Azima tetracantha
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
A. tetracantha
Binomial name
Azima tetracantha

ಗಿಡವು ಕಳ್ಳಿ ಕುರುಚಲು ಸಸ್ಯಾವರಣದಲ್ಲಿ,ಊರಹೊರವಲಯದಲ್ಲಿ ಮತ್ತು ಪಾಳುಕೋಟೆಯ ಗೋಡೆಯ ಮೇಲೆ ಪೊದೆಯಂತೆ ಬೆಳೆಯುತ್ತದೆ. ಕೆಲವು ಕಡೆಗಳಲ್ಲಿ ಇದನ್ನು ಬೇಲಿಗಿಡವಾಗಿಯೂ ಸಹ ಬೆಳೆಸುತ್ತಾರೆ. ಗಿಡದ ಪ್ರತಿ ಗಿಣ್ಣಿನಲ್ಲಿ ೪ ಮುಳ್ಳುಗಳಿರುತ್ತವೆ ಮತ್ತು ಅವುಗಳ ಉದ್ದ ಸುಮಾರು ೩ಸೆ.ಮೀ.ನಷ್ಟಿರುತ್ತದೆ. ಅಂಡಾಕಾರದ ಎಲೆಗಳು ಕಾಂಡದ ಮೇಲೆ ಅಭಿಮುಖವಾಗಿ ಜೋಡಣೆಯಾಗಿರುತ್ತವೆ. ಮಾಸಲು ಬಿಳುಪಿನ ಅತಿ ಸಣ್ಣ ಹೂಗಳು ಸಾಮಾನ್ಯವಾಗಿ ಎಲೆಯ ಕಂಕುಳಿನಲ್ಲಿರುತ್ತವೆ. ಬಲಿತ ಹಣ್ಣುಗಳು ಬಿಳಿ ಮಣಿಗಳಂತಿದ್ದು ನೋಡಲು ಆಕರ್ಷಕವಾಗಿರುತ್ತವೆ. ಈ ಹಣ್ಣುಗಳನ್ನು ತಿನ್ನುತ್ತಾರೆ.

ವೈಜ್ಞಾನಿಕ ಹೆಸರು

ಬದಲಾಯಿಸಿ

ಅಜೀಮ ಟೆಟ್ರಕ್ಯಾಂತ (Azima tetracantha Lamk.)[]

ಸಸ್ಯದ ಕುಟುಂಬ

ಬದಲಾಯಿಸಿ

ಸಾಲ್ವಡೊರೇಸಿ (Salvadoraceae)[]

ಕನ್ನಡದ ಇತರ ಹೆಸರುಗಳು

ಬದಲಾಯಿಸಿ
  • ಇಜಂಗು
  • ಉಪ್ಪುಗೋಜೆ
  • ಎಗಚಿ
  • ಎಸಗಳೆ ಮೋಟು
  • ಬಿಳಿಉಪ್ಪಿಗಿಡ
  • ಸಕಪತ
  • ಹುಲ್ಲು ಸುಂಡೆ

ಇತರ ಭಾಷೆಯ ಹೆಸರುಗಳು

ಬದಲಾಯಿಸಿ

ಉಪಯೋಗಗಳು

ಬದಲಾಯಿಸಿ
  • ಬೇರಿನ ರಸ ಅಥವಾ ಚೂರ್ಣವನ್ನು ಜೇನುತುಪ್ಪದೊಡನೆ ಕಲಸಿ ಇಲಿ ಕಡಿದವರಿಗೆ ಕುಡಿಸುತ್ತಾರೆ.
  • ಬೇರನ್ನು ಅರೆದು ಅಕ್ಕಿ ತೊಳೆದ ನೀರಿನೊಡನೆ ಕುಡಿಸುವುದರಿಂದ ಅಧಿಕ ರಜಸ್ರಾವ ಕಡಿಮೆಯಾಗುತ್ತದೆ.
  • ವಿಷ ಸೇವಿಸಿದಾಗ ವಾಂತಿ ಮಾಡಿಸಬೇಕಾಗಿ ಬಂದಾಗ ಬೇರನ್ನು ಅರೆದು ಬಿಸಿ ನೀರಿನೊಡನೆ ಕುಡಿಸುತ್ತಾರೆ.
  • ಉಪ್ಪಿಮುಳ್ಳುಗಿಡದ ಬೇರು ಅಥವಾ ಕಾಂಡದ ತೊಗಟೆಯನ್ನು ಅರೆದು ಉಗುರು ಸುತ್ತಾಗಿರುವ ಬೆರಳಿಗೆ ಹಾಕಬೇಕು.
  • ಬೇರು,ಎಲೆ ಮತ್ತು ತೊಗಟೆಯ ಕಷಾಯಕ್ಕೆ ಚೂರ್ಣಿಸಿದ ಬಜೆ, ಓಂಕಾಳು ಮತ್ತು ಉಪ್ಪು ಸೇರಿಸಿ ಕುಡಿಯುವುದರಿಂದ ಭೇದಿ ವಾಸಿಯಾಗುತ್ತದೆ.
  • ಎಲೆಯ ಚೂರ್ಣ ಸೇವನೆಯಿಂದ ವಾತ ರೋಗಗಳು ವಾಸಿಯಾಗುತ್ತವೆ.
  • ಎಲೆಯ ಕಷಾಯ ಅಥವಾ ಚೂರ್ಣ ಸೇವನೆಯಿಂದ ಕೆಮ್ಮು ಕಡಿಮೆಯಾಗುತ್ತದೆ.
  • ಉಪ್ಪಿಮುಳ್ಳು ಗಿಡದ ಸ್ವರಸ ಕುಡಿಸುವುದರಿಂದ ಪಾದರಸ ಮತ್ತು ಬಿಳಿಪಾಷಾಣ ಸೇವಿಸಿದ ನಂಜು ಪರಿಹಾರವಾಗುತ್ತದೆ.
  • ಉಪ್ಪಿಮುಳ್ಳಿನ ಸೊಪ್ಪನ್ನು ಸದಾಕಾಲ ತರಕಾರಿಯಂತೆ ಬಳಸುವುದರಿಂದ ಮೂಳೆಗೆ ಸಂಬಂಧಿಸಿದ ರೋಗಗಳು ಬರುವುದಿಲ್ಲ.
  • ದದ್ದು-ಗಂಧೆ ಎದ್ದವರಿಗೆ ಬೆಳಿಗ್ಗೆ ರಾತ್ರಿ ಊಟದೊಡನೆ ಸೊಪ್ಪನ್ನು ಬೇಯಿಸಿ ತಿನ್ನಿಸಬೇಕು.

ಪಶುರೋಗ ಚಿಕಿತ್ಸೆಯಲ್ಲಿ

ಬದಲಾಯಿಸಿ

ಉಪ್ಪಿಮುಳ್ಳಿನ ಸೊಪ್ಪು ಮುಕ್ಕಾಲು ತೊಲ, ಬಾಗೆಮರದ ಚಕ್ಕೆ ಮುಕ್ಕಾಲು ತೊಲ, ಕಾಡುಮೆಣಸಿನ ಸೊಪ್ಪು ಮುಕ್ಕಾಲು ತೊಲ, ಕರಿಮೆಣಸು ಎರಡು ತೊಲ, ಬೆಳ್ಳುಳ್ಳಿ ಒಂದು ತೊಲ ಇವುಗಳನ್ನು ಅರೆದು ಬಿಸಿನೀರಿನಲ್ಲಿ ದಿವಸಕ್ಕೊಮ್ಮೆ ಕುಡಿಸುವುದರಿಂದ ನರಡಿ (ಗುಲ್ಮರೋಗ) ವಾಸಿಯಾಗುತ್ತದೆ.

ಉಲ್ಲೇಖ

ಬದಲಾಯಿಸಿ
  1. http://tropical.theferns.info/viewtropical.php?id=Azima+tetracantha
  2. http://www.inaturalist.org/taxa/71616-Salvadoraceae