ಕುರೈಷ್ ಅಥವಾ ಖುರೈಶ್ (ಅರಬ್ಬಿ: قريش) — ಇಸ್ಲಾಂ ಧರ್ಮದ ಉದಯಕ್ಕೂ ಮೊದಲು ಮಕ್ಕಾವನ್ನು ನಿಯಂತ್ರಿಸುತ್ತಿದ್ದ ಅರಬ್ ಬುಡಕಟ್ಟಿನ ಹೆಸರು. ಇದರ ಸದಸ್ಯರನ್ನು ಹತ್ತು ಪ್ರಮುಖ ಗೋತ್ರಗಳಾಗಿ ವಿಂಗಡಿಸಲಾಗಿದೆ. ಅವುಗಳಲ್ಲಿ ಪ್ರವಾದಿ ಮುಹಮ್ಮದ್ ಜನಿಸಿದ 'ಬನೂ ಹಾಶಿಮ್' ಗೋತ್ರವು ಅತ್ಯಂತ ಪ್ರಮುಖವಾಗಿದೆ. ಈ ಬುಡಕಟ್ಟಿನವರು ಏಳನೇ ಶತಮಾನದಲ್ಲಿ ಶ್ರೀಮಂತ ವ್ಯಾಪಾರಿಗಳಾಗಿದ್ದರು ಮತ್ತು ಹಿಂದೂ ಮಹಾಸಾಗರ, ಪೂರ್ವ ಆಫ್ರಿಕಾ ಹಾಗೂ ಮೆಡಿಟರೇನಿಯನ್ ನಡುವಿನ ವ್ಯಾಪಾರವನ್ನು ನಿಯಂತ್ರಿಸುತ್ತಿದ್ದರು.[] ಈ ಬುಡಕಟ್ಟು ಬೇಸಿಗೆಯಲ್ಲಿ ಸಿರಿಯಾ ಮತ್ತು ಚಳಿಗಾಲದಲ್ಲಿ ಯಮನ್‌ಗೆ ವರ್ತಕ ತಂಡಗಳನ್ನು ಕಳುಹಿಸುತ್ತಿತ್ತು, ಹಾಗೆಯೇ ಈ ಮಾರ್ಗಗಳಲ್ಲಿ ಗಣಿಗಾರಿಕೆ ಮತ್ತು ಇತರ ಉದ್ಯಮಗಳನ್ನು ಸಹ ನಡೆಸುತ್ತಿತ್ತು.[]

ಕುರೈಷ್ (ಖುರೈಶ್)
قريش
Classification ಅದ್ನಾನಿ ಅರಬ್ ಬುಡಕಟ್ಟು
Religions ಇಸ್ಲಾಂ (630 ರಿಂದ ಇಂದಿನ ತನಕ)
ಬಹುದೇವ (230 - 630)
Languages ಅರಬ್ಬಿ
Region ಮಕ್ಕಾ, ಹಿಜಾಝ್, ಪಶ್ಚಿಮ ಅರೇಬಿಯಾ
Ethnicity ಅರಬ್ಬಿ
Feudal title ಕುರಷಿ

ಮುಹಮ್ಮದ್ ಮಕ್ಕಾದಲ್ಲಿ ಇಸ್ಲಾಂ ಧರ್ಮವನ್ನು ಬೋಧಿಸಲು ಪ್ರಾರಂಭಿಸಿದಾಗ, ಕುರೈಷರು ಆರಂಭದಲ್ಲಿ ಹೆಚ್ಚು ಗಮನ ಹರಿಸಲಿಲ್ಲ. ಆದರೆ ಮುಹಮ್ಮದ್ ಅರಬ್ ಬಹುದೇವಾರಾಧನೆಯನ್ನು ಹೆಚ್ಚು ಹೆಚ್ಚು ಪ್ರಶ್ನಿಸಲು ಪ್ರಾರಂಭಿಸಿದಾಗ, ಖುರೈಷರು ಮುಹಮ್ಮದ್‌ರ ಧರ್ಮವನ್ನು ವಿರೋಧಿಸಲು ತೊಡಗಿದರು.[] ಸಂಬಂಧಗಳು ಹದಗೆಟ್ಟಂತೆ, ಮುಹಮ್ಮದ್ ಮತ್ತು ಅವರ ಅನುಯಾಯಿಗಳು ಬನೂ ಔಸ್ ಮತ್ತು ಬನೂ ಖಝ್ರಜ್ ಬುಡಕಟ್ಟುಗಳ ಸಹಾಯದಿಂದ ಮದೀನಾಕ್ಕೆ ವಲಸೆ ಹೋದರು.[]

ಆದರೂ, ಎರಡೂ ಕಡೆಯವರ ನಡುವೆ ಶಾಂತಿ ಸ್ಥಾಪನೆಯಾಗಲಿಲ್ಲ. ಮುಹಮ್ಮದ್ ಕುರೈಷರ ವರ್ತಕ ತಂಡವನ್ನು ತಡೆಯಲು ಯತ್ನಿಸಿದಾಗ, ಅವರ ನಡುವೆ ಮೊದಲ ಯುದ್ಧವಾದ ಬದ್ರ್ ಯುದ್ಧ ಸ್ಫೋಟಿಸಿತು. ಇದಾದ ನಂತರ ಉಹುದ್, ಖಂದಕ್ ಮುಂತಾದ ಅನೇಕ ಯುದ್ಧಗಳು ಜರುಗಿದವು.[]

ಉಲ್ಲೇಖಗಳು

ಬದಲಾಯಿಸಿ
  1. ಎನ್‌ಸೈಕ್ಲೋಪೀಡಿಯಾ ಆಫ್ ಇಸ್ಲಾಮ್. Vol. 5. p. 434.
  2. ಎನ್‌ಸೈಕ್ಲೋಪೀಡಿಯಾ ಆಫ್ ಇಸ್ಲಾಮ್. Vol. 5. p. 435.
  3. "Muhammad - Prophet of Islam".
  4. "Aws and Khazraj".
  5. Encyclopedia of Islam.
"https://kn.wikipedia.org/w/index.php?title=ಕುರೈಷ್&oldid=1303782" ಇಂದ ಪಡೆಯಲ್ಪಟ್ಟಿದೆ