ಉಷೆ ಟಿವಿ
ಉಷೆ ಟಿವಿ - ಕನ್ನಡದ ಪ್ರಮುಖ ಖಾಸಗಿ ಕಿರುತೆರೆ ವಾಹಿನಿಗಳಲ್ಲೊಂದು. ಕನ್ನಡದೇ ಆದ ಉದಯ ಟಿವಿ, ತಮಿಳಿನ ಸನ್ ಟಿವಿ, ಮಲಯಾಳಂನ ಸೂರ್ಯ ಟಿವಿ, ತೆಲುಗಿನ ತೇಜ ಟಿವಿ ವಾಹಿನಿಗಳ ಸಹಯೋಗದೊಂದಿಗೆ ಉದಯ ಟಿವಿ ವಾಹಿನಿಯು ಕಾರ್ಯ ನಿರ್ವಹಿಸುತ್ತಿದೆ. ಈ ವಾಹಿನಿಯಲ್ಲಿ ಕನ್ನಡದ ಚಲನಚಿತ್ರಗಳ ಪ್ರಸಾರಕ್ಕೆ ಮತ್ತು ಚಿತ್ರಗೀತೆಗಳ ಪ್ರಸಾರಕ್ಕೆ ಹೆಚ್ಚಿನ ಒತ್ತುಕೊಡಲಾಗಿದೆ.ಉಷೆ ಟಿವಿ ವಾಹಿನಿಯು ಈಗ "ಉದಯ ಮೂವೀಸ್" ಎಂಬ ಹೆಸರಿನಿಂದ ಕಾರ್ಯ ನಿರ್ವಹಿಸುತ್ತಿದೆ.
ಭಾರತ, ಶ್ರೀಲಂಕಾ, ಸಿಂಗಾಪುರ, ಅಮೇರಿಕ ಮುಂತಾದ ದೇಶಗಳಲ್ಲಿ ಈ ವಾಹಿನಿಯು ಪ್ರಸಾರಗೊಳ್ಳುತ್ತಿದೆ.