ಆಷಸ್
ಆಷಸ್ ಎಂದರೆ ಬೂದಿ. ಶವದಹನ ಮಾಡಿದಾಗ ಉಳಿಯುವ ಅವಶೇಷ. ಕ್ರಿಕೆಟ್ ಆಟಕ್ಕೂ ಆ್ಯಷಸ್ಗೂ ಇರುವ ಸಂಬಂಧವನ್ನೂ ಮೇರಿಲಿಬೋನ್ ಕ್ರಿಕೆಟ್ ಕ್ಲಬ್ಬಿನವರು ಪ್ರಕಟಿಸಿರುವ ಎಂ.ಸಿ.ಸಿ. 1787-1937 ಎಂಬ ಗ್ರಂಥದಲ್ಲಿ ವಿವರಿಸಲಾಗಿದೆ. ಅದರ ಚರಿತ್ರೆ ಹೀಗಿದೆ: ಇಂಗ್ಲಿಷ್ ಕ್ರಿಕೆಟ್‍ನ ಪ್ರಥಮ ತಂಡ 1862ರಲ್ಲಿ ಸರೆಯ ಎಚ್.ಎಚ್. ಸ್ಟೀಫನ್ಸನ್ನನ ನಾಯಕತ್ವದಲ್ಲಿ ಆಸ್ಟ್ರೇಲಿಯಕ್ಕೆ ಭೇಟಿ ನೀಡಿತು. ಇಂಗ್ಲಿಷ್ನವನಾದ ಲಾರೆನ್ ಎಂಬಾತನಿಂದ ತರಬೇತಿ ಪಡೆದ ಮೂಲನಿವಾಸಿಗಳಿಂದ ಕೂಡಿದ ಆಸ್ಟ್ರೇಲಿಯ ತಂಡ 1868ರಲ್ಲಿ ಇಂಗ್ಲೆಂಡಿನಲ್ಲಿ ಪ್ರವಾಸಮಾಡಿ ಅದನ್ನು ಸೋಲಿಸಿತು. ಅನಂತರ ಇಂಗ್ಲಿಷ್ ಕ್ರಿಕೆಟ್ ಆಟಗಾರರಿಂದ ತರಬೇತಿ ಪಡೆದ ಆಸ್ಟ್ರೇಲಿಯದ ಕ್ರಿಕೆಟ್ ವಿಶೇಷವಾಗಿ ಅಭಿವೃದ್ಧಿ ಹೊಂದಿತು. ಜೇಮ್ಸ್ ಲಿಲ್ಲಿ ವೈಟ್ನ ನಾಯಕತ್ವದಲ್ಲಿ ಇಂಗ್ಲೆಂಡಿನ ಬಾರಿ ತಂಡ 1876-77 ರಲ್ಲಿ ಆಸ್ಟ್ರೇಲಿಯಕ್ಕೆ ಭೇಟಿ ನೀಡಿತು. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಗಳ ನಡುವಣ ಪ್ರಥಮ ಕ್ರಿಕೆಟ್ ಪಂದ್ಯ ಆಗ ನಡೆಯಿತು. ಶ್ರೇಷ್ಠ ಕ್ರಿಕೆಟ್ ಕ್ರೀಡಾಪಟುಗಳಾದ ಚಾಲ್ರ್್ಸ ಬಾನರ್ಮೆನ್, ಎಫ್.ಆರ್ ಸ್ಪಫೋರ್ತ್ ಮತ್ತು ಡಬ್ಲ್ಯು. ಎಲ್. ಮುರ್ದೋಚ್‍ರಂತಹ ಆಟಗಾರರನ್ನು ಆ ಕಾಲಕ್ಕಾಗಲೇ ಮುಂದೆ ತಂದಿದ್ದ ಆಸ್ಟ್ರೇಲಿಯ ಆಶ್ಚರ್ಯಕರ ರೀತಿಯಲ್ಲಿ ಇಂಗ್ಲೆಂಡ್ ತಂಡವನ್ನು 45 ರನ್ನುಗಳಿಂದ ಸೋಲಿಸಿತು. ಪ್ರಥಮವಾಗಿ ಆಡಲು ಹೋದ ಬಾನರ್ಮೆನ್ 165 ರನ್ನು ಬಾರಿಸಿದ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ನಡುವಣ ಪ್ರಥಮ ಕ್ರಿಕೆಟ್ ಟೆಸ್ಟ್ ಪಂದ್ಯವನ್ನು 1880ರಲ್ಲಿ ಇಂಗ್ಲೆಂಡಿನಲ್ಲಿ ಆಡಲಾಯಿತು. ಆಸ್ಟ್ರೇಲಿಯ 1882, 1884 ಮತ್ತು 1890 ರಲ್ಲಿ ಇಂಗ್ಲೆಂಡಿಗೆ ಭೇಟಿ ನೀಡಿತು. ಆ ಕಾಲಕ್ಕೆ ಆಸ್ಟ್ರೇಲಿಯದ ಡಬ್ಲ್ಯು. ಎಲ್. ಮುರ್ದೋಚ್ ಶ್ರೇಷ್ಠ ಮಟ್ಟದ ಆಟಗಾರನಾಗಿ ಖ್ಯಾತನಾದ.
ಆಷಸ್ | |
---|---|
ದೇಶಗಳು | ಆಸ್ಟ್ರೇಲಿಯಾ ಇಂಗ್ಲೆಂಡ್ |
ನಿರ್ವಾಹಣೆ | ಐ ಸಿ ಸಿ |
ಫಾರ್ಮ್ಯಾಟ್ | ಟೆಸ್ಟ್ ಕ್ರಿಕೆಟ್ |
ಮೊದಲ ಪಂದ್ಯಾವಳಿ | 1882–83 |
ಮುಂದಿನ ಪಂದ್ಯಾವಳಿ | 2015 |
ಟೂರ್ನಮೆಂಟ್ ರೂಪ | 5-ಪಂದ್ಯಗಳ ಸರಣಿ |
ತಂಡಗಳ ಸಂಖ್ಯೆ | 2 |
ಪ್ರಸ್ತುತ ಚಾಂಪಿಯನ್ | ಆಸ್ಟ್ರೇಲಿಯಾ |
ಅತ್ಯಂತ ಯಶಸ್ವಿ | ಆಸ್ಟ್ರೇಲಿಯಾ (32 series wins) |
ಹೆಚ್ಚಿನ ರನ್‍ಗಳು | ಡಾನ್ ಬ್ರಾಡ್ಮನ್ (5,028) |
ಹೆಚ್ಚಿನ ವಿಕೆಟ್‍ಗಳು | ಶೇನ್ ವಾರ್ನ್ (195) |
2013–14 ಆಷಸ್ ಸರಣಿ | |
ಎರಡು ವರ್ಷಗಳ ಅನಂತರ ಇಂಗ್ಲೆಂಡ್‍ನಲ್ಲಿ ಆಡಿದ ಟೆಸ್ಟ್ ಪಂದ್ಯದಿಂದ ಆ್ಯಷಸ್‍ನ ಕಲ್ಪನೆ ಉದ್ಭವವಾಯಿತು. ಇಂಗ್ಲೆಂಡ್ ಈ ಪಂದ್ಯದಲ್ಲಿ ಹೀನಾಯವಾಗಿ ಸೋತಿತು. ಕ್ರೀಡೆಗಾಗಿಯೇ ಮೀಸಲಾಗಿದ್ದ ಪತ್ರಿಕೆಯೊಂದು (ದಿ ಸ್ಪೋರ್ಟಿಂಗ್ ಟೈಮ್ಸ್) ಇಂಗ್ಲಿಷ್ ಕ್ರಿಕೆಟ್ನ ಚರಮವಾಕ್ಯವನ್ನು ಬರೆಯುತ್ತ ಹೇಗೆ ಅದರ ದೇಹವನ್ನು ದಹನಗೊಳಿಸಿ ಬೂದಿಯನ್ನು ಆಸ್ಟ್ರೇಲಿಯಕ್ಕೆ ಒಯ್ಯಲಾಯಿತೆಂದು ವರ್ಣಿಸಿತು. ಮುಂದಿನ ಚಳಿಗಾಲದಲ್ಲಿ ಆ|| ಐವೊಬ್ಲೈ (ಈತ ಮುಂದೆ ಲಾರ್ಡ್ ಡಾರ್ನ್ಲೆ ಆದ) ನೇತೃತ್ವದಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಕ್ಕೆ ಭೇಟಿ ನೀಡಿ ಮೂರು ಟೆಸ್ಟ್ ಪಂದ್ಯಗಳ ಪೈಕಿ ಎರಡರಲ್ಲಿ ಆಸ್ಟ್ರೇಲಿಯವನ್ನು ಸೋಲಿಸಿತು. ಮೆಲ್ಬರ್ನನ ಕೆಲವು ಮಹಿಳೆಯರು ಸಣ್ಣ ಕರಂಡದಲ್ಲಿ ವಿಕೆಟ್ಗಳ ಮೇಲಿಡುವ ಚಿಣ್ಣಿಯನ್ನು ಸುಟ್ಟ ಬೂದಿಯನ್ನಿಟ್ಟು ಗೆದ್ದ ತಂಡದ ನಾಯಕನಿಗೆ ಕೊಡುವ ಉಪಾಯ ಮಾಡಿದರು. ಈ ಪ್ರಕರಣದಿಂದ ಆ್ಯಷಸ್ ಚಿರಸ್ಥಾಯಿಯಾಗಿ ಕ್ರಿಕೆಟ್ ರಂಗದಲ್ಲಿ ಉಳಿದಿದೆ. ಈ ಕರಂಡವನ್ನು ಲಾರ್ಡ್ ಡಾರ್ನ್ಲೆ ಇಂಗ್ಲೆಂಡಿಗೆ ತಂದು ಎಂ.ಸಿ.ಸಿ.ಗೆ ನೀಡಿದ. ಇದನ್ನು ಈಗಲೂ ಲಾರ್ಡ್ಸ್ ಮೈದಾನದಲ್ಲಿ ಜೋಪಾನವಾಗಿ ಇಡಲಾಗಿದೆ. ಆ್ಯಷಸ್ ಎಂಬುದು ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆಯುವ ಟೆಸ್ಟ್ ಸರಣಿ - 5 ಟೆಸ್ಟ್ ಮ್ಯಾಚ್‍ಗಳ ಸರಣಿ. ಈ ಎರಡು ದೇಶಗಳು ಸರದಿಯ ಪ್ರಕಾರ ಪಂದ್ಯಗಳ ಆತಿಥ್ಯ ವಹಿಸುತ್ತವೆ. ಮೊದಲನೆಯ ಟೆಸ್ಟ್ ಪಂದ್ಯ ಎರಡೂ ದೇಶಗಳ ನಡುವೆ ನಡೆದದ್ದು 1877ನೆಯ ಇಸವಿ ಆ್ಯಷಸ್ ಶುರುವಾಯಿತು. 9ನೆಯ ಟೆಸ್ಟ್ ಮ್ಯಾಚ್ನಿಂದ 1882ನೆಯ ಇಸವಿ ಇಂಗ್ಲೆಂಡ್ನ ಓವಲ್ ಮೈದಾನದಲ್ಲಿ ನಡೆದ ಮ್ಯಾಚ್ನಿಂದ ಆಸ್ಟ್ರೇಲಿಯನ್ನರು ಇಂಗ್ಲೆಂಡ್ ಅನ್ನು ಪರಾಭವಗೊಳಿಸಿದಂದು (29.8.1882). ಸಾಂಪ್ರದಾಯಕವಾಗಿ 1903-04ನೆಯ ಸರಣಿಯ ಅನಂತರ ಅದನ್ನು ಆ್ಯಷಸ್ ಸರಣಿಯೆಂದೇ ಕರೆಯುತ್ತಾರೆ. ಅತಿ ಹೆಚ್ಚು ರನ್‍ಗಳು - ಸರ್ ಡೊನಾಲ್ಡ್ ಬ್ರಾಡ್ಮನ್ 5028 ರನ್‍ಗಳು ಅತಿ ಹೆಚ್ಚು ವಿಕೆಟ್‍ಗಳು - ಶೇನ್ ವಾರ್ನ್ 195 ವಿಕೆಟ್‍ಗಳು ಒಟ್ಟು ಆ್ಯಷಸ್ ಸರಣಿ - 64 ಆಸ್ಟ್ರೇಲಿಯ ಗೆದ್ದದ್ದು - 31 ಬಾರಿ ಇಂಗ್ಲೆಂಡ್ ಗೆದ್ದದ್ದು - 28 ಬಾರಿ ಡ್ರಾ ಆದದ್ದು - 5 ಸರಣಿ ಆಸ್ಟ್ರೇಲಿಯ ತನ್ನಲ್ಲಿ `ಆ್ಯಷಸ್’ ಉಳಿಸಿಕೊಂಡದ್ದು - 04 ಬಾರಿ ಇಂಗ್ಲೆಡ್ ತನ್ನಲ್ಲಿ `ಆ್ಯಷಸ್’ ಉಳಿಸಿಕೊಂಡದ್ದು - 01 ಬಾರಿ ಒಟ್ಟು ನಡೆದ 315 ಪಂದ್ಯಗಳು ಆಸ್ಟ್ರೇಲಿಯ ಗೆದ್ದದ್ದು - 121 ಬಾರಿ, ಇಂಗ್ಲೆಂಡ್ ಗೆದ್ದದ್ದು - 94 ಬಾರಿ, ಪಂದ್ಯಗಳು ಡ್ರಾ ಆದದ್ದು - 88 ಬಾರಿ.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Cricinfo's Ashes website
- The Origin of the Ashes – Rex Harcourt
- Listen to a young Don Bradman speaking after the 1930 Ashes tour