ಆ‍ಯ್‌ಸ್ಟನ್ ಮಾರ್ಟೀನ್‌

ಆಂಗ್ಲ ವಾಹನ ಉದ್ಯಮ ಕಂಪನಿ

ಆ‍ಯ್‌ಸ್ಟನ್ ಮಾರ್ಟೀನ್‌ ಲಗೊಂಡ ಲಿಮಿಟೆಡ್. ಐಷಾರಾಮಿ ಸ್ಪೋರ್ಟ್ಸ್‌ಕಾರುಗಳ ಬ್ರಿಟೀಷ್ ತಯಾರಕರಾಗಿದ್ದು, ವಾರ‍್ವಿಕ್‍ಶೈರ‍್ನ ಗೇಡನ್‍ನಲ್ಲಿದೆ. ಈ ಕಂಪನಿಯ ಹೆಸರು, ಈ ಕಂಪನಿಯ ಸಂಸ್ಥಾಪಕರಲ್ಲಿ ಒಬ್ಬರಾದ ಲಿಯೋನೆಲ್ ಮಾರ್ಟಿನ್ ಮತ್ತು ಬಕ್ಕಿಂಗ್‍ಹ್ಯಾಮ್‍ಶೈರ‍್ನಲ್ಲಿರುವ []ಆಸ್ಟನ್ ಕ್ಲಿಂಟನ್ ಹತ್ತಿರವಿರುವ ಆಸ್ಟನ್ ಹಿಲ್ ಸ್ಪೀಡ್‍ ಹಿಲ್ ಕ್ಲೈಂಬ್‍ನಿಂದ ಬಂದಿದೆ.1994ರಿಂದ 2007ರ ವರೆಗೆ ಆ‍ಯ್‌ಸ್ಟನ್ ಮಾರ್ಟೀನ್‌ ಫೋರ್ಡ್ ಮೋಟಾರ್ ಕಂಪೆನಿಯ ಭಾಗವಾಗಿತ್ತು ಹಾಗೂ 2000ದಲ್ಲಿ ಕಂಪೆನಿಯ ಪ್ರೀಮಿಯರ್ ಆಟೋಮೋಟಿವ್ ಗ್ರೂಪ್‍ನ ಭಾಗವಾಗಿತ್ತು. ಇದನ್ನು ಮಾರ್ಚ್ 12, 2007ರಲ್ಲಿ ಡೇವಿಡ್ ರಿಚರ್ಡ್ಸ್ ಮುಖ್ಯಸ್ಥರಾಗಿರುವ, ಕುವೈತ್‍ನ ಇನ್ವೆಸ್ಟ್‌ಮೆಂಟ್ ದರ್ ಮತ್ತು ಅದೀಮ್ ಇನ್ವೆಸ್ಟ್‌ಮೆಂಟ್ ಹಾಗೂ ಇಂಗ್ಲೀಷ್‍ ಉದ್ಯಮಿಯಾದ ಜಾನ್‍ ಸಿಂಡರ್ಸ್ರ ಸಹಮಾಲೀಕತ್ವಕ್ಕೆ ಒಳಪಟ್ಟಿರುವ ಜಾಯಿಂಟ್ ವೆಂಚರ್ ಕಂಪೆನಿಯು 479 ಮಿಲಿಯನ್ ಪೌಂಡ್‍ಗಳಿಗೆ ಕೊಂಡುಕೊಂಡಿತು.[] ಯುಎಸ್$925 ಮಿಲಿಯನ್‌ನಷ್ಟು ಬೆಲೆಬಾಳುವ ಕಂಪನಿಯನ್ನು ನಷ್ಟಶಂಕೆಯಲ್ಲಿ ಯುಎಸ್$77 ಮಿಲಿಯನ್‌ಗೆ ಆ‍ಯ್‌ಸ್ಟನ್ ಮಾರ್ಟೀನ್‌ನಲ್ಲಿ ಫೊರ್ಡ್ ಉಳಿಸಿಕೊಂಡಿತು.[]

Aston Martin Lagonda Limited
ಸಂಸ್ಥೆಯ ಪ್ರಕಾರPrivate Limited Company
ಸ್ಥಾಪನೆ1913
ಸಂಸ್ಥಾಪಕ(ರು)Lionel Martin
Robert Bamford
ಮುಖ್ಯ ಕಾರ್ಯಾಲಯGaydon, Warwickshire, United Kingdom
ಪ್ರಮುಖ ವ್ಯಕ್ತಿ(ಗಳು)Dr. Ulrich Bez, CEO
Marek Reichman, Director of Design
ಉದ್ಯಮAutomotive
ಉತ್ಪನ್ನAutomobile
ಮಾಲೀಕ(ರು)David Richards
John Sinders
Investment Dar
Adeem Investment[]
ಜಾಲತಾಣAston Martin Website for United Kingdom
Aston Martin Website for the World

ಇತಿಹಾಸ

ಬದಲಾಯಿಸಿ
ಆ‍ಯ್‌ಸ್ಟನ್ ಮಾರ್ಟೀನ್‌ 2-ಲೀಟರ್ 2/4-ಸೀಟರ್ ಸ್ಪೋರ್ಟ್ಸ್ 1937

ಆ‍ಯ್‌ಸ್ಟನ್ ಮಾರ್ಟಿನ್ ಕಂಪನಿಯನ್ನು 1913ರಲ್ಲಿ ಲಿಯೋನೆಲ್ ಮಾರ್ಟಿನ್[] ಮತ್ತು ರಾಬರ್ಟ್ ಬ್ಯಾಮ್‍ಫೋರ್ಡ್ ಸ್ಥಾಪಿಸಿದರು. ಲಂಡನ್‍ನ ಕ್ಯಾಲೊ ಸ್ಟ್ರೀಟ್‍ನಲ್ಲಿ ಸಿಂಗರ‍್ನಿಂದ ತಯಾರಿಸಲ್ಪಟ್ಟ ಕಾರುಗಳ ಮಾರಾಟದ ಜೊತೆಗೆ ಜಿಡಬ್ಲೂಕೆ ಮತ್ತು ಕ್ಯಾಲ್‍ತ್ರೋಪ್‍ ವಾಹನಗಳಿಗೂ ಬ್ಯಾಮ್‍ಫೋರ್ಡ್ ಮತ್ತು ಮಾರ್ಟಿನ್ ಹೆಸರಿನಲ್ಲಿ ಸೇವೆಯನ್ನು ಒದಗಿಸುತ್ತಿದ್ದರು. ಆ‍ಯ್‌ಸ್ಟನ್ ಕ್ಲಿಂಟನ್‍ನ ಹತ್ತಿರವಿರುವ ಆ‍ಯ್‌ಸ್ಟನ್ ಹಿಲ್‍ನಲ್ಲಿ ಈ ಜೋಡಿಯು ತಮ್ಮದೇ ಸ್ವಂತ ವಾಹನವನ್ನು ತಯಾರಿಸಲು ನಿರ್ಧರಿಸಿದರು. 1908ರ ಐಸೊಟ್ಟಾ-ಫ್ರಾಶ್ಚಿನಿಕಾರಿನ ಚಾಸಿಸ್‍ಗೆ ನಾಲ್ಕು ಸಿಲಿಂಡರ‍್ನ ಕೊವೆಂಟ್ರಿ-ಸಿಂಪ್ಲೆಕ್ಸ್ ಇಂಜಿನನ್ನು ಅಳವಡಿಸಿ ಮಾರ್ಟಿನ್ 'ಆ‍ಯ್‌ಸ್ಟನ್ ಮಾರ್ಟಿನ್' ಹೆಸರಿನಲ್ಲಿ ತಮ್ಮ ಮೊದಲ ಕಾರನ್ನು ತಯಾರಿಸಿದ.[][] ಅವರು ಕೆಂಸಿಂಗ್ಟನ್‍ನಲ್ಲಿರುವ ಹೆನ್ನಿಕರ‍್ನಲ್ಲಿ ತಮ್ಮ ಮೊದಲ ಕಾರನ್ನು 1915, ಮಾರ್ಚ್‌ನಲ್ಲಿ ತಯಾರಿಸಿದರು. ಮೊದಲನೆಯ ವಿಶ್ವ ಮಹಾಯುದ್ಧ ಪ್ರಾರಂಭವಾಗಿದ್ದರಿಂದ ಹಾಗೂ ಮಾರ್ಟಿನ್ ಅಡ್ಮಿರಲ್ಟಿ ಆಂಡ್ ಬ್ಯಾಮ್‍ಫೋರ್ಡ್ ದಿ ರಾಯಲ್ ಆರ್ಮಿ ಸರ್ವೀಸ್ ಕಾರ್ಪ್ಸ್ ಸೇರಿದ್ದರಿಂದ ಕಾರಿನ ಉತ್ಪಾದನೆಯು ನಿಂತಿತು. ಎಲ್ಲಾ ಯಂತ್ರೋಪಕರಣಗಳನ್ನು ಸಾಪ್ವಿತ್ ಏವಿಯೇಶನ್ ಕಂಪನಿಗೆ ಮಾರಲಾಯಿತು.

ಮಹಾಯುದ್ಧಗಳ ನಡುವಿನ ಕಾಲ

ಬದಲಾಯಿಸಿ

ಯುದ್ಧದ ನಂತರ ಕೆಂಸಿಂಗ್ಟನ್‍ನಲ್ಲಿರುವ ಅಬಿಂಗ್ಡನ್ ರೋಡ್‍ನಲ್ಲಿ ಕಂಪೆನಿಯನ್ನು ಪುನಃ ಸ್ಥಾಪಿಸಲಾಯಿತು. ಹೊಸದಾಗಿ ತಯಾರಿಸಿದ ಕಾರಿಗೆ ಆ‍ಯ್‌ಸ್ಟನ್ ಮಾರ್ಟಿನ್ ಎಂದು ಹೆಸರಿಡಲಾಯಿತು. ಬ್ಯಾಮ್‍ಫೋರ್ಡ್ 1920ರಲ್ಲಿ ಕಂಪೆನಿ ತೊರೆದ ನಂತರ ಕೌಂಟ್ ಲೂಯಿಸ್ ಝಬೊರೊವ್‌ಸ್ಕಿಯಿಂದ ಬಂದ ಬಂಡವಾಳದಿಂದ ಕಂಪೆನಿಯನ್ನು ನವೀಕರಿಸಲಾಯಿತು. 1922ರಲ್ಲಿ ಬ್ಯಾಮ್‍ಫೋರ್ಡ್ ಮತ್ತು ಮಾರ್ಟಿನ್ ಫ್ರೆಂಚ್‌ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಸ್ಪರ್ಧಿಸಲು ಕಾರುಗಳನ್ನು ಉತ್ಪಾದಿಸಿದರು ಹಾಗೂ ಬ್ರೂಕ್‍ಲ್ಯಾಂಡ್ಸ್‌ನಲ್ಲಿ ಅತೀ ಹೆಚ್ಚು ವೇಗವಾಗಿ ಓಡುವ ಮತ್ತು ಹೆಚ್ಚು ಬಾಳಿಕೆ ಬರುವ ಕಾರುಗಳೆಂದು ದಾಖಲೆ ಮಾಡಿದವು. 16 ವಾಲ್ವ್‌ಗಳನ್ನು, ಟ್ವಿನ್ ಕ್ಯಾಮ್ ಇಂಜಿನ್‍ಗಳನ್ನು ಹೊಂದಿದ 3 ವರ್ಕ್ಸ್ ಟೀಮ್(ಸ್ಪೋರ್ಟ್ಸ್ ಗುಂಪು) ಕಾರುಗಳನ್ನು ರೇಸಿಂಗ್ ಮತ್ತು ರೆಕಾರ್ಡ್‌ನ್ನು ಮುರಿಯಲಿಕ್ಕಾಗಿ ತಯಾರಿಸಲಾಯಿತು. ಮುಂದೆ ಇವನ್ನೇ ಗ್ರೀನ್‍ ಪೀ(ಚಾಸಿಸ್ ನಂಬರ್ 1914), ರೇಜರ್ ಬ್ಲೇಡ್ ರೆಕಾರ್ಡ್ ಕಾರ್(ಚಾಸಿಸ್ ನಂಬರ್ 1915), ಹಾಲ್ಫೋರ್ಡ್ ಸ್ಪೆಷಲ್(ಚಾಸಿಸ್ ನಂಬರ್ 1916) ಹೆಸರಿನಲ್ಲಿ ಅಭಿವೃದ್ಧಿಪಡಿಸಲಾಯಿತು. ಉದ್ದ ಚಾಸಿಸ್‍ನ ಮತ್ತು ಗಿಡ್ಡ ಚಾಸಿಸ್‍ನ ವಿಧದಲ್ಲಿ ಅಂದಾಜು 55 ಕಾರುಗಳನ್ನು ತಯಾರಿಸಲಾಯಿತು. 1924ರಲ್ಲಿ ಕಂಪೆನಿಯು ದಿವಾಳಿಯಾಗುವುದರೊಂದಿಗೆ, ಲೇಡಿ ಚಾರ್ನ್‌ವುಡ್ ಇದನ್ನು ಕೊಂಡು ತನ್ನ ಮಗ ಜಾನ್ ಬೆನ್ಸನ್‍ನನ್ನು ಉಸ್ತುವಾರಿಗೆ ನೇಮಿಸಿದಳು. ಆದರೆ ಕಂಪೆನಿ ಮತ್ತೆ 1925ರಲ್ಲಿ ವಿಫಲವಾಯಿತು. 1926ರಲ್ಲಿ ಲಿಯೋನೆಲ್ ಮಾರ್ಟಿನ್‍ನ ಪದತ್ಯಾಗದೊಂದಿಗೆ ಕಾರ್ಖಾನೆಯನ್ನು ಮುಚ್ಚಲಾಯಿತು.ನಂತರದ ವರ್ಷಗಳಲ್ಲಿ ಬಿಲ್ ರೆನ್ವಿಕ್, ಅಗಸ್ಟಸ್(ಬರ್ಟ್) ಬರ್ಟೆಲ್ಲಿ ಮತ್ತು ಲೇಡಿ ಚಾರ್ನ್‌ವುಡ್‍ ಇನ್ನೂ ಮುಂತಾದ ಶ್ರೀಮಂತ ಬಂಡವಾಳದಾರರು ಕಂಪೆನಿಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಆ‍ಯ್‌ಸ್ಟನ್ ಮಾರ್ಟಿನ್ ಮೋಟಾರ್ಸ್ ಎಂದು ಮರು ನಾಮಕರಣ ಮಾಡಿದರು, ಅದನ್ನು ವೈಟ್‍ಹೆಡ್ ಏರ‍್ಕ್ರಾಫ್ಟ್ ಇದ್ದ ಫೆಲ್ತಮ್ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಯಿತು. ರೆನ್ವಿಕ್ ಮತ್ತು ಬರ್ಟೆಲ್ಲಿ ಕೆಲವು ವರ್ಷಗಳ ಕಾಲ ಪಾಲುದಾರರಾಗಿದ್ದರು. ಅವರು ರೆನ್ವಿಕ್‍ ಪೇಟೆಂಟ್ ಹೊಂದಿರುವ ಕಂಬಶನ್ ಛೇಂಬರ್ ಡಿಸೈನ್‍ ಉಪಯೋಗಿಸಿಕೊಂಡು ಓವರ್‌ಹೆಡ್ ಕ್ಯಾಮ್ 4 ಸಿಲಿಂಡರ‍್ನ ಎಂಜಿನ್ ಅಭಿವೃದ್ಧಿಪಡಿಸಿದರು ಹಾಗೂ ಅದನ್ನು ಎನ್ಫೀಡ್ ಆಲ್‍ಡೇ ಚಾಸಿಸ್‍ನಲ್ಲಿ ಪರೀಕ್ಷೆ ಮಾಡಿ ನೋಡಲಾಯಿತು. ಇದೊಂದೇ 'ರೆನ್ವಿಕ್ ಮತ್ತು ಬರ್ಟೆಲ್ಲಿ' ನಿರ್ಮಿಸಿದ ಕಾರಾಗಿತ್ತು. ಇದನ್ನು ಬುಝ್‍ಬಾಕ್ಸ್ ಕರೆಯುತ್ತಿದ್ದು, ಇವತ್ತಿನವರೆಗೂ ಉಳಿದುಕೊಂಡು ಬಂದಿದೆ.ಅವರು ಇಂಜಿನನ್ನು ಮೋಟಾರು ಉತ್ಪಾದಕರಿಗೆ ಮಾರಬೇಕೆಂದು ಯೋಚಿಸಿದರು, ಆದರೆ ಆ‍ಯ್‌ಸ್ಟನ್ ಮಾರ್ಟಿನ್ ಕಾರು ಉತ್ಪಾದನೆಯಾಗದಿದ್ದುದರಿಂದ, ಆ‍ಯ್‌ಸ್ಟನ್ ಮಾರ್ಟಿನ್ ಹೆಸರನ್ನು ಉಪಯೋಗಿಸಿಕೊಂಡು(ಈಗ ಬ್ರ್ಯಾಂಡ್ ಎಂದು ಕರೆಯಲ್ಪಡುತ್ತಿರುವುದು) ಹೊಸ ಕಾರಿನ ಉತ್ಪಾದನೆಗೆ ಭರ್ಜರಿ ಪ್ರಾರಂಭ ನೀಡಬಹುದೆಂದು ಯೋಚಿಸಿದರು.1926ರಿಂದ 1937ರ ವರೆಗೆ ಬರ್ಟೆಲ್ಲಿ ಆ‍ಯ್‌ಸ್ಟನ್ ಮಾರ್ಟಿನ್‍ನ ತಾಂತ್ರಿಕ ನಿರ್ದೇಶಕ ಹಾಗೂ ವಿನ್ಯಾಸಕಾರರಾಗಿದ್ದರು. ಈ ಅವಧಿಯಲ್ಲಿ ಉತ್ಪಾದನೆಯಾದ ಎಲ್ಲಾ ಆ‍ಯ್‌ಸ್ಟನ್ ಮಾರ್ಟಿನ್ ಕಾರುಗಳನ್ನು 'ಬರ್ಟಿಲ್ಲಿ ಕಾರುಗಳು' ಎಂದು ಕರೆಯಲಾಯಿತು. ಇವು 1½ ಲೀಟರ್ 'ಟಿ-ಟೈಪ್', 'ಇಂಟರ್‌ನ್ಯಾಶನಲ್, 'ಲೆ ಮ್ಯಾನ್ಸ್, 'ಎಮ್‌ಕೆಐಐ' ಇದರ ರೇಸಿಂಗ್ ಡಿರವೇಟಿವ್ 'ಅಲ್ಸ್‌ಸ್ಟರ್, ಮತ್ತು 2 ಲೀಟರ್ 15/98 ಇದರ ರೇಸಿಂಗ್ ಡಿರವೇಟಿವ್ 'ಸ್ಪೀಡ್ ಮಾಡೆಲ್'ಗಳನ್ನೊಳಗೊಂಡಿತ್ತು.ತೆರೆದ ಎರಡು ಆಸನಗಳ ಸೋರ್ಟ್ಸ್ ಕಾರು, ಉದ್ದನೆಯ ಚಾಸಿಸ್‍ ನಾಲ್ಕು ಆಸನಗಳ ಕಾರು, ಡ್ರಾಪ್‌ಹೆಡ್‌ಗಳು ಮತ್ತು ಸಲೂನು ಕಾರು ಮುಂತಾದವುಗಳನ್ನು ಬರ್ಟ್ ಬರ್ಟೆಲ್ಲಿಯ ಸಹೋದರ ಎನ್ರಿಕೊ(ಹ್ಯಾರಿ) ಮಾಡಿದನು.ಬರ್ಟೆಲ್ಲಿ ತನ್ನ ಕಾರುಗಳನ್ನು ರೇಸ್‍ನಲ್ಲಿ ಓಡಿಸಲು ಬಹಳ ಉತ್ಸುಕನಾಗಿದ್ದನು ಹಾಗೂ ಆತ ತೀವ್ರ ಸ್ಪರ್ಧೆ ಕೊಡಬಲ್ಲ ಚಾಲಕನಾಗಿದ್ದನು. ರೇಸ್ ಕಾರುಗಳನ್ನು ಉತ್ಪಾದಿಸುವ ಕೆಲವೇ ಉತ್ಪಾದಕರಿದ್ದರು ಹಾಗೂ ಅವರ ನಡುವೆ ಸರ್ಧೆಯು ಹೆಚ್ಚಾಗಿ ಹೊಸ ರೀತಿಯ ಕಾರುಗಳ ಉತ್ಪಾದನೆಯಾದವು. ಎಲ್‍ಎಮ್‍ ತಂಡದ ಕಾರುಗಳು ಲೆ ಮ್ಯಾನ್ಸ್ ಮತ್ತು ಮಿಲ್ಲೆ ಮಿಲಿಯ ಇನ್ನು ಮುಂತಾದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಾರುಗಳ ಸ್ಪರ್ಧೆಯಲ್ಲಿ ಯಶಸ್ವಿಯಾದವು.1932ರಲ್ಲಿ ಪುನಃ ಆರ್ಥಿಕ ಸಮಸ್ಯೆ ತಲೆದೋರಿತು. ಎಲ್. ಪ್ರೀಡಕ್ಸ್ ಬ್ರೂನ್ ಕಂಪೆಯಲ್ಲಿ ಬಂಡವಾಳವನ್ನು ಹೂಡಿ ಆರ್ಥಿಕ ಸಮಸ್ಯೆಯಿಂದ ಪಾರುಮಾಡಿದರು. ನಂತರ ಕಂಪೆನಿಯನ್ನು ಸರ್. ಆರ್ಥರ್ ಸದರ್ಲ್ಯಾಂಡ್‍ಗೆ ಹಸ್ತಾಂತರಿಸಲಾಯಿತು. 1936ರಲ್ಲಿ ಕಂಪೆನಿಯು ರೋಡ್ ಕಾರುಗಳ ಉತ್ಪಾದನೆಗೆ ಹೆಚ್ಚಿನ ಗಮನ ನೀಡಲು ನಿರ್ಧರಿಸಿತು. ಕಾರಿನ ಉತ್ಪಾದನೆಯು ಸಣ್ಣ ಪ್ರಮಾಣದಲ್ಲಿ ನಡೆಯುತಿತ್ತು. ಎರಡನೇ ವಿಶ್ವ ಯುದ್ಧ ಪ್ರಾರಂಭವಾಗಿ ಕೆಲಸ ಸ್ಥಗಿತಗೊಳ್ಳುವ ಹೊತ್ತಿಗೆ ಕೇವಲ 700 ಕಾರುಗಳು ಉತ್ಪಾದನೆಯಾಗಿದ್ದವು.ಯುದ್ಧದ ಸಮಯದಲ್ಲಿ ವಿಮಾನದ ಭಾಗಗಳನ್ನು ಉತ್ಪಾದನೆ ಮಾಡಲಾಯಿತು.

ಡೇವಿಡ್ ಬ್ರೌನ್‍ ಯುಗ

ಬದಲಾಯಿಸಿ
1958 ಆ‍ಯ್‌ಸ್ಟನ್ ಮಾರ್ಟೀನ್‌ ಡಿಬಿ ಮಾರ್ಕ್ III

1947ರಲ್ಲಿ ಡೇವಿಡ್ ಬ್ರೌನ್(ಯುದ್ಧ ನಂತರದ ರಕ್ಷಕ) ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಡೇವಿಡ್ ಬ್ರೌನ್ ‍ಲಿಮಿಟೆಡ್ ಈ ಕಂಪೆನಿಯನ್ನು ಕೊಂಡುಕೊಂಡಿತು. ಡೇವಿಡ್ ಬ್ರೌನ್ ಲಗೊಂಡ ಕಂಪೆನಿಯನ್ನು ಸ್ವಾಧೀನಪಡಿಸಿಕೊಂಡರು ಮತ್ತು ಎರಡೂ ಕಂಪೆನಿಗಳು ಸಂಪನ್ಮೂಲ ಮತ್ತು ಉತ್ಪಾದನಾ ಸ್ಥಳವನ್ನು ಹಂಚಿಕೊಂಡವು. 1955ರಲ್ಲಿ ಡೇವಿಡ್ ಬ್ರೌನ್ ಟಿಕ್‍ಫೋರ್ಡ್ ಕೋಚ್‍ಬ್ಯುಲ್ಡಿಂಗ್ ಕಂಪೆನಿಯನ್ನು ಖರೀದಿಸಿದರು. ಈ ಕಂಪೆನಿಯ ಪ್ರದೇಶವು ನ್ಯೂಪೋರ್ಟ್ ಪ್ಯಾಗ್ನೆಲ್‍ನ ಟಿಕ್‍ಫೋರ್ಟ್ ಸ್ಟ್ರೀಟ್‍ನಲ್ಲಿದೆ. ಅಲ್ಲಿಂದ ಉತ್ಕೃಷ್ಟ ಮಟ್ಟದ "ಡಿಬಿ" ಶ್ರೇಣಿಯ ಕ್ಆರುಗಳ ಉತ್ಪಾದನೆ ಪ್ರರಂಭವಾಯಿತು. ಕಂಪೆನಿಯು 1950ರಲ್ಲಿ ಡಿಬಿ2, 1953ರಲ್ಲಿ ಡಿಬಿ2/4 , 1955ರಲ್ಲಿ ಡಿಬಿ2/4 ಎಂಕೆ11, 1957ರಲ್ಲಿ ಡಿಬಿ ಮಾರ್ಕ್ III ಮತ್ತು 1958ರಲ್ಲಿ ಇಟ್ಯಾಲಿಯನ್ ಶೈಲಿಯ 3.7 ಎಲ್‍ ಡಿಬಿ4 ಕಾರನ್ನು ಬಿಡುಗಡೆ ಮಾಡಿತು. ಈ ಎಲ್ಲಾ ಕಾರುಗಳು ಒಳ್ಳೆಯ ರೇಸಿಂಗ್ ಕಾರುಗಳೆಂದು ಹೆಸರು ಪಡೆದವು. 1963ರಲ್ಲಿ ಬಿಡುಗಡೆಯಾದ ಜನಪ್ರಿಯ ಕಾರಾದ ಡಿಬಿ5, ಕಂಪೆಯ ಪ್ರಸಿದ್ಧಿಗೆ ಕಾರಣವಾಗಿದ್ದ ಡಿಬಿ4 ಕಾರನ್ನು ಹಿಂದೆಹಾಕಿತು. ಕಂಪೆನಿಯು ಡಿಬಿ6,ಡಿಬಿಎಸ್ ಕಾರುಗಳ(1965-70) ಜೊತೆ ತನ್ನ ಕಾರಿನ ಉತ್ಪಾದನೆಯ "ಅದ್ಧೂರಿ ಯಾತ್ರೆ"ಯನ್ನು ಮುಂದುವರೆಸಿತು.

1970ರ ಮಾಲೀಕತ್ವದ ಬದಲಾವಣೆ

ಬದಲಾಯಿಸಿ

ಕಾರುಗಳ ಬೆಲೆಯೇರಿಕೆಯಾಗುತ್ತಿದ್ದರೂ, ಕಂಪೆನಿಯು ಆರ್ಥಿಕವಾಗಿ ತೊಂದರೆಯನ್ನನುಭವಿಸಿತು 1972ರಲ್ಲಿ ಈ ಕಂಪೆನಿಯನ್ನು ಬರ್ಮಿಂಗ್ಹಾಮ್ ಮೂಲದ ಕಾನ್ಸೋರ್ಟಿಯಂ ಮತ್ತು ಚಾರ್ಟೆಡ್ ಅಕೌಂಟೆಂಟ್ ಹಾಗೂ ಕಂಪೆನಿಯ ನಿರ್ದೇಶಕರಾದ ವಿಲಿಯಂ ವಿಲ್ಸನ್‍(ಎಂಬಿಇ)ರ ಬೆಂಬಲವಿರುವ ಕಂಪೆನಿ ಡೆವಲಪ್‍ಮೆಂಟ್ ಲಿಮಿಟೆಡ್‍ಗೆ ಮಾರಲಾಯಿತು.[] ಕಂಪೆನಿಯು ದಿವಾಳಿಯಾಗಿದ್ದರಿಂದ ಮತ್ತೆ ಈ ಕಂಪೆನಿಯನ್ನು 1975ರಲ್ಲಿ ಉತ್ತರ ಅಮೆರಿಕದ ವ್ಯಾಪಾರಸ್ಥ ಪೀಟರ್ ಸ್ಪ್ರ್ಯಾಗ್ ಮತ್ತು ಜಾರ್ಜ್ ಮೈಂಡನ್‍ಗೆ 1.05 ಮಿಲಿಯನ್ ಪೌಂಡ್‍ಗಳಿಗೆ ಮಾರಲಾಯಿತು.[] ಯಶಸ್ವಿ ಟರ್ನ್‌ ಅರೌಂಡ್ ಸ್ಟ್ರಾಟಜಿಯಿಂದಾಗಿ 1977ರ ಹೊತ್ತಿಗೆ 360 ಹೊಸ ಉದ್ಯೋಗಿಗಳನ್ನು ನೇಮಕ ಮಾಡಲಾಯಿತು ಹಾಗೂ ವ್ಯಾಪಾರದಿಂದ 750,000 ಪೌಂಡ್‍ಗಳಷ್ಟು ಲಾಭ ಬಂದಿತು.[] ಹೊಸದಾಗಿ ಬಂದ ಮಾಲೀಕರು ಕಂಪೆನಿಯನ್ನು ಆಧುನೀಕರಿಸಿದರು, 1977ರಲ್ಲಿ ವಿ8 ವ್ಯಾಂಟೇಜ್, 1978ರಲ್ಲಿ ಕನ್ವರ್ಟಿಬಲ್ ವೊಲಾಟೆ ಮತ್ತು 1980ರಲ್ಲಿ ವಿಲಿಯಂ ಟೌನ್ ಶೈಲಿಯ ಬುಲ್‍ಡಾಗ್ ಎಂಬ ಕಾರನ್ನು ಉತ್ಪಾದಿಸಲಾಯಿತು. ವಿ8 ಮಾದರಿಯ ಫ್ಯೂಚರಿಸ್ಟಿಕ್ ನ್ಯೂ ಲಗೊಂಡಾ ಸಲೂನ್ ಕಾರನ್ನು ಸಹ ಉತ್ಪಾದಿಸಲಾಯಿತು. ಸಣ್ಣ ಕಾರುಗಳ ತಯಾರಿಕೆಯಲ್ಲಿ ಉತ್ತಮ ಹೆಸರನ್ನು ಹೊಂದಿದ್ದ ಎಂಜಿ ಎಂಬ ಕಂಪೆನಿಯನ್ನು ಕೊಳ್ಳಬೇಕೆಂಬ ಆ‍ಯ್‌ಸ್ಟನ್ ಮಾರ್ಟಿನ್‍ನ ಯೋಜನೆ ಕೈಗೂಡಲಿಲ್ಲ. ಅದನ್ನು ಅವರು ಮಾರ್ಕ್‌ನ ಸಹಯೋಗದ ಕಾರ್ಯದಲ್ಲಿ ಉಪಯೋಗಿಸಿಕೊಳ್ಳಬಹುದಾಗಿತ್ತು. ಹೊಸ ಮಾದರಿಯ ಕಾರಿನ ವಿನ್ಯಾಸ ಮಾಡಲಾಯಿತು ಹಾಗೂ ಅದನ್ನು ಎಂಜಿಬಿ ಮಾದರಿಯ "ಅಪ್‍ಡೇಟೆಡ್ ""1981" ಎಂದು ಪರಿಚಯಿಸಲಾಯಿತು MGB.ಕಂಪೆನಿಯು 1980ರ ಆದಿಯಲ್ಲಿ ಆರ್ಥಿಕ ಕುಸಿತದಿಂದ ತುಂಬಾ ನಷ್ಟ ಅನುಭವಿಸಿತು. ವಿಶ್ವಾದ್ಯಂತ ವಾರಕ್ಕೆ ಕೇವಲ ಮೂರು ಆ‍ಯ್‌ಸ್ಟನ್ ಮಾರ್ಟಿನ್ ಕಾರುಗಳು ಮಾರಾಟವಾಗುತ್ತಿದ್ದವು. ಚೇರ‍್ಮ್ಯಾನ್ ಅಲೆನ್ ಕರ್ಟಿಸ್, ಪಾಲುದಾರರಾದ ಅಮೆರಿಕದ ಪೀಟರ್ ಸ್ಪ್ರ್ಯಾಗ್ ಮತ್ತು ಜಾರ್ಜ್ ಮೈಂಡನ್ ಸೇವೆ ಮತ್ತು ಪುನರ್ಸ್ಥಾಪನೆ ಕಡೆಗೆ ಗಮನ ಕೊಡುವ ಉದ್ದೇಶದಿಂದ ಉತ್ಪಾದನೆಯನ್ನು ನಿಲ್ಲಿಸುವ ನಿರ್ಧಾರಕ್ಕೆ ಬಂದರು. ಅದೇ ಸಮಯದಲ್ಲಿ ಕರ್ಟಿಸ್ ಬ್ರ್ಯಾಡ್ಸ್ ಹ್ಯಾಚ್‍ನಲ್ಲಿ ನಡೆದ 1980ರ ಪೇಸ್ ಸ್ಪಾಸರ್ಡ್ ಸ್ಟಿರ್ಲಿಂಗ್ ಮೊಸ್ ಬೆನಿಫಿಟ್ ಡೇನಲ್ಲಿ ಭಾಗವಹಿಸಿದರು. ಅಲ್ಲಿ ಫರ್ನ್‍‍ಹಾಮ್ ರೆಸಿಡೆಂಟ್ ವಿಕ್ಟರ್ ಗಾನ್ಟ್‌ಲೆಟ್‍ರನ್ನು ಭೇಟಿ ಮಾಡಿದರು.

1980—ವಿಕ್ಟರ್ ಗಾನ್ಟ್‌ಲೆಟ್‍

ಬದಲಾಯಿಸಿ

1980ರಲ್ಲಿ ವಿಕ್ಟರ್ ಗಾನ್ಟ್‌ಲೆಟ್‍, ಪೇಸ್ ಪೆಟ್ರೋಲಿಯಂ ಮೂಲಕ ಆ‍ಯ್‌ಸ್ಟನ್ ಮಾರ್ಟಿನ್‍ನ 12.5% ಶೇರುಗಳನ್ನು 5000,000 ಪೌಂಡ್‍ಗಳಿಗೆ ಖರೀದಿಸಿದರು. ಸಿಹೆಚ್ ಇಂಡಸ್ಟಿಯಲ್ ಕಂಪೆನಿಯ ಟಿಮ್ ಹರ್ಲೇ ಅಷ್ಟೇ ಪ್ರಮಾಣದ ಶೇರನ್ನು ಖರೀದಿಸಿದರು. 1981ರ ಆದಿಯಲ್ಲಿ ಪೇಸ್ ಮತ್ತು ಸಿಹೆಚ್‍ಐ ಜಂಟಿಯಾಗಿ 50/50 ಮಾಲೀಕತ್ವ ಹೊಂದಿದ್ದವು. ಗಾನ್ಟ್‌ಲೆಟ್‍ ಎಕ್ಸಿಕ್ಯೂಟಿವ್ ಚೇರ‍್ಮನ್ ಆಗಿದ್ದು ಸೇಲ್ಸ್ ತಂಡವನ್ನು ಮುನ್ನೆಡೆಸುತ್ತಿದ್ದರು. ನಂತರದಲ್ಲಿ ನಾಲ್ಕು ಆಸನಗಳ ಕಾರುಗಳ ಉತ್ಪಾದನೆಯಲ್ಲಿ ಜನಪ್ರಿಯತೆ ಗಳಿಸಿತು ಹಾಗೂ ಆ‍ಯ್‌ಸ್ಟನ್ ಮಾಟಿನ್ ಲಗೊಂಡ ಕಾರನ್ನು ಯಶಸ್ವಿಯಾಗಿ ಪರ್ಷಿಯಾದ ಕೊಲ್ಲಿ ರಾಜ್ಯಗಳಾದ ಓಮನ್, ಕುವೈತ್ ಮತ್ತು ಕತಾರ‍್ಗೆ ಮಾರಾಟ ಮಾಡಿತು.[೧೦] ಹೊಸದಾದ ಆ‍ಯ್‌ಸ್ಟನ್ ಮಾರ್ಟಿನ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಸ್ವಲ್ಪ ಸಮಯ ತೆಗೆದುಕೊಂಡಿತು. ಬೇರೆ ಕಂಪೆನಿಗಳಿಗೆ ಸ್ವಚಾಲಿತ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಉದ್ಧೇಶದಿಂದ ಟಿಕ್‍ಫೋರ್ಡ್‌ನ್ನು ಖರೀದಿಸಲಾಯಿತು.ಆದರೆ 1982ರಲ್ಲಿ ಬಹಳ ಕಡಿಮೆಯಿದ್ದು, ಕೇವಲ 30 ಕಾರುಗಳನ್ನು ಉತ್ಪಾದಿಸಿದರು. ಇದರ ಉತ್ಪನ್ನಗಳೆಂದರೆ, ಟಿಕ್‍ಫೋರ್ಡ್ ಆಸ್ಟಿನ್ ಮೆಟ್ರೊ, ಟಿಕ್‍ಫೋರ್ಡ್ ಕಾಪ್ರೀ, ಟಿಕ್‍ಫೋರ್ಡ್, ಜಾಗ್ವಾರ್ ಎಕ್ಸ್‌ಜೆ‍ಎಸ್.[೧೦] ಪೇಸ್ ರೇಸ್‍ಗಳನ್ನು ನಡೆಸಿಕೊಡುವುದನ್ನು ಮುಂದುವರೆಸಿತು ಹಾಗೂ ಈಗ ಎಲ್ಲಾ ಆ‍ಯ್‌ಸ್ಟನ್ ಮಾರ್ಟಿನ್ ‌ಕ್ಲಬ್‍ನ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದೆ.1982 ಮತ್ತು 1983ರಲ್ಲಿ ಉತ್ಪಾದಕರ ಚಾಂಪಿಯನ್‍ಶಿಪ್‍ನಲ್ಲಿ ಎಮ್‌Oಸಿ ಅಧ್ಯಕ್ಷ ವಿಸ್ಕೌಂಟ್ ಡೌನ್ ಹೊಂದಿರುವ ಟಿಕ್‍ಫೋರ್ಡ್ ಎಂಜಿನ್ ಇರುವ ನಿಮ್ರಾಡ್ ಗ್ರೂಪ್ ಸಿ ಕಾರು ಮೂರನೇ ಸ್ಥಾನ ಪಡೆಯಿತು.ಇದು 1982ರಲ್ಲಿ 24ಗಂಟೆಗಳ ಲಿ ಮಾನ್ಸ್ ರೇಸ್‍ನಲ್ಲಿ ಏಳನೇ ಸ್ಥಾನ ಪಡೆಯಿತು.[೧೦] ಪೆಟ್ರೋಲಿಯಂ ಮಾರುಕಟ್ಟೆಯಲ್ಲಿ ವ್ಯಾಪಾರವು ಕಷ್ಟಕರವಾಗಿತ್ತು ಹಾಗೂ ಆ‍ಯ್‌ಸ್ಟನ್ ಮಾರ್ಟಿನ್‍ಗೆ ಹೆಚ್ಚು ಸಮಯ ಮತ್ತು ಹಣ ಬೇಕಿತ್ತು. ಹಾಗಾಗಿ ಗಾನ್ಟ್‌ಲೆಟ್‍ 1983ರಲ್ಲಿ ಹೇಯ್ಸ್/ಪೇಸನ್ನು ಕುವೈತ್ ಇನ್ವೆಸ್ಟ್‌ಮೆಂಟ್ ಆಫೀಸ್‍ಗೆ ಮಾರಲು ಒಪ್ಪಿದ. ಆ‍ಯ್‌ಸ್ಟನ್ ಮಾರ್ಟಿನ್‍ಗೆ ಹೆಚ್ಚು ಬಂಡವಾಳ ಬೇಕಾಗಿದ್ದರಿಂದ ಕಂಪೆನಿಯ ಶೇರುಗಳನ್ನು ಅಮೆರಿಕದ ಆಮದುಗಾರ ಹಾಗೂ ಗ್ರೀಕ್ ಹಡಗುಗಳ ಮಾಲೀಕ ಪೀಟರ್ ಲಿವನೊಸ್‍ಗೆ ಮಾರಲಾಯಿತು. ಆತ ತನ್ನ ಜಾಯಿಂಟ್ ವೆಂಚರ್ ಕಂಪೆನಿ ನಿಕ್ ಮತ್ತು ಜಾನ್ ಪಾಪಾನಿಕಲೌ, ಎ‍ಎಲ್‍ಎಲ್ ಇಂಕ್ ಕಂಪೆನಿಗಳ ಮೂಲಕ ಬಂಡವಾಳ ಹೂಡಿದ. ಗಾನ್ಟ್‌ಲೆಟ್‍ ಚೇರ್ಮನ್ ಆಗಿ ಮುಂದುವರೆದ. ಎ‍ಎಮ್‍ಎಲ್ ಕಂಪೆನಿಯ 55% ಶೇರುಗಳನ್ನು ಎ‍ಎಲ್‍ಎಲ್ ಕಂಪನಿಯು ಹೊಂದಿತು. ಟಿಕ್‍ಫೋರ್ಡ್‌ನಲ್ಲಿ ಎ‍ಎಲ್‍ಎಲ್ ಮತ್ತು ಸಿಹೆಚ್ಐ 50/50 ಶೇರನ್ನು ಹೊಂದಿದವು. ಎ‌ಎಮ್‍ಎಲ್‍ನ ಹೆಚ್ಚಿನ ಶೇರುಗಳನ್ನು ಎ‍ಎಲ್ಎಲ್ ಕೊಳ್ಳುವುದರೊಂದಿಗೆ ಸಂಬಂಧವು ಸುಧಾರಿಸಿತು. ಟಿಕ್‍ಫೋರ್ಡ್‌ನಲ್ಲಿ ತನ್ನ ಶೇರುಗಳ ಸಂಪೂರ್ಣ ಮಾಲೀಕತ್ವವನ್ನು ಸಿHI ಗಳಿಸುವುದರೊಂದಿಗೆ ತಾನು ಹೊಂದಿದ್ದ ಆ‍ಯ್‌ಸ್ಟನ್ ಮಾರ್ಟಿನ್‍ನ ಪ್ರಾಜೆಕ್ಟ್‌ಗಳನ್ನು ಟಿಕ್‍ಫೋರ್ಡ್ ತನ್ನಲ್ಲಿಯೇ ಉಳಿಸಿಕೊಂಡಿತು. 1984ರಲ್ಲಿ ಹಡಗುಗಳ ಕಂಪೆನಿ ಟೈಟಾನ್‍ ಕಂಪೆನಿ ಆಫ್ ಪಾಪನಿಕಲಾವು ತೊಂದರೆಯಲ್ಲಿ ಸಿಲುಕಿಕೊಂಡಿತು. ಲಿವನೋಸ್‍ರ ತಂದೆ ಜಾರ್ಜ್ ಎ‍ಎಲ್‍ಎಲ್ ಕಂಪೆನಿಯ ಮೂಲಕ ಆ ಕಂಪೆನಿಯ ಶೇರಗಳನ್ನು ಖರೀದಿಸಿದರು. ಹಾಗೆಯೇ ಗಾನ್ಟ್‌ಲೆಟ್‍ ಎ‍ಎಮ್‍ಎಲ್‍ನಲ್ಲಿ 25% ಶೇರುಗಳನ್ನು ಪಡೆದರು. ಈ ಒಪ್ಪಂದಕ್ಕೆ ಆಸ್ಟನ್ ಮಾರ್ಟಿನ್/ ಎಮ್‌ಎಲ್ £೨ ಮಿಲಿಯನ್‌ ಮೌಲ್ಯವನ್ನು ಕಟ್ಟಿತು. ಆ ವರ್ಷದಲ್ಲಿ ಅದು ತನ್ನ 10,೦೦೦ ನೇ ಕಾರ್‌ ಅನ್ನು ತಯಾರಿಸಿತು.[೧೦] ಹಾಗಿದ್ದರೂ, ಇದರ ಪರಿಣಾಮವಾಗಿ ಆ‍ಯ್‌ಸ್ಟನ್ ಮಾರ್ಟಿನ್‍ನಲ್ಲಿ ಅಗತ್ಯಕ್ಕಿಂತ ಹೆಚ್ಚು 60 ಜನ ಕೆಲಸಗಾರಿದ್ದರು. ಗಾನ್ಟ್‌ಲೆಟ್‍ ಇಟಾಲಿಯನ್ ಸ್ಟೈಲಿಂಗ್ ಹೌಸ್‍ ಝಗಾಟೊದ ಶೇರನ್ನು ಖರೀದಿಸಿದರು ಮತ್ತು ಆ‍ಯ್‌ಸ್ಟನ್ ಮಾರ್ಟಿನ್ ಜೊತೆಗಿನ ಸಹಭಾಗಿತ್ವವನ್ನು ಪುನಃ ಸ್ಥಾಪಿಸಿದರು.

ಆ‍ಯ್‌ಸ್ಟನ್ ಮಾರ್ಟೀನ್‌ ದ ಲಿವಿಂಗ್ ಡೇಲೈಟ್‌ನಿಂದ ವಿ8 ವಾಂಟೇಜ್

1986ರಲ್ಲಿ ಗಾನ್ಟ್‌ಲೆಟ್‍ ಆ‍ಯ್‌ಸ್ಟನ್ ಮಾರ್ಟಿನ್‍ಗೆ ಕಾಲ್ಪನಿಕ ಬ್ರಿಟೀಷ್ ಪತ್ತೇದಾರಿ ಜೇಮ್ಸ್ ಬಾಂಡ್‍ನ ಹಿಂದಿರುವಿಕೆಯ ಬಗ್ಗೆ ಚರ್ಚಿಸಿದ.ಕಬಿ ಬ್ರಕೊಲಿ ಬಾಂಡ್ ಪಾತ್ರಧಾರಿಯಾಗಿ ನಟ ಟಿಮುಥೀ ಡಾಲ್ಟನ್ನನ್ನು ಆರಿಸುವುದರೊಂದಿಗೆ ಬಾಂಡ್-ಬ್ರ್ಯಾಂಡನ್ನು ಮರುಸ್ಥಾಪಿಸಿದ.ಕಬಿ ಬ್ರಕೊಲಿಯು ಟಿಮುಥೀ ಡಾಲ್ಟನ್‌ನನ್ನು ಬಳಸಿಕೊಂಡು ಇದನ್ನು ಬಳಸುವ ಪಾತ್ರವನ್ನು ಮರು ಸೃಷ್ಟಿಸಲು ಪ್ರಯತ್ನಿಸಿತು. ಈ ಮೂಲಕ ಅದು ಬಾಂಡ್-ಬ್ರಾಂಡ್‌ ಅನ್ನು ಮರುಸೃಷ್ಟಿಸುವ ಮೂಲಕ ಸಿಯಾನ್ ಕಾನರಿಯ ರೀತಿಯ ಭಾವನೆಯನ್ನು ಮರು ಸೃಷ್ಟಿಸಲು ಪ್ರಯತ್ನಿಸಿತು. ಗಾನ್ಟ್‌ಲೆಟ್‍ "ದಿ ಲಿವಿಂಗ್ ಡೆ ಲೈಟ್ಸ್" ಚಲನಚಿತ್ರದಲ್ಲಿ ಉಪಯೋಗಿಸಲು ತಮ್ಮ ನಿರ್ಮಾಣ ಪೂರ್ವ ವಾಂಟೇಜ್ನ್ನು ಒದಗಿಸಿದರು. ಬ್ರೊಕೊಲಿಗೆ ಅಮೆರಿಕದಲ್ಲಿ ತನ್ನ ಮನೆಯಲ್ಲಿ ಉಪಯೋಗಿಸಲು ವೊಲಾಟೆಯನ್ನು ಮಾರಿದರು. ಗಾನ್ಟ್‌ಲೆಟ್‍ ಚಲನಚಿತ್ರದಲ್ಲಿ ಕೆಜಿಬಿ ಕರ್ನಲ್ ಪಾತ್ರದಲ್ಲಿ ಅಭಿನಯಸಲು ಬಂದಿದ್ದ ಆಹ್ವಾನವನ್ನು ತಿರಸ್ಕರಿಸಿದರು. ಹಾಗಿದ್ದರೂ " ನಾನು ಅಭಿನಯಿಸಲು ಇಷ್ಟಪಡುತ್ತೇನೆ, ಆದರೆ ನನಗೆ ಸಮಯ ಹೊಂದಿಸಲು ಆಗುತ್ತಿಲ್ಲ" ಎಂದು ಹೇಳಿದರು.[೧೧] ಹಾಗಿದ್ದರೂ, ಕಂಪೆನಿಯು ಚೆನ್ನಾಗಿ ನಡೆಯುತ್ತಿತ್ತು, ದೀರ್ಘ ಅವಧಿಯಲ್ಲಿ ಇದನ್ನು ಕಾಯ್ದುಕೊಳ್ಳಲು ಇನ್ನೂ ಹೆಚ್ಚಿನ ಬಂಡವಾಳ ಅಗತ್ಯವೆಂದು ತಿಳಿದಿದ್ದರು. ಮೇ, 1987ರಲ್ಲಿ revival ಕಾರ್ಯಕ್ರಮವನ್ನು ವೀಕ್ಷಿಸಲು ಗಾನ್ಟ್‌ಲೆಟ್‍ ಮತ್ತು ಕೆಂಟ್‍ನ ಪ್ರಿನ್ಸ್ ಮೈಕೆಲ್ ಮಿಲ್ಲೆ ಮಿಲಿಯದ ಸ್ಥಾಪಕರ ಪತ್ನಿಯಾದ ಕಾಂಟೆಸ್ಸಾ ಮ್ಯಾಗಿಯವರ ಮನೆಯಲ್ಲಿ ತಂಗಿದ್ದರು. ಮೇ, 1987ರಲ್ಲಿ ಎದುಇರಾಳಿ ಕಾರ್ಯಕ್ರಮವನ್ನು ವೀಕ್ಷಿಸಲು ಗಾನ್ಟ್‌ಲೆಟ್‍ ಮತ್ತು ಕೆಂಟ್‍ನ ಪ್ರಿನ್ಸ್ ಮೈಕೆಲ್ ಮಿಲ್ಲೆ ಮಿಲಿಯದ ಸ್ಥಾಪಕರ ಪತ್ನಿಯಾದ ಕಾಂಟೆಸ್ಸಾ ಮ್ಯಾಗಿಯವರ ಮನೆಯಲ್ಲಿ ತಂಗಿದ್ದರು. ಫೋರ್ಡ್ ಆಫ್ ಯೂರೋಪ್‍ನ ಉಪಾಧ್ಯಕ್ಷರಾಗಿದ್ದ ವಾಲ್ಟರ್ ಹೇಯ್ಸ್ ಬಂದಿದ್ದರು. ಹಿಂದಿನ ಎಸಿ ಕಾರುಗಳಲ್ಲಿ ತೊಂದರೆ ಇದ್ದರೂ, ಬ್ರಾಂಡ್‍ನ ಸಾಮರ್ಥ್ಯವನ್ನು ಮನಗಂಡು ಮಾತುಕತೆ ನಡೆಸಿದ ಪರಿಣಾಮ, 1987ರಲ್ಲಿಫೋರ್ಡ್ ಶೇರನ್ನು ಪಡೆಯಿತು.1988ರಲ್ಲಿ, ಒಟ್ಟು 20 ವರ್ಷಗಳಲ್ಲಿ ಸುಮಾರು 5000 ಕಾರುಗಳನ್ನು ತಯಾರಿಸಿತು.[೧೨] ಆರ್ಥಿಕ ಪರಿಸ್ಥಿತಿಯು ಸುಧಾರಿಸಿತು. ಸೀಮಿತ ಆವೃತಿಯ ವ್ಯಾಂಟೇಜ್ ಕಾರು, 86,000 ಪೌಂಡ್ ಬೆಲೆಯ 52 ವೊಲಾಟೆ ಝಗಾಟೊ ಕಾರುಗಳು ಯಶಸ್ವಿಯಾಗಿ ಮಾರಾಟವಾದವು. ಕಂಪನಿಯು ಅಂತಿಮವಾಗಿ ಹಳೆಯ ವಿ8 ಕಾರನ ಉತ್ಪಾದನೆಯನ್ನು ನಿಲ್ಲಿಸಿವಿರೇಜ್ ರೇಂಜ್ ಎಂಬ ಹೊಸ ಮಾದರಿಯ ಕಾರನ್ನು ಹೊರತಂದಿತು—ಇದು 20 ವರ್ಷಗಳಲ್ಲಿ ಆ‍ಯ್‌ಸ್ಟನ್ ಹೊರತಂದ ಮೊದಲ ಹೊಸ ಮಾದರಿಯ ಕಾರು. ಆದಾಗ್ಯೂ, ಗಾನ್ಟ್‌ಲೆಟ್‍ ಕರಾರಿನ ಕಾರಣದಿಂದಾಗಿ ಎರಡು ವರ್ಷಗಳ ಕಾಲ ಚೇರ್ಮನ್ ಆಗಿ ಮುಂದುವರೆಯಬೇಕಾಯಿತು. ಅವರ ರೇಸ್‍ನ ಬಗ್ಗೆ ಇದ್ದ ಆಸಕ್ತಿ 1989ರಲ್ಲಿ ಆ‍ಯ್‌ಸ್ಟನ್ ಸ್ಪೋರ್ಟ್ಸ್ ಕಾರುಗಳ ಸ್ಪರ್ಧೆಯಲ್ಲಿ ಭಾಗವಹಿಸುವಂತಾಯಿತು ಹಾಗೂ ಸ್ವಲ್ಪ್ ಮಟ್ಟಿನ ಯಶಸ್ಸನ್ನು ಪಡೆಯಿತು. 1990ರಲ್ಲಿ ಎಂಜಿನ್‍ನ ನಿಯಮ ಬದಲಾಯಿತು ಮತ್ತು ಆ‍ಯ್‌ಸ್ಟನ್ ಮಾರ್ಟಿನ್ ವೊಲಾಟೆ ಎಂಬ ಹೊಸ ಮಾದರಿಯ ಕಾರನ್ನು ಹೊರತಂದರು. ಫೋರ್ಡ್ ಕೆಲವೇ ಸೀಮಿತ ಕಾಸ್ವರ್ತ್ ಎಂಜಿನ್‍ಗಳನ್ನುಜಾಗ್ವಾರ್ ಕಾರುಗಳ ರೇಸಿಂಗ್ ತಂಡಕ್ಕೆ ನೀಡಿತು. As the "ಸ್ಮಾಲ್ ಆಸ್ಟನ್" DB7 ಹೆಚ್ಚಿನ ಪ್ರಮಾಣದ ಇಂಜಿನಿಯರಿಂಗ್ ತಂತ್ರಜ್ಞಾನವನ್ನು ಬೇಡುತ್ತಿತ್ತು. ಫೋರ್ಡ್ ಆ‍ಯ್‌ಸ್ಟನ್ ಮಾರ್ಟಿನ್‍ನ ಮೇಲೆ ಪೂರ್ಣ ಹಿಡಿತ ಹೊಂದಲು ಒಪ್ಪಿತು ಮತ್ತು 1991ರಲ್ಲಿ ಗಾನ್ಟ್‌ಲೆಟ್‍ ಕಂಪೆನಿಯ ಚೇರ್ಮನ್ ಹುದ್ದೆಯನ್ನು ಹೇಯ್ಸ್‌ಗೆ ಬಿಟ್ಟುಕೊಟ್ಟರು.[೧೩] 1992ರಲ್ಲಿ ವ್ಯಾಂಟೇಜ್ ಮಾದರಿಯ ಕಾರನ್ನು ಬಿಡುಗಡೆ ಮಾಡಲಾಯಿತು ಮತ್ತು ಮುಂದಿನ ವರ್ಷದಲ್ಲಿ ಡಿಬಿ ಶ್ರೇಣಿಯ ಡಿಬಿ7 ಎಂಬ ಹೊಸ ಕಾರನ್ನು ಹೊರತಂದಿತು.

ಫೋರ್ಡ್ ಯುಗ

ಬದಲಾಯಿಸಿ

ಫೋರ್ಡ್, ಆಸ್ಟನ್‍ ಕಂಪೆನಿಯನ್ನು ಪ್ರೀಮಿಯರ್ ಆಟೋಮೋಟಿವ್ ಗ್ರೂಪ್‍ಗೆ ಸೇರಿಸಿತು. ಹೆಚ್ಚಿನ ಪ್ರಮಾಣದ ಬಂಡವಾಳವನ್ನು ಹೊಸ ಕಾರುಗಳ ಉತ್ಪಾದನೆಗೆ ಹೂಡಿತು ಹಾಗೂ ಉತ್ಪಾದನಾ ವೇಗವು ಜಾಸ್ತಿಯಾಯಿತು. 1994ರಲ್ಲಿ ಫೋರ್ಡ್ ಬ್ಲಕ್ಸ್‌ಮ್‍ಹ್ಯಾಮ್‍ನ ಬ್ಯಾನ್‍ಬರ್ರಿ ರೋಡ್‍ನಲ್ಲಿ ಹೊಸ ಕಾರ್ಖಾನೆಯನ್ನು ಆರಂಭಿಸಿತು. 1995ರಲ್ಲಿ ಕಂಪೆನಿಯು ದಾಖಲೆಯ 700 ವಾಹನಗಳನ್ನು ಉತ್ಪಾದಿಸಿತು. ಫೋರ್ಡ್‍ ಯುಗದ ಕಾರುಗಳು ಬರುವ ಮೊದಲು ಇಂಗ್ಲೀಷ್ ವೀಲ್ ರೀತಿಯ ಹ್ಯಾಂಡ್ ಕೋಚ್‍ಬ್ಯುಲ್ಡಿಂಗ್ ಕ್ರಾಫ್ಟ್‌ ವಿಧಾನವನ್ನು ಉಪಯೋಗಿಸಿ ಕಾರುಗಳನ್ನು ತಯಾರಿಸಲಾಗುತ್ತಿತ್ತು. 1998ರಲ್ಲಿ ಡಿಬಿ7 ಮಾದರಿಯ 2000ನೇ ಹಾಗೂ 2002ರಲ್ಲಿ 6000ನೇ ಕಾರನ್ನು ಉತ್ಪಾದಿಸುವ ಮೂಲಕ ಹಿಂದಿನ ಎಲ್ಲಾ ಡಿಬಿ ಮಾದರಿಯ ಉತ್ಪಾದನೆಯಾದ ಕಾರುಗಳ ಸಂಖ್ಯೆಯನ್ನು ಮೀರಿಸಿದರು. 1999ರಲ್ಲಿ ವಿ12 ವ್ಯಾಂಟೇಜ್ ಮಾದರಿಯ ಸೇರ್ಪಡೆಯೊಂದಿಗೆ DB7 ಸರಣಿ ಕಾರುಗಳ ಉತ್ಪಾದನೆ ಉತ್ತೇಜನವನ್ನು ಪಡೆಯಿತು ಮತ್ತು 2001ರಲ್ಲಿ ವಿ12-ಎಂಜಿನ್ ವ್ಯಾಂಗ್ಕಿಶ್ ಕಾರನ್ನು ಬಿಡುಗಡೆ ಮಾಡಿತು.2003ರಲ್ಲಿ ಮಿಚಿಗನ್‍ನ ಡೆಟ್ರಾಯ್ಟ್‌ನಲ್ಲಿ ನಡೆದ ಉತ್ತರ ಅಮೆರಿಕದ ಅಂತರಾಷ್ಟ್ರೀಯ ಆಟೋ ಷೋನಲ್ಲಿ ಆ‍ಯ್‌ಸ್ಟನ್ ಮಾರ್ಟಿನ್ ಎ‍ಎಮ್‍ವಿ8 ವ್ಯಾಂಟೇಜ್ ಕಾರನ್ನು ಪರಿಚಯಿಸಿದರು. 2005ರಲ್ಲಿ ಇದರ ಬಿಡುಗಡೆಗೆ ಮೊದಲು ಸ್ವಲ್ಪ ಮಾರ್ಪಾಡನ್ನು ಮಾಡಿ ವಿ8 ಎಂಜಿನ್ ಸೇರಿಸಲಾಯಿತು. ಇದು ಕಂಪೆನಿಯು ಬೃಹತ್ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಅನುವುಮಾಡಿಕೊಟ್ಟಿತು. 2003ರಲ್ಲಿ ಗೇಡನ್ ಕಾರ್ಖಾನೆಯನ್ನು ತೆರೆಯಲಾಯಿತು. ಇದು ಆ‍ಯ್‌ಸ್ಟನ್ ಮಾರ್ಟಿನ್ ಇತಿಹಾಸದಲ್ಲೇ ಉದ್ಧೇಶಪೂರ್ವಕವಾಗಿ ತೆರೆಯಲಾದ ಮೊದಲ ಕಾರ್ಖಾನೆ.2003ರಲ್ಲಿ ಹತ್ತು ವರ್ಷಗಳಷ್ಟು ಹಳೆಯದಾದ ಡಿಬಿ7 ಮಾದರಿಯ ಬದಲಿಗೆ ಡಿಬಿ9 ಕೌಪೆ ಎಂಬ ಹೊಸ ಮಾದರಿಯ ಕಾರನ್ನು ಬಿಡುಗಡೆ ಮಾಡಲಾಯಿತು.ಮಾರ್ಪಾಡು ಮಡಬಹುದಾದ ಡಿಬಿ9 ಮತ್ತು ಡಿಬಿ9 ವೊಲಾಟೆ ಮಾದರಿಯ ಕಾರುಗಳನ್ನು 2004ರ ಡೆಟ್ರಾಯ್ಟ್ ಆಟೋ ಷೋನಲ್ಲಿ ಪರಿಚಯಿಸಲಾಯಿತು. 2006ರಲ್ಲಿ ಗೇಡನ್ ಕಾರ್ಖಾನೆಯಲ್ಲಿ ಡಿಬಿ9 ಮತ್ತು ಡಿಬಿ9 ವೊಲಾಟೆ ಕಾರುಗಳ ಜೊತೆಗೆ 2006ರಲ್ಲಿ ವಿ8 ವಾಂಟೇಜ್ ಸೋರ್ಟ್ಸ್ ಕಾರುಗಳ ಉತ್ಪಾದನೆ ಆರಂಭವಾಯಿತು.ಡಿಸೆಂಬರ್ 2003ರಲ್ಲಿ, 2005ರಲ್ಲಿ ನಡೆಯುವ ಮೋಟಾರ್ ರೇಸಿಂಗ್‍ನಲ್ಲಿ ಭಾಗವಹಿಸುವುದಾಗಿ ಹೇಳಿತು. ಆ‍ಯ್‌ಸ್ಟನ್ ಮಾರ್ಟಿನ್ ರೇಸಿಂಗ್ ಎಂಬ ಹೊಸ ವಿಭಾಗವನ್ನು ತೆರೆಯಲಾಯಿತು, ಇದು ಪ್ರೋಡ್ರೈವ್ ಜೊತೆಗೆ ಡಿಬಿಆರ್9 ಕಾರ್ಯಕ್ರಮದ ವಿನ್ಯಾಸದ ಅಭಿವೃದ್ಧಿ ಮತ್ತು ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಪಡೆಯಿತು. ಡಿಬಿಆರ್9 ವಿಶ್ವದ ಜನಪ್ರಿಯ 24 ಗಂಟೆಗಳ ಲೆ ಮ್ಯಾನ್ಸ್ ರೇಸ್‍ನ ಜೊತೆಗೆ ಜಿಟಿ ವರ್ಗದ ಸ್ಪೋರ್ಟ್ಸ್ ಕಾರುಗಳ ರೇಸ್‍ನಲ್ಲಿ ಭಾಗವಹಿಸುತ್ತದೆ.

ಫೋರ್ಡ್‌‍ನಿಂದ ಮಾರಾಟ

ಬದಲಾಯಿಸಿ

2006ರಲ್ಲಿ ಬೆಲೆಗಳ ಮತ್ತು ಬಂಡವಾಳ ಹಿಂತೆಗೆತದ ಬಗೆಗಿನ ಆಂತರಿಕ ಪರಾಮರ್ಶೆಯ ನಂತರ ಫೋರ್ಡ್ ಕಂಪೆನಿಯು ಪ್ರೀಮಿಯರ್ ಆಟೋಮೋಟಿವ್ ಗ್ರೂಪ್‍ನಲ್ಲಿರುವ ಕೆಲವು ವಿಭಾಗಗಳ ಮೇಲಿನ ಬಂಡವಾಳವನ್ನು ಹಿಂತೆಗೆಯಲು ನಿರ್ಧರಿಸಿತು. ಜಾಗ್ವಾರ್ ಕಾರ್ಸ್, ಲ್ಯಾಂಡ್ ರೋವರ್ ಅಥವಾ ವೋಲ್ವಾ ಕಾರ್ಸ್‌ಗಳನ್ನು ಮಾರಬೇಕೆಂಬ ಸಲಹೆ ಬಂದ ಮೇಲೆ, ಆ‍ಯ್‌ಸ್ಟನ್ ಮಾರ್ಟಿನ್‍ನ ಸ್ವಲ್ಪ ಪ್ರಮಾಣದ ಶೇರನ್ನು ಮಾರಲು ಅಥವಾ ಪುರ್ಣ ಮಾರಲು ಫೋರ್ಡ್ ಯುಬಿಎಸ್ ಎ‌ಜಿ ಯನ್ನು ನೇಮಕ ಮಾಡಿತು. ಆಗಸ್ಟ್ 2006ರ ವೇಳೆಗೆ ಆ‍ಯ್‌ಸ್ಟನ್ ಮಾರ್ಟಿನ್‍ನನ್ನು ಹರಾಜಿನ ಮೂಲಕ ಮಾರಲಾಯಿತು. ಫೋರ್ಡ್ ಕಂಪೆನಿಯು UBಎಸ್‌ AGಯನ್ನು ಮಾರಾಟಕ್ಕಾಗಿ ಅಥವಾ ಆಸ್ಟಿನ್ ಮಾರ್ಟಿನ್‌ನ ಭಾಗವನ್ನು ಹರಾಜಿನಲ್ಲಿ ತೆಗೆದುಕೊಂಡಿತು ಎಂಬ ಅಂಶವನ್ನು ಆಗಸ್ಟ್ 2006ರಲ್ಲಿ ಪ್ರಕಟಗೊಳಿಸಿತು.

2007— ಹೊಸ ಯುಗದ ಆರಂಭ

ಬದಲಾಯಿಸಿ

2007ರ ಮಾರ್ಚ್ 12ರಂದು ಕಾಸೋರ್ಟಿಯಂನ ಮುಖ್ಯಸ್ಥನ್ನಾಗಿದ್ದ, ಪ್ರೋಡ್ರೈವ್‌ನ ಚೇರ್ಮನ್ ಡೇವಿಡ್ ರಿಚರ್ಡ್ಸ್ ಆ‍ಯ್‌ಸ್ಟನ್ ಮಾರ್ಟಿನ್ ಕಂಪೆನಿಯನ್ನು 475 ಮಿಲಿಯನ್ ಪೌಂಡ್/ 848 ಮಿಲಿಯನ್ ಡಾಲರ‍್ಗಳಿಗೆ ಖರೀದಿಸಿದನು.[೧೪] ಆ ಖರೀದಿಯಲ್ಲಿ ಪ್ರೋಡ್ರೈವ್‍ನ ಹಣದ ಸಹಭಾಗಿತ್ವ ಇರಲಿಲ್ಲ. ಫೋರ್ಡ್ ಕಂಪೆನಿಯು ಸ್ವಲ್ಪ ಪ್ರಮಾಣದ ಶೇರನ್ನು(40 ಮಿಲಿಯನ್ £(ಪೌಂಡ್)/ 70 ಮಿಲಿಯನ್ $(ಡಾಲರ್)) ಹಾಗೆಯೇ ಉಳಿಸಿಕೊಂಡಿತು.[೧೫] ಕಾಸೋರ್ಟಿಯಂ ಜಾನ್ ಸಿಂಡರ್ಸ್, ಒಬ್ಬ ಆ‍ಯ್‌ಸ್ಟನ್ ಮಾರ್ಟಿನ್ ಕಲೆಕ್ಟರ್‌, ಎರಡು ಕುವೈತ್ ಕಂಪೆನಿಗಳು, ಇನ್ವೆಸ್ಟ್‌ಮೆಂಟ್ ದರ್ ಮತ್ತು ಅದೀಮ್ ಇನ್ವೆಸ್ಟ್‌ಮೆಂಟ್ ಕೋ.ಗಳನ್ನು ಸಹ ಒಳಗೊಂಡಿದೆ.

2007ರ ಜೂನ್ ಮತ್ತು ಆಗಸ್ಟ್ ನಡುವೆ ಮೊದಲ ಬಾರಿಗೆ ಬ್ರಿಟನ್ನಿನ ರಿಚರ್ಡ್ ಮೆರೆಡಿತ್ ಮತ್ತು ಫಿಲ್ ಕೊಲಿ ವಿ8 ವಾಂಟೇಜ್ ಕಾರಿನ ಮೂಲಕ ಹೊಸ ಏಷ್ಯಿಯನ್ ಹೈವೇಯನ್ನು ದಾಟಿದರು. ಎ‌ಹೆಚ್1 ಮತ್ತು ಎಹೆಚ್5ನಲ್ಲಿ ಟೊಕಿಯೋದಿಂದ (ಹೆದ್ದಾರಿಯ ಪೂರ್ವ ತುದಿ) ಪಶ್ಚಿಮ ತುದಿಯಲ್ಲಿರುವ ಇಸ್ತಾಂಬುಲ್‍ವರೆಗೆ ಒಟ್ಟು 12089 ಕಿ.ಮೀ.(7512ಮೈಲಿಗಳು) ಚಲಾಯಿಸಿ ಯೂರೊಪಿಯನ್ ಮೋಟಾರ್‍ವೇ ನೆಟ್‍ವರ್ಕ್‌ಗೆ ತಲುಪಿದರು. ಅಲ್ಲಿಂದ ಮತ್ತೆ 3259 ಕಿ.ಮೀ.(2025 ಮೈಲಿಗಳು) ಚಾಲನೆ ಮಾಡಿ ಲಂಡನ್ ತಲುಪಿದರು. ಇದರ ಉದ್ದೇಶ ಕಠಿಣ, ಅಪಾಯಕಾರಿ ರಸ್ತೆಗಳಲ್ಲೂ ವಿ8 ವ್ಯಾಂಟೇಜ್ ಕಾರಿನ ಬಾಳಿಕೆಯನ್ನು ತೋರಿಸುವುದಾಗಿತ್ತು. ಅಲ್ಲದೆ ಚೀನಾದಲ್ಲಿ ಕಾರಿನ ಬಗ್ಗೆ ಪ್ರಚಾರ ಮಾಡುವುದಾಗಿತ್ತು. ಈ ಕಾರ್ಯವು ತುಂಬಾ ಯಶಸ್ವಿಯಾಗಿ ನಡೆದು, ಕೇವಲ ಮೂರು ತಿಂಗಳ ಒಳಗೆ ಶಾಂಘೈ ಮತ್ತು ಬೀಜಿಂಗ್‍ನಲ್ಲಿ ಕಂಪೆನಿಯು ವ್ಯಾಪಾರಿ ಮಳಿಗೆಯನ್ನು ತೆರೆಯಿತು.[೧೬] ಜುಲೈ 19, 2007ರಲ್ಲಿ ನ್ಯೂಪೋರ್ಟ್ ಪ್ಯಾಗ್ನೆಲ್ ಪ್ಲಾನ್ಟ್ ಕೊನೆಯ ಕಾರಾದ ವ್ಯಾನ್ಕ್ವಿಶ್ ಎಸ್ ಎಂಬ ಕಾರನ್ನು ಬಿಡುಗಡೆ ಮಾಡಿತು. 1955ರಿಂದ ಅಂದಾಜು 13,000 ಕಾರುಗಳನ್ನು ಉತ್ಪಾದಿಸಲಾಗಿತ್ತು. ಟಿಕ್‍ಫೋರ್ಡ್ ಸ್ಟ್ರೀಟ್ ಕಾರ್ಖಾನೆಯು ದುರಸ್ತಿ ಮಾಡುವ ವಿಭಾಗವಾಗಿ ಆ‍ಯ್‌ಸ್ಟನ್ ಮಾರ್ಟಿನ್ ಮಾಲಿಕತ್ವದಲ್ಲೇ ಉಳಿಯಿತು.[೧೭] U.K. ನಿರ್ಮಾಣ ವಿಭಾಗವು ಜೊತೆಜೊತೆಗೆ ಹಿಂದಿನ ಆರ್ಎ‌ಫ್‌‍ವಿ-ಬಾಂಬರ್ ವಾಯುಯಾನ ಕ್ಷೇತ್ರದಲ್ಲಿನ ಗೇಯ್‌ಡನ್ ಮೇಲೆ ಕೇಂದ್ರೀಕೃತವಾಗಿತ್ತು.[೧೮] 2004, ಮಾರ್ಚ್ 4ರಂದು ಮ್ಯಾಗ್ನಾ ಸ್ಟೀಯರ್ ಜೊತೆ ಹೊರಗುತ್ತಿಗೆ ಒಪ್ಪಂದ ಮಾಡಿಕೊಂಡಿತು. ಇದರ ಪ್ರಕಾರ ಗ್ರ್ಯಾಜ್, ಆಸ್ಟ್ರಿಯಾ ಮುಂತಾದ ಕಡೆ ಕಂಪೆನಿಗಳು ಪ್ರಾರಂಭವಾಗಿ ವಾರ್ಷಿಕ 2000ಕ್ಕೂ ಹೆಚ್ಚು ಕಾರುಗಳು ಉತ್ಪಾದನೆಯಾದವು.

ಕಂಪೆನಿಯ ಬೆಳವಣಿಗೆ ಮತ್ತು ಯಶಸ್ಸಿಗೆ ಗೇಡನ್ ಕೇಂದ್ರಬಿಂದುವಾಗಿತ್ತು ಹಾಗೂ ವ್ಯಾಪಾರಕ್ಕೆ ಹೃದಯ ಭಾಗವಾಗಿತ್ತು. ಆ‍ಯ್‌ಸ್ಟನ್ ಮಾರ್ಟಿನ್ ಕಂಪೆನಿಯ ಉತ್ಪನ್ನಗಳ ವಿನ್ಯಾಸ ಮತ್ತು ಇತರ ಕಾರ್ಯಗಳು ಗೇಡನ್‍ನಲ್ಲಿ ಮುಂದುವರೆಯಿತು.[೧೯]

ಆ‍ಯ್‌ಸ್ಟನ್ ಮಾರ್ಟಿನ್ ಯೂರೋಪಿನಲ್ಲಿ ಹಲವಾರು ಮಳಿಗೆಗಳನ್ನು ತೆರೆಯುವ ಮೂಲಕ ಜಾಗತಿಕವಾಗಿ ಸದೃಢವಾಯಿತು. ಅಲ್ಲದೆ ಕಂಪೆನಿ ಪ್ರಾರಂಭವಾಗಿ 93 ವರ್ಷಗಳ ಬಳಿಕ ಪ್ರಥಮ ಬಾರಿಗೆ ಚೀನಾದಲ್ಲಿ ಬೀಜಿಂಗ್ ಮತ್ತು ಶಾಂಘೈನಲ್ಲಿ ಶಾಖೆಯನ್ನು ತೆರೆಯಿತು.ಇದು 28 ರಾಷ್ಟ್ರಗಳಲ್ಲಿ 120 ಕಂಪೆನಿಯ ಅಧಿಕೃತ ವ್ಯಾಪಾರಗಾರರನ್ನು ಹೊಂದುವಂತೆ ಮಾಡಿತು.[೨೦] 2008, ಸೆಪ್ಟೆಂಬರ್1ರಂದು ಲಗೊಂಡಾ ಮಾರ್ಕ್‌ನ ಹೊಸದಾದ ಮಾದರಿ ಬರಲಿದೆ ಎಂದು ಹೇಳಿತು. 2009ರಲ್ಲಿ ಕಂಪೆನಿಯ 100ನೇ ವಾರ್ಷಿಕೋತ್ಸವ ಇದ್ದು ಆಗ ಆ ಕಾರಿನ ಬಗ್ಗೆ ವಿವರಣೆ ನೀಡಲಾಗುತ್ತದೆ. 2012ರ ವೇಳೆಗೆ ಮೊದಲ ಕಾರು ಹೊರಬರಲಿದೆ.[೨೧] 2008, ಡಿಸೆಂಬರ‍್ನಲ್ಲಿ ಆ‍ಯ್‌ಸ್ಟನ್ ಮಾರ್ಟಿನ್ ತನ್ನ ತನ್ನ ಒಟ್ಟು 1850 ಉದ್ಯೋಗಿಗಳಲ್ಲಿ 600 ಉದ್ಯೋಗಿಗಳನ್ನು ಕಡಿಮೆಮಾಡಲು ನಿರ್ಧರಿಸಿತು.[೨೨]

2009—ಮರಳಿ ಲೆ ಮ್ಯಾನ್ಸ್‌ಗೆ

ಬದಲಾಯಿಸಿ

2009, ಜನವರಿಯಲ್ಲಿ ಕಂಪೆನಿಯು 2009ರ ಲೆ ಮ್ಯಾನ್ಸ್ 24 ಗಂಟೆಗಳ ರೇಸ್‍ನಲ್ಲಿ ಫ್ಯಾಕ್ಟರಿ ತಂಡವಾಗಿ ಪ್ರತಿಷ್ಠೆಯ ಎಲ್‍ಎಮ್‍ಪಿ1 ವಿಭಾಗದಲ್ಲಿ ಭಾಗವಹಿಸುವುದಾಗಿ ಘೋಷಿಸಿತು. 2008ರಲ್ಲಿ ಲೊಲ ಬಿ08/60 ಎಲ್‍ಎಮ್‍ಪಿ1 ಕೌಪ್ ಮಾದರಿಯೊಂದಿಗೆ ಚೌರೋಜ್ ರೇಸಿಂಗ್ ಬ್ಯಾನರ‍್ನ ಅಡಿಯಲ್ಲಿ ಸ್ಪರ್ಧಿಸಿದ ಆ‍ಯ್‌ಸ್ಟನ್ ಮಾರ್ಟಿನ್ ಮುಂದೆ ಅಲ್ಪ ಬದಲಾವಣೆಯೊಂದಿಗೆ ಲೊಲ ಎಲ್‍ಎಂಪಿ1 ಮಾದರಿಯನ್ನು ಉಪಯೋಗಿಸಲಿದೆ. 2009ರಲ್ಲಿ ಲೆ ಮ್ಯಾನ್ಸ್ 24 ಗಂಟೆಗಳ ಸ್ಪರ್ಧೆಯಲ್ಲಿ 3 ಲೊಲ ಕಾರುಗಳನ್ನು ಆ‍ಯ್‌ಸ್ಟನ್ ಮಾರ್ಟಿನ್ ಪರಿಚಯಿಸಿತು. ಆದರೆ ಎರಡಕ್ಕೆ ಮಾತ್ರ ಪ್ರಾಯೋಜಕರು ದೊರೆತಿದ್ದಾರೆ. ಆ‍ಯ್‌ಸ್ಟನ್ ಮಾರ್ಟಿನ್ ಏಪ್ರಿಲ್‍ನ ಮೊದಲ ಭಾಗದಲ್ಲಿ ಬಾರ್ಸಿಲೋನಾದಲ್ಲಿ ಪ್ರಾರಂಭವಾಗುವ ಸ್ಪರ್ಧೆಯೊಂದಿಗೆ ಸಂಪೂರ್ಣ ಲೆ ಮ್ಯಾನ್ಸ್ 24 ಗಂಟೆಗಳ ಸ್ಪರ್ಧೆಯಲ್ಲಿ ಭಾಗವಹಿಸಲಿದೆ. ಕಾರ್ಯಕ್ರಮವು ದುರಾದೃಷ್ಟವಶಾತ್‍ ಪಾಲ್ ರಿಕಾರ್ಡ್ ಪರೀಕ್ಷೆಯ ಪೂರ್ವ ಹಂತದಲ್ಲೇ ಥಾಮಸ್ ಎಂಜೆ 007 ಕಾರಿನ್ ಅಪಘಾತದೊಂದಿಗೆ ಪ್ರಾರಂಭವಾಯಿತು. ಆ‍ಯ್‌ಸ್ಟನ್ ಮಾರ್ಟೀನ್‌ ರೇಸಿಂಗ್ ಅದರ ಬೆನ್ನಲ್ಲೇ ಹೊಸ ಲೋಲಾ ಕಾರ್ ಅನ್ನು ವಜಾಗೊಳಿಸಲಾದ ಚಾಸಿಗಳ ಬದಲಾಗಿ ನೀಡಿತು.[೨೩]

2010 ಗುತ್ತಿಗೆ ಕೊಟ್ಟ ರ್ಯಪಿಡೆ

ಬದಲಾಯಿಸಿ

ಮೊದಲ ನಾಲ್ಕು-ಬಾಗಿಲುಗಳ ಆ‍ಯ್‌ಸ್ಟನ್ ಮಾರ್ಟೀನ್‌ ರ್ಯಪಿಡೆ ಸ್ಪೋರ್ಟ್ಸ್ ಕಾರುಗಳು ಆಸ್ಟ್ರಿಯಾಗ್ರ್ಯಾಜ್ ನಲ್ಲಿರುವ ಮ್ಯಾಗ್ನಾ ಸ್ಟೀಯರ್ ಕಾರ್ಖಾನೆಯಿಂದ ಬಿಡುಗಡೆಯಾಯಿತು.[೨೪] ಒಪ್ಪಂದದ ತಯಾರಕರು ಆ‍ಯ್‌ಸ್ಟನ್ ಮಾರ್ಟೀನ್‌ ‌ಮತ್ತಿತರ ಮಾರ್ಕ್‌ನ ನಿರ್ಬಂಧಕರವಾದ ಮಾನದಂಡಗಳನ್ನು ಅನುಸರಿಸುವುದನ್ನು ಖಚಿತಪಡಿಸಲು, ಮರ್ಸೆಡೀಸ್-ಬೆಂಜ್ ಮತ್ತು ಪೆಗಾಟ್ಗಳನ್ನೂ ಸೇರಿದಂತೆ ಮೀಸಲಾಗಿಟ್ಟ ಸೌಲಭ್ಯಗಳನ್ನು ಒದಗಿಸುತ್ತಿದ್ದರು.[೨೫]

ಆ‍ಯ್‌ಸ್ಟನ್ ಮಾರ್ಟೀನ್‌ನ ಸಿನಿಮಾ ಮತ್ತು ಸಂಸ್ಕೃತಿ

ಬದಲಾಯಿಸಿ

ಕ್ಯಾಸಿನೊ ರೊಯಾಲ್ 2006)ನಲ್ಲಿ ಪೊಕರ್ ಆಟದಲ್ಲಿ ಗೆದ್ದ ನಂತರ ಜೇಮ್ಸ್ ಬಾಂಡ್‌ನ ಸ್ವಂತ ವಾಹನವಾಗುವ ಕ್ಲಾಸಿಕ್ ಡಿಬಿ5 ಮತ್ತು ಹೊಸಕಂಪನಿಯ ಕಾರಾದ ಡಿಬಿಎಸ್ನ್ನು ಕ್ವಾಂಟಮ್ ಆಫ್ ಸಾಲೇಸ್ (ಅಕ್ಟೋಬರ್ 31, 2008ರಲ್ಲಿ ಬಿಡುಗಡೆಯಾದ ಸಿನಿಮಾ)ದಲ್ಲಿ ಬಳಸಿದರು.

  • 1969ರ ದ ಇಟಾಲಿಯನ್ ಜಾಬ್‌ ನ ಮೂಲಪ್ರತಿಯಲ್ಲಿ ಮೈಕೊಲ್ ಕೈನ್‌ನ ಪಾತ್ರದವನು ರಜತ/ಬೂದು ಬಣ್ಣದ ಕನ್ವರ್ಟಿಬಲ್‌ ಡಿಬಿ4ನ್ನು ಚಲಾಯಿಸುತ್ತಾನೆ.
  • 1971 ಟಿವಿ ಸರಣಿಯಾ ದ ಪರ್ಸ್ವೈಡರ್ಸ್! ನಲ್ಲಿ ಸರ್ ರೋಜರ್ ಮೊರ್‌ನು ಬಹಮ ಹಳದಿ ಬಣ್ಣದ ಆ‍ಯ್‌ಸ್ಟನ್ ಮಾರ್ಟೀನ್‌ ಡಿಬಿಎಸ್‌ನ್ನು ಚಲಾಯಿಸಿದನು. ಡಿಬಿಎಸ್ ವಿ8ನ್ನು ಸರಣಿಗಳಲ್ಲಿ ಬಳಸಲಾಯಿತು, ಆದಾಗ್ಯೂ ವಿ8ತಯಾರಾಗಿತ್ತಾದ್ದರಿಂದ ಆರು-ಸ್ಸಿಲಿಂಡರ್‌ಗಳ ಡಿಬಿಎಸ್‌ನ್ನು ವಿ8ನ ರೀತಿ ಕಾಣುವಂತೆ ನವೀಕರಿಸಿ ಶೋಗಳಲ್ಲಿ ಬಳಸಲಾಯಿತು.

ಮಾಡಲ್‌ಗಳು (ವಿನ್ಯಾಸಗಳು)

ಬದಲಾಯಿಸಿ

ಆ‍ಯ್‌ಸ್ಟನ್ ಮಾರ್ಟೀನ್‌ನ ಮಾಡೆಲ್‌ನ ಹಸರುಗಳು ಹೊಸಬರಿಗೆ ಗೊಂದಲವನ್ನುಂಟುಮಾಡುತ್ತಿದ್ದವು. ಸಾಮಾನ್ಯವಾಗಿ ಹೆಚ್ಚು ಸಾಮರ್ಥ್ಯವುಳ್ಳ ಮಾಡೆಲ್‌ಗಳು ವಾಂಟೇಜ್ ಎಂಬ ಹೆಸರನ್ನು ಬಳಸುತ್ತಿದ್ದವು, ಹಾಗೆ ಕನ್ವರ್ಟಿಬಲ್‌ಗಳನ್ನು ವೊಲಾಟೆಯೆಂದು ಹೆಸರಿಸಲಾಗುತಿತ್ತು. ಪ್ರಚಲಿತ ವಿ8 ಮತ್ತು ವಿ12 ವಾಂಟೇಜ್ ಸರಣಿಗಳು ಇದರಿಂದ ಹೊರತಾಗಿದ್ದವು, ಹಾಗಿದ್ದರೂ ಹೆಚ್ಚು ಸಾಮರ್ಥ್ಯವುಳ್ಳ ಇನ್ನೊಂದು ಕಾರಿನ ಆವೃತ್ತಿಯಾಗಿರದೆ ಅದೇ ವರ್ಗದವಾಗಿದ್ದವು.

ಯುದ್ಧದ ಮೊದಲಿನ ಕಾರುಗಳು

ಬದಲಾಯಿಸಿ
  • 1921–1925 ಆ‍ಯ್‌ಸ್ಟನ್ ಮಾರ್ಟೀನ್‌ ಸ್ಟ್ಯಾಂಡರ್ಡ್ ಸ್ಪೋರ್ಟ್ಸ್
  • 1927–1932 ಆ‍ಯ್‌ಸ್ಟನ್ ಮಾರ್ಟೀನ್‌ ಫಸ್ಟ್ ಸೀರೀಸ್
  • 1929–1932 ಆ‍ಯ್‌ಸ್ಟನ್ ಮಾರ್ಟೀನ್‌ ಇಂಟರ್ನ್ಯಾಶನಲ್‌
  • 1932–1932 ಆ‍ಯ್‌ಸ್ಟನ್ ಮಾರ್ಟೀನ್‌ ಇಂಟರ್ನ್ಯಾಶನಲ್‌ ಲಿ ಮಾನ್ಸ್
  • 1932–1934 ಆ‍ಯ್‌ಸ್ಟನ್ ಮಾರ್ಟೀನ್‌ ಲಿ ಮಾನ್ಸ್
  • 1933–1934 ಆ‍ಯ್‌ಸ್ಟನ್ ಮಾರ್ಟೀನ್‌ 12/50 ಸ್ಟ್ಯಾಂಡರ್ಡ್
  • 1934–1936 ಆ‍ಯ್‌ಸ್ಟನ್ ಮಾರ್ಟೀನ್‌ Mk II
  • 1934–1936 ಆ‍ಯ್‌ಸ್ಟನ್ ಮಾರ್ಟೀನ್‌ ಅಲ್ಸ್‌ಸ್ಟರ್
  • 1936–1940 ಆ‍ಯ್‌ಸ್ಟನ್ ಮಾರ್ಟೀನ್‌ 2 ಲೀಟರ್ ಸ್ಪೀಡ್ ಮಾಡೆಲ್ಸ್‌ (23 ನಿರ್ಮಾಣ) ಕೊನೆಯ 8 ಸಿ-ಮಾದರಿಯ ವಿನ್ಯಾಸಕ್ಕೆ ಹೊಂದಿದಂತಾಗಿದ್ದವು.
  • 1937–1939 ಆ‍ಯ್‌ಸ್ಟನ್ ಮಾರ್ಟೀನ್‌ 15/98

ಯುದ್ಧಾನಂತರದ ಸ್ಪೋರ್ಟ್ಸ್ ಮತ್ತು ಜಿಟಿ ಕಾರುಗಳು

ಬದಲಾಯಿಸಿ

ಪ್ರಸಕ್ತ ಮಾದರಿಗಳು

ಬದಲಾಯಿಸಿ

ಭವಿಷ್ಯದ ಮಾಡೆಲ್‌ಗಳು

ಬದಲಾಯಿಸಿ

ರೇಸ್ ಕಾರುಗಳು

ಬದಲಾಯಿಸಿ
A 1966 ಆ‍ಯ್‌ಸ್ಟನ್ ಮಾರ್ಟೀನ್‌ ಡಿಬಿಆರ್1 ಅಲೊಯ್ ರೆಪ್ಲಿಕಾ
1980ರಲ್ಲಿ ಆ‍ಯ್‌ಸ್ಟನ್ ಮಾರ್ಟೀನ್‌' ವಿ8 ಎ ಗ್ರುಪ್ ಸಿ ನಿಮ್ರೋಡ್ ಎನ್‌ಆರ್ಎ/ಸಿ2 ಎಂಜಿನ್ ಬಳಸಲಾಗುತ್ತಿತ್ತು.
ಆ‍ಯ್‌ಸ್ಟನ್ ಮಾರ್ಟೀನ್‌' ಸದ್ಯದ ರೇಸಿಂಗ್ ಕಾರ್ಯಕ್ರಮದ ಭಾಗವಾಗಿ, ಚಾರೌಜ್‌ ರೇಸಿಂಗ್ ಸಿಸ್ಟಮ್ ಇದು ಸಾಂಪ್ರದಾಯಿಕ ಕ್ರೀಡಾ ವಾಹನಗಳ ಜೊತೆ ಆ‍ಯ್‌ಸ್ಟನ್ ಮಾರ್ಟೀನ್‌ ವಿ12ನಿಂದ ಭಾಗವಹಿಸುತ್ತದೆ.
ಇದನ್ನೂ ನೋಡಿ: ಲಿಸ್ಟ್‌ ಆಫ್ ಫಾರ್ಮುಲ ಒನ್ ಕನ್‌ಸ್ಟ್ರಕ್ಷರ್ಸ್ , ಆ‍ಯ್‌ಸ್ಟನ್ ಮಾರ್ಟೀನ್‌ ರೇಸಿಂಗ್

ಸಮಸ್ತ ರೇಸ್ ಕಾರುಗಳು (ಯುದ್ಧಾನಂತರ)

ಬದಲಾಯಿಸಿ

ಕೇವಲ ಇಂಜಿನ್ ಪೂರೈಕೆ ===

ಇನ್ ವರ್ಲ್ಡ್ ಚಾಂಪಿಯನ್‌ಶಿಪ್‌ನ ಫಲಿತಾಂಶದ ಪೂರ್ಣ ಸೂತ್ರ

ಬದಲಾಯಿಸಿ

(ಕೀ)

ವರ್ಷ ಚಾಸಿಸ್ ಸಂಶೋಧನೆ ಟೌಯರ್ಸ್ ಚಾಲಕ 1 2 3 4 5 6 7 8 9 10 ಅಂಕಗಳು ಡಬ್ಲುಸಿಸಿ
1959 ಆ‍ಯ್‌ಸ್ಟನ್ ಮಾರ್ಟೀನ್‌ ಡಿಬಿಆರ್4 ಆ‍ಯ್‌ಸ್ಟನ್ ಮಾರ್ಟೀನ್‌ ಎಲ್6 ? ಎಎಮ್‌ಒಎನ್ 500 ಎನ್‌ಇಡಿ [[ಟೆಂಪ್ಲೇಟು:ಫ್ರ್ಯಾ]] ಜಿಬಿಆರ್ ಜಿಇಆರ್ ಪಿಒಆರ್ ಐಟಿಎ ಯುಎಸ್‌ಎ 0 5ನೆಯ
  ರಾಯ್ ಸಲ್ವಡೊರಿ ನಿವೃತ್ತ 6 6 ನಿವೃತ್ತ
  ಕೆರೊಲ್ ಶೆಲ್ಬಿ ನಿವೃತ್ತ ನಿವೃತ್ತ 8 10
1960 ಆ‍ಯ್‌ಸ್ಟನ್ ಮಾರ್ಟೀನ್‌ ಡಿಬಿಆರ್4
ಆ‍ಯ್‌ಸ್ಟನ್ ಮಾರ್ಟೀನ್‌ ಡಿಬಿಆರ್5
ಆ‍ಯ್‌ಸ್ಟನ್ ಮಾರ್ಟೀನ್‌ ಎಲ್6 ? ಎಆರ್ಜಿ ಎಎಮ್‌ಒಎನ್ 500 ಎನ್‌ಇಡಿ ಬಿಇಎಲ್ [[ಟೆಂಪ್ಲೇಟು:ಫ್ರ್ಯಾ]] ಜಿಬಿಆರ್ ಪಿಒಆರ್ ಐಟಿಎ ಯುಎಸ್‌ಎ 0 8ನೆಯ
  ರಾಯ್ ಸಲ್ವಡೊರಿ ಡಿಎನ್‌ಪಿ
ನಿವೃತ್ತ
  ಮೊರಿಸ್ ಟ್ರಿಂಟಿಜಂಟ್ 11

ಸಂಪೂರ್ಣ್ 24 ಗಂಟೆಗಳ ಲಿ ಮಾನ್ಸ್ ಫಲಿತಾಂಶಗಳು

ಬದಲಾಯಿಸಿ
ವರ್ಷ Pos ವರ್ಗ ಇಲ್ಲ ತಂಡ ಚಾಲಕರು ಚಾಸಿಸ್ ಸಂಶೋಧನೆ Laps
1931 5 1.5 25   ಆ‍ಯ್‌ಸ್ಟನ್ ಮಾರ್ಟೀನ್‌   ಎ.ಸಿ. ಬರ್ಟೆಲ್ಲಿ
  ಮೊರಿಸ್ ಹಾರ್ವಿ
ಆ‍ಯ್‌ಸ್ಟನ್ ಮಾರ್ಟೀನ್‌ 1½ ಇಂಟರ್ನ್ಯಾಶನಲ್‌ ಆ‍ಯ್‌ಸ್ಟನ್ ಮಾರ್ಟೀನ್‌ 1.5L I4 139
1932 5 1.5 20   ಆ‍ಯ್‌ಸ್ಟನ್ ಮಾರ್ಟೀನ್‌ ಲಿಮಿಟೆಡ್.   ಸಮ್ಮಿ ನೂಸಮ್
  ಹೆಂಗೆನ್ ವೈಡನ್ ಗ್ರೆನ್
ಆ‍ಯ್‌ಸ್ಟನ್ ಮಾರ್ಟೀನ್‌ 1½ ಲಿ ಮಾನ್ಸ್ ಆ‍ಯ್‌ಸ್ಟನ್ ಮಾರ್ಟೀನ್‌ 1.5L I4 174
7 1.5 21   ಆ‍ಯ್‌ಸ್ಟನ್ ಮಾರ್ಟೀನ್‌ ಲಿಮಿಟೆಡ್.   ಎ.ಸಿ. ಬರ್ಟೆಲ್ಲಿ
  ಪಾಟ್ ಡ್ರಿಸ್ಕುಲ್
ಆ‍ಯ್‌ಸ್ಟನ್ ಮಾರ್ಟೀನ್‌ 1½ ಲಿ ಮಾನ್ಸ್ ಆ‍ಯ್‌ಸ್ಟನ್ ಮಾರ್ಟೀನ್‌ 1.5L I4 168
1933 5 1.5 25   ಆ‍ಯ್‌ಸ್ಟನ್ ಮಾರ್ಟೀನ್‌ ಲಿಮಿಟೆಡ್.   ಪಾಟ್ ಡ್ರಿಸ್ಕುಲ್
  ಕ್ಲಿಫ್ಟನ್ ಪೆನ್-ಹ್ಯೂಗ್ಸ್
ಆ‍ಯ್‌ಸ್ಟನ್ ಮಾರ್ಟೀನ್‌ 1½ ಲಿ ಮಾನ್ಸ್ ಆ‍ಯ್‌ಸ್ಟನ್ ಮಾರ್ಟೀನ್‌ 1.5L I4 188
7 1.5 24   ಆ‍ಯ್‌ಸ್ಟನ್ ಮಾರ್ಟೀನ್‌ ಲಿಮಿಟೆಡ್.   ಎ.ಸಿ. ಬರ್ಟೆಲ್ಲಿ
  ಸಮ್ಮಿ ಡೇವಿಸ್
ಆ‍ಯ್‌ಸ್ಟನ್ ಮಾರ್ಟೀನ್‌ 1½ ಲಿ ಮಾನ್ಸ್ ಆ‍ಯ್‌ಸ್ಟನ್ ಮಾರ್ಟೀನ್‌ 1.5L I4 174
1934 10 1.5 20   ಎಮ್.ಆರ್.ಇ. ಟಂಗ್   ರೆಗ್ಗಿ ಟಂಗ್
  ಮೊರಿಸ್ ಫಾಕ್ನರ್‌
ಆ‍ಯ್‌ಸ್ಟನ್ ಮಾರ್ಟೀನ್‌ 1½ ಲಿ ಮಾನ್ಸ್ ಆ‍ಯ್‌ಸ್ಟನ್ ಮಾರ್ಟೀನ್‌ 1.5L I4 188
11 1.5 24   ಜಾನ್ ಸೀಸುಲ್ ನೊಯೆಲ್   ಜಾನ್ ಸೀಸುಲ್ ನೊಯೆಲ್
  ಜೆನ್ ವೀಲರ್
ಆ‍ಯ್‌ಸ್ಟನ್ ಮಾರ್ಟೀನ್‌ 1½ ಲಿ ಮಾನ್ಸ್ ಆ‍ಯ್‌ಸ್ಟನ್ ಮಾರ್ಟೀನ್‌ 1.5L I4 180
1935 3 1.5 29   ರಾಯ್ Eccles   ಚಾರ್ಲೆಸ್ ಇ.ಸಿ.ಮಾರ್ಟಿನ್
  ಚಾರ್ಲೆಸ್ ಬ್ಲಾಕೆನ್‌ಬರಿ
ಆ‍ಯ್‌ಸ್ಟನ್ ಮಾರ್ಟೀನ್‌ 1½ ಅಲ್ಸ್‌ಸ್ಟರ್ ಆ‍ಯ್‌ಸ್ಟನ್ ಮಾರ್ಟೀನ್‌ 1.5L I4 215
8 1.5 33   ಮೊರಿಸ್ Faulkner   ಮೊರಿಸ್ ಫಾಕ್ನರ್‌‍
  ಟಾಮ್ ಕ್ಲಾರ್ಕ್
ಆ‍ಯ್‌ಸ್ಟನ್ ಮಾರ್ಟೀನ್‌ 1½ ಅಲ್ಸ್‌ಸ್ಟರ್ ಆ‍ಯ್‌ಸ್ಟನ್ ಮಾರ್ಟೀನ್‌ 1.5L I4 202
10 1.5 32   ಸಿ.ಟಿ. ಥಾಮಸ್   ಸಿ.ಟಿ. ಥಾಮಸ್
  ಮ್.ಕೆನ್ಯಾನ್
ಆ‍ಯ್‌ಸ್ಟನ್ ಮಾರ್ಟೀನ್‌ 1½ ಅಲ್ಸ್‌ಸ್ಟರ್ ಆ‍ಯ್‌ಸ್ಟನ್ ಮಾರ್ಟೀನ್‌ 1.5L I4 199
11 1.5 31  ಪಿ.ಎಲ್. ಡಾಂಕಿನ್   ಪೀಟರ್ ಡಾಂಕಿನ್
  ಲಾರ್ಡ್ ಮಾಲ್ಕಮ್ ಡಗ್ಲಸ್-ಹೆಮೊಲ್ಟನ್
ಆ‍ಯ್‌ಸ್ಟನ್ ಮಾರ್ಟೀನ್‌ 1½ ಅಲ್ಸ್‌ಸ್ಟರ್ ಆ‍ಯ್‌ಸ್ಟನ್ ಮಾರ್ಟೀನ್‌ 1.5L I4 199
12 1.5 27   ಜಾನ್ ಸೀಸುಲ್ ನೊಯೆಲ್   ಜಿಮ್ ಎಲ್ವೇಜ್
  ಮಾರ್ಟಿಮರ್ ಮೊರಿಸ್-ಗುಡ್‌ಆಲ್
ಆ‍ಯ್‌ಸ್ಟನ್ ಮಾರ್ಟೀನ್‌ 1½ ಆ‍ಯ್‌ಸ್ಟನ್ ಮಾರ್ಟೀನ್‌ 1.5L I4 196
15 1.5 30   ಆರ್.ಪಿ. ಗಾರ್ಡ್‌ನರ್   ಆರ್.ಪಿ. ಗಾರ್ಡ್‌ನರ್
  ಎ.ಸಿ. ಬಿಲೊಯ್
ಆ‍ಯ್‌ಸ್ಟನ್ ಮಾರ್ಟೀನ್‌ 1½ ಅಲ್ಸ್‌ಸ್ಟರ್ ಆ‍ಯ್‌ಸ್ಟನ್ ಮಾರ್ಟೀನ್‌ 1.5L I4 190
1937 5 1.5 37   ಜೆ.ಎಮ್.ಸ್ಕೆಫಿಂಗ್ಟನ್‌   ಜೆ.ಎಮ್.ಸ್ಕೆಫಿಂಗ್ಟನ್‌
  ಆರ್.ಸಿ. ಮರ್ಟನ್-ನೀಲ್
ಆ‍ಯ್‌ಸ್ಟನ್ ಮಾರ್ಟೀನ್‌ 1½ ಅಲ್ಸ್‌ಸ್ಟರ್ ಆ‍ಯ್‌ಸ್ಟನ್ ಮಾರ್ಟೀನ್‌ 1.5L I4 205
11 2.0 31   ಸಿ.ಟಿ. ಥಾಮಸ್   ಮೊರ್ಟಿಮರ್ ಮೊರೀಸ್-ಗುಡ್‌ಆಲ್
  ರಾಬರ್ಟ್ ಪಿ. ಹಿಚೆನ್ಸ್
ಆ‍ಯ್‌ಸ್ಟನ್ ಮಾರ್ಟೀನ್‌ ಸ್ಪೀಡ್ ಮಾಡೆಲ್ ಆ‍ಯ್‌ಸ್ಟನ್ ಮಾರ್ಟೀನ್‌ 2.0L I4 193
1939 12 2.0 29   ರಾಬರ್ಟ್ ಪೆವೆರೆಲ್ ಹಿಚೆನ್ಸ್   ರಾಬರ್ಟ್ ಪಿ. ಹಿಚೆನ್ಸ್
  ಮಾರ್ಟಿಮರ್ ಮೊರಿಸ್-ಗುಡ್‌ಆಲ್
ಆ‍ಯ್‌ಸ್ಟನ್ ಮಾರ್ಟೀನ್‌ ಸ್ಪೀಡ್ ಮಾಡೆಲ್ ಆ‍ಯ್‌ಸ್ಟನ್ ಮಾರ್ಟೀನ್‌ 2.0L I4 199
1949 7 ಸೆ
2.0
27   ಆರ್ಥರ್ ಜಾನ್ಸ್   ಆರ್ಥರ್ ಜಾನ್ಸ್
  ನಿಕ್ ಹೇಯ್ನ್ಸ್
ಆ‍ಯ್‌ಸ್ಟನ್ ಮಾರ್ಟೀನ್‌ 2-ಲೀಟರ್ ಸ್ಪೋರ್ಟ್ಸ್ (ಡಿಬಿ1) ಆ‍ಯ್‌ಸ್ಟನ್ ಮಾರ್ಟೀನ್‌ 2.0L I4 207
11 ಸೆ
2.0
29   ರಾಬರ್ಟ್ ಲಾರ್ರಿ   ರಾಬರ್ಟ್ ಲಾರ್ರಿ
  ರಾಬರ್ಟ್ ಡಬ್ಲು. ವಾಕೆ
ಆ‍ಯ್‌ಸ್ಟನ್ ಮಾರ್ಟೀನ್‌ 2-ಲೀಟರ್ ಸ್ಪೋರ್ಟ್ಸ್ (ಡಿಬಿ1) ಆ‍ಯ್‌ಸ್ಟನ್ ಮಾರ್ಟೀನ್‌ 2.0L I4 ?
1950 5 ಸೆ
3.0
19   ಆ‍ಯ್‌ಸ್ಟನ್ ಮಾರ್ಟೀನ್‌ ಲಿಮಿಟೆಡ್.   ಜಾರ್ಜ್ ಅಬೆಕಾಸಿಸ್
  ಲಾನ್ಸ್ ಮಾಕ್ಲಿನ್
ಆ‍ಯ್‌ಸ್ಟನ್ ಮಾರ್ಟೀನ್‌ ಡಿಬಿ2 ಆ‍ಯ್‌ಸ್ಟನ್ ಮಾರ್ಟೀನ್‌ 2.6L I6 249
6 ಸೆ
3.0
21   ಆ‍ಯ್‌ಸ್ಟನ್ ಮಾರ್ಟೀನ್‌ ಲಿಮಿಟೆಡ್.   ಚಾರ್ಲ್ಸ್ ಬ್ಲಾಕೆನ್‌ಬರಿ
  ರೆಗ್ ಪರ್ನೆಲ್
ಆ‍ಯ್‌ಸ್ಟನ್ ಮಾರ್ಟೀನ್‌ ಡಿಬಿ2 ಆ‍ಯ್‌ಸ್ಟನ್ ಮಾರ್ಟೀನ್‌ 2.6L I6 244
1951 3 ಸೆ
3.0
26   ಆ‍ಯ್‌ಸ್ಟನ್ ಮಾರ್ಟೀನ್‌ ಲಿಮಿಟೆಡ್.   ಲಾನ್ಸ್ ಮಾಕ್ಲಿನ್
  ಎರಿಕ್ ಟಾಂಪ್‌‍ಸನ್
ಆ‍ಯ್‌ಸ್ಟನ್ ಮಾರ್ಟೀನ್‌ ಡಿಬಿ2 ಆ‍ಯ್‌ಸ್ಟನ್ ಮಾರ್ಟೀನ್‌ 2.6L I6 257
5 ಸೆ
3.0
25   ಆ‍ಯ್‌ಸ್ಟನ್ ಮಾರ್ಟೀನ್‌ ಲಿಮಿಟೆಡ್.   ಜಾರ್ಜ್ ಅಬೆಕಾಸಿಸ್
  ಬ್ರೈನ್ ಶಾವೆ-ಟೇಲರ್
ಆ‍ಯ್‌ಸ್ಟನ್ ಮಾರ್ಟೀನ್‌ ಡಿಬಿ2 ಆ‍ಯ್‌ಸ್ಟನ್ ಮಾರ್ಟೀನ್‌ 2.6L I6 255
7 ಸೆ
3.0
24   ಆ‍ಯ್‌ಸ್ಟನ್ ಮಾರ್ಟೀನ್‌ ಲಿಮಿಟೆಡ್.   ರೆಗ್ ಪರ್ನೆಲ್
  ಡೇವಿಡ್ ಹಂಪ್‌ಶೈರ್
ಆ‍ಯ್‌ಸ್ಟನ್ ಮಾರ್ಟೀನ್‌ ಡಿಬಿ2 ಆ‍ಯ್‌ಸ್ಟನ್ ಮಾರ್ಟೀನ್‌ 2.6L I6 252
10 ಸೆ
3.0
28   ಎನ್.ಹೆಚ್.ಮನ್   ನೈಜುಲ್ ಮನ್
  ಮಾರ್ಟಿಮರ್ ಮೊರಿಸ್-ಗುಡ್‌ಆಲ್
ಆ‍ಯ್‌ಸ್ಟನ್ ಮಾರ್ಟೀನ್‌ ಡಿಬಿ2 ಆ‍ಯ್‌ಸ್ಟನ್ ಮಾರ್ಟೀನ್‌ 2.6L I6 236
13 ಸೆ
3.0
27   ಪಿ.ಟಿ.ಸಿ.ಕ್ಲರ್ಕ್   ಪೀಟರ್ ಕ್ಲರ್ಕ್
  ಜೇಮ್ಸ್ ಸ್ಕಾಟ್-ಡಾಗ್ಲಸ್
ಆ‍ಯ್‌ಸ್ಟನ್ ಮಾರ್ಟೀನ್‌ ಡಿಬಿ2 ಆ‍ಯ್‌ಸ್ಟನ್ ಮಾರ್ಟೀನ್‌ 2.6L I6 233
1952 7 ಸೆ
3.0
32   ಪೀಟರ್ ಸಿ.ಟಿ ಕ್ಲರ್ಕ್   ಪೀಟರ್ ಕ್ಲರ್ಕ್
  ಮೈಕ್ ಕೀನ್
ಆ‍ಯ್‌ಸ್ಟನ್ ಮಾರ್ಟೀನ್‌ ಡಿಬಿ2 ಆ‍ಯ್‌ಸ್ಟನ್ ಮಾರ್ಟೀನ್‌ 2.6L I6 248
1955 2 ಸೆ
3.0
23   ಆ‍ಯ್‌ಸ್ಟನ್ ಮಾರ್ಟೀನ್‌ ಲಿಮಿಟೆಡ್.   ಪೀಟರ್ ಕೊಲಿನ್ಸ್
  ಪೌಲ್ ಫೆರೆ
ಆ‍ಯ್‌ಸ್ಟನ್ ಮಾರ್ಟೀನ್‌ ಡಿಬಿ3ಎಸ್‌ ಆ‍ಯ್‌ಸ್ಟನ್ ಮಾರ್ಟೀನ್‌ 2.9L I6 302
1956 2 ಸೆ
3.0
8   ಆ‍ಯ್‌ಸ್ಟನ್ ಮಾರ್ಟೀನ್‌ ಲಿಮಿಟೆಡ್.   ಸ್ಟಿರ್ಲಿಂಗ್ ಮೊಸ್
  ಪೀಟರ್ ಕೊಲಿನ್ಸ್
ಆ‍ಯ್‌ಸ್ಟನ್ ಮಾರ್ಟೀನ್‌ ಡಿಬಿ3ಎಸ್‌ ಆ‍ಯ್‌ಸ್ಟನ್ ಮಾರ್ಟೀನ್‌ 2.9L I6 299
1957 11 ಸೆ
3000
21   ಡೇವಿಡ್ ಬ್ರೌನ್   ಜೀನ್-ಪೌಲ್ ಕೊಲಾಸ್
  ಜೀನ್ Kerguen
ಆ‍ಯ್‌ಸ್ಟನ್ ಮಾರ್ಟೀನ್‌ ಡಿಬಿ3ಎಸ್‌ ಆ‍ಯ್‌ಸ್ಟನ್ ಮಾರ್ಟೀನ್‌ 3.0L I6 272
1958 2 ಸೆ
3000
5   ಪಿ & ಎ.ಜಿ. ವೈಟ್‌ಹೆಡ್   ಗ್ರಹಮ್ ವೈಟ್‌ಹೆಡ್
  ಪೀಟರ್ ವೈಟ್‌ಹೆಡ್
ಆ‍ಯ್‌ಸ್ಟನ್ ಮಾರ್ಟೀನ್‌ ಡಿಬಿ3ಎಸ್‌ ಆ‍ಯ್‌ಸ್ಟನ್ ಮಾರ್ಟೀನ್‌ 3.0L I6 293
1959 1 ಸೆ
3.0
5   ಡೇವಿಡ್ ಬ್ರೌನ್ ರೇಸಿಂಗ್ ವಿಭಾಗ   ಕೆರ್ರಾಲ್ ಶೆಲ್ಬಿ
  ರಾಯ್ ಸಲ್ವಡೊರಿ
ಆ‍ಯ್‌ಸ್ಟನ್ ಮಾರ್ಟೀನ್‌ ಡಿಬಿಆರ್1/300 ಆ‍ಯ್‌ಸ್ಟನ್ ಮಾರ್ಟೀನ್‌ 3.0L I6 323
2 ಸೆ
3.0
6   ಡೇವಿಡ್ ಬ್ರೌನ್ ರೇಸಿಂಗ್ ವಿಭಾಗ   ಮೊರಿಸ್ ಟ್ರಿಟಿಗೆಂಟ್
  ಪೌಲ್ ಫೆರೆ
ಆ‍ಯ್‌ಸ್ಟನ್ ಮಾರ್ಟೀನ್‌ ಡಿಬಿಆರ್1/300 ಆ‍ಯ್‌ಸ್ಟನ್ ಮಾರ್ಟೀನ್‌ 3.0L I6 322
1960 3 ಸೆ
3.0
7   ಬಾರ್ಡರ್ ರೆವರ್ಸ್   ರಾಯ್ ಸಲ್ವಡೊರಿ
  ಜಿಮ್ ಕ್ಲರ್ಕ್
ಆ‍ಯ್‌ಸ್ಟನ್ ಮಾರ್ಟೀನ್‌ ಡಿಬಿಆರ್1/300 ಆ‍ಯ್‌ಸ್ಟನ್ ಮಾರ್ಟೀನ್‌ 3.0L I6 306
9 ಸೆ
3.0
8   ಮೇಜರ್ ಐಯನ್ ಬಿ ಬೈಲೀ   ಐಯನ್ ಬಿ ಬೈಲೀ
  ಜಾಕ್ ಫೈರ್‌ಮನ್
ಆ‍ಯ್‌ಸ್ಟನ್ ಮಾರ್ಟೀನ್‌ ಡಿಬಿಆರ್1/300 ಆ‍ಯ್‌ಸ್ಟನ್ ಮಾರ್ಟೀನ್‌ 3.0L I6 281
1977 17 ಜಿಟಿಪಿ 83   ಎಸ್ಎಎಸ್‌ ರಾಬಿನ್ ಹ್ಯಾಮಿಲ್ಟನ್
  ರಾಬಿನ್ ಹ್ಯಾಮಿಲ್ಟನ್
  ಡೇವಿಡ್ ಪ್ರೀಸ್
  ಮೈಕ್ ಸಮನ್
ಆ‍ಯ್‌ಸ್ಟನ್ ಮಾರ್ಟೀನ್‌ ಡಿಬಿಎಸ್ ವಿ8 ಆರ್ಹೆಚ್‌ಎಮ್‌/1 ಆ‍ಯ್‌ಸ್ಟನ್ ಮಾರ್ಟೀನ್‌ 5.3L ವಿ8 260
1982 7 ಸಿ 32   ವಿಸ್ಕೌಂಟ್ ಡನೆ ಪೇಸ್ ಪೆಟ್ರೋಲಿಯಮ್   ರೇ ಮೆಲ್ಲಾಕ್
  ಸೈಮನ್ ಫಿಲಿಪ್ಸ್
  ಮೈಕ್ ಸಮನ್
ನಿಮ್ರೋಡ್ ಎನ್‌ಆರ್ಎ/ಸಿ2 ಆ‍ಯ್‌ಸ್ಟನ್ ಮಾರ್ಟೀನ್‌-ಟಿಕ್‌ಫೋರ್ಡ್ ಡಿಪಿ1229 5.3L ವಿ8 317
1983 17 ಸಿ 41   ಇಎಮ್‌ಕೆಎ ಪ್ರೊಡಕ್ಷನ್ಸ್ ಲಿಮಿಟೆಡ್.   ಟಿಫ್ ನೀಡೆಲ್
  ಸ್ಟೀವ್ ಒರೂರ್ಕ್
  ನಿಕ್ ಫೌರೆ
ಇಎಮ್‌ಕೆಎ ಸಿ83/1 ಆ‍ಯ್‌ಸ್ಟನ್ ಮಾರ್ಟೀನ್‌-ಟಿಕ್‌ಪೋರ್ಡ್ 5.3L ವಿ8 275
1985 11 ಸಿ1 66   ಇಎಮ್‌ಕೆಎ ಪ್ರೊಡಕ್ಷನ್ಸ್, ಲಿಮಿಟೆಡ್.   ಟಿಫ್ ನೀಡೆಲ್
  ಸ್ಟೀವ್ ಒರೂರ್ಕ್
  ನಿಕ್ ಫೌರೆ
ಇಎಮ್‌ಕೆಎ ಸಿ84/1 ಆ‍ಯ್‌ಸ್ಟನ್ ಮಾರ್ಟೀನ್‌-ಟಿಕ್‍ಫೊರ್ಡ್ 5.3L ವಿ8 338
(1989). 11 ಸಿ1 18   ಆ‍ಯ್‌ಸ್ಟನ್ ಮಾರ್ಟೀನ್‌
  ಎಕ್ಯುರಿ ಎಕೊಸೆ
  ಬ್ರೈನ್ ರೆಡ್‌ಮನ್
  ಮೈಕೆಲ್ ರೊ
 ಕೊಸ್ಟಲ್ ಲೊಸ್
ಆ‍ಯ್‌ಸ್ಟನ್ ಮಾರ್ಟೀನ್‌ ಎಮ್‌ಆರ್1 ಆ‍ಯ್‌ಸ್ಟನ್ ಮಾರ್ಟೀನ್‌ (ಕಾಲ್‌ಅವೇ) ಆರ್ಡಿಪಿ87 6.0L ವಿ8 340
2005 9 ಜಿಟಿ1 59   ಆ‍ಯ್‌ಸ್ಟನ್ ಮಾರ್ಟೀನ್‌ ರೇಸಿಂಗ್   ಡೇವಿಡ್‌ ಬ್ರಾಬಮ್
  ಸ್ಟೀಫನ್ ಸರ್ರಾಜಿನ್
  ಡರ್ರೆನ್ ಟರ್ನರ್
ಆ‍ಯ್‌ಸ್ಟನ್ ಮಾರ್ಟೀನ್‌ ಡಿಬಿಆರ್9 ಆ‍ಯ್‌ಸ್ಟನ್ ಮಾರ್ಟೀನ್‌ 6.0L ವಿ12 333
2006 6 ಜಿಟಿ1 007   ಆ‍ಯ್‌ಸ್ಟನ್ ಮಾರ್ಟೀನ್‌ ರೇಸಿಂಗ್   ಥಾಮಸ್ ಎಂಜ್
  ಡರ್ರೆನ್ ಟರ್ನರ್
 ಅಂಡ್ರೇಯ ಪಿಚಿನಿ
ಆ‍ಯ್‌ಸ್ಟನ್ ಮಾರ್ಟೀನ್‌ ಡಿಬಿಆರ್9 ಆ‍ಯ್‌ಸ್ಟನ್ ಮಾರ್ಟೀನ್‌ 6.0L ವಿ12 350

| 9 | ಜಿಟಿ1 | 62 |   ರಷ್ಯನ್ ಏಜ್ ರೇಸಿಂಗ್
  ಟೀಮ್ ಮೊಡೆನ |   ಆ‍ಯ್‌೦ಟೊನಿಯೊ ಗಾರ್ಸಿಯ
  ಡೇವಿಡ್ ಬ್ರಾಬಮ್
  ನೆಲ್ಸನ್ ಪಿಕ್ವೆಟ್ ಜೂನಿಯರ್. | ಆ‍ಯ್‌ಸ್ಟನ್ ಮಾರ್ಟೀನ್‌ ಡಿಬಿಆರ್9 | ಆ‍ಯ್‌ಸ್ಟನ್ ಮಾರ್ಟೀನ್‌ 6.0L ವಿ12 | 343 |- ! | 10 | ಜಿಟಿ1 | 009 |   ಆ‍ಯ್‌ಸ್ಟನ್ ಮಾರ್ಟೀನ್‌ ರೇಸಿಂಗ್ |   ಪೆಡ್ರೊ ಲಮಿ
  ಸ್ಟೀಫನ್ ಸೆರ್ರಾಜಿನ್
  ಸ್ಟೀಫನ್ ಒರ್ಟೇಲಿ | ಆ‍ಯ್‌ಸ್ಟನ್ ಮಾರ್ಟೀನ್‌ ಡಿಬಿಆರ್9 | ಆ‍ಯ್‌ಸ್ಟನ್ ಮಾರ್ಟೀನ್‌ 6.0ಎಲ್ ವಿ12 | 342 |- |}

ಇವನ್ನೂ ನೋಡಿ

ಬದಲಾಯಿಸಿ

ಟಿಪ್ಪಣಿಗಳು

ಬದಲಾಯಿಸಿ
  1. "The Company - News". Aston Martin. 2007-03-12. Archived from the original on 2008-12-27. Retrieved 2009-04-29.
  2. "Aston Martin - The Company - History Timeline". Archived from the original on 2008-04-05. Retrieved 2008-05-07.
  3. ಬಿಬಿಸಿ ನ್ಯೂಸ್ ಆರ್ಟಿಕಲ್ಸ್
  4. ಫೋರ್ಡ್ ಆ‍ಯ್‌ಸ್ಟನ್ ಮಾರ್ಟೀನ್‌ಗೆ $925 ಮಿಲಿಯನ್ ಗೆ ಎಜಿಎಂ ಕಾರ್‌ಟೆಕ್‌ನಲ್ಲಿ ಮಾರಾಟ ಮಾಡಿತು,ಮಾರ್ಚ್ 12 2007
  5. ಲಿಯೋನಲ್ ವಾಕರ್ ಬಿರ್ಚ್ ಮಾರ್ಟೀನ್ (1878 –ಅಕ್ಟೋಬರ್ 14 1945) ಒಬ್ಬ ಕಾರ್ನಿಶ್‌ಮನ್
  6. "Aston Martin: Car Manufacturer: Great British Design Quest". Design Museum. Archived from the original on 2012-02-20. Retrieved 2010-08-02.
  7. "Aston martin 1914–2005". Retrieved 2009-02-15.
  8. "News and Comment: Aston Martin changes hands". Autocar. 136 (nbr 3960): 2. date 9 March 1972. {{cite journal}}: Check date values in: |date= (help)
  9. ೯.೦ ೯.೧ "The Aston Miracle". Car Magazine: pages 35–362. date September 1978. {{cite journal}}: |page= has extra text (help); Check date values in: |date= (help)
  10. ೧೦.೦ ೧೦.೧ ೧೦.೨ ೧೦.೩ "Obituary: Victor Gauntlett". Independent, The (London). Archived from the original on 2008-02-03. Retrieved 2008-02-03.
  11. "ಟಿಎಲ್‌ಡಿ - ಪ್ರೆಸ್ (ಆ‍ಯ್‌ಲೀಸ್/ಎಂಐ6) - thegoldengun.co.uk". Archived from the original on 2008-05-13. Retrieved 2010-08-02.
  12. "ಕ್ಲಾಸಿಕ್‌ಇನ್‌ಸೈಡ್ - ದ ಕ್ಲಾಸಿಕ್ ಡ್ರೈವರ್ ನ್ಯೂಸ್‌ಲೆಟರ್". Archived from the original on 2007-10-11. Retrieved 2010-08-02.
  13. ಕೀಪಿಂಗ್ ದ ಬೆಸ್ಟ್ ಆಫ್ ಬ್ರಿಟೀಷ್ ರನ್ನಿಂಗ್ - smh.com.au
  14. 00 ಹೆವನ್! Archived 2007-10-11 ವೇಬ್ಯಾಕ್ ಮೆಷಿನ್ ನಲ್ಲಿ.ಬಾಂಡ್ಸ್ ಕಾರ್ ಬ್ರಿಟೀಷ್ ಅಗೇನ್ |ಸ್ಕೈ ನ್ಯೂಸ್ |ಹೋಮ್ Archived 2007-10-11 ವೇಬ್ಯಾಕ್ ಮೆಷಿನ್ ನಲ್ಲಿ.
  15. "David Richards heads consortium to buy Aston Martin" (Press release). Prodrive. 2007-03-12. Archived from the original on 2014-08-26. Retrieved 2010-08-02.
  16. "New Aston Martin race series for Asia in 2008" (Press release). Aston Martin. 2007-11-28. Archived from the original on 2007-12-04. Retrieved 2010-08-02.
  17. "From Newport Pagnell to Gaydon". The Automobile. 2007. {{cite magazine}}: Cite magazine requires |magazine= (help); Unknown parameter |month= ignored (help)
  18. ಆ‍ಯ್‌ಸ್ಟನ್ ಮಾರ್ಟೀನ್‌ ಗೇಡಾನ್ Archived 2012-08-28 ವೇಬ್ಯಾಕ್ ಮೆಷಿನ್ ನಲ್ಲಿ. ಆ‍ಯ್‌ಸ್ಟನ್ ಮಾರ್ಟೀನ್‌ನ ಟಿಮ್ ಕಾಟ್ಟಿಂಗ್‌ಹ್ಯಾಮ್‌ನ (ಅನಧೀಕೃತ) ತಾಣದಲ್ಲಿ
  19. ಆ‍ಯ್‌ಸ್ಟನ್ ಮಾರ್ಟೀನ್‌'ನ ಸಿಇಒ, ಡಾಉಲ್ರಿಚ್ ಬೆಜ್ Archived 2013-05-23 ವೇಬ್ಯಾಕ್ ಮೆಷಿನ್ ನಲ್ಲಿ. ಅಧೀಕೃತ ತಾಣ,ಮಾರ್ಚ್ 4 2008
  20. "Aston Martin News - Aston Martin arrives in China". Archived from the original on 2013-05-23. Retrieved 2010-08-02.
  21. "Aston Martin News - Aston Martin CEO confirms the revival of the Lagonda Marque". Archived from the original on 2013-05-23. Retrieved 2010-08-02.
  22. "England | Third of jobs go at Aston Martin". BBC News. 2008-12-01. Retrieved 2009-04-29.
  23. "What economic downturn? Aston Martin unveils new supercar". PopSci.com.au. 2009-01-30. Archived from the original on 2013-03-03. Retrieved 2009-01-30.
  24. ಮಾಧ್ಯಮ ಪ್ರಕಟಣೆ Archived 2013-05-23 ವೇಬ್ಯಾಕ್ ಮೆಷಿನ್ ನಲ್ಲಿ. ಅಧೀಕೃತ ಜಾಲತಾಣದಲ್ಲಿ,ಮೇ 7 2010
  25. ಪಾಲ್ ತಾನ್ ಫಸ್ಟ್ ಆ‍ಯ್‌ಸ್ಟನ್ ಮಾರ್ಟೀನ್‌ ರ್ಯಾಪಿಡ್ ರೋಲ್ಸ್ ಔಟ್ ಫ್ರಾಮ್ ಆಸ್ಟ್ರೀಯನ್ ಫ್ಯಾಕ್ಟರಿ at ಪೌಲ್ Tan.org,ಮೇ 10 2010
  26. http://www.imdb.com/title/tt0056869/trivia
  27. ಇಮೇಜಸ್ ಆಫ್ ಒನ್-77 Archived 2010-03-08 ವೇಬ್ಯಾಕ್ ಮೆಷಿನ್ ನಲ್ಲಿ. ಆ‍ಯ್‌ಸ್ಟನ್ ಮಾರ್ಟೀನ್‌ ಲಗೋಂಡಾ ಗ್ರುಪ್ ತಾಣ
  28. "Aston Martin Fan Club: Aston Martin Lagonda". Astonmartinfanclub.blogspot.com. 2009-07-21. Retrieved 2010-05-15.
  29. ೨೯.೦ ೨೯.೧ Posted by Websoft (2009-12-21). "Aston Martin Fan Club: Aston Martin Carbon Black Edition V12 Vantage And DBS Announced". Astonmartinfanclub.blogspot.com. Retrieved 2010-05-15.
  30. "Ten-Foot Aston Martin Cygnet Gets 50 MPG, Plays Sidecar to Your DBS". PopSci.com.au. 2009-07-01. Archived from the original on 2012-02-20. Retrieved 2009-07-01.
  31. Posted by Websoft (2010-01-16). "Aston Martin Fan Club: 2012 Aston Martin Cygnet". Astonmartinfanclub.blogspot.com. Retrieved 2010-05-15.


ಹೊರಗಿನ ಕೊಂಡಿಗಳು

ಬದಲಾಯಿಸಿ

ಟೆಂಪ್ಲೇಟು:Aston Martin