ಆರ್ಥರ್ ಐಕಿನ್
ಆರ್ಥರ್ ಐಕಿನ್ ಅವರು ರಸಾಯನಶಾಸ್ತ್ರಜ್ಞ, ಖನಿಜಶಾಸ್ತ್ರಜ್ಞ, ಮತ್ತು ವೈಜ್ಞಾನಿಕ ಬರಹಗಾರರಾಗಿದ್ದರು. ರಾಸಾಯನಿಕ ಸಮಾಜದ ಸಂಸ್ಥಾಪಕರಾಗಿದ್ದರು. ಅವರು ೧೮೪೧ರಲ್ಲಿ ಆ ಸಂಸ್ಥೆಯ ಸಂಪತ್ತಾಗಿ ಮಾರ್ಪಟ್ಟರು. ಐಕಿನ್ ಲಂಡನಿನ ರಾಷ್ಟ್ರಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಆರ್ಥರ್ ಐಕಿನ್ FLS, FGS | |
---|---|
ಜನನ | Warrington, Lancashire, ಇಂಗ್ಲೆಂಡ್ | ೧೯ ಮೇ ೧೭೭೩
ಮರಣ | 15 April 1854 ಹಾಕ್ಸ್ಟನ್, ಲಂಡನ್, ಇಂಗ್ಲೇಡ್ | (aged 80)
ರಾಷ್ಟ್ರೀಯತೆ | ಬ್ರಿಟಿಷ್ |
ಕಾರ್ಯಕ್ಷೇತ್ರ | Chemist |
ಪ್ರಸಿದ್ಧಿಗೆ ಕಾರಣ | Geological Society of London |
ಪ್ರಭಾವಗಳು | Joseph Priestley |
ಜೀವನ
ಬದಲಾಯಿಸಿಆರ್ಥರ್ ಐಕಿನ್ ಇವರು ೧೯ ಮೇ ೧೭೭೩ ಯಲ್ಲಿ ವಾರಿಂಗ್ಟನಲ್ಲಿ ಜನಿಸಿದರು. ಇವರು ಯುನಿಟರಿಯನ್ನರ ಸಾಹಿತ್ಯಿಕ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಡ್ರೊ ಜಾನ್ ಅಕಿನ್ ಇವರು ಒಬ್ಬ ವೈದ್ಯರು, ಇತಿಹಾಸಕಾರರು ಮತ್ತು ಲೇಖಕರಾಗಿದ್ದರು. ಇವರ ಸಹೋದರಿ ಲುಸಿ ಐತಿಹಾಸಿಕ ಬರಹಗಾರ್ತಿ . ಆರ್ಥರ್ ಐಕಿನ್ ಹಾಕ್ನಿಯಲ್ಲಿನ ಕಾಲೇಜಿನಲ್ಲಿ ಜೋಸೆಫ್ ಎಂಬ ಪಾದ್ರಿಯ ಅಡಿಯಲ್ಲಿ ರಸಾಯನಶಾಸ್ತ್ರವನ್ನು ಅಧ್ಯಯನ ಮಾಡಿದರು. ನಂತರ ವಿಜ್ಞಾನದ ಪ್ರಾಯೋಗಿಕ ಅನ್ವಯಗಳಿಗೆ ಗಮನ ನೀಡಿದರು. ಮೂವತ್ತೆರಡು ವರ್ಷಗಳ ಕಾಲ ಗೈ ಆಸ್ಪತ್ರೆಯಲ್ಲಿ ರಸಾಯನಶಾಸ್ತ್ರದಲ್ಲಿ ಐಕಿನ್ ಉಪನ್ಯಾಸಕರಾಗಿದ್ದರು. ಅವರು ೧೮೦೧ರಲ್ಲಿ ಬ್ರಿಟಿಷ್ ಖನಿಜಶಾಸ್ತ್ರ ಸಮಾಜದ ಅಧ್ಯಕ್ಷರಾಗಿದ್ದರು . ೧೮೦೩ ರಿಂದ ೧೮೦೮ ರವರೆಗೆ ಅವರು ವಾರ್ಷಿಕ ವಿಮರ್ಶೆಯ ಸಂಪಾದಕರಾಗಿದ್ದರು. ೧೮೦೫ ಐಕಿನ್ ಲಂಡನ್ ಸಂಸ್ಥೆಯಲ್ಲಿ ಪ್ರವರ್ತಕರಾಗಿದ್ದರು. ಹಾಗೆ ಇವರು ೧೮೦೭ ರಲ್ಲಿ ಲಂಡನ್ನಲ್ಲಿ ಭೌಗೋಳಿಕ ಸಮಾಜದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು. ಹಾಗೆ ರೆಕ್ಕಿನ್ ಮತ್ತು ಶ್ರೊಪ್ಕೆರೈ ಕಲ್ಲಿದ್ದಲು ಕ್ಷೇತ್ರದ ಮೇಲೆ ಪೇಪರ್ಸ್ ಕೊಡುಗೆ ನೀಡಿದರು. ೧೮೧೪ರಲ್ಲಿ ಇವರ ಖನಿಜಶಾಸ್ತ್ರದ ಕೈಪಿಡಿಯನ್ನು ಪ್ರಕಟಿಸಲಾಯಿತು. ಹಾಗೆ ಇವರು ಲಂಡನ್ ನ ರಾಸಾಯನಿಕ ಸಮಾಜದ ಸ್ಥಾಪಕರಾಗಿದ್ದರು. ಬ್ರಿಟಿಷ್ ಖನಿಜಶಾಸ್ತ್ರದ ಸಮಾಜ , ಲಂಡನ್ ಸಂಸ್ಥೆ ಮತ್ತು ಭೌಗೋಳಿಕ ಸಮಾಜದೊಂದಿಗೆ ತಮ್ಮ ಕೆಲಸವನ್ನು ನಿರ್ವಹಿಸಿದರು. ಹಾಗೆ ಐಕಿನ್ ಬರಹಗಾರ ,ಭಾಷಂತರಕಾರ ಮತ್ತು ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ.[೧]
ನಿಧನ
ಬದಲಾಯಿಸಿಪ್ರಕಟನೆಗಳು
ಬದಲಾಯಿಸಿ- ನಾರ್ತ್ ವೇಲ್ಸ್ ಮೂಲಕ ಪ್ರಮಾಣ ಜರ್ನಲ್ ಮತ್ತು ಖನಿಜಶಾಸ್ತ್ರ ಮತ್ತು ನೈಸರ್ಗಿಕ ಇತಿಹಾಸದ ಇತರ ಶಾಖೆಗಳಲ್ಲಿ ವೀಕ್ಷಣೆ
- ಖನಿಜಗಳ ಬಗ್ಗೆ ಕೈಪಿಡಿ
- ರಸಾಯನಶಾಸ್ತ್ರದ ಮತ್ತು ಖನಿಜಶಾಸ್ತ್ರದ ನಿಘಂಟು
- ರೀಸ್ನ ಸೈಕ್ಲೋಪೀಡಿಯಕ್ಕಾಗಿ ಅವರ , ಭೂವಿಜ್ಞಾನ ಮತ್ತು ಖನಿಜಶಾಸ್ತ್ರದ ಬಗ್ಗೆ ಲೇಖನವನ್ನು ಬರೆದಿದ್ದಾರೆ.[೩]