ಇಟಕೋನಿಕ್ ಆಮ್ಲ ಒಂದು ಅಪರ್ಯಾಪ್ತ ಸಾವಯವ ಆಮ್ಲ. ಅಣುಸೂತ್ರ C5H6O4. ರಚನಾಸೂತ್ರ ಕೆಳಕಂಡಂತಿದೆ;

ರಾಸಾಯನಿಕವಾಗಿ ಮೆಥಿಲೀನ್ ಸಕ್ಸಿನಿಕ್ ಆಮ್ಲವೆನ್ನಬಹುದು.

ಗುಣಗಳು

ಬದಲಾಯಿಸಿ

ಇದು ಹರಳುರೂಪದ ಬಿಳಿಯ ಘನವಸ್ತು. ದ್ರವೀಕರಣ ಬಿಂದು 1620-1640 ಸೆ. 100 ಮಿ.ಲೀ. ನೀರಿನಲ್ಲಿ 200 ಸೆ. ನಲ್ಲಿ 8 ಗ್ರಾಂಗಳಷ್ಟೂ 800 ಸೆ. ನಲ್ಲಿ 73 ಗ್ರಾಂಗಳಷ್ಟೂ ದ್ರವ್ಯ. ಈಥರ್,ಬೆಂಜೀ಼ನು, ಕ್ಲೋರೋಫಾರಂ ಇತ್ಯಾದಿ ಸಾವಯವ ಲೀನಕಾರಿಗಳಲ್ಲಿ ಅಲ್ಪದ್ರವ್ಯ.

ತಯಾರಿಕೆ

ಬದಲಾಯಿಸಿ

ಸಿಟ್ರಕೋನಿಕ್ ಆಮ್ಲದ ಆನ್‌ಹೈಡ್ರೈಡನ್ನು ನೀರಿನೊಂದಿಗೆ 1500 ಸೆ. ಉಷ್ಣತೆಗೆ ಕಾಯಿಸಿದರೆ ಇಟಕೋನಿಕ್ ಆಮ್ಲ ಉತ್ಪತ್ತಿಯಾಗುವುದು. ಆದರೆ ಕೈಗಾರಿಕಾ ಪ್ರಮಾಣದಲ್ಲಿ ತಯಾರಿಸಲು ಫರ್ಮೆಂಟೇಷನ್ ವಿಧಾನ ಅನುಕೂಲ.[] 15-20% ಗ್ಲೂಕೋಸ್ ಕೆಲವು ನಿರವಯವ ಲವಣಗಳು ಮತ್ತು ಹೈಡ್ರೊಕ್ಲೋರಿಕ್ ಆಮ್ಲದ ಮಿಶ್ರಣವನ್ನು ವ್ಯತ್ಯಾಸ ಮಾಡುವುದರಿಂದ ಕ್ರಿಯಾಮಾಧ್ಯಮದ ಪಿಎಚ್ ಮೌಲ್ಯವನ್ನು 1.8-2.0 ಮಿತಿಯಲ್ಲಿ ನಿಯಂತ್ರಿಸುವರು. ಇದು ಬಹುಮುಖ್ಯ. ಈಗ ಆಸ್ಪರ್ಜಿಲಸ್ ಟರ‍್ರಿಯಸ್ ಎಂಬ ಬೂಷ್ಟಿನ ಆಯ್ದ ತಳಿಯನ್ನು ಕೂಡಿಸಿ ಗಾಳಿ ಹಾಯಿಸಲಾಗುವುದು. 280-350 ಸೆ. ಉಷ್ಣತಾ ಮಿತಿಯಲ್ಲಿ 2-5 ದಿವಸಗಳ ಕಾಲ ಬಿಟ್ಟರೆ ಇಟಕೋನಿಕ್ ಆಮ್ಲ ಉತ್ಪತ್ತಿಯಾಗಿರುತ್ತದೆ. ಹುಳಿಬಂದ ದ್ರವವನ್ನು ಶೋಧಿಸಿ ನಿರ್ವಾತ ಸ್ಥಿತಿಯಲ್ಲಿ ಸಾಂದ್ರೀಕರಿಸಿ ತಣಿಸಿದರೆ ಆಮ್ಲ ಸ್ಫಟಿಕೀಕರಿಸುವುದು.

ಉಪಯೋಗಗಳು

ಬದಲಾಯಿಸಿ

ಇದರ ಎಸ್ಟರುಗಳು ಬಹ್ವಂಗೀಕರಿಸಿ (ಪಾಲಿಮರೈಸ್) ವಿಶಿಷ್ಟ ಗುಣಗಳಿರುವ ಪ್ಲಾಸ್ಟಿಕ್ಕುಗಳನ್ನು ಕೊಡುವುವು.

ಉಲ್ಲೇಖಗಳು

ಬದಲಾಯಿಸಿ
  1. Roger A. Sheldon (2014). "Green and sustainable manufacture of chemicals from biomass: state of the art". Green Chem. 16 (3): 950–963. doi:10.1039/C3GC41935E.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: