ಆಕಾಂಕ್ಷ ಭಾರ್ಗವ
ಆಕಾಂಕ್ಷಾ ಭಾರ್ಗವ (ಜನನ ೧೯೮೫) ಇವರು ಭಾರತೀಯ ವಾಣಿಜ್ಯೋದ್ಯಮಿ, ಪ್ರಸ್ತುತ ಭಾರತದಲ್ಲಿ ದೊಡ್ಡ ಪ್ರಮಾಣದ ಸ್ಥಳಾಂತರ ವ್ಯವಹಾರವನ್ನು ನಡೆಸುತ್ತಿರುವ ಏಕೈಕ ಮಹಿಳೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.[೧] ಗುರಗಾಂವ್ನನಲ್ಲಿ ಪಿಎಂರೆಲೋಕೇಶನ್ಸ್ ಪ್ರೈವೇಟ್ರೆ ಲೋಕೇಶನ್ಸ್ ಪ್ರೈವೇಟ್.[೨] (ಪಿಎಂಆರ್)ನ ಅಧ್ಯಕ್ಷರಾಗಿ ಜೊತೆಗೆ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಾಲ್ಯ ಜೀವನ ಮತ್ತು ಶಿಕ್ಷಣ
ಬದಲಾಯಿಸಿಬಾಲ್ಯ ಜೀವನ ಮತ್ತು ಶಿಕ್ಷಣ ಭಾರ್ಗವರವರು ಜನಿಸಿದ್ದು ಕೋಲ್ಕತ್ತಾದಲ್ಲಿ, ನಂತರ ೧೯೯೨ ರಲ್ಲಿ ಅವರು ದೆಹಲಿ|[ದೆಹಲಿಗೆ] ಹೋದರು. ಇವರು ಪ್ರಾಥಮಿಕ ಶಿಕ್ಷಣವನ್ನು ದೆಹಲಿಯ ವಸಂತ್ ವಿಹಾರ್ನಲ್ಲಿರುವ ಟಾಗೋರ್ ಇಂಟರ್ನ್ಯಾಷನಲ್ ಶಾಲೆಯಲ್ಲಿ, ಕಾಲೇಜು ಶಿಕ್ಷಣವನ್ನು ಹಿಂದು ಕಾಲೇಜಿನಿಂದ ಪಡೆದು ಬಿ.ಕಾಂ ಪದವಿಯನ್ನು ಪೂರ್ಣಗೊಳಿಸಿದರು. ನಂತರದ ದಿನಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ಸಿಂಗಪೂರ್ ಮತ್ತು ದುಬೈಗೆ ತೆರಳಿ ಪಿ ಜೈನ್ ಸ್ಕೂಲ್ ಆಫ್ ಗ್ಲೋಬಲ್ ಮ್ಯಾನೇಜ್ಮೆಂಟ್, ಸಿಂಗಾಪುರ್ ಮತ್ತು ದುಬೈನ ಮಾರ್ಕೆಟಿಂಗ್ನಲ್ಲಿ ತನ್ನ ಸ್ನಾತಕೋತ್ತರ ಎಂಬಿಎ ಪದವಿಯನ್ನು ಪೂರೈಸಿದರು.
ಔದ್ಯೋಗಿಕ ಜೀವನ
ಬದಲಾಯಿಸಿಔದ್ಯೋಗಿಕ ಜೀವನ ಭಾರ್ಗವರವರು ೨೦೦೭,ಎಪ್ರಿಲ್ ೩೦, ರಂದು ಪಿಎಂಆರ್ ಗೆ ಸೇರಿದರು. ಪ್ರಾರಂಭದಲ್ಲಿ ಅಂತರಾಷ್ಟ್ರೀಯ ಮಾರಾಟದಲ್ಲಿ ವ್ಯವಸ್ಥಾಪಕರಾಗಿ,ನಂತರದ ದಿನಗಳಲ್ಲಿ ಕಂಪೆನಿಗಾಗಿ ಸಾಂಸ್ಥಿಕ ಮಾರಾಟ, ಮಾರುಕಟ್ಟೆ, ಕಾರ್ಯಾಚರಣೆಗಳು ಮತ್ತು ಇತರ ವರ್ಟಿಕಲ್ಗಳನ್ನು ನಿರ್ವಹಿಸಲು ಮುಂದಾದರು.೨೦೧೨ ರಲ್ಲಿ ಸಿಇಓ ಆಗಿ ಬಡ್ತಿ ಪಡೆದರು. ಜೊತೆಗೆ ೨೦೧೫ ರಲ್ಲಿ ಅವರು ಸಣ್ಣ ಮತ್ತು ಮಧ್ಯಮ ಎಂಟರ್ಪ್ರೈಸ್ವಿಭಾಗದಲ್ಲಿ ನೀಡುವ ಬ್ಯುಸಿನೆಸ್ ಟುಡೇ ಪ್ರಶಸ್ತಿಗಳಿಂದ ಅತ್ಯುತ್ತಮ ಮಹಿಳಾ ನಾಯಕಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ (ಐಎಸ್ಬಿ) ಮೂಲಕ ಪಿಎಂಆರ್ ಪರವಾಗಿ ಸಲ್ಲಿಸಿದ ಉದ್ಯಮಶೀಲತಾ ವರದಿಯ ಬಗ್ಗೆ ಅವರು ನೀಡಿದ ಕೊಡುಗೆಯಿಂದ ಗುರುತಿಸ್ಪಟ್ಟಿದ್ದಾರೆ.ಜೊತೆಗೆ ಪಿಎಐಮ್ಎ ಮತ್ತು ಐಎಮ್ ಮಂಡಳಿಯ ಚುನಾಯಿತ ಸದಸ್ಯರಾಗಿದ್ದಾರೆ. ಇವರು ಹೈದರಾಬಾದ್, ಪುಣೆ, ಅಹಮದಾಬಾದ್, ಮುಂಬೈ ಮತ್ತು ಚೆನ್ನೈಗಳಲ್ಲಿ ಕಂಪನಿಯ ಹೊಸ ಶಾಖೆಗಳನ್ನು ಆರಂಭಿಸಿದ್ದಾರೆ.ಹಾಗೂ ಕಂಪನಿಯ ಸಂಖ್ಯೆಗಳು, ಜಾಗತಿಕ ಒಪ್ಪಂದಗಳು ಜನಸಂಖ್ಯೆಗೆ ಅನುಗುಣವಾಗಿ ಬೆಳೆಯಲು ಕಾರಣಕರ್ತರಾಗಿದ್ದಾರೆ. ಪಿಮ್ಆರ್ ನ ಸಿಇಓ ಆಗಿರುವ ಅವದಿಯಲ್ಲಿ, ಕಂಪನಿಯ ಆದಾಯವು ೨೦೧೦ ರಲ್ಲಿ ೨ ಕೋಟಿ ರೂಪಾಯಿಗಳಾಗಿದ್ದು, ೨೦೧೫ ರಲ್ಲಿ ಸುಮಾರಿಗೆ ೪೬ ಕೋಟಿ ರೂಪಾಯಿಗಳಿಗೆ ಏರಿ ಹೆಚ್ಚಾಗಿ ಕೋಟಿ,ಕೋಟಿ ಲಾಭ ಗಳಿಸಿದೆ.[೩] ಈ ಉದ್ಯಮದ ಜೊತೆಗೆ ಬರಹವನ್ನು ಮೈಗೂಡಿಸಿಕೊಂಡಿದ್ದು ಶಿಕ್ಷಣ ಪೋರ್ಟಲ್ ಎಜುಕೇಶನ್,ಮೈಂಡ್ವೈರ್ ಬಿಸಿನೆಸ್. ಮತ್ತು ಇಂಡೋ-ಜರ್ಮನ್ ಚೇಂಬರ್ ಆಫ್ ಕಾಮರ್ಸ್ಗಾಗಿ ಲೇಖನಗಳನ್ನು ಬರೆದಿದ್ದಾರೆ.
ಪ್ರಶಸ್ತಿ ಮತ್ತು ಗೌರವಗಳು
ಬದಲಾಯಿಸಿವುಮೆನ್ ಆಫ್ ವರ್ತ್ ಪ್ರಶಸ್ತಿ- ಔಟ್ ಲುಕ್ ಉದ್ಯಮ ನಿಯತಕಾಲಿಕೆಯಿಂದ ಪಡೆದ್ದಾರೆ. ಉತ್ತಮ ಮಹಿಳಾ ನಾಯಕಿ-ಬ್ಯುಸಿನೆಸ್ ಟುಡೆ ಎಸ್ಎಂಇ ಅವಾರ್ಡ್ಸ್ ೨೦೧೫ ರಲ್ಲಿ ಲಭಿಸಿದೆ. ವರ್ಷದ ಮಹಿಳಾ ವಾಣಿಜ್ಯೋದ್ಯಮಿ - ಫ್ರ್ಯಾಂಚೈಸ್ ಇಂಡಿಯಾ ಅವಾರ್ಡ್ಸ್ ೨೦೧೬ ರಲ್ಲಿ ಲಭಿಸಿದೆ. 'ಎಫ್ಬಿಬಿ ಪೀಪಲ್ ಮ್ಯಾನೇಜ್ಮೆಂಟ್ ಅಪ್ರೋಚ್'೨೦೧೭ ಪ್ರಶಸ್ತಿ ಎಸ್ಪಿಜೆಐಮ್ಆರ್ ಫ್ಯಾಮಿಲಿ ಮ್ಯಾನೇಜ್ಡ್ ಬಿಸಿನೆಸ್ ನಿಂದ ಪಡೆದಿದ್ದಾರೆ. ೭ ನೇ ವಾರ್ಷಿಕ ವಾಣಿಜ್ಯೋದ್ಯಮಿ ಭಾರತ ಪ್ರಶಸ್ತಿಗಳಲ್ಲಿ 'ಸರ್ಚ್ ಬಿಜಿನೆಸ್ನಲ್ಲಿ ವರ್ಷದ ವಾಣಿಜ್ಯೋದ್ಯಮಿ - ಎಸ್ಸಿಎಂ ಮತ್ತು ಲಾಜಿಸ್ಟಿಕ್ಸ್' ಗೆ ನಾಮನಿರ್ದೇಶನರಾಗಿದ್ದಾರೆ.
ಉಲ್ಲೇಖಗಳು
ಬದಲಾಯಿಸಿ- ↑ https://www.businesstoday.in/magazine/special/india-best-smes-winners-2015-pm-relocations-aakanksha-bhargava/story/223929.html
- ↑ "ಆರ್ಕೈವ್ ನಕಲು". Archived from the original on 2018-04-24. Retrieved 2018-05-06.
- ↑ https://www.businesstoday.in/magazine/special/india-best-smes-winners-2015-pm-relocations-aakanksha-bhargava/story/223929.html
೪.↑ packers-and-movers-bangalore-charges/local-relocation-charges/domestics-relocation-charges/bike-and-car-relocation-charges. Archived 2020-09-24 ವೇಬ್ಯಾಕ್ ಮೆಷಿನ್ ನಲ್ಲಿ.