ಬಳಕೆಯಾದ ಸ್ಟಾಕ್ಯೋಮೆಟ್ರಿಕ್ ಉಷ್ಣವಿಕಸನದ ಗಾಳಿಯನ್ನು ಅಳಿಯಲು ಸಾಮಾನ್ಯವಾಗಿ ಹೆಚ್ಚಿನ ಉಷ್ಣ ವಿಕಸನದ ಗಾಳಿಯ ಪ್ರಮಾಣ ವನ್ನು ಬಳಸಲಾಗುತ್ತದೆ. 15 ಪ್ರತಿಶತಃ ಹೆಚ್ಚಿನ ಉಷ್ಣ ವಿಕಸನದ ಗಾಳಿಯೆ೦ದರೆ, 15 ಪ್ರತಿಶತಃ ಹೆಚ್ಚಿನ ಮಟ್ಟದಲ್ಲಿ ಸ್ಟಾಕಿಯೋಮೆಟ್ರಿಕ್ ನ ಗಾಳಿಯು ಬಳಕೆಯಾಗಿದೆ ಎ೦ದರ್ಥ.

ಅಸ್ಥಿರತೆಗಳು

ಬದಲಾಯಿಸಿ

ಉಷ್ಣ ವಿಕಸನದ ಅಸ್ಥಿರತೆಗಳು ನಿರ್ಧಿಷ್ಟವಾಗಿ ಉಷ್ಣ ವಿಕಸನ ದ ಕೋಣೆಯಲ್ಲಿನ ತೀವ್ರತರದ ಒತ್ತಡದ ತೂಗಾಟದಿ೦ದ ಏರ್ಪಟ್ಟಿರುತ್ತದೆ. ಈ ಒತ್ತಡದ ತೂಗಾಟಗಳು 180 dB ಅಷ್ಟು ಹೆಚ್ಚಾಗಿಯೂ ಸಹ ಇರಬಹುದು, ಹಾಗು ಹೆಚ್ಚಿನ ಸಮಯದವರೆಗೂ ನಿಯತಕಾಲಿಕ ಒತ್ತಡಕ್ಕೆ ಹಾಗು ಥರ್ಮಲ್ ಭಾರಕ್ಕೆ ಒಡ್ದಿದಾಗ ಇ೦ಜಿನ್ ರಚನೆಗಳ ಜೀವಿತಾವಧಿ ಕಡಿಮೆಯಾಗುತ್ತದೆ. ಸ್ಯಾಟ್ರನ್ ವಿ ಪ್ರೋಗ್ರಾಮ್ ನಲ್ಲಿ ಬಳಕೆಯಾದ F1 ರೀತಿಯ ರಾಕೆಟ್ ನಲ್ಲಿ,ಅಸ್ಥಿರತೆಯಿ೦ದಾಗಿ ಉಷ್ಣ ವಿಕಸದ ಕೊಠಡಿಯಲ್ಲಿ ಹಾಗು ಅದರ ಸುತ್ತಲಿನ ರಚನೆಗಳಲ್ಲಿ ಹೆಚ್ಚಿನ ಹಾನಿ ಉ೦ಟಾಗುತ್ತದೆ. ಈ ಸಮಸ್ಯೆಯನ್ನು ಇ೦ಧನಗಳ ಇ೦ಜೆಕ್ಟರ್ ಗಳನ್ನು ಮರು ವಿನ್ಯಾಸಗೊಳಿಸುವುದರ ಮೂಲಕ ಪರಿಹಾರ ಮಾಡಲಾಯಿತು. ದ್ರವ ಜೆಟ್ ಇ೦ಜಿನ್ ಗಳಲ್ಲಿ ದ್ರವದ ಗಾತ್ರ ಹಾಗು ಹ೦ಚುವಿಕೆಯನ್ನು ಅಸ್ಥಿರತೆಯನ್ನು ಕೃಶಗೊಳಿಸಬಹುದಾಗಿದೆ. ಉಷ್ಣ ವಿಕಸನದ ಅಸ್ಥಿರತೆಗಳು ತಳ ಭಾಗದಲ್ಲಿ ಕ೦ಡುಬರುವ ಗಾಳಿಯ ಟರ್ಬೈನ್ ಗಳಲ್ಲಿ ಹೆಚ್ಚಿರುತ್ತದೆ ಕಾರಣವೆ೦ದರೆ NOx ನ ಬಿಡುಗಡೆಯಾಗಿದೆ. ಇದರ ಪ್ರಮುಖ ಉದ್ದೇಶವೆ೦ದರೆ, ಬಾಗಿದ, 1ಕ್ಕಿ೦ತ ಕಡಿಮೆ ಪ್ರಮಾಣದಲ್ಲಿ ಅಥವಾ ಅದರ ಸರಿಸಮವಾಗಿ ಉಷ್ಣ ವಿಕಸನದ ಉಷ್ಣಾ೦ಶವನ್ನು ಕಡಿಮೆ ಮಾಡುವುದು ಹಾಗು NOx ನ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದಾಗಿದೆ: ಹೇಗಾದರೂ, ಉಷ್ಣ ವಿಕಸನದ ಕ್ರಿಯೆ ನಡಿಯುವಾಗಿನ ಬಾಗುವಿಕೆ ಉಷ್ಣ ವಿಕಸನ ದ ಅಸ್ಥಿರತೆಯನ್ನು ಅತಿ ಸಂವೇದನಶೀಲವಾಗಿ ಮಾಡುತ್ತದೆ. ರೇಲಿಗ್ ಕ್ರೈಟೀರಿಯ ಥರ್ಮೋಅಕೌಸ್ಟಿಕ್ ಉಷ್ಣ ವಿಕಸನ ದ ಅಸ್ಥಿರತೆಯನ್ನು ಪರಾಮರ್ಶಿಸಲು ಸಹಕಾರಿಯಾಗಿದೆ ಹಾಗು ಒಂದು ಪೂರ್ಣ ಅಸ್ಥಿರತೆಯ ಸುತ್ತಿನಿ೦ದ ರೇಲಿಗ್ ಇ೦ಡೆಕ್ಸ್ ಅನ್ನು ಕ೦ಡು ಹಿಡಿಯಬಹುದಾಗಿದೆ:[ಸೂಕ್ತ ಉಲ್ಲೇಖನ ಬೇಕು]

 

ಇದರಲ್ಲಿ q' ಶಾಖದ ಬಿಡುಗಡೆಯ ಪ್ರಮಾಣವನ್ನು ಹಾಗು p' ಒತ್ತಡದ ಏರಿಳಿತವನ್ನು ಸೂಚಿಸುತ್ತದೆ.[][] ಶಾಖದ ಬಿಡುಗಡೆಯು ಒತ್ತಡದ ತೂಗಾಟದ ಸಮಯದಲ್ಲಿ ಕ೦ಡು ಬ೦ದರೆ, ರೇಲಿಗ್ ಇ೦ಡೆಕ್ಸ್ ಧನಾತ್ಮಕವಾಗಿರುತ್ತದೆ ಹಾಗು ಥರ್ಮೋ ಅಕೌಸ್ಟಿಕ್‌ನ ಗಾತ್ರದ ಅಸ್ಥಿರತೆ ಹೆಚ್ಚಾಗುತ್ತದೆ. ಇನ್ನೊ೦ದು ರೀತಿಯಲ್ಲಿ, ರೇಲಿಗ್ ಇ೦ಡೆಕ್ಸ್ ಋಣಾತ್ಮಕ ವಾಗಿದ್ದರೆ, ಥರ್ಮೋ ಅಕೌಸ್ಟಿಕ್ ನಲ್ಲಿ ಆದ್ರತೆ ಕ೦ಡು ಬರುತ್ತದೆ. ರೇಲಿಗ್ ಕ್ರೈಟೀರಿಯನ್ ಥರ್ಮೋಅಕೌಸ್ಟಿಕ್ ನ ಅಸ್ಥಿರತೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಶಾಖವನ್ನು, ಅ೦ದರೆ 180 ಡಿಗ್ರೀ ಯಷ್ಟು ಕ್ರಿಯೆಯಿ೦ದ ಹೊರಸೂಸುವುದರ ಮೂಲಕ, ಅಲ್ಲದೆ ಒತ್ತಡದ ತೂಗಾಟದ ಆವರ್ತನವನ್ನು ಸ್ಥಿರವಾಗಿ ಪಾಲಿಸುವುದರ ಮೂಲಕ ನಿಯ೦ತ್ರಿಸುತ್ತದೆ. ಇದು ರೇಲಿಗ್ ಇ೦ಡೆಕ್ಸ್ ಅನ್ನು ಕಡಿಮೆ ಮಾಡುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಇವನ್ನೂ ಗಮನಿಸಿ

ಬದಲಾಯಿಸಿ

ಆಕರಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2010-04-23. Retrieved 2010-08-15.
  2. "ಆರ್ಕೈವ್ ನಕಲು". Archived from the original on 2011-07-21. Retrieved 2010-08-15.
  3. ಎ. ಎ. ಪುಟ್ನಮ್ ಮತ್ತು ಡಬ್ಲು. ಸಿ. ಡೆನ್ನಿಸ್ (1953) "ಆರ್ಗನ್-ಪೈಪ್ ಆಸಿಲೇಶನ್ಸ್ ಇನ್ ಎ ಫ್ಲೇಮ್-ಫಿಲ್ಡ್ ಟ್ಯೂಬ್," ಫೋರ್ತ್ ಸಿಂಪೋಸಿಯಮ್ (ಇಂಟರ್ನ್ಯಾಷನಲ್) ಆನ್ ಉಷ್ಣ ವಿಕಸನ , ದಿ ಕಂಬಶನ್ ಇನ್‌ಸ್ಟಿಟ್ಯೂಟ್ಷ್ಣ, ಪುಟಗಳು 566-574.
  4. ಇ. ಸಿ. ಫರ್ನಾಂಡಿಸ್ ಮತ್ತು ಎಮ್. ವಿ. ಹೇಟರ್, “ಅನ್‌ಸ್ಟೆಡಿ ಫ್ಲೇಮ್ಸ್ ಅಂಡ್ ದಿ ರೇಲೀಹ್ ಕ್ರೈಟೀರಿಯನ್” ಎಫ್. ಕುಲಿಕ್, ಎಮ್. ವಿ. ಹೇಟರ್, ಮತ್ತು ಜೆ. ಎಚ್. ವ್ಹೈಟ್ಲಾ, ed.s, ಅನ್‌ಸ್ಟೆಡಿ ಕಂಬಶನ್ (ಡಾರ್‌ಡ್ರೆಚ್ಟ್, ದಿ ನೆದರ್ಲ್ಯಾಂಡ್ಸ್: ಕ್ಲುವೆರ್ ಅಕಾಡೆಮಿಕ್ ಪಬ್ಲಿಶರ್ಸ್, 1996), ಪುಟ 4. ಆನ್ಲೈನ್ ಇಲ್ಲಿ ಲಭ್ಯವಿದೆ: https://books.google.com/books?id=Je_hG6UfnogC&printsec=copyright&dq=rayleigh+thermoacoustic+&ie=ISO-8859-1&source=gbs_toc_s&cad=1#PPA4,M1


ಬಾಹ್ಯ ಕೊಂಡಿಗಳು

ಬದಲಾಯಿಸಿ