ನೆಲ್ಲಿ

(ಆಮಲಕ ಇಂದ ಪುನರ್ನಿರ್ದೇಶಿತ)
ಫಿಲಾಂಥಸ್ ಎಂಬ್ಲಿಕಾ
ನೆಲ್ಲಿ
  • ಹಣ್ಣು
  • ವೈಜ್ಞಾನಿಕ ವರ್ಗೀಕರಣ
  • ಕಿಂಗ್ಡಮ್: ಸಸ್ಯಗಳು
  • (ಶ್ರೇಣೀಕರಿಸದ): ಆವೃತಬೀಜಿಗಳು
  • (ಶ್ರೇಣೀಕರಿಸದ): Eudicots
  • (ಶ್ರೇಣೀಕರಿಸದ): Rosids
  • ಆರ್ಡರ್: Malpighiales (ಗೋಲಪುಷ್ಪ)
  • ಕುಟುಂಬ: Phyllanthaceae(ಪುಷ್ಪಪ್ರದಸಸಸ್ಯ
  • ಪಂಗಡ: Phyllantheae(ಧೃಡಕಾಂಢದವು)
  • ಉಪಕುಲ: Flueggeinae ಚಿಕ್ಕ ಎಲೆಯವು
  • ಪ್ರಕಾರ: ಫಿಲ್ಲಾಂತಸ್ ಮೊನಚು ಎಲೆಯವು
  • ತಳಿಗಳು: ಪಿ ಎಂಬ್ಲಿಕ
  • ವೈಜ್ಞಾನಿಕ ಹೆಸರು:ಫಿಲಾಂಥಸ್ ಎಂಬ್ಲಿಕಾ
.

ಇತರೆ ಹೆಸರು

ಬದಲಾಯಿಸಿ
  • ತಮಿಳು : ನೆಲ್ಲಿಮರಮ್, ಅಮಲಕಮ್
  • ತೆಲುಗು : ಉಸಿರಿಕ, ತ್ರಿಫಲಮು, ನೆಲ್ಲಿ
  • ಮಲಯಾಳ :ಆಮಲಕಮ್, ನೆಲ್ಲಿ
  • ಸಂಸ್ಕೃತ :ಧಾತ್ರಿ, ಆಮ್ರಫಲಂ
  • ಹಿಂದಿ :ಆಮ್ಲಿಕಾ, ಔಂಲಾ
ನೆಲ್ಲಿ
 
Plant
 
Fruit
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಪಂಗಡ:
ಉಪಪಂಗಡ:
ಕುಲ:
ಪ್ರಜಾತಿ:
P. emblica
Binomial name
Phyllanthus emblica
Synonyms[]
  • Cicca emblica (L.) Kurz
  • Diasperus emblica (L.) Kuntze
  • Dichelactina nodicaulis Hance
  • Emblica arborea Raf.
  • Emblica officinalis Gaertn.
  • Phyllanthus glomeratus Roxb. ex Wall. nom. inval.
  • Phyllanthus mairei H.Lév.
  • Phyllanthus mimosifolius Salisb.
  • Phyllanthus taxifolius D.Don


ಮಧ್ಯಮ ಗಾತ್ರದ, ಚಳಿಗಾಲದಲ್ಲಿ ಎಲೆಗಳು ಉದುರುವ ಚಿಕ್ಕ ಚಿಕ್ಕ ಎಲೆಗಳುಳ್ಳ ಮರ. ತೊಗಟೆಯು ಬಿಳಿ ಮಾಸು ಹಸಿರು ಹಳದಿ ಬಣ್ಣದ ಸಣ್ಣ ಸಣ್ಣ ಹೂಗಳು. ಕಾಯಿಗಳು ಗುಂಡಗೆ ಹಸಿರಾಗಿರುವುದು. ಬಲಿತ ಹಣ್ಣು ಹೊಳಪಿನಿಂದ ಕೂಡಿರುತ್ತದೆ. ಹಣ್ಣಿನ ಮೇಲೆ ಸ್ಪಷ್ಟವಾದ ಕಾಣುವ ಆರು ರೇಖೆಗಳಿರುತ್ತದೆ.ಒಣಗಿದ ಕಾಯಿ ಕಪ್ಪಾಗಿದ್ದು, ಒಗರು ಹುಳಿಯಾಗಿರುತ್ತದೆ. ಇದನ್ನು ನೆಲ್ಲಿಚೆಟ್ಟು ಎನ್ನುತ್ತಾರೆ.. ಇದರಲ್ಲಿ ವಿಟಮಿನ್ Archived 2013-09-20 ವೇಬ್ಯಾಕ್ ಮೆಷಿನ್ ನಲ್ಲಿ. 'ಸಿ' ಹೇರಳವಾಗಿ ಸಿಗುತ್ತದೆ.

ಸಸ್ಯ ರೂಪವಿಜ್ಞಾನ ಮತ್ತು ಕೊಯ್ಲು

ಬದಲಾಯಿಸಿ
ಗಿಡದ ಲಕ್ಷಣ ಮತ್ತು ಫಲ ಸಂಗ್ರಹ

ಸರಳ ಚಿಕಿತ್ಸೆಗಳು

ಬದಲಾಯಿಸಿ

ತಲೆ ಸುತ್ತು ನಿವಾರಣೆಗೆ

ಬದಲಾಯಿಸಿ

ನೆಲ್ಲಿಕಾಯಿ ಚೂರ್ಣ ಮತ್ತು ಕೊತ್ತಂಬರಿ ಸಮ ತೂಕ ರಾತ್ರಿ ನೀರಿನಲ್ಲಿ ನೆನೆ ಹಾಕುವುದು. ಬೆಳಗ್ಗೆ ಚೆನ್ನಾಗಿ ಕಿವುಚಿ ಶೋಧಿಸಿ, ಕಲ್ಲು ಸಕ್ಕರೆ ಪುಡಿ ಸೇರಿಸಿ ಸೇವಿಸುವುದು.[]

ನಿದ್ರೆ ಬಾರದಿರುವಿಕೆಗೆ

ಬದಲಾಯಿಸಿ

ಅಜೀರ್ಣವಾಗಿದ್ದರೆ ತಕ್ಕ ಉಪಚಾರ ಮಾಡುವುದು. ಒಂದು ಟೀ ಚಮಚ ನೆಲ್ಲಿಕಾಯಿ ರಸ ಅರ್ಧ ನೆಲ್ಲಿಚೆಟ್ಟಿನ ಚೂರ್ಣಕ್ಕೆ ಸ್ವಲ್ಪ ಜೇನು ಸೇರಿಸಿ ಸೇವಿಸುವುದು ಮತ್ತು ಕೆಂಪು ಕಲ್ಲು ಸಕ್ಕರೆ ಪುಡಿ ಸೇರಿಸಿದ ಹಸುವಿನ ಹಾಲನ್ನು ಕುಡಿಯುವುದು.

ಮೂತ್ರದಲ್ಲಿ ಉರಿ ಮತ್ತು ಮೂತ್ರದ ತಡೆಯ ನಿವಾರಣೆಗೆ

ಬದಲಾಯಿಸಿ

ದಪ್ಪವಾಗಿರುವ ೫-೬ ಹಸೀ ನೆಲ್ಲಿಕಾಯಿಗಳನ್ನು ತಂದು ಬೀಜಗಳನ್ನು ಬೇರ್ಪಡಿಸಿ ಸ್ವಲ್ಪ ಬೆಚ್ಚಗೆ ಮಾಡಿ, ರಸವನ್ನು ಹಿಂಡಿಕೊಳ್ಳುವುದು. ನಂತರ ರಸವನ್ನು ಬಟ್ಟೆಯಲ್ಲಿ ಸೋಸಿ, ಕಬ್ಬಿನ ಹಾಲಿನಲ್ಲಿ ಹಾಕಿ ಕುಡಿಯುವುದು.

ಅಸಾಧ್ಯ ಹೊಟ್ಟೆನೋವು ನಿವಾರಣೆಗೆ

ಬದಲಾಯಿಸಿ

ಬೀಜಗಳನ್ನು ಬೇರ್ಪಡಿಸಿದ ಹಸಿ ನೆಲ್ಲಿಕಾಯಿಗಳನ್ನು ನೀರಿನೊಂದಿಗೆ ನುಣ್ಣಗೆ ಅರೆದು ಕಿಬ್ಬೊಟ್ಟೆ ಮತ್ತು ಹೊಕ್ಕಳ ಸುತ್ತ ಲೇಪಿಸುವುದು. ನೆಲ್ಲಿಕಾಯಿ ರಸವನ್ನು ಸಕ್ಕರೆ ಸೇರಿಸಿ ಕುಡಿಯುವುದು.

ಮಧುಮೇಹದ ನಿವಾರಣೆಗೆ

ಬದಲಾಯಿಸಿ

ನೆಲ್ಲಿ ಚೆಟ್ಟು ಮತ್ತು ನೇರಳೆ ಬೀಜಗಳನ್ನು ಸಮವಾಗಿ ಸೇರಿಸಿ ಕುಟ್ಟಿ ನುಣುಪಾದ ಚೂರ್ಣ ಮಾಡುವುದು. ಅರ್ಧ ಟೀ ಚಮಚ ಚೂರ್ಣವನ್ನು ಮಜ್ಜಿಗೆಯಲ್ಲಿ ಕದಡಿ ಕುಡಿಯುವುದು. ದಿವಸಕ್ಕೆ ಎರಡು ವೇಳೆ.

 
ನೆಲ್ಲಿ in Madhya Pradesh

ಉಪಯೋಗಗಳು

ಬದಲಾಯಿಸಿ
  1. ಹಸಿ ಎಲೆಗಳನ್ನು ತಣ್ಣೀರಿನಲ್ಲಿ ಹಾಕಿ, ಪಾತ್ರೆಯನ್ನು ಭದ್ರವಾಗಿ ಮುಚ್ಚಿಇಡೀ ದಿನ ಇಟ್ಟು ನಂತರ ಆ ನೀರನ್ನುತೆಗೆದು ಕುಡಿಸಿದರೆ ಉಷ್ಣದಿಂದಉಂಟಾಗುವ ಕಣ್ಣುಗಳು ಉರಿ, ಉರಿ ಮೂತ್ರ ನಿವಾರಣೆಯಾಗುತ್ತದೆ.
  2. ಎಲೆಗಳ ಕಷಾಯವನ್ನು ತಯಾರಿಸಿ ಕುಡಿದರೆಜ್ವರಕ್ಕೆ ಮತ್ತು ಪಿತ್ತದಿಂದತಲೆತಿರುಗುವತೊಂದರೆಉಪಕಾರಿ
  3. ಬೇರಿನಚಕ್ಕೆಯಕಷಾಯವು ಬಾಯಿ ಹುಣ್ಣಿಗೂ, ಹೊಟ್ಟೆಯ ಸಂಬಂಧಿತ ವ್ಯಾಧಿಗಳಿಗೂ ಮತ್ತು ಗಾಯಗಳನ್ನು ತೊಳೆಯುವುದಕ್ಕೆ ಬಳಸಲಾಗುತ್ತದೆ.
  4. ಹಸಿ ಎಲೆಗಳನ್ನು ಅರೆದುಮೊಸರಿನೊಡನೆ ಕುಡಿಸಿದರೆ ಭೇಧಿಯು ನಿಲ್ಲುತ್ತದೆ.
  5. ಚಿಗುರು ಎಲೆಗಳನ್ನು ಮಜ್ಜಿಗೆಯಲ್ಲಿಅರೆದು, ಚಟ್ನಿಯನ್ನು ಮಜ್ಜಿಗೆಯಲ್ಲಿ ಕಲಸಿ ಕೊಟ್ಟರೆಅಜೀರ್ಣವು ನಿವಾರಣೆಯಾಗುತ್ತದೆ.
  6. ಕಾಯಿಗಳನ್ನು ಚೆನ್ನಾಗಿಅರೆದುಕೊಬ್ಬರಿಎಣ್ಣೆಯೊಡನೆ ಸೇರಿಸಿ ತಲೆಗೆ ಹಚ್ಚಿಒಂದೆರಡು ಗಂಟೆಗಳ ನಂತರ ತೊಳೆದರೆ ಕೂದಲುಕಾಂತಿಯಾಗುತ್ತದೆ ಮತ್ತುಕೂದಲುಉದುರುವುದುತಡೆಗಟ್ಟುತ್ತದೆ[]
  7. ನೆಲ್ಲಿಯಲ್ಲಿ ಸಿ ಜೀವಸತ್ವ ಹೇರಳವಾಗಿ ದೊರೆಯುತ್ತವೆ. ವೈಟಮಿನ್ ಸಿ ಶೇಖೃತವಾಗಿರುವ ಒಂದು ಗುಳಿಗೆ; ದಿನಕ್ಕೆ ಎರಡು ದೊಡ್ಡ ಕಿತ್ತಳೆ🍊 ಹಣ್ಣುಗಳನ್ನು ತಿನ್ನುವುದೂ ಒಂದೇ, ಒಂದು ನೆಲ್ಲಿಕಾಯಿಯನ್ನು ತಿನ್ನುವುದು ಒಂದೇ.[]

ಉಲ್ಲೇಖಗಳು

ಬದಲಾಯಿಸಿ
  1. "Phyllanthus emblica information from NPGS/GRIN". US Department of Agriculture. Retrieved 2008-03-06.
  2. "The Plant List: A Working List of All Plant Species". Archived from the original on 9 ನವೆಂಬರ್ 2021. Retrieved 14 July 2014.
  3. ಅಪೂರ್ವ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು, ವೈದ್ಯಎ.ಆರ್.ಎಂ.ಸಾಹೇಬ್, ಪ್ರಕಾಶಕರು ದಿವ್ಯಚಂದ್ರ ಪ್ರಕಾಶನ, ಮುದ್ರಣ ೨೦೦೨,ಪುಟ ಸಂಖ್ಯೆ೧೩೩
  4. ವನಸಿರಿ. ಅಜ್ಜಂಪುರ. ಕೃಷ್ಣಸ್ವಾಮಿ
  5. ಬಿ.ಜಿ.ಎಲ್. ಸ್ವಾಮಿ. "ಹಸುರು ಹೊನ್ನು". ಕಾವ್ಯಾಲಯ, ೨೦೧೧.
"https://kn.wikipedia.org/w/index.php?title=ನೆಲ್ಲಿ&oldid=1194840" ಇಂದ ಪಡೆಯಲ್ಪಟ್ಟಿದೆ