ಆಚಾರ್ಯ ಕಾಲೇಕರ್
ಆಚಾರ್ಯ ಕಾಲೇಕರ್ (೧೮೮೫-೧೯೮೧) ಕಾಕಾ ಕಾಲೇಕರ್ ಎಂದೇ ಪ್ರಸಿದ್ಧರಾದ ಇವರು ಮಹಾತ್ಮ ಗಾಂಧಿಯವರ ಪ್ರಮುಖ ಅನುಯಾಯಿಯಾಗಿದ್ದವರು.ಬೆಳಗಾವಿ ಜಿಲ್ಲೆಯ ಬೆಳಗುಂದಿ ಗ್ರಾಮದಲ್ಲಿ ಜನಿಸಿದ ಇವರು ಪುಣೆಯಲ್ಲಿ ವಿದ್ಯಾಭ್ಯಾಸ ಪೂರೈಸಿದರು.ಮುಂದೆ ಮಹಾತ್ಮ ಗಾಂಧಿಯವರ ಸಾಬರಮತಿ ಅಶ್ರಮ ಸೇರಿದರು. ಗಾಂಧಿಜಿಯವರ ಒತ್ತಾಸೆಯಿಂದ ಗುಜರಾತ್ ವಿದ್ಯಾಪೀಠದ ಸ್ವಾಪನೆಯಲ್ಲಿ ಸಕ್ರಿಯವಾದ ಪಾತ್ರ ನಿರ್ವಹಿಸಿದರು.ಸ್ವಾತಂತ್ರ್ಯಾನಂತರ ಸುಮಾರು ೧೨ ವರುಷಗಳ ಕಾಲ ರಾಜ್ಯ ಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು.ಹಲವಾರು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ.ಇವರಿಗೆ ೧೯೬೫ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ,.೧೯೬೪ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ದೊರೆತಿದೆ,