ಆಜ್ ಕಲ್
ಆಜ್ ಕಲ್ (ಉಚ್ಚಾರಣೆ: IPA: [aːdʒkaːl] ಮತ್ತು ಸಂಜೆ ಆವೃತ್ತಿ ಸಂಧ್ಯಾ ಆಜ್ ಕಲ್ ) ಕೋಲ್ಕತಾ, ಭಾರತ ದಿಂದ ಪ್ರಸಾರ ವಾಗುವ ಒಂದು ಬಂಗಾಳಿ ಪತ್ರಿಕೆಗಳು ಆಗಿದೆ. ಆಜ್ ಕಲ್ ಏಕಕಾಲದಲ್ಲಿ ಕೋಲ್ಕತಾ, ಸಿಲಿಗುರಿ ಯಿಂದ ಪ್ರಕಟ ವಾಗುತ್ತದೆ ಮತ್ತು ಅದರ ತ್ರಿಪುರ ಆವೃತ್ತಿ ಅಗರ್ತಲ ರಿಂದ ಪ್ರಕಟವಾಗುತ್ತದೆ . ಪತ್ರಿಕೆಯನ್ನು ಅಭಿಕ್ ಕುಮಾರ್ ಘೋಷ್ ೧೯೮೧ ರಲ್ಲಿ ಪ್ರಾರಂಭಿಸಿದರು, ಮತ್ತು ೧೯೮೦ ರಲ್ಲಿ ಪತ್ತ್ರಿಕೆಯು ಭಾರತೀಯ ಪತ್ರಿಕೋದ್ಯಮದ ರೂಪಾಂತರದ ಭಾಗವಾಗಿತ್ತು . ಆಜ್ ಕಲ್ ತನ್ನ ಎಡಪಂಥೀಯ ದೃಷ್ಟಿಕೋನದಿಂದ ಮತ್ತು ಕ್ರೀಡೆಗಳ ಪ್ರಾಶಸ್ತ್ಯ ದಿಂದ ಪಶ್ಚಿಮ ಬಂಗಾಳದ ಅತ್ಯಂತ ಸ್ಪರ್ಧಾತ್ಮಕ ವೃತ್ತಪತ್ರಿಕೆ ಮಾರುಕಟ್ಟೆಯಲ್ಲಿ ಉಳಿಯಲು ಶ್ರಮಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ವೀಕ್ಷಕರು [who?] ತನ್ನ ಕ್ರೀಡೆ ಸುದ್ದಿ ಗುಣಮಟ್ಟದಲ್ಲಿ ಹದಗೆಟ್ಟಿತು ಎಂದು ಅಭಿಪ್ರಾಯ ಪಡುತ್ತಾರೆ . ಇದು ಜ್ಯೋತಿಷ್ಯ, ಭವಿಷ್ಯವನ್ನು ಪ್ರಕಟಿಸದೇ ಇರುವಂತಹ ಕೆಲವೇ ಭಾರತೀಯ ದಿನಪತ್ರಿಕೆಗಳಲ್ಲಿ ಒಂದಾಗಿದೆ. ಇತ್ತೀಚೆಗೆ, ಹೆಚ್ಚು ವಿಶ್ಲೇಷಣಾತ್ಮಕ ವೈಶಿಷ್ಟ್ಯಗಳನ್ನು ಅಳವಡಿಸಲು ಸ್ವರೂಪದಲ್ಲಿ ಬದಲಾವಣೆಯನ್ನು ತಂದಿದೆ.
Aajkaal | |
---|---|
ಚಿತ್ರ:Aajkaal Frontpage of 28.03.2012.jpg | |
ವರ್ಗ | ದೈನಿಕ ವಾರ್ತಾಪತ್ರಿಕೆ |
ವಿನ್ಯಾಸ | Broadsheet |
ಮಾಲೀಕ | Aajkaal Publishers Pvt. Ltd. |
ಸಂಪಾದಕ | ಅಶೋಕ್ ದಾಸ್‍ಗುಪ್ತಾ |
ಸ್ಥಾಪನೆ | ೧೯೮೧[೧] |
Political alignment | Leftist |
ಭಾಷೆ | ಬಂಗಾಳಿ |
ಕೇಂದ್ರ ಕಾರ್ಯಾಲಯ | ಕಲ್ಕತ್ತಾ, ಭಾರತ |
ಅಧಿಕೃತ ತಾಣ | www |
ಪತ್ರಿಕೆಯ ಮೊದಲ ಸಂಪಾದಕ ಪ್ರಸಿದ್ದ ಪತ್ರಕರ್ತ ಶ್ರೀ ಗೌರ್ ಕಿಶೋರ್ ಘೋಷ್. ಪ್ರಸ್ತುತ ಸಂಪಾದಕ ಅಶೋಕ್ ದಾಸ ಗುಪ್ತಾ, ಕ್ರೀಡಾ ಪತ್ರಕರ್ತನಾಗಿದ್ದು ಕೂಡ ಪ್ರಥಮ ಬಾರಿಗೆ ಪೂರ್ಣ ಪ್ರಮಾಣದ ಸಂಪಾದಕರಾದವರಲ್ಲಿ ಮೊದಲಿಗರಾಗಿದ್ದಾರೆ.
ಉಲ್ಲೇಖಗಳು
ಬದಲಾಯಿಸಿ- ↑ The Illustrated Weekly of India. Published for the proprietors, Bennett, Coleman & Company, Limited, at the Times of India Press. 1988. p. 47.
ಬಾಹ್ಯ ಕೊಂಡಿಗಳು
ಬದಲಾಯಿಸಿ- ಆಜ್ ಕಲ್ ವೆಬ್ಸೈಟ್ Archived 2006-03-31 ವೇಬ್ಯಾಕ್ ಮೆಷಿನ್ ನಲ್ಲಿ.