ಇಮ್ಮಡಿ ಕೃಷ್ಣರಾಜ ಒಡೆಯರ್
ಕೃಷ್ಣರಾಜ ಒಡೆಯರ್ II (ಇಮ್ಮಡಿ ಕೃಷ್ಣರಾಜ ಒಡೆಯರ್; ೧೭೨೮ – ೨೫ ಏಪ್ರಿಲ್ ೧೭೬೬), ಇವರು ೧೭೩೪ ರಿಂದ ೧೭೬೬ ರವರೆಗೆ ಮೈಸೂರು ಸಾಮ್ರಾಜ್ಯದ ಹದಿನೆಂಟನೇ ಮಹಾರಾಜರಾಗಿದ್ದರು. ಅವರು ತನ್ನ ಸಂಪೂರ್ಣ ಆಳ್ವಿಕೆಯನ್ನು ಇನ್ನೊಬ್ಬರ ನಿಯಂತ್ರಣದಲ್ಲೇ ಮಾಡಬೇಕಾಯಿತು. ಮೊದಲು ದಳವಾಯಿ ದೇವರಾಜ ಅರಸು ಹಾಗೂ ಕೊನೆಯ ಐದು ವರ್ಷಗಳ ಕಾಲ, ಹೈದರ್ ಅಲಿಯ ನಿಯಂತ್ರಣ ಅವರ ಮೇಲಿತ್ತು.
ಇಮ್ಮಡಿ ಕೃಷ್ಣರಾಜ ಒಡೆಯರ್ | |
---|---|
ಮೈಸೂರಿನ ಮಹಾರಾಜ | |
ಆಳ್ವಿಕೆ | ೧೭೩೫ ರಿಂದ ೧೭೬೬ |
ಪಟ್ಟಾಭಿಷೇಕ | ೧೫ ಜೂನ್ ೧೭೩೫ |
ಪೂರ್ವಾಧಿಕಾರಿ | ೭ನೇ ಚಾಮರಾಜ ಒಡೆಯರ್ (ಸಹೋದರ) |
ಉತ್ತರಾಧಿಕಾರಿ | ನಂಜರಾಜ ಒಡೆಯರ್ (ಹಿರಿಯ ಮಗ) |
ಗಂಡ/ಹೆಂಡತಿ | ದೇವಜ ಅಮ್ಮಣ್ಣಿಯವರು, ಪುತಜ ಅಮ್ಮಣ್ಣಿಯವರು, ಲಕ್ಷ್ಮಿ ಅಮ್ಮಣ್ಣಿ ದೇವಿಯವರು |
ಸಂತಾನ | |
ನಂಜರಾಜ ಒಡೆಯರ್, ೮ ನೇ ಚಾಮರಾಜ ಒಡೆಯರ್, ೯ ನೇ ಚಾಮರಾಜ ಒಡೆಯರ್ | |
ತಂದೆ | ಚಾಮೇ ಅರಸು;
ಒಂದನೇ ದೊಡ್ಡ ಕೃಷ್ಣರಾಜ ಒಡೆಯರ್ (ಸಾಕು ತಂದೆ) |
ತಾಯಿ | ದೇವಜಮ್ಮಣ್ಣಿ (ಸಾಕು ತಾಯಿ) |
ಜನನ | ೧೭೨೮ |
ಮರಣ | ೨೫ ಏಪ್ರಿಲ್ ೧೭೬೬ ಶ್ರೀರಂಗ ಪಟ್ಟಣ |
ಧರ್ಮ | ಹಿಂದೂ ಧರ್ಮ |
೮ ಅಕ್ಟೋಬರ್ ೧೭೩೧ ರಂದು, ಮಹಾರಾಣಿ ದೇವಜಮ್ಮಣ್ಣಿ ಮತ್ತು ಮಹಾರಾಜ ಒಂದನೆಯ ಕೃಷ್ಣರಾಜ ಒಡೆಯರ್ ರವರು ಇಮ್ಮಡಿ ಕೃಷ್ಣರಾಜ ಒಡೆಯರ್ ರವರನ್ನು, ಚಿಕ್ಕ ಕೃಷ್ಣರಾಜ ಒಡೆಯರ್ ಎಂಬ ಶೀರ್ಷಿಕೆಯಡಿಯಲ್ಲಿ ದತ್ತು ಪಡೆದರು.
ಅವರ ಪಟ್ಟಾಭಿಷೇಕ ೧೭೩೫ ರ ಜೂನ್ ೧೫ ರಂದು ಮೈಸೂರಿನಲ್ಲಿ ನೆರವೇರಿತು. ಆಗ ಮೈಸೂರು ಆಡಳಿತದ ಉಸ್ತುವಾರಿಯನ್ನು ೧೭೨೪ ರಿಂದ ೧೭೪೬ ರವರೆಗೆ ವಹಿಸಿಕೊಂಡಿದ್ದ ದಳವಾಯಿ ದೇವರಾಜ ಅರಸುರವರ ನಿಯಂತ್ರಣದಲ್ಲಿ ಇಮ್ಮಡಿ ಕೃಷ್ಣರಾಜ ಒಡೆಯರ್ ಆಳ್ವಿಕೆ ನಡೆಸಿದರು. ದಳವಾಯಿ ದೇವರಾಜ ಅರಸುರವರ ಪತನ ಮತ್ತು ಮರಣದ ನಂತರ, ಇನ್ನೊಬ್ಬ ದಳವಾಯಿ ಹೈದರ್ ಅಲಿ, ೧೭೬೧ ರಿಂದ ೧೭೮೨ ರವರೆಗೂ ಮೈಸೂರಿನ ವಾಸ್ತವಿಕ ಸರ್ವೋಚ್ಚ ಆಡಳಿತಗಾರ ಎಂದು ಪರಿಗಣಿಸಲ್ಪಟ್ಟನು.
ಇಮ್ಮಡಿ ಕೃಷ್ಣರಾಜ ಒಡೆಯರ್ ಪಟ್ಟದ ಅರಸರಾಗಿದ್ದರೂ, ದಳವಾಯಿ ಹಾಗೂ ನಂಜರಾಜರ ನಡುವಿನ ತ್ರಿಪಕ್ಷೀಯ ಹೋರಾಟದ ಕಾರಣ ಅವರು ಅಧಿಕಾರವನ್ನು ಅನುಭವಿಸಲು ಸಾಧ್ಯವಾಗಲಿಲ್ಲ. ಈ ಅಧಿಕಾರ ಸಂಘರ್ಷದಿಂದ ರಾಜ್ಯವು ದುರ್ಬಲವಾಯಿತು. ಕ್ರಮೇಣ ನಂಜರಾಜನ ಸ್ಥಾನವನ್ನು ಹೈದರ್ ಅಲಿ ತುಂಬಿದ. ಇಮ್ಮಡಿ ಕೃಷ್ಣರಾಜ ಒಡೆಯರ್ ತನ್ನ ಅಧಿಕಾರವನ್ನು ಮರಳಿ ಪಡೆಯಲು ಅನೇಕ ಉಪಾಯಗಳನ್ನು ರೂಪಿಸಿದರೂ ವಿರೋಧಿಗಳ ಸಂಪನ್ಮೂಲ ಹಾಗೂ ಒಗ್ಗಟಿನ ಕಾರಣಗಳಿಂದ ಅವರು ಯಶಸ್ವಿಯಾಗಲಿಲ್ಲ. ಇಮ್ಮಡಿ ಕೃಷ್ಣರಾಜ ಒಡೆಯರ್ ೧೭೬೬ ರ ಏಪ್ರಿಲ್ ೨೫ರಂದು ಅವರ ರಾಜಧಾನಿ ಶ್ರೀರಂಗಪಟ್ಟಣದಲ್ಲಿ ನಿಧನರಾದರು.
ಉಲ್ಲೇಖಗಳು
ಬದಲಾಯಿಸಿ