ಆರ್ಡಿಪಿಥೆಕಸ್
ಆರ್ಡಿಪಿಥೆಕಸ್ ಕಡಬ್ಬಾ ಪಳೆಯುಳಿಕೆಗಳು
Scientific classification
ಸಾಮ್ರಾಜ್ಯ:
animalia
ವಿಭಾಗ:
ವರ್ಗ:
ಗಣ:
ಕುಟುಂಬ:
ಉಪಕುಟುಂಬ:
ಪಂಗಡ:
ಕುಲ:
ಆರ್ಡಿಪಿಥೆಕಸ್

White et al., 1995
Species

ಆರ್ಡಿಪಿಥೆಕಸ್ ಕಡಬ್ಬಾ
ಆರ್ಡಿಪಿಥೆಕಸ್ ರಾಮಿಡಸ್

ಆರ್ಡಿಪಿಥೆಕಸ್ ಬದಲಾಯಿಸಿ


ಆರ್ಡಿಪಿಥೆಕಸ್ ಮಾನವ ಮತ್ತು ಚಿಂಪಾಜಿ ಪ್ರಜಾತಿಗಳು ಪ್ರತ್ಯೇಕವಾದ ನಂತರದ ಮಾನವನ ಪೂರ್ವಜರಲ್ಲಿ ಈವರೆಗೆ ಪಳೆಯುಳಿಕೆ ದೊರಕಿರುವ ಅತ್ಯಂತ ಹಳೆಯ ಪ್ರಜಾತಿ.

ವಿಜ್ಞಾನ ಮತ್ತು ಮಾನವನ ಪೂರ್ವ ಇತಿಹಾಸ ಬದಲಾಯಿಸಿ


 
ಅತಿಮುಂಚಿನ ಹೋಮಿನಿಡ್ಗಳ ಪಳೆಯುಳಿಕೆ ಸಿಕ್ಕಿದ ಸ್ಥಳಗಳನ್ನು ತೋರಿಸುವ ನಕ್ಷೆ (35.8-3.3 ಎಂ ಬಿಪಿ)
  • ಆರ್ಡಿಪಿಥೆಕಸ್ ರಾಮಿಡಿಸ್ -ಇಥಿಯೋಪಿಯಾದಲ್ಲಿ ೧೯೯೨-೯೩ ರಲ್ಲಿ ಸಿಕ್ಕಿದ ಪಳಿಯುಳಿಕೆ ಇದರ ಕಾಲ ಸುಮಾರು ೨೫-೪೦ ಲಕ್ಷ ವರ್ಷದ ಹಿಂದೆ ಇದ್ದ ಆದಿ ಮಾನವರ ಪಳಿಯುಳಿಕೆ ಎಂದು ತೀರ್ಮಾನಿಸಿದ್ದಾರೆ. ಆದರೆ ಇವರ ಸಂತತಿ ಉಳಿದಿಲ್ಲ.. ಇದಕ್ಕೂ ಹಿಂದೆ ಇದ್ದಿರಬಹುದಾದ ಪೂರ್ವ ದಕ್ಷಿಣ ಆಫ್ರಿಕಾದಲ್ಲಿ ಸಿಕ್ಕಿದ (೬೧ ಲ. ವರ್ಷದ ಹಿಂದೆ) ಹೋಮೋ ಎರೆಕ್ಟಸ್ - ಹೋಮೋ ಸೇಪಿಯನ್ ಕುಟುಂಬಕ್ಕೆ ಸೇರಿದವರು ಇಂದಿಗೂ ಉಳಿದ ಮಾನವ ಕುಟುಂಬದವರು ಎಂದು ತೀರ್ಮಾನಿಸಿದ್ದಾರೆ. ಆದರೆ ಇದರಲ್ಲಿ ಸ್ವಲ್ಪ ಭಿನ್ನಾಭಿಪ್ರಾಯವಿದೆ. ಆರ್ಡಿಪಿಥೆಕಸ್ ರಾಮಿಡಿಸ್ ಈ ಕುಟುಂಬವೇ ಮಾನವನ ಮೂಲ ಪುರುಷರೆಂದು ವಾದಿಸುವವರೂ ಇದ್ದಾರೆ. (ಹೋಮೋ ಎಂದರೆ ಮಾನವ ಕುಟುಂಬ - ಅದಕ್ಕೆ ಪಳಿಯುಳಿಕೆ ಸಿಕ್ಕಿದ ಊರಿನ ಹೆಸರು ಸೇರಿಸಿ , ಆ ವರ್ಗವನ್ನು ಹೆಸರಿಸುವುದು ರೂಢಿ)
  • ಮಾನವನ ಮೂಲ ಪುರುಷ ರಾದ ಹೋಮಿನಿಡ್ ಗಳು ಯಾರು? ಹೋಮಿನಿಡ್ ಗಳೆಂದರೆ ಮಾನವನ ಮೂಲ ಪುರುಷರಾದ ನರವಾನರರು (ಮನಷ್ಯನನ್ನುಹೋಲುವ ಕಪಿ-ಏಪ್ಸ್ ಮಂಗನಲ್ಲ, ಚಿಂಪಾಜಿ ತರದವು)). ಇವರಲ್ಲಿ ಅನೇಕ ಬಗೆ. ಇವರಲ್ಲಿ ಬಹಳ ಪ್ರಾಚೀನರು, ೪೪ ಲಕ್ಷ ವರ್ಷದ ಹಿಂದಿನ ಆರ್ಡಿಪಿತಿಕಸ್ ರಾಮಿಡಸ್, ನಂತರದ ೪೧ ಲಕ್ಷ ವರ್ಷದ ಹಿಂದೆ ಇದ್ದ , ಅಸ್ಟ್ರಲೋಪಿತಿಕಸ್ ಅನಮೆನ್ನಿಸ್. ಇವರಿಗೆ ಇನ್ನೂ ಸೊಂಟ ಪೂರಾ ನೆಟ್ಟಗೆ ಇರಲಿಲ್ಲವೆಂಬ ಅನುಮಾನವಿದೆ.
  • ಮೊದಲು ಅವತರಿಸಿದ ಹೋಮಿನಿಡ್‌, ಜೈಗಾಂಟೋಪಿತೀಕಸ್, ರಾಮಾಪಿತೀಕಸ್, ಶಿವಾಪಿತೀಕಸ್, ಅಸ್ಟ್ರಲೋಪಿತೀಕಸ್, ನಂತರದ, ಹೋಮೋಹ್ಯಾಬಿಲಿಸ್ ಜಾತಿಯವು (ಮಾನವನನ್ನು ಹೋಲುವವು), ಹೋಮೋ ಎರ್ಗಾಸ್ಟರ್ , ಹೋಮೋ ಇರೆಕ್ಟಸ್, ನಿಯಾಂಡರ್ ಥಾಲ್ (ಯೂರೋಪಿನಲ್ಲಿ ಸಿಕ್ಕಿದ ಪ್ರಾಚೀನ ಮಾನವನ ಪಳಿಯುಳಿಕೆ) , ಕ್ರೋಮ್ಯಾನನ್ (ಕ್ರೋಮ್ಯಾಗ್ನನ್?), ಈ ಎಲ್ಲಾ ನರ ವಾನರ (ಹೋಮಿನಿಡ್) ಜಾತಿಗಳಿಗೂ, ನಮ್ಮ (ಮಾನವನ) ಮೂಲ ಪಿತಾಮಹ ಹಾಗೂ, ಎಲ್ಲಾ ಹೋಮೋಸೇಪಿಯನ್(ಈಗಿನ ಮಾನವನ ಪೂರ್ವಜ - ಕಪಿಮಾನವ) ಗಳ ಹುಟ್ಟಿಗೆ ಕಾರಣ ಆ ಒಂದು ಹೋಮಿನಿಡ್ ಪ್ರಭೇದ (ನರವಾನರ ಜಾತಿ ) ಯಾವುದು ಎಂದು ವಿಜ್ಞಾನಿಗಳು ಹುಡುಕಿ ತೀರ್ಮಾನಕ್ಕೆ ಬಂದಿದ್ದಾರೆ, ಹಾಗೆ ಸಿಕ್ಕಿದ ಲಕ್ಷಾಂತರ ವರ್ಷಗಳ ಹಿಂದಿನ ಆ ನರವಾನರರ ಎಲುಬುಗಳನ್ನು ಜೋಡಿಸಿ ಪರೀಕ್ಷಿಸಿದ್ದಾರೆ,
  • ಅವರ ತೀರ್ಮಾನದಂತೆ, ಸುಮಾರು ಮೂವತ್ತೆರಡು ಲಕ್ಷ ವರುಷಗಳ ಹಿಂದೆ ಆಫ್ರಿಕಾ ಖಂಡದಲ್ಲಿದ್ದ ಹೋಮಿನಡ್ ಪ್ರಭೇದ ಅಸ್ಟ್ರಲೋಪಿತಿಕಸ್ ಅಪರೆನ್ಸಿಸ್ ( ಸೇಪಿಯನ್ಸ್ -ಅಥವಾ ಇವೆರಡು ಕುಲದ ಸಂಪರ್ಕದ ಕುಲ) ಮೂಲ ಪಿತಾಮಹ ಎಂದು ನಿರ್ಧರಿಸಿದ್ದಾರೆ. ಹಳೆಯ ಮೂಳೆಗಳ ಪಳಿಯುಳಿಕೆಗಳಲ್ಲಿ ಏಳು ಪ್ರಭೇದ (ಜಾತಿ ) ಕಂಡು ಬಂದಿದ್ದು, ಅದರಲ್ಲಿ ಅಪರೆನ್ಸಿಸ್ ಜಾತಿಯ ನೇರ ಸೊಂಟದ ವಾನರನೇ ಜಗತ್ತಿನ ಎಲ್ಲಾ ಮನುಕುಲದ/ ಮಾನವನ ಮೂಲವೆಂದು, ಎಂದರೆ ನಮ್ಮ ಪಿತಾಮಹನೆಂದು, ತೀರ್ಮಾನಿಸಿದ್ದಾರೆ. ಈ ವಾನರರ ೩೦-೪೦ರ ಗುಂಪುಗಳು ಆಫ್ರಿಕಾದಲ್ಲೇ ಸುಮಾರು ೪೦ಲವವರ್ಷಗಳ ಕಾಲ (೪ಲಕ್ಷ -ಜೀವ ಜೇವನ )ಬಾಳುವೆ ನಡೆಸಿರಬೇಕೆಂದು ನಿರ್ಣಯಿಸಿದ್ದಾರೆ. (ನಂತರ ಹರಡಿದ್ದಾರೆ)
  • ಅವಕ್ಕೆ ಇನ್ನೂ ಭಾಷೆ ಇಲ್ಲ, ಬೆಂಕಿಯ ಉಪಯೋಗ ಗೊತ್ತಿಲ್ಲ, ಪ್ರಾಣಿಗಳ ಜೀವನಕ್ರಮ, ಗಂಡು ಸುಮಾರು ೫ ಅಡಿ ಎತ್ತರ, ಹೆಣ್ಣು ಮೂರುವರೆ ಯಿಂದ ನಾಲ್ಕು ಅಡಿ ಎತ್ತರ. ಇದು ಪರಿಪೂರ್ಣ ದ್ವಿ ಪಾದಿಯಾಗಿತ್ತು ಎಂದು ನಿರ್ಧರಿಸಿದ್ದಾರೆ. ನಡಿಗೆ ಮತ್ತು ಓಟಕ್ಕೆ ಎರಡು ಕಾಲುಗಳ ಭದ್ರ ಆಧಾರ, ಕೈ ಗಳ ಸ್ವಾತಂತ್ರ್ಯವೇ ಮುಂದಿನ ನಾಗರೀಕತೆಯ ಬೆಳವಣಿಗೆಗೆ ಕಾರಣವೆಂಬುದು, ವಿಜ್ಞಾನಿಗಳ ತೀರ್ಮಾನ.*[೧]

[೨] [೩]

ಆಧಾರ : ಬದಲಾಯಿಸಿ


  • ವಿಕಿಪೀಡಿಯಾ ಇಂಗ್ಲಿಷ್ ತಾಣಗಳು
  • ಜೀವ ಜೇವನ -ಡಾ. ಶಿವರಾಮ ಕಾರಂತ
  • ಬಿಡಿ ಲೇಖನಗಳು

ನೋಡಿ ಬದಲಾಯಿಸಿ

ಹೊರ ಸಂಪರ್ಕ ಬದಲಾಯಿಸಿ

ಉಲ್ಲೇಖ ಬದಲಾಯಿಸಿ

  1. ವಿಕಿಪೀಡಿಯಾ ಇಂಗ್ಲಿಷ್ ತಾಣಗಳು
  2. *ಜೀವ ಜೇವನ -ಡಾ. ಶಿವರಾಮ ಕಾರಂತ
  3. *ಬಿಡಿ ಲೇಖನಗಳು