ಇಳಾ ಭಟ್

ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಮಹಿಳೆ

ಇಳಾ ಭಟ್ (ಜನನ: ೭ ಸೆಪ್ಟೆಂಬರ್ ೧೯೩೩, ಅಹ್ಮದಾಬಾದ್, ಭಾರತ) ಭಾರತೀಯ ಸಾಮಾಜಿಕ-ಕಾರ್ಯಕರ್ತೆ ಮತ್ತು SEWAದ ಸ್ಥಾಪಕಿ.[] ಇವರು ಭಾರತದ ಬಡ-ಮಹಿಳೆಯರ ಜೀವನಮಟ್ಟವನ್ನು ಹೆಚ್ಚಿಸುವ ದಿಶೆಯಲ್ಲಿ ದೇಣಿಗೆ ನೀಡಿದ್ದು, ಅವರ ಕಾರ್ಯವನ್ನು ಎಲ್ಲರೂ ಗುರುತಿಸಿದ್ದಾರೆ.

ಇಳಾ ಭಟ್
ಇಳಾ ಭಟ್, ಅಕ್ಟೋಬರ್ ೨೦೧೩
ಜನನ (1933-09-07) 7 September 1933 (ವಯಸ್ಸು 91)
ರಾಷ್ಟ್ರೀಯತೆಭಾರತೀಯ
ನಾಗರಿಕತೆಭಾರತೀಯ
ವಿದ್ಯಾಭ್ಯಾಸಬಿ.ಎ., ಎಲ್.ಎಲ್.ಬಿ.; ಕಾರ್ಮಿಕ ಮತ್ತು ಸಹಕಾರಿ ಡಿಪ್ಲೊಮಾ
ಶಿಕ್ಷಣಸರ್ವಾಜನಿಕ್ ಬಾಲಕಿಯರ ಪ್ರೌಢಶಾಲೆ ಶಾಲೆ, ಸೂರತ್; ಎಂ.ಟಿ.ಬಿ. ಕಾಲೇಜು, ಸೂರತ್; ಆಫ್ರೋ-ಏಷ್ಯನ್ ಇನ್ಸ್ಟಿಟ್ಯೂಟ್ ಆಫ್ ಲೇಬರ್ ಅಂಡ್ ಕೋಆಪರೇಟಿವ್ಸ್,ಟೆಲ್ ಅವಿವ್
ವೃತ್ತಿವಕೀಲ; ಸಮಾಜ ಸೇವಕಿ
ಸಂಸ್ಥೆ(s)ಸೇವಾ, The Elders (organization):ಹಿರಿಯರು (ಸಂಸ್ಥೆ.
ಹೆಸರುವಾಸಿಸೇವಾ ಸಂಸ್ಥಾಪನೆ
ಸಂಗಾತಿರಮೇಶ್ ಭಟ್
Parent(s)ಸುಮಂತ್ರಾಯ್ ಭಟ್, ವನಲೀಲ ವ್ಯಾಸ್
ಗೌರವಪದ್ಮಶ್ರೀ 1985; ಪದ್ಮಭೂಷಣ 1986; ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ 1977;ಹಕ್ಕು ಜೀವನೋಪಾಯ ಪ್ರಶಸ್ತಿ :Right Livelihood Award; 1984; ನಿವಾನೋ ಶಾಂತಿ ಪ್ರಶಸ್ತಿ; ಹ್ಯೂಮ್ಯಾನ್ ಲೆಟರ್ಸ್‌ನಲ್ಲಿ ಡಾಕ್ಟರೇಟ್ ಪದವಿ, ಹಾರ್ವರ್ಡ್ ವಿಶ್ವವಿದ್ಯಾಲಯ 2001; ಶಾಂತಿ, ನಿಶ್ಶಸ್ತ್ರೀಕರಣ ಮತ್ತು ಅಭಿವೃದ್ಧಿಗೆ ಇಂದಿರಾ ಗಾಂಧಿ ಪ್ರಶಸ್ತಿ -2011;ಎನ್‌ಡಿಟಿವಿಯ 25 ಶ್ರೇಷ್ಠ ಜೀವಂತ ಭಾರತೀಯ ದಂತಕಥೆಗಳು, 2013.
ಜಾಲತಾಣsewa.org

'ಸ್ವಯಂ ಉದ್ಯೋಗಿ ಮಹಿಳಾ ಸಂಘ,' (ಸೇವಾ) ಸಂಸ್ಥೆಯ ಸ್ಥಾಪನೆ

ಬದಲಾಯಿಸಿ
  • ('Self Employed Womens' Association,'SEWA')

೭೬ ವರ್ಷ ಹರೆಯದ ’ಇಳಾ ಭಾಟ್’ ರವರು, ಸನ್ ೧೯೭೨ ರಲ್ಲಿ,'ಸ್ವಯಂ ಉದ್ಯೋಗಿ ಮಹಿಳಾ ಸಂಘ,:('ಸೇವಾ')SEWA' ಸಂಸ್ಥೆಯನ್ನು ಸ್ಥಾಪಿಸಿದರು. ಇದೊಂದು ’ಟ್ರೇಡ್ ಯೂನಿಯನ್ ಸಂಸ್ಥೆಯಾಗಿದ್ದು’, ೧.೨ ಮಿಲಿಯನ್ ಗೂ ಹೆಚ್ಚು ಸದಸ್ಯರನ್ನು ಹೊಂದಿದೆ. ೧೯೭೪ ರಲ್ಲಿ ’ಇಳಾ’ರವರು, ಒಂದು ’ಸಹಕಾರಿ ಬ್ಯಾಂಕ್’ ಸ್ಥಾಪಿಸಿದರು. ಈ ಬ್ಯಾಂಕಿನ ಕಾರ್ಯವ್ಯಾಪ್ತಿ, ಸುಮಾರು ೩ ಮಿಲಿಯನ್(೩೦ಲಕ್ಷ) ಹೆಣ್ಣುಮಕ್ಕಳ ಜೀವನವನ್ನು ರೂಪಿಸಿ ಸಹಾಯಮಾಡುವಲ್ಲಿ ಯಶಸ್ವಿಯಾಗಿದೆ.

ಪುರಸ್ಕಾರಗಳು

ಬದಲಾಯಿಸಿ

ಸನ್, ೨೦೧೦ ರ 'ನಿವಾನೋ ಶಾಂತಿ ಪುರಸ್ಕಾರ'ವನ್ನು 'ಇಳಾ ಭಟ್' ರವರಿಗೆ ಕೊಡಲಾಗಿದೆ.[] ೧೯೮೩ ರಿಂದ ಈ ’ನಿವಾನೋ ಶಾಂತಿ ಫೌಂಡೇಷನ್,’ ನ 'ಕ್ಲೋಡೋ 'ರವರು ತಿಳಿಸಿದಂತೆ, ಪುರಸ್ಕಾರವನ್ನು ಮಹಿಳೆಯರ ಸೇವೆಗಳನ್ನು ಗುರುತಿಸಿ ನೀಡಲಾಗುತ್ತಿದೆ. ಭಾರತದ 'ಭಟ್' ರವರ ಕೆಲಸದಲ್ಲಿ ಧಾರ್ಮಿಕ ಶ್ರದ್ಧೆ, ಉತ್ಸಾಹಗಳಿವೆ, ಸೇವಾಮನೋಭಾವಗಳಿವೆ. ಗಾಂಧೀಜಿಯವರ ಆದರ್ಶದ ಸಾಮಾಜಿಕ ಪರಿವರ್ತನೆ, ಮತ್ತು ಮಹಿಳೆಯರಿಗೆ ಸಿಕ್ಕಬೇಕಾದ ಆರ್ಥಿಕ ಸ್ವಾತಂತ್ರ್ಯಕ್ಕೆ ಒತ್ತು ನೀಡಲಾಗುತ್ತಿದೆ. ಪ್ರಶಸ್ತಿಯಲ್ಲಿ, ೨೧೫,೩೯೦ ಡಾಲರ್ ಗಳ ನಗದು ಬಹುಮಾನ, ಪದಕ, ಮತ್ತು ಪ್ರಶಸ್ತಿಪತ್ರಗಳು ದೊರೆಯುತ್ತವೆ.

ಇಳಾ ಭಟ್ ತಮ್ಮ ಸಮಾಜಸೇವೆಯನ್ನು ವಿವರಿಸಿದ ಬಗೆ

ಬದಲಾಯಿಸಿ

’ಇಳಾ ಭಟ್’ ತಮ್ಮ ಸೇವಾ ಕಾರ್ಯವನ್ನು ಮಹಿಳೆ, ಕೆಲಸ ಮತ್ತು ಶಾಂತಿ, ಎನ್ನುವ ೩ ಪದಗಳಲ್ಲಿ ಅವರ ಕಥೆ ಮತ್ತು ಫಿಲೊಸೊಫಿಗಳನ್ನು ಅರ್ಥೈಸಿ, ವಿವರಿಸುತ್ತಾರೆ.

ಉಲ್ಲೇಖಗಳು

ಬದಲಾಯಿಸಿ


"https://kn.wikipedia.org/w/index.php?title=ಇಳಾ_ಭಟ್&oldid=1288829" ಇಂದ ಪಡೆಯಲ್ಪಟ್ಟಿದೆ