ಉಪ್ಪಿನಂಗಡಿ: ಇದು ಪುತ್ತೂರು ತಾಲೂಕಿನಲ್ಲಿರುವ ಒಂದು ಸಣ್ಣ ಪಟ್ಟಣ. ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳು ಇಲ್ಲಿ ಸೇರುವ ಸ್ಥಳವಾಗಿದೆ.ಈ ಎರಡೂ ನದಿಗಳು ಸೇರಿ ನೀರಿನ ಮಟ್ಟ ದೇವರ ಪಾದ ಮುಟ್ಟುವಾಗ ಇದನ್ನು "ಸಂಗಮ" ಎನ್ನುತ್ತಾರೆ. ಇದು ಒಂದು ವಿಶೇಷ ಸಂದರ್ಭವಾಗಿದ್ದು, ಸುತ್ತು ಮುತ್ತಲಿನ ಜನ ಇದನ್ನು ವೀಕ್ಷಿಸಲು ನೆರೆಯುತ್ತಾರೆ. ಈ ಸ್ಥಳದಲ್ಲಿ ಸಹಸ್ರಲಿಂಗೇಶ್ವರ ದೇವರ ದೇವಾಲಯವಿದ್ದು, ಸನಿಹದಲ್ಲೇ ಮಾಲಿಕುದ್ದೀನಾರ್ ಮಸೀದಿ ಹಾಗೂ ಸಂತ ಬಾಲ ಯೇಸುವಿನ ಮಂದಿರಗಳಿವೆ. [೧]

ಉಪ್ಪಿನಂಗಡಿ
India-locator-map-blank.svg
Red pog.svg
ಉಪ್ಪಿನಂಗಡಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ದಕ್ಷಿಣ ಕನ್ನಡ
ನಿರ್ದೇಶಾಂಕಗಳು 12.8333° N 75.2500° E
ವಿಸ್ತಾರ {{{area_total}}} km²
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ
{{{population_total}}}
 - {{{population_density}}}/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 574 241
 - +0824
 - {{{vehicle_code_range}}}

ಇತಿಹಾಸಸಂಪಾದಿಸಿ

ಇಲ್ಲಿಯ ಇತಿಹಾಸ ಪ್ರಕಾರ ೧೮೦೦ ರಲ್ಲಿ ಶ್ರೀರಂಗಪಟ್ಟಣದ ಪತನದ ನಂತರ ಸುಬ್ಬಾರಾವ್ ಮತ್ತು ವಿಟ್ಟಲ ಹೆಗ್ಗಡೆ ಎಂಬ ಇಬ್ಬರು ಶಸ್ತ್ರಸಜ್ಜಿತರಾಗಿ ಈ ಪಟ್ಟಣವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದರು. ಆನಂತರದ ದಿನಗಳಲ್ಲಿ ಇದು ತಾಲೂಕು ಕೇಂದ್ರವಾಗಿತ್ತು.೧೮೮೨ರಲ್ಲಿ ತಾಲೂಕು ಕೇಂದ್ರವನ್ನು ಪುತ್ತೂರಿಗೆ ಸ್ಥಳಾಂತರಿಸಿದರು. ಮಂಗಳೂರು ಬಂದರು ಹಾಗೂ ಒಳನಾಡಿನ ಹಾಸನ, ಸಕಲೇಶಪುರಗಳಿಗೆ ಸರಕು ಸಾಗಣೆಯ ಪ್ರಮುಖ ತಾಣ ಇದಾಗಿತ್ತು.

ಸಾರಿಗೆಸಂಪಾದಿಸಿ

ಈ ಪಟ್ಟಣವು ಮಂಗಳೂರು ಮತ್ತು ಬೆಂಗಳೂರನ್ನು ಸಂಪರ್ಕಿಸುವ ರಾಷ್ಟೀಯ ಹೆದ್ದಾರಿ ೪೮ ರಲ್ಲಿದ್ದು ಉತ್ತಮ ರೀತಿಯ ಸಂಪರ್ಕ ಹೊಂದಿದೆ.ಪ್ರಸಿದ್ಧ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ, ಕಾಜೂರು ದರ್ಗ ಷರೀಫ್ಗೆ ಇಲ್ಲಿಂದ ಸಂಪರ್ಕವಿದೆ.

ಉಲ್ಲೇಖಗಳುಸಂಪಾದಿಸಿ

  1. "Uppinangady Population Census 2011". www.census2011.co.in. Retrieved 7 December 2017.