ಆಮಿನ

ಪ್ರವಾದಿ ಮುಹಮ್ಮದ್ ಪೈಗಂಬರರ ತಾಯಿ

ಆಮಿನ ಬಿಂತ್ ವಹಬ್ (ಅರೇಬಿಕ್ آمنة بنت وهب) (ಮರಣ 577). ಪ್ರವಾದಿ ಮುಹಮ್ಮದ್ ಪೈಗಂಬರರ ತಾಯಿ.

ಆಮಿನ ಬಿಂತ್ ವಹಬ್
آمنة بنت وهب
ಪ್ರವಾದಿ ಮುಹಮ್ಮದ್‌ರ ತಾಯಿ
ಮರಣಕ್ರಿ.ಶ. 577
ಅಬ್ವಾಅ್
ಜೀವನ ಸಂಗಾತಿಅಬ್ದುಲ್ಲಾ
ಮಕ್ಕಳುಮುಹಮ್ಮದ್
ಪೋಷಕರು
  • ವಹಬ್ ಬಿನ್ ಅಬ್ದ್ ಮನಾಫ್ (father)
  • ಬರ್‍ರ ಬಿಂತ್ ಅಬ್ದುಲ್ ಉಝ್ಝ (mother)

ವಂಶಾವಳಿಸಂಪಾದಿಸಿ

ಆಮಿನ ಬಿಂತ್ ವಹಬ್ ಬಿನ್ ಅಬ್ದ್ ಮನಾಫ್ ಬಿನ್ ಝುಹ್ರ ಬಿನ್ ಕಿಲಾಬ್ ಬಿನ್ ಮುರ್‍ರ ಬಿನ್ ಕಅಬ್ ಬಿನ್ ಲುಅಯ್ ಬಿನ್ ಗಾಲಿಬ್ ಬಿನ್ ಫಿಹ್ರ್ ಬಿನ್ ಮಾಲಿಕ್ ಬಿನ್ ನದ್ರ್ ಬಿನ್ ಕಿನಾನ ಬಿನ್ ಖುಝೈಮ ಬಿನ್ ಮುದ್ರಿಕ ಬಿನ್ ಇಲ್ಯಾಸ್ ಬಿನ್ ಮುದರ್ ಬಿನ್ ನಿಝಾರ್ ಬಿನ್ ಮಅದ್ ಬಿನ್ ಅದ್ನಾನ್.

ಜನನಸಂಪಾದಿಸಿ

ಆಮಿನ ಕುರೈಷ್ ಬುಡಕಟ್ಟಿನ ಬನೂ ಝುಹ್ರ ಕುಲಕ್ಕೆ ಸೇರಿದವರು.[೧] ಅವರ ಜನನ ಸ್ಥಳ ಅಥವಾ ವರ್ಷದ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಅವರ ತಂದೆಯ ಹೆಸರು ವಹಬ್ ಬಿನ್ ಅಬ್ದ್ ಮನಾಫ್. ಅವರು ಬನೂ ಝುಹ್ರ ಬುಡಕಟ್ಟಿನ ಮುಖಂಡರಾಗಿದ್ದು, ಜನರ ನಡುವೆ ಗೌರವಾರ್ಹ ವ್ಯಕ್ತಿತ್ವನ್ನು ಹೊಂದಿದ್ದರು.[೨] ತಾಯಿಯ ಹೆಸರು ಬರ್‍ರ ಬಿಂತ್ ಅಬ್ದುಲ್ ಉಝ್ಝ.[೧]

ಬೆಳವಣಿಗೆಸಂಪಾದಿಸಿ

ಆಮಿನ ಯಸ್ರಿಬ್‌ನ ಉತ್ತಮ ಕುಲದಲ್ಲಿ ವಿದ್ಯಾವಂತೆಯಾಗಿ ಬೆಳೆದರು. ಚಿಕ್ಕಪ್ಪ ವುಹೈಬ್ ಬಿನ್ ಅಬ್ದ್ ಮನಾಫ್ ಅವರ ಆರೈಕೆ ಮಾಡುತ್ತಿದ್ದರು.[೧] ಅವರನ್ನು "ಝಹ್ರತು ಕುರೈಶ್" (ಕುರೈಷ್ ಕುಲದ ಕಾಂತಿ) ಎಂದು ಕರೆಯಲಾಗುತ್ತಿತ್ತು.

ವಿವಾಹಸಂಪಾದಿಸಿ

ಮಕ್ಕಾದ ಕುರೈಷ್ ಮುಖಂಡರಾದ ಅಬ್ದುಲ್ ಮುತ್ತಲಿಬ್ ತಮ್ಮ ಪುತ್ರ ಅಬ್ದುಲ್ಲಾರಿಗೆ ಪತ್ನಿಯಾಗಿ ಆಮಿನರನ್ನು ಆಯ್ಕೆ ಮಾಡಿದರು. ಅಬ್ದುಲ್ಲಾ ಒಪ್ಪಿಕೊಂಡರು. ಇವರಿಬ್ಬರ ವಿವಾಹ ಮಕ್ಕಾದಲ್ಲಿ ನೆರವೇರಿತು.

ಗಂಡನ ಮರಣಸಂಪಾದಿಸಿ

ವಿವಾಹವಾದ ಕೆಲವೇ ತಿಂಗಳಲ್ಲಿ ಅಬ್ದುಲ್ಲಾ ವ್ಯಾಪಾರ ನಿಮಿತ್ತ ಸಿರಿಯಾಗೆ ಹೊರಟರು. ಆದರೆ ದಾರಿ ಮಧ್ಯೆ ಯಸ್ರಿಬ್‌ನಲ್ಲಿ (ಮದೀನ) ರೋಗಬಾಧಿತರಾಗಿ ಅಲ್ಲಿಂದ ಮುಂದೆ ಚಲಿಸಲಾಗದೆ ಅಲ್ಲೇ ಕೊನೆಯುಸಿರೆಳೆದರು. ಅವರನ್ನು ಯಸ್ರಿಬ್‌ನಲ್ಲಿ ಬನೂ ಅದೀ ಬಿನ್ ನಜ್ಜಾರ್ ಬುಡಕಟ್ಟಿನ ನಾಬಿಗ ಎಂಬ ವ್ಯಕ್ತಿಯ ಮನೆಯಲ್ಲಿ ಸಮಾಧಿ ಮಾಡಲಾಯಿತು. ಗಂಡ ಮರಣಹೊಂದುವಾಗ ಆಮಿನ ಎರಡು ತಿಂಗಳ ಬಸುರಿಯಾಗಿದ್ದರು.[೨]

ಪ್ರವಾದಿ ಮುಹಮ್ಮದ್‌ರ ಜನನಸಂಪಾದಿಸಿ

ಆಮಿನರಿಗೆ ಒಂಬತ್ತು ತಿಂಗಳು ಪೂರ್ತಿಯಾದ ಬಳಿಕ ಮಕ್ಕಾದ ಶಿಅಬ್ ಅಬೂತಾಲಿಬ್ ಎಂಬ ಸ್ಥಳದಲ್ಲಿರುವ ತಮ್ಮ ಮನೆಯಲ್ಲಿ ಒಂದು ಮುದ್ದಾದ ಗಂಡು ಮಗುವಿಗೆ ಜನ್ಮವಿತ್ತರು. ಅಜ್ಜ ಅಬ್ದುಲ್ ಮುತ್ತಲಿಬ್ ಸಂತೋಷದಿಂದ ಮಗುವನ್ನು ಬಾಚಿ ಎತ್ತಿಕೊಂಡು ಕಅಬಾಗೆ ಹೋಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ ಪ್ರಾರ್ಥಿಸಿದರು. ನಂತರ ಮಗುವಿಗೆ "ಮುಹಮ್ಮದ್" ಎಂದು ನಾಮಕರಣ ಮಾಡಿದರು.[೩]

ಮರಣಸಂಪಾದಿಸಿ

ಮುಹಮ್ಮದ್‌ಗೆ ಆರು ವರ್ಷವಾದಾಗ, ಆಮಿನ ಯಸ್ರಿಬ್‌ನಲ್ಲಿದ್ದ ತನ್ನ ಸೋದರ ಮಾವಂದಿರನ್ನು ಭೇಟಿಯಾಗಲು, ಮಗನೊಂದಿಗೆ ಹೊರಟರು. ಜೊತೆಗೆ ಅಬ್ದುಲ್ಲಾರ ದಾಸಿ ಉಮ್ಮು ಐಮನ್ ಕೂಡ ಇದ್ದರು. ಅವರು ಯಸ್ರಿಬ್‌ನಲ್ಲಿ ಸುಮಾರು ಒಂದು ತಿಂಗಳ ಕಾಲ ಉಳಿದು ಮಕ್ಕಾಗೆ ಹಿಂದಿರುಗುವಾಗ, ದಾರಿ ಮಧ್ಯೆ ಅಬ್ವಾಅ್ ಎಂಬ ಸ್ಥಳದಲ್ಲಿ ಅವರು ಸಾವನ್ನಪ್ಪಿದರು. ಅವರನ್ನು ಅಲ್ಲಿಯೇ ದಫನ ಮಾಡಲಾಯಿತು. ಆಗ ಅವರಿಗೆ 20 ವರ್ಷ ಪ್ರಾಯವಾಗಿತ್ತು.

ಉಲ್ಲೇಖಗಳುಸಂಪಾದಿಸಿ

  1. ೧.೦ ೧.೧ ೧.೨ The Encyclopaedia of Islam (1986), E.J.Brill, vol. 1, p. 438
  2. ೨.೦ ೨.೧ Safi-ur-Rahman Mubarakpuri (1996). The Sealed Nectar. Darussalam Publications. p. 55.
  3. Martin Lings, Muhammad: His Life Based on the Earliest Sources, (London: Islamic Texts Society, 1983
"https://kn.wikipedia.org/w/index.php?title=ಆಮಿನ&oldid=1156705" ಇಂದ ಪಡೆಯಲ್ಪಟ್ಟಿದೆ