ಉನ್ನಿಯಪ್ಪಮ್
ಕರೊಲ್ಲಪ್ಪಮ್ ಎಂದೂ ಕರೆಯಲ್ಪಡುವ ಉನ್ನಿಯಪ್ಪಮ್ (ಮಲಯಾಳಂ: ഉണ്ണിയപ്പം) ದುಂಡಗಿರುವ ಚಿಕ್ಕ ಗಾತ್ರದ ಲಘು ಆಹಾರವಾಗಿದೆ. ಇದನ್ನು ಅಕ್ಕಿ, ಬೆಲ್ಲ, ಬಾಳೆ ಹಣ್ಣು, ಹುರಿದ ಕೊಬ್ಬರಿ ತುಂಡುಗಳು, ಹುರಿದ ಎಳ್ಳಿನ ಬೀಜಗಳು, ತುಪ್ಪ ಮತ್ತು ಏಲಕ್ಕಿ ಪುಡಿಯಿಂದ ತಯಾರಿಸಲಾಗುತ್ತದೆ. ಇದನ್ನು ಎಣ್ಣೆಯಲ್ಲಿ ಕರಿಯಲಾಗುತ್ತದೆ. ಬಾಳೆಹಣ್ಣಿನ ಬದಲು ಹಲಸಿನ ಹಣ್ಣಿನ ಮುರಬ್ಬವನ್ನು ಬಳಸುವ ಈ ನೈಸರ್ಗಿಕ ಮತ್ತು ಸ್ಪಂಜಿನಂಥ ಕರಿದ ಹಿಟ್ಟಿನ ಭಿನ್ನ ರೂಪಗಳು ೨೦೦೦ ದಶಕದ ಉತ್ತರಾರ್ಧದಿಂದ ಸಾಮಾನ್ಯವಾಗಿವೆ. ಇದು ಕೇರಳದ ಜನಪ್ರಿಯ ಲಘು ಆಹಾರವಾಗಿದೆ. ಮಲಯಾಳಂನಲ್ಲಿ, ಉನ್ನಿ ಎಂದರೆ ಚಿಕ್ಕದು ಮತ್ತು ಅಪ್ಪಂ ಎಂದರೆ ಅಕ್ಕಿಯ ಬಿಲ್ಲೆಖಾದ್ಯ ಎಂದಾಗಿದೆ.
ಮೂಲ | |
---|---|
ಮೂಲ ಸ್ಥಳ | ಭಾರತ |
ಪ್ರಾಂತ್ಯ ಅಥವಾ ರಾಜ್ಯ | ಕೇರಳ |
ವಿವರಗಳು | |
ಸೇವನಾ ಸಮಯ | ಲಘು ಆಹಾರ |
ಮುಖ್ಯ ಘಟಕಾಂಶ(ಗಳು) | ಅಕ್ಕಿ, ಬೆಲ್ಲ, ಬಾಳೆ ಹಣ್ಣು, ತುಪ್ಪ, ಸಕ್ಕರೆ |