ಆರೋಗ್ಯಶಾಸ್ತ್ರ (Hygiene)

ಆರೋಗ್ಯಶಾಸ್ತ್ರ ವೆಂಬುದು ಆರೋಗ್ಯದ ರಕ್ಷಣೆ ಹಾಗು ಸ್ವಸ್ಥ ಜೀವನಕ್ಕೆ ಸಂಬಂಧಿಸಿದ ಅಭ್ಯಾಸಗಳಿಗೆ ಸೂಚಿತವಾಗಿದೆ.

ಕೈಗಳನ್ನು ತೊಳೆದುಕೊಳ್ಳುವುದು, ಒಂದು ಮಾದರಿಯ ನೈರ್ಮಲ್ಯ, ಇದು ಸೋಂಕನ್ನು ಹರಡುವ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಒಟ್ಟಾರೆಯಾಗಿ ಪರಿಣಾಮಕಾರಿಯಾಗಿದೆ.
ಭೂಮಿಯ ಕಕ್ಷೆಯಲ್ಲಿರುವ, ಸ್ಕೈಲ್ಯಾಬ್ ಬಾಹ್ಯಾಕಾಶ ನಿಲ್ದಾಣದ ಗುಂಪಿನ ಆರ್ಬಿಟಲ್ ವರ್ಕ್‌ಶಾಫ್(OWS) ನ ಸಿಬ್ಬಂದಿ ವಸತಿಯಲ್ಲಿ ಗಗನಯಾತ್ರಿಯ ಬಿಸಿನೀರಿನ ಸ್ನಾನ.ಷವರ್ ಸೌಲಭ್ಯವನ್ನು ನಿಯೋಜಿಸುವಾಗ, ಷವರ್ ನ ಪರದೆಯನ್ನು ನೆಲದಿಂದ ಮೇಲಕ್ಕೆ ಎತ್ತಲಾಗಿದೆ ಹಾಗು ಸೀಲಿಂಗ್‌ಗೆ ಜೋಡಿಸಲಾಗಿದೆ.ಒಂದು ಮೆತುನೀರ್ಕೊಳವಿಗೆ ಜೋಡಿಸಿರುವ ಒತ್ತುಗುಂಡಿಯ ಷವರ್ ಮೂಲಕ ನೀರು ಬರುತ್ತದೆ.ನೀರನ್ನು ನಿರ್ವಾತ ವ್ಯವಸ್ಥೆಯ ಮೂಲಕ ಎಳೆದು ಹಾಕಲಾಗುತ್ತದೆ.

ಆರೋಗ್ಯಶಾಸ್ತ್ರದ ಕಲ್ಪನೆ

ಬದಲಾಯಿಸಿ

ಆರೋಗ್ಯಶಾಸ್ತ್ರ(ನೈರ್ಮಲ್ಯ)ವೆಂಬುದು ವೈದ್ಯಕೀಯಕ್ಕೆ ಸಂಬಂಧಿಸಿದ ಒಂದು ಹಳೆಯ ಕಲ್ಪನೆಯ ಜೊತೆಗೆ ಇದು ಜೀವನದ ಹಲವು ಅಂಶಗಳಿಗೆ ಸಂಬಂಧಿಸಿದ ವೈಯಕ್ತಿಕ ಹಾಗು ವೃತ್ತಿಪರ ಕಾಳಜಿಯ ಅಭ್ಯಾಸಗಳು. ವೈದ್ಯಕೀಯದಲ್ಲಿ ಹಾಗು ಮನೆ (ಗೃಹಬಳಕೆಯಲ್ಲಿ) ಹಾಗು ನಿತ್ಯಜೀವನದ ಹಿನ್ನೆಲೆಯಲ್ಲಿ, ರೋಗನಿರೋಧಕ ಕ್ರಮಗಳ ಮೂಲಕ ರೋಗದ ಪ್ರಮಾಣವನ್ನು ತಗ್ಗಿಸಲು ಹಾಗು ಕಾಯಿಲೆ ಹರಡದಂತೆ ತಡೆಗಟ್ಟಲು ರೂಢಿಸಿಕೊಳ್ಳುವ ಆರೋಗ್ಯಕರ ಅಭ್ಯಾಸಗಳು. ಆಹಾರ, ಔಷಧ, ಪ್ರಸಾಧನ ಸಾಮಗ್ರಿ ಹಾಗು ಇತರ ಉತ್ಪನ್ನಗಳ ತಯಾರಿಕೆಯಲ್ಲಿ, ಉತ್ತಮ ನೈರ್ಮಲ್ಯವು ಗುಣಮಟ್ಟದ ಭರವಸೆಯ ಒಂದು ಪ್ರಮುಖ ಭಾಗವಾಗಿದೆ ಅದೆಂದರೆ, ಉತ್ಪನ್ನವು ಅದರ ಬಳಕೆಗೆ ಸೂಕ್ತವಾದ ಸೂಕ್ಷ್ಮಜೀವಿಯ ನಿರ್ದಿಷ್ಟ ವಿವರಣೆಯನ್ನು ಅನುಸರಿಸುತ್ತದೆ ಎಂಬುದನ್ನು ಖಾತ್ರಿಪಡಿಸುವುದು. ಶುಚಿತ್ವ(ಅಥವಾ ಶುದ್ಧತೆ) ಹಾಗು ನೈರ್ಮಲ್ಯ ಎಂಬ ಪದಗಳನ್ನು ಸಾಮಾನ್ಯವಾಗಿ ಪರ್ಯಾಯಕ್ರಮದಲ್ಲಿ ಬಳಸಲಾಗುತ್ತದೆ, ಇದು ಗೊಂದಲಕ್ಕೆ ಅವಕಾಶ ಮಾಡಿಕೊಡಬಹುದು. ಸಾಧಾರಣವಾಗಿ, ನೈರ್ಮಲ್ಯವೆಂಬ ಪದವು, ಕಾಯಿಲೆಯನ್ನು ಉಂಟುಮಾಡುವ ಸೂಕ್ಷ್ಮಜೀವಿಗಳು ಹರಡದಂತೆ ತಡೆಗಟ್ಟುವ ಅಭ್ಯಾಸಗಳು ಎಂಬ ಅರ್ಥವನ್ನು ನೀಡುತ್ತದೆ. ಶುದ್ದಿಗೊಳಿಸುವ ಪ್ರಕ್ರಿಯೆಯು(ಉದಾಹರಣೆಗೆ ಕೈಯನ್ನು ತೊಳೆಯುವುದು) ಸೋಂಕನ್ನು ಹರಡುವ ಸೂಕ್ಷ್ಮಜೀವಿಗಳು ಜೊತೆಗೆ ಧೂಳು ಹಾಗು ಮಣ್ಣನ್ನು ತೆಗೆದು ಹಾಕುವ ಕಾರಣದಿಂದಾಗಿ, ಇವುಗಳು ಸಾಮಾನ್ಯವಾಗಿ ನೈರ್ಮಲ್ಯವನ್ನು ಕಾಪಾಡುವ ಸಾಧನಗಳು. ಪದದ ಇತರ ಬಳಕೆಗಳು: ದೇಹದ ಆರೋಗ್ಯ, ವೈಯಕ್ತಿಕ ಆರೋಗ್ಯ , ಮಾನಸಿಕ ಆರೋಗ್ಯ, ಹಲ್ಲಿನ ಆರೋಗ್ಯ, ಹಾಗು ಔದ್ಯೋಗಿಕ ಆರೋಗ್ಯ ಎಂಬ ಪದಗುಚ್ಛಗಳಲ್ಲಿ ಕಂಡುಬರುತ್ತದೆ, ಇವೆಲ್ಲವೂ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಬಳಸಲಾಗುತ್ತದೆ. "ಹೈಜೀನ್" ಎಂಬ ಪದವು, ಆರೋಗ್ಯ, ಶುಚಿತ್ವ ಹಾಗು ನೈರ್ಮಲ್ಯಕ್ಕೆ ಕಾರಣಳಾದ ಗ್ರೀಕ್ ದೇವತೆ ಹೈಜಿಯಳಿಂದ ವ್ಯುತ್ಪತ್ತಿಯನ್ನು ಹೊಂದಿದೆ. ಹೈಜೀನ್ (ಆರೋಗ್ಯಶಾಸ್ತ್ರ) ಎಂಬ ಪದವನ್ನು ಆರೋಗ್ಯದ ಪ್ರಚಾರ ಹಾಗು ಅದರ ರಕ್ಷಣೆಗೆ ಸಂಬಂಧಿಸಿದ ವಿಜ್ಞಾನದ ವಿಭಾಗಕ್ಕೂ ಸಹ ಬಳಸಲಾಗುತ್ತದೆ, ಇದನ್ನು ಹೈಜಿನಿಕ್ಸ್ ಎಂದೂ ಸಹ ಕರೆಯಲಾಗುತ್ತದೆ. ಆರೋಗ್ಯಕರ ಅಭ್ಯಾಸಗಳು ವ್ಯಾಪಕವಾಗಿ ಬದಲಾಗುತ್ತದೆ, ಜೊತೆಗೆ ಒಂದು ಸಂಸ್ಕೃತಿಯಲ್ಲಿ ಸ್ವೀಕೃತವಾದ ಅಂಶಗಳು ಮತ್ತೊಂದು ಸಂಸ್ಕೃತಿಯಲ್ಲಿ ತಿರಸ್ಕೃತವಾಗಬಹುದು.

ವೈದ್ಯಕೀಯ ನೈರ್ಮಲ್ಯ

ಬದಲಾಯಿಸಿ

ವೈದ್ಯಕೀಯ ನೈರ್ಮಲ್ಯವೆಂದರೆ, ಔಷಧಿ ಕೊಡುವುದು ಹಾಗು ವೈದ್ಯಕೀಯ ಆರೈಕೆಗೆ ಸಂಬಂಧಿಸಿದ ಆರೋಗ್ಯಕರ ಅಭ್ಯಾಸಗಳು. ಇದು ರೋಗವನ್ನು ತಡೆಗಟ್ಟುತ್ತದೆ ಅಥವಾ ಅದು ಹರಡುವ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ವೈದ್ಯಕೀಯ ನೈರ್ಮಲ್ಯದ ಅಭ್ಯಾಸಗಳಲ್ಲಿ:

  • ಸೋಂಕು ಹರಡದಂತೆ ತಡೆಯಲು ಸೋಂಕಿತ ವ್ಯಕ್ತಿಗಳು ಅಥವಾ ವಸ್ತುಗಳನ್ನು ಪ್ರತ್ಯೇಕಗೊಳಿಸುವುದು ಅಥವಾ ಸಂಪರ್ಕ ನಿಷೇಧಗೊಳಿಸುವುದು.
  • ಶಸ್ತ್ರಚಿಕಿತ್ಸೆಯ ಪ್ರಕ್ರಿಯೆಯಲ್ಲಿ ಬಳಕೆಯಾಗುವ ಸಲಕರಣೆಗಳನ್ನು ಕ್ರಿಮಿಶುದ್ಧೀಕರಣ ಮಾಡುವುದು.
  • ಮುಸುಕುಗಳು, ನಿಲುವಂಗಿಗಳು, ಟೋಪಿಗಳು, ಕನ್ನಡಕಗಳು ಹಾಗು ಕೈಗವಸುಗಳಂತಹ ರಕ್ಷಣಾತ್ಮಕ ಉಡುಪುಗಳನ್ನು ಬಳಕೆ ಮಾಡುವುದು.
  • ಗಾಯಗಳಿಗೆ ಸರಿಯಾಗಿ ಡ್ರೆಸ್ಸಿಂಗ್ ಮಾಡಿ(ಗಾಯವನ್ನು ತೊಳೆದು ಪಟ್ಟಿ ಹಾಕುವುದು) ಬ್ಯಾಂಡೇಜು ಪಟ್ಟಿ ಕಟ್ಟುವುದು.
  • ವೈದ್ಯಕೀಯ ತ್ಯಾಜ್ಯವನ್ನು ಸುರಕ್ಷಿತವಾಗಿ ಎಸೆಯುವುದು.
  • ಮರುಬಳಕೆಯ ವಸ್ತುಗಳ ಸೋಂಕುನಿವಾರಣೆ ಮಾಡುವುದು(ಅದೆಂದರೆ ಲಿನೆನ್, ಪ್ಯಾಡ್ ಗಳು, ಸಮವಸ್ತ್ರಗಳು)
  • ವಿಶೇಷವಾಗಿ ಶಸ್ತ್ರಚಿಕಿತ್ಸಾ ಕೊಠಡಿಯಿಂದ ಹೊರ ಬಂದ ನಂತರ ಶುದ್ಧೀಕರಣ ಮಾಡುವುದು, ಕೈತೊಳೆಯುವುದು , ಆದರೆ ಸಾಧಾರಣವಾಗಿ ಆರೋಗ್ಯ-ಕಾಳಜಿಯನ್ನು ವಹಿಸಬೇಕಾದಾಗಲೂ ಈ ರೀತಿ ಮಾಡಬೇಕಾಗುತ್ತದೆ, ಏಕೆಂದರೆ ರೋಗಗಳು ಒಬ್ಬರಿಂದ ಒಬ್ಬರಿಗೆ ಹರಡಬಹುದು[]

ಇದರಲ್ಲಿ ಹೆಚ್ಚಿನ ಅಭ್ಯಾಸಗಳು 19ನೇ ಶತಮಾನದಲ್ಲಿ ಬೆಳವಣಿಗೆಯಾಯಿತು. ಜೊತೆಗೆ ಇದು 20ನೇ ಶತಮಾನದ ಮಧ್ಯಭಾಗದಲ್ಲಿ ಉತ್ತಮವಾಗಿ ನೆಲೆಗೊಂಡಿತು. 20ನೇ ಶತಮಾನದಲ್ಲಿ ಹಠಾತ್ ಕಾಣಿಸಿಕೊಂಡ ರೋಗಗಳು, ಅದರಲ್ಲೂ ವಿಶೇಷವಾಗಿ AIDS ಹಾಗು ಎಬೋಲ ದಂತಹ ರೋಗಗಳನ್ನು ತಡೆಗಟ್ಟಲು ಕೆಲವೊಂದು ವಿಧಾನಗಳನ್ನು ಬಿಗಿಗೊಳಿಸಲಾಯಿತು(ಉದಾಹರಣೆಗೆ ವೈದ್ಯಕೀಯ ತ್ಯಾಜ್ಯದ ವಿಲೇವಾರಿ).

ಗೃಹ ಹಾಗು ನಿತ್ಯಜೀವನದಲ್ಲಿ ನೈರ್ಮಲ್ಯ

ಬದಲಾಯಿಸಿ

ಗೃಹ ನೈರ್ಮಲ್ಯವು, ಮನೆಯಲ್ಲಿ ಹಾಗು ನಿತ್ಯಜೀವನದಲ್ಲಿ ಹರಡುವ ರೋಗವನ್ನು ತಡೆಗಟ್ಟುವುದು ಅಥವಾ ಅದರ ಹರಡುವಿಕೆಯನ್ನು ನಿವಾರಿಸುವುದಕ್ಕೆ ಸಂಬಂಧಿಸಿದೆ.ಉದಾಹರಣೆಗೆ ಸಾಮಾಜಿಕ ಕೂಟಗಳು, ಸಾರ್ವಜನಿಕ ಸಾರಿಗೆ, ಕೆಲಸದ ಸ್ಥಳ, ಸಾರ್ವಜನಿಕ ಸ್ಥಳಗಳು ಮುಂತಾದವು. ಮನೆ ಹಾಗು ನಿತ್ಯಜೀವನದಲ್ಲಿ ನೈರ್ಮಲ್ಯವು, ಸೋಂಕುಕಾರಕ ರೋಗಗಳ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.[] ಇದರಲ್ಲಿ ಮನೆಯಲ್ಲಿ ಬಳಕೆಯಾಗುವ ಹಲವು ಪ್ರಕ್ರಿಯೆಗಳು ಒಳಗೊಂಡಿವೆ ಉದಾಹರಣೆಗೆ ಕೈಯನ್ನು ಶುಚಿಯಾಗಿಟ್ಟುಕೊಳ್ಳುವುದು, ಉಸಿರಾಟದಲ್ಲಿ ನೈರ್ಮಲ್ಯ , ಆಹಾರ ಹಾಗು ನೀರಿನ ನೈರ್ಮಲ್ಯ, ಸಾಮಾನ್ಯ ಗೃಹ ನೈರ್ಮಲ್ಯ(ಪರಿಸರ ಸ್ಥಳಗಳು ಹಾಗು ಮೇಲ್ಮೈ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು), ಸಾಕುಪ್ರಾಣಿಗಳ ಆರೈಕೆ, ಹಾಗು ಮನೆಯಲ್ಲೇ ಆರೋಗ್ಯದ ರಕ್ಷಣೆ ಮಾಡಿಕೊಳ್ಳುವುದು(ಸೋಂಕಿಗೆ ಬಹಳ ಬೇಗನೆ ಈಡಾಗುವವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು). ಪ್ರಸಕ್ತ ನೈರ್ಮಲ್ಯದ ಈ ಅಂಶಗಳನ್ನು ಪ್ರತ್ಯೇಕ ವಿಷಯಗಳೆಂದು ಪರಿಗಣಿಸಲಾಗಿದೆ. ಆದಾಗ್ಯೂ ಇವೆಲ್ಲವೂ ಒಂದೇ ತೆರನಾದ ಸೂಕ್ಷ್ಮಜೀವಿ ವಿಜ್ಞಾನದ ತತ್ತ್ವಗಳಿಂದ ಆಧರಿತವಾಗಿವೆ. ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಗಟ್ಟುವುದೆಂದರೆ ಸೋಂಕು ರವಾನೆಯ ಸರಪಣಿಯನ್ನು ಮುರಿಯುವುದು. ಒಂದು ಸರಳ ತತ್ತ್ವವೆಂದರೆ, ಸೋಂಕಿನ ಸರಪಣಿಯನ್ನು ಒಡೆದುಹಾಕಿದರೆ, ಸೋಂಕು ಹರಡಲು ಸಾಧ್ಯವಿಲ್ಲ. ಗೃಹ ಹಾಗು ನಿತ್ಯಜೀವನದ ಬಳಕೆಯಲ್ಲಿ ನೈರ್ಮಲ್ಯದ ಪರಿಣಾಮಕಾರಿ ಸಂಕೇತಗಳ ಅಗತ್ಯಕ್ಕೆ ಪ್ರತಿಕ್ರಿಯೆಯಾಗಿ, ಗೃಹ ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಇಂಟರ್ನ್ಯಾಷನಲ್ ಸೈಂಟಿಫಿಕ್ ಫೋರಮ್ ಅಪಾಯ ಆಧಾರಿತ ಮಾರ್ಗವೊಂದನ್ನು ಅಭಿವೃದ್ಧಿಪಡಿಸಿದೆ(ಇದು ಹಜಾರ್ಡ್ ಅನಾಲಿಸಿಸ್ ಕ್ರಿಟಿಕಲ್ ಕಂಟ್ರೋಲ್ ಪಾಯಿಂಟ್ (HACCP)ನ್ನು ಆಧರಿಸಿದೆ), ಇದು "ಗುರಿಯಾದ ನೈರ್ಮಲ್ಯ"ವೆಂದು ಪರಿಚಿತವಾಗಿದೆ. ಗುರಿಯಾದ ನೈರ್ಮಲ್ಯವು, ಮನೆಗಳಲ್ಲಿ ರೋಗಕಾರಕಗಳ ಹರಡುವಿಕೆಯ ಮಾರ್ಗಗಳನ್ನು ಗುರುತಿಸುವುದರ ಮೇಲೆ ಆಧಾರವಾಗಿದೆ, ಜೊತೆಗೆ ಸೋಂಕಿನ ಸರಪಣಿಯನ್ನು ಒಡೆಯಲು ಸರಿಯಾದ ಸಮಯದಲ್ಲಿ, ನಿರ್ಣಾಯಕ ಹಂತಗಳಲ್ಲಿ ನೈರ್ಮಲ್ಯ ವಿಧಾನಗಳನ್ನು ಬಳಸುವುದು. ಮನೆಯಲ್ಲಿ ಉಂಟಾಗುವ ಸೋಂಕಿಗೆ ಪ್ರಮುಖ ಕಾರಣವೆಂದರೆ[] ಜನರು(ಇವರು ರೋಗವಾಹಕಗಳಾಗಿರುತ್ತಾರೆ ಅಥವಾ ಸೋಂಕಿತರಾಗಿರುತ್ತಾರೆ), ಆಹಾರ(ವಿಶೇಷವಾಗಿ ಕಚ್ಚಾ ಆಹಾರ) ಹಾಗು ನೀರು, ಜೊತೆಗೆ ಸಾಕು ಪ್ರಾಣಿಗಳು(ಪಾಶ್ಚಿಮಾತ್ಯ ದೇಶಗಳಲ್ಲಿ 50%ಗೂ ಅಧಿಕ ಮನೆಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಸಾಕುಪ್ರಾಣಿಗಳಿರುತ್ತವೆ). ಇದರ ಜೊತೆಯಲ್ಲಿ, ನಿಂತ ನೀರು ಸಂಗ್ರಹವಾಗುವ ಸ್ಥಳಗಳು-ಉದಾಹರಣೆಗೆ ಸಿಂಕುಗಳು, ಶೌಚಾಲಯಗಳು, ನಿರುಪಯುಕ್ತ ಪೈಪುಗಳು, ಶುಚಿಗೊಳಿಸುವ ಸಾಧನಗಳು, ಮುಖವನ್ನು ಒರೆಸಿಕೊಳ್ಳುವ ಬಟ್ಟೆಗಳು-ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಸುಲಭವಾಗಿ ಸಹಕಾರಿಯಾಗಿವೆ, ಜೊತೆಗೆ ಇವುಗಳು ಎರಡನೇ ಸೋಂಕಿನ ಭಂಡಾರಗಳಾಗಿವೆ. ಆದಾಗ್ಯೂ "ಅಪಾಯ"ದ ಗುಂಪಿನಲ್ಲಿರುವ ಪ್ರಭೇದಗಳು ಹೆಚ್ಚು ಬೆದರಿಕೆಯಾಗಿವೆ. ರೋಗಾಣುಗಳು(ಸಂಭಾವ್ಯವಾಗಿ ಸೋಂಕುಕಾರಕ ಬ್ಯಾಕ್ಟೀರಿಯ, ವೈರಸ್ ಮುಂತಾದವು) ಸತತವಾಗಿ ಮ್ಯೂಕಸ್,(ಲೋಳೆ ತುಂಬಿರುವ) ಫೀಸಸ್(ಅಮೇಧ್ಯ), ವಾಂತಿ, ಚರ್ಮದ ಪದರಗಳ ಮೂಲಕ ಈ ಮೂಲಗಳಿಂದ ಪಸರಿಸುತ್ತವೆ. ಈ ರೀತಿಯಾಗಿ, ಇಂತಹ ಪರಿಸ್ಥಿತಿಗಳು ಒಟ್ಟುಗೂಡಿದರೆ, ಜನರು ಇದಕ್ಕೆ ನೇರವಾಗಿ ಅಥವಾ ಆಹಾರ ಅಥವಾ ನೀರಿನ ಮೂಲಕವಾಗಿ ಒಡ್ಡಿಕೊಂಡಾಗ, ಸೋಂಕು ಬೆಳವಣಿಗೆಯಾಗಬಹುದು. ಮನೆಯಲ್ಲಿ ರೋಗಾಣುಗಳು ಹರಡುವ "ಪ್ರಮುಖ ಮಾರ್ಗಗಳೆಂದರೆ" ಕೈಗಳು, ಕೈ ಹಾಗು ಆಹಾರವನ್ನು ಸ್ಪರ್ಶಿಸುವ ಮೇಲ್ಮೈಗಳು, ಹಾಗು ಒಗೆಯುವ ಬಟ್ಟೆಗಳು [] ಹಾಗು ಪಾತ್ರೆಗಳು. ರೋಗಾಣುಗಳು ಬಟ್ಟೆ ಹಾಗು ಮನೆಬಳಕೆಯ ಲಿನಿನ್ ಗಳಾದ ಟವಲ್‌ಗಳ ಮೂಲಕವೂ ಸಹ ಹರಡಬಹುದು. ಉದಾಹರಣೆಗೆ, ಶೌಚಾಲಯಗಳು ಹಾಗು ವಾಶ್ ಬೇಸಿನ್ ಗಳಂತಹ ಉಪಯುಕ್ತತೆಗಳನ್ನು ಮಾನವ ತ್ಯಾಜ್ಯದ ಸುರಕ್ಷಿತ ವಿಲೇವಾರಿಗಾಗಿ ಸಂಶೋಧಿಸಲಾಯಿತು. ಆದರೆ ಇವುಗಳು ಇನ್ನೂ ತಮ್ಮೊಂದಿಗೆ ಅಪಾಯಗಳನ್ನು ಹೊಂದಿವೆ, ಇದು ಕೆಲವೊಂದು ಸಮಯದಲ್ಲಿ ತೀವ್ರತರ ಸಮಸ್ಯೆಯಾಗಿ ಪರಿಣಮಿಸಬಹುದು, ಉದಾಹರಣೆಗೆ, ಒಬ್ಬ ವ್ಯಕ್ತಿಯು ಅಸ್ವಸ್ಥನಾಗಿದ್ದರೆ ಅಥವಾ ಅತಿಸಾರದಿಂದ ಬಳಲುತ್ತಿದ್ದಾಗ,ಗಂಭೀರವಾಗಿ ಪರಿಣಮಿಸಬಹುದು. ಮಾನವ ತ್ಯಾಜ್ಯದ ಸುರಕ್ಷಿತ ವಿಲೇವಾರಿಯು ಒಂದು ಮೂಲಭೂತ ಅಗತ್ಯವಾಗಿದೆ; ಕಡಿಮೆ ಆದಾಯವನ್ನು ಹೊಂದಿರುವ ಸಮುದಾಯಗಳಲ್ಲಿ ಕಳಪೆ ನೈರ್ಮಲ್ಯದಿಂದ ಅತಿಸಾರದಂತಹ ಕಾಯಿಲೆಗಳು ಉಂಟಾಗಲು ಮುಖ್ಯ ಕಾರಣವಾಗಿದೆ. ಉಸಿರಾಟದ ಮೂಲಕ ಹರಡುವ ವೈರಸ್ ಗಳು ಹಾಗು ಶಿಲೀಂಧ್ರದ ಬೀಜಕಣಗಳು ಸಹ ಗಾಳಿಯ ಮೂಲಕ ಹರಡುತ್ತದೆ. ಮನೆಯಲ್ಲಿನ ಉತ್ತಮ ನೈರ್ಮಲ್ಯವೆಂದರೆ ಗಂಭೀರ ಹಂತಗಳಲ್ಲಿ ನೈರ್ಮಲ್ಯ ವಿಧಾನಗಳ ಮೇಲೆ ಗುರಿಯಿರಿಸುವುದು. ಸೂಕ್ತ ಕಾಲಗಳಲ್ಲಿ ಸೋಂಕಿನ ಸರಪಣಿಯನ್ನು ಒಡೆಯುವುದು ಇದರ ಉದ್ದೇಶವಾಗಿದೆ. ಅದೆಂದರೆ, ಸೂಕ್ಷ್ಮಜೀವಿಗಳು ಮತ್ತಷ್ಟು ಹರಡುವ ಮೊದಲು ಅದನ್ನು ನಿವಾರಿಸುವುದು.[] ಏಕೆಂದರೆ, ಕೆಲವು ರೋಗಕಾರಕಗಳಿಗೆ "ಸಾಂಕ್ರಾಮಿಕತೆಯ ಪ್ರಮಾಣವು" ಬಹಳ ಕಡಿಮೆಯಿರಬಹುದು(10-100 ಏಕಮಾನಗಳು, ಅಥವಾ ಕೆಲವು ವೈರಸ್ ಗಳಿಗೆ ಇನ್ನೂ ಕಡಿಮೆ), ಹಾಗು ರೋಗಕಾರಕಗಳು ಕೈಗಳ ಮೂಲಕ ಅಥವಾ ಆಹಾರವನ್ನು ಬಾಯಿಗೆ ಹಾಕಿಕೊಂಡಾಗ, ಮೂಗಿನ ಲೋಳೆಪೊರೆ ಅಥವಾ ಕಣ್ಣಿಗೆ ಮೇಲ್ಮೈ ಮೂಲಕ ನೇರವಾಗಿ ವರ್ಗಾವಣೆಯಾಗುವುದರ ಪರಿಣಾಮವಾಗಿರುತ್ತದೆ. ಗಂಭೀರ ಮೇಲ್ಮೈಗಳಿಂದ ರೋಗಕಾರಕಗಳನ್ನು ನಿವಾರಿಸಲು 'ನೈರ್ಮಲ್ಯಕಾರಿ ಶುಚಿತ್ವದ' ವಿಧಾನಗಳು ಸಾಕಾಗುತ್ತವೆ. ನೈರ್ಮಲ್ಯ ಶುಚಿತ್ವವನ್ನು ಈ ಕೆಳಕಂಡ ವಿಧಾನದಲ್ಲಿ ನಡೆಸಬಹುದು:

  • ಸಾಬೂನು ಅಥವಾ ಮಾರ್ಜಕವನ್ನು ಬಳಸಿಕೊಂಡು ಯಾಂತ್ರಿಕವಾಗಿ ತೆಗೆದುಹಾಕುವುದು(ಅದೆಂದರೆ ಶುಚಿಗೊಳಿಸುವುದು) ನೈರ್ಮಲ್ಯದ ಕ್ರಮವು ಪರಿಣಾಮಕಾರಿಯಾಗಬೇಕಾದರೆ, ಮೇಲ್ಮೈಯಿಂದ ಸೂಕ್ಷ್ಮಜೀವಿಗಳನ್ನು ತೆಗೆದುಹಾಕಲು ಸುರಿಯುವ ನೀರಿನಿಂದ ಸಂಪೂರ್ಣವಾಗಿ ತೊಳೆಯುವ ಪ್ರಕ್ರಿಯೆಯನ್ನು ಅನುಸರಿಸಬೇಕು.
  • ಸ್ಥಳದಲ್ಲಿನ ರೋಗಕಾರಕಗಳನ್ನು ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ಅಥವಾ ಉತ್ಪನ್ನವನ್ನು ಬಳಕೆಮಾಡಬೇಕು. ಸೂಕ್ಷ್ಮಜೀವಿಗಳನ್ನು "ಮೈಕ್ರೋ-ಬಯೋಸೈಡಲ್" ಉತ್ಪನ್ನವನ್ನು ಬಳಸಿ ಕೊಲ್ಲಬಹುದು ಉದಾಹರಣೆಗೆ, ಸೋಂಕು ನಿವಾರಕ ಅಥವಾ ಬ್ಯಾಕ್ಟೀರಿಯ ನಿರೋಧಕ ಉತ್ಪನ್ನ ಅಥವಾ ಜಲರಹಿತ ಹ್ಯಾಂಡ್ ಸ್ಯಾನಿಟೈಜರ್(ಕೈಯನ್ನು ಶುದ್ಧಗೊಳಿಸುವ ಪದಾರ್ಥ), ಅಥವಾ ಶಾಖವನ್ನು ಬಳಸುವ ಮೂಲಕ ನಿಷ್ಕ್ರಿಯಗೊಳಿಸಲಾಗುತ್ತದೆ.
  • ಕೆಲವೊಂದು ಪರಿಸ್ಥಿತಿಗಳಲ್ಲಿ ಸೂಕ್ಷ್ಮಜೀವಿಯನ್ನು ತೊಲಗಿಸಲು ಅವುಗಳನ್ನು ನಾಶಮಾಡುವ ಪದಾರ್ಥಗಳನ್ನು ಬಳಸಲಾಗುತ್ತದೆ, ಉದಾಹರಣೆಗೆ ಬಟ್ಟೆಗಳನ್ನು ಹಾಗು ಮನೆಗಳಲ್ಲಿ ಬಳಸಲಾಗುವ ಲಿನಿನ್ ಗಳಾದ ಚೌಕಗಳು ಹಾಗು ಹಾಸುಹೊದಿಕೆಗಳು ಹಾಗು ದಿಂಬು ಚೀಲಗಳನ್ನು ತೊಳೆದು ಶುದ್ಧಗೊಳಿಸುವುದು.

ಕೈ ನೈರ್ಮಲ್ಯ

ಬದಲಾಯಿಸಿ

ಕೈಯನ್ನು ತೊಳೆಯುವುದು ಅಥವಾ ಸಾಬೂನು ಹಾಗು ನೀರು ಅಥವಾ ನೀರುರಹಿತ ಹ್ಯಾಂಡ್ ಸ್ಯಾನಿಟೈಜರ್ ನ್ನು ಬಳಸಿಕೊಂಡು ಕೈಗಳನ್ನು ತೊಳೆಯುವುದು ಎಂದು ಅರ್ಥನಿರೂಪಣೆ ನೀಡಲಾಗಿದೆ. ಮನೆ ಹಾಗು ನಿತ್ಯಜೀವನದಲ್ಲಿ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಗಟ್ಟಲು ಕೈಯನ್ನು ಶುಚಿಯಾಗಿಟ್ಟುಕೊಳ್ಳುವುದು ಬಹಳ ಮುಖ್ಯವಾಗುತ್ತದೆ.[] ಕೆಲವೊಂದು ಪರಿಸ್ಥಿತಿಗಳಲ್ಲಿ ಸಾಬೂನಿನಿಂದ ಕೈಯನ್ನು ತೊಳೆಯುವುದು ಆಯ್ಕೆಯಾಗಿರುವುದಿಲ್ಲ(ಉದಾಹರಣೆಗೆ ಸಾರ್ವಜನಿಕ ಸ್ಥಳದಲ್ಲಿ ಕೈಯನ್ನು ತೊಳೆಯುವ ಸೌಲಭ್ಯಗಳಿಲ್ಲದಿರಬಹುದು), ಒಂದು ನೀರಿಲ್ಲದ ಹ್ಯಾಂಡ್ ಸ್ಯಾನಿಟೈಜರ್ ಉದಾಹರಣೆಗೆ ಆಲ್ಕೋಹಾಲ್ ಹ್ಯಾಂಡ್ ಜೆಲ್ ನ್ನು ಬಳಸಬಹುದು. ಕೈಯನ್ನು ತೊಳೆಯುವುದರ ಜೊತೆಗೆ ಇದನ್ನೂ ಸಹ ಬಳಸುವುದರಿಂದ "ಸೋಂಕಿಗೆ ಬೇಗನೆ ಈಡಾಗುವವರಲ್ಲಿ" ಅಪಾಯದ ಮಟ್ಟವನ್ನು ತಗ್ಗಿಸುತ್ತದೆ. ಹೆಚ್ಚು ಪರಿಣಾಮಕಾರಿಯಾಗಿರಲು, ಆಲ್ಕೋಹಾಲ್ ಹ್ಯಾಂಡ್ ಜೆಲ್ ಗಳು 60%v/vಗಿಂತ ಕಡಿಮೆ ಆಲ್ಕೋಹಾಲ್ ನ್ನು ಹೊಂದಿರಬಾರದು. ಅಭಿವೃದ್ಧಿಹೊಂದುತ್ತಿರುವ ಹೆಚ್ಚಿನ ರಾಷ್ಟ್ರಗಳಲ್ಲಿ ಹ್ಯಾಂಡ್ ಸ್ಯಾನಿಟೈಜರ್ ಗಳು ಆಯ್ಕೆರಾಹಿತ್ಯವಾಗಿದೆ; ನೀರಿನ ಲಭ್ಯತೆಯು ಒಂದು ಸಮಸ್ಯೆಯಾಗಿರುವ ಪರಿಸ್ಥಿತಿಗಳಲ್ಲಿ, ಸೂಕ್ತ ಪರಿಹಾರಗಳಾದ, ಕಡಿಮೆ ನೀರಿನ ಅಗತ್ಯದ ಟಿಪ್ಪಿ-ಟ್ಯಾಪ್ ಗಳನ್ನು ಬಳಸಬಹುದು, ಜೊತೆಗೆ ಸ್ಥಳೀಯವಾಗಿ ದೊರಕುವ ಪದಾರ್ಥಗಳನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ತಯಾರಿಸಬಹುದು. ಕಡಿಮೆ ವರಮಾನವಿರುವ ಸಮುದಾಯಗಳು ಮಣ್ಣು ಅಥವಾ ಬೂದಿಯನ್ನು ಕೆಲವೊಂದು ಬಾರಿ ಸಾಬೂನಿಗೆ ಬದಲಾಗಿ ಬಳಕೆ ಮಾಡುತ್ತವೆ.

ಉಸಿರಾಟದ ನೈರ್ಮಲ್ಯ

ಬದಲಾಯಿಸಿ

ಸರಿಯಾದ ಉಸಿರಾಟ ಹಾಗು ಕೆಮ್ಮುವಾಗ ಹಾಗು ಸೀನುವಾಗ ಕೈಗಳ ನೈರ್ಮಲ್ಯವು ಸೂಕ್ಷ್ಮಜೀವಿಗಳ ಹರಡುವಿಕೆಯನ್ನು ಕುಂಠಿತಗೊಳಿಸುತ್ತದೆ. ಅದರಲ್ಲೂ ವಿಶೇಷವಾಗಿ ಚಳಿಗಾಲ ಹಾಗು ತೀವ್ರ ನೆಗಡಿಯ ಸಂದರ್ಭದಲ್ಲಿ.[]

  • ನೆಗಡಿ ಹಾಗು ಸೀನುಗಳನ್ನು ತಡೆಯಲು ಮೃದುವಾದ ಕಾಗದಗಳನ್ನು ಬಳಸಬಹುದು
  • ಬಳಸಿದ ನಂತರ ತಕ್ಷಣವೇ ಮೃದುಕಾಗದಗಳನ್ನು ವಿಲೇವಾರಿ ಮಾಡುವುದು
  • ಕೈಯನ್ನು ತೊಳೆದುಕೊಳ್ಳುವ ಅಥವಾ ಆಲ್ಕೋಹಾಲ್ ಹ್ಯಾಂಡ್ ಸ್ಯಾನಿಟೈಜರ್ ನ್ನು ಬಳಸುವ ಮೂಲಕ ಕೈಯನ್ನು ಶುದ್ಧಗೊಳಿಸಬೇಕು.

ಮನೆಯಲ್ಲಿ ಆಹಾರದ ನೈರ್ಮಲ್ಯ

ಬದಲಾಯಿಸಿ

ಆಹಾರ ನೈರ್ಮಲ್ಯವು ಆಹಾರದಲ್ಲಿ ವಿಷದ ಪರಿಣಾಮ ತಡೆಗಟ್ಟಲು ರೂಢಿಸಿಕೊಳ್ಳುವ ನೈರ್ಮಲ್ಯದ ಅಭ್ಯಾಸಗಳಿಗೆ ಸಂಬಂಧಿಸಿದೆ. WHO ಪ್ರಕಾರವಾಗಿ ಆರೋಗ್ಯ ನೈರ್ಮಲ್ಯದಲ್ಲಿರಬೇಕಾದ ಐದು ಮುಖ್ಯ ತತ್ತ್ವಗಳೆಂದರೆ,[]:

  1. ಜನರು, ಸಾಕುಪ್ರಾಣಿಗಳು, ಹಾಗು ಕ್ರಿಮಿಕೀಟಗಳಿಂದ ಹರಡುವ ರೋಗಕಾರಕಗಳು ಆಹಾರದೊಂದಿಗೆ ಬೆರೆತು ಕಲುಷಿತಗೊಳ್ಳದಂತೆ ತಡೆಗಟ್ಟುವುದು.
  2. ಬೇಯಿಸಿದ ಆಹಾರ ಕಲುಷಿತವಾಗದಂತೆ ತಡೆಗಟ್ಟಲು ಕಚ್ಚಾ ಹಾಗು ಬೇಯಿಸಿದ ಆಹಾರವನ್ನು ಪ್ರತ್ಯೇಕವಾಗಿಡುವುದು.
  3. ರೋಗಕಾರಕಗಳನ್ನು ನಾಶಮಾಡಲು ಆಹಾರವನ್ನು ಸೂಕ್ತ ಅವಧಿಗೆ ಹಾಗು ಸೂಕ್ತ ತಾಪಮಾನದಲ್ಲಿ ಬೇಯಿಸಬೇಕು.
  4. ಸರಿಯಾದ ತಾಪಮಾನದಲ್ಲಿ ಆಹಾರವನ್ನು ಶೇಖರಿಸಿಡಬೇಕು.
  5. ಸುರಕ್ಷಿತ ನೀರು ಹಾಗು ಕಚ್ಚಾ ಪದಾರ್ಥಗಳನ್ನು ಬಳಸುವುದು.

ಮನೆಯಲ್ಲಿ ನೀರಿನ ಸಂಸ್ಕರಣೆ ಹಾಗು ಸುರಕ್ಷಿತ ಸಂಗ್ರಹಣೆ

ಬದಲಾಯಿಸಿ

ಮನೆಯಲ್ಲಿ ನೀರಿನ ಸಂಸ್ಕರಣೆ ಹಾಗು ಸುರಕ್ಷಿತ ಸಂಗ್ರಹಣೆಯಂತಹ ಅಭ್ಯಾಸಗಳನ್ನು ಕುಟುಂಬ ಮನೆಗಳಲ್ಲಿ ಹಾಗು ಸಮುದಾಯಗಳಲ್ಲಿ ಬಳಸಿಕೊಂಡು, ನೀರಿನ ಬಳಕೆಯ ಸುರಕ್ಷತೆಯ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು. ಕುಡಿಯುವ ನೀರಿನ ಗುಣಮಟ್ಟ ಒಂದು ಮಹತ್ವದ ಸಮಸ್ಯೆಯಾಗಿ ಉಳಿದುಬಿಟ್ಟಿದೆ, ಇದು ಕೇವಲ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಾತ್ರವಲ್ಲದೆ[], ಮುಂದುವರೆದ ರಾಷ್ಟ್ರಗಳಲ್ಲೂ ಸಮಸ್ಯೆಯಾಗಿ ಪರಿಣಮಿಸಿದೆ[]; ಯುರೋಪಿಯನ್ ಪ್ರದೇಶದಲ್ಲಿ, 120 ದಶಲಕ್ಷ ಜನರು ಸುರಕ್ಷಿತ ಕುಡಿಯುವ ನೀರಿನ ಬಳಕೆಯಿಂದ ವಂಚಿತರಾಗಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ನೀರಿನ ಗುಣಮಟ್ಟವು ಕಳಪೆಯಾಗಿರುವ ಕಡೆಗಳಲ್ಲಿ ಅಥವಾ ನೀರು ಸರಬರಾಜಿಗೆ ಅಡಚಣೆ ಉಂಟಾದ ತುರ್ತು ಪರಿಸ್ಥಿತಿಗಳಲ್ಲಿ ಮಧ್ಯಪ್ರವೇಶದಿಂದ ಸಮುದಾಯಗಳಲ್ಲಿ ಸಂಭವಿಸುವ ಅತಿಸಾರದಂತಹ ಕಾಯಿಲೆಗಳನ್ನು ತಗ್ಗಿಸಬಹುದು.[][][][] ಮನೆಯಲ್ಲಿ ಸಂಗ್ರಹಿಸಲಾದಂತಹ ನೀರು ಕಲುಷಿತಗೊಳ್ಳಬಹುದು(ಉದಾಹರಣೆಗೆ ಕಲುಷಿತವಾದ ಕೈಗಳಿಂದ ಮುಟ್ಟಿದರೆ ಅಥವಾ ಕೊಳಕಾದ ಪಾತ್ರೆಗಳಲ್ಲಿ ಸಂಗ್ರಹಿಸಿಟ್ಟರೆ), ಮನೆಗಳಲ್ಲಿ ನೀರನ್ನು ಸುರಕ್ಷಿತವಾಗಿ ಸಂಗ್ರಹಿಸಿಡುವಿಕೆ ಸಹ ಮುಖ್ಯವಾಗುತ್ತದೆ. ಕುಡಿಯುವ ನೀರಿನ ಸಂಸ್ಕರಣೆಗೆ ಇರುವ ವಿಧಾನಗಳಲ್ಲಿ[೧೦],[] ಈ ಕೆಳಕಂಡಂತಹವು ಒಳಗೊಂಡಿದೆ:

  1. ಕ್ಲೋರಿನ್ ಅಥವಾ ಐಯೋಡಿನ್ ನನ್ನು ಬಳಸಿಕೊಂಡು ರಾಸಾಯನಿಕ ಸೋಂಕು ನಿವಾರಣೆ ಮಾಡುವುದು.
  2. ನೀರನ್ನು ಕುದಿಸುವುದು
  3. ಸೆರಾಮಿಕ್ ಶೋಧಕಗಳನ್ನು ಬಳಸಿಕೊಂಡು ನೀರನ್ನು ಶೋಧಿಸುವುದು[೧೧][೧೨]
  4. ಸೌರ ಸೋಂಕು ನಿವಾರಣೆ - ಸೌರ ಸೋಂಕು ನಿವಾರಣೆ ಒಂದು ಪರಿಣಾಮಕಾರಿ ವಿಧಾನವಾಗಿದೆ, ಅದರಲ್ಲೂ ವಿಶೇಷವಾಗಿ ಯಾವುದೇ ರಾಸಾಯನಿಕ ಸೋಂಕು ನಿವಾರಕಗಳು ಲಭ್ಯವಿಲ್ಲದಿದ್ದಾಗ ಇದು ಪರಿಣಾಮಕಾರಿ ಎನಿಸುತ್ತದೆ.[೧೩][೧೪]
  5. UV(ನೇರಳಾತೀತ) ವಿಕಿರಣ - ಸಮುದಾಯ ಅಥವಾ ಮನೆಯಲ್ಲಿ ಬಳಸಲಾಗುವ UV ವ್ಯವಸ್ಥೆಗಳು ಬ್ಯಾಚ್(ಒಟ್ಟಾಗಿ ಜೋಡಣೆ)ಅಥವಾ ನೀರು ಹರಿಯುವ ವ್ಯವಸ್ಥೆಯಾಗಿದೆ. ನೀರಿನ ಕಾಲುವೆಯ ಮೇಲೆ ದೀಪಗಳನ್ನು ತೂಗು ಹಾಕಬಹುದು ಅಥವಾ ಹರಿಯುವ ನೀರಿನಲ್ಲಿ ಮುಳುಗಿಸಬಹುದು.
  6. ಸಂಯೋಜಿತ ಕುಚ್ಚಾಗುವ/ಸೋಂಕು ನಿವಾರಣ ವ್ಯವಸ್ಥೆಗಳು - ಇದು ಪುಡಿಯ ರೂಪದಲ್ಲಿ ಸಣ್ಣ ಪೊಟ್ಟಣದಲ್ಲಿ ದೊರೆಯುತ್ತದೆ, ಇದು ನೀರಿನ ಕಣಗಳನ್ನು ಘನೀಕರಿಸುವುದರ ಜತೆಗೆ ಕುಚ್ಚಾಗುವಂತೆ ಮಾಡಿ, ಹಿಂದೆಯೇ ಕ್ಲೋರಿನ್ ಬಿಡುಗಡೆ ಮಾಡುತ್ತದೆ.
  7. ಬಹುಪ್ರತಿಬಂಧಕ ವಿಧಾನಗಳು - ಕೆಲವು ವ್ಯವಸ್ಥೆಗಳು ಮೇಲೆ ಹೇಳಲಾಗಿರುವ ಎರಡು ಸಂಸ್ಕರಣಗಳಲ್ಲಿ ಎರಡು ಅಥವಾ ಅದಕ್ಕೂ ಹೆಚ್ಚು ವಿಧಾನಗಳನ್ನು ಜಂಟಿಯಾಗಿ ಅಥವಾ ಪರಿಣಾಮಕಾರಿತ್ವದ ಹೆಚ್ಚಿಸಲು ಒಂದರ ನಂತರ ಒಂದನ್ನು ಬಳಸುತ್ತವೆ.[೧೫]

ಅಡುಗೆಮನೆ, ಸ್ನಾನಗೃಹ ಹಾಗು ಶೌಚಾಲಯದ ನೈರ್ಮಲ್ಯ

ಬದಲಾಯಿಸಿ

ಅಡುಗೆಮನೆಯಲ್ಲಿ "ಸಂಪರ್ಕಕ್ಕೆ" ಬರುವ ಸ್ಥಳಗಳು ಹಾಗು ಮೇಲ್ಮೈಗಳನ್ನು (ಕೈ, ಆಹಾರ ಹಾಗು ಕುಡಿಯುವ ನೀರು) ವಾಡಿಕೆಯಂತೆ ಶುಚಿಗೊಳಿಸುವುದು(ಉದಾಹರಣೆಗೆ ಟಾಯ್ಲೆಟ್ ಸೀಟುಗಳು ಹಾಗು ಫ್ಲಶ್(ನೀರನ್ನು ರಭಸದಿಂದ ಹರಿಸಿ ವಸ್ತು/ಪದಾರ್ಥವನ್ನು ಹೊರದೂಡುವುದು) ಹಿಡಿಕೆಗಳು, ಬಾಗಿಲು ಹಾಗು ನಲ್ಲಿಯ ಹಿಡಿಕೆಗಳು, ಕೆಲಸದ ಮೇಲ್ಮೈಗಳು, ಸ್ನಾನದ ಹಾಗು ಬೊಗುಣಿಯ ಮೇಲ್ಮೈಗಳು) , ಸ್ನಾನಗೃಹದಲ್ಲಿ ಹಾಗು ಶೌಚಾಲಯದಲ್ಲಿ ರೋಗಾಣುಗಳು ಹರಡುವ ಅಪಾಯವನ್ನು ತಗ್ಗಿಸುತ್ತದೆ.[೧೦] ಶೌಚಾಲಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿದರೆ, ಸೋಂಕು ಹರಡುವ ಅಪಾಯವು ಕಡಿಮೆಯಿರುತ್ತದೆ, ಆದಾಗ್ಯೂ ಚೊಕ್ಕಟಗೊಳಿಸುವ ಸಂದರ್ಭದಲ್ಲಿ ಸ್ವಲ್ಪಮಟ್ಟಿಗೆ ಸಿಡಿಯುವುದು ಹಾಗು ವಾಯುಕಲಿಲದ ರಚನೆಗಳು ಉಂಟಾಗಬಹುದು, ವಿಶೇಷವಾಗಿ ಕುಟುಂಬದಲ್ಲಿ ಯಾರಿಗಾದರೂ ಅತಿಸಾರವಿದ್ದರೆ ಸೋಂಕಿನ ಅಪಾಯ ಉಂಟಾಗಬಹುದು. ಮಾರ್ಜನದ ಅಥವಾ ಸ್ನಾನದ ನಂತರ ಸ್ನಾನಗೃಹಗಳಲ್ಲಿ ಹಾಗು ವಾಶ್ ಬೇಸಿನ್ ಗಳಲ್ಲಿ ಕಲ್ಮಷ ಅಥವಾ ಚಕ್ಕೆಯಲ್ಲಿ ಸೂಕ್ಷ್ಮಜೀವಿಗಳು ಉಳಿದುಕೊಂಡೇ ಇರಬಹುದು. ಷವರ್ ಗಳ ಕೊಳವೆಯಲ್ಲಿ ನಿಂತು ನಾರುವ ನೀರು, ರೋಗಾಣು ಕಲುಷಿತವಾಗಿರಬಹುದು, ಷವರ್ ನ್ನು ಬಿಟ್ಟಾಗ ಇದು ಗಾಳಿಯೊಂದಿಗೆ ಬೆರೆತು ಮಾಲಿನ್ಯವನ್ನು ಉಂಟುಮಾಡಬಹುದು. ಷವರ್ ಅನ್ನು ಕೆಲಕಾಲದಿಂದ ಬಳಸದೆ ಹಾಗೆ ಬಿಟ್ಟಿದ್ದರೆ, ಅದನ್ನು ಬಳಕೆ ಮಾಡುವ ಮುಂಚೆ ಬಿಸಿಯಾದ ತಾಪಮಾನದಲ್ಲಿ ಕೆಲವು ನಿಮಿಷಗಳ ಕಾಲ ಅದರಿಂದ ನೀರು ಹರಿದುಹೋಗುವಂತೆ ಮಾಡಬೇಕು. ಶಿಲೀಂಧ್ರದ ಸೋಂಕುಗಳು ಹರಡದಂತೆ ತಡೆಯಲು ಸಂಪೂರ್ಣವಾಗಿ ಶುಚಿಗೊಳಿಸುವುದು ಬಹಳ ಅವಶ್ಯಕ.[೧೬] ಪುಡಿಮಣ್ಣು ಗೋಡೆಯ ಮೇಲೆ ಹಾಗು ನೆಲದ ಹೆಂಚಿನ ಮೇಲೆ ಹಾಗು ಷವರ್ ನ ತೆರೆಯಲ್ಲಿ ಹಾಗೆ ಉಳಿದಿರಬಹುದು. ಸೋಂಕುಗಳ ಹರಡುವಿಕೆಯಲ್ಲಿ ಪುಡಿಮಣ್ಣು ಸಹ ಕಾರಣವಾಗಬಹುದು, ಇದು ಅಲರ್ಜಿಯನ್ನು ಉಂಟುಮಾಡುತ್ತದೆ, ಮೇಲ್ಮೈಗಳು ಕೆಡುತ್ತವೆ/ಹಾನಿಗೊಳಗಾಗುತ್ತವೆ ಹಾಗು ಅಹಿತಕರ ವಾಸನೆಯನ್ನು ಉಂಟುಮಾಡುತ್ತದೆ. ಶಿಲೀಂಧ್ರದ ಬೆಳವಣಿಗೆಗೆ ಕಾರಣವಾಗುವ ಪ್ರಾಥಮಿಕ ಪ್ರದೇಶವೆಂದರೆ ನಿರ್ಜೀವ ಮೇಲ್ಮೈಗಳು, ಇದರಲ್ಲಿ ನೆಲಹಾಸುಗಳು ಹಾಗು ಮೃದುವಾದ ಪೀಠೋಪಕರಣಗಳು ಸೇರಿವೆ.[೧೭] ಗಾಳಿಯ ಮೂಲಕ ಹರಡುವ ಶಿಲೀಂಧ್ರಗಳು ಸಾಮಾನ್ಯವಾಗಿ ತೇವ ಪರಿಸ್ಥಿತಿಗಳು, ಗಾಳಿಬೆಳಕಿನ ಕೊರತೆ ಅಥವಾ ಮುಚ್ಚಿದ ಗಾಳಿಯಾಡುವ ವ್ಯವಸ್ಥೆಗಳಿಗೆ ಸಂಬಂಧಿಸಿದೆ. ಶೌಚಾಲಯವನ್ನು ಶುಚಿಗೊಳಿಸುವುದು ಹಾಗು ಕೈಯನ್ನು ತೊಳೆಯುವ ಸೌಲಭ್ಯಗಳು ದುರ್ಗಂಧವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಜೊತೆಗೆ ಅವುಗಳನ್ನು ಸಾಮಾಜಿಕವಾಗಿ ಸ್ವೀಕಾರಯೋಗ್ಯವನ್ನಾಗಿ ಮಾಡುತ್ತದೆ. ಸಾಮಾಜಿಕ ಸ್ವೀಕಾರಾರ್ಹತೆಯು, ಶೌಚಾಲಯದ ಬಳಕೆ ಹಾಗು ಕೈಯನ್ನು ತೊಳೆದುಕೊಳ್ಳಲು ಜನರಿಗೆ ಉತ್ತೇಜಿಸುತ್ತದೆ, ಅದರಲ್ಲೂ ವಿಶೇಷವಾಗಿ ಕಡಿಮೆ ಆದಾಯುವುಳ್ಳ ಸಮುದಾಯಗಳಲ್ಲಿ.

ಲಾಂಡ್ರಿ ನೈರ್ಮಲ್ಯ

ಬದಲಾಯಿಸಿ

ಲಾಂಡ್ರಿ(ಬಟ್ಟೆಗಳನ್ನು ಒಗೆದು ಇಸ್ತ್ರಿ ಮಾಡುವುದು) ನೈರ್ಮಲ್ಯವೆಂದರೆ, ಮಣ್ಣಾದ ಬಟ್ಟೆಗಳಿಂದ ಹಾಗು ಗೃಹಬಳಕೆಯ ಲಿನೆನ್ ಗಳಾದ ಚೌಕಗಳಿಂದ ರೋಗದ ಹರಡುವಿಕೆಯನ್ನು ಹಾಗು ಸೋಂಕನ್ನು ತಗ್ಗಿಸುವುದು ಅಥವಾ ತಡೆಗಟ್ಟುವ ಅಭ್ಯಾಸಗಳಿಗೆ ಸಂಬಂಧಿಸಿದ್ದೇ ಆಗಿದೆ.[೧೦] ದೇಹದೊಂದಿಗೆ ನೇರ ಸಂಪರ್ಕಕ್ಕೆ ಬರುವ ಪದಾರ್ಥಗಳು ರೋಗಕಾರಕಗಳಿಂದ ಕಲುಷಿತಗೊಳ್ಳುತ್ತವೆ, ಉದಾಹರಣೆಗೆ, ಒಳಉಡುಪುಗಳು, ಪ್ರತ್ಯೇಕವಾಗಿ ಬಳಸುವ ಚೌಕಗಳು, ಮುಖಕ್ಕೆ ಒರೆಸುವ ಬಟ್ಟೆಗಳು, ಮಕ್ಕಳಿಗೆ ಕಟ್ಟುವ ಬಟ್ಟೆಗಳು. ಲಾಂಡ್ರಿ ಸಮಯದಲ್ಲಿ ಬಟ್ಟೆಯ ಹಾಗು ಲಿನೆನ್‌ನ ಕಲುಷಿತಗೊಂಡ ಹಾಗು ಕಲುಷಿತವಾಗದ ಪದಾರ್ಥಗಳ ನಡುವೆ ಸೂಕ್ಷ್ಮಜೀವಿಗಳು ವರ್ಗಾವಣೆಯಾಗಬಹುದು. ಹೊಸ ಸಮುದಾಯದ ಸೂಕ್ಷ್ಮಾಣುಜೀವಿಗಳಾದ MRSA ಕಳವಳದ ಸಂಗತಿಯಾಗಿದೆ[೧೮] USA ಅನುಭವದ ಪ್ರಕಾರ ಈ ಸೂಕ್ಷ್ಮಜೀವಿಗಳು ಕುಟುಂಬಗಳ ನಡುವೆ ಪ್ರಸರಿಸಬಹುದು. ಆದರೆ ಇವುಗಳು ಬಂದಿಖಾನೆಗಳು, ಶಾಲೆಗಳು ಹಾಗು ಕ್ರೀಡಾತಂಡಗಳಂತಹ ಸಮುದಾಯಗಳ ಒಳಗೂ ಸಹ ಹರಡಬಹುದು. ಚರ್ಮದಿಂದ ಚರ್ಮಕ್ಕೆ ಸಂಪರ್ಕ (ಇದರಲ್ಲಿ ಮೇಲಿನ ಪದರದ ಚರ್ಮವೂ ಸಹ ಸೇರಿದೆ) ಹಾಗು ಚೌಕಗಳು, ಹಾಳೆಗಳು ಹಾಗು ಕ್ರೀಡಾ ಸಾಮಗ್ರಿಗಳಂತಹ ಕಲುಷಿತ ಪದಾರ್ಥಗಳೂ ಪ್ರಸರಣದ ಒಂದು ವಿಧಾನವನ್ನು ಸೂಚಿಸುತ್ತವೆ.[೧೮] ಬಟ್ಟೆ ಹಾಗು ಲಿನೆನ್ ನನ್ನು ಶುಚಿಗೊಳಿಸಲು ಎರಡು ಪ್ರಕ್ರಿಯೆಗಳು ಸೂಕ್ತವೆಂದು ಪರಿಗಣಿಸಲಾಗಿದೆ:[೧೦]

  • 60 °C ಅಥವಾ ಅದಕ್ಕೂ ಹೆಚ್ಚಿನ ತಾಪಮಾನದಲ್ಲಿ ಬಟ್ಟೆಯನ್ನು ಒಗೆಯುವುದು ಅಥವಾ ಒಗೆದು ಇಸ್ತ್ರಿ ಮಾಡುವುದು
  • ಬಟ್ಟೆಯನ್ನು ಬಿಳುಪಾಗಿಸುವ ಉತ್ಪನ್ನವನ್ನು ಬಳಸಿಕೊಂಡು 30-40 °Cನಲ್ಲಿ ಬಟ್ಟೆಯನ್ನು ಒಗೆಯುವುದು ಅಥವಾ ಒಗೆದು ಇಸ್ತ್ರಿ ಮಾಡುವುದು. ಇದು ಕೈಯಿಂದ ಕೊಳೆಯನ್ನು ಹೋಗಿಸುವುದರ ಜೊತೆಗೆ ರಾಸಾಯನಿಕ ನಿಷ್ಕ್ರಿಯಕರಣದಿಂದ ಬಟ್ಟೆಗಳನ್ನು ಶುದ್ದಗೊಳಿಸುವುದು. ಆದಾಗ್ಯೂ, ನಿಷ್ಕ್ರಿಯಗೊಳಿಸಲು ಸಾಧ್ಯವಾಗದ ಕೆಲವು ಮಾದರಿಯ ಶಿಲೀಂಧ್ರಗಳು ಹಾಗು ಸೂಕ್ಷ್ಮಜೀವಿಗಳನ್ನು ತೆಗೆದುಹಾಕಲು ಸಾಧ್ಯವಿಲ್ಲ.

40 °C ಅಥವಾ ಅದಕ್ಕೂ ಕಡಿಮೆ ತಾಪಮಾನದಲ್ಲಿ ಬಟ್ಟೆಯನ್ನು ಬಿಳುಪಾಗಿಸದ ಉತ್ಪನ್ನದಿಂದ ಒಗೆದರೆ ಅದು ಸಾಕಷ್ಟು ಪ್ರಮಾಣದಲ್ಲಿ ಕೊಳೆಯನ್ನು ತೊಲಗಿಸಲು ಸಾಧ್ಯವಾಗದಿರಬಹುದು.

ಮನೆಯಲ್ಲಿ ವೈದ್ಯಕೀಯ ನೈರ್ಮಲ್ಯ

ಬದಲಾಯಿಸಿ

ವೈದ್ಯಕೀಯ ನೈರ್ಮಲ್ಯವೆಂದರೆ ಕಾಯಿಲೆಗಳನ್ನು ಹರಡದಂತೆ ತಡೆಗಟ್ಟುವ ಅಥವಾ ಅವುಗಳ ಪ್ರಮಾಣವನ್ನು ತಗ್ಗಿಸುವ ಆರೋಗ್ಯಕರ ಅಭ್ಯಾಸಗಳು. ಇದು ಸೋಂಕಿತರಿಗೆ ಅಗತ್ಯವಿರುವ ವೈದ್ಯಕೀಯ ಸೇವೆ ಅಥವಾ ಮನೆಯಲ್ಲಿ ಸೋಂಕಿತರಾದವರಿಗೆ ಅಥವಾ ಸೋಂಕಿನ ಅಪಾಯದಲ್ಲಿರುವವರಿಗೆ ವೈದ್ಯಕೀಯ ಆರೈಕೆ ನೀಡುವುದಕ್ಕೆ ಸಂಬಂಧಿಸಿದೆ. ವಿಶ್ವದಾದ್ಯಂತ, ಜನರು ನಿರೀಕ್ಷಿಸಿದಂತೆ ಆರೋಗ್ಯ ಸೇವೆಯ ಮಟ್ಟಕ್ಕೆ ಹಣವನ್ನು ಒದಗಿಸಲು ಸರ್ಕಾರಗಳ ಮೇಲೆ ಅಧಿಕ ಒತ್ತಡಗಳಿವೆ. ಸಮುದಾಯದಲ್ಲಿ ಹಾಗು ಮನೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ರೋಗಿಗಳ ಬಗ್ಗೆ ಕಾಳಜಿ ವಹಿಸುವುದು ಒಂದು ಉತ್ತರವಾಗಿದೆ. ಆದರೆ ಮನೆಗಳಲ್ಲಿರುವ ಅಸಮರ್ಪಕ ಸೋಂಕು ನಿಯಂತ್ರಣವು ಅಪಾಯಕಾರಿಯಾಗಿ ಆರೋಗ್ಯವನ್ನು ನಾಶಮಾಡುತ್ತದೆ. ಇದೆಲ್ಲಕ್ಕಿಂತ ಹೆಚ್ಚಾಗಿ, ಈ ಎಲ್ಲ "ಅಪಾಯಕಾರಿ" ಗುಂಪುಗಳನ್ನು ಮನೆಯಲ್ಲಿರುವ ಒಬ್ಬ ಆರೋಗ್ಯಶುಷ್ರೂಷಕ ಇವರ ಬಗ್ಗೆ ಗಮನ ವಹಿಸಬಹುದು, ಈ ರೀತಿಯಾಗಿ ಇವರಿಗೆ ನೈರ್ಮಲ್ಯದ ಬಗ್ಗೆ ಒಂದು ಉತ್ತಮ ಮಟ್ಟದ ತಿಳಿವಳಿಕೆ ಇರುವುದು ಅವಶ್ಯಕ. ಸೋಂಕಿಗೆ ಕಡಿಮೆ ಪ್ರತಿರಕ್ಷೆಯನ್ನು ಹೊಂದಿರುವ ಜನರಿಗೆ ಮನೆಯಲ್ಲೇ ಕಾಳಜಿ ವಹಿಸಲಾಗುತ್ತದೆ, ಇವರು ಜನಸಂಖ್ಯೆಯ ಪ್ರಮಾಣದಲ್ಲಿ ಅಧಿಕಗೊಳ್ಳುತ್ತಿದ್ದಾರೆ(ಪ್ರಸಕ್ತದಲ್ಲಿ 20%ವರೆಗೂ).[] ಇವರಲ್ಲಿ ದೊಡ್ಡ ಪ್ರಮಾಣವು ಹಿರಿಯವಯಸ್ಕರಿಂದ ಕೂಡಿದೆ. ಇವರು ರೋಗವ್ಯಾಪನೆಗೆ ಸಹಕಾರಿಯಾಗಿದ್ದಾರೆ, ಇವರಲ್ಲಿ ಸೋಂಕಿಗೆ ಪ್ರತಿರಕ್ಷೆಯು ಕಡಿಮೆ ಮಟ್ಟದಲ್ಲಿರುತ್ತದೆ. ಇದರಲ್ಲಿ ಬಹಳ ಚಿಕ್ಕ ವಯಸ್ಸಿನವರು, ಆಸ್ಪತ್ರೆಯಿಂದ ಬಿಡುಗಡೆಯಾದ ರೋಗಿಗಳು, ಪ್ರತಿರಕ್ಷೆ ನಿರೋಧಕ ಔಷಧವನ್ನು ತೆಗೆದುಕೊಳ್ಳುವವರು ಅಥವಾ ಇನ್‌ವೇಸಿವ್ ವ್ಯವಸ್ಥೆಯನ್ನು(ಚುಚ್ಚುಮದ್ದು ಅಥವಾ ಶಸ್ತ್ರಚಿಕಿತ್ಸೆ) ಬಳಸುವವರು ಮುಂತಾದವರು ಸೇರಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾದ ರೋಗಿಗಳು, ಅಥವಾ ಮನೆಯಲ್ಲೇ "ವೈದ್ಯಕೀಯ ನೈರ್ಮಲ್ಯ"ವಿಧಾನಗಳಲ್ಲಿ ಆರೈಕೆಯನ್ನು ಪಡೆಯುತ್ತಿರುವ ರೋಗಿಗಳಿಗೆ ತೂರುನಳಿಕೆಯ ಅಥವಾ ಬಟ್ಟೆಯನ್ನು ಬದಲಾಯಿಸುವ ಅಗತ್ಯವಿರುತ್ತದೆ, ಇದು ಅಧಿಕ ಅಪಾಯವನ್ನು ಉಂಟುಮಾಡುವ ಸಾಧ್ಯತೆಯಿರುತ್ತದೆ. ಕತ್ತರಿಸಿದ ಭಾಗ, ಚರ್ಮದ ತರಚುಗಾಯಕ್ಕೆ ಕೀವುಗಳೆಕಗಳನ್ನು ಹಚ್ಚಬಹುದು, ಇವುಗಳು ನೆತ್ತರುನಂಜನ್ನು ಉಂಟುಮಾಡುವ ಹಾನಿಕರ ಬ್ಯಾಕ್ಟೀರಿಯದ ಪ್ರವೇಶವನ್ನು ತಡೆಗಟ್ಟುತ್ತದೆ. ವಿಶೇಷ ವೈದ್ಯಕೀಯ ನೈರ್ಮಲ್ಯ ವಿಧಾನಗಳಲ್ಲದೆ ದಿನನಿತ್ಯದ ಆರೋಗ್ಯಕರ ಅಭ್ಯಾಸಗಳು,[೧೯] ಕುಟುಂಬದ ಇತರರಿಗಿಂತ ಸೋಂಕಿನ ಹೆಚ್ಚು ಅಪಾಯವಿರುವ ವ್ಯಕ್ತಿಗಳಿಗೆ ಭಿನ್ನವಾಗಿರುವುದಿಲ್ಲ. ವ್ಯತ್ಯಾಸವೆಂದರೆ, ಆರೋಗ್ಯಕರ ಅಭ್ಯಾಸಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸದಿದ್ದರೆ, ಸೋಂಕಿನ ಅಪಾಯವು ಅಧಿಕವಾಗಿರುತ್ತದೆ.

ಕಡಿಮೆ ಆದಾಯವುಳ್ಳ ಸಮುದಾಯಗಳಲ್ಲಿ ಗೃಹ ನೈರ್ಮಲ್ಯ

ಬದಲಾಯಿಸಿ

ಮುಂದುವರೆಯುತ್ತಿರುವ ಜಗತ್ತಿನಲ್ಲಿ, ದಶಕಗಳಿಂದಲೂ, ನೀರು ಹಾಗು ಶೌಚಾಲಯದ ಸಾರ್ವತ್ರಿಕ ಸೌಲಭ್ಯವು ತಡೆಗಟ್ಟಬಹುದಾದ ID ಹೊರೆ ತಗ್ಗಿಸಬಹುದಾದ ಅಗತ್ಯ ಹೆಜ್ಜೆಯೆಂದು ಪರಿಗಣಿಸಲಾಗಿದೆ. ಇದನ್ನು ನೈರ್ಮಲ್ಯ ಪ್ರಚಾರದಿಂದ ಸಂಘಟಿತವಾದ ಕಾರ್ಯಕ್ರಮಗಳ ಮೂಲಕ ಸಾಧಿಸಲಾಗಿದೆ, ಇದು ನೀರಿನ ಗುಣಮಟ್ಟದಲ್ಲಿ ಸುಧಾರಣೆ ಹಾಗು ಅದರ ಲಭ್ಯತೆ, ಹಾಗು ನಿರ್ಮಲೀಕರಣದ ಸೌಲಭ್ಯವನ್ನು ಸುಲಭಗೊಳಿಸುತ್ತದೆ. ಸುಮಾರು ಎರಡು ದಶಲಕ್ಷ ಜನರು ಅತಿಸಾರದಂತಹ ಕಾಯಿಲೆಗಳಿಂದ ಪ್ರತಿ ವರ್ಷವೂ ಸಾವನ್ನಪ್ಪುತ್ತಾರೆ, ಇವರಲ್ಲಿ ಹೆಚ್ಚಿನವರು ಐದು ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳು.[೨೦] ಮುಂದುವರೆಯುತ್ತಿರುವ ರಾಷ್ಟ್ರಗಳ ಜನಸಂಖ್ಯೆಯಲ್ಲಿ ಹೆಚ್ಚಿನ ಜನರು ಇದರಿಂದ ಪರಿಣಾಮಕ್ಕೊಳಗಾಗುತ್ತಾರೆ, ಇವರಲ್ಲಿ ಹೆಚ್ಚಿನವರು ತೀವ್ರತರವಾದ ಬಡತನದ ಬೇಗೆಯಲ್ಲಿರುತ್ತಾರೆ, ಸಾಧಾರಣವಾಗಿ ಇವರು ನಗರದ ಸುತ್ತಮುತ್ತಲಿರುವ ನಿವಾಸಿಗಳು ಅಥವಾ ಹಳ್ಳಿಗಳಲ್ಲಿ ವಾಸಿಸುವವರು. ಸಾಕಷ್ಟು ಸುರಕ್ಷಿತ ನೀರಿನ ಲಭ್ಯತೆ, ವಿಸರ್ಜಿತ ವಸ್ತುಗಳ ಚೊಕ್ಕಟ ವಿಲೇವಾರಿಗೆ ಸೌಲಭ್ಯಗಳನ್ನು ಒದಗಿಸುವುದು, ಹಾಗು ಸುಭದ್ರ ನೈರ್ಮಲ್ಯ ನಡವಳಿಕೆಗಳನ್ನು ಪರಿಚಯಿಸುವುದು, ಈ ಅಪಾಯದ ಅಂಶಗಳಿಂದ ಉಂಟಾಗುವ ರೋಗಗಳನ್ನು ತಗ್ಗಿಸಲು ಪ್ರಾಮುಖ್ಯತೆ ಪಡೆದಿವೆ. ವ್ಯಾಪಕವಾಗಿ ರೂಢಿ ಮಾಡಿಕೊಂಡಲ್ಲಿ ಸಾಬೂನಿನಿಂದ ಕೈ ತೊಳೆಯುವಿಕೆ ಬಹುತೇಕವಾಗಿ ಶೇಕಡಾ ಐವತ್ತರಷ್ಟು ಅತಿಸಾರದಂತಹ ಕಾಯಿಲೆಗಳು ಕಡಿಮೆಯಾಗುತ್ತದೆ[೨೧][೨೨][೨೩] ಹಾಗು ಸುಮಾರು ಶೇಕಡಾ ಇಪ್ಪತ್ತೈದರಷ್ಟು ಉಸಿರಾಟದಿಂದ ಉಂಟಾಗುವ ಸೋಂಕುಗಳು ಕಡಿಮೆಯಾಗುತ್ತದೆ[೨೪][೨೫] ಸಾಬೂನಿಂದ ಕೈಯನ್ನು ತೊಳೆಯುವುದರಿಂದ ಚರ್ಮದ ಕಾಯಿಲೆಗಳೂ ಸಹ ಕಡಿಮೆಯಾಗುತ್ತದೆ[೨೬][೨೭], ಕಣ್ಣಿನ ಸೊಂಕುಗಳಾದ ಟ್ರಕೋಮ(ರೆಪ್ಪೆಯ ಒಳಭಾಗದಲ್ಲಿ ಕಣಕಣವಾಗಿ ಗುಳ್ಳೆಗಳೇಳುವ ರೋಗ) ಹಾಗು ಕರುಳಿನಲ್ಲಿ ಉಂಟಾಗುವ ಜಂತುಗಳು, ವಿಶೇಷವಾಗಿ ಅಸ್ಕರಿಯಾಸಿಸ್ ಹಾಗು ಟ್ರಿಚುರಿಯಾಸಿಸ್.[೨೮] ಇತರ ಆರೋಗ್ಯಕರ ಅಭ್ಯಾಸಗಳೆಂದರೆ ತ್ಯಾಜ್ಯದ ಸುರಕ್ಷಿತ ವಿಲೇವಾರಿ, ಮೇಲ್ಮೈನ ನೈರ್ಮಲ್ಯ, ಸಾಕುಪ್ರಾಣಿಗಳ ಕಾಳಜಿಯೂ ಸಹ ಕಡಿಮೆ ಆದಾಯವುಳ್ಳ ಸಮುದಾಯಗಳಲ್ಲಿ ಸೋಂಕಿನ ಪ್ರಸರಣದ ಸರಪಣಿಯನ್ನು ಒಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.[೨೯]

ಗೃಹ ನೈರ್ಮಲ್ಯದಲ್ಲಿ ಸೋಂಕು ನಿವಾರಕಗಳು ಹಾಗು ಬ್ಯಾಕ್ಟೀರಿಯ ನಿರೋಧಕಗಳು

ಬದಲಾಯಿಸಿ

ರಾಸಾಯನಿಕ ಸೋಂಕು ನಿವಾರಕಗಳು ಸೂಕ್ಷ್ಮಜೀವಿಗಳನ್ನು ಕೊಲ್ಲುವ ಉತ್ಪನ್ನಗಳು(ಹಾನಿಕರ ಬ್ಯಾಕ್ಟೀರಿಯ, ವೈರಸ್ ಗಳು ಹಾಗು ಶಿಲೀಂಧ್ರಗಳು). ಒಂದು ಉತ್ಪನ್ನವು ಸೋಂಕು ನಿವಾರಕವಾಗಿದ್ದರೆ, ಉತ್ಪನ್ನದ ಮೇಲಿರುವ ಗುರುತಿನ ಚೀಟಿ ಮೇಲೆ "ಸೋಂಕು ನಿವಾರಕ" ಎಂದು ಹಾಗು/ಅಥವಾ ಸೂಕ್ಷ್ಮಜೀವಿಗಳು ಅಥವಾ ಬ್ಯಾಕ್ಟೀರಿಯ ಮುಂತಾದವುಗಳನ್ನು "ನಾಶ" ಮಾಡುತ್ತದೆ ಎಂದು ಮುದ್ರಿತವಾಗಿರಬೇಕು, ಕೆಲವು ರಾಸಾಯನಿಕ ಉತ್ಪನ್ನಗಳು ಉದಾಹರಣೆಗೆ ಉದಾಹರಣೆಗೆ ಬಿಳಿಚುಕಾರಿಗಳು ತಾಂತ್ರಿಕವಾಗಿ ಸೊಂಕುನಿವಾರಕಗಳಾಗಿ "ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತವೆ". ಆದರೆ ವಾಸ್ತವವಾಗಿ ಅವುಗಳನ್ನು "ಸೋಂಕು ನಿವಾರಕ"ಗಳೆಂದು ಮುದ್ರಿಸಲಾಗಿರುವುದಿಲ್ಲ. ಎಲ್ಲ ಬಗೆ ಸೋಂಕು ನಿವಾರಕಗಳು ಎಲ್ಲ ಮಾದರಿಯ ಸೂಕ್ಷ್ಮಜೀವಿಗಳನ್ನು ಕೊಲ್ಲುವುದಿಲ್ಲ. ಎಲ್ಲ ಬಗೆ ಸೋಂಕು ನಿವಾರಕಗಳು ಬ್ಯಾಕ್ಟೀರಿಯಗಳನ್ನು ಕೊಲ್ಲುತ್ತವೆ (ಇದನ್ನು ಬ್ಯಾಕ್ಟೀರಿಯಸೈಡಲ್(ಬ್ಯಾಕ್ಟೀರಿಯಗಳನ್ನು ನಾಶಮಾಡುವ) ಎಂದು ಕರೆಯಲಾಗುತ್ತದೆ). ಕೆಲವು ಶಿಲೀಂಧ್ರಗಳನ್ನೂ(ಶಿಲೀಂಧ್ರನಾಶಕ), ಬ್ಯಾಕ್ಟೀರಿಯಾದ ಬೀಜಕಗಳು(ಸ್ಪೋರಿಸೈಡಲ್) ಹಾಗು/ಅಥವಾ ವೈರಸ್ ಗಳನ್ನು(ವೈರುಸೈಡಲ್) ಕೊಲ್ಲುತ್ತವೆ. ಒಂದು ಬ್ಯಾಕ್ಟೀರಿಯ ನಿರೋಧಕ ಉತ್ಪನ್ನವು, ಕೆಲವು ಅನಿರ್ದಿಷ್ಟ ರೀತಿಯಲ್ಲಿ ಬ್ಯಾಕ್ಟೀರಿಯಾದ ವಿರುದ್ಧ ಕಾರ್ಯ ನಿರ್ವಹಿಸುತ್ತದೆ. "ಬ್ಯಾಕ್ಟೀರಿಯ ನಿರೋಧಕ" ಎಂದು ಗುರುತು ಪಟ್ಟಿ ಮಾಡಿರುವ ಕೆಲವು ಉತ್ಪನ್ನಗಳು ಬ್ಯಾಕ್ಟೀರಿಯವನ್ನು ಕೊಲ್ಲುತ್ತವೆ. ಆದರೆ ಕೆಲವೊಂದು ಉತ್ಪನ್ನಗಳು ಸಾರೀಕರಣವಾದ ಸಕ್ರಿಯ ಅಂಶಗಳನ್ನು ಒಳಗೊಂಡಿರಬಹುದು ಇದು ಅವುಗಳು ವೃದ್ಧಿಸದಂತೆ ಮಾತ್ರ ಕೇವಲ ತಡೆಯುತ್ತದೆ. ಈ ರೀತಿಯಾಗಿ ಒಂದು ಉತ್ಪನ್ನದ ಲೇಬಲ್ (ಗುರುತುಪಟ್ಟಿ)"ಬ್ಯಾಕ್ಟೀರಿಯ ವನ್ನು "ಕೊಲ್ಲುತ್ತದೆ" ಎಂಬುದನ್ನು ಹೇಳುತ್ತದೆಯೇ ಎಂಬುದನ್ನು ಗಮನಿಸುವುದು ಬಹಳ ಅವಶ್ಯಕ. ಒಂದು ಲೇಬಲ್ ಮೇಲೆ ಮೇಲೆ ಹೇಳದ ಹೊರತು ಒಂದು ಬ್ಯಾಕ್ಟೀರಿಯ ನಿರೋಧಕವು ಶಿಲೀಂಧ್ರನಿರೋಧಕ ಅಥವಾ ವೈರಸ್ ನಿರೋಧಕವಾಗಿರಬೇಕೆಂಬ ಅಗತ್ಯವೇನೂ ಇಲ್ಲ. ಸ್ಯಾನಿಟೈಜರ್( ಶುದ್ಧಗೊಳಿಸುವ ಪದಾರ್ಥ) ಎಂಬ ಪದವನ್ನು ಶುದ್ದಗೊಳಿಸುವ ಹಾಗು ಸೋಂಕು ನಿವಾರಿಸುವ ಎರಡೂ ಪದಾರ್ಥಗಳಿಗೆ ಹೇಳಲಾಗುತ್ತದೆ. ತೀರ ಇತ್ತೀಚಿಗೆ ಈ ಪದವನ್ನು ಆಲ್ಕೋಹಾಲ್-ಆಧಾರಿತ ಉತ್ಪನ್ನಗಳಿಗೂ ಸಹ ಬಳಸಲಾಗುತ್ತದೆ, ಇವುಗಳು ಕೈಯಲ್ಲಿರುವ ಸೋಂಕನ್ನು ತಡೆಗಟ್ಟಲು ಬಳಸಲಾಗುತ್ತದೆ(ಆಲ್ಕೋಹಾಲ್ ಹ್ಯಾಂಡ್ ಸ್ಯಾನಿಟೈಜರ್). ಆದಾಗ್ಯೂ ಆಲ್ಕೋಹಾಲ್ ಹ್ಯಾಂಡ್ ಸ್ಯಾನಿಟೈಜರ್ ಗಳು ಮಣ್ಣಿನಿಂದ ಕೂಡಿದ ಕೈಗಳಿಗೆ ಪರಿಣಾಮವನ್ನು ಬೀರುವುದಿಲ್ಲವೆಂದು ಪರಿಗಣಿಸಲಾಗಿದೆ. ಬಯೋಸೈಡ್ ಎಂಬ ಪದವನ್ನು ಬದುಕಿರುವ ಜೀವಿಗಳನ್ನು ಕೊಲ್ಲುವ, ನಿಷ್ಕ್ರಿಯಗೊಳಿಸುವ ಅಥವಾ ಅನ್ಯಥಾ ಅವುಗಳನ್ನು ನಿಯಂತ್ರಿಸುವ ಪದಾರ್ಥಗಳಿಗೆ ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಕೀವುಗಳೆಕಗಳು ಹಾಗು ಸೋಂಕುನಿವಾರಕಗಳನ್ನು ಒಳಗೊಂಡಿದೆ, ಇವು ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುತ್ತವೆ, ಹಾಗು ಇವುಗಳು ಕ್ರಿಮಿನಾಶಕಗಳನ್ನೂ ಸಹ ಒಳಗೊಂಡಿದೆ.

ದೇಹದ ನೈರ್ಮಲ್ಯ

ಬದಲಾಯಿಸಿ

ದೇಹದ ನೈರ್ಮಲ್ಯವೆಂದರೆ, ಒಬ್ಬ ವ್ಯಕ್ತಿಯು ತಮ್ಮ ದೇಹದ ಸ್ವಾಸ್ಥ್ಯಕ್ಕಾಗಿ ಹಾಗು ಉತ್ತಮ ಆರೋಗ್ಯಕ್ಕಾಗಿ ದೇಹವನ್ನು ಶುಚಿಗೊಳಿಸಿಕೊಳ್ಳುವ ಆರೋಗ್ಯಕರ ಅಭ್ಯಾಸಗಳು. ವೈಯಕ್ತಿಕ ಆರೋಗ್ಯಕರ ಅಭ್ಯಾಸಗಳಿಗೆ ಪ್ರೇರಣೆಗಳಾಗಿ ವೈಯಕ್ತಿಕ ಅಸ್ವಸ್ಥತೆಯನ್ನು ತಗ್ಗಿಸುವುದು, ವೈಯಕ್ತಿಕ ಅಸ್ವಸ್ಥತೆಯನ್ನು ಗುಣಪಡಿಸುವುದು, ಅತ್ಯುತ್ತಮ ಆರೋಗ್ಯ ಹಾಗು ಆರೋಗ್ಯಕರವಾಗಿ ಇರುವುದು, ಸಾಮಾಜಿಕ ಅಂಗೀಕಾರ ಹಾಗು ಇತರರಿಗೆ ರೋಗಗಳು ಹರಡದಂತೆ ತಡೆಗಟ್ಟುವುದು. ವೈಯಕ್ತಿಕ ಆರೋಗ್ಯಕರ ಅಭ್ಯಾಸಗಳಲ್ಲಿ: ವೈದ್ಯರನ್ನು ಭೇಟಿಮಾಡುವುದು, ದಂತವೈದ್ಯರನ್ನು ಭೇಟಿಮಾಡುವುದು, ನಿಯಮಿತವಾಗಿ ಶುಚಿಗೊಳ್ಳುವುದು/ಸ್ನಾನಮಾಡುವುದು, ಹಾಗು ಆರೋಗ್ಯಕರವಾದ ಆಹಾರಸೇವನೆ ಅಭ್ಯಾಸಗಳು. ವೈಯಕ್ತಿಕವಾಗಿ ಅಂದಗೊಳ್ಳುವುದು ವೈಯಕ್ತಿಕ ನೈರ್ಮಲ್ಯವನ್ನು ವಿಸ್ತರಿಸುತ್ತದೆ, ಏಕೆಂದರೆ ಇದು ಉತ್ತಮವಾದ ವೈಯಕ್ತಿಕ ಹಾಗು ಸಾರ್ವಜನಿಕವಾಗಿ ರೂಪದ ನಿರ್ವಹಣೆಗೆ ಸಂಬಂಧಿಸಿದೆ, ಇದರಲ್ಲಿ ನೈರ್ಮಲ್ಯಕರವಾಗಿ ಇರಬೇಕೆಂಬ ಅವಶ್ಯಕತೆಯೇನೂ ಇಲ್ಲ. ದೇಹದ ನೈರ್ಮಲ್ಯವನ್ನು ವೈಯಕ್ತಿಕ ದೇಹ ನೈರ್ಮಲ್ಯದ ಉತ್ಪನ್ನಗಳಾದ: ಸಾಬೂನು, ಕೂದಲಿಗೆ ಬಳಸುವ ಶ್ಯಾಂಪೂ, ಹಲ್ಲುಜ್ಜುವ ಬ್ರಷ್ ಗಳು, ಹಲ್ಲುಜ್ಜುವ ಪೇಸ್ಟ್ ಗಳು, ಹತ್ತಿಯುಂಡೆಗಳು, ಸ್ವೇದರೋಧಕಗಳು, ಮುಖಕ್ಕೆ ಬಳಸುವ ಮೃದು ಕಾಗದಗಳು,ಬಾಯಿತೊಳೆಯುವುದು,ಉಗುರುಗಳನ್ನು ನಯಗೊಳಿಸುವ ಸಾಧನಗಳು, ಶೌಚಾಲಯದಲ್ಲಿ ಬಳಸುವ ಕಾಗದಗಳು ಹಾಗು ಇಂತಹ ಇತರ ಉತ್ಪನ್ನಗಳು ಸೇರಿವೆ.

ಅತಿಯಾದ ದೇಹ ನೈರ್ಮಲ್ಯ

ಬದಲಾಯಿಸಿ

ದೇಹ ನೈರ್ಮಲ್ಯದ ಪ್ರಯೋಜನಗಳು ಅತಿಯಾದ ದೇಹದ ನೈರ್ಮಲ್ಯದ ಅಪಾಯಗಳಿಂದ ಕುಂದಬಹುದು, ಇದು ಅಲರ್ಜಿ ಕಾಯಿಲೆಗಳು ಹಾಗು ದೇಹದ ಕೆರಳಿಕೆಯನ್ನು ಉಂಟುಮಾಡಬಹುದೆಂದು ಊಹಿಸಲಾಗಿದೆ.

ಅತಿಯಾದ ದೇಹ ನೈರ್ಮಲ್ಯ ಹಾಗು ಅಲರ್ಜಿಗಳು

ಬದಲಾಯಿಸಿ

ನೈರ್ಮಲ್ಯದ ಆಧಾರಕಲ್ಪನೆಯನ್ನು 1989ರಲ್ಲಿ ಮೊದಲ ಬಾರಿಗೆ ಸ್ಟ್ರಾಚನ್ ಕ್ರಮಬದ್ಧವಾಗಿ ಪ್ರತಿಪಾದಿಸಿದರು. ಇವರು ಕುಟುಂಬದ ಗಾತ್ರ ಹಾಗು ಅಟೋಪಿಕ್ ಅಲರ್ಜಿ ರೋಗಗಳ ಬೆಳವಣಿಗೆಯ ನಡುವೆ ವಿರುದ್ಧ ಸಂಬಂಧವಿದೆಯೆಂದು ಗಮನಿಸುತ್ತಾರೆ - ಕುಟುಂಬದಲ್ಲಿ ಹೆಚ್ಚಿನ ಮಕ್ಕಳಿದ್ದರೆ, ಅವರುಗಳು ಈ ಮಾದರಿಯ ಅಲರ್ಜಿಗಳಿಗೆ ಈಡಾಗುವುದು ಬಹಳ ಕಡಿಮೆ.[೩೦] ಇದರಿಂದ, ಬಾಲ್ಯದಲ್ಲಿ ತಮ್ಮ ಹಿರಿಯ ಸೋದರ/ಸೋದರಿಯರಿಂದ "ಸೊಂಕುಗಳಿಗೆ" ಮಕ್ಕಳು ಒಡ್ಡಿಕೊಳ್ಳುವ ಕೊರತೆಯಿಂದ, ಇದು ಕಳೆದ ಮೂವತ್ತರಿಂದ ನಲವತ್ತು ವರ್ಷಗಳಲ್ಲಿ ಅಟೋಪಿಕ್ ರೋಗಗಳ ವ್ಯಾಪಕ ಅಭಿವೃದ್ದಿಗೆ ಕಾರಣವಾಗಿರಬಹುದೆಂದು ಅವರು ಆಧಾರಕಲ್ಪನೆ ಮಾಡುತ್ತಾರೆ. ಸ್ಟ್ರಾಚನ್, ಈ ಒಡ್ಡುವಿಕೆಯು ಪ್ರಸಕ್ತದಲ್ಲಿ ಚಾಲ್ತಿಯಲ್ಲಿಲ್ಲದಿರುವುದಕ್ಕೆ ಕಾರಣವೆಂದರೆ, ಇದು ಕೇವಲ ಸಣ್ಣ ಕುಟುಂಬಗಳತ್ತ ಪ್ರವೃತ್ತಿ ಮಾತ್ರವಲ್ಲ, ಆದರೆ "ಕುಟುಂಬದಲ್ಲಿನ ಸುಧಾರಿತ ಸೌಕರ್ಯಗಳು ಹಾಗು ವೈಯಕ್ತಿಕ ಶುಚಿತ್ವಕ್ಕೆ ನೀಡುವ ಹೆಚ್ಚಿನ ಗಮನ". ಆದಾಗ್ಯೂ, ಬಾಲ್ಯದಲ್ಲಿ ಕೆಲವು ಸೂಕ್ಷ್ಮಜೀವಿಗಳಿಗೆ ಒಡ್ಡಿಕೆಯಾಗಿದ್ದರೆ ಅದು ಕೆಲವೊಂದು ರೀತಿಯಲ್ಲಿ ಅಲರ್ಜಿಗಳ ವಿರುದ್ಧ ಹೋರಾಡುತ್ತದೆ ಎಂಬುದಕ್ಕೆ ವಾಸ್ತವಿಕ ಸಾಕ್ಷ್ಯಗಳು ದೊರೆತಿವೆ. ಆದರೆ ಹಾನಿಕಾರಕ ಸೂಕ್ಷ್ಮಜೀವಿಗಳಿಗೆ(ಸೋಂಕುಕಾರಕ) ನಮ್ಮನ್ನು ನಾವು ತೆರೆದುಕೊಳ್ಳಬೇಕು ಅಥವಾ ನಾವು ಸೋಂಕಿಗೆ ಒಳಪಡುವ ಅಗತ್ಯವಿದೆ ಎಂಬ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ.[೩೧][೩೨][೩೩] ಅಥವಾ ಆರೋಗ್ಯಕರ ಅಭ್ಯಾಸಗಳಾದ ಕೈಯನ್ನು ತೊಳೆಯುವುದು, ಶುದ್ಧ ಆಹಾರವನ್ನು ಸೇವಿಸುವುದು ಮುಂತಾದವು ಅಟೋಪಿಕ್ ರೋಗಗಳ ಹೆಚ್ಚಿನ ಪ್ರಭಾವಕ್ಕೆ ಒಳಪಡುತ್ತದೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ [೨೮][೨೯], ಈ ರೀತಿಯಾದ ಪರಿಸ್ಥಿತಿಯಲ್ಲಿ, ಸೋಂಕನ್ನು ತಡೆಗಟ್ಟುವುದು ಹಾಗು ಅಲರ್ಜಿಗಳನ್ನು ತಗ್ಗಿಸುವ ಗುರಿಗಳ ನಡುವೆ ಯಾವುದೇ ದ್ವಂದ್ವ ಉಂಟಾಗುವುದಿಲ್ಲ. ಪರಿಣಿತರ ನಡುವೆ ಇದೀಗ ಒಂದು ಒಮ್ಮತವು ಹುಟ್ಟಿಕೊಂಡಿದೆ, ಇದಕ್ಕೆ ಉತ್ತರವು ಜೀವನಶೈಲಿ ಮುಂತಾದವುಗಳಲ್ಲಿ ಮೂಲಭೂತ ಬದಲಾವಣೆಗಳನ್ನು ಮಾಡುವುದರಲ್ಲಿ ಅಡಗಿದೆ. ಇದು ಕೆಲವು ನಿರ್ದಿಷ್ಟ ಸೂಕ್ಷ್ಮಜೀವಿಯ ಅಥವಾ ಇತರ ಜೀವಿಗಳಿಗೆ ಒಡ್ಡಿಕೊಳ್ಳುವುದು ಕಡಿಮೆಯಾಗುತ್ತದೆ, ಉದಾಹರಣೆಗೆ ಹೆಲ್ಮಿಂತ್ ಗಳು(ಲಾಡಿಹುಳಗಳು), ಇವು ಪ್ರತಿರಕ್ಷಾ-ನಿಯಂತ್ರಕ ಪ್ರಕ್ರಿಯೆಗಳ ಅಭಿವೃದ್ಧಿಗೆ ಪ್ರಮುಖವಾಗಿವೆ.[೩೪] ಯಾವ ಮಾದರಿಯ ಜೀವನಶೈಲಿಗಳು ಒಳಗೊಂಡಿದೆ ಎಂಬುದಕ್ಕೆ ಸಂಬಂಧಿಸಿದಂತೆ ಇವುಗಳು ಈಗಲೂ ಅನಿಶ್ಚಿತತೆಯನ್ನು ಹೊಂದಿದೆ. ಆದಾಗ್ಯೂ ನೈರ್ಮಲ್ಯ ಆಧಾರಕಲ್ಪನೆಯನ್ನು ಕುರಿತಂತೆ ಮಾಧ್ಯಮ ಪ್ರಸಾರವು ಇದನ್ನು ನಿರಾಕರಿಸಿದೆ. ಒಂದು ಬಲವಾದ 'ಸಾಮೂಹಿಕ ಮನಸ್ಥಿತಿ'ಯು ಕಲ್ಮಶವನ್ನು 'ಆರೋಗ್ಯವೆಂದು' ಹಾಗು ನೈರ್ಮಲ್ಯವನ್ನು 'ಅಸ್ವಾಭಾವಿಕವೆಂದು' ಸ್ಥಿರಪಡಿಸಿದೆ. ಸಾರ್ವಜನಿಕ ಆರೋಗ್ಯಕ್ಕೆ ಅಡಿಪಾಯವಾದ ಪ್ರತಿನಿತ್ಯದ ಆರೋಗ್ಯಕರ ನಡವಳಿಕೆಗಳನ್ನು ಹಾಳುಮಾಡಿರುವುದರಿಂದ ಇದು ವೈದ್ಯಕೀಯ ವೃತ್ತಿಪರರ ನಡುವೆ ಕಳವಳ ಉಂಟುಮಾಡಿದೆ. ಗೃಹ ಹಾಗು ನಿತ್ಯಜೀವನದಲ್ಲಿ ಒಂದು ಪರಿಣಾಮಕಾರಿ ನೈರ್ಮಲ್ಯದ ಅಗತ್ಯಕ್ಕೆ ಪ್ರತಿಕ್ರಿಯೆಯಾಗಿ, ಇಂಟರ್ನ್ಯಾಷನಲ್ ಸೈಂಟಿಫಿಕ್ ಫೋರಮ್ ಆನ್ ಹೋಂ ಹೈಜೀನ್, ಮನೆಯ ನೈರ್ಮಲ್ಯಕ್ಕೆ "ಅಪಾಯ-ಆಧಾರಿತ" ಅಥವಾ ಗುರಿಯಿರಿಸಿದ ಮಾರ್ಗವನ್ನು ಅಭಿವೃದ್ಧಿಪಡಿಸಿದೆ. ಇದರಂತೆ ನೈರ್ಮಲ್ಯ ಕ್ರಮಗಳು ನಿರ್ದಿಷ್ಟ ಸ್ಥಳಗಳ ಮೇಲೆ ಕೇಂದ್ರೀಕರಿಸುವುದಕ್ಕೆ ಖಾತರಿ ಮಾಡಿದೆ. ಇದು ಸೋಂಕು ಪ್ರಸರಣಕ್ಕೆ ಅತ್ಯಂತ ಗಂಭೀರವಾದ ಕಾಲಗಳ ಮೇಲೆ ಕೂಡ ಗಮನಹರಿಸಿದೆ.[] ಗುರಿಯಿರಿಸಿದ ನೈರ್ಮಲ್ಯವನ್ನು ಮೂಲಭೂತವಾಗಿ ಆರೋಗ್ಯಕರ ಅಭ್ಯಾಸದ ಒಂದು ಪರಿಣಾಮಕಾರಿ ಮಾರ್ಗವಾಗಿ ಅಭಿವೃದ್ಧಿಪಡಿಸಲಾಗಿದೆ. ನಮ್ಮ ಪರಿಸರದಲ್ಲಿರುವ ಸೂಕ್ಷ್ಮಜೀವಿಗಳ ವರ್ಗದ "ಸಾಮಾನ್ಯ" ಮಟ್ಟಕ್ಕೆ ಸಾಧ್ಯವಾದಷ್ಟು ಒಡ್ಡಿಕೊಳ್ಳುವಿಕೆಯನ್ನು ಅಪೇಕ್ಷಿಸುತ್ತದೆ. ಇದು ಒಂದು ಸಮತೋಲನವಾದ ಪ್ರತಿರಕ್ಷಾ ವ್ಯವಸ್ಥೆಯನ್ನು ರೂಪಿಸುವಲ್ಲಿ ಬಹಳ ಸಹಕಾರಿಯಾಗಿದೆ.

ಕಿವಿಯ ಬಾಹ್ಯ ನಾಳಗಳ ಅತಿಯಾದ ನೈರ್ಮಲ್ಯ

ಬದಲಾಯಿಸಿ

ಕಿವಿಯ ನಾಳಗಳನ್ನು ತೀವ್ರವಾದ ಶುಚಿಗೊಳಿಸುವುದು ಸೋಂಕು ಅಥವಾ ಕಿರಿಕಿರಿಯನ್ನು ಉಂಟುಮಾಡಬಹುದು. ದೇಹದ ಇತರ ಭಾಗಗಳಿಗಿಂತ ಕಿವಿಯ ನಾಳಗಳಲ್ಲಿ ಶುಚಿತ್ವವು ಕಡಿಮೆಯಿದ್ದರೂ ಸಹ ನಡೆಯುತ್ತದೆ, ಏಕೆಂದರೆ ಅವುಗಳು ಬಹಳ ಸೂಕ್ಷ್ಮವಾಗಿರುತ್ತದೆ, ಜೊತೆಗೆ ದೇಹದ ವ್ಯವಸ್ಥೆಯು ಈ ಭಾಗಗಳಿಗೆ ಸಾಕಷ್ಟು ಗಮನವನ್ನು ವಹಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು] ಕಿವಿಯ ನಾಳಗಳ ಮೂಲಕ ಗುಗ್ಗೆಯನ್ನು ಹೊರತೆಗೆಯುವ ಪ್ರಯತ್ನಗಳಿಂದ ಕಿವಿಗೆ ಕಸ ಹಾಗು ಧೂಳಿನ ಪದಾರ್ಥದ ಪ್ರವೇಶವಾಗುವ ಮೂಲಕ ವಾಸ್ತವವಾಗಿ ಕಿವಿಯ ನಾಳದ ಶುಚಿತ್ವವನ್ನು ಕಡಿಮೆಮಾಡುತ್ತದೆ. ಇದರಿಂದಾಗಿ , ಇದಲ್ಲದೆಯೂ ಸಹ ಗುಗ್ಗೆಯು ಕಿವಿಯಿಂದ ಸ್ವಾಭಾವಿಕವಾಗಿ ಹೊರಬರುವುದು ನಿಲ್ಲುತ್ತದೆ.

ಚರ್ಮದ ಅತಿಯಾದ ನೈರ್ಮಲ್ಯ

ಬದಲಾಯಿಸಿ

ಚರ್ಮದ ಅತಿಯಾದ ನೈರ್ಮಲ್ಯವು ಚರ್ಮಕ್ಕೆ ಕಿರಿಕಿರಿಯನ್ನು ಉಂಟುಮಾಡಬಹುದು. ಚರ್ಮದಲ್ಲಿ ತೈಲದ ಒಂದು ಸ್ವಾಭಾವಿಕ ಪದರವಿರುತ್ತದೆ, ಇದು ಸ್ಥಿತಿಸ್ಥಾಪಕತ್ವಕ್ಕೆ ಉತ್ತೇಜನ ನೀಡುತ್ತದೆ, ಹಾಗು ಚರ್ಮವು ಒಣಗದಂತೆ ರಕ್ಷಿಸುತ್ತದೆ. ತೊಳೆಯುವಾಗ ಪರ್ಯಾಯ ಪ್ರಕ್ರಿಯೆಗಳೊಂದಿಗೆ ನೀರಿನ ಕ್ರೀಮ್ ನ್ನು ಬಳಸದ ಹೊರತು, ಈ ಪದರವು ತೆಗೆಯಲ್ಪಟ್ಟು, ಚರ್ಮವು ಅಸುರಕ್ಷಿತವಾಗಿ ಉಳಿಯುತ್ತದೆ. ಸಾಬೂನುಗಳು, ಕ್ರೀಮುಗಳು ಹಾಗು ಮುಲಾಮುಗಳ ತೀವ್ರತರ ಬಳಕೆಯೂ ಸಹ ಚರ್ಮದ ನಿರ್ದಿಷ್ಟ ಸ್ವಾಭಾವಿಕ ಪ್ರಕ್ರಿಯೆಗೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡಬಹುದು. ಉದಾಹರಣೆಗೆ, ಸಾಬೂನುಗಳು ಹಾಗು ಮುಲಾಮುಗಳು ಚರ್ಮದ ಸ್ವಾಭಾವಿಕ ರಕ್ಷಣಾ ತೈಲವನ್ನು ಹಾಗು ಕೊಬ್ಬಿನ-ವಿಲೇಯ ಅಂಶವಾದ ಕೋಲೆಕ್ಯಾಲ್ಸಿಫೆರೋಲ್(ವಿಟಮಿನ್ D3)ನ್ನು ಕಡಿಮೆ ಮಾಡಬಹುದು, ಹಾಗು ಸ್ವಾಭಾವಿಕ ಹಾರ್ಮೋನುಗಳ ಸಮತೋಲನಗಳಿಗೆ ಹಾನಿಮಾಡಲು ಬಾಹ್ಯ ಪದಾರ್ಥಗಳನ್ನು ಹೀರಿಕೊಳ್ಳಬಹುದು.

ಪಾಕಶಾಲೆಯ(ಆಹಾರ) ನೈರ್ಮಲ್ಯ

ಬದಲಾಯಿಸಿ

ಪಾಕಶಾಲೆಯ ಆಹಾರ ನೈರ್ಮಲ್ಯವೆಂದರೆ, ಆಹಾರ ಕಲುಷಿತಗೊಳ್ಳದಂತೆ, ಆಹಾರ ನಂಜನ್ನು ತಡೆಗಟ್ಟುವ ಹಾಗು ಇತರ ಆಹಾರಗಳು, ಮನುಷ್ಯರು ಅಥವಾ ಪ್ರಾಣಿಗಳಿಗೆ ಕಾಯಿಲೆಗಳು ಹರಡದಂತೆ ತಡೆಗಟ್ಟಲು ಆಹಾರದ ನಿರ್ವಹಣೆ ಹಾಗು ಅಡುಗೆ ಅಭ್ಯಾಸಗಳಿಗೆ ಸಂಬಂಧಿಸಿದ್ದಾಗಿದೆ. ಆಹಾರದಲ್ಲಿ ಆರೋಗ್ಯಕರ ಅಭ್ಯಾಸಗಳು, ಆಹಾರದ ಸುರಕ್ಷಿತ ನಿರ್ವಹಣೆ, ಸಂಗ್ರಹಣೆ, ತಯಾರಿಕೆ, ಬಡಿಸುವಿಕೆ ಮತ್ತು ಸೇವನೆಯನ್ನು ಇದು ಸೂಚಿಸುತ್ತದೆ. ಪಾಕಶಾಲೆಯ ಆಹಾರದ ಅಭ್ಯಾಸಗಳಲ್ಲಿ:

  • ಆಹಾರವನ್ನು ತಯಾರಿಸುವ ಸ್ಥಳ ಹಾಗು ಸಾಧನಗಳನ್ನು ಶುಚಿಗೊಳಿಸುವುದು ಹಾಗು ಸೋಂಕುರಹಿತವನ್ನಾಗಿ ಮಾಡುವುದು (ಉದಾಹರಣೆಗೆ ಹಸಿ ಮಾಂಸ ಹಾಗು ತರಕಾರಿಗಳನ್ನು ಸಿದ್ಧಗೊಳಿಸಲು ಉತ್ತಮ ಮಟ್ಟದ ಕತ್ತರಿಸುವ ಹಲಗೆಗಳನ್ನು ಬಳಸುವುದು). ಶುದ್ಧಗೊಳಿಸುವಾಗ ಕ್ಲೋರಿನ್ ಬಿಳುಪುಕಾರಕ, ಈಥನೋಲ್, ನೇರಳಾತೀತ ಕಿರಣ, ಮುಂತಾದವುಗಳನ್ನು ಸೋಂಕು ನಿವಾರಣೆ ಮಾಡಲು ಬಳಸಬಹುದು.
  • ರೋಮಕ್ರಿಮಿಗಳಿಂದ, ಸಾಲ್ಮೊನೆಲ್ಲದಿಂದ, ಹಾಗು ಇತರ ರೋಗಕಾರಕಗಳಿಂದ ಕಲುಷಿತಗೊಂಡ ಮಾಂಸವನ್ನು ಎಚ್ಚರಿಕೆಯಿಂದ ದೂರವಿಡುವುದು; ಅಥವಾ ಸಂದೇಹಾಸ್ಪದ ಮಾಂಸಗಳನ್ನು ಸಂಪೂರ್ಣವಾಗಿ ಬೇಯಿಸುವುದು.
  • ಕಚ್ಚಾ ಆಹಾರವನ್ನು ತಯಾರಿಸುವಾಗ ವಿಪರೀತವಾದ ಕಾಳಜಿ ವಹಿಸುವುದು, ಉದಾಹರಣೆಗೆ ಸುಶಿ ಹಾಗು ಸಾಶಿಮಿ.
  • ಸಾಬೂನು ಹಾಗು ಶುದ್ಧ ನೀರಿನಿಂದ ತೊಳೆಯುವ ಮೂಲಕ ಸಂಸ್ಥಾಲಕ್ಷಣದ ಆಹಾರಪಾತ್ರೆಗಳ ಸ್ಯಾನಿಟೈಸಿಂಗ್ ಮಾಡುವುದು.
  • ಯಾವುದೇ ಆಹಾರವನ್ನು ಮುಟ್ಟುವುದಕ್ಕೆ ಮುಂಚೆ ಕೈಗಳನ್ನು ಸರಿಯಾಗಿ ತೊಳೆಯುವುದು.
  • ಆಹಾರವನ್ನು ತಯಾರಿಸುವಾಗ ಬೇಯಿಸದ ಆಹಾರವನ್ನು ಮುಟ್ಟಿದ ನಂತರ ಕೈಗಳನ್ನು ತೊಳೆದುಕೊಳ್ಳುವುದು.
  • ಬೇರೆ ಬೇರೆಯಾದ ಆಹಾರವನ್ನು ತಯಾರಿಸುವಾದ ಒಂದೇ ಪಾತ್ರೆಯನ್ನು ಬಳಸದಿರುವುದು.
  • ತಿನ್ನುವಾಗ ಚಾಕುಕತ್ತರಿಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳದಿರುವುದು.
  • ತಿನ್ನುವಾಗ ಅಥವಾ ತಿಂದ ನಂತರ ಬೆರಳುಗಳನ್ನು ಅಥವಾ ಕೈಯನ್ನು ನೆಕ್ಕದಿರುವುದು.
  • ನಾಲಿಗೆಯಿಂದ ನೆಕ್ಕಿದ ಯಾವುದೇ ಪಾತ್ರೆಗಳನ್ನು ತೊಳೆದ ನಂತರವೇ ಬಳಸುವುದು.
  • ಸರಿಯಾಗಿ ಆಹಾರವನ್ನು ಸಂಗ್ರಹಿಸುವುದು, ಈ ರೀತಿಯಾಗಿ ಕ್ರಿಮಿಕೀಟಗಳಿಂದ ಕಲುಷಿತವಾಗುವುದನ್ನು ತಡೆಗಟ್ಟುವುದು.
  • ಆಹಾರವನ್ನು ಶೈತ್ಯೀಕರಿಸುವುದು(ಹಾಗು ನಿರ್ದಿಷ್ಟ ಆಹಾರಗಳನ್ನು ಉಪಯುಕ್ತವೆನಿಸದಿದ್ದರೆ ಕೆಲವೊಂದು ವಾತಾವರಣದಲ್ಲಿ ಶೈತ್ಯೀಕರಣ ಮಾಡದಿರುವುದು).
  • ಆಹಾರವು ಎಂದು ತಯಾರಿಸಲಾಗಿದೆ ಎಂಬುದಕ್ಕೆ ಪಟ್ಟಿ ಹಚ್ಚುವುದು(ಅಥವಾ, ಆಹಾರ ತಯಾರಕರು ಇಷ್ಟಪಟ್ಟರೆ ಅದನ್ನು "ನಿಗದಿತ ದಿನದೊಳಗೆ ಬಳಸುವ" ದಿನಾಂಕವನ್ನು ಸೂಚಿಸುವುದು).
  • ತಿನ್ನದೇ ಬಿಟ್ಟ ಆಹಾರ ಹಾಗು ಪ್ಯಾಕೆಜಿಂಗ್ ಅನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದು ಸೇರಿದೆ.

ವೈಯಕ್ತಿಕ ಸೇವಾ ನೈರ್ಮಲ್ಯ

ಬದಲಾಯಿಸಿ

ವೈಯಕ್ತಿಕ ಸೇವಾ ನೈರ್ಮಲ್ಯವೆಂದರೆ, ಜನರಿಗೆ ವೈಯಕ್ತಿಕ ಕಾಳಜಿಯ ಸೇವೆಗಳನ್ನು ಒದಗಿಸುವಾಗ ಸಾಧನಗಳ ಬಳಕೆ ಹಾಗು ಕಾಳಜಿಗೆ ಸಂಬಂಧಿಸಿದ ಅಭ್ಯಾಸಗಳಾಗಿವೆ: ವೈಯಕ್ತಿಕ ನೈರ್ಮಲ್ಯ ಅಭ್ಯಾಸಗಳಲ್ಲಿ:

  • ಸೇವೆಯನ್ನು ಒದಗಿಸುವವರು ತಾವು ಬಳಸುವ ಸಾಧನವನ್ನು ಕ್ರಿಮಿನಾಶನಗೊಳಿಸಬೇಕು, ಇವರಲ್ಲಿ ಕ್ಷೌರಿಕರು, ಸೌಂದರ್ಯವರ್ಧಕರು, ಹಾಗು ಇತರ ಸೇವೆಗಳನ್ನು ಒದಗಿಸುವವರು ಸೇರಿದ್ದಾರೆ.
  • ದೇಹಕ್ಕೆ ಚುಚ್ಚುವಾಗ ಹಾಗು ಹಚ್ಚೆಯನ್ನು ಹಾಕಿಸಿಕೊಳ್ಳುವಾಗ ಅದಕ್ಕೆ ಬಳಸಲಾಗುವ ಸಾಧನಗಳನ್ನು ಸ್ವತಾಪಕ ಮಾಡುವ ಮೂಲಕ ಕ್ರಿಮಿನಾಶಗೊಳಿಸಬೇಕು.
  • ಕೈಗಳನ್ನು ಶುದ್ಧಗೊಳಿಸುವುದು.

ಆರೋಗ್ಯಕರ ಅಭ್ಯಾಸಗಳ ಇತಿಹಾಸ

ಬದಲಾಯಿಸಿ

ಆರೋಗ್ಯಶಾಸ್ತ್ರದ ಬಗ್ಗೆ ವಿವರವಾದ ನಿಯಮಗಳು ಮನುಸ್ಮೃತಿ ಹಾಗು ವಿಷ್ಣು ಪುರಾಣವನ್ನು ಒಳಗೊಂಡಂತೆ ಹಲವಾರು ಹಿಂದೂ ಗ್ರಂಥಗಳಲ್ಲಿ ಕಂಡು ಬರುತ್ತದೆ.[೩೫] ಹಿಂದೂಧರ್ಮದಲ್ಲಿ ಸ್ನಾನಮಾಡುವುದು ಐದು ನಿತ್ಯಕರ್ಮಗಳಲ್ಲಿ(ದಿನನಿತ್ಯದ ಕರ್ತವ್ಯಗಳು) ಒಂದೆನಿಸಿದೆ, ಹಾಗು ಈ ನಿಯಮವನ್ನು ಉಲ್ಲಂಘಿಸುವುದು ಪಾಪಕ್ಕೆ ಎಡೆ ಮಾಡಿಕೊಡುತ್ತದೆಂದು ಕೆಲವು ಗ್ರಂಥಗಳು ಉಲ್ಲೇಖಿಸಿವೆ. ಈ ನಿಯಮಗಳು ರೂಢಿಪ್ರಕಾರದ ಶುದ್ಧತೆಯ ಕಲ್ಪನೆಯನ್ನು ಆಧರಿಸಿದೆ ಜೊತೆಗೆ ಇವುಗಳು ರೋಗಕ್ಕೆ ಕಾರಣಗಳು ಹಾಗು ಅವುಗಳು ಹರಡುವ ಸಾಧನಗಳ ಒಂದು ಗ್ರಹಿಕೆಯ ಮೇಲೆ ಬೋಧಿಸಲಾಗಿಲ್ಲ. ಆದಾಗ್ಯೂ, ಸಾಂಕ್ರಾಮಿಕ ರೋಗಶಾಸ್ತ್ರದ ದೃಷ್ಟಿಕೋನದಿಂದ ಕೆಲವು ರೂಢಿಪ್ರಕಾರದ ನಿಯಮಗಳು ಆರೋಗ್ಯವನ್ನು ಸುಧಾರಿಸಿದವು, ಬಹುಶಃ ಇದು ಆಕಸ್ಮಿಕವಾಗಿಯೂ ಇರಬಹುದು, ಅಥವಾ ಕೆಲವು ಅಭ್ಯಾಸಗಳು ಉತ್ತಮ ಆರೋಗ್ಯದೊಂದಿಗೆ ಪ್ರಾಯೋಗಿಕ ಪರಸ್ಪರ ಅವಲಂಬನದಿಂದ ರೂಢಿಗತ ಸ್ಥಾನಮಾನವನ್ನು ಗಳಿಸಿದವು.

ಪ್ರತಿನಿತ್ಯ ಸ್ನಾನಮಾಡುವುದು ರೋಮನ್ ನಾಗರೀಕತೆಯ ಒಂದು ಲಕ್ಷಣವಾಗಿತ್ತು.[೩೬] ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಗರ ಪ್ರದೇಶಗಳಲ್ಲಿ ವಿಸ್ತಾರವಾದ ಸ್ನಾನಗೃಹಗಳನ್ನು ನಿರ್ಮಿಸಲಾಗಿತ್ತು, ಇಲ್ಲಿನ ಜನರು ವೈಯಕ್ತಿಕ ಶುಚಿತ್ವವನ್ನು ಕಾಪಾಡಿಕೊಳ್ಳಲು ಮೂಲಭೂತಸೌಕರ್ಯಕ್ಕೆ ಬೇಡಿಕೆಯೊಡ್ಡಿದ್ದರು. ಸಾಮಾನ್ಯವಾಗಿ ಸಂಕೀರ್ಣಗಳು ದೊಡ್ಡದಾದ, ಈಜುಕೊಳ ಮಾದರಿಯ ಸ್ನಾನಗೃಹಗಳು, ಸಣ್ಣದಾದ ತಂಪು ನೀರಿನ ಹಾಗು ಬಿಸಿ ನೀರಿನ ಕೊಳಗಳು, ಆವಿ ಸ್ನಾನಗೃಹಗಳು, ಹಾಗು ಸ್ಪಾ-ಮಾದರಿಯ ಸೌಲಭ್ಯಗಳನ್ನು ಒಳಗೊಂಡಿತ್ತು, ಇಲ್ಲಿ ಜನರು ಕೂದಲನ್ನು ಕತ್ತರಿಸಿಕೊಂಡು, ಎಣ್ಣೆ ಹಾಕಿಕೊಳ್ಳುವುದರ ಜೊತೆಗೆ ಮಾಲೀಸಿಗೆ ಸಹ ಒಳಗಾಗಬಹುದಿತ್ತು. ನೀರನ್ನು ನಿರಂತರವಾಗಿ ನಾಲೆಯ ಮೂಲಕ ಬದಲಾಯಿಸಲಾಗುತ್ತದೆ. ನಗರದ ಹೊರಭಾಗದ ಸ್ನಾನಗೃಹಗಳು ಸಣ್ಣದಾಗಿ, ಕಡಿಮೆ ಸೌಕರ್ಯಗಳನ್ನು ಹೊಂದಿರುತ್ತಿದ್ದವು, ಅಥವಾ ದೇಹ ಶುದ್ಧಿಗೆ ಕೇವಲ ನೀರನ್ನು ಮಾತ್ರ ಬಳಸುವುದು. ರೋಮನ್ ನಗರಗಳು ದೊಡ್ಡದಾದ ಚರಂಡಿ ವ್ಯವಸ್ಥೆಗಳನ್ನು ಸಹ ಹೊಂದಿರುತ್ತಿದ್ದವು, ಉದಾಹರಣೆಗೆ ಕ್ಲೋಅಕಾ ಮ್ಯಾಕ್ಸಿಮ, ಇದಕ್ಕೆ ಸಾರ್ವಜನಿಕ ಹಾಗು ಖಾಸಗಿ ಪಾಯಿಖಾನೆಗಳ ತ್ಯಾಜ್ಯವು ಹರಿದುಬರುತ್ತಿತ್ತು. ರೋಮನ್ನರು ಫ್ಲಶ್ ಮಾಡುವ ಶೌಚಾಲಯವನ್ನು ಹೆಚ್ಚಾಗಿ ಬಳಸುತ್ತಿರಲಿಲ್ಲವಾದರೂ, ಅಡಿಯಲ್ಲಿ ನೀರು ನಿರಂತರವಾಗಿ ಹರಿಯುವ ಶೌಚಾಲಯಗಳನ್ನು ಹೊಂದಿದ್ದರು. (ಇದೆ ಮಾದರಿಯ ಶೌಚಾಲಯಗಳುಎಕ್ಸೋಡಸ್ ಚಲನಚಿತ್ರದ ಅಕ್ರೆ ಪ್ರಿಸನ್ ನಲ್ಲಿ ಕಂಡುಬರುತ್ತದೆ). 19ನೇ ಶತಮಾನದ ಕೊನೆಯವರೆಗೂ, ಪಾಶ್ಚಿಮಾತ್ಯ ನಗರಗಳ ಗಣ್ಯರು ಮಾತ್ರ ತಮ್ಮ ದೈಹಿಕ ಕ್ರಿಯೆಗಳ ಶಮನಕ್ಕಾಗಿ ಒಳಾಂಗಣ ಸೌಲಭ್ಯಗಳನ್ನು ಹೊಂದಿರುತ್ತಿದ್ದರು. ಕೆಳವರ್ಗದ ಅನೇಕರು ಹಿತ್ತಿಲಿನಲ್ಲಿ ಹಾಗು ಅಂಗಳದಲ್ಲಿ ರೊಚ್ಚುಗುಂಡಿಗಳ ಮೇಲೆ ನಿರ್ಮಿಸಲಾದಂತಹ ಸಾಮುದಾಯಿಕ ಸೌಲಭ್ಯಗಳನ್ನು ಬಳಸುತ್ತಿದ್ದರು. Dr. ಜಾನ್ ಸ್ನೋ, ಕಾಲರ ರೋಗವು, ಅಮೇಧ್ಯದ ನೀರಿನ ಕಲುಷಿತತೆಯಿಂದ ಹರಡುತ್ತದೆಂದು ಪತ್ತೆ ಹಚ್ಚಿದ ನಂತರ ಈ ವ್ಯವಸ್ಥೆಯು ಬದಲಾವಣೆಯನ್ನು ಕಂಡಿತು. ಅವರ ಈ ಆವಿಷ್ಕಾರವು ವ್ಯಾಪಕವಾದ ಅನುಮೋದನೆಯನ್ನು ಗಳಿಸಲು ದಶಕಗಳೇ ಬೇಕಾದರೂ, ಸರ್ಕಾರಗಳು ಹಾಗು ಶೌಚಾಲಯ ಸುಧಾರಕರಿಗೆ ತರುವಾಯ ಮಾನವನ ತ್ಯಾಜ್ಯದಿಂದ ನೀರು ಕಲುಷಿತವಾಗದಂತೆ ಮಾಡಲು ಚರಂಡಿಗಳ ಬಳಕೆ ಮಾಡುವುದರಿಂದ ಉಂಟಾಗುವ ಆರೋಗ್ಯದ ಅನುಕೂಲಗಳ ಬಗ್ಗೆ ಮನದಟ್ಟಾಯಿತು. ಇದು ವ್ಯಾಪಕವಾದ ಫ್ಲಶ್ ಶೌಚಾಲಯದ ಅಂಗೀಕಾರ ಹಾಗು ಸ್ನಾನಗೃಹಗಳು ಮನೆಯ ಒಳಗಡೆ ಇರಬೇಕು ಹಾಗು ಸಾಧ್ಯವಾದಷ್ಟು ಖಾಸಗಿಯಾಗಿರಬೇಕು ಎಂಬ ನೈತಿಕ ಅತ್ಯಗತ್ಯಕ್ಕೆ ಉತ್ತೇಜನ ನೀಡಿತು.[೩೭]

ಇಸ್ಲಾಂ ಧರ್ಮದಲ್ಲಿ ಆರೋಗ್ಯಶಾಸ್ತ್ರಕ್ಕೆ ಸಂಬಂಧಿಸಿದ ನ್ಯಾಯತತ್ತ್ವ

ಬದಲಾಯಿಸಿ

ಏಳನೇ ಶತಮಾನದಿಂದಲೂ, ಇಸ್ಲಾಂ ಧರ್ಮವು ಆರೋಗ್ಯಕ್ಕೆ ಒಂದು ಬಲವಾದ ಒತ್ತನ್ನು ನೀಡಿದೆ. ಪ್ರತಿನಿತ್ಯದ ಪ್ರಾರ್ಥನೆಯ ಸಂದರ್ಭದಲ್ಲಿ ಸಂಸ್ಕಾರವಾಗಿ ಶುದ್ದಗೊಳ್ಳುವುದರ ಹೊರತಾಗಿಯೂ(ಅರೇಬಿಕ್ ನಲ್ಲಿ: ಸಲತ್ ), ವುಡು ಹಾಗು ಘುಸ್ಲ್ ನ ಮೂಲಕ, ಮುಸ್ಲಿಮರ ಜೀವನದಲ್ಲಿ ಪ್ರಭಾವ ಬೀರುವ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಇತರ ನಿಯಮಗಳಿವೆ. ಇತರ ಸಂಗತಿಗಳು ಇಸ್ಲಾಂ ಧರ್ಮದ ಆಹಾರನಿಯಮಗಳನ್ನು ಒಳಗೊಂಡಿದೆ. ಸಾಧಾರಣವಾಗಿ, ಕುರಾನ್, ಮುಸ್ಲಿಮರು ದೈಹಿಕ ನೈರ್ಮಲ್ಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕೆಂಬುದಾಗಿ ಹಾಗು ಎಷ್ಟು ಸಾಧ್ಯವೋ ಅಷ್ಟು ಶುಚಿಯಾಗಿರಬೇಕೆಂದು ಸಲಹೆ ನೀಡುತ್ತದೆ.

ಪ್ರಾಚೀನ ಯುರೋಪ್ ನಲ್ಲಿ ನೈರ್ಮಲ್ಯ

ಬದಲಾಯಿಸಿ

ಜನಪ್ರಿಯ ನಂಬಿಕೆಗೆ ವ್ಯತಿರಿಕ್ತವಾಗಿ[೩೮] ಹಾಗು ಕ್ರೈಸ್ತಧರ್ಮದ ಹಿಂದಿನ ನಾಯಕರುಗಳು ಸ್ನಾನ ಮಾಡುವುದು ಆಧ್ಯಾತ್ಮಿಕವಲ್ಲವೆಂದು ಖಂಡಿಸಿದರೂ ಸಹ,[೩೯] ರೋಮನ್ ಸಾಮ್ರಾಜ್ಯದ ಪತನದೊಂದಿಗೆ ಯುರೋಪ್ ನಲ್ಲಿ ಸ್ನಾನ ಮಾಡುವುದು ಹಾಗು ನಿರ್ಮಲೀಕರಣವು ಕಣ್ಮರೆಯಾಗಲಿಲ್ಲ.[೪೦][೪೧] "ಅಂಧಕಾರಯುಗ"ವೆಂದು ಕರೆಯಲ್ಪಡುವ ದಿನಗಳಲ್ಲಿ ಸಾಬೂನುತಯಾರಿಕೆಯು ಮೊದಲ ಒಂದು ಸ್ಥಾಪಿತ ವ್ಯಾಪಾರವಾಯಿತು. ರೋಮನ್ನರು, ಇತರ ಪರ್ಯಾಯಗಳ ನಡುವೆ ಸುಗಂಧಯುಕ್ತ ತೈಲಗಳನ್ನು ಬಳಕೆ ಮಾಡುತ್ತಿದ್ದರು(ಹೆಚ್ಚಾಗಿ ಇದನ್ನು ಈಜಿಪ್ಟ್ ನಿಂದ ತರಲಾಗುತ್ತಿತ್ತು). ಪುನರುಜ್ಜೀವನದ ಸ್ವಲ್ಪ ಸಮಯದ ನಂತರ ಯುರೋಪ್ ನಲ್ಲಿ ಸ್ನಾನ ಮಾಡುವ ಬಳಕೆ ತಪ್ಪಿ ಹೋಗಲಿಲ್ಲ, ಆದರೆ ಯುರೋಪ್ ನಲ್ಲಿ ಬೆವರ ಸ್ನಾನ ಹಾಗು ಸುಗಂಧ ತೈಲವು, ಚರ್ಮದ ಮೂಲಕ ದೇಹಕ್ಕೆ ಕಾಯಿಲೆಗಳನ್ನು ಹರಡುತ್ತವೆ ಎಂಬ ಅಭಿಪ್ರಾಯದಿಂದ ಬದಲಾವಣೆ ಮಾಡಿತು.( ವಾಸ್ತವವಾಗಿ, ನೀರು ಯಾವುದೇ ಕಾಯಿಲೆಯನ್ನು ಹರಡುವುದಿಲ್ಲ, ಆದರೆ ಸ್ನಾನಕ್ಕಿಂತ ಹೆಚ್ಚಾಗಿ ನೀರನ್ನು ಕುಡಿದಾಗ ಮಾತ್ರ ರೋಗವು ಹರಡಬಹುದು, ಏಕೆಂದರೆ ಇದು ರೋಗಕಾರಕಗಳಿಂದ ಕಲುಷಿತಗೊಂಡಿದ್ದರೆ ಕಾಯಿಲೆಯನ್ನು ಹರಡುತ್ತದೆ.) ಮಧ್ಯಯುಗದ ಚರ್ಚ್ ಅಧಿಕಾರಿಗಳು, ಸಾರ್ವಜನಿಕ ಸ್ನಾನ ಅನೈತಿಕತೆ ಹಾಗು ಕಾಯಿಲೆಗೆ ಮುಕ್ತವಾದ ಪರಿಸರವನ್ನು ಸೃಷ್ಟಿಸುತ್ತದೆ ಎಂದು ಭಾವಿಸಿತ್ತು. ಯೂರೋಪನ್ನು ಸಿಫಿಲಿಸ್ ವ್ಯಾಧಿಯಿಂದ ಪಾರುಮಾಡುವ ವ್ಯರ್ಥ ಪ್ರಯತ್ನದ ಭಾಗವಾಗಿ ರೋಮನ್ ಕ್ಯಾಥೋಲಿಕ್ ಚರ್ಚ್ ನ ಅಧಿಕಾರಿಗಳು ಸಾರ್ವಜನಿಕ ಸ್ನಾನಗೃಹಗಳನ್ನು ಕೂಡ ನಿಷೇಧಿಸಿದ್ದರು.[೪೨] 19 ಹಾಗು 20ನೇ ಶತಮಾನಗಳವರೆಗೂ ಆಧುನಿಕ ಶೌಚಾಲಯಕ್ಕೆ ವ್ಯಾಪಕವಾದ ಅನುಮೋದನೆ ದೊರೆತಿರಲಿಲ್ಲ. ಮಧ್ಯಯುಗದ ಇತಿಹಾಸಜ್ಞ ಲಿನ್ನ್ ಥಾರ್ನ್ಡೈಕ್ ರ ಪ್ರಕಾರ, ಬಹುಶಃ ಮಧ್ಯಯುಗದ ಯುರೋಪ್ ನ ಜನರು, 19ನೇ ಶತಮಾನದ ಜನರಿಗಿಂತ ಹೆಚ್ಚು ಬಾರಿ ಸ್ನಾನ ಮಾಡುತ್ತಿದ್ದರೆಂದು ಅಭಿಪ್ರಾಯಪಡುತ್ತಾರೆ.[೪೩]

ಅಧ್ಯಯನ ಸಂಪನ್ಮೂಲಗಳು

ಬದಲಾಯಿಸಿ
  • ಇಂಟರ್ನ್ಯಾಷನಲ್ ಜರ್ನಲ್ ಆಫ್ ಹೈಜೀನ್ ಹಾಗು ಎನ್ವಿರಾನ್ಮೆಂಟಲ್ ಹೆಲ್ತ್, ISSN: 1438-4639, ಎಲ್ಸೆವಿಯೇರ್

ಇವನ್ನೂ ಗಮನಿಸಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. https://www.nytimes.com/2009/09/17/health/17chen.html ವೈ ಡೋಂಟ್ ಡಾಕ್ಟರ್ಸ್ ವಾಶ್ ದೇರ್ ಹ್ಯಾಂಡ್ಸ್ ಮೋರ್?
  2. ೨.೦ ೨.೧ ೨.೨ ಬ್ಲೂಮ್ಫೀಲ್ಡ್ SF, ಎಕ್ಸೆನರ್ M, ಫಾರ GM, ನಾಥ್ KJ, ಸ್ಕಾಟ್, EA; ವ್ಯಾನ್ ಡೇರ್ ವೂರ್ಡೆನ್ C. ಗೃಹ ಹಾಗು ಸಮುದಾಯಕ್ಕೆ ಸಂಬಂಧಿಸಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ಕಾಯಿಲೆಗಳ ಜಾಗತಿಕ ಹೊಣೆ. (2009) ಇಂಟರ್ನ್ಯಾಷನಲ್ ಸೈಂಟಿಫಿಕ್ ಫೋರಮ್ ಆನ್ ಹೋಂ ಹೈಜೀನ್. http://www.ifh-homehygiene.org/IntegratedCRD.nsf/111e68ea0824afe1802575070003f039/29858aa006faaa22802572970064b6e8?OpenDocument Archived 2011-07-26 ವೇಬ್ಯಾಕ್ ಮೆಷಿನ್ ನಲ್ಲಿ. ಇಲ್ಲಿ ಲಭ್ಯವಿದೆ
  3. ೩.೦ ೩.೧ ೩.೨ ೩.೩ "ಆರ್ಕೈವ್ ನಕಲು". Archived from the original on 2011-01-03. Retrieved 2010-10-12.
  4. ಬ್ಲೂಮ್ಫೀಲ್ಡ್, SF, ಐಎಲ್ಲೊ AE, ಕುಕ್ಸನ್ B, ಓ’ಬೋಯ್ಲೆ C, ಲಾರ್ಸನ್, EL, ಗೃಹ ಹಾಗು ಸಮುದಾಯದಲ್ಲಿ ಸೋಂಕುಗಳ ಅಪಾಯವನ್ನು ತಡೆಗಟ್ಟುವಲ್ಲಿ ಕೈಯನ್ನು ತೊಳೆಯುವುದು ಹಾಗು ಆಲ್ಕೋಹಾಲ್-ಆಧಾರಿತ ಸ್ಯಾನಿಟೈಜರ್ ಗಳ ಬಳಕೆಯನ್ನು ಒಳಗೊಂಡಂತಹ ಪರಿಣಾಮಕಾರಿ ಕೈಯ ನೈರ್ಮಲ್ಯ ವಿಧಾನಗಳು" ಅಮೆರಿಕನ್ ಜರ್ನಲ್ ಆಫ್ ಇನ್ಫೆಕ್ಷನ್ 2007;35, suppl 1:S1-64
  5. [೧]
  6. ೬.೦ ೬.೧ ಗೃಹ ಮಟ್ಟದಲ್ಲಿ ನೀರಿನಿಂದ ಬರುವ ಕಾಯಿಲೆಗಳನ್ನು ಎದುರಿಸುವುದು. ವಿಶ್ವ ಆರೋಗ್ಯ ಸಂಸ್ಥೆ 2007 http://www.who.int/water_sanitation_health/publications/combating_diseasepart1lowres.pdf
  7. ೭.೦ ೭.೧ ಇಂಟರ್ನ್ಯಾಷನಲ್ ಸೈಂಟಿಫಿಕ್ ಫೋರಮ್ ಆನ್ ಹೋಂ ಹೈಜೀನ್. ಮನೆಯಲ್ಲಿ ನೀರಿನ ಸಂಗ್ರಹಣೆ, ನಿರ್ವಹಣೆ ಹಾಗು ಪಾಯಿಂಟ್-ಆಫ್-ಯೂಸ್ ಸಂಸ್ಕರಣೆ (2005) http://www.ifh-homehygiene.org/IntegratedCRD.nsf/a639aacb2d462a2180257506004d35db/aa885658ec1f19ee8025752200559653?OpenDocument Archived 2011-07-26 ವೇಬ್ಯಾಕ್ ಮೆಷಿನ್ ನಲ್ಲಿ.
  8. ಕ್ಲಾಸೇನ್ TF, ಹಾಲ್ಲರ್ L. ಅತಿಸಾರವನ್ನು ತಡೆಗಟ್ಟಲು ನೀರಿನ ಗುಣಮಟ್ಟದ ಹಸ್ತಕ್ಷೇಪ: ಬೆಲೆ ಹಾಗು ಬೆಲೆಯ-ಪರಿಣಾಮಕಾರಿತ್ವ. 2008, ವಿಶ್ವ ಆರೋಗ್ಯ ಸಂಸ್ಥೆ, ಜಿನೀವ. http://www.who.int/water_sanitation_health/economic/prevent_diarrhoea/en/index.html Archived 2010-09-11 ವೇಬ್ಯಾಕ್ ಮೆಷಿನ್ ನಲ್ಲಿ. ನಿಂದ ವರದಿಯು ಲಭ್ಯವಾಗಿದೆ
  9. ೯.೦ ೯.೧ ವಿಪತ್ತು ಹಾಗು ತುರ್ತುಸ್ಥಿತಿಗೆ ಅನುಸಾರವಾಗಿ ಮನೆಯಲ್ಲಿ ನೀರಿನ ಸಂಸ್ಕರಣೆ.ವಿಶ್ವ ಆರೋಗ್ಯ ಸಂಸ್ಥೆ
  10. ೧೦.೦ ೧೦.೧ ೧೦.೨ ೧೦.೩ ಬೇಯುಮರ್ R, ಬ್ಲೂಮ್ಫೀಲ್ಡ್ SF, ಎಕ್ಸೆನರ್ M, ಫಾರ GM, ನಾಥ್ KJ, ಸ್ಕಾಟ್ EA. ಮನೆಯಲ್ಲಿ ಆರೋಗ್ಯ ವಿಧಾನಗಳು ಹಾಗು ಅವುಗಳ ಪರಿಣಾಮಕಾರಿತ್ವ: ವೈಜ್ಞಾನಿಕ ಸಾಕ್ಷ್ಯವನ್ನು ಆಧರಿಸಿದ ಒಂದು ವಿಮರ್ಶೆ(2008). ಇಂಟರ್ನ್ಯಾಷನಲ್ ಸೈಂಟಿಫಿಕ್ ಫೋರಮ್ ಆನ್ ಹೋಂ ಹೈಜೀನ್. http://www.ifh-homehygiene.org/IntegratedCRD.nsf/111e68ea0824afe1802575070003f039/c9bf235b5d76ad09802572970063c5d8?OpenDocument Archived 2011-07-26 ವೇಬ್ಯಾಕ್ ಮೆಷಿನ್ ನಲ್ಲಿ.
  11. http://www.potpaz.org/
  12. http://www.purifier.com.np
  13. http://www.sodis.ch
  14. http://www.who.int/water_sanitation_heal th/dwq/wsh0207/en/.
  15. "ಆರ್ಕೈವ್ ನಕಲು". Archived from the original on 2010-01-31. Retrieved 2021-07-14.
  16. ಸ್ಕಾಟ್ E. ಸೂಕ್ಷ್ಮಜೀವಿಗಳಿಂದ ಉಂಟಾಗುವ ಅಪಾಯದ ಇಳಿಕೆ: ಪರಿಣಾಮಕಾರಿ ಶುಚಿತ್ವದ ಪ್ರಯೋಜನಗಳು. 2010 ತಯಾರಿಕೆಯಲ್ಲಿ. ಕೋಲ್ E. ಮನೆಯ ಪರಿಸರದಲ್ಲಿ ಮೂಲಕ ನಿಯಮಿತವಾಗಿ ಕಲುಷಿತಗೊಂಡ ಕೊಳವನ್ನು ಶುಚಿಗೊಳಿಸುವ ಮೂಲಕ ಅಲರ್ಜಿಕಗಳ ನಿಯಂತ್ರಣ. ಪ್ರೊಸೀಡಿಂಗ್ಸ್ ಆಫ್ ಹೆಲ್ತಿ ಬಿಲ್ಡಿಂಗ್ 2000;4:435-6.
  17. ಕೋಲ್ E. ಮನೆಯ ಪರಿಸರದಲ್ಲಿ ನಿಯಮಿತವಾಗಿ ಕಲುಷಿತಗೊಂಡ ಕೊಳವನ್ನು ಶುಚಿಗೊಳಿಸುವ ಮೂಲಕ ಅಲರ್ಜಿಕಗಳ ನಿಯಂತ್ರಣ. ಪ್ರೊಸೀಡಿಂಗ್ಸ್ ಆಫ್ ಹೆಲ್ತಿ ಬಿಲ್ಡಿಂಗ್ 2000;4:435-6.
  18. ೧೮.೦ ೧೮.೧ ಬ್ಲೂಮ್ಫೀಲ್ಡ್ SF, ಕುಕ್ಸನ್ B, ಫಾಲ್ಕಿನರ್ F, ಗ್ರಿಫ್ಫಿತ್ C, ಕ್ಲೆಯರಿ V. ಮೆಥಿಸಿಲ್ಲಿನ್ ರೆಸಿಸ್ಟೆಂಟ್ ಸ್ಟ್ಯಾಫಿಲೋಕೊಕಸ್ ಔರೆಯಸ್ (MRSA), ಕ್ಲೋಸ್ಟ್ರಿಡಿಯಂ ಡಿಫಿಸೈಲ್ ಹಾಗು ESBL-ಪ್ರೊಡ್ಯೂಸಿಂಗ್ಎಸ್ಚೇರಿಚಿಯ ಕಾಲಿ ಇನ್ ಹೋಂ ಅಂಡ್ ಕಮ್ಯೂನಿಟಿ: ಸಮಸ್ಯೆಯನ್ನು ನಿರ್ಣಯಿಸುವುದು, ಹರಡುವಿಕೆಯನ್ನು ತಡೆಗಟ್ಟುವುದು. (2006). ಇಂಟರ್ನ್ಯಾಷನಲ್ ಫೋರಮ್ ಆನ್ ಹೋಂ ಹೈಜೀನ್. http://www.ifh-homehygiene.org/IntegratedCRD.nsf/eb85eb9d8ecd365280257545005e8966/c63d07b19fa214d3802574dd003efc1a?OpenDocument Archived 2011-07-26 ವೇಬ್ಯಾಕ್ ಮೆಷಿನ್ ನಲ್ಲಿ. ನಲ್ಲಿ ಲಭ್ಯವಿದೆ.
  19. ಗೃಹ ನೈರ್ಮಲ್ಯ - ಮನೆಯಲ್ಲಿ ಸೋಂಕನ್ನು ತಡೆಗಟ್ಟುವುದು: ರೋಗಿಯ ಬಗ್ಗೆ ಕಾಳಜಿ ವಹಿಸುವವರಿಗೆ ಹಾಗು ಅವುಗಳ ಬಗ್ಗೆ ತರಬೇತಿ ನೀಡುವವರಿಗೆ, ಒಂದು ತರಬೇತಿ ಅಧ್ಯಯನ (2003) ಇಂಟರ್ನ್ಯಾಷನಲ್ ಸೈಂಟಿಫಿಕ್ ಫೋರಮ್ ಆನ್ ಹೋಂ ಹೈಜೀನ್. http://www.ifh-homehygiene.org/IntegratedCRD.nsf/571fd4bd2ff8f2118025750700031676/9aaaeb306bb3c50c80257522004b4fdc?OpenDocumentನಲ್ಲಿ ಲಭ್ಯವಿದೆ
  20. WHO 2008. ಕಾಯಿಲೆಯ ಬಗ್ಗೆ ಜಾಗತಿಕ ಹೊಣೆ: 2004 ಪರಿಷ್ಕರಣ. http://www.who.int/healthinfo/global_burden_disease/2004_report_update/en/index.html.ನಲ್ಲಿ ಲಭ್ಯವಿದೆ
  21. ಕರ್ಟಿಸ್ V, ಕೈರ್ನ್ಕ್ರಾಸ್ S. ಸಮುದಾಯದಲ್ಲಿ ಅತಿಸಾರದ ಅಪಾಯವನ್ನು ತಡೆಗಟ್ಟಲು ಸಾಬೂನಿನಿಂದ ಕೈಗಳನ್ನು ತೊಳೆಯುವುದರ ಪರಿಣಾಮ: ಒಂದು ವ್ಯವಸ್ಥಿತ ವಿಮರ್ಶೆ. ಲಾನ್ಸೆಟ್ ಇನ್ಫೆಕ್ಷಿಯಸ್ ಡಿಸೀಸಸ್ 2003;3:275-81.
  22. ಐಎಲ್ಲೊ AE, ಕೌಲ್ಬಾರ್ನ್ RM, ಪೆರೆಜ್ V, ಲಾರ್ಸನ್ EL. ಸಮುದಾಯದಲ್ಲಿ ಸೋಂಕುಕಾರಕ ಕಾಯಿಲೆಗಳಿಂದ ಉಂಟಾಗುವ ಅಪಾಯಕ್ಕೆ ಕೈಯಿನ ನೈರ್ಮಲ್ಯದ ಪರಿಣಾಮ: ಒಂದು ಮೆಟಾ ವಿಶ್ಲೇಷಣೆ. ಅಮೆರಿಕನ್ ಜರ್ನಲ್ ಆಫ್ ಪಬ್ಲಿಕ್ ಹೆಲ್ತ್ 2008;98:1372-81.
  23. ಫೆವ್ಟ್ರೆಲ್ L, ಕೌಫ್ಫ್ಮನ್ RB, ಕೆಯ್ D, ಏನನೋರಿಯ W, ಹಾಲರ್ L, ಕಾಲ್ಫೋರ್ಡ್ JM. ಕಡಿಮೆ ಅಭಿವೃದ್ಧಿಯನ್ನು ಹೊಂದುತ್ತಿರುವ ರಾಷ್ಟ್ರಗಳಲ್ಲಿ ಅತಿಸಾರದ ಪ್ರಮಾಣವನ್ನು ತಗ್ಗಿಸಲು ನೀರು, ಶೌಚಾಲಯ, ಹಾಗು ನೈರ್ಮಲ್ಯದ ಮಧ್ಯಸ್ಥಿಕೆಗಳು: ಒಂದು ವ್ಯವಸ್ಥಿತ ವಿಮರ್ಶೆ ಹಾಗು ಮೆಟಾ-ವಿಶ್ಲೇಷಣೆ, ಲಾನ್ಸೆಟ್ ಇನ್ಫೆಕ್ಷಿಯಸ್ ಡಿಸೀಸಸ್ 2005; 5: 42-52.
  24. ಕೈಯನ್ನು ತೊಳೆಯುವುದರಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮ. WELL ಆಧಾರ ಪತ್ರಿಕೆ 2006. http://www.lboro.ac.uk/well/resources/fact-sheets/fact-sheets-htm/Handwashing.htm.ನಲ್ಲಿ ಲಭ್ಯವಿದೆ
  25. ಜೆಫರ್ಸನ್ T, ಫಾಕ್ಸ್ಲೀ R, ಡೆಲ್ ಮರ್ C, ಮತ್ತಿತರರು. ಶ್ವಾಸಕೋಶದಲ್ಲಿ ವೈರಸ್ ಗಳ ಹರಡುವಿಕೆಯನ್ನು ತಗ್ಗಿಸಲು ಅಥವಾ ಭಂಗಮಾಡಲು ದೈಹಿಕ ಹಸ್ತಕ್ಷೇಪಗಳು: ವ್ಯವಸ್ಥಿತ ವಿಮರ್ಶೆ. ಬ್ರಿಟಿಶ್ ಮೆಡಿಕಲ್ ಜರ್ನಲ್ 2007;336:77-80. doi:10.1136/British Medical Journal.39393.510347.BE.
  26. ಲುಬಿ S, ಅಗ್ಬೋತಾಲ M, ಫೆಯಿಕಿನ್ DR, ಪೈಂಟರ್ J, ಬಿಲ್ಹಿಮ್ಮರ್ W, ಅಟ್ರೆಫ್ A, ಹೊಯೆಕ್‌ಸ್ಟ್ರಾ RM. ಕೈಯನ್ನು ತೊಳೆಯುವುದರಿಂದ ಮಕ್ಕಳ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮ: ಒಂದು ಯಾದೃಚ್ಛಿಕ ನಿಯಂತ್ರಣಾ ಪ್ರಯೋಗ. ಲಾನ್ಸೆಟ್ 2005 366 225-33.
  27. ಲುಬಿ S, ಅಗ್ಬೋಟ್ವಾಲ M, ಸ್ಚ್ನೆಲ್ BM, ಹೊಯೆಕ್ಸ್ಟ್ರ RM, ರಹ್ಬರ್ MH, ಕೆಸ್ವಿಚ್ಕ್ BH. ಚರ್ಮದ ಅಂಟುರೋಗ(ಇಂಪಿಟೈಗೊ)ಪರಿಸ್ಥಿತಿಯಲ್ಲಿ ಬ್ಯಾಕ್ಟೀರಿಯ ನಿರೋಧಕ ಸಾಬೂನಿನ ಪರಿಣಾಮ, ಕರಾಚಿ, ಪಾಕಿಸ್ತಾನ. ಅಮೆರಿಕನ್ ಜರ್ನಲ್ ಆಫ್ ಟ್ರಾಪಿಕಲ್ ಮೆಡಿಸಿನ್ ಅಂಡ್ ಹೈಜೀನ್ 2002; 67:430-5.
  28. ೨೮.೦ ೨೮.೧ ಕಡಿಮೆ ಆದಾಯ ಉಳ್ಳ ಸಮುದಾಯಗಳಲ್ಲಿ ಕೈತೊಳೆಯಲು ಬೂದಿ ಹಾಗು ಮಣ್ಣಿನ ಬಳಕೆ. S.F. ಬ್ಲೂಮ್ಫೀಲ್ಡ್; K.J ನಾಥ್ http://www.ifh-homehygiene.org/IntegratedCRD.nsf/eb85eb9d8ecd365280257545005e8966/9ae568b43e25c9258025764f004bae1c?OpenDocument Archived 2011-07-26 ವೇಬ್ಯಾಕ್ ಮೆಷಿನ್ ನಲ್ಲಿ.
  29. ೨೯.೦ ೨೯.೧ ದೇಶಿಯ ಪರಿಸರದಲ್ಲಿ ಸೋಂಕು ಹಾಗು ಅಡ್ಡ-ಸೋಂಕನ್ನು ತಡೆಗಟ್ಟಲು ಮಾರ್ಗಸೂಚಿಗಳು: ಮುಂದುವರೆಯುತ್ತಿರುವ ರಾಷ್ಟ್ರಗಳಲ್ಲಿ ಗೃಹ ನೈರ್ಮಲ್ಯದ ಸಂಗತಿಗಳ ಬಗ್ಗೆ ಇಣುಕುನೋಟ(2002). ಇಂಟರ್ನ್ಯಾಷನಲ್ ಸೈಂಟಿಫಿಕ್ ಫೋರಮ್ ಆನ್ ಹೋಂ ಹೈಜೀನ್. http://www.ifh-homehygiene.org/IntegratedCRD.nsf/70f1953cec47d5458025750700035d86/24eb06345354d067802574e1005a075d?OpenDocumentನಲ್ಲಿ ಲಭ್ಯವಿದೆ
  30. ಸ್ಟ್ರಾಚನ್ DP. ಕುಟುಂಬದ ಗಾತ್ರ, ಸೋಂಕು ಹಾಗು ಅಟೋಪಿ: "ನೈರ್ಮಲ್ಯ ಆಧಾರ ಕಲ್ಪನೆಯ ಮೊದಲ ದಶಕ. ಥೋರಾಕ್ಸ್ 55 Suppl 1:S2-10.: S2-10, 2000.
  31. ಸ್ಟಾನ್ವೆಲ್ ಸ್ಮಿತ್ R, ಬ್ಲೂಮ್ಫೀಲ್ಡ್ SF. ಗೃಹ ನೈರ್ಮಲ್ಯಕ್ಕೆ ನೈರ್ಮಲ್ಯದ ಆಧಾರಕಲ್ಪನೆ ಹಾಗು ಪ್ರಭಾವ. ಇಂಟರ್ನ್ಯಾಷನಲ್ ಸೈಂಟಿಫಿಕ್ ಫೋರಮ್ ಆನ್ ಹೋಂ ಹೈಜೀನ್. ದಿನಾಂಕ - ಇಲ್ಲಿಂದ ಲಭ್ಯವಿದೆ: http://www.ifh-homehygiene.org/IntegratedCRD.nsf/111e68ea0824afe1802575070003f039/ce9bc2e0228ad9d480257522005b4748?OpenDocument Archived 2011-07-26 ವೇಬ್ಯಾಕ್ ಮೆಷಿನ್ ನಲ್ಲಿ.
  32. ಬ್ಲೂಮ್ಫೀಲ್ಡ್ SF, ಸ್ಟಾನ್ವೆಲ್ -ಸ್ಮಿತ್ R. ಕ್ರೆವೆಲ್ RWR, ಪಿಕ್ಅಪ್ J. ತೀವ್ರ ಸ್ವಚ್ಚತೆ ಅಥವಾ ಕಡಿಮೆ ಸ್ವಚ್ಛತೆ: ನೈರ್ಮಲ್ಯದ ಆಧಾರ ಕಲ್ಪನೆ ಹಾಗು ಗೃಹ ನೈರ್ಮಲ್ಯ. ಕ್ಲಿನಿಕಲ್ ಅಂಡ್ ಎಕ್ಸ್ಪರಿಮೆಂಟಲ್ ಅಲರ್ಜಿ 2006; 36:402-25.
  33. ಬ್ರೆಂನೆರ್ SA, ಕಾರೆಯ್ IM, ಡೆವೈಲ್ಡ್ S, ರಿಚರ್ಡ್ಸ್ N, ಮೈಯೇರ್ WC, ಹಿಲ್ಟನ್ SR, ಸ್ಟ್ರಾಚನ್ DP, ಕುಕ್ DG. ಆರಂಭಿಕ ಜೀವನದಲ್ಲಿ ವೈದ್ಯಕೀಯ ಆರೈಕೆ ಅಗತ್ಯವಾದ ಸೋಂಕುಗಳು ಹಾಗೂ ನಂತರ UK ಯ ಒಂದೇ ಸಮಯದಲ್ಲಿ ಹುಟ್ಟಿದ ಇಬ್ಬರಿಗೆ ಬೇಸಿಗೆ ಉಬ್ಬಸದ ಅಪಾಯ. ಅಲರ್ಜಿ 2008;63(3):274–83.
  34. ರೂಕ್ GAW, ಸೋಂಕು, ಉರಿಯೂತ ಹಾಗು ತೀವ್ರತರವಾದ ಪ್ರಚೋದಕ ಕಾಯಿಲೆಗಳ ಬಗ್ಗೆ 99ನೇ ದಹ್ಲೆಮ್ ಸಮಾವೇಶ: ಡಾರ್ವಿನಿಯನ್ ಔಷಧ ಹಾಗು 'ನೈರ್ಮಲ್ಯ' ಅಥವಾ 'ಹಳೆ ಸ್ನೇಹಿತರ' ಆಧಾರ ಕಲ್ಪನೆ. ಕ್ಲಿನಿಕಲ್ ಅಂಡ್ ಎಕ್ಸ್ಪರಿಮೆಂಟಲ್ ಇಮ್ಮ್ಯುನಾಲಜಿ, 160: 70–79.
  35. ಸುಲಭ್ ಇಂಟರ್ನ್ಯಾಷನಲ್ ಮ್ಯೂಸಿಯಂ ಆಫ್ ಟಾಯ್ಲೆಟ್ಸ್ Archived 2006-12-20 ವೇಬ್ಯಾಕ್ ಮೆಷಿನ್ ನಲ್ಲಿ..
  36. ರೋಮನ್ ಬಾತ್ ಹೌಸಸ್
  37. ಪೋಪ್ ಕಲ್ಚರ್: ಹೌ ಅಮೆರಿಕ ಈಸ್ ಶೇಪಡ್ ಬೈ ಇಟ್ಸ್ ಗ್ರಾಸೆಸ್ಟ್ ನ್ಯಾಷನಲ್ ಪ್ರಾಡಕ್ಟ್ , ISBN 1-932595-21-X.
  38. ದಿ ಬ್ಯಾಡ್ ಓಲ್ಡ್ ಡೇಸ್ — ವೆಡ್ಡಿಂಗ್ಸ್ & ಹೈಜೀನ್
  39. ಅಬ್ಯುಲೆಶನ್ಸ್ ಆರ್ ಬಾತಿಂಗ್, ಹಿಸ್ಟಾರಿಕಲ್ ಪರಸ್ಪೆಕ್ಟೀವ್ಸ್ + (ಲ್ಯಾಟಿನ್: ಅಬ್ಲುಯೇರೆ , ಟು ವಾಶ್ ಎವೇ)
  40. "ದಿ ಗ್ರೇಟ್ ಫಾಮೈನ್(1315-1317) ಅಂಡ್ ದಿ ಬ್ಲ್ಯಾಕ್ ಡೆತ್ (1346-1351)". Archived from the original on 2008-03-08. Retrieved 2010-10-12.
  41. ಮಿಡಲ್ ಏಜಸ್ ಹೈಜೀನ್
  42. Paige, John C (1987). Out of the Vapors: A Social and Architectural History of Bathhouse Row, Hot Springs National Park (PDF). U.S. Department of the Interior. {{cite book}}: Unknown parameter |coauthors= ignored (|author= suggested) (help)
  43. ಟೇಲ್ಸ್ ಆಫ್ ದಿ ಮಿಡಲ್ ಏಜಸ್ - ಡೇಲಿ ಲೈಫ್.


ಬಾಹ್ಯ ಕೊಂಡಿಗಳು

ಬದಲಾಯಿಸಿ