ಆಡುವ ಗೊಂಬೆ (ಚಲನಚಿತ್ರ)

ಕನ್ನಡ ಚಲನಚಿತ್ರ

ಆಡುವ ಗೊಂಬೆ (ಇಂಗ್ಲೀಷ್: Playing Doll) 2019ರ ಎಸ್. ಕೆ. ಭಗವಾನ್ ನಿರ್ದೇಶನದ ಕನ್ನಡ ಭಾಷೆಯ ಚಿತ್ರ. 22 ವರ್ಷದ ಬಳಿಕ ಭಗವಾನ್ ಅವರು ನಿರ್ದೇಶನಕ್ಕೆ ಮರಳಿದರು. [] ಕಸ್ತೂರಿ ನಿವಾಸ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿರುವ ಈ ಚಿತ್ರವನ್ನು ಶಿವಪ್ಪ.ಎ ಮತ್ತು ವೇಣುಗೋಪಾಲ್.ಕೆ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. [] ಈ ಚಿತ್ರದಲ್ಲಿ ಸಂಚಾರಿ ವಿಜಯ್ ಮತ್ತು ರಿಷಿತಾ ಮಲ್ನಾಡ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಅನಂತ್ ನಾಗ್, ಸುಧಾ ಬೆಳವಾಡಿ ಮತ್ತು ಇತರರು ಇದ್ದಾರೆ . ಚಿತ್ರದ ಹಿನ್ನಲೆ ಸಂಗೀತ ಮತ್ತು ಧ್ವನಿಪಥವನ್ನು ಹೇಮಂತ್ ಕುಮಾರ್ ಮತ್ತು ಛಾಯಾಗ್ರಹಣವನ್ನು ಗಣೇಶ್ ಸಂಯೋಜಿಸಿದ್ದಾರೆ.

ಆಡುವ ಗೊಂಬೆ
Poster
ನಿರ್ದೇಶನಎಸ್.ಕೆ. ಭಗವಾನ್
ನಿರ್ಮಾಪಕಶಿವಪ್ಪ .ಎ
ವೇಣುಗೋಪಾಲ್ .ಕೆ
ಚಿತ್ರಕಥೆಎಸ್. ಕೆ. ಭಗವಾನ್
ಕಥೆಎಸ್. ಕೆ. ಭಗವಾನ್
ಪಾತ್ರವರ್ಗಸಂಚಾರಿ ವಿಜಯ್
ಅನಂತ್ ನಾಗ್
ಸುಧಾ ಬೆಳವಾಡಿ
ಸಂಗೀತಹೇಮಂತ್ ಕುಮಾರ್
ಛಾಯಾಗ್ರಹಣಜಾಬೆಜ಼್ ಕೆ. ಗಣೇಶ್
ಸಂಕಲನಶಿವಪ್ರಸಾದ್ ಯಾದವ್
ಭರತ್ ಗೌಡ
ಸ್ಟುಡಿಯೋಕಸ್ತೂರಿ ನಿವಾಸ ಕ್ರಿಯೇಷನ್ಸ್
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 4 ಜನವರಿ 2019 (2019-01-04)
ದೇಶಭಾರತ
ಭಾಷೆಕನ್ನಡ

ಈ ಚಿತ್ರವು 4 ಜನವರಿ 2019 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಯಿತು ಮತ್ತು ಈ ಚಿತ್ರ ಕನ್ನಡ ಚಿತ್ರರಂಗದ ವರ್ಷದ ಮೊದಲ ಬಿಡುಗಡೆ.[]

ಪಾತ್ರವರ್ಗ

ಬದಲಾಯಿಸಿ

ಧ್ವನಿಪಥ

ಬದಲಾಯಿಸಿ

ಹೇಮಂತ್ ಕುಮಾರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಧ್ವನಿಸುರುಳಿ 26 ಅಕ್ಟೋಬರ್ 2018 ರಂದು ಅಭಿಮಾನಿಗಳ ನಡುವೆ ಬಿಡುಗಡೆಯಾಯಿತು ಮತ್ತು ಇದು ನಟ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಆಡಿಯೊ ಲೇಬಲ್‌ನ ಒಡೆತನದಲ್ಲಿದೆ. [] ಮೂವರು ಸಹೋದರರಾದ ಶಿವ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಮತ್ತು ಅವರ ಸೋದರಸಂಬಂಧಿ ನಟ ವಿಜಯ್ ರಾಘವೇಂದ್ರ ಅವರು ಹಾಡುಗಳಿಗೆ ಧ್ವನಿ ನೀಡಿದ್ದಾರೆ. []

ಹಾಡುಗಳ ಪಟ್ಟಿ
ಸಂ.ಹಾಡುಹಾಡುಗಾರ(ರು)ಸಮಯ
1."ಪಿಸುಮಾತಿಗೆ ತುಸು"ಶಿವರಾಜ್‍ಕುಮಾರ್, ಮಾನಸ ಹೊಳ್ಳ06:11
2."ಆ ದೇವ ರೂಪಿಸಿದ"ಪುನೀತ್ ರಾಜ್‍ಕುಮಾರ್04:46
3."ಆಡಿಸಿ ನೋಡು ಬೀಳಿಸಿ ನೋಡು"ರಾಘವೇಂದ್ರ ರಾಜಕುಮಾರ್04:31
4."ಮದರಂಗಿ ಮದರಂಗಿ"ವಿಜಯ ರಾಘವೇಂದ್ರ, ಅನುರಾಧ ಭಟ್06:24
5."ಓ ಮದನ"ರೆಮೋ04:52
6."ನಾಟ್ಯರಾಣಿ ಶಾಂತಲೆ"ಸುಪ್ರಿಯಾ ಲೋಹಿತ್05:04

ಉಲ್ಲೇಖಗಳು

ಬದಲಾಯಿಸಿ
  1. "S K Bhagwan returns to direction". ದಿ ಟೈಮ್ಸ್ ಆಫ್‌ ಇಂಡಿಯಾ. 22 July 2017.
  2. "Bhagwan film on floor". Indiaglitz.com. 7 November 2017.
  3. "Aduva Gombe – Kannada Drama Film – Releasing on 4th Jan, 2019". Filmgappa.com. 30 December 2018.
  4. "Grand Audio Launch for Aduva Gombe". Chitratara.com. 26 October 2018.
  5. "S K Bhagwan film Raj sons sing". Indiaglitz.com. 4 May 2018.


ಬಾಹ್ಯ ಕೊಂಡಿಗಳು

ಬದಲಾಯಿಸಿ