ಆಂಡ್ಯ್ರೂ ಕಾರ್ನೆಗೀ

ಆಂಡ್ಯ್ರೂ ಕಾರ್ನೆಗೀ

ಆಂಡ್ಯ್ರೂ ಕಾರ್ನೆಗೀ
1913 ರಲ್ಲಿ ಆಂಡ್ಯ್ರೂ ಕಾರ್ನೆಗೀ
Born(೧೮೩೫-೧೧-೨೫)೨೫ ನವೆಂಬರ್ ೧೮೩೫
DiedAugust 11, 1919(1919-08-11) (aged 83)
ಶಾಡೋ ಬ್ರೂಕ್
ಲೆನಾಕ್ಸ್, ಮೆಸ್ಸಾಚುಸೆಟ್ಸ್, ಅಮೇರಿಕಾ ಸಂಯುಕ್ತ ಸಂಸ್ಥಾನ
Cause of deathಶ್ವಾಸಕೋಶ ನ್ಯುಮೋನಿಯಾ
Occupation(s)ಉಕ್ಕು ಕೈಗಾರಿಕೆಯಲ್ಲಿ ಪ್ರಖ್ಯಾತ ಉದ್ಯಮಿ, ಜನೋಪಕಾರಿ
Spouseಲೂಯಿಸ್ ವೈಟ್ ಫೀಲ್ಡ್
Childrenಮಾರ್ಗರೇಟ್ ಕಾರ್ನಿಗೀ ಮಿಲ್ಲರ್
Signature

' (ಸರಿಯಾದ ಉಚ್ಚಾರಣೆ ಕಾರ್ನೀಗಿpronounced /kɑrˈneɪɡi/ kar-NAY-gee,/ ಆದರೆ ಸಾಮಾನ್ಯವಾಗಿ ಕಾರ್ನೆಗೀ /ˈkɑrnɨɡi/ KAR-nə-geeಅಥವಾ ಕಾರ್ನೆಗಿ)/kɑrˈnɛɡi/ kar-NEG-ee)[]) (ನವೆಂಬರ್‌ 25, 1835 – 11, ಆಗಸ್ಟ್‌ 1919) ಅವರು ಒಬ್ಬ ಸ್ಕಾಟಿಶ್ ಅಮೆರಿಕನ್ ಕೈಗಾರಿಕೋದ್ಯಮಿ, ವಾಪಾರಿ, ಉದ್ಯಮಿ ಆಗಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಅವರು ಅತ್ಯಂತ ಲೋಕೋಪಕಾರಿ ವ್ಯಕ್ತಿಯಾಗಿದ್ದರು.

ಕಾರ್ನೆಗೀ ಅವರು ಸ್ಕಾಟ್‌ಲ್ಯಾಂಡ್‌ನ ಡನ್‌ಫರ್‌ಮ್ಲಿನ್‌ ನಲ್ಲಿ ಜನಿಸಿದರು. ಅವರು ಮಗುವಾಗಿದ್ದಾಗಲೇ ಪೋಷಕರೊಂದಿಗೆ ಸಂಯುಕ್ತ ಸಂಸ್ಥಾನಕ್ಕೆ ವಲಸೆ ಬಂದರು. ಸಂಯುಕ್ತ ಸಂಸ್ಥಾನದಲ್ಲಿ ಅವರು ಚಿಕ್ಕವರಿದ್ದಾಗಲೇ ಮಾಡಿದ ಮೊದಲ ಕೆಲಸ ಎಂದರೆ ಬಾಬಿನ್ಫ್ಯಾಕ್ಟರಿಯೊಂದರಲ್ಲಿ ಕೆಲಸಗಾರರಾಗಿದ್ದುದು. ನಂತರ ಅವರು ಒಂದು ಕಂಪನಿಯಲ್ಲಿ ಬಿಲ್ ಲಾಗರ್ ಆಗಿ ಸೇರಿಕೊಂಡರು. ಇದಾದನಂತರ ಅವರು ಅವರು ಒಬ್ಬ ಸುದ್ದಿತಲುಪಿಸುವ (ಮೆಸೆಂಜರ್‌) ಹುಡುಗನಾಗಿ ಕೆಲಸಕ್ಕೆ ಸೇರಿದರು. ನಂತರ ಅವರು ಕ್ರಮೇಣ ಟೆಲಿಗ್ರಾಫ್‌ ಕಂಪನಿಯೊಂದರಲ್ಲಿ ಮೇಲಿನ ಶ್ರೇಣಿಗೇರಿದರು. ಅವರು ಪಿಟ್ಸ್‌ಬಗ್ಸ್‌ನಲ್ಲಿ ಕಾರ್ನೆಗೀ ಸ್ಟೀಲ್ ಕಂಪನಿ ಯನ್ನು ಸ್ಥಾಪಿಸಿದರು. ನಂತರ ಅದು ಎಲ್ಬರ್ಟ್‌ ಎಚ್‌. ಗ್ಯಾರಿ'ಸ್‌ ಫೆಡರಲ್ ಸ್ಟೀಲ್ ಕಂಪನಿ ಹಾಗೂ ಇನ್ನೂ ಹಲವಾರು ಚಿಕ್ಕ ಕಂಪನಿಗಳಲ್ಲಿ ವಿಲೀನವಾಗಿ ಯು.ಎಸ್‌. ಸ್ಟೀಲ್ ಕಂಪನಿಯನ್ನು ಹುಟ್ಟುಹಾಕಲಾಯಿತು. ಇನ್ನಿತರ ವ್ಯಾಪಾರ ವಹಿವಾಟಿನಿಂದ ತಾವು ಗಳಿಸಿದ ಸಂಪತ್ತಿನಿಂದ ಅವರು ಕಾರ್ನೆಗೀ ಹಾಲ್‌ ಕಟ್ಟಿದರು. ನಂತರ ಅವರು ಲೋಕೋಪಕಾರ ಮಾಡಲು ಮತ್ತು ಶಿಕ್ಷಣಕ್ಕೆ ಕೊಡುಗೆ ಸಲ್ಲಿಸುವ ಕಡೆ ಮನಸ್ಸು ಮಾಡಿದರು. ಅವರು ಕಾರ್ನೆಗೀ ಕಾರ್ಪೊರೇಶನ್ ಆಫ್ ನ್ಯೂಯಾರ್ಕ್‌ , ಕಾರ್ನೆಗೀ ಅಂತರಾಷ್ಟ್ರೀಯ ಶಾಂತಿ ದತ್ತುನಿಧಿ (ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಶನಲ್ ಪೀಸ್) ಹುಟ್ಟುಹಾಕಿದರು. ಜೊತೆಗೆ ಕಾರ್ನೆಗೀ ಇನ್‌ಸ್ಟಿಟ್ಯೂಶನ್ ಆಫ್ ವಾಶಿಂಗ್ಟನ್ , ಕಾರ್ನೆಗೀ ಮೆಲಾನ್‌ ವಿಶ್ವವಿದ್ಯಾಲಯ ಮತ್ತು ಕಾರ್ನೆಗೀ ಮ್ಯೂಸಿಯಮ್ಸ್ ಆಫ್ ಪಿಟ್ಸ್‌ಬರ್ಗ್‌ ಅನ್ನೂ ಸ್ಥಾಪಿಸಿದರು. ಕಾರ್ನೆಗೀ ತಮ್ಮ ಬಹುಭಾಗ ಸಂಪತ್ತನ್ನು ಅಮೆರಿಕಾ,ಬ್ರಿಟನ್ ಮತ್ತು ಇನ್ನಿತರ ದೇಶಗಳಲ್ಲಿ ಅನೇಕ ಗ್ರಂಥಾಲಯಗಳು , ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳನ್ನು ನಿರ್ಮಿಸಲು ವಿನಿಯೋಗಿಸಿದರು. ಜೊತೆಗೆ ತಮ್ಮ ಹಿಂದಿನ ಕಂಪನಿಯ ನಿವೃತ್ತ ಉದ್ಯೋಗಿಗಳಿಗೆ ಪಿಂಚಣಿ ನಿಧಿಗಾಗಿಯೂ ತಮ್ಮ ಹಣವನ್ನು ನೀಡಿದರು. ಅವರನ್ನು ಜಾನ್‌ ಡಿ ರಾಕ್‌ಫೆಲ್ಲರ್ ನಂತರ ಇತಿಹಾಸದಲ್ಲಿ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಕಾರ್ನೆಗೀ ಒಬ್ಬ ಟೆಲಿಗ್ರಾಫ್‌ ರ್ ಆಗಿ ತಮ್ಮ ಉದ್ಯಮವನ್ನು ಆರಂಭಿಸಿದರು. 1860ರ ಸುಮಾರಿಗೆ ಅವರು ರೈಲುರಸ್ತೆಗಳು, ರೈಲ್‌ರೋಡ್‌ ಸ್ಲೀಪಿಂಗ್ ಕಾರ್‌ಗಳು, ಸೇತುವೆಗಳು ಮತ್ತು ಆಯಿಲ್ ಡೆರ್ರಿಕ್ಸ್‌ (ಅಂದರೆ ತೈಲಬಾವಿಗಳಿಂದ ತೈಲವನ್ನು ಮೇಲೆತ್ತುವ ಸಾಧನಗಳು), ಇವುಗಳಲ್ಲಿ ಹೂಡಿಕೆ ಮಾಡತೊಡಗಿದರು. ಅವರು ಅಮೆರಿಕಾದ ಉದ್ಯಮಗಳಿಗೆ ಯೂರೋಪ್‌ನಲ್ಲಿ ಬಾಂಡ್ ಸೇಲ್ಸ್‌ಮನ್ ಆಗಿ ಕಾರ್ಯನಿರ್ವಹಣೆ ಮಾಡುತ್ತ ಇನ್ನಷ್ಟು ಸಂಪತ್ತು ಸಂಗ್ರಹಿಸಿದರು. ಅವರು ಉಕ್ಕಿನ ಉದ್ಯಮದಲ್ಲಿ ತಮ್ಮ ಬಹುಭಾಗ ಸಂಪತ್ತನ್ನು ಗಳಿಸಿದರು. 1870ರಲ್ಲಿ ಅವರು ಕಾರ್ನೆಗೀ ಸ್ಟೀಲ್ ಕಂಪನಿಯನ್ನು ಆರಂಭಿಸಿದರು. ಅದು ಉದ್ಯಮಗಳ ಸರದಾರರಲ್ಲಿ (ಕ್ಯಾಪ್ಟನ್ಸ್ ಆಫ್‌‌ ಇಂಡಸ್ಟ್ರಿ) ಒಬ್ಬರಾಗಿ ಅವರ ಹೆಸರನ್ನು ಪ್ರಸಿದ್ಧಗೊಳಿಸುವಲ್ಲಿ ಮೊದಲ ಹೆಜ್ಜೆಯಾಗಿತ್ತು. 1890ರ ಸುಮಾರಿಗೆ, ಕಂಪನಿಯು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಮತ್ತು ಅಧಿಕ ಲಾಭಗಳಿಸುವ ಕೈಗಾರಿಕಾ ಉದ್ಯಮವಾಗಿತ್ತು. ಕಾರ್ನೆಗೀ ಕಂಪನಿಯನ್ನು ಜೆ.ಪಿ.ಮೋರ್ಗಾನ್‌ಗೆ 480 ಮಿಲಿಯನ್ ಡಾಲರ್‌ಗಳಿಗೆ ಮಾರಿದರು. ನಂತರ ಮೋರ್ಗಾನ್‌ ಯು.ಎಸ್‌. ಸ್ಟೀಲ್‌ ಅನ್ನು ಹುಟ್ಟುಹಾಕಿದರು. ಕಾರ್ನೆಗೀಯವರು ತಮ್ಮ ನಂತರದ ಜೀವಿತಾವಧಿಯನ್ನು ಬೃಹತ್‌ ಪ್ರಮಾಣದ ಲೋಕೋಪಕಾರಿ ಕಾರ್ಯದಲ್ಲಿ ತೊಡಗಿಸಿಕೊಂಡಂರು. ವಿಶೇಷವಾಗಿ ಸ್ಥಳೀಯ ಗ್ರಂಥಾಲಯಗಳು, ವಿಶ್ವ ಶಾಂತಿ, ಶಿಕ್ಷಣ ಮತ್ತು ವೈಜ್ಞಾನಿಕ ಸಂಶೋಧನೆಗೆ ಹೆಚ್ಚಿನ ಒತ್ತುನೀಡಿ, ದಾನ-ದತ್ತುನಿಧಿ ನೀಡಿದರು. ಅನೇಕಬಾರಿ ಅವರ ಬದುಕನ್ನು "ಬಡತನದಿಂದ ಸಿರಿತನದೆಡೆಗಿನ " ಒಂದು ನೈಜ ಕಥೆ ಎನ್ನಲಾಗುತ್ತದೆ.

ಜೀವನ ಚರಿತ್ರೆ

ಬದಲಾಯಿಸಿ

ಆರಂಭಿಕ ಜೀವನ

ಬದಲಾಯಿಸಿ
 
ಸ್ಕಾಟ್‌ಲ್ಯಾಂಡ್‌ನ ಡನ್‌ಫರ್‌ಮ್ಲಿನ್ನಿನಲ್ಲಿರುವ ಆಂಡ್ಯ್ರೂ ಕಾರ್ನೆಗೀಯವರ ಜನ್ಮಸ್ಥಳ

ಆಂಡ್ಯ್ರೂ ಕಾರ್ನೆಗೀ ಅವರು ಡನ್‌ಫರ್‌ಮ್ಲಿನ್, ಸ್ಕಾಟ್‌ಲ್ಯಾಂಡ್‌, , ಇಲ್ಲಿ ಒಂದು ನೇಕಾರರ ಗುಡಿಸಲಿನಲ್ಲಿ ಹುಟ್ಟಿದರು. ಆಗ ಅವರ ಮನೆಯು ಒಂದು ಮುಖ್ಯ ಕೊಠಡಿಯನ್ನು ಹೊಂದಿದ್ದು, ನೆಲಮಹಡಿಯ ಅರ್ಧ ಭಾಗವನ್ನು ಪಕ್ಕದ ನೇಕಾರರ ಕುಟುಂಬದೊಂದಿಗೆ ಹಂಚಿಕೊಳ್ಳುತ್ತಿತ್ತು.[]

ಮುಖ್ಯ ಕೊಠಡಿಯೇ ಅವರ ಲಿವಿಂಗ್ ರೂಂ, ಊಟದ ಕೊಠಡಿ ಮತ್ತು ಮಲಗುವ ಕೊಠಡಿ ಎಲ್ಲವೂ ಆಗಿತ್ತು.[] ಕಾರ್ನಗೀಯವರಿಗೆ ಅವರ ತಂದೆಯ ತಂದೆಯ ಅಂದರೆ ಅಜ್ಜನ ಹೆಸರನ್ನು ಇಡಲಾಗಿತ್ತು.[] 1836ರಲ್ಲಿ ಅವರ ಕುಟುಂಬವು ಎಡ್ಗರ್ ರಸ್ತೆಯಲ್ಲಿದ್ದ ದೊಡ್ಡ ಮನೆಗೆ (ರೀಡ್ಸ್‌ ಪಾರ್ಕ್‌ನ ಎದುರಿಗೆ) ಹೋಯಿತು. ಆಗ ಹೆಚ್ಚು ಭಾರವಾಗಿದ್ದ ಡಮಾಸ್ಕ್‌ ಬಟ್ಟೆಗೆ (ಎರಡೂ ಕಡೆಯೂ ಕಸೂತಿ ಹೆಣಿಗೆಯಿರುವ ಬಟ್ಟೆ) ಅಧಿಕ ಬೇಡಿಕೆ ಬಂದಿದ್ದರಿಂದ ಆಂಡ್ರ್ಯೂ ಅವರ ತಂದೆ ವಿಲಿಯಂ ಕಾರ್ನೆಗೀಯವರಿಗೆ ಲಾಭವಾಗಿದ್ದರಿಂದ ದೊಡ್ಡ ಮನೆಗೆ ಹೋಗಲು ಸಾಧ್ಯವಾಯಿತು.[] ತಮ್ಮ ಚಿಕ್ಕಪ್ಪ, ಜಾರ್ಜ್‌ ಲಾಡರ್‌‌ರನ್ನು 'ಡಾಡ್‌' ಎಂದು ಕರೆಯುತ್ತಿದ್ದರು. ಲಾಡರ್‌ ಕಾರ್ನೆಗೀಯವರಿಗೆ ರಾಬರ್ಟ್‌ ಬರ್ನ್ಸ್ ಅವರ ಬರಹಗಳು ಮತ್ತು ಐತಿಹಾಸಿಕ ಸ್ಕಾಟಿಶ್ ನಾಯಕರುಗಳಾದ ರಾಬರ್ಟ್‌ ದಿ ಬ್ರೂಸ್ , ವಿಲಿಯಂ ವ್ಯಾಲೇಸ್ ಮತ್ತು ರಾಬ್ ರೋಯ್ ಇನ್ನಿತರರ ಬರಹಗಳನ್ನು ಪರಿಚಯಿಸಿದರು. ಕೈಮಗ್ಗದ ನೇಕಾರರಿಗೆ ಅದು ಬಹಳ ಕಷ್ಟಕರ ಸಮಯವಾಗಿತ್ತು ಮತ್ತು ಅದೇ ಸಮಯದಲ್ಲಿ ದೇಶದೆಲ್ಲಡೆ ಹಸಿವೆ ತಾಂಡವವಾಡುತ್ತಿತ್ತು. ಹೀಗಾಗಿ ವಿಲಿಯಂ ಕಾರ್ನೆಗೀಯವರು ಒಳ್ಳೆಯ ಭವಿಷ್ಯ ದೊರೆಯಬಹುದು ಎಂಬ ಆಶಯದಿಂದ ಕುಟುಂಬವನ್ನು ಸಂಯುಕ್ತ ಸಂಸ್ಥಾನದ ಅಲ್ಲೆಗೆನಿ, ಪೆನ್ಸಿಲ್ವೇನಿಯಾಗೆ 1848ರಲ್ಲಿ ಸ್ಥಳಾಂತರಿಸಲು ನಿರ್ಧರಿಸಿದರು.[] ಹೀಗೆ ವಲಸೆ ಹೋಗಲು ಆಂಡ್ರ್ಯೂ ಅವರ ಕುಟುಂಬವು ಹಣವನ್ನು ಸಾಲ ಮಾಡಬೇಕಾಯಿತು.

ಅಲ್ಲೆಗೆನಿಯು ಆರ್ಥಿಕವಾಗಿ ಒಂದು ಬಡಪ್ರದೇಶವಾಗಿತ್ತು. 
ಆಂಡ್ರ್ಯೂ ತಮ್ಮ 13ನೆಯ ವಯಸ್ಸಿನಲ್ಲಿಯೇ ಕೆಲಸ ಮಾಡಲಾರಂಭಿಸಿದರು. ಅವರ 1848ರಲ್ಲಿ ಅವರು ಹಿಡಿದ ಮೊದಲನೆಯ ಕೆಲಸವೆಂದರೆ ಬಾಬಿನ್ ಬಾಯ್  ಆಗಿದ್ದು. ಹತ್ತಿ ಮಿಲ್‌ನಲ್ಲಿ ದಾರದ ಅರಳೆ ಉಂಡೆಗಳನ್ನು ಬದಲಿಸುವ ಕೆಲಸವನ್ನು ದಿನಕ್ಕೆ ಹನ್ನೆರಡು ಗಂಟೆಗಳ ಹಾಗೆ ವಾರದಲ್ಲಿ ಆರು ದಿನಗಳ ಕಾಲ ಮಾಡುತ್ತಿದ್ದರು.  ಅವರ ವೇತನ ಆಗ ವಾರಕ್ಕೆ 2 ಡಾಲರ್ ಆಗಿತ್ತು.[] ಆಂಡ್ರ್ಯೂ ಅವರ ತಂದೆ ವಿಲಿಯಂ ಕಾರ್ನೆಗೀಯವರು ಹತ್ತಿ ಗಿರಣಿ ಒಂದರಲ್ಲಿ ಕೆಲಸ ಮಾಡುತ್ತ ನೇಕಾರಿಕೆ ಮತ್ತು ಲಿನೆನ್‌ ಪೆಡ್ಲಿಂಗ್ ಮೂಲಕ ಹಣ ಗಳಿಸುತ್ತಿದ್ದರು.  ಅವರ ತಾಯಿ ಮಾರ್ಗರೆಟ್ ಮಾರಿಸನ್ ಕಾರ್ನೆಗೀಯವರು ಶೂಗಳನ್ನು ಹೊಲೆಯುವ ಮೂಲಕ ಹಣಗಳಿಸುತ್ತಿದ್ದರು. 
 
16ರ ವಯಸ್ಸಿನಲ್ಲಿ ಕಾರ್ನೆಗೀ, ತಮ್ಮ ಸಹೋದರ ಥಾಮಸ್‌ನೊಂದಿಗೆ

1850ರಲ್ಲಿ, ಕಾರ್ನೆಗೀಯವರು ಓಹಿಯೋ ಟೆಲಿಗ್ರಾಫ್ ಕಂಪನಿಯ ಪಿಟ್ಸ್‌ಬರ್ಗ್‌ ಕಚೇರಿಯಲ್ಲಿ ಟೆಲಿಗ್ರಾಫ್‌ ಸುದ್ದಿತಲುಪಿಸುವ ಹುಡುಗನಾಗಿ ಕೆಲಸ ಮಾಡಿದರು. ಅವರ ಚಿಕ್ಕಪ್ಪನ ಶಿಫಾರಸಿನ ಮೇಲೆ ದೊರೆತ ಈ ಕೆಲಸದಲ್ಲಿ ಅವರಿಗೆ ವಾರಕ್ಕೆ 2.50 ಡಾಲರ್ ಹಣ ಸಿಗುತ್ತಿತ್ತು.[] ಅವರ ಹೊಸ ಕೆಲಸವು ಅವರಿಗೆ ಸ್ಥಳೀಯ ರಂಗಮಂದಿರಕ್ಕೆ ಉಚಿತ ಪ್ರವೇಶವೂ ಸೇರಿದಂತೆ ಅನೇಕ ಅನುಕೂಲಗಳನ್ನು ಒದಗಿಸಿತು. ಇದು ಅವರಿಗೆ ಶೇಕ್ಸ್‌ಪಿಯರ್‌ ಕೃತಿಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯಗೊಳಿಸಿತು. ಅವರು ಬಹಳ ಶ್ರಮವಹಿಸಿ ಕೆಲಸ ಮಾಡುತ್ತಿದ್ದರು ಮತ್ತು ಪಿಟ್ಸ್‌ಬರ್ಗ್‌ನ ಎಲ್ಲ ಪ್ರಮುಖ ವಾಣಿಜ್ಯ ಸ್ಥಳಗಳನ್ನು ಮತ್ತು ಪ್ರಮುಖ ವ್ಯಕ್ತಿಗಳ ಚಹರೆಯನ್ನು ನೆನಪಿಡುತ್ತಿದ್ದರು. ಈ ರೀತಿಯಾಗಿ ಅವರು ಅನೇಕ ವ್ಯಕ್ತಿಗಳ ಸಂಪರ್ಕಕ್ಕೆ ಬಂದರು. ಜೊತೆಗೆ ಕೆಲಸ ಮಾಡುವಾಗ ಟೆಲಿಗ್ರಾಫ್‌ನ ಸಲಕರಣೆಗಳನ್ನು ಗಮನವಿಟ್ಟು ನೋಡುತ್ತಿದ್ದರು. (ಅವರು ಟೆಲಿಗ್ರಾಫ್‌ನ ಕ್ಲಿಕ್‌ ಶಬ್ದವು ಟೇಪ್‌ನಲ್ಲಿ ಇನ್ನೂ ಮುದ್ರಿತಗೊಂಡು ಬರುವುದಕ್ಕೆ ಮೊದಲೇ ಅದನ್ನು ಏನೆಂದು ಬರೆಯಬಲ್ಲವರಾಗಿದ್ದರು) [ಸೂಕ್ತ ಉಲ್ಲೇಖನ ಬೇಕು] ಹೀಗಾಗಿ ಒಂದೇ ವರ್ಷದಲ್ಲಿ ಅವರಿಗೆ ಆಪರೇಟರ್ ಆಗಿ ಬಡ್ತಿ ದೊರೆಯಿತು. ಕಾರ್ನೆಗೀಯವರ ಶಿಕ್ಷಣ ಮತ್ತು ಓದುವ ಆಸಕ್ತಿಗೆ ಕರ್ನಲ್ ಜೇಮ್ಸ್ ಆಂಡರ್‌ಸನ್‌, ಅವರಿಂದ ಬಹಳ ಉತ್ತೇಜನ ದೊರೆಯಿತು. ಆಂಡರ್‌ಸನ್‌ ತಮ್ಮ 400 ಕೃತಿಗಳಿದ್ದ ಗ್ರಂಥಾಲಯದಲ್ಲಿ ಈ ಹುಡುಗನಿಗೆ ಪ್ರತಿ ಶನಿವಾರ ಓದಲು ಆಸ್ಪದ ನೀಡಿದ್ದರು. ಕಾರ್ನೆಗೀ ತಮ್ಮ ಆರ್ಥಿಕ ಅಭಿವೃದ್ಧಿ ಮತ್ತು ಬೌದ್ಧಿಕ, ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಒಬ್ಬ ನಿರಂತರ ಸಾಲಗಾರ ಮತ್ತು "ಸ್ವ-ನಿರ್ಮಿತ ವ್ಯಕ್ತಿ'ಯಾಗಿದ್ದರು. ಅವರ ಸಾಮರ್ಥ್ಯ, ಪರಿಶ್ರಮದ ಕೆಲಸ ಮಾಡುವ ಅವರ ಆಸಕ್ತಿ, ಏಕನಿಷ್ಠೆ ಸಾಧನೆ, ಮತ್ತು ಜಾಗರೂಕತೆ, ಈ ಎಲ್ಲವೂ ಸೇರಿ ಅವರಿಗೆ ಅವಕಾಶಗಳನ್ನು ಒದಗಿಸಿದವು. ಕೆಲಸ ಮಾಡುವಾಗ, ಕಾರ್ನೆಗೀಯವರು ಒಳಬರುವ ಟೆಲಿಗ್ರಾಫ್ ಸಂಕೇತಗಳು ಮಾಡುವ ವಿವಿಧ ಭಿನ್ನ ರೀತಿಯ ಶಬ್ದಗಳನ್ನು ಪ್ರತ್ಯೇಕಿಸುವುದನ್ನು ಬೇಗನೆ ಕಲಿತರು ಮತ್ತು ಬರೆಯುವ ಅಗತ್ಯವೇ ಇಲ್ಲದೇ, ಕಿವಿಯಿಂದ ಸಂಕೇತಗಳನ್ನು ಕೇಳಿಯೇ ಲಿಪ್ಯಂತರ ಮಾಡಲು ಬಹುಬೇಗನೆ ಕಲಿತರು. 1853ರಲ್ಲಿ, ಪೆನ್ಸಿಲ್ವೇನಿಯಾ ರೈಲ್‌ರೋಡ್ ಕಂಪನಿ ಯ ಥಾಮಸ್ ಎ ಸ್ಕಾಟ್ರು ಕಾರ್ನೆಗೀಯನ್ನು ವಾರಕ್ಕೆ 4 ಡಾಲರ್‌‌ ವೇತನ ನೀಡಿ, ಕಾರ್ಯದರ್ಶಿ/ಟೆಲಿಗ್ರಾಫ್ ಆಪರೇಟರ್ ಆಗಿ ನೇಮಿಸಿಕೊಂಡರು. ಕಾರ್ನಗೀಯವರು ತಮ್ಮ 18ನೇ ವಯಸ್ಸಿನಲ್ಲಿ, ಕಂಪನಿಯ ಮೂಲಕ ತ್ವರಿತ ಪ್ರಗತಿ ಸಾಧಿಸಲು ಆರಂಭಿಸಿದರು. ಕೆಲವೇ ದಿನಗಳಲ್ಲಿ ಪಿಟ್ಸ್‌ಬರ್ಗ್‌ ವಿಭಾಗದ ಸೂಪರಿಂಟೆಂಡೆಂಟ್ ಆದರು. ಪೆನ್ಸಿಲ್ವೇನಿಯಾ ರೈಲ್‌ರೋಡ್ ಕಂಪನಿಯಲ್ಲಿ ಅವರಿಗೆ ಉದ್ಯೋಗ ದೊರೆತಿದ್ದು ಅವರ ಮುಂದಿನ ಯಶಸ್ಸಿಗೆ ಬಹಳ ಮಹತ್ವದ್ದಾಗಿತ್ತು. ಅಮೆರಿಕಾದಲ್ಲಿ ರೈಲುರಸ್ತೆಗಳು ಪ್ರಪ್ರಥಮ ದೊಡ್ಡ ವ್ಯಾಪಾರೋದ್ಯಮವಾಗಿತ್ತು ಮತ್ತು ಪೆನ್ಸಿಲ್ವೇನಿಯಾ ಇವುಗಳೆಲ್ಲದರಲ್ಲಿ ಬಹಳ ದೊಡ್ಡದಿತ್ತು. ಕಾರ್ನೆಗೀ ಈ ವರ್ಷಗಳಲ್ಲಿ ನಿರ್ವಹಣೆ ಮತ್ತು ವೆಚ್ಚ ನಿಯಂತ್ರಣದ ಕುರಿತು ಬಹಳಷ್ಟನ್ನು, ವಿಶೇಷವಾಗಿ ಸ್ಕಾಟ್ ಅವರಿಂದ ಕಲಿತರು.[] ಕಾರ್ನೆಗೀಯವರಿಗೆ ಅವರ ಮೊದಲ ಹೂಡಿಕೆಗಳಲ್ಲಿ ಸ್ಕಾಟ್ ಸಹಾಯವನ್ನೂ ಮಾಡಿದರು. ಇವುಗಳಲ್ಲಿ ಹೆಚ್ಚಿನವುಗಳು ಸ್ಕಾಟ್‌ ಮತ್ತು ಪೆನ್ಸಿಲ್ವೇನಿಯಾ ಅಧ್ಯಕ್ಷರಾದ, ಜೆ. ಎಡ್ಗರ್ ಥಾಮ್ಸನ್ ಒಳಗೊಂಡಿದ್ದ ಭ್ರಷ್ಟಾಚಾರದ ಒಂದು ಭಾಗವಾಗಿದ್ದವು. ಇವು ರೈಲ್‌ರೋಡ್‌ ವ್ಯಾಪಾರ ಮಾಡಿದ್ದ ಕಂಪನಿಗಳಲ್ಲಿ ಆಂತರಿಕ ವಹಿವಾಟನ್ನು ಅಥವಾ ಗುತ್ತಿಗೆ ಪಕ್ಷಗಳು(ಕಾಂಟ್ರಾಕ್ಟಿಂಗ್ ಪಾರ್ಟಿಗಳು) "ಉಪಕಾರಕ್ಕೆ ಪ್ರತಿಯಾಗಿ ನೀಡಿದ ಕೊಡುಗೆಗಳ ಭಾಗವಾಗಿ" ಮಾಡಿದ ಪಾವತಿಗಳಾಗಿದ್ದವು ಎಂದು ಜೀವನಚರಿತ್ರೆ ಬರೆದಿರುವ ಡೇವಿಡ್ ನಾಸಾ ಬರೆದಿದ್ದಾರೆ.[] 1855ರಲ್ಲಿ, ಸ್ಕಾಟ್ ಅವರು ಕಾರ್ನೆಗೀಯವರಿಗೆ ಪೆನ್ಸಿಲ್ವೇನಿಯಾದೊಂದಿಗೆ ತನ್ನ ಸಂದೇಶವಾಹಕರನ್ನು ಕರೆದೊಯ್ಯಲು ಒಪ್ಪಂದ ಮಾಡಿಕೊಂಡಿದ್ದ ಆಡಮ್ಸ್ ಎಕ್ಸ್‌ಪ್ರೆಸ್‌ ನಲ್ಲಿ 500 ಡಾಲರ್ ಹಣಹೂಡಲು ಸಾಧ್ಯಗೊಳಿಸಿದರು. ಅವರ ತಾಯಿಯು ಕುಟುಂಬದ 700 ಡಾಲರ್‌ ಬೆಲೆಬಾಳುವ ಮನೆಯನ್ನು 500 ಡಾಲರ್‌ಗಳಿಗೆ ಒತ್ತೆಯಾಗಿಟ್ಟು ಹಣ ಹೊಂದಿಸಿಕೊಟ್ಟರು. ಆದರೆ ಕಾರ್ನೆಗೀಯವರಿಗೆ ಸ್ಕಾಟ್‌ ಅವರೊಂದಿಗೆ ಬಹಳ ಆಪ್ತ ಸಂಬಂಧವಿದ್ದಿದ್ದರಿಂದ ಈ ಅವಕಾಶ ಲಭ್ಯವಾಗಿಯಿತು.[] ಕೆಲವು ವರ್ಷಗಳ ನಂತರ, ಅವರು ಟಿ.ಟಿ. ವುಡ್‌ರಫ್‌‌ ಅವರ ಸ್ಲೀಪಿಂಗ್ ಕಾರ್ ಕಂಪನಿಯಲ್ಲಿ ಕೆಲವು ಷೇರುಗಳನ್ನು ಪಡೆದುಕೊಂಡರು.ಅವು ವುಡ್‌ರಫ್‌ ಅವರು ಸ್ಕಾಟ್ ಮತ್ತು ಥಾಮ್ಸನ್‌ ಅವರಿಗೆ ಒಂದು ಪ್ರತಿಫಲದ ಹಾಗೆ ಕೊಡುಗೆ ನೀಡಿದ್ದ ಷೇರುಗಳಾಗಿದ್ದವು. ಕಾರ್ನೆಗೀಯವರು ತಮಗೆ ಮರಳಿ ಬಂದ ಹಣವನ್ನು ರೈಲ್‌ರೋಡ್‌-ಸಂಬಂಧಿತ ಉದ್ಯಮಗಳಲ್ಲಿ ಅಂತಹ ಆಂತರಿಕ ಹೂಡಿಕೆಗಳಲ್ಲಿ ಪುನಾ ಹೂಡಿಕೆ ಮಾಡಿದರು. ಹೀಗೆ (ಕಬ್ಬಿಣ , ಸೇತುವೆಗಳು, ಮತ್ತು ರೈಲ್‌ಗಳು) ಈ ಉದ್ಯಮಗಳಲ್ಲಿ ಹೂಡಿಕೆ ಮಾಡುತ್ತ, ಕಾರ್ನೆಗೀಯವರು ನಿಧಾನವಾಗಿ ಬಂಡವಾಳವನ್ನು ಸಂಗ್ರಹಿಸಿದರು. ಅದು ನಂತರದ ಅವರ ಯಶಸ್ಸುಗಳಿಗೆ ತಳಹದಿಯಾಯಿತು. ತಮ್ಮ ನಂತರದ ವೃತ್ತಿಜೀವನದುದ್ದಕ್ಕೂ, ಕಾರ್ನೆಗೀಯವರು ರೈಲ್‌ರೋಡ್‌ಗಳಿಗೆ ರೈಲುಗಳನ್ನು ಮತ್ತು ಸೇತುವೆಗಳನ್ನು ಒದಗಿಸುವ ಉದ್ಯಮವನ್ನು ಸ್ಥಾಪಿಸುವಾಗ ಥಾಮ್ಸನ್‌ ಮತ್ತು ಸ್ಕಾಟ್‌ಅವರೊಂದಿಗೆ ಇದ್ದ ಆಪ್ತ ಸಂಬಂಧವನ್ನು ಬಳಸಿಕೊಂಡರು. ಕಾರ್ನೆಗೀಯವರು ಈ ಇಬ್ಬರನ್ನೂ ತಮ್ಮ ಉದ್ಯಮದ ಯಶಸ್ಸಿನ ಭಾಗಿಯಾಗಿಸಿಕೊಂಡಿದ್ದಾರೆ.[]

1860–1865: ಅಂತರ್ಯುದ್ಧ

ಬದಲಾಯಿಸಿ

ಅಂತರ್ಯುದ್ಧ ಕ್ಕಿಂತ ಮೊದಲು, ಕಾರ್ನೆಗೀಯವರು ವುಡ್‌ರಫ್‌ ಅವರ ಕಂಪನಿ ಮತ್ತು ಜಾರ್ಜ್‌ ಎಂ ಪುಲ್‌ಮನ್‌ ಅವರ ಕಂಪನಿಯ ನಡುವೆ ವಿಲೀನ ಸಾಧ್ಯವಾಗುವಂತೆ ಮಾಡಿದರು. ಪುಲ್‌ಮನ್ ಅವರು ಮೊದಲ ದರ್ಜೆ ಪ್ರಯಾಣಕ್ಕೆ ಸ್ಲೀಪಿಂಗ್ ಕಾರ್‌‌‌ ಗಳನ್ನು ಕಂಡುಹಿಡಿದವರು ಮತ್ತು ಇದು ದೂರದ ವ್ಯಾಪಾರ ಸಂಬಂಧಿ ಪ್ರಯಾಣಗಳಿಗೆ ಅನುಕೂಲಕರವಾಗಿತ್ತು500 miles (800 km). ಇದರಲ್ಲಿ ಹೂಡಿಕೆ ಮಾಡಿದ್ದು ವುಡ್‌ರಫ್ ಮತ್ತು ಕಾರ್ನೆಗೀಯವರಿಗೆ ಅಪಾರ ಯಶಸ್ಸನ್ನು ಹಾಗೂ ಒಳ್ಳೆಯ ಲಾಭವನ್ನು ನೀಡಿತು. ಆಗಿನ್ನೂ ಯುವಕರಾಗಿದ್ದ ಕಾರ್ನೆಗೀಯವರು ಪೆನ್ಸಿಲ್ವೇನಿಯಾದ ಟಾಮ್‌ ಸ್ಕಾಟ್‌ಗಾಗಿ ಕೆಲಸ ಮಾಡುವುದನ್ನು ಮುಂದುವರೆಸಿದರು ಮತ್ತು ತಮ್ಮ ಸೇವೆಯಲ್ಲಿ ಹಲವಾರು ಸುಧಾರಣೆಗಳನ್ನು ಪರಿಚಯಿಸಿದರು. 1861ರ ವಸಂತ ಕಾಲದಲ್ಲಿ, ಕಾರ್ನೆಗೀಯವರನ್ನು ಆಗ ಯುದ್ಧದ ಸಹಾಯಕ ಕಾರ್ಯದರ್ಶಿಯಾಗಿದ್ದ ಸ್ಕಾಟ್‌ ಅವರು ಸೇನಾಸಾರಿಗೆಯ ಉಸ್ತುವಾರಿಯಲ್ಲಿ ಮಿಲಿಟರಿ ರೈಲ್ವೇ ಮತ್ತು ಒಕ್ಕೂಟ ಸರ್ಕಾರದ ಪೂರ್ವದ ಟೆಲಿಗ್ರಾಫ್‌ ಲೈನ್‌ಗಳ ಸೂಪರಿಂಟೆಂಡೆಂಟ್ ಆಗಿ ನೇಮಿಸಿದರು. ವಾಷಿಂಗ್ಟನ್‌ ಡಿಸಿಯಲ್ಲಿ ದಂಗೆಕೋರರು ತುಂಡರಿಸಿದ್ದ ರೈಲ್ವೆ ಲೈನ್‌ಗಳನ್ನು ತೆರೆಯಲು ಕಾರ್ನೆಗೀಯವರು ಸಹಾಯ ಮಾಡಿದರು. ಜೊತೆಗೆ ಅವರು ವಾಷಿಂಗ್ಟನ್ ಡಿಸಿ ತಲುಪಬೇಕಿದ್ದ ಒಕ್ಕೂಟದ ಮೊದಲ ಪಡೆಗಳ ಉಗಿಬಂಡಿಯನ್ನು ಓಡಿಸಿದರು. ಬುಲ್‌ ರನ್‌ ನಲ್ಲಿ ಒಕ್ಕೂಟದ ಪಡೆಗಳು ಸೋತ ನಂತರ, ಸೋತ ಪಡೆಗಳ ರವಾನೆಯನ್ನು ಕಾರ್ನೆಗೀಯವರೆ ಖುದ್ದು ಮೇಲ್ವಿಚಾರಣೆ ಮಾಡಿದರು. ಅವರ ಸಂಘಟನೆಯಡಿಯಲ್ಲಿ, ಟೆಲಿಗ್ರಾಫ್ ಸೇವೆಯು ಒಕ್ಕೂಟಕ್ಕೆ ದಕ್ಷ ಸೇವೆಯನ್ನು ನೀಡಿತು ಮತ್ತು ನಂತರದ ವಿಜಯದಲ್ಲಿ ಸಾಕಷ್ಟು ಸಹಾಯವನ್ನು ಮಾಡಿತು. ಕಾರ್ನೆಗೀಯವರು ತಮ್ಮನ್ನು ಸುತ್ತಿಕೊಂಡಿದ್ದ ಟೆಲಿಗ್ರಾಫ್‌ ತಂತಿಯೊಂದರಿಂದ ಬಿಡಿಸಕೊಂಡ ನಂತರ ಕೆನ್ನೆಯ ಮೇಲೆ ಆದ ಗಾಯವನ್ನು ತೋರಿಸುತ್ತ, 'ಯುದ್ಧದ ಮೊದಲ ಅಪಘಾತ' ಎಂದು ತಮಾಶೆ ಮಾಡುತ್ತಿದ್ದರು. ಪಿತೂರಿಯ ಸೋಲಿಗೆ ಅಪಾರ ಪ್ರಮಾಣದ ಯುದ್ಧ ಸಾಮಗ್ರಿಗಳ ಪೂರೈಕೆ ಮತ್ತು ಸರಕುಗಳನ್ನು ಸಾಗಿಸಲು ರೈಲ್‌ರೋಡ್‌ಗಳ (ಹಾಗೂ ಟೆಲಿಗ್ರಾಫ್‌ ಲೈನ್‌ಗಳ) ಅಗತ್ಯವಿತ್ತು. ಅಮೆರಿಕನ್ನರ ಯಶಸ್ಸಿಗೆ ಉದ್ಯಮಗಳು ಹೇಗೆ ಅವಿಭಾಜ್ಯ ಅಂಗವಾಗಿವೆ ಎಂಬುದನ್ನು ಯುದ್ಧವು ನಿರೂಪಿಸಿತು. 1864ರಲ್ಲಿ, ಕಾರ್ನೆಗೀಯವರು 40,000 ಡಾಲರ್ ಹಣವನ್ನು ವೆನಗೋ ಕೌಂಟಿ, ಪೆನ್ಸಿಲ್ವೇನಿಯಾದಲ್ಲಿ ಆಯಿಲ್‌ ಕ್ರೀಕ್‌ನ ಸ್ಟೋರಿ ಫಾರ್ಮ್‌ನ ಮೇಲೆ ಹೂಡಿಕೆ ಮಾಡಿದರು. ಒಂದೇ ವರ್ಷದಲ್ಲಿ, ಫಾರ್ಮ್‌ 1,000,000 ಡಾಲರ್‌ ನಗದು ಡಿವಿಡೆಂಡ್ ರೂಪದಲ್ಲಿ ಗಳಿಸಿತು ಮತ್ತು ತೈಲ ಬಾವಿಗಳಿಂದ ಪೆಟ್ರೋಲಿಯಂ ಅನ್ನು ಲಾಭದಾಯಕವಾಗಿ ಮಾರಲು ಸಾಧ್ಯವಾಯಿತು ಕಬ್ಬಿಣದ ಉತ್ಪನ್ನಗಳಾದ ಗನ್‌ಬೋಟ್‌ಗಳಿಗೆ ಯುದ್ಧಕವಚಗಳು, ಕ್ಯಾನನ್‌ಗಳು ಮತ್ತು ಶೆಲ್‌ಗಳು, ಇನ್ನಿತರ ಕೈಗಾರಿಕಾ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿತು, ಇದರಿಂದಾಗಿ ಪಿಟ್ಸ್‌ಬರ್ಗ್‌ ಯುದ್ಧಕಾಲದ ತಯಾರಿಕೆಯ ಕೇಂದ್ರವಾಯಿತು. ಕಾರ್ನೆಗೀ ಬೇರೆಯವರೊಂದಿಗೆ ಸೇರಿ ಒಂದು ಸ್ಟೀಲ್ ರೋಲಿಂಗ್ ಮಿಲ್ ಅನ್ನು ಮತ್ತು ಉಕ್ಕಿನ ಉತ್ಪಾದನೆ ಫ್ಯಾಕ್ಟರಿಯನ್ನು ಆಂರಂಭಿಸಿದರು. ಈ ಉದ್ಯಮವನ್ನು ಉತ್ತಮ ರೀತಿಯಲ್ಲಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು ಅವರ ಅದೃಷ್ಟದ ಬಾಗಿಲು ತೆರೆಯಲು ಕಾರಣವಾಯಿತು. ಯುದ್ಧಕ್ಕಿಂತ ಪೂರ್ವದಲ್ಲಿಯೂ ಕಾರ್ನೆಗೀಯವರು ಕಬ್ಬಿಣದ ಉದ್ಯಮದಲ್ಲಿ ಕೆಲವು ಹೂಡಿಕೆಗಳನ್ನು ಮಾಡಿದ್ದರು. ಯುದ್ಧಾನಂತರ, ಕಾರ್ನೆಗೀಯವರು ರೈಲ್‌ರೋಡ್ಸ್‌ ಕೆಲಸವನ್ನು ಬಿಟ್ಟು ತಮ್ಮೆಲ್ಲ ಶಕ್ತಿಯನ್ನು ಕಬ್ಬಿಣಉತ್ಪನ್ನಗಳ ಉದ್ಯಮಕ್ಕೆ ವಿನಿಯೋಗಿಸಿದರು. ಕಾರ್ನೆಗೀಯವರು ಹಲವಾರು ಕಬ್ಬಿಣದ ಫ್ಯಾಕ್ಟರಿಗಳನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡಿದರು. ಪಿಟ್ಸ್‌ಬರ್ಗ್‌ನಲ್ಲಿ ಕೀಸ್ಟೋನ್‌ ಬ್ರಿಜ್ ವರ್ಕ್ಸ್ ಮತ್ತು ಯೂನಿಯನ್ ಐರನ್‌ವರ್ಕ್ಸ್ ಸ್ಥಾಪಿಸಿದರು. ಅವರು ಪೆನ್ಸಿಲ್ವೇನಿಯಾ ರೈಲ್‌ರೋಡ್ ಕಂಪನಿಯ ಕೆಲಸವನ್ನು ಬಿಟ್ಟಿದ್ದರೂ ಕೂಡ, ಅವರು ಅಲ್ಲಿಯ ಆಡಳಿತ ಮಂಡಳಿಯೊಡನೆ, ಥಾಮಸ್ ಎ ಸ್ಕಾಟ್ ಮತ್ತು ಕೆ ಎಡ್ಗರ್ ಥಾಮ್ಸನ್‌ ಅವರೊಂದಿಗೆ ತುಂಬ ಹತ್ತಿರದ ಸಂಬಂಧ ಹೊಂದಿದ್ದನ್ನು ಹಾಗೆಯೇ ಮುಂದುವರೆಸಿದರು. ಅವರು ಈ ಇಬ್ಬರೊಂದಿಗಿನ ತಮ್ಮ ಸಂಬಂಧವನ್ನು ತಮ್ಮ ಕೀಸ್ಟೋನ್ ಬ್ರಿಜ್ ಕಂಪನಿ ಹಾಗೂ ತಮ್ಮ ಐರನ್‌ವರ್ಕ್ಸ್‌ನಲ್ಲಿ ತಯಾರಾದ ರೈಲುಗಳಿಗೆ ಒಪ್ಪಂದವನ್ನು ಪಡೆದುಕೊಳ್ಳಲು ಬಳಸಿಕೊಂಡರು. ತಮ್ಮ ಉದ್ಯಮದಲ್ಲಿ ಸ್ಕಾಟ್ ಮತ್ತು ಥಾಮ್ಸನ್‌ ಅವರಿಗೆ ಷೇರುಗಳನ್ನು ನೀಡಿದರು ಮತ್ತು ಪೆನ್ಸಿಲ್ವೇನಿಯಾ ಕಂಪನಿಯು ಅವರ ಅತ್ಯುತ್ತಮ ಗ್ರಾಹಕನಾಗಿತ್ತು. ಕಾರ್ನೆಗೀಯವರು ತಮ್ಮ ಮೊದಲ ಉಕ್ಕಿನ ಘಟಕವನ್ನು ಸ್ಥಾಪಿಸಿದಾಗ, ಅದನ್ನು ಥಾಮ್ಸನ್‌ ಅವರ ಹೆಸರಿನಲ್ಲಿ ಆರಂಭಿಸಿದರು. ಒಳ್ಳೆಯ ವ್ಯವಹಾರ ಪ್ರಜ್ಞೆಯಿದ್ದ ಕಾರ್ನೆಗೀಯವರು ಆಕರ್ಷಣೆ ಮತ್ತು ಸಾಹಿತ್ಯಕ ಜ್ಞಾನವನ್ನೂ ಹೊಂದಿದ್ದರು. ಅವರನ್ನು ಅನೇಕ ಸಾಮಾಜಿಕ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಿದ್ದರು ಮತ್ತು ಅವುಗಳನ್ನು ಆತ ತಮ್ಮ ಸ್ವಂತ ಲಾಭಕ್ಕೆ ಚೆನ್ನಾಗಿ ಬಳಸಿಕೊಂಡರು.[೧೦]

 
ಕಾರ್ನೆಗೀ, ಕ್ರಿ.ಶ. 1878ರಲ್ಲಿ

ಕಾರ್ನೆಗೀ ಕೇವಲ ಹಣ ಮಾಡುವುದಕ್ಕೆ ಬದಲಿಗೆ ತಮ್ಮ ಸಂಪತ್ತನ್ನು ಬೇರೆಯವರಿಗೆ ಸಹಾಯ ಮಾಡಲು ಬಳಸುತ್ತಿದ್ದರು. ಅವರು ತಮಗೆ ವಾರ್ಷಿಕ 50,000 ಡಾಲರ್‌ಗಿಂತ ಹೆಚ್ಚಿನ ಆದಾಯವನ್ನು ಗಳಿಸುವ ಉದ್ದೇಶವಿಲ್ಲ ಎಂದು ಬರೆದಿದ್ದರು.

I propose to take an income no greater than $50,000 per annum! Beyond this I need ever earn, make no effort to increase my fortune, but spend the surplus each year for benevolent purposes! Let us cast aside business forever, except for others. Let us settle in Oxford and I shall get a thorough education, making the acquaintance of literary men. I figure that this will take three years active work. I shall pay especial attention to speaking in public. We can settle in London and I can purchase a controlling interest in some newspaper or live review and give the general management of it attention, taking part in public matters, especially those connected with education and improvement of the poorer classes. Man must have an idol and the amassing of wealth is one of the worst species of idolatry! No idol is more debasing than the worship of money! Whatever I engage in I must push inordinately; therefore should I be careful to choose that life which will be the most elevating in its character. To continue much longer overwhelmed by business cares and with most of my thoughts wholly upon the way to make more money in the shortest time, must degrade me beyond hope of permanent recovery. I will resign business at thirty-five, but during these ensuing two years I wish to spend the afternoons in receiving instruction and in reading systematically!

1880–1900: ವಿದ್ವಾಂಸ ಮತ್ತು ಹೋರಾಟಗಾರ

ಬದಲಾಯಿಸಿ

ಕಾರ್ನೆಗೀ ತಮ್ಮ ಉದ್ಯಮದ ವೃತ್ತಿಜೀವನವನ್ನು ಮುಂದುವರೆಸಿದರು; ತಮ್ಮ ಕೆಲವು ಸಾಹಿತ್ಯಕ ಉದ್ದೇಶಗಳನ್ನು ಈಡೇರಿಸಿಕೊಂಡರು. ಅವರು ಇಂಗ್ಲಿಶ್ ಕವಿ ಮ್ಯಾಥ್ಯೂ ಅರ್ನಾಲ್ಡ್‌‌ ಮತ್ತು ಇಂಗ್ಲಿಶ್ ತತ್ವಶಾಸ್ತ್ರಜ್ಞ ಹರ್ಬರ್ಟ್‌ ಸ್ಪೆನ್ಸರ್ ಗೆ ಗೆಳೆಯರಾಗಿದ್ದರು. ಜೊತೆಗೆ ಬಹುತೇಕ ಅಮೆರಿಕದ ಅಧ್ಯಕ್ಷ[೧೧] ರೊಂದಿಗೆ, ರಾಜತಾಂತ್ರಿಕರೊಡನೆ, ಪ್ರಮುಖ ಲೇಖಕರೊಡನೆ ಸಂಪರ್ಕ ವ್ಯವಹಾರವಿಟ್ಟುಕೊಂಡು ಸಂಬಂಧ ಬೆಳೆಸಿದ್ದರು.[೧೨] ಕಾರ್ನೆಗೀ 1879ರಲ್ಲಿ ತಮ್ಮ ತವರೂರು ಡನ್‌ಫರ್‌ಮ್ಲಿನ್‌ ಜನತೆಗಾಗಿ ಸಾಕಷ್ಟು ವಿಶಾಲವಾದ ಈಜುಕೊಳಗಳನ್ನು ನಿರ್ಮಿಸಿದರು. ಅದರ ನಂತರದ ವರ್ಷದಲ್ಲಿ ಡನ್‌ಫರ್‌ಮ್ಲಿನ್‌ನಲ್ಲಿ ಉಚಿತ ಗ್ರಂಥಾಲಯ ನಿರ್ಮಾಣಕ್ಕಾಗಿ ಕಾರ್ನೆಗೀಯವರು 40,000 ಡಾಲರ್‌ಗಳನ್ನು ನೀಡಿದರು. 1884ರಲ್ಲಿ, ಅವರು ಬೆಲ್ಲೆವ್ಯು ಹಾಸ್ಪಿಟಲ್ ಆಪ್ ಮೆಡಿಕಲ್ ಕಾಲೇಜ್(ಈಗ ನ್ಯೂಯಾರ್ಕ್‌ ಯುನಿವರ್ಸಿಟಿ ಆಫ್ ಮೆಡಿಕಲ್ ಸೆಂಟರ್‌ನ ಭಾಗವಾಗಿದೆ)ಗೆ ಹಿಸ್ಟಾಲಾಜಿಕಲ್ ಪ್ರಯೋಗಾಲಯವನ್ನು ನಿರ್ಮಿಸಲು 50,000 ಡಾಲರ್‌ ದೇಣಿಗೆಯನ್ನು ನೀಡಿದರು, ಅದನ್ನು ಈಗ ಕಾರ್ನೆಗೀ ಲ್ಯಾಬೋರೇಟರಿ ಎಂದು ಕರೆಯುತ್ತಾರೆ. 1881ರಲ್ಲಿ, ಕಾರ್ನೆಗೀಯವರು 70 ವರ್ಷದ ತಾಯಿಯನ್ನೂ ಕರೆದುಕೊಂಡು, ಇಡೀ ಕುಟುಂಬವನ್ನು ಬ್ರಿಟನ್ನಿಗೆ ಪ್ರವಾಸಕ್ಕೆ ಕರೆದುಕೊಂಡು ಹೋದರು. ಅವರು ಕೋಚ್‌ನಲ್ಲಿ ಸ್ಕಾಟ್‌ಲೆಂಡ್‌ನಲ್ಲಿ ಪ್ರವಾಸ ಮಾಡಿದರು ಮತ್ತು ದಾರಿಯಲ್ಲಿ ಅವರಿಗೆ ಹಲವಾರು ಕಡೆ ಸ್ವಾಗತವನ್ನೂ ನೀಡಲಾಯಿತು. ಇಡೀ ಪ್ರವಾಸದ ಮಹತ್ವದ ಘಟನೆ ಎಂದರೆ ಅವರು ಅಪಾರ ಯಶಸ್ಸು ಗಳಿಸಿ ಡನ್‌ಫರ್‌ಮ್ಲಿನ್‌ಗೆ ಮರಳಿದ್ದು. ಅಲ್ಲಿ ಕಾರ್ನೆಗೀಯವರು ದೇಣಿಗೆ ನೀಡಿದ ಗ್ರಂಥಾಲಯಕ್ಕೆ ಅವರ ತಾಯಿಯವರು ಅಡಿಗಲ್ಲು ಹಾಕಿದರು. ಬ್ರಿಟಿಶ್ ಸಮಾಜವನ್ನು ಕುರಿತು ಕಾರ್ನೆಗೀಯವರು ಟೀಕಿಸಿದ್ದರೂ, ಅದು ಇಷ್ಟವಿಲ್ಲ ಎಂದಾಗಿರಲಿಲ್ಲ. ಪ್ರತಿಯಾಗಿ, ಕಾರ್ನೆಗೀಯವರ ಮಹತ್ವಾಕಾಂಕ್ಷೆಗಳಲ್ಲಿ ಒಂದು ಎಂದರೆ ಇಂಗ್ಲಿಶ್ ಮಾತನಾಡುವ ಜನರ ಮದ್ಯೆ ವೇಗವರ್ಧಕ (ಕೆಟಾಲಿಸ್ಟ್)ದ ಹಾಗೆ ಕೆಲಸ ಮಾಡುತ್ತ, ಆಪ್ತ ಬಾಂಧವ್ಯ ಹುಟ್ಟುಹಾಕುವುದಾಗಿತ್ತು. ಆ ಸುಮಾರಿಗೆ, 1880ರ ಆರಂಭದಲ್ಲಿ, ಅವರು ಇಂಗ್ಲೆಂಡ್‌ನಲ್ಲಿ ಹಲವಾರು ಪತ್ರಿಕೆಗಳನ್ನು ಕೊಂಡುಕೊಂಡರು. ಆ ಎಲ್ಲ ಪತ್ರಿಕೆಗಳಲ್ಲಿಯೂ ರಾಜಪ್ರಭುತ್ವವನ್ನು ಕೊನೆಗೊಳಿಸಿ, "ಬ್ರಿಟಿಶ್ ರಿಪಬ್ಲಿಕ್‌'ನ ಸ್ಥಾಪನೆಯ ಪರ ವಕಾಲತು ಇರುತ್ತಿತ್ತು. ಕಾರ್ನೆಗೀಯವರ ಆಕರ್ಷಕ ವ್ಯಕ್ತಿತ್ವ ಮತ್ತು ಅದರೊಂದಿಗೆ ಅವರ ಅಪಾರ ಸಂಪತ್ತು ಸೇರಿ, ಅವರಿಗೆ ಆಗಿನ ಬ್ರಿಟನ್‌ ಪ್ರಧಾನ ಮಂತ್ರಿ ವಿಲಿಯಂ ಎವರ್ಟ್‌ ಗ್ಲಾಡ್‌ಸ್ಟೋನ್ ಸೇರಿದಂತೆ ಹಲವಾರು ಪ್ರಮುಖ ಬ್ರಿಟಿಶ್ ಗೆಳೆಯರಿದ್ದರು. 1886ರಲ್ಲಿ, ಆಂಡ್ಯ್ರೂ ಕಾರ್ನೆಗೀಯವರ ಕಿರಿಯ ತಮ್ಮ ಥಾಮಸ್ ಕೇವಲ 43ರ ಹರೆಯದಲ್ಲಿ ತೀರಿಕೊಂಡರು. ಉದ್ಯಮದಲ್ಲಿ ಅವರ ಯಶಸ್ಸು ಹಾಗೆಯೇ ಮುಂದುವರೆದಿತ್ತು. ಉಕ್ಕಿನ ಘಟಕಗಳ ಸ್ವಾಮ್ಯ ಹೊಂದಿದ್ದ ಕಾರ್ನೆಗೀಯವರು ಲೇಕ್‌ ಸುಪೀರಿಯರ್ ಸುತ್ತಮುತ್ತಲಿನಲ್ಲಿದ್ದ ಕಬ್ಬಿಣದ ಅದಿರು ಪ್ರದೇಶವನ್ನು ಬಹಳ ಕಡಿಮೆ ಬೆಲೆಗೆ ಖರೀದಿಸಿದರು. ಅದೇ ವರ್ಷ ಕಾರ್ನೆಗೀಯವರು ವಿವಾದಕ್ಕೆ ಸಿಕ್ಕಿಕೊಂಡ ವ್ಯಕ್ತಿಯಾದರು. ಬ್ರಿಟನ್‌ಗೆ ಪ್ರವಾಸ ಹೋಗಿಬಂದ ನಂತರ, ಅವರು ತಮ್ಮ ಅನುಭವಗಳ ಕುರಿತು ಆನ್ ಅಮೆರಿಕಾ ಫೋರ್-ಇನ್‌-ಹ್ಯಾಂಡ್ ಬ್ರಿಟನ್ ಎಂಬ ಕೃತಿಯನ್ನು ರಚಿಸಿದರು. ತಮ್ಮ ಹಲವಾರು ವ್ಯಾಪಾರವಹಿವಾಟನ್ನು ಕ್ರಿಯಾಶೀಲವಾಗಿ ಮುಂದುವರೆಸಿಕೊಂಡು ಹೋಗುವ ಮಧ್ಯೆಯೇ, ಕಾರ್ನೆಗೀಯವರು ಅನೇಕ ನಿಯತಕಾಲಿಕಗಳಿಗೆ ನಿಯಮಿತವಾಗಿ ಬರೆಯುತ್ತಿದ್ದರು. ಅವುಗಳಲ್ಲಿ ಗಮನಾರ್ಹವಾದವು ಎಂದರೆ ಜೇಮ್ಸ್‌ ನೊವೆಲ್ಸ್‌ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ನೈಂಟೀನ್ತ್‌ ಸೆಂಚುರಿ , ಲಾಯ್ಡ್‌ ಬ್ರೈಸ್‌ ಅವರ ಸಂಪಾದಕತ್ವದ ನಾರ್ತ್‌ ಅಮೆರಿಕನ್ ರಿವ್ಯೂ ಪತ್ರಿಕೆಗಳು. 1886ರಲ್ಲಿ, ಕಾರ್ನೆಗೀಯವರು ತಮ್ಮ ಅತ್ಯಂತ ಕ್ರಾಂತಿಕಾರಕ ಕೃತಿಯಾದ ಟ್ರೈಂಫಂಟ್ ಡೆಮಾಕ್ರಸಿ ರಚಿಸಿದರು. ತಮ್ಮ ವಾದವನ್ನು ಮಂಡಿಸಲು ಹಲವಾರು ಅಂಕಿಸಂಖ್ಯೆಗಳನ್ನು ಬಳಸಿಕೊಂಡ ಈ ಕೃತಿಯು, ಅಮೆರಿಕಾ ಗಣತಂತ್ರ(ರಿಪಬ್ಲಿಕ್)ವು ಸರ್ಕಾರದ ಒಂದು ವ್ಯವಸ್ಥೆಯಾಗಿದ್ದು, ಅದು ಬ್ರಿಟಿಶ್ ರಾಜತ್ವ ವ್ಯವಸ್ಥೆಗಿಂತಲೂ ಎಲ್ಲ ರೀತಿಯಿಂದ ಶ್ರೇಷ್ಠವಾಗಿದೆ ಎಂಬ ಕಾರ್ನೆಗೀಯವರ ದೃಷ್ಟಿಕೋನವನ್ನು ಪ್ರತಿಬಿಂಬಿಸಿತು. ಈ ಕೃತಿಯು ಅಮೆರಿಕಾದ ಪ್ರಗತಿಯ ಕುರಿತು ತುಂಬ ಸಮರ್ಥನೀಯವಾದ ಮತ್ತು ಆದರ್ಶದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತ, ಬ್ರಿಟಿಶ್ ರಾಜ ಕುಟುಂಬವನ್ನು ಟೀಕಿಸಿತು. ಪುಸ್ತಕದ ಮುಖಪುಟದಲ್ಲಿ ತುದಿಯಲ್ಲಿ ಇಟ್ಟ ರಾಜಕಿರೀಟದ ಮತ್ತು ಮುರಿದ ರಾಜದಂಡದ ಚಿತ್ರವಿತ್ತು. ಈ ಕೃತಿಯು ಬ್ರಿಟನ್ನಿನಲ್ಲಿ ಸಾಕಷ್ಟು ವಿವಾದವನ್ನು ಹುಟ್ಟುಹಾಕಿತು. ಆದರೆ ಈ ಕೃತಿಯು ಅನೇಕ ಅಮೆರಿಕನ್ನರಲ್ಲಿ ತಮ್ಮ ದೇಶದ ಆರ್ಥಿಕ ಪ್ರಗತಿಯ ಕುರಿತು ಮೆಚ್ಚುಗೆಯನ್ನು ಹುಟ್ಟುಹಾಕಿತು ಮತ್ತು ಸುಮಾರು 40,000 ಪ್ರತಿಗಳು ಖರ್ಚಾದವು. ಇವುಗಳಲ್ಲಿ ಬಹುತೇಕ ಯು.ಎಸ್‌.ನಲ್ಲಿಯೇ ಮಾರಾಟವಾಯಿತು. 1889ರಲ್ಲಿ, ಕಾರ್ನೆಗೀಯವರು "ವೆಲ್ತ್‌ " ಅನ್ನು ನಾರ್ತ್‌ ಅಮೆರಿಕನ್‌ ರಿವ್ಯೂ ದ ಜೂನ್ ಸಂಚಿಕೆಯಲ್ಲಿ ಪ್ರಕಟಿಸಿದರು. ಇದನ್ನು ಓದಿದ ನಂತರ, ಗ್ಲಾಡ್‌ಸ್ಟೋನ್‌ ಅವರು ಅದನ್ನು ಇಂಗ್ಲೆಂಡ್‌ನಲ್ಲಿಯೂ ಪ್ರಕಟಿಸಬೇಕೆಂದು ಕೇಳಿಕೊಂಡರು, ಅಲ್ಲಿ ಪಾಲ್‌ ಮಾಲ್‌ ಗೆಜೆಟ್‌ ನಲ್ಲಿ "ದಿ ಗಾಸ್ಪೆಲ್ ಆಫ್ ದಿ ವೆಲ್ತ್‌' ಎಂಬ ಶೀರ್ಷಿಕೆಯಿಂದ ಪ್ರಕಟವಾಯಿತು. ಈ ಲೇಖನವು ಬಹಳಷ್ಟು ಚರ್ಚೆಗೆ ಒಳಗಾಯಿತು. ಶ್ರೀಮಂತ ಕೈಗಾರಿಕೋದ್ಯಮಿಯ ಜೀವನವು ಎರಡು ಭಾಗಗಳಿಂದ ಕೂಡಿರಬೇಕು ಎಂದು ಕಾರ್ನೆಗೀ ಪ್ರತಿಪಾದಿಸಿದರು. ಮೊದಲನೆಯ ಭಾಗ ಎಂದರೆ ಸಂಪತ್ತನ್ನು ಗಳಿಸಿ, ಸಂಗ್ರಹಿಸುವುದು. ಎರಡನೆಯ ಭಾಗವೆಂದರೆ ಈ ಸಂಪತ್ತನ್ನು ಒಳ್ಳೆಯ ಕಾಣಗಳಿಗಾಗಿ ಸೂಕ್ತರೀತಿಯಲ್ಲಿ ಹಂಚುವುದು. ಬದುಕನ್ನು ಅರ್ಥಪೂರ್ಣಗೊಳಿಸಲು ಲೋಕೋಪಕಾರವು ಬಹುಮುಖ್ಯ. ಕಾರ್ನೆಗೀ ಬಹುದೊಡ್ಡ ಪತ್ರಕರ್ತರೆಂದೂ ಹೆಸರಾಗಿದ್ದಾರೆ. ಪತ್ರಿಕೆಗಳು ಮತ್ತು ಅವುಗಳ ಸಂಪಾದಕರಿಗೆ ನಿರಂತರವಾಗಿ ತಮ್ಮ ಅನುಭವಗಳಿಂದ ಬರೆಯುತ್ತಿದ್ದರಿಂದ ಅವರು ಒಳ್ಳೆಯ ಪತ್ರಕರ್ತರಾಗಿದ್ದರು. ಪತ್ರಿಕೆಗಳನ್ನು ಓದುವ ಅವರ ಹವ್ಯಾಸವು ಅವರ ಬಾಲ್ಯದಿಂದಲೇ ಬೆಳೆದುಬಂದಿತ್ತು.[೧೩] ಅವರು ಪ್ರವಾಸದ ಕುರಿತೂ ಮೂರು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಒಂದು "ರೌಂಡ್ ದಿ ವರ್ಲ್ಡ್" ಅನ್ನು ಅವರು ಇಂಗ್ಲೆಂಡ್ ಮತ್ತು ಸ್ಕಾಟ್‌ಲ್ಯಾಂಡ್ ಪ್ರವಾಸ ಮಾಡುವಾಗ ಬರೆದರು.[೧೪] 1898ರಲ್ಲಿ, ಕಾರ್ನೆಗೀಯವರು ಫಿಲಿಪ್ಪೀನ್ಸ್ ಸ್ವಾತಂತ್ರ್ಯಕ್ಕಾಗಿ ವ್ಯವಸ್ಥೆ ಮಾಡಲು ಪ್ರಯತ್ನಿಸಿದರು. ಸ್ಪಾನಿಶ್ ಅಮೆರಿಕನ್ ಯುದ್ಧ ಅಂತ್ಯವನ್ನು ಸಮೀಪಿಸುತ್ತಿರುವಂತೆ, ಸಂಯುಕ್ತ ಸಂಸ್ಥಾನವು ಫಿಲಿಪ್ಪೀನ್ಸ್‌ಅನ್ನು ಸ್ಪೈನ್‌ನಿಂದ 20 ಮಿಲಿಯನ್ ಅಮೆರಿಕನ್ ಡಾಲರ್‌ (ಯುಎಸ್‌ಡಿ) ಗೆ ಕೊಂಡುಕೊಂಡಿತು.ಸಂಯುಕ್ತ ಸಂಸ್ಥಾನದ ಸಾರ್ವಭೌಮತ್ವವನ್ನು ತಾವು ಅರ್ಥ ಮಾಡಿಕೊಂಡಿದ್ದಕ್ಕೆ ಪೂರಕವಾಗಿ ಎಂಬಂತೆ , ಕಾರ್ನೆಗೀ ಸಂಯುಕ್ತ ಸಂಸ್ಥಾನದಿಂದ ತಮ್ಮ ಸ್ವಾತಂತ್ರ್ಯವನ್ನು ಕೊಂಡುಕೊಳ್ಳಲು ಫಿಲಿಪ್ಪೀನ್ಸಿನ ಜನತೆಗೆ ವೈಯಕ್ತಿಕವಾಗಿ 20 ಮಿಲಿಯನ್ ಯುಎಸ್‌ ಡಾಲರ್‌ ನೀಡಲು ಮುಂದಾದರು.[೧೫] ಆದರೆ ಇದರಿಂದ ಏನೂ ಆಗಲಿಲ್ಲ ಮತ್ತು ಫಿಲಿಪ್ಪಿನ್‌-ಅಮೆರಿಕನ್ ಯುದ್ಧ ನಡೆಯಿತು. ಕಾರ್ನೆಗೀಯವರು ಸಂಯುಕ್ತ ಸಂಸ್ಥಾನವು ಕ್ಯೂಬಾವನ್ನು ಆಕ್ರಮಿಸಿಕೊಂಡಿದ್ದನ್ನು ವಿರೋಧಿಸಿದರು. ಇದರಲ್ಲಿ ಅವರು ಇನ್ಣೂ ಅನೇಕ ಕನ್ಸ್‌ರ್ವೇಟಿವ್‌ಗಳೊಡನೆ ಸೇರಿಕೊಂಡು ಆಂಟಿ ಇಂಪೆರಿಯಲಿಸ್ಟ್ ಲೀಗ್ (ಸಾಮ್ರಾಜ್ಯಶಾಹಿ ವಿರೋಧಿ ಬಣ) ಹುಟ್ಟುಹಾಕಿದರು. ಅದರಲ್ಲಿ ಸಂಯುಕ್ತ ಸಂಸ್ಥಾನದ ಹಿಂದಿನ ಅಧ್ಯಕ್ಷರಾದ ಗ್ರೋವರ್ ಕ್ಲೀವ್‌ಲ್ಯಾಂಡ್ ಮತ್ತು ಬೆಂಜಮಿನ್ ಹ್ಯಾರಿಸನ್ , ಮತ್ತು ಸಾಹಿತ್ಯಕವಾಗಿ ಪ್ರಸಿದ್ಧ ವ್ಯಕ್ತಿಗಳಾದ ಮಾರ್ಕ್‌ ಟ್ವೈನ್ ಇನ್ನಿತರರು ಇದ್ದರು.[೧೬][೧೭][೧೮]

ಉದ್ಯಮಿ

ಬದಲಾಯಿಸಿ

1885–1900: ಉಕ್ಕಿನ ಸಾಮ್ರಾಜ್ಯ

ಬದಲಾಯಿಸಿ

ಕಾರ್ನೆಗೀ ಉಕ್ಕಿನ ಉದ್ಯಮದಲ್ಲಿ ತಮ್ಮ ಅದೃಷ್ಟವನ್ನು ಕಂಡುಕೊಂಡರು. ಅವರು ಅತ್ಯಧಿಕ ಸಂಖ್ಯೆಯ ಕಬ್ಬಿಣ ಮತ್ತು ಉಕ್ಕಿನ ಘಟಕಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದರು. ಸಂಯುಕ್ತ ಸಂಸ್ಥಾನದಲ್ಲಿ ವ್ಯಕ್ತಿಯೊಬ್ಬನ ಒಡೆತನದಲ್ಲಿ ಇಷ್ಟು ಕಂಪನಿಗಳಿದ್ದಿದ್ದು ಅದೇ ಮೊದಲಾಗಿತ್ತು. ಅವರ ಎರಡು ಬಹುದೊಡ್ಡ ಆವಿಷ್ಕಾರ ಎಂದರೆ ರೈಲ್‌ರೋಡ್ ಲೈನ್‌ಗಳಿಗಾಗಿ ಉಕ್ಕಿನ ರೈಲುಗಳನ್ನು ಅಗ್ಗದ ಮತ್ತು ದಕ್ಷ ರೀತಿಯಲ್ಲಿ ಬೃಹತ್ ಉತ್ಪಾದನೆಯಲ್ಲಿ ತೊಡಗಿದ್ದುದ್ದು. ಎರಡನೆಯದು ಎಂದರೆ ಕಚ್ಚಾ ವಸ್ತುಗಳ ಎಲ್ಲ ಪೂರೈಕೆದಾರರನನ್ನು ವರ್ಟಿಕಲ್ ಇಂಟಗ್ರೇಶನ್‌ ಮಾಡಿದ್ದು. 1880ರ ಕೊನೆಯ ಭಾಗದಲ್ಲಿ, ಕಾರ್ನೆಗೀ ಸ್ಟೀಲ್ ಪಿಗ್ ಐರನ್ , ಉಕ್ಕಿನ ರೈಲ್‌ಗಳು ಮತ್ತು ಕೋಕ್ ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಉತ್ಪಾದಕ ಕಂಪನಿಯಾಗಿತ್ತು. ಪ್ರತಿದಿನ ಸುಮಾರು 2000 ಟನ್‌ಗಳಷ್ಟು ಪಿಗ್ ಮೆಟಲ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿತ್ತು. 1888ರಲ್ಲಿ, ಕಾರ್ನೆಗೀಯವರು ತಮ್ಮ ಪ್ರತಿಸ್ಪರ್ಧಿ ಹೋಮ್‌ಸ್ಟೆಡ್ ಸ್ಟೀಲ್ ವರ್ಕ್ಸ್ ಅನ್ನು ಕೊಂಡುಕೊಂಡರು. ಅದು ಅತ್ಯಂತ ವಿಶಾಲವಾದ ಘಟಕವಾಗಿದ್ದು, ಕಲ್ಲಿದ್ದಲು ಮತ್ತು ಕಬ್ಬಿಣದ ಅದಿರು ಕ್ಷೇತ್ರವನ್ನು, 425-ಮೈಲಿ (685 ಕಿ.ಮೀ.) ಉದ್ದದ ರೈಲ್ವೆಯನ್ನು ಹಾಗೂ ಸರೋವರದಲ್ಲಿ ಓಡಾಡುವ ಉಗಿಹಡುಗುಗಳ (ಲೇಕ್ ಸ್ಟೀಮ್‌ಶಿಪ್‌) ಒಂದು ಲೈನ್‌ ಅನ್ನು ಉಪಘಟಕಗಳಾಗಿ ಹೊಂದಿತ್ತು. ಕಾರ್ನೆಗೀ ತಮ್ಮ ಆಸ್ತಿಗಳನ್ನು ಮತ್ತು ತಮ್ಮ ಜೊತೆಗಿನವರ/ಸಹಕಂಪನಿಗಳ ಆಸ್ತಿಗಳನ್ನು 1892ರಲ್ಲಿ ಒಟ್ಟು ಸೇರಿಸಿ, ಕಾರ್ನೆಗೀ ಸ್ಟೀಲ್ ಕಂಪನಿ ಯನ್ನು ಆರಂಭಿಸಿದರು. 1889ರ ಸುಮಾರಿಗೆ, ಯು.ಎಸ್‌.ನ ಸ್ಟೀಲ್ ಉತ್ಪಾದನೆ ಬ್ರಿಟನ್ನಿನ ಉತ್ಪಾದನೆಯನ್ನು ಮೀರಿಸಿತು ಮತ್ತು ಅದರಲ್ಲಿ ಬಹಭಾಗ ಕಾರ್ನೆಗೀಯವರ ಒಡೆತನದಲ್ಲಿತ್ತು. ಕಾರ್ನೆಗೀಯವರ ಉಕ್ಕಿನ ಸಾಮ್ರಾಜ್ಯವು ಈ ಕೆಳಗಿನ ಕಂಪನಿಗಳನ್ನು ಒಳಗೊಂಡಿತ್ತು : ಜೆ. ಎಡ್ಗರ್‌ ಸ್ಟೀಲ್ ವರ್ಕ್ಸ್ , (ಕಾರ್ನೆಗೀಯವರ ಮೊದಲಿನ ಮೇಲಾಧಿಕಾರಿ ಮತ್ತು ಪೆನ್ಸಿಲ್ವೇವೇನಿಯಾ ರೈಲ್‌ರೋಡ್‌ನ ಅಧ್ಯಕ್ಷ ಜಾನ್ ಎಡ್ಗರ್ ಥಾಮ್ಸನ್ ಅವರ ಗೌರವಾರ್ಥ ಹೆಸರಿಸಿದ್ದು), ಪಿಟ್ಸ್‌ಬರ್ಗ್‌ ಬೆಸೆಮರ್ ಸ್ಟೀಲ್ ವರ್ಕ್ಸ್, ದಿ ಲ್ಯೂಸಿ ಫರ್ನೇಸಸ್, ದಿ ಯೂನಿಯನ್ ಐರನ್ ಮಿಲ್ಸ್ ದಿ ಯೂನಿಯನ್ ಮಿಲ್, (ವಿಲ್ಸನ್, ವಾಕರ್‌ & ಕೌಂಟಿ), ಕೀಸ್ಟೋನ್ ಬ್ರಿಜ್ ವರ್ಕ್ಸ್, ಹರ್ಟ್‌ಮನ್ ಸ್ಟೀಲ್ ವರ್ಕ್ಸ್, ಫ್ರಿಕ್ ಕೋಕ್ ಕಂಪನಿ ಮತ್ತು ಸ್ಕೋಟಿಯ ಓರ್ ಮೈನ್ಸ್‌. ಕಾರ್ನೆಗೀ, ಕೀಸ್ಟೋನ್ ಮೂಲಕ, ಮಿಸ್ಸಿಸ್ಸಿಪ್ಪಿ ನದಿಯ ಮೂಲಕ ಸೇಂಟ್ ಲೂಯಿಸ್ ಮಿಸೌರಿ ಯಲ್ಲಿ ನಿರ್ಮಿಸಲಾದ ಮಹತ್ವದ ಈಡ್ಸ್ ಬ್ರಿಜ್ ಯೋಜನೆಗೆ ಉಕ್ಕನ್ನು ಒದಗಿಸಿದರು ಮತ್ತು ಅದರ ಷೇರುಗಳನ್ನು ಹೊಂದಿದ್ದರು. (ಇದು 1874ರಲ್ಲಿ ಪೂರ್ಣಗೊಂಡಿತು). ಈ ಯೋಜನೆಯು ಉಕ್ಕಿನ ತಂತ್ರಜ್ಞಾನಕ್ಕೆ ಒಂದು ಅತ್ಯುತ್ತಮ ಪುರಾವೆಯಾಗಿತ್ತು, ಮತ್ತು ಹೊಸ ಉಕ್ಕಿನ ಮಾರುಕಟ್ಟೆಯ ಒಂದು ಆರಂಭವನ್ನು ಗುರುತಿಸಿತು.

1901 ಯು.ಎಸ್.ಸ್ಟೀಲ್

ಬದಲಾಯಿಸಿ

1901ರಲ್ಲಿ, ಕಾರ್ನೆಗೀಯವರಿಗೆ 66 ವರ್ಷವಾಗಿತ್ತು ಮತ್ತು ಆಗ ಅವರು ನಿವೃತ್ತಿಯಾಗುವ ಕುರಿತು ಯೋಚಿಸುತ್ತಿದ್ದರು. ಅವರು ನಿವೃತ್ತಿಗೆ ಸಿದ್ಧತೆಯಾಗಿ ತಮ್ಮ ಉದ್ಯಮವನ್ನು ಜಂಟಿ ಸ್ಟಾಕ್ ಕಾರ್ಪೊರೇಶನ್‌ಗಳಾಗಿ ಮಾರ್ಪಡಿಸಿದರು. ಜಾನ್‌ ಪೀರ್‌ಪಂಟ್ ಮೋರ್ಗಾನ್ ಒಬ್ಬ ಬ್ಯಾಂಕರ್‌ ವ್ಯಕ್ತಿ ಮತ್ತು ಅಮೆರಿಕದ ಅತ್ಯಂತ ಮಹತ್ವದ ಹಣಕಾಸು ದಲ್ಲಾಳಿಯಾಗಿದ್ದರು. ಕಾರ್ನೆಗೀ ಎಷ್ಟು ದಕ್ಷತೆಯಿಂದ ಲಾಭವನ್ನು ಮಾಡಿಕೊಂಡಿದ್ದರು ಎಂಬುದನ್ನು ಆತ ಗಮನಿಸಿದ್ದ. ಅವರು ವೆಚ್ಚ ಕಡಿಮೆ ಮಾಡುವ, ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಸರಕು ಪೂರೈಸುವ, ಬೃಹತ್ ಪ್ರಮಾಣದಲ್ಲಿ ಉತ್ಪಾದನೆ ಮಾಡುವ ಮತ್ತು ಕೆಲಸಗಾರರ ವೇತನ ಹೆಚ್ಚಿಸುವ ರೀತಿಯಲ್ಲಿ ಒಂದು ಸಮಗ್ರ ಉಕ್ಕಿನ ಉದ್ಯಮದ ಕುರಿತು ಆಲೋಚಿಸಿ, ಕಾರ್ಯಪ್ರವೃತ್ತರಾಗಿದ್ದರು. ಆ ಹೊತ್ತಿಗೆ,ಅವರು ಕಾರ್ನೆಗೀ ಸ್ಟೀಲ್ ಮತ್ತು ಇನ್ನಿತರ ಪ್ರಮುಖ ಕಂಪನಿಗಳನ್ನು ಕೊಂಡುಕೊಂಡು ಅವೆಲ್ಲವನ್ನೂ ಸೇರಿಸಿ, ಒಂದು ದೊಡ್ಡ ಕಂಪನಿಯಾಗಿ ರೂಪಿಸಿದರು. ಇದರಿಂದ ಪೋಲಾಗುವುದನ್ನು ಮತ್ತು ಪುನಾರರ್ವತನೆಗಳನ್ನು ತಪ್ಪಿಸಿದರು. ಅವರು ಈ ಕುರಿತ ಮಾತುಕತೆಯನ್ನು 1901ರ ಮಾರ್ಚ್‌ 2ರಂದು ಪೂರ್ಣಗೊಳಿಸಿ, ಯುನೈಟೆಡ್ ಸ್ಟೇಟ್ಸ್ ಸ್ಟೀಲ್ ಕಾರ್ಪೊರೇಶನ್ ಸ್ಥಾಪಿಸಿದರು. ಅದು ಒಂದು ಬಿಲಿಯನ್ ಡಾಲರ್‌ಗೂ ಅಧಿಕ ಮಾರುಕಟ್ಟೆ ಬಂಡವಾಳವನ್ನು ಹೊಂದಿದ ವಿಶ್ವದ ಪ್ರಪ್ರಥಮ ಕಾರ್ಪೊರೇಶನ್ ಆಗಿತ್ತು. ಎಲ್ಲವನ್ನೂ ಕೊಂಡುಕೊಳ್ಳುವ ಈ ಮಾತುಕತೆಯನ್ನು ರಹಸ್ಯವಾಗಿ ನಡೆಸಿದವರು ಚಾರ್ಲ್ಸ್ ಎಂ ಸ್ಕ್ವಾಬ್ ( ಚಾರ್ಲ್ಸ್ ಆರ್‌. ಸ್ಕ್ವಾಬ್‌ಗೆ ಯಾವುದೇ ಸಂಬಂಧವಿಲ್ಲ). ಸಂಯುಕ್ತ ಸಂಸ್ಥಾನದ ಇತಿಹಾಸದಲ್ಲಿ ಇಂದಿನವರೆಗೂ ಅದು ಅತ್ಯಂತ ದೊಡ್ಡ ಕೈಗಾರಿಕಾ ಸ್ವಾದೀನವಾಗಿತ್ತು. ಎಲ್ಲ ಆಸ್ತಿಸ್ವಾಮ್ಯಗಳನ್ನು ಯುನೈಟೆಡ್ ಸ್ಟೇಟ್ಸ್ ಸ್ಟೀಲ್ ಕಾರ್ಪೊರೇಶನ್‌ನಲ್ಲಿ ಸೇರಿಸಲಾಯಿತು. ಇದನ್ನು ಮೋರ್ಗಾನ್‌ ಸಂಘಟಿಸಿದ ಟ್ರಸ್ಟ್‌ನ ವಶಕ್ಕೆ ಒಪ್ಪಿಸಿ, ಕಾರ್ನೆಗೀಯವರು ತಮ್ಮ ಉದ್ಯಮದಿಂದ ನಿವೃತ್ತಿಯಾದರು. ಅವರ ಉಕ್ಕಿನ ಉದ್ಯಮಗಳನ್ನು ಅವರ ವಾರ್ಷಿಕ ಗಳಿಕೆಯಾದ 480 ಮಿಲಿಯನ್ ಡಾಲರ್‌ಗಳಿಗೆ ಹನ್ನೆರಡು ಪಟ್ಟು ಹಣಕ್ಕೆ ಕೊಳ್ಳಲಾಯಿತು. (2003ರ ಬೆಲೆಯಲ್ಲಿ ಅಂದಾಜು 10.3 ಬಿಲಿಯನ್ ಡಾಲರ್ - ಗೇಲ್ ವರ್ಚುಅಲ್ ರೆಫರೆನ್ಸ್ ಲೈಬ್ರರಿಯ ಪ್ರಕಾರ)- ಆ ಸಮಯದಲ್ಲಿ ಅದು ಅತ್ಯಂತ ದೊಡ್ಡ ವೈಯಕ್ತಿಕ ವಾಣಿಜ್ಯ ವಹಿವಾಟು ಆಗಿತ್ತು. ಇದರಲ್ಲಿ ಕಾರ್ನೆಗೀಯವರ ಷೇರುಗಳು 225,639,000 ಡಾಲರ್‌ಗಳಿಷ್ಟಿತ್ತು. ಅದನ್ನು ಕಾರ್ನೆಗೀಯವರಿಗೆ ಶೇ. 5ರ 50-ವರ್ಷದ ಗೋಲ್ಡ್ ಬಾಂಡ್ ಮೂಲಕ ನೀಡಲಾಯಿತು. ಅವರ ಷೇರುಗಳನ್ನು ಮಾರಾಟ ಮಾಡುವ ಕುರಿತ ಒಪ್ಪಂದಕ್ಕೆ 1901ರ ಫೆಬ್ರವರಿ 26ರಂದು ಸಹಿಹಾಕಲಾಯಿತು. ಮಾರ್ಚ್‌ 2ರಂದು, (1,400,000,000 ಡಾಲರ್‌ ಮೊತ್ತದ — ಅಂದರೆ ಆ ಸಮಯದಲ್ಲಿ ಯು.ಎಸ್‌. ರಾಷ್ಟ್ರೀಯ ಸಂಪತ್ತಿನ ಶೇ. 4ರಷ್ಟು) ಯುನೈಟೆಡ್ ಸ್ಟೇಟ್ಸ್ ಸ್ಟೀಲ್ ಕಾರ್ಪೊರೇಶನ್‌ನ ಔಪಚಾರಿಕವಾಗಿ ಸಾಂಸ್ಥಿಕ ಮತ್ತು ಬಂಡವಾಳಹೂಡಿಕೆ ಠರಾವಿಗೆ ಸಹಿಹಾಕುವುದು ಮುಗಿದು ಒಪ್ಪಂದವು ಪೂರ್ಣಗೊಂಡಿತು. ಹೊಬೊಕನ್, ನ್ಯೂಜೆರ್ಸಿ ಯ ಹಡ್ಸನ್ ಟ್ರಸ್ಟ್ ಕಂಪನಿಗೆ , ಕಾರ್ನೆಗೀಯವರ ವ್ಯಾಪಾರ ಕಾರ್ಯದರ್ಶಿ ರಾಬರ್ಟ್‌ ಎ ಫ್ರಾಂಕ್ಸ್‌ ಅವರ ವಿಶ್ವಾಸಕ್ಕೆ ಎರಡು ವಾರಗಳಲ್ಲಿ ಎಲ್ಲ ಬಾಂಡ್‌ಗಳನ್ನು ತಲುಪಿಸಬೇಕೆಂದು ಒಪ್ಪಂದವಾಯಿತು. ಅಲ್ಲಿ ಸುಮಾರು 230,000,000 ಡಾಲರ್‌ ಮೌಲ್ಯದ ಬಾಂಡ್‌ಗಳನ್ನು ಇಡಲು ಒಂದು ವಿಶೇಷ ನೆಲಮಾಳಿಗೆಯನ್ನೇ ನಿರ್ಮಿಸಲಾಯಿತು. ಬಾಂಡ್‌ಗಳ ಕುರಿತು ಹೀಗೆ ಹೇಳಲಾಗಿದೆ ".... ತಮ್ಮ ಉದ್ಯಮ ವೃತ್ತಿಜೀವನವದ ಪ್ರಾಪ್ತಿಯನ್ನು ಪ್ರತಿನಿಧಿಸುವ ಈ ಬಾಂಡ್‌ಗಳನ್ನು ಕಾರ್ನೆಗೀಯವರು ಎಂದೂ ನೋಡಲು ಅಥವಾ ಮುಟ್ಟಲು ಬಯಸಿರಲಿಲ್ಲ. ತಾವು ನೋಡಿದೊಡನೆ ಅವು ಲೆಪ್ರಕಾನ್‌(ಐರಿಶ್‌ ಭಾಷೆಯಲ್ಲಿ ಚಿಕ್ಕತುಂಟ ಭೂತ)ನ ಬಂಗಾರದ ಹಗುರುಎಳೆಗಳಂತೆ ಕಣ್ಮರೆಯಾಗಿಬಿಟ್ಟರೆ ಎಂದು ಅವರು ಭಯಪಟ್ಟಂತೆ ತೋರುತ್ತಿತ್ತು. ನ್ಯೂಜೆರ್ಸಿಯಲ್ಲಿ ಅವು ನೆಲಮಾಳಿಗೆ ಕೋಣೆಯೊಂದರಲ್ಲಿ ಸುರಕ್ಷಿತವಾಗಿ ಇರಲಿ, ನ್ಯೂಯಾರ್ಕ್‌ ತೆರಿಗೆ ಮೌಲ್ಯಮಾಪಕರಿಂದ ಸುರಕ್ಷಿತವಾಗಿರಲಿ, ತಾವು ಅವುಗಳನ್ನು ಹಂಚಲು ಸಿದ್ಧರಾಗುವವರೆಗೆ ಹಾಗೆಯೇ ಇರಲಿ' ಎಂದು ಬಯಸಿದಂತಿತ್ತು.

ನಿವೃತ್ತಿ

ಬದಲಾಯಿಸಿ

1901–1919: ಲೋಕೋಪಕಾರಿ

ಬದಲಾಯಿಸಿ
 
ಕಾರ್ನೆಗೀ, ಬಲಭಾಗದಲ್ಲಿ, ಜೇಮ್ಸ್ ಬ್ರೈಸ್‌ರೊಂದಿಗೆ, 1ನೇ ವಿಸ್ಕೌಂಟ್ ಬ್ರೈಸ್.
 
ಇಲಿನಾಯ್ಸ್, ಮಕಾಂಬ್‌ನಲ್ಲಿರುವ ಒಂದು ಕಾರ್ನೆಗೀ ಗ್ರಂಥಾಲಯ

ಕಾರ್ನೆಗೀ ತಮ್ಮ ಬದುಕಿನ ಕಡೆಯ ಭಾಗವನ್ನು ಲೋಕೋಪಕಾರಿ ಯಾಗಿ ಕಳೆದರು. 1901ರ ನಂತರ ಅವರು ಅಷ್ಟೆಲ್ಲ ಸಂಪತ್ತನ್ನು ಸಂಗ್ರಹಿಸಲು ಸಾಧ್ಯವಾದ ಉದ್ಯಮ ಕುರಿತ ತಮ್ಮ ತೀಕ್ಷ್ಣಬುದ್ಧಿಯಿಂದ ಸಾರ್ವಜನಿಕ ಗಮನವು ದತ್ತ ತಿರುಗಿಸಿದರು. ನಂತರ ಕಾರ್ನೆಗೀಯವರು ಸಾರ್ವಜನಿಕ-ಆಸಕ್ತಿಯಿಂದ ಸಮಾಜಕ್ಕೆ ಉಪಕಾರವಾಗುಂತಹ ಯೋಜನೆಗಳಲ್ಲಿ ತೊಡಗಿಸಿಕೊಂಡರು. ಸಾಮಾಜಿಕ ವಿಷಯಗಳ ಕುರಿತ ಮತ್ತು ಅಪಾರ ಸಂಪತ್ತು ಹೊಂದಿರುವುದರ ಜವಾಬ್ದಾರಿಗಳ ಕುರಿತಾಗಿ ತಮ್ಮ ದೃಷ್ಟಿಕೋನಗಳನ್ನು ವಿವರಿಸಿ ಟ್ರೈಂಫಂಟ್ ಡೆಮಾಕ್ರಸಿ (1886) ಮತ್ತು ಗಾಸ್ಪೆಲ್ ಆಫ್ ವೆಲ್ತ್ (1889) ಕೃತಿಗಳಲ್ಲಿ ಅವರ ಬರೆದರು. ಕಾರ್ನೆಗೀ ಸ್ಕಾಟ್‌ಲ್ಯಾಂಡ್‌ನಲ್ಲಿ ಸ್ಕಿಬೋ ಕ್ಯಾಸಲ್ ಕೊಂಡುಕೊಂಡರು. ನಂತರ ಅವರ ಸ್ವಲ್ಪ ದಿನಗಳನ್ನು ಅಲ್ಲಿ ಮತ್ತು ಸ್ವಲ್ಪ ದಿನಗಳನ್ನು ನ್ಯೂಯಾರ್ಕ್‌ನ ಮನೆಯಲ್ಲಿ ಕಳೆಯತೊಡಗಿದರು. ನಂತರದಲ್ಲಿ ಅವರು ಸಾರ್ವಜನಿಕ ಹಿತಾಸಕ್ತಿಯ ಕೆಲಸಗಳಿಗೆ, ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಯ ಉದ್ದೇಶಗಳಿಗಾಗಿ ತಮ್ಮ ಬಂಡವಾಳವನ್ನು ನೀಡುವುದಕ್ಕೆ ತಮ್ಮ ಬದುಕನ್ನು ಮೀಸಲಾಗಿಟ್ಟರು. ಅವರು ಇಂಗ್ಲಿಶ್ ಭಾಷೆಯನ್ನು ಪ್ರಚಲಿತಗೊಳಿಸುವ ಒಂದು ವಿಧಾನವಾಗಿ ಸ್ಪೆಲ್ಲಿಂಗ್ ರಿಫಾರ್ಮ್‌ (ಉಚ್ಚಾರಣೆ ಸುಧಾರಣೆ) ಆಂದೋಲನದ ಪ್ರಮುಖ ಪ್ರತಿಪಾದಕರಾಗಿದ್ದರು. ಅವರ ಅನೇಕ ಲೋಕೋಪಕಾರಿ ಪ್ರಯತ್ನಗಳಲ್ಲಿ ಒಂದು ಎಂದರೆ, ಸಂಯುಕ್ತ ಸಂಸ್ಥಾನ, ಬ್ರಿಟನ್ ಮತ್ತು ಇನ್ನಿತರ ಇಂಗ್ಲಿಶ್ ಮಾತನಾಡುವ ದೇಶಗಳಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಸ್ಥಾಪನೆ ಮಾಡಿದ್ದು. ಸಾಮಾನ್ಯವಾಗಿ ಕಾರ್ನೆಗೀ ಗ್ರಂಥಾಲಯಗಳು ಎಂದು ಕರೆಯಲಾಗುವ ಈ ಗ್ರಂಥಾಲಯಗಳನ್ನು ಅನೇಕ ಸ್ಥಳಗಳಲ್ಲಿ ಅವರು ನಿರ್ಮಿಸಿದರು. ಮೊದಲನೆಯ ಗ್ರಂಥಾಲಯವನ್ನು ಅವರು 1883ರಲ್ಲಿ ಡನ್‌ಫರ್‌ಮ್ಲಿನ್‌ನಲ್ಲಿ ಸ್ಥಾಪಿಸಿದರು. ಇವುಗಳನ್ನು ಸ್ಥಾಪಿಸುವ ಅವರ ವಿಧಾನ ಎಂದರೆ ಸ್ಥಳೀಯ ಸರ್ಕಾರಗಳು ಭೂಮಿಯನ್ನು ನೀಡಿ, ಅವುಗಳ ನಿರ್ವಹಣೆ ಮತ್ತು ನಡೆಸಿಕೊಂಡು ಹೋಗುವುದಕ್ಕೆ ಹಣಕಾಸು ಒದಗಿಸಬೇಕಿತ್ತು, ಕಟ್ಟಡ ನಿರ್ಮಿಸಿ, ಪುಸ್ತಕಗಳನ್ನು ಕೊಂಡುಕೊಡುವುದು ಕಾರ್ನೆಗೀಯವರ ಜವಾಬ್ದಾರಿಯಾಗಿತ್ತು. ಸ್ಥಳೀಯರ ಆಸಕ್ತಿಯನ್ನು ಗಳಿಸಲು, 1885ರಲ್ಲಿ ಅವರು 500,000 ಡಾಲರ್‌ ಹಣವನ್ನು ಪಿಟ್ಸ್‌ಬರ್ಗ್‌ನ ಒಂದು ಸಾರ್ವಜನಿಕ ಗ್ರಂಥಾಲಯಕ್ಕೆ ನೀಡಿದರು ಮತ್ತು 1886ರಲ್ಲಿ 250,000 ಡಾಲರ್‌ ಹಣವನ್ನು ಅಲ್ಲೆಗೆನಿ ನಗರಕ್ಕೆ ಒಂದು ಮ್ಯೂಸಿಕ್ ಹಾಲ್ ಮತ್ತು ಗ್ರಂಥಾಲಯ ನಿರ್ಮಿಸಲು ದೇಣಿಗೆ ನೀಡಿದರು. ಎಡಿನ್‌ಬರ್ಗ್‌ನಲ್ಲಿ ಒಂದು ಉಚಿತ ಗ್ರಂಥಾಲಯಕ್ಕೆ 250,000 ಡಾಲರ್‌ ಹಣವನ್ನು ದೇಣಿಗೆ ನೀಡಿದರು. ಕಾರ್ನೆಗೀಯವರು ಒಟ್ಟು ಸುಮಾರು 3,000 ಗ್ರಂಥಾಲಯಗಳಿಗೆ ದೇಣಿಗೆ ನೀಡಿದ್ದಾರೆ. ಅವುಗಳಲ್ಲಿ 47 ಅಮೆರಿಕದಲ್ಲಿವೆ, ಕೆಲವು ಕೆನಡಾ, ಬ್ರಿಟನ್‌, ಐರ್ಲೆಂಡ್ ಗಣರಾಜ್ಯ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ವೆಸ್ಟ್‌ ಇಂಡೀಸ್‌ ಮತ್ತು ಫಿಜಿ ಇತ್ಯಾದಿ ದೇಶಗಳಲ್ಲಿ ಇನ್ನುಗಳಿದ ಗ್ರಂಥಾಲಯಗಳಿವೆ. ಅವರು 1899ರಲ್ಲಿ ಬರ್ಮಿಂಗ್‌‌ಹ್ಯಾಮ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು 50,000 ಡಾಲರ್‌ ದೇಣಿಗೆ ನೀಡಿದ್ದರು.[೧೯]

 
ಸಿರಾಕ್ಯುಸ್ ವಿಶ್ವವಿದ್ಯಾನಿಲಯದಲ್ಲಿರುವ ಕಾರ್ನೆಗೀ ಗ್ರಂಥಾಲಯ

ವ್ಲಾನ್‌ಸ್ಲಿಕ್ (1991) ಹೇಳಿರುವಂತೆ, 19ನೇ ಶತಮಾನದ ಕೊನೆಯ ವರ್ಷಗಳಲ್ಲಿ ಅಮರಿಕದ ಸಾರ್ವಜನಿಕರಿಗೆ ಉಚಿತ ಗ್ರಂಥಾಲಯಗಳು ಲಭ್ಯವಿರಬೇಕು ಎಂಬ ವಿಚಾರವನ್ನು ಸ್ವೀಕರಿಸಿದ್ದು ಕಂಡುಬರುತ್ತದೆ. ಆದರೆ ಈ ಆದರ್ಶ ಉಚಿತ ಗ್ರಂಥಾಲಯಗಳ ವಿನ್ಯಾಸವು ಬಹುಕಾಲದವರೆಗೆ ಬಿಸಿಬಿಸಿ ಚರ್ಚೆಯ ವಿಚಾರವಾಗಿತ್ತು. ಒಂದೆಡೆ, ಗ್ರಂಥಾಲಯ ವೃತ್ತಿಯು ಆಡಳಿತ ಮತ್ತು ನಿರ್ವಹಣೆಯನ್ನು ಅತ್ಯಂತ ದಕ್ಷತೆಯಿಂದ ಬೆಂಬಲಿಸುವ ವಿನ್ಯಾಸಗಳಿಗೆ ಕರೆನೀಡಿತು; ಇನ್ನೊಂದೆಡೆ ಶ್ರೀಮಂತ ದಾನಿಗಳು ಪೋಷಕ ಚಿತ್ರಣವನ್ನು ಬಲಪಡಿಸುವ ಮತ್ತು ನಾಗರಿಕ ಅಭಿಮಾನವನ್ನು ಅಧಿಕಗೊಳಿಸುವ ಕಟ್ಟಡಗಳ ಕುರಿತು ಒಲವು ಹೊಂದಿದ್ದರು. 1886 ಮತ್ತು 1917ರ ಮಧ್ಯೆ, ಕಾರ್ನೆಗೀಯವರು ಗ್ರಂಥಾಲಯ ದೇಣಿಗೆ ಮತ್ತು ಗ್ರಂಥಾಲಯ ವಿನ್ಯಾಸ ಎರಡನ್ನೂ ಸುಧಾರಣೆ ಮಾಡಿದರು, ಜೊತೆಗೆ ಅವರು ಈ ಎರಡರ ಮದ್ಯೆ ಹತ್ತಿರದ ಸಂಬಂಧವನ್ನು ಉತ್ತೇಜಿಸಿದರು. ನ್ಯೂಯಾರ್ಕ್‌ನಲ್ಲಿ ಬ್ರೂಮ್‌ ಕೌಂಟಿ ಪಬ್ಲಿಕ್ ಲೈಬ್ರರಿಯನ್ನು 1904ರ ಅಕ್ಟೋಬರ್‌ನಲ್ಲಿ ಆರಂಭಿಸಲಾಯಿತು. ಬಿಂಗ್‌ಹ್ಯಾಮ್ಟನ್ ಸಾರ್ವಜನಿಕ ಗ್ರಂಥಾಲಯ ಎಂದು ಆರಂಭದಲ್ಲಿ ಕರೆಯಲಾದ, ಇದನ್ನು ಆಂಡ್ಯ್ರೂ ಕಾರ್ನೆಗೀಯವರ 75,000 ಡಾಲರ್‌ ದೇಣಿಗೆಯಿಂದ ನಿರ್ಮಿಸಲಾಯಿತು. ಇದರ ಕಟ್ಟಡವು ಸಾರ್ವಜನಿಕ ಗ್ರಂಥಾಲಯ ಮತ್ತು ಸಮುದಾಯ ಕೇಂದ್ರ, ಎರಡೂ ಆಗಿ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. ಅವರು 1901ರಲ್ಲಿ 2 ಮಿಲಿಯನ್ ಡಾಲರ್‌ಗಳನ್ನು ಪಿಟ್ಸ್‌ಬರ್ಗ್‌ನಲ್ಲಿ ಕಾರ್ನೆಗೀ ಇನ್‌ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ (CIT)ಯನ್ನು ಆರಂಭಿಸಲು ದೇಣಿಗೆ ನೀಡಿದರು. ಇಷ್ಟೇ ಹಣವನ್ನು 1902ರಲ್ಲಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ಕಾರ್ನೆಗೀ ಇನ್‌ಸ್ಟಿಟ್ಯೂಶನ್ ಸ್ಥಾಪನೆಗೆ ನೀಡಿದರು. ತದನಂತರದಲ್ಲಿ ಅವರು ಈ ಎರಡೂ ಸಂಸ್ಥೆಗಳಿಗೆ ಮತ್ತು ಬೇರೆ ಇನ್ನಿತರ ಶಾಲೆಗಳಿಗೆ ಇನ್ನಷ್ಟು ಹಣವನ್ನು ದೇಣಿಗೆ ನೀಡಿದರು. ಸಿಐಟಿಯು ಈಗ ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯದ ಒಂದು ಭಾಗವಾಗಿದೆ. ಕಾರ್ನೆಗೀಯವರು ಕಾರ್ನೆಲ್ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯಲ್ಲಿಯೂ ಕಾರ್ಯನಿರ್ವಹಿಸಿದರು.

 
ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯ

1911ರಲ್ಲಿ, ಆಂಡ್ಯ್ರೂ ಕಾರ್ನೆಗೀಯವರು ಮೌಂಟ್‌ ವಿಲ್ಸನ್‌‌‌ನಲ್ಲಿ 100 ಇಂಚ್‌ (2.5 m) ಹುಕರ್‌ ಟೆಲಿಸ್ಕೋಪ್ ನಿರ್ಮಿಸಲು ಪ್ರಯತ್ನಿಸುತ್ತಿದ್ದ ಜಾರ್ಜ್‌ ಎಲೆರಿ ಹೇಲ್‌ ಅವರಿಗೆ ಸಹೃದಯಿ ದಾನಿಯಾದರು ಮತ್ತು ಕಾರ್ನೆಗೀ ಇನ್‌ಸ್ಟಿಟ್ಯೂಶನ್‌ಗೆ ಹೆಚ್ಚುವರಿ ಹತ್ತು ಮಿಲಿಯನ್ ಡಾಲರ್‌ ದೇಣಿಗೆ ನೀಡಿದರು. ಟೆಲಿಸ್ಕೋಪ್‌ ನಿರ್ಮಾಣವನ್ನು ತ್ವರಿತವಾಗಿ ಪೂಗೊಳಿಸುವ ಸಲಹೆಯನ್ನು ನೀಡಿ, ಈ ದೇಣಿಗೆ ನೀಡಿದರು: "ಮೌಂಟ್ ವಿಲ್ಸನ್‌ನಲ್ಲಿ ನಡೆಯುತ್ತಿರುವ ಕೆಲಸವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ನಾನು ಆಶಿಸುವೆ. ಅದರಿಂದ ದೊರೆಯಲಿರುವ ಫಲಿತಾಂಶಗಳನ್ನು ಕೇಳಲು ನಾನು ತುಂಬ ಉತ್ಸುಕನಾಗಿರುವೆ. ನಾನು ಇಹಲೋಕ ತ್ಯಜಿಸುವ ಮೊದಲು ಸಂತೃಪ್ತನಾಗಿ ಹೋಗಲು ಬಯಸಿರುವೆ. ಹೊಸ ಸ್ವರ್ಗವನ್ನು ಹಿಂದೆಂದಿಗಿಂತ ಇನ್ನಷ್ಟು ಸ್ಪಷ್ಟವಾಗಿ ತೋರಿಸುವ ಮೂಲಕ ಪುರಾತನಭೂಮಿಯ ಯಾವುದೋ ಭಾಗಕ್ಕೆ ನಾವು ನೀಡಬೇಕಾದ ಋಣವನ್ನು ಮರಳಿಸಲಿದ್ದೇವೆ ಎಂಬ ಸಮಾಧಾನದಿಂದ ಹೋಗಬಯಿಸಿರುವೆ" ಎಂದು ಅವರು ಹೇಳಿದ್ದರು. ದೂರದರ್ಶಕವು ನವೆಂಬರ್‌ 2, 1917ರಂದು ಕಾರ್ನೆಗೀಯವರು ಇನ್ನೂ ಬದುಕಿರುವಾಗಲೇ ಮೊದಲ ಬೆಳಕು ಕಂಡಿತು.[೨೦] ಸ್ಕಾಟ್‌ಲ್ಯಾಂಡ್‌ನಲ್ಲಿ ಅವರು 10 ಮಿಲಿಯನ್ ಡಾಲರ್‌ಗಳನ್ನು ಸ್ಕಾಟ್‌ಲ್ಯಾಂಡ್‌ ವಿಶ್ವವಿದ್ಯಾಲಯಗಳಿಗೆ ಕಾರ್ನೆಗೀ ಟ್ರಸ್ಟ್ ಸ್ಥಾಪಿಸಲು ದೇಣಿಗೆ ನೀಡಿದರು. ಅದನ್ನು ಒಂದು ಒಪ್ಪಂದಪತ್ರದ ಮೂಲಕ ಸ್ಥಾಪಿಸಲಾಯಿತು. ಅವರು ಒಪ್ಪಂದಪತ್ರಕ್ಕೆ ಜೂನ್ 7, 1901ರಲ್ಲಿ ಸಹಿ ಹಾಕಿದರು ಮತ್ತು ಅದನ್ನು ರಾಯಲ್ ಚಾರ್ಟರ್‌ನಲ್ಲಿ ಆಗಸ್ಟ್ 21, 1902ರಂದು ಸೇರಿಸಲಾಯಿತು. ಈ ಟ್ರಸ್ಟ್‌ಗೆ ಅವರು ೧೦ ಮಿಲಿಯನ್ ಡಾಲರ್‌ ಹಣವನ್ನು ದೇಣಿಗೆಯಾಗಿ ನೀಡಿದರು. (ಆಗ ಅದು ಊಹಿಸಲಾರದಷ್ಟು ಹಣವಾಗಿತ್ತು : ಆ ಸಮಯದಲ್ಲಿ ಎಲ್ಲ ನಾಲ್ಕು ಸ್ಕಾಟಿಶ್ ವಿಶ್ವವಿದ್ಯಾನಿಲಯಗಳಿಗೆ ಒಟ್ಟು ವಾರ್ಷಿಕ ಸರ್ಕಾರಿ ಅನುದಾನವೇ 50,000 ಪೌಂಡ್‌ ಆಗಿರುತ್ತಿತ್ತು). ಇದರ ಉದ್ದೇಶವು ಸ್ಕಾಟಿಶ್ ವಿಶ್ವವಿದ್ಯಾನಿಲಯಗಳಲ್ಲಿ ವೈಜ್ಞಾನಿಕ ಸಂಶೋಧನೆಯ ಅವಕಾಶಗಳನ್ನು ವಿಸ್ತರಿಸಿ, ಉತ್ತಮಪಡಿಸುವುದು ಮತ್ತು ಸ್ಕಾಟ್‌ಲ್ಯಾಂಡ್‌ನ ಅರ್ಹ ಮತ್ತು ಪ್ರತಿಭಾನ್ವಿತ ಯುವಜನತೆಗೆ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಸಾಧ್ಯಗೊಳಿಸುವುದಾಗಿತ್ತು.[೨೧] ಇದಾದನಂತರ ಅವರನ್ನು ಸೇಂಟ್ ಆಂಡ್ರ್ಯೂಸ್ ವಿಶ್ವವಿದ್ಯಾನಿಲಯದ ಲಾರ್ಡ್‌ ರೆಕ್ಟರ್‌ ಎಂದು ಆಯ್ಕೆ ಮಾಡಲಾಯಿತು. ಅವರು ತಮ್ಮ ಹುಟ್ಟೂರಾದ ಡನ್‌ಫರ್‌ಮ್ಲಿನ್‌ಗೂ ಅಪಾರ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಅಲ್ಲಿ ಗ್ರಂಥಾಲಯ ಮಾತ್ರವಲ್ಲದೇ, ಕಾರ್ನೆಗೀಯವರು ಒಂದು ಖಾಸಗಿ ಎಸ್ಟೇಟ್‌ ಖರೀದಿಸಿ, ಪಿಟ್ಟೆನ್‌ಕ್ರಿಫ್‌ ಪಾರ್ಕ್‌ ರೂಪಿಸಿದರು. ಅದನ್ನು ಎಲ್ಲ ಸಾರ್ವಜನಿಕರಿಗೂ ತೆರೆದಿದ್ದರು ಮತ್ತು ಡನ್‌ಫರ್‌ಮ್ಲಿನ್ ಜನತೆಗೆ ಅನುಕೂಲ ಒದಗಿಸಲು ಕಾರ್ನೆಗೀ ಡನ್‌ಫರ್‌ಮ್ಲಿನ್ ಟ್ರಸ್ಟ್ [೨೨] ಅನ್ನು ಸ್ಥಾಪಿಸಿದರು. ಅವರ ಒಂದು ಪ್ರತಿಮೆಯನ್ನು ಇಂದಿಗೂ ಅಲ್ಲಿ ನೋಡಬಹುದು. ನಂತರ ಅವರು 1913ರಲ್ಲಿ ಅನುದಾನ ನೀಡುವ ಪ್ರತಿಷ್ಠಾನವಾಗಿರುವಂತೆ ಕಾರ್ನೆಗೀ ಯುನೈಟೆಡ್ ಕಿಂಗ್‌ಡಮ್‌ ಟ್ರಸ್ಟ್ ಸ್ಥಾಪಿಸಲು 10 ಮಿಲಿಯನ್ ಡಾಲರ್‌ ದೇಣಿಗೆ ನೀಡಿದರು.[೨೩][೨೪] ಕಾರ್ನೆಗೀ ಹೋಮ್‌ಸ್ಟೆಡ್‌ನಲ್ಲಿದ್ದ ತಮ್ಮ ಹಿಂದಿನ ಉದ್ಯೋಗಿಗಳಿಗಾಗಿ 1901ರಲ್ಲಿ ಮತ್ತು ಅಮೆರಿಕನ್ ಕಾಲೇಜ್‌ ಉಪನ್ಯಾಸಕರಿಗಾಗಿ ಒಂದು ಬಹುದೊಡ್ಡ ಪಿಂಚಣಿ ನಿಧಿಯನ್ನೂ ಸ್ಥಾಪಿಸಿದರು. ಕಾಲೇಜಿನವರಿಗಾಗಿ ಮಾಡಿದ ನಿಧಿಯನ್ನು ನಂತರ TIAA-CREFಗೆ ಪರಿವರ್ತಿಸಲಾಯಿತು. ಕಾರ್ನೆಗೀಯವರ ಈ ಹಣವನ್ನು ಪಡೆಯಲು ಒಂದು ಬಹುಮುಖ್ಯ ಅಗತ್ಯ ಎಂದರೆ ಚರ್ಚ್‌‌ಗೆ ಸಂಬಂಧಿಸಿದ ಶಾಲೆಗಳು ತಮ್ಮ ಧಾರ್ಮಿಕ ಸಂಪರ್ಕಗಳನ್ನು ಪ್ರತ್ಯೇಕವಾಗಿಟ್ಟುಕೊಳ್ಳಬೇಕಿತ್ತು. ಸಂಗೀತದಲ್ಲಿ ಅವರಿಗಿದ್ದ ಆಸಕ್ತಿಯಿಂದಾಗಿ ಅವರು 7000 ಚರ್ಚ್‌ ಆರ್ಗನ್‌ಗಳನ್ನು ನಿರ್ಮಿಸಲು ದೇಣಿಗೆ ನೀಡಿದರು. ನ್ಯೂಯಾರ್ಕ್‌‌ ನಗರದಲ್ಲಿ ಕಾರ್ನೆಗೀ ಹಾಲ್‌‌ ಅನ್ನು ನಿರ್ಮಿಸಿದರು ಮತ್ತು ಅದರ ಒಡೆತನವೂ ಅವರದೇ ಆಗಿತ್ತು. ಆಫ್ರಿಕನ್-ಅಮೆರಿಕನ್ ಜನರ ಶಿಕ್ಷಣಕ್ಕಾಗಿ ಬುಕರ್‌ ಟಿ. ವಾಷಿಂಗ್ಟನ್ ಅಡಿಯಲ್ಲಿದ್ದ ಟಸ್ಕ್‌ಗೀ ಇನ್‌ಸ್ಟಿಟ್ಯೂಟ್‌‌ಗೆ ಕಾರ್ನೆಗೀಯವರು ಬಹಳ ದೇಣಿಗೆ ನೀಡಿದ್ದಾರೆ. ಬುಕರ್‌ ಟಿ. ವಾಷಿಂಗ್ಟನ್ ಅವರಿಗೆ ನ್ಯಾಶನಲ್ ನೀಗ್ರೋ ಬ್ಯುಸಿನೆಸ್ ಲೀಗ್ ಸ್ಥಾಪಿಸಲು ಕಾರ್ನೆಗೀ ಸಹಾಯ ಮಾಡಿದರು. ಅವರು ಸಂಯುಕ್ತ ಸಂಸ್ಥಾನ ಮತ್ತು ಕೆನಡಾಗಳಲ್ಲಿ ವೀರತನದ ಕಾರ್ಯಗಳನ್ನು ಗೌರವಿಸಲು 1904ರಲ್ಲಿ ಕಾರ್ನೆಗೀ ಹೀರೋ ಫಂಡ್‌ ಅನ್ನು ಸ್ಥಾಪಿಸಿದರು. (ಕೆಲವು ವರ್ಷಗಳ ನಂತರ ಬ್ರಿಟನ್, ಸ್ವಿಟ್ಜರ್‌ಲ್ಯಾಂಡ್, ನಾರ್ವೆ, ಸ್ವೀಡನ್, ಫ್ರಾನ್ಸ್, ಇಟಲಿ, ನೆದರಲ್ಯಾಂಡ್ಸ್, ಬೆಲ್ಜಿಯಂ, ಡೆನ್ಮಾರ್ಕ್‌ ಮತ್ತು ಜರ್ಮನಿ ದೇಶಗಳಲ್ಲಿಯೂ ಇದೇ ರೀತಿಯ ನಿಧಿಯನ್ನು ಹುಟ್ಟುಹಾಕಿದರು). ಕಾರ್ನೆಗೀಯವರು 1903ರಲ್ಲಿ 1,500,000 ಡಾಲರ್‌ ಹಣವನ್ನು ಹೇಗ್‌ ನಗರದಲ್ಲಿ ಪೀಸ್‌ ಪ್ಯಾಲೇಸ್‌ (ಶಾಂತಿ ಅರಮನೆ) ಯನ್ನು ನಿರ್ಮಿಸಲು ದೇಣಿಗೆ ನೀಡಿದರು. ಜೊತೆಗೆ ವಾಷಿಂಗ್ಟನ್‌ ನಗರದಲ್ಲಿ ಇಂಟರ್‌ನ್ಯಾಶನಲ್ ಬ್ಯೂರೋ ಆಫ್‌ ಅಮೆರಿಕನ್ ರಿಪಬ್ಲಿಕ್‌ನ ತಾಣವನ್ನಾಗಿ ಬಳಸಲು ಪ್ಯಾನ್-ಅಮೆರಿಕನ್ ಪ್ಯಾಲೇಸ್ ನಿರ್ಮಾಣಕ್ಕೆ 150,000 ಡಾಲರ್ ಹಣವನ್ನು ದೇಣಿಗೆ ನೀಡಿದರು. ಕಾರ್ನೆಗೀ ಅವರ ಲೋಕೋಪಕಾರಿ ಕಾರ್ಯಗಳಿಗೆ ಮತ್ತು ಕಲೆಗೆ ಅವರ ಸಹಾಯವನ್ನು ಗೌರವಿಸಿ, ಮಸ್ಸಾಚುಸೆಟ್ಸ್‌‌‌ನ ಬೋಸ್ಟನ್‌ ನಗರದ ನ್ಯೂ ಇಂಗ್ಲೆಂಡ್ ಕನ್ಸ್‌ರ್ವೇಟರಿ ಆಫ್ ಮ್ಯೂಸಿಕ್‌‌ನಲ್ಲಿ ಫಿ ಮ್ಯು ಆಲ್ಫಾ ಸಿನ್‌ಫೋನಿಯಾ ಫ್ರಾಟೆರ್ನಿಟಿಯ ಗೌರವ ಸದಸ್ಯರಾಗಿ 1917ರ ಅಕ್ಟೋಬರ್ 14ರಂದು ನೇಮಕ ಮಾಡಲಾಯಿತು. ವಿಶ್ವದಲ್ಲಿ ಸಾಮರಸ್ಯವನ್ನು ಹುಟ್ಟುಹಾಕಲು ತಮ್ಮ ಪ್ರತಿಭೆಯನ್ನು ಹಂಚಿಕೊಳ್ಳುವಂತೆ ಯುವ ಜನತೆಯನ್ನು ಅಭಿವೃದ್ಧಿಗೊಳಿಸುವ ಕಾರ್ನೆಗೀಯವರ ಮೌಲ್ಯಗಳನ್ನು ಈ ಸಮುದಾಯದ ಧ್ಯೇಯವು ಪ್ರತಿಫಲಿಸುತ್ತದೆ. 19ನೇ ಶತಮಾನದ ಭಾರೀ ಶ್ರೀಮಂತ ವ್ಯಕ್ತಿಗಳ ಮಾನದಂಡಗಳಲ್ಲಿ ನೋಡಿದರೆ, ಕಾರ್ನೆಗೀಯವರು ನಿಷ್ಕರುಣಿ ವ್ಯಕ್ತಿಯಾಗಿರಲಿಲ್ಲ. ಅವರು ಅತ್ಯಂತ ಮಾನವೀಯ ವ್ಯಕ್ತಿಯಾಗಿದ್ದುಕೊಂಡೇ ಹಣವನ್ನು ಸಂಗ್ರಹಿಸಲು ಕಠಿಣವಾಗಿ ಬೆನ್ನತ್ತಿದ ವ್ಯಕ್ತಿಯಾಗಿದ್ದರು;[೨೫] ಇನ್ನೊಂದೆಡೆ ಅವರ ಬದುಕು ಮತ್ತು ಅವರ ಅನೇಕ ಕೆಲಸಗಾರರ ಮತ್ತು ಸಾಮಾನ್ಯವಾಗಿ ಬಡವರ ಜೀವನದ ನಡುವಣ ಹೋಲಿಕೆಯು ಎದ್ದು ಕಾಣುವಂತಿತ್ತು. "ಪ್ರಾಯಶಃ ತಮ್ಮ ಹಣವನ್ನು ಹೀಗೆ ಹಂಚುವ ಮೂಲಕ ತಾವು ಹಣಗಳಿಸಲು ಏನೆಲ್ಲವನ್ನು ಮಾಡಿದ್ದೇನೋ ಅದಕ್ಕೆ ನ್ಯಾಯ ಒದಗಿಸುವಂತೆ ತೋರುತ್ತದೆ" ಎಂದು ಜೀವನಚರಿತ್ರೆಕಾರ ಜೋಸೆಫ್ ವಾಲ್ಅಭಿಪ್ರಾಯ ಪಟ್ಟಿದ್ದಾರೆ.[೨೬]

ಅಮೆರಿಕನ್ ಕನಸಿನ ಕಲ್ಪನೆ ಏನು ಎಂಬುದನ್ನು ಸ್ವಲ್ಪಮಟ್ಟಿಗೆ ಆಂಡ್ಯ್ರೂ ಕಾರ್ನೆಗೀ ಪ್ರತಿನಿಧಿಸುತ್ತಾರೆ.  ಅವರು ಅಮೆರಿಕಾಗೆ ಸ್ಕಾಟ್‌ಲ್ಯಾಂಡ್‌ನಿಂದ ಬಂದ ವಲಸಿಗರಾಗಿದ್ದರು ಮತ್ತು ಅಲ್ಲಿ ಯಶಸ್ವಿಯಾಗಿದ್ದರು.  ಅವರು ತಮ್ಮ ಯಶಸ್ಸಿನಿಂದಾಗಿ ಮಾತ್ರವೇ ಪ್ರಸಿದ್ಧರಾಗಲಿಲ್ಲ, ಆದರೆ ಬೃಹತ್‌ ಪ್ರಮಾಣದಲ್ಲಿ ಲೋಕಪಕಾರಿ ಕೆಲಸವನ್ನು ಮಾಡಿದ್ದಕ್ಕಾಗಿ ಪ್ರಸಿದ್ಧರಾಗಿದ್ದಾರೆ. ಕೇವಲ ದೇಣಿಗೆಗಳನ್ನು ನೀಡಿದ್ದಲ್ಲದೇ, ವಸಾಹತುಶಾಹಿ ದೇಶಗಳ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ಉತ್ತೇಜಿಸಲು ಕೆಲಸವನ್ನು ಕೂಡ ಮಾಡಿದ್ದರಿಂದ ಖ್ಯಾತರಾಗಿದ್ದಾರೆ.[೨೭]
 
ನ್ಯೂಯಾರ್ಕ್‌‌ನ ನಾರ್ತ್‌ ಟ್ಯಾರಿಟೌನ್‌‌ನಲ್ಲಿರುವ ಸ್ಲೀಪಿ ಹಾಲೋ ಸಿಮೆಟರಿಯಲ್ಲಿ ಕಾರ್ನೆಗೀಯವರ ಗೋರಿ ಇರುವ ಸ್ಥಳ.
 
ಆಂಡ್ಯ್ರೂ ಕಾರ್ನೆಗೀಯವರ ಅಡಿಗಲ್ಲು

ಕಾರ್ನೆಗೀಯವರು 1919ರ ಆಗಸ್ಟ್ 11ರಂದು ಶ್ವಾಸಕೋಶದ ನ್ಯೂಮೋನಿಯಾದಿಂದ ಲಿನಾಕ್ಸ್, ಮಸ್ಸಾಚುಸೆಟ್ಸ್‌‌‌ನಲ್ಲಿ ತೀರಿಕೊಂಡರು. ಅಷ್ಟರಲ್ಲಾಗಲೇ ಅವರು ತಮ್ಮ ಸಂಪತ್ತಿನಲ್ಲಿ 350,695,653 ಡಾಲರ್ ಹಣವನ್ನು ದೇಣಿಗೆ ನೀಡಿದ್ದರು (2005ರ ಅಂಕಿಸಂಖ್ಯೆಗೆ ಸರಿತೂಗಿಸಿದರೆ ಸುಮಾರು 4.3 ಬಿಲಿಯನ್ ಡಾಲರ್‌).[೨೮] ಅವರ ಮರಣದ ಸಮಯದಲ್ಲಿ, ಅವರು ತಮ್ಮ ಕೊನೆಯ 30,000,000 ಡಾಲರ್‌ ಹಣವನ್ನು ಪ್ರತಿಷ್ಠಾನಗಳು, ದತ್ತಿ ಮತ್ತು ಪಿಂಚಣಿಗಳಿಗೆ ನೀಡಿದರು.[೨೯] ಅವರನ್ನು ನಾರ್ತ್‌ ಟ್ಯಾರಿಟೌನ್‌, ನ್ಯೂಯಾರ್ಕ್‌‌ನಲ್ಲಿ ಸ್ಲೀಪಿ ಹ್ಯಾಲೊ ಸಿಮೆಟರಿ ಯಲ್ಲಿ ಹೂಳಲಾಯಿತು. ಗೋರಿಯ ಸ್ಥಳವು ಅರ್ಕಾಡಿಯ ಹೆಬ್ರನ್ ಪ್ಲಾಟ್‌ ಜಾಗದಲ್ಲಿ ಸಮಿಟ್ ಅವೆನ್ಯೂ ಮತ್ತು ಡಿಂಗಲ್ ರೋಡ್‌ನ ಮೂಲೆಯಲ್ಲಿದೆ. ಗಿಲ್ಡೆಡ್‌ ಏಜ್‌ ಕಾಲಘಟ್ಟದ ಉದ್ಯಮದಲ್ಲಿ ಮತ್ತೊಬ್ಬ ಪ್ರಮುಖ ವ್ಯಕ್ತಿಯಾಗಿದ್ದ ಯೂನಿಯನ್ ಸಂಘಟಕ ಸಾಮ್ಯುಯೆಲ್ ಗೋಂಪರ್ಸ್ ಅವರ ಗೋರಿಯಿಂದ ಕೆಲವೇ ಅಡಿಗಳ ದೂರದಲ್ಲಿ ಕಾರ್ನೆಗೀಯವರ ಗೋರಿಯಿದೆ.[೩೦]

ವಿವಾದಗಳು

ಬದಲಾಯಿಸಿ

1889: ಜೋನ್ಸ್‌ಟೌನ್ ಪ್ರವಾಹ

ಬದಲಾಯಿಸಿ

1889ರಲ್ಲಿ 2,209 ಜನರ ಸಾವಿಗೆ ಕಾರಣವಾದ ಜೋನ್ಸ್‌ಟೌನ್ ಪ್ರವಾಹಕ್ಕೆ ಕಾರಣರೆಂದು ಆಪಾದಿಸಲಾದ ಸೌತ್‌ ಫೋರ್ಕ್‌ ಫಿಶಿಂಗ್ ಮತ್ತು ಹಂಟಿಂಗ್ ಕ್ಲಬ್‌ನ 50 ಜನ ಸದಸ್ಯರಲ್ಲಿ ಕಾರ್ನೆಗೀಯವರೂ ಒಬ್ಬರು. ಅವರ ಗೆಳೆಯರಾದ ಬೆಂಜಮಿನ್ ರಫ್‌ ಅವರ ಸಲಹೆಯ ಮೇರೆಗೆ, ಕಾರ್ನೆಗೀಯವರ ಪಾಲುದಾರ ಹೆನ್ರಿ ಕ್ಲೇ ಫ್ರಿಕ್ ಅವರು ಪೆನ್ಸಿಲ್ವೇನಿಯಾದ ಜೋನ್ಸ್‌ಟೌನ್‌ ಮೇಲ್ಭಾಗದಲ್ಲಿ ಸೌತ್‌ ಫೋರ್ಕ್‌ ಫಿಶಿಂಗ್ ಮತ್ತು ಹಂಟಿಂಗ್ ಕ್ಲಬ್‌ ಅನ್ನು ಸ್ಥಾಪಿಸಿದ್ದರು. ಸೌತ್‌ ಫೋರ್ಕ್‌ ಫಿಶಿಂಗ್ ಮತ್ತು ಹಂಟಿಂಗ್ ಕ್ಲಬ್‌ನ ಘೋಷಿತ ಸದಸ್ಯರು ಎಂದರೆ: ಬೆಂಜಮಿನ್ ರಫ್; ಟಿ.ಎಚ್‌.ಐ. ಸ್ವೀಟ್ ; ಚಾರ್ಲ್ಸ್ ಜೆ. ಕ್ಲಾರ್ಕ್‌; ಥಾಮಸ್ ಕ್ಲಾರ್ಕ್‌; ವಾಲ್ಟರ್ ಎಫ್‌ ಫಂಡನ್‌ಬರ್ಗ್‌; ಹೋವರ್ಡ್‌ ಹಾರ್ಟ್ಲಿ; ಹೆನ್ರಿ ಸಿ ಈಗರ್; ಜೆ.ಬಿ. ವೈಟ್; ಹೆನ್ರಿ ಕ್ಲೇ ಫ್ರಿಕ್; ಇ.ಎ. ಮೈರ್ಸ್; ಸಿ.ಸಿ. ಹಸ್ಸೆ; ಡಿ.ಆರ್‌. ಎವರ್; ಸಿ.ಎ. ಕಾರ್ಪೆಂಟರ್; ಡಬ್ಲ್ಯು. ಎಲ್‌. ಮೆಕ್‌ಕ್ಲಿಂಟಾಕ್ ಮತ್ತು ಎ.ವಿ. ಹೋಲ್ಮ್ಸ್. ಸುಮಾರು ಅರವತ್ತು ಸದಸ್ಯರಿದ್ದ ಈ ಕ್ಲಬ್‌ನಲ್ಲಿ ಪಶ್ಚಿಮ ಪೆನ್ಸಿಲ್ವೇನಿಯಾದ ಪ್ರಮುಖ ಉದ್ಯಮ ಸಿರಿವಂತರು ಇದ್ದರು. ಅವರಲ್ಲಿ ಫ್ರಿಕ್‌ನ ಆಪ್ತ ಗೆಳೆಯ ಆಂಡ್ರ್ಯೂ ಮೆಲಾನ್ , ಆತನ ಅಟಾರ್ನಿಗಳಾಗಿದ್ದ ಫಿಲಾಂಡರ್ ನಾಕ್ಸ್ ಮತ್ತು ಜೇಮ್ಸ್ ಹೇ ರೀಡ್ ಹಾಗೂ ಫ್ರಿಕ್‌ನ ಉದ್ಯಮ ಪಾಲುದಾರರಾಗಿದ್ದ ಆಂಡ್ಯ್ರೂ ಕಾರ್ನೆಗೀಯವರೂ ಸೇರಿದ್ದರು. ನಗರದ ಮೇಲಿನ ಭಾಗದಲ್ಲಿ, ಸೌತ್ ಫೋರ್ಕ್‌ ಎಂಬ ಚಿಕ್ಕ ಪಟ್ಟಣದಲ್ಲಿ ಸೌತ್ ಫೋರ್ಕ್‌ ಅಣೆಕಟ್ಟು ಇತ್ತು. ಅದನ್ನು 1838 ಮತ್ತು 1853ರ ನಡುವೆ ಕಾಮನ್‌ವೆಲ್ತ್‌ ಆಫ್ ಪೆನ್ಸಿಲ್ವೇನಿಯಾದಿಂದ ಕಟ್ಟಲಾಗಿತ್ತು. ಜೋನ್ಸ್‌ಟೌನ್‌ನಲ್ಲಿ ಒಂದು ಕಾಲುವೆ ಜಲಾನಯನಕ್ಕೆ ಜಲಾಶಯದಂತೆ ಬಳಸಲು ಇದನ್ನು ನಿರ್ಮಿಸಿದ್ದರು. ಆ ಭಾಗದಲ್ಲಿ ರೈಲುರಸ್ತೆಗಳು ಹೆಚ್ಚಿದಂತೆ ಕಾಲುವೆಯಲ್ಲಿ ದೋಣಿಗಳಲ್ಲಿ ಸರಕುಸಾರಿಗೆಯು ಕಡಿಮೆಯಾಯಿತು. ಕಾಮನ್‌ವೆಲ್ತ್‌ ಸಂಸ್ಥೆಯು ಸರೋವರ ಬಳಕೆಯನ್ನು ಬಿಟ್ಟು, ಅದನ್ನು ಪೆನ್ಸಿಲ್ವೇನಿಯಾ ರೈಲ್‌ರೋಡ್‌ಗೆ ಮಾರಿತು. ಅದನ್ನು ಮತ್ತೆ ಖಾಸಗಿಯವರಿಗೆ ಮಾರಲಾಯಿತು, ನಂತರ ಅದು 1881ರಲ್ಲಿ ಸೌತ್‌ ಫೋರ್ಕ್‌ ಫಿಶಿಂಗ್ ಮತ್ತು ಹಂಟಿಂಗ್ ಕ್ಲಬ್‌ ಒಡೆತನಕ್ಕೆ ದಕ್ಕಿತು. ಅಣೆಕಟ್ಟಿನಿಂದ ಕೆಳಭಾಗದಲ್ಲಿ 20 ಮೈಲಿಗೂ ಕಡಿಮೆ ಅಂತರದಲ್ಲಿ ಜೋನ್ಸ್‌ಟೌನ್‌ ನಗರವಿತ್ತು. ಅಲ್ಲಿಯೇ ಕಾರ್ನೆಗೀ ಸ್ಟೀಲ್‌ನ ಪ್ರಮುಖ ಪ್ರತಿಸ್ಪರ್ಧಿ (ಇವರಿಂದಲೇ ಕಾರ್ನೆಗೀ ಉಕ್ಕುತಯಾರಿಸುವ ತಜ್ಞ ಬಿಲ್‌ ಜೀನ್ಸ್‌ ಅವರನ್ನು ತನ್ನ ಕಂಪನಿಗೆ ಕರೆಸಿಕೊಂಡಿದ್ದರು) ಕೇಂಬ್ರಿಯಾ ಐರನ್ ಆಂಡ್ ಸ್ಟೀಲ್ ಕಂಪನಿಯಿತ್ತು. ಅದು ಆಗ ವಿಶ್ವದ ಅತಿದೊಡ್ಡ ವಾರ್ಷಿಕ ಉಕ್ಕು ಉತ್ಪಾದನಾ ಕಂಪನಿಯಾಗಿತ್ತು. ಅಣೆಕಟ್ಟಿನ ಕಳಪೆ ನಿರ್ವಹಣೆ, ಎತ್ತರ ಕಡಿಮೆ ಇದ್ದುದ್ದು, ಅತ್ಯಧಿಕ ಪ್ರಮಾಣದಲ್ಲಿ ಹಿಮ ಕರಗಿದ್ದುದು ಮತ್ತು ಅಪಾರ ಪ್ರಮಾಣದ ವಸಂತಕಾಲದ ಮಳೆ, ಈ ಎಲ್ಲವೂ ಸೇರಿ ಅಣೆಕಟ್ಟು 1889ರ ಮೇ 31ರಂದು ಒಡೆದುಹೋಯಿತು. ಇದರಿಂದಾಗಿ ಇಪ್ಪತ್ತು ಮಿಲಿಯನ್ ಟನ್‌ಗಳಷ್ಟು ನೀರು ಪ್ರವಾಹವಾಗಿ ಕಣಿವೆಗೆ ಉಕ್ಕಿಹರಿದು, ಜೋನ್ಸ್‌ಟೌನ್‌ ಪ್ರವಾಹ ಕ್ಕೆ ಕಾರಣವಾಯಿತು. ಅಣೆಕಟ್ಟು ಒಡೆದ ಸುದ್ದಿಯನ್ನು ಪಿಟ್ಸ್‌ಬರ್ಗ್‌ಗೆ ತಂತಿ ಮೂಲಕ ಕಳುಹಿಸಿದಾಗ, ಸೌತ್‌ ಫೋರ್ಕ್‌ ಫಿಶಿಂಗ್ ಮತ್ತು ಹಂಟಿಂಗ್ ಕ್ಲಬ್‌ನ ಫ್ರಿಕ್ ಮತ್ತು ಇನ್ನಿತರ ಸದಸ್ಯರು ಒಟ್ಟು ಸೇರಿ, ಪ್ರವಾಹಕ್ಕೆ ಬಲಿಯಾದವರಿಗೆ ಸಹಾಯ ಮಾಡಲು ಪಿಟ್ಸ್‌ಬರ್ಗ್ ಪರಿಹಾರ ಸಮಿತಿಯನ್ನು ರೂಪಿಸಿಕೊಂಡರು. ಜೊತೆಗೆ ಕ್ಲಬ್‌ ಕುರಿತು ಅಥವಾ ಪ್ರವಾಹದ ಕುರಿತು ಎಂದಿಗೂ ಸಾರ್ವಜನಿಕವಾಗಿ ಮಾತನಾಡಬಾರದು ಎಂದು ನಿರ್ಧರಿಸಿದರು. ಈ ಕಾರ್ಯತಂತ್ರವು ಯಶಸ್ವಿಯಾಯಿತು. ಜೊತೆಗೆ ಕ್ಲಬ್‌ನ ಸದಸ್ಯರ ಮೇಲೆ ಹೂಡಲಾದ ಎಲ್ಲ ಮೊಕದ್ದಮೆಗಳು ವಜಾಗೊಳ್ಳುವಂತೆ ಮಾಡುವಲ್ಲಿ ನಾಕ್ಸ್ ಹಾಗೂ ರೀಡ್‌ ಅವರು ಯಶಗಳಿಸಿದರು. ಪ್ರವಾಹದಿಂದಾಗಿ ಕೇಂಬ್ರಿಯಾ ಐರನ್ ಆಂಡ್ ಸ್ಟೀಲ್‌ ಘಟಕವು ಅಪಾರವಾಗಿ ಹಾನಿಗೀಡಾದರೂ ಒಂದು-ಒಂದೂವರೆ ವರ್ಷದಲ್ಲಿಯೇ ಅವರು ಮತ್ತೆ ಪೂರ್ಣ ಪ್ರಮಾಣದ ಉತ್ಪಾದನೆಗೆ ತೊಡಗುವಂತೆ ಚೇತರಿಸಿಕೊಂಡರು. ಆ ಸಮಯಕ್ಕೆ, ಕಾರ್ನೆಗೀಯವರ ಉಕ್ಕಿನ ಉತ್ಪಾದನೆಯು ಕೇಂಬ್ರಿಯಾದವರ ಉತ್ಪಾದನೆಯನ್ನು ಮೀರಿಸಿತ್ತು. ಪ್ರವಾಹದಲ್ಲಿ ಕೇಂಬ್ರಿಯಾ ಕಂಪನಿಯ ಚೀಫ್‌ ಲೀಗಲ್ ಕೌನ್ಸೆಲ್ ಸೈರಸ್‌ ಎಲ್ಡರ್‌ ನಿರ್ಮಿಸಿದ್ದ ಗ್ರಂಥಾಲಯವು ನಾಶವಾಯಿತು. ಅದರ ಬದಲಿಗೆ ಪ್ರವಾಹದ ನಂತರ, ಕಾರ್ನೆಗೀಯವರು ಜೋನ್ಸ್‌ಟೌನ್‌ನಲ್ಲಿ ಹೊಸ ಗ್ರಂಥಾಲಯವನ್ನು ಕಟ್ಟಿದರು. ಕಾರ್ನೆಗೀ- ದೇಣಿಗೆ ನೀಡಿದ ಗ್ರಂಥಾಲಯವು ಈಗ ಜೋನ್ಸ್‌ಟೌನ್‌ ಏರಿಯಾ ಹೆರಿಟೇಜ್ ಅಸೋಸಿಯೇಶನ್‌ ಒಡೆತನದಲ್ಲಿದೆ ಮತ್ತು ಅದರಲ್ಲಿ ಒಂದು ಪ್ರವಾಹ ವಸ್ತುಸಂಗ್ರಹಾಲಯವನ್ನೂ ನಿರ್ಮಿಸಲಾಗಿದೆ.

1892: ಹೋಮ್‌ಸ್ಟಡ್‌ ಮುಷ್ಕರ

ಬದಲಾಯಿಸಿ
ಚಿತ್ರ:Homesteadstrike.jpg
ಹೋಮ್‌ಸ್ಟಡ್‌ ಮುಷ್ಕರ

ಹೋಮ್‌ಸ್ಟಡ್‌ ಮುಷ್ಕರವು ಅತ್ಯಂತ ಕೆಟ್ಟ ಕಾರ್ಮಿಕ ಹೋರಾಟವಾಗಿದ್ದು, 1982ರಲ್ಲಿ 143 ದಿನಗಳ ಕಾಲ ನಡೆಯಿತು. ಇದು ಅಮೆರಿಕದ ಇತಿಹಾಸದಲ್ಲಿಯೇ ಅತ್ಯಂತ ಗಂಭೀರ ಕಾರ್ಮಿಕ ಹೋರಾಟವಾಗಿದೆ. ಹೋಮ್‌ಸ್ಟಡ್‌, ಪೆನ್ಸಿಲ್ವೇನಿಯಾ ದಲ್ಲಿದ್ದ ಕಾರ್ನೆಗೀ ಸ್ಟೀಲ್‌ನ ಪ್ರಮುಖ ಘಟಕದಲ್ಲಿ ಹೋರಾಟವು ಕೇಂದ್ರೀಕೃತವಾಗಿತ್ತು. ನಂತರದಲ್ಲಿ ಅದು ಸಂಯುಕ್ತ ಸಂಸ್ಥಾನದ ನ್ಯಾಶನಲ್ ಅಮಾಲ್ಗಮೇಟೆಡ್ ಅಸೋಸಿಯೇಶನ್ ಆಫ್‌ ಐರನ್ ಆಂಡ್ ಸ್ಟೀಲ್‌ ವರ್ಕರ್ಸ್ ಹಾಗೂ ಕಾರ್ನೆಗೀ ಸ್ಟೀಲ್ ಕಂಪನಿಯ ನಡುವೆ ವಿವಾದವಾಗಿ ಬೆಳೆಯಿತು. ಈ ಗಲಭೆ ಅತ್ಯಧಿಕಗೊಳ್ಳುವ ಮೊದಲು ಕಾರ್ನೆಗೀ ಸ್ಕಾಟ್‌ಲ್ಯಾಂಡ್‌ ಪ್ರವಾಸಕ್ಕೆ ಹೋದರು. ಹಾಗೆ ಮಾಡುವ ಮೂಲಕ, ಕಾರ್ನೆಗೀಯವರು ವಿವಾದವನ್ನು ತಮ್ಮ ಸಂಗಡಿಗ ಮತ್ತು ಪಾಲುದಾರ ಹೆನ್ರಿ ಕ್ಲೇ ಫ್ರಿಕ್‌ ನ ಮಧ್ಯಸ್ತಿಕೆಗೆ ವಿವಾದವನ್ನು ಒಪ್ಪಿಸಿದರು. ಫ್ರಿಕ್‌ ತನ್ನ ಬಲವಾದ ಯೂನಿಯನ್-ವಿರೋಧಿ ಭಾವನೆಗಳಿಂದಾಗಿ ಉದ್ಯಮದ ವಲಯದಲ್ಲಿ ಹೆಸರಾಗಿದ್ದರು. ಶೇ. 60ರಷ್ಟು ಲಾಭವನ್ನು ಕಂಪನಿಯು ಕೆಲದಿನಗಳ ಹಿಂದಷ್ಟೇ ಗಳಿಸಿದ್ದರೂ, ಕೆಲಸಗಾರರ ವೇತನವನ್ನು ಶೇ. 30ಕ್ಕಿಂತ ಹೆಚ್ಚು ಏರಿಸಲು ನಿರಾಕರಿಸಿತು. ಕೆಲವು ಕೆಲಸಗಾರರು ಪೂರ್ಣ ಶೇ. 60ರಷ್ಟು ಏರಿಕೆ ಬೇಕೆಂಬ ಆಗ್ರಹ ಮುಂದಿಟ್ಟಾಗ, ಆಡಳಿತ ಮಂಡಳಿಯು ಯೂನಿಯನ್‌ಅನ್ನು ವಿಸರ್ಜಿಸಿ, ಹೊರಹಾಕಿತು. ಹೀಗೆ ಕೆಲಸ ಸ್ಥಗಿತಗೊಂಡಿದ್ದನ್ನು ಕೆಲಸಗಾರರು ಮುಷ್ಕರ ನಡೆಸಿದ್ದು ಎಂದು ಪರಿಗಣಿಸದೇ, ಆಡಳಿತ ಮಂಡಳಿಯ ಲಾಕ್‌ಔಟ್ " ಎಂದು ಪರಿಗಣಿಸಿತು. ಹಾಗೆ ನೋಡಿದರೆ, ಕೆಲಸಗಾರರು ಪ್ರತಿಭಟಿಸುವ ತಮ್ಮ ಹಕ್ಕುಗಳ ಮಿತಿಯಲ್ಲಿಯೇ ಇದ್ದರು ಮತ್ತು ನಂತರದ ಸರ್ಕಾರಿ ಕ್ರಮಗಳು ಬೆಳೆಯುತ್ತಿರುವ ಕಾರ್ಮಿಕ ಹಕ್ಕುಗಳ ಆಂದೋಲನವನ್ನು ದಮನ ಮಾಡಲು ತೆಗೆದುಕೊಂಡ ಕ್ರಿಮನಲ್ ಕಾರ್ಯವಿಧಾನಗಳ ಹಾಗೆ ತೋರಿದವು. ಆಡಳಿತ ಮಂಡಳಿಯು ಕಾರ್ಮಿಕ ಹಕ್ಕು ಆಂದೋಲನವನ್ನು ಬಲವಾಗಿ ವಿರೋಧಿಸುತ್ತಿತ್ತು. ಸಾವಿರಾರು ಸಂಖ್ಯೆಯ ಮುಷ್ಕರನಿಲ್ಲಿಸಿ ಕೆಲಸ ಮಾಡುವ ಕೆಲಸಗಾರರನ್ನು ಉಕ್ಕಿನ ಘಟಕಗಳಲ್ಲಿ ಕೆಲಸ ಮಾಡಲು ಫ್ರಿಕ್‌ ಕರೆತಂದನು. ಇವರಿಗೆ ರಕ್ಷಣೆ ಕೊಡಲು ಪಿಂಕರ್‌ಟನ್ ಏಜೆಂಟ್‌ರನ್ನೂ ಕರೆತಂದನು. ಜುಲೈ 6ರಂದು, ನ್ಯೂಯಾಕ್‌ ನಗರ ಮತ್ತು ಚಿಕಾಗೋದಿಂದ 300 ಪಿಂಕರ್‌ಟನ್‌ ಏಜೆಂಟ್‌‌ರ ಪಡೆಯನ್ನು ಕರೆಸಿದ್ದು, ಮುಷ್ಕರನಿರತರು ಮತ್ತು ಇವರ ಮಧ್ಯೆ ಕೈಕೈ ಮಿಲಾಯಿಸಲು ಕಾರಣವಾಯಿತು. ಈ ಕಾಳಗದಲ್ಲಿ ಏಳು ಜನ ಮುಷ್ಕರನಿರತರು ಮತ್ತು 3 ಜನ ಪಿಂಕರ್‌ಟನ್‌ ಏಜೆಂಟ್‌‌ ಸೇರಿದಂತೆ ಒಟ್ಟು 10 ಜನರು ಸತ್ತರು ಮತ್ತು ನೂರಾರು ಜನರು ಗಾಯಗೊಂಡರು. ಮುಷ್ಕರದ ಸ್ಥಳಕ್ಕೆ ಪೆನ್ಸಿಲ್ವೇನಿಯಾ ಗವರ್ನರ್‌ ರಾಬರ್ಟ್‌ ಪ್ಯಾಟಿಸನ್ ಸೇನೆಯ ಎರಡು ತುಕಡಿಗಳನ್ನು ಕಳುಹಿಸಲು ಆದೇಶ ನೀಡಿದರು. ಮುಷ್ಕರ ನಿರತ ಕೆಲಸಗಾರರು ಮತ್ತು ಪಿಂಕರ್‌ಟನ್‌ಗಳ ನಡುವಣ ಜಗಳಕ್ಕೆ ಪ್ರತಿಕ್ರಿಯೆಯಾಗಿ, ದಂಗೆಕೋರ ಅಲೆಕ್ಸಾಂಡರ್ ಬರ್ಕ್‌ಮನ್‌ ಫ್ರಿಕ್‌ನನ್ನು ಹತ್ಯೆ ಮಾಡಲು ಯತ್ನಿಸಿ, ಫ್ರಿಕ್‌ನತ್ತ ಗುಂಡು ಹಾರಿಸಿದ ಎನ್ನಲಾಗಿದ್ದು, ಫ್ರಿಕ್ ಗಾಯಗೊಂಡ. ಮುಷ್ಕರಕ್ಕೆ ನೇರವಾಗಿ ಸಂಬಂಧಿಸಿಲ್ಲವಾದರೂ, ಬರ್ಕ್‌ಮನ್‌ಅನ್ನು ಹತ್ಯೆಗೆ ಪ್ರಯತ್ನ ಆರೋಪದಲ್ಲಿ ಬಂಧಿಸಲಾಯಿತು. ಬರ್ಕ್‌ಮನ್ ಪ್ರಕಾರ, "...ಫ್ರಿಕ್‌ನನ್ನು ನಿವಾರಿಸಿದರೆ, ಹೋಮ್‌ಸ್ಟಡ್‌ ಸ್ಥಿತಿಗತಿಯ ಜವಬ್ದಾರಿಯು ಕಾರ್ನೆಗೀ ಮೇಲೆ ಬೀಳುತ್ತದೆ."[೩೧][೩೨] ತದನಂತರದಲ್ಲಿ ಕಂಪನಿಯು, ಹೋಮ್‌ಸ್ಟಡ್‌ ಘಟಕದ ಕೆಲಸಗಾರರ ಬದಲಿಗೆ ಯೂನಿಯನ್ -ರಹಿತ ವಲಸೆ ಕೆಲಸಗಾರರನ್ನು ನೇಮಿಸಿಕೊಂಡು ಕಾರ್ಯನಿರ್ವಹಿಸಲಾರಂಭಿಸಿತು ಮತ್ತು ಆಗ ಕಾರ್ನೆಗೀಯು ಸಂಯುಕ್ತ ಸಂಸ್ಥಾನಕ್ಕೆ ಮರಳಿದರು. ಆದಾಗ್ಯೂ, ಕಾರ್ನೆಗೀಯವರ ಹೆಸರಿಗೆ ಹೋಮ್‌ಸ್ಟಡ್‌ ಘಟನೆಗಳ ನಂತರ ಶಾಶ್ವತವಾಗಿ ಮಸಿಬಳಿದಂತಾಯಿತು.

ಸಿದ್ಧಾಂತ

ಬದಲಾಯಿಸಿ

ಆಂಡ್ಯ್ರೂ ಕಾರ್ನೆಗೀ ನೀತಿವಾಕ್ಯ

ಬದಲಾಯಿಸಿ

ತಮ್ಮ ಅಂತಿಮ ದಿನಗಳಲ್ಲಿ, ಆಂಡ್ಯ್ರೂ ಕಾರ್ನೆಗೀಯವರು ಶ್ವಾಸಕೋಶದ ನ್ಯೂಮೋನಿಯಾದಿಂದ ಬಳಲಿದರು. ಕಾರ್ನೆಗೀಯವರು 1919ರ ಆಗಸ್ಟ್ 11ರಂದು ಮರಣಿಸುವ ಮೊದಲು ವಿವಿಧ ಕಾರಣಗಳಿಗಾಗಿ 350,695,654 ಡಾಲರ್ ಹಣವನ್ನು ದಾನ ಮಾಡಿದ್ದರು. 'ಆಂಡ್ಯ್ರೂ ಕಾರ್ನೆಗೀ ನೀತಿವಾಕ್ಯ'ವು ಕಾರ್ನೆಗೀಯವರ ಉದಾರ ಸ್ವಭಾವವನ್ನು ಚಿತ್ರಿಸುತ್ತದೆ :

  • ವ್ಯಕ್ತಿಯು ತನ್ನ ಜೀವಿತಾವಧಿಯ ಮೊದಲ ಮೂರನೇ ಒಂದು ಭಾಗವನ್ನು ಸಾಧ್ಯವಿದ್ದಷ್ಟು ಶಿಕ್ಷಣ ಪಡೆಯಲು ವ್ಯಯಿಸಬೇಕು.
  • ನಂತರದ ಮೂರನೇ ಒಂದು ಭಾಗದ ಜೀವಿತವನ್ನು ಸಾಧ್ಯವಿದ್ದಷ್ಟು ಹಣಗಳಿಸಲು ವ್ಯಯಿಸಬೇಕು.
  • ಜೀವಿತದ ಕೊನೆಯ ಮೂರನೇ ಒಂದುಭಾಗವನ್ನು ಗಳಿಸಿದ ಎಲ್ಲ ಹಣವನ್ನು ಯೋಗ್ಯ ಕಾರಣಗಳಿಗಾಗಿ ದಾನ ಮಾಡಲು ಬಳಸಬೇಕು.

ಆಂಡ್ಯ್ರೂ ಕಾರ್ನೆಗೀ ಲೋಕೋಪಕಾರಿ ಕಾರ್ಯಗಳಲ್ಲಿ ಮಗ್ನರಾಗಿದ್ದರು, ಆದರೆ ಧಾರ್ಮಿಕ ವಲಯದಿಂದ ಅವರು ತಮ್ಮನ್ನು ದೂರವೇ ಇರಿಸಿಕೊಂಡಿದ್ದರು. ವಿಶ್ವವು ತಮ್ಮನ್ನು 'ಪಾಸಿಟಿವಿಸ್ಟ್ ಅಥವಾ ಪ್ರಾತ್ಯಕ್ಷಿಕ ಪ್ರಮಾಣವಾದಿ' ಎಂದು ಗುರುತಿಸಬೇಕೆಂದು ಅವರು ಬಯಸಿದ್ದರು. ಅವರು ಸಾರ್ವಜನಿಕ ಬದುಕಿನಲ್ಲಿ, ಜಾನ್‌ ಬ್ರೈಟ್‌ರಿಂದ ಅಪಾರವಾಗಿ ಪ್ರಭಾವಿತರಾಗಿದ್ದರು.

ಸಂಪತ್ತಿನ ಕುರಿತು

ಬದಲಾಯಿಸಿ
 
ಕಾರ್ನೆಗೀಯವರು ಸ್ಕಿಬೋ ಕ್ಯಾಸಲ್‌ನಲ್ಲಿದ್ದಾಗ , 1914
 
ನ್ಯಾಶನಲ್ ಕೆಥಡ್ರಲ್‌ನಲ್ಲಿ ಆಂಡ್ಯ್ರೂ ಕಾರ್ನೆಗೀಯವರಿಗೆ ಸಮರ್ಪಿಸಲಾದ ಸ್ಟೈನ್‌ಗಳಿರುವ ಗಾಜಿನ ಕಿಟಕಿ
1868ರಲ್ಲಿಯೇ,ತಮ್ಮ 33ನೇ ವಯಸ್ಸಿನಲ್ಲಿಯೇ ಅವರು ತಮಗೇ ಒಂದು ಮೆಮೋ ಬರೆದುಕೊಂಡಿದ್ದರು.  ಅವರು ಹೀಗೆ ಬರೆದಿದ್ದರು:ಸಂಪತ್ತಿನ ಸಂಗ್ರಹಣೆಯು ಮೂರ್ತಿಪೂಜೆಯ ಒಂದು ಅತ್ಯಂತ ಕೆಟ್ಟ ರೀತಿ.  ಯಾವ ಮೂರ್ತಿಯೂ ಹಣದ ಆರಾಧನೆಗಿಂತ ಕೀಳ್ಮಟ್ಟದ್ದೇನಲ್ಲ."[೩೩]

ತಮ್ಮನ್ನು ತಾವು ಕೆಳಮಟ್ಟದಲ್ಲಿ ನೋಡುವುದನ್ನು ತಪ್ಪಿಸಿಕೊಳ್ಳಲು, ಅವರು ತಾವು 35ನೇ ವಯಸ್ಸಿಗೆ ನಿವೃತ್ತರಾಗಿ, ಲೋಕೋಪಕರಾದ ಕಾರ್ಯದಲ್ಲಿ ತೊಡಗುವುದಾಗಿ ಮೆಮೋದಲ್ಲಿ ಬರೆದುಕೊಂಡಿದ್ದರು. "ಹೀಗೆ ಶ್ರೀಮಂತನಾಗಿ ಮರಣಿಸುವ ವ್ಯಕ್ತಿ ಕಳಂಕಿತನಾಗಿ ಮರಣಿಸುತ್ತಾನೆ' ಎಂದು ಬರೆದುಕೊಂಡಿದ್ದನು. ಆದರೆ ಅವರು 1881ರ ವರೆಗೆ ಪ್ರಾಮಾಣಿಕತೆಯಿಂದ ಲೋಕೋಪಕಾರದ ಕಾರ್ಯಗಳಲ್ಲಿ ತೊಡಗಿಕೊಳ್ಳಲಿಲ್ಲ.1881ರಲ್ಲಿ , ತಮ್ಮ ತವರೂರು ಸ್ಕಾಟ್‌ಲ್ಯಾಂಡ್‌ನ ಡನ್‌ಫರ್‌ಮ್ಲಿನ್ ನಲ್ಲಿ ಗ್ರಂಥಾಲಯಕ್ಕೆ ದೇಣಿಗೆ ನೀಡುವುದರೊಂದಿಗೆ ಸಮಾಜಕಲ್ಯಾಣ ಕೆಲಸದಲ್ಲಿ ತೊಡಗಿಕೊಂಡರು.[೩೪] ಕಾರ್ನೆಗೀ "ದಿ ಗಾಸ್ಪೆಲ್ ಆಫ್ ವೆಲ್ತ್‌ (ಸಂಪತ್ತಿನ ಸುವಾರ್ತೆ)",[೩೫] ಎಂಬ ಲೇಖನವನ್ನು ಬರೆದಿದ್ದು, ಅದರಲ್ಲಿ ಶ್ರೀಮಂತರು ತಮ್ಮ ಸಂಪತ್ತನ್ನು ಸಮಾಜವನ್ನು ಶ್ರೀಮಂತಗೊಳಿಸಲು ಬಳಸಬೇಕೆಂಬ ತಮ್ಮ ದೃಷ್ಟಿಕೋನವನ್ನು ವಿವರಿಸಿದ್ದರು.

ಕಾರ್ನೆಗೀಯವರು ತಮಗೇ ಬರೆದುಕೊಂಡ ಮೆಮೋಗಳಲ್ಲಿ ಒಂದರಿಂದ ತೆಗೆದುಕೊಂಡ ವಾಕ್ಯ ಕೆಳಗಿನಂತಿದೆ : ಮನುಷ್ಯ ಕೇವಲ ಬ್ರೆಡ್‌ನಿಂದಲೇ ಬದುಕಲಾರ.

Man does not live by bread alone. I have known millionaires starving for lack of the nutriment which alone can sustain all that is human in man, and I know workmen, and many so-called poor men, who revel in luxuries beyond the power of those millionaires to reach. It is the mind that makes the body rich. There is no class so pitiably wretched as that which possesses money and nothing else. Money can only be the useful drudge of things immeasurably higher than itself. Exalted beyond this, as it sometimes is, it remains Caliban still and still plays the beast. My aspirations take a higher flight. Mine be it to have contributed to the enlightenment and the joys of the mind, to the things of the spirit, to all that tends to bring into the lives of the toilers of Pittsburgh sweetness and light. I hold this the noblest possible use of wealth.[ಸೂಕ್ತ ಉಲ್ಲೇಖನ ಬೇಕು]

1908ರಲ್ಲಿ ಅವರು, (ವೇತನವಿಲ್ಲದೆ) ನೆಪೋಲಿಯನ್ ಹಿಲ್‌ ಎಂಬ ಪತ್ರಕರ್ತನನ್ನು, 500ಕ್ಕೂ ಅಧಿಕ ಶ್ರೀಮಂತ ಸಾಧಕರನ್ನು ಸಂದರ್ಶಿಸಿ, ಅವರ ಯಶಸ್ಸಿನ ಸಾಮಾನ್ಯ ಎಳೆಗಳನ್ನು ಕಂಡುಕೊಳ್ಳುವಂತೆ ಆಯೋಜಿಸಿದ್ದರು. ಹಿಲ್‌ ನಂತರದಲ್ಲಿ ಕಾರ್ನೆಗೀಯವರ ಸಹಭಾಗೀದಾರರಾದರು. ಅವರ ಈ ಕಾರ್ಯವು 1928ರಲ್ಲಿ, ಕಾರ್ನೆಗೀಯವರ ಮರಣಾನಂತರ ಹಿಲ್‌ ಅವರ ಕೃತಿ, ದಿ ಲಾ ಆಫ್‌ ಸಕ್ಸಸ್‌ (ಐಎಸ್‌ಬಿಎನ್‌ 0-87980-447-5)ನಲ್ಲಿ ನಿರೂಪಿತವಾಗಿದೆ. ಜೊತೆಗೆ 1937ರಲ್ಲಿ ಬಿಡುಗಡೆಯಾದ , ಥಿಂಕ್ ಆಂಡ್ ಗ್ರೋ ರಿಚ್ (ಐಎಸ್‌ಬಿಎನ್‌ 1-59330-200-2) ಕೃತಿಯಲ್ಲಿಯೂ ಒಡಮೂಡಿದೆ. ಎರಡನೆಯ ಕೃತಿಯೂ ಔಟ್‌ ಆಫ್‌ ಪ್ರಿಂಟ್‌ ಎನ್ನುವ ಸಂದರ್ಭ ಬರಲೇ ಇಲ್ಲ, ಏಕೆಂದರೆ ಅದು ಮೊದಲ ಬಾರಿ ಪ್ರಕಟವಾದಾಗಿನಿಂದ 30 ಮಿಲಿಯನ್‌ಗೂ ಅಧಿಕ ಪ್ರತಿಗಳನ್ನು ವಿಶ್ವಾದ್ಯಂತ ಮಾರಾಟವಾಗಿದೆ. 1960ರಲ್ಲಿ, ಹಿಲ್ ಅವರು ಸಂಪತ್ತು ಹುಟ್ಟುಹಾಕುವ ಆಂಡ್ಯ್ರೂ ಕಾರ್ನೆಗೀ ಸೂತ್ರಗಳನ್ನು ಇಟ್ಟುಕೊಂಡು, ಒಂದು ಸಂಕ್ಷಿಪ್ತ ಆವೃತ್ತಿಯನ್ನು ಪ್ರಕಟಿಸಿದರು. ಹಲವಾರು ವರ್ಷಗಳವರೆಗೆ ಅದೊಂದೇ ಆವೃತ್ತಿಯು ಸಾಮಾನ್ಯವಾಗಿ ದೊರೆಯುತ್ತಿತ್ತು,. 2004ರಲ್ಲಿ, ರೋಸ್‌ ಕಾರ್ನ್‌ವೆಲ್‌ ಥಿಂಕ್ ಆಂಡ್ ಗ್ರೋ ರಿಚ್‌!: ಮೂಲ ಆವೃತ್ತಿ, ಪುನಸ್ಸಂಪಾದಿತ ಮತ್ತು ಪರಿಷ್ಕೃತ (ಎರಡನೇ ಮುದ್ರಣ 2007) ಆವೃತ್ತಿಯನ್ನು ಪ್ರಕಟಿಸಿದರು. ಇದರಲ್ಲಿ ಮೂಲ ವಸ್ತುವನ್ನು ಇಟ್ಟುಕೊಂಡು, ಕೆಲವು ಅಲ್ಪ ಪರಿಷ್ಕರಣೆಗಳನ್ನು ಮತ್ತು ಸಮಗ್ರವಾದ ಅಂತಿಮ ಟಿಪ್ಪಣಿಗಳನ್ನು, ಒಂದು ಇಂಡೆಕ್ಸ್‌ ಮತ್ತು ಅನುಬಂಧವನ್ನು ನೀಡಲಾಗಿದೆ.

ಧರ್ಮ ಮತ್ತು ವಿಶ್ವ ದೃಷ್ಟಿಕೋನ

ಬದಲಾಯಿಸಿ

19ನೇ ಶತಮಾನದ ಸ್ಕಾಟ್‌ಲ್ಯಾಂಡ್‌ನಲ್ಲಿ ಧರ್ಮ ಮತ್ತು ತತ್ವಶಾಸ್ತ್ರ ಕುರಿತು ಪಂಥೀಯವಾದ ಮತ್ತು ಘರ್ಷಣೆಯನ್ನು ಕಂಡಿದ್ದ ಕಾರ್ನೆಗೀಯವರು, ತಮ್ಮನ್ನು ಸಂಘಟಿತ ಧರ್ಮ ಮತ್ತು ಆಸ್ತಿಕವಾದದಿಂದ ದೂರವಿಟ್ಟುಕೊಂಡರು.[೩೬] ಬದಲಿಗೆ ಕಾರ್ನೆಗೀಯವರು ನಿಸರ್ಗವಾದಿ ಮತ್ತು ವೈಜ್ಞಾನಿಕ ದೃಷ್ಟಿಕೋನದೊಂದ ಸಂಗತಿಗಳನ್ನು ನೋಡಲು ಆದ್ಯತೆ ನೀಡಿದರು. "ಆಸ್ತಿಕವಾದ ಮತ್ತು ಅತೀಂದ್ರಿಯ ಶಕ್ತಿಗಳಿಂದ ನಾನು ತಪ್ಪಿಸಿಕೊಂಡಿದ್ದು ಮಾತ್ರವಲ್ಲ, ನಾನು ವಿಕಾಸದ ಸತ್ಯವನ್ನು ಕಂಡುಕೊಂಡೆ" ಎಂದು ಅವರು ಹೇಳಿದ್ದಾರೆ.[೩೭] ನಂತರದ ಅವರ ಬದುಕಿನಲ್ಲಿ, ಧರ್ಮದ ಕುರಿತ ಅವರ ದೃಢ ವಿರೋಧವು ಸ್ವಲ್ಪ ಮೃದುವಾಯಿತು. ಅವರಿಗೆ ಯಾವುದೇ ನಿರ್ದಿಷ್ಟ ಧರ್ಮದಲ್ಲಿ ನಂಬಿಕೆಯಿಲ್ಲದಿದ್ದರೂ, ಅವರು ತಮ್ಮ ಪತ್ನಿ ಮತ್ತು ಮಗಳೊಂದಿಗೆ ಪ್ರೆಸ್‌ಬೈಸ್ಟೆರಿಯನ್ ಚರ್ಚ್‌ನಲ್ಲಿ ನಡೆಯುವ ಪೂಜೆಗಳಿಗೆ ಹೋಗುತ್ತಿದ್ದರು.[೩೮] ಅವರು ಸೇಂಟ್‌ ಆಂಡ್ರ್ಯೂಸ್‌ಗೆ ಒಂದು ಭಾಷಣವನ್ನೂ ಸಿದ್ಧಪಡಿಸಿಕೊಂಡಿದ್ದರು (ಆದರೆ ಅದನ್ನು ನೀಡಲಿಲ್ಲ), ಅದರಲ್ಲಿ "ಎಲ್ಲ ವಸ್ತುಗಳು ಒಂದು ಅನಂತ ಮತ್ತು ಚಿರಂತನ ಶಕ್ತಿಯಿಂದ ಮುನ್ನಡೆಯುತ್ತವೆ" ಎಂಬ ನಂಬಿಕೆಯನ್ನು ವಿವರಿಸಿದ್ದರು.[೩೯] ಕಾರ್ನೆಗೀಯವರು "ಅನಂತ ಬುದ್ಧಿಶಕ್ತಿ"ಯಲ್ಲಿ ವಿಶ್ವಾಸವಿಡುವುದರ ಮಹತ್ವವನ್ನು ಸಮರ್ಥಿಸುತ್ತಿದ್ದರು ಎಂದು ನಪೋಲಿಯನ್ ಹಿಲ್‌ ಬರೆದಿದ್ದಾನೆ. ಈ ಪದವನ್ನು ಹಿಲ್‌ "ದೇವರು" ಅಥವಾ "ಪರಮಅಸ್ತಿತ್ವ"ವನ್ನು ಗುರುತಿಸಲು ಬಳಸುತ್ತಿದ್ದನು.[೪೦][೪೧]

ವಿಶ್ವ ಶಾಂತಿ

ಬದಲಾಯಿಸಿ

"ಸಾರ್ವಜನಿಕ ಜೀವನದಲ್ಲಿ ತಮ್ಮ ಅಚ್ಚಿಮೆಚ್ಚಿನ ಜೀವಂತ ನಾಯಕ" ನಾಗಿದ್ದ ಬ್ರಿಟಿಶ್ ಉದಾರವಾದಿ, ಜಾನ್‌ ಬ್ರೈಟ್‌ ರಿಂದ ಪ್ರಭಾವಿತಗೊಂಡ ಕಾರ್ನೆಗೀಯವರು ತಮ್ಮ ಯುವ ವಯಸ್ಸಿನಲ್ಲಿಯೇ ವಿಶ್ವ ಶಾಂತಿಗಾಗಿ ಪ್ರಯತ್ನವನ್ನು ಆರಂಭಿಸಿದರು.[೪೨] ಅವರ ಧ್ಯೇಯವು, "ಎಲ್ಲವೂ ಚೆನ್ನಾಗಿದೆ, ಏಕೆಂದರೆ ಎಲ್ಲವೂ ಉತ್ತಮವಾಗಿ ಬೆಳೆಯುತ್ತವೆ" ಎಂಬುದಾಗಿತ್ತು, ಇದು ಅವರ ಯಶಸ್ವಿ ಉದ್ಯಮ ವೃತ್ತಿಬದುಕಿನಲ್ಲಿ ಮಾತ್ರ ಉತ್ತಮ ತರ್ಕವಾಗಿರಲಿಲ್ಲ, ಬದಲಿಗೆ ಅವರ ಅಂತಾರಾಷ್ಟ್ರೀಯ ಸಂಬಂಧಗಳ ಕುರಿತ ದೃಷ್ಟಿಕೋನದಲ್ಲಿಯೂ ನಿಜವಾಯಿತು. ಅಂತಾರಾಷ್ಟ್ರೀಯ ಶಾಂತಿಯ ಕುರಿತ ಅವರ ಪ್ರೀತಿ ಮತ್ತು ಪ್ರಯತ್ನಗಳ ಹೊರತಾಗಿಯೂ, ಕಾರ್ನೆಗೀಯವರು ವಿಶ್ವ ಶಾಂತಿಯ ಶೋಧದಲ್ಲಿ ಅನೇಕ ಗೊಂದಲಗಳನ್ನು ಎದುರಿಸಬೇಕಾಯಿತು. ಈ ಗೊಂದಲಗಳು ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಸಂಬಂಧಗಳ ಕುರಿತ ಅವರ ದೃಷ್ಟಿಕೋನ ಮತ್ತು ಅವರ ಇನ್ನಿತರ ನಿಷ್ಠಾವಂತರ ನಡುವಣ ಸಂಘರ್ಷ ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ, 1880ರ ಮತ್ತು 1890ರ ದಶಕದುದ್ದಕ್ಕೂ, ಕಾರ್ನೆಗೀಯವರು ತಮ್ಮ ಸ್ಟೀಲ್‌ ವರ್ಕ್ಸ್ ಕಂಪನಿಯು ಸಂಯುಕ್ತ ಸಂಸ್ಥಾನದ ಆಧುನಿಕ ಮತ್ತು ವಿಸ್ತೃತ ನೌಕಾಪಡೆಯನ್ನು ನಿರ್ಮಿಸಲು ರಕ್ಞಾಕವಚ ಪ್ಲೇಟ್‌ಗಳ ಅಗಾಧ ಬೇಡಿಕೆಯನ್ನು ಪೂರೈಸಲು ಕೆಲಸ ಮಾಡಲು ಆಸ್ಪದವಿತ್ತರು; ಅದೇ ವೇಳೆ ಅವರು ಅಮೆರಿಕದ ಸಮುದ್ರ ವಿಸ್ತರಣೆಯನ್ನು ವಿರೋಧಿಸಿದರು.[೪೩] ಜೊತೆಗೆ ಬ್ರಿಟಿಶ್‌ ವರ್ಗ ಸಂರಚನೆ ಕುರಿತು ಅವರು ವಿವಾದಾತ್ಮಕ ಟೀಕೆಗಳನ್ನು ಮಾಡಿದರು, ಅದು ಅವರ ಆಂಗ್ಲೋ -ಅಮೆರಿಕನ್ ಸ್ನೇಹದ ಉತ್ತೇಜನಕ್ಕೆ ಅಡ್ಡಿಯಾದಂತೆ ತೋರುತ್ತದೆ.[೪೪] ಅಮೆರಿಕದ ಆಕ್ರಮಣಗಳ ಕುರಿತು ವಿಚಾರವಾಗಿ, ಕಾರ್ನೆಗೀಯವರು ಸಂಯುಕ್ತ ಸಂಸ್ಥಾನದ ಪರವಾದ ನಿಲುವುಗಳನ್ನು ತಳೆಯುವುದು ಅವಿವೇಕತನ ಎಂದು ಭಾವಿಸಿದ್ದರು. ಅಮೆರಿಕವು ಹವಾಯಿ ದ್ವೀಪಗಳು, ಕ್ಯೂಬಾ ಮತ್ತು ಪ್ಯುರೆಟೋ ರಿಕೋ ದೇಶಗಳನ್ನು ಆಕ್ರಮಣ ಮಾಡಿದ್ದನ್ನು ಕಾರ್ನೆಗೀಯವರು ವಿರೋಧಿಸಲಿಲ್ಲ. ಆದರೆ ಅಮೆರಿಕದ ಫಿಲಿಪ್ಪೀನ್ಸ್‌ ಆಕ್ರಮಣದ ಕುರಿತು ಮಾತ್ರ ಗಟ್ಟಿಯಾಗಿ ವಿರೋಧಿಸಿದರು. ಏಕೆಂದರೆ ಹವಾಯಿ, ಕ್ಯೂಬನ್ನರು ಮತ್ತು ಪ್ಯುರಿಟೋ ರಿಕನ್ನರಂತೆ ಅಲ್ಲದೇ, ಫಿಲ್ಲಿಪ್ಪೀನ್ಸ್ ಜನರು ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಇಚ್ಛೆ ಹೊಂದಿದ್ದರು. ಆ ದ್ವೀಪಗಳನ್ನು ವಶಪಡಿಸಿಕೊಂಡಿದ್ದು ಪ್ರಜಾಪ್ರಭುತ್ವದ ಮೂಲ ತತ್ವಗಳನ್ನೇ ಅಲ್ಲಗೆಳೆದಂತೆ ಎಂದು ಕಾರ್ನೆಗೀ ನಂಬಿದ್ದರು. ಅವರು ಅಮೆರಿಕಾದ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಮತ್ತು ಫಿಲಿಪ್ಪೀನ್ಸ್ ಜನತೆಗೆ ಸ್ವಾತಂತ್ರ್ಯದಿಂದ ಬದುಕುವ ಅವಕಶ ನೀಡುವಂತೆ ಅವರು ವಿಲಿಯಂ ಮೆಕ್‌ಕಿನ್ಲೆಗೆ ಆಗ್ರಹಿಸಿದ್ದರು.[೪೫] ಅವರ ಈ ಕ್ರಮವು ಅಮೆರಿಕದ ಇನ್ನಿತರ ಸರ್ವಾಧಿಕಾರಿ-ವಿರೋಧಿ ವ್ಯಕ್ತಿಗಳನ್ನು ಆಕರ್ಷಿಸಿತು ಮತ್ತು ಅವರನ್ನು ತಕ್ಷಣವೇ ಆಂಟಿ-ಇಂಪೆರಿಯಲಿಸ್ಟ್‌ (ಸರ್ವಾಧಿಕಾರ-ವಿರೋಧಿ) ಲೀಗ್‌ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. 1901ರಲ್ಲಿ ತಮ್ಮ ಉಕ್ಕಿನ ಕಂಪನಿಯನ್ನು ಮಾರಿದ ನಂತರ, ಕಾರ್ನೆಗೀಯವರಿಗೆ ಶಾಂತಿ ಸ್ಥಾಪನೆಯ ಕಾರ್ಯದಲ್ಲಿ ಹಣಕಾಸು ದೇಣಿಗೆ ರೂಪದಲ್ಲಿ ಮತ್ತು ವೈಯಕ್ತಿಕವಾಗಿಯೂ ಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು. ವಿವಿಧ ಶಾಂತಿ-ಪಾಲನಾ ಸಂಸ್ಥೆಗಳು ಅವು ಬೆಳೆಯಲು ಸಾಧ್ಯವಾಗುವಂತೆ ಅವರು ತಮ್ಮ ಬಹುತೇಕ ಸಂಪತ್ತನ್ನು ಅವುಗಳಿಗೆ ದೇಣಿಗೆ ನೀಡಿದರು. ಅವರ ಗೆಳೆಯ, ಬ್ರಿಟಿಶ್ ಪ್ರಚಾರಕ ವಿಲಿಯಂ ಟಿ. ಸ್ಟೆಡ್ ಅವರಿಗೆ ಶಾಂತಿ ಮತ್ತು ಮಧ್ಯಸ್ತಿಕೆಯ ಗುರಿಯನ್ನು ಸಾಧಿಸಲು ಒಂದು ಹೊಸ ಸಂಸ್ಥೆಯನ್ನು ಸ್ಥಾಪಿಸಬೇಕೆಂದು ಸಲಹೆ ನೀಡಿದಾಗ, ಅದಕ್ಕೆ ಅವರು ನಮ್ಮ ಪ್ರಯತ್ನಗಳನ್ನು ಇನ್ನೊಂದು ಸಂಸ್ಥೆ ಸ್ಥಾಪಿಸಲು ವಿನಿಯೋಗಿಸುವುದು ವಿವೇಕವೆಂದು ನನಗೆ ಅನ್ನಿಸುವುದಿಲ್ಲ ಎಂದಿದ್ದರು.

I do not see that it is wise to devote our efforts to creating another organisation. Of course I may be wrong in believing that, but I am certainly not wrong that if it were dependent on any millionaire's money it would begin as an object of pity and end as one of derision. I wonder that you do not see this. There is nothing that robs a righteous cause of its strength more than a millionaire's money. Its life is tainted thereby.[೪೬]

ಜನರ ಪ್ರಯತ್ನ ಮತ್ತು ಇಚ್ಛೆಯು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಶಾಂತಿಯನ್ನು ಕಾಪಾಡುತ್ತದೆ ಎಂದು ಕಾರ್ನೆಗೀ ನಂಬಿದ್ದರು. ಆ ಕಾರ್ಯಕ್ಕೆ ಹಣ ಒಂದು ಉತ್ತೇಜನ ಮಾತ್ರ. ವಿಶ್ವ ಶಾಂತಿಯು ಕೇವಲ ಹಣಕಾಸಿನ ಬೆಂಬಲವನ್ನು ಅವಲಂಬಿಸಿದ್ದರೆ, ಅದು ಒಂದು ಗುರಿಯಾಗುವುದಿಲ್ಲ, ಕರುಣೆಯ ಒಂದು ಕ್ರಿಯೆಯಾಗುತ್ತದೆ ಎಂದು ಅವರು ಭಾವಿಸಿದ್ದರು.

1910ರಲ್ಲಿ ಅವರು ಸ್ಥಾಪಿಸಿದ ಅಂತಾರಾಷ್ಟ್ರೀಯ ಶಾಂತಿಗಾಗಿ ಕಾರ್ನೆಗೀ ದತ್ತಿನಿಧಿಯು ಯುದ್ಧವನ್ನು ನಿವಾರಿಸುವ ಅಂತಿಮ ಗುರಿಯ ದಿಕ್ಕಿನಲ್ಲಿ ಒಂದು ಮಹತ್ವದ ಮೈಲುಗಲ್ಲು ಎಂದು ಪರಿಗಣಿತವಾಗಿದೆ.  ಶಾಂತಿ ಉತ್ತೇಜನೆಗೆ 10 ಮಿಲಿಯನ್ ಡಾಲರ್‌ ಹಣವನ್ನು ನೀಡಿದ್ದು ಮಾತ್ರವಲ್ಲದೇ,  ಕಾರ್ನೆಗೀಯವರು ಯುದ್ಧದ ವಿವಿಧ ಕಾರಣಗಳ "ವೈಜ್ಞಾನಿಕ" ಪರಿಶೀಲನೆ ಮಾಡಲು ಮತ್ತು ಅಂತಹ ಕಾರಣಗಳನ್ನು ಕ್ರಮೇಣ ನಿವಾರಿಸುವಂತಹ ನ್ಯಾಯಾಂಗ ವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಿದ್ದರು.   ಸದ್ಯ ಇರುವ ಅಂತಾರಾಷ್ಟ್ರೀಯ ಕಾಯಿದೆಗಳ ಅಡಿಯಲ್ಲಿ ರಾಷ್ಟ್ರಗಳ ಹಕ್ಕುಗಳು ಮತ್ತು ಜವಾಬ್ದಾರಿಗಳ ಕುರಿತು ಮಾಹಿತಿ ಪ್ರಚಾರಗೊಳಿಸಲು ಮತ್ತು ಈ ಕಾಯಿದೆಗಳನ್ನು ಅಂಗೀಕೃತಗೊಳಿಸಲಿಕ್ಕಾಗಿ  ವಿಚಾರಸಂಕಿರಣಗಳನ್ನು ಉತ್ತೇಜಿಸಲು ದತ್ತುನಿಧಿಯು ಇರುತ್ತದೆ ಎಂದು ಅವರು ನಂಬಿದ್ದರು.[೪೭]
1914ರಲ್ಲಿ, ಮೊದಲ ವಿಶ್ವ ಸಮರದ ಸಂಜೆಯಂದು, ಕಾರ್ನೆಗೀಯವರು ಚರ್ಚ್‌ ಪೀಸ್‌ ಯೂನಿಯನ್ (CPU) ಸ್ಥಾಪಿಸಿದರು. ಇದು ಧರ್ಮ, ಅಕೆಡೆಮಿಕ್ ಮತ್ತು ರಾಜಕೀಯ ವಲಯದ ನಾಯಕರನ್ನು ಒಳಗೊಂಡ ಒಂದು ಗುಂಪಾಗಿತ್ತು.  ಸಿಪಿಯು(CPU) ಮೂಲಕ, ಕಾರ್ನೆಗೀಯವರು ವಿಶ್ವದ ಚರ್ಚ್‌ಗಳು, ಧಾರ್ಮಿಕ ಸಂಘಟನೆಗಳು ಮತ್ತು ಇನ್ನಿತರ ಆಧ್ಯಾತ್ಮಿಕ ಹಾಗೂ ನೈತಿಕ ಸಂಪನ್ಮೂಲಗಳನ್ನು ಒಗ್ಗೂಡಿಸಿ, ಯುದ್ಧಕ್ಕೆ ಶಾಶ್ವತವಾಗಿ ಒಂದು ಅಂತ್ಯವನ್ನು ಕಾಣಿಸಲು ನೈತಿಕ ನಾಯಕತ್ವವನ್ನು ಉತ್ತೇಜಿಸಲು ಆಶಿಸಿದ್ದರು.  ಇದರ ಅಂತಾರಾಷ್ಟ್ರೀಯ ಉದ್ಘಾಟನಾ ಕಾರ್ಯಕ್ರಮಕ್ಕೆ, ದಕ್ಷಿಣ ಜರ್ಮನಿಯ ಲೇಕ್‌ ಕಾನ್‌ಸ್ಟನ್ಸ್‌ನ ದಡದಲ್ಲಿ 1914ರ ಆಗಸ್ಟ್‌ 1ರಂದು ಸಿಪಿಯು ಒಂದು ವಿಚಾರಸಂಕಿರಣವನ್ನು ಪ್ರಾಯೋಜಿಸಿತು.  ಇದಕ್ಕಾಗಿ ಬಂದಿದ್ದ ನಿಯೋಗಿಗಳು, ಸಂಕಿರಣಕ್ಕಾಗಿ ರೈಲಿನಲ್ಲಿ ತೆರಳುತ್ತಿರುವಂತೆ, ಜರ್ಮನಿಯು ಬೆಲ್ಜಿಯಂ ಅನ್ನು ಆಕ್ರಮಿಸಿತು. 

ಹೀಗೆ ಅಮಂಗಳಕರವಾದ ಆರಂಭವಿದ್ದರೂ, ಸಿಪಿಯು ಉತ್ತಮವಾಗಿ ಏಳಿಗೆ ಹೊಂದಿತು. ಇಂದು ಅದರ ಗಮನವು ನೈತಿಕಮೌಲ್ಯಗಳ ಕುರಿತಾಗಿದೆ ಮತ್ತು ಇದನ್ನು ಕಾರ್ನೆಗೀ ಕೌನ್ಸಿಲ್ ಫಾರ್ ಎತಿಕ್ಸ್ ಇನ್‌ ಇಂಟರ್‌ನ್ಯಾಶನಲ್ ಅಫೇರ್ಸ್ ಎಂದು ಕರೆಯಲಾಗುತ್ತದೆ. ಇಂದು ಒಂದು ಸ್ವತಂತ್ರ, ನಿಷ್ಪಕ್ಷಪಾತಿ, ಲಾಭರಹಿತ ಸಂಸ್ಥೆಯಾಗಿದೆ. ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ನೈತಿಕಮೌಲ್ಯಗಳಿಗಾಗಿ ಧ್ವನಿಯೆತ್ತುವುದು ಈ ಸಂಸ್ಥೆಯ ಧ್ಯೇಯವಾಗಿದೆ. ಕಾರ್ನೆಗೀಯವರಿಗೆ ಮತ್ತು ವಿಶ್ವ ಶಾಂತಿಯ ಕುರಿತ ಅವರ ದೃಷ್ಟಿಕೋನಕ್ಕೆ ಮೊದಲ ವಿಶ್ವ ಸಮರವು ಆರಂಭಗೊಂಡಿದ್ದು ನಿಜಕ್ಕೂ ಒಂದು ಆಘಾತವಾಗಿತ್ತು ಸಾಮ್ರಾಜ್ಯಶಾಹಿ-ವಿರೋಧ ಮತ್ತು ವಿಶ್ವ ಶಾಂತಿಯನ್ನು ಉತ್ತೇಜಿಸುವ ಅವರ ಎಲ್ಲ ಪ್ರಯತ್ನಗಳು ವಿಫಲಗೊಂಡವಾದರೂ, ಕಾರ್ನೆಗೀ ದತ್ತಿನಿಧಿಯು ಅವರ ನಿರೀಕ್ಷೆಗಳನ್ನು ಪೂರ್ಣಗೊಳಿಸಿದೆ. ಅಂತಾರಾಷ್ಟ್ರೀಯ ಸಂಬಂಧಗಳ ಕುರಿತ ಅವರ ನಂಬಿಕೆಗಳು ಮತ್ತು ವಿಚಾರಗಳು ಅವರ ಮರಣಾನಂತರ ಲೀಗ್‌ ಆಫ್‌ ನೇಶನ್ಸ್‌‌ನ ಅಡಿಪಾಯವನ್ನು ಹಾಕಲು ಸಹಾಯ ಮಾಡಿವೆ ಮತ್ತು ಅದು ವಿಶ್ವ ಶಾಂತಿಯನ್ನು ಇನ್ನೊಂದು ಸ್ತರಕ್ಕೆ ಕೊಂಡೊಯ್ದಿದೆ.

ಉಲ್ಲೇಖನಗಳು

ಬದಲಾಯಿಸಿ
  • ನನ್ನ ಹೃದಯವು ಕೆಲಸದಲ್ಲಿದೆ.
  • ನಾನು ದೊಡ್ಡನಾಗುತ್ತಿದ್ದಂತೆ, ಜನರು ಏನು ಹೇಳುತ್ತಾರೆ ಎಂಬುದಕ್ಕೆ ಕಡಿಮೆ ಗಮನವನ್ನು ನೀಡುತ್ತೇನೆ. ಅವರೇನು ಮಾಡುತ್ತಾರೆ ಎಂಬುದನ್ನು ಮಾತ್ರ ಗಮನಿಸುವೆ.
  • ನಿಮ್ಮೆಲ್ಲ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿಡಿ ಮತ್ತು ನಂತರ ಅವು ಬುಟ್ಟಿಯಲ್ಲಿ ಬೆಳೆಯುವುದನ್ನು ಗಮನಿಸಿ.
  • ನೀವು ಸಂತೋಷದಿಂದ ಇರಬಯಸಿದರೆ, ನಿಮ್ಮೆಲ್ಲ ಯೋಚನೆಗಳನ್ನು ಬೇಡುವ, ನಿಮ್ಮ ಶಕ್ತಿಯನ್ನು ಬಿಡುಗಡೆ ಮಾಡುವ ಮತ್ತು ನಿಮ್ಮ ಆಶಯಗಳನ್ನು ಪ್ರೇರೇಪಿಸುವ ಒಂದು ಗುರಿಯನ್ನು ಇಟ್ಟುಕೊಳ್ಳಿ.
  • ಶ್ರೀಮಂತನಾಗಿ ಸಾಯುವ ವ್ಯಕ್ತಿ ಅಪಖ್ಯಾತಿ ಪಡೆಯುತ್ತಾನೆ.

ಬರಹಗಳು

ಬದಲಾಯಿಸಿ

ಕಾರ್ನೆಗೀಯವರು ನಿಯತಕಾಲಿಕಗಳಿಗೆ ಕಾರ್ಮಿಕ ಸಮಸ್ಯೆಗಳ ವಿಚಾರವಾಗಿ ನಿಯಮಿತವಾಗಿ ಬರೆಯುತ್ತಿದ್ದರು. ಟ್ರೈಂಫಂಟ್ ಡೆಮಾಕ್ರಸಿ (1886), ಮತ್ತು ದಿ ಗಾಸ್ಪೆಲ್ ಆಫ್ ವೆಲ್ತ್‌ (1889) ಕೃತಿಗಳೊಂದಿಗೆ ಅವರು, ಆನ್ ಅಮೆರಿಕನ್ ಫೋರ್‌-ಇನ್‌-ಹ್ಯಾಂಡ್‌ ಇನ್‌ ಬ್ರಿಟನ್ (1883), ರೌಂಡ್ ದಿ ವರ್ಲ್ಡ್ (1884), ದಿ ಎಂಪೈರ್ ಆಫ್ ಬಿಸಿನೆಸ್ (1902), ದಿ ಸೀಕ್ರೆಟ್ ಆಫ್‌ ಬಿಸಿನೆಸ್ ಈಸ್ ದಿ ಮ್ಯಾನೇಜ್‌ಮೆಂಟ್ ಆಪ್ ಮೆನ್ (1903),[೪೮] ಫೇಮಸ್‌ ಸ್ಕಾಟ್ಸ್ ಸೀರೀಸ್‌ ನಲ್ಲಿ ಜೇಮ್ಸ್‌ ವ್ಯಾಟ್‌ ಕುರಿತು (1905), ಪ್ರಾಬ್ಲಮ್ಸ್ ಆಫ್‌ ಟುಡೇ (1907), ಕೃತಿಗಳನ್ನು ರಚಿಸಿದ್ದಾರೆ. ಅವರ ಆತ್ಮಚರಿತ್ರೆ ಆಟೋಬಯಾಗ್ರಫಿ ಆಫ್ ಆಂಡ್ಯ್ರೂ ಕಾರ್ನೆಗೀ ಕೃತಿಯನ್ನು ಅವರ ಮರಣೋತ್ತರವಾಗಿ ಪ್ರಕಟಿಸಲಾಯಿತು (1920).

ಕೀರ್ತಿಪರಂಪರೆ ಹಾಗೂ ಮನ್ನಣೆಗಳು

ಬದಲಾಯಿಸಿ
 
ಹುಟ್ಟೂರು ಡನ್‌ಫರ್‌ಮ್ಲಿನ್ನಿನಲ್ಲಿರುವ ಆಂಡ್ಯ್ರೂ ಕಾರ್ನೆಗೀ ಅವರ ಪ್ರತಿಮೆ
  • ಡೈನೋಸಾರ್‌ ಡಿಪ್ಲೊಡೊಕಸ್ ಕಾರ್ನೆಗೀ (ಹ್ಯಾಚರ್) ಅನ್ನು ಆಂಡ್ಯ್ರೂ ಕಾರ್ನೆಗೀಯ ಗೌರವಾರ್ಥ ಹೆಸರಿಸಲಾಗಿದೆ. ಉಟಾಹ್‌ನ ಮಾರಿಸನ್ ಫಾರ್ಮೇಶನ್ (ಜುರಾಸಿಕ್ ) ನಲ್ಲಿ ಈ ಡೈನೋಸಾರ್‌ನ ಪಳೆಯುಳಿಕೆಗಳನ್ನು ಪತ್ತೆಮಾಡಲು ಉತ್ಖನನಕ್ಕೆ ಅವರು ಸಹಾಯ ಮಾಡಿದ್ದರು. ಕಾರ್ನೆಗೀಯವರು "ಡಿಪ್ಪಿ" ಕುರಿತು ಬಹಳ ಅಭಿಮಾನದಿಂದ ಇದ್ದರು. ಮೂಳೆ ಮತ್ತು ಪ್ಲಾಸ್ಟರ್‌ನಿಂದ ರೂಪಿಸಿದ ಡಿಪ್ಪಿಯ ಸಂಪೂರ್ಣ ಅಸ್ಥಿಪಂಜರದ ಮರುಪ್ರತಿಗಳನ್ನು ಮಾಡಿಸಿ, ಅವುಗಳನ್ನು ಯೂರೋಪ್‌ನ ಹಲವಾರು ವಸ್ತುಸಂಗ್ರಹಾಲಯಗಳಿಗೆ ಅವರು ದಾನ ಮಾಡಿದ್ದಾರೆ. ಡಿಪ್ಪಿಯ ಮೂಲ ಪಳೆಯುಳಿಕೆ ಅಸ್ಥಿಪಂಜರವನ್ನು ಪಿಟ್ಸ್‌ಬರ್ಗ್‌ನಲ್ಲಿರುವ ಕಾರ್ನೆಗೀ ಮ್ಯೂಸಿಯಂ ಆಫ್‌ ನ್ಯಾಚುರಲ್ ಹಿಸ್ಟರಿಯಲ್ಲಿ ಡೈನೋಸಾರ್‌ಗಳ ಹಾಲ್‌ನಲ್ಲಿ ಜೋಡಿಸಿ, ಇಡಲಾಗಿದೆ.
  • ಸ್ಪ್ಯಾನಿಶ್ ಅಮೆರಿಕಾ ಯುದ್ಧದ ನಂತರ, ಫಿಲಿಪ್ಪೀನ್ಸ್‌ಗೆ ತಮ್ಮ ಸ್ವಾತಂತ್ರ್ಯವನ್ನು ಕೊಂಡುಕೊಳ್ಳಲು ಸಾಧ್ಯವಾಗುವಂತೆ 20 ಮಿಲಿಯನ್ ಅಮೆರಿಕನ್ ಡಾಲರ್‌ ನೆರವನ್ನು ನೀಡಲು ಮುಂದಾದರು.
  • ಕಾರ್ನೆಗೀ, ಪೆನ್ಸಿಲ್ವೇನಿಯಾ , ಮತ್ತು ಕಾರ್ನೆಗೀ, ಒಕ್ಲಹಾಮ, ಇವನ್ನು ಅವರ ಗೌರವಾರ್ಥ ಹೆಸರಿಡಲಾಗಿದೆ.
  • ಸಗುರೊ ಕ್ಯಾಕ್ಟಸ್‌ನ ವೈಜ್ಞಾನಿಕ ಹೆಸರನ್ನು , ಕಾರ್ನೆಗೀಯ ಎಂದು , ಆತನ ಗೌರವಾರ್ಥ ಹೆಸರಿಡಲಾಗಿದೆ.
  • ಬ್ರಿಟನ್ನಿನಲ್ಲಿ ಪ್ರಕಟಗೊಳ್ಳುವ ಅತ್ಯುತ್ತಮ ಮಕ್ಕಳ ಸಾಹಿತ್ಯಕ್ಕೆ ಕಾರ್ನೆಗೀ ಮೆಡಲ್‌ ನೀಡಲಾಗುತ್ತಿತ್ತು, ಅದನ್ನು ಅವರ ಹೆಸರಿನಲ್ಲಿಯೇ ಇಡಲಾಗಿದೆ.
  • ಬ್ರಿಟನ್ನಿನ ಲೀಡ್ಸ್‌ ಮೆಟ್ಓಪಾಲಿಟನ್ ವಿಶ್ವವಿದ್ಯಾನಿಲಯದಲ್ಲಿ, ಕಾರ್ನೆಗೀ ಫ್ಯಾಕಲ್ಟಿ ಆಫ್‌ ಸ್ಪೋರ್ಟ್‌ ಆಂಡ್ ಎಜುಕೇಶನ್ ಅನ್ನು ಆತನ ಗೌರವಾರ್ಥ ಹೆಸರಿಡಲಾಗಿದೆ.
  • ಡನ್‌ಫರ್‌ಮ್ಲಿನ್ ಮತ್ತು ನ್ಯೂಯಾರ್ಕ್‌‌ನಲ್ಲಿರುವ ಸಂಗೀತಕಛೇರಿ ಹಾಲ್‌ಗಳನ್ನು ಅವರ ಗೌರವಾರ್ಥ ಹೆಸರಿಸಲಾಲಾಗಿದೆ.
  • ತಮ್ಮ ವೃತ್ತಿಬದುಕಿನ ಉತ್ತುಂಗದಲ್ಲಿ, ಕಾರ್ನೆಗೀಯವರು ವಿಶ್ವದಲ್ಲಿಯೇ ಎರಡನೇ-ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರು, ಅವರಿಗಿಂತ ಮೊದಲು ಸ್ಟಾಂಡರ್ಡ್‌ ಆಯಿಲ್‌ನ ಜಾನ್‌ ಡಿ. ರಾಕ್‌ಫೆಲ್ಲರ್‌ ಶ್ರೀಮಂತ ವ್ಯಕ್ತಿಯಾಗಿದ್ದರು.
  • ಡಿಸ್ನಿಯ ಸ್ಕ್ರೂಜ್ ಮೆಕ್‌ಡಕ್‌ ಪಾತ್ರಕ್ಕೆ ಆಂಡ್ಯ್ರೂ ಕಾರ್ನೆಗೀಯರೇ ಸ್ಫೂರ್ತಿ ಎನ್ನಲಾಗಿದೆ.
  • ಪಿಟ್ಸ್‌ಬರ್ಗ್‌‌ನಲ್ಲಿರುವ ಕಾರ್ನೆಗೀ ಮೆಲಾನ್ ವಿಶ್ವವಿದ್ಯಾನಿಲಯ ಆಂಡ್ಯ್ರೂ ಕಾರ್ನೆಗೀಯವರ ಗೌರವಾರ್ಥ ಹೆಸರಿಸಲಾಗಿದೆ, ಕಾರ್ನೆಗೀಯವರು ಕಾರ್ನೆಗೀ ಟೆಕ್ನಿಕಲ್ ಸ್ಕೂಲ್‌ ಆಗಿ ಈ ಇನ್‌ಸ್ಟಿಟ್ಯೂಶನ್‌ ಸ್ಥಾಪಿಸಿದ್ದರು.
     
    ಕಾರ್ನೆಗೀ ವ್ಯಾನ್‌ಗಾರ್ಡ್‌ ಹೈಸ್ಕೂಲ್
  • ಡನ್‌ಫರ್‌ಮ್ಲಿನ್ನಿನ ಹಾಲ್‌ಬೆತ್‌ ಪ್ರದೇಶದಲ್ಲಿದ್ದ (ತಮ್ಮ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ ಅಂಕಲ್‌ ಲಾಡೆರ್‌ನ ನೆನಪಿಗೆ ಇಡಲಾಗಿದ್ದ)ಲಾಡೆರ್ ಕಾಲೇಜ್‌ ಅನ್ನು 2007ರಲ್ಲಿ ಕಾರ್ನೆಗೀ ಕಾಲೇಜ್ ಎಂದು ಮರುನಾಮಕರಣ ಮಾಡಲಾಗಿದೆ.
  • ಬೆಲ್‌ಗ್ರೇಡ್‌ನಲ್ಲಿರುವ ಕಾರ್ನೆಗೀ ಗ್ರಂಥಾಲಯಗಳಲ್ಲಿ ಒಂದಾಗಿರುವ ಬೆಲ್‌ಗ್ರೇಡ್‌ ವಿಶ್ವವಿದ್ಯಾನಿಲಯ ಗ್ರಂಥಾಲಯದ ಪಕ್ಕದಲ್ಲಿರುವ ರಸ್ತೆಗಳಲ್ಲಿ ಒಂದಕ್ಕೆ (ಸೆರ್ಬಿಯಾ) ಅವರ ಗೌರವಾರ್ಥ ಹೆಸರಿಸಲಾಗಿದೆ.
  • ಹೂಸ್ಟನ್‌, ಟೆಕ್ಸಾಸ್‌ ನಲ್ಲಿರುವ ಒಂದು ಅಮೆರಿಕನ್ ಹೈಸ್ಕೂಲ್‌ಗೆ ಕಾರ್ನೆಗೀ ವ್ಯಾನ್‌ಗಾರ್ಡ್‌ ಹೈಸ್ಕೂಲ್ ಎಂದು ಅವರ ಗೌರವಾರ್ಥ ಹೆಸರಿಸಲಾಗಿದೆ.[೪೯]

ಆಂಡ್ಯ್ರೂ ಕಾರ್ನೆಗೀಯವರ ವೈಯಕ್ತಿಕ ಪೇಪರ್‌‌‌ಗಳು ಲೈಬ್ರರಿ ಆಫ್‌ ಕಾಂಗ್ರೆಸ್‌ನ ಹಸ್ತಪ್ರತಿ ವಿಭಾಗದಲ್ಲಿದೆ.

ಕೊಲಂಬಿಯಾ ವಿಶ್ವವಿದ್ಯಾನಿಲಯದ ಅಪರೂಪದ ಪುಸ್ತಕಗಳು ಮತ್ತು ಹಸ್ತಪ್ರತಿ ಗ್ರಂಥಾಲಯದ ಕಾರ್ನೆಗೀ ಸಂಗ್ರಹಗಳು  ಆಂಡ್ಯ್ರೂ ಕಾರ್ನೆಗೀ ಸ್ಥಾಪಿಸಿದ್ದ ಈ ಕೆಳಗಿನ ಸಂಸ್ಥೆಗಳ ಆರ್ಕೈವ್‌ಗಳನ್ನು ಹೊಂದಿದೆ. ಕಾರ್ನೆಗೀ ಕಾರ್ಪೊರೇಶನ್ ಆಫ್‌ ನ್ಯೂಯಾರ್ಕ್‌‌ (CCNY); ಅಂತಾರಾಷ್ಟ್ರೀಯ ಶಾಂತಿಗಾಗಿ ಕಾರ್ನೆಗೀ ದತ್ತಿನಿಧಿ (ಕಾರ್ನೆಗೀ ಎಂಡೋಮೆಂಟ್‌ ಫಾರ್ ಇಂಟರ್‌ನ್ಯಾಶನಲ್ ಪೀಸ್)  (CEIP); ಕಾರ್ನೆಗೀ ಫೌಂಡೇಶನ್ ಫಾರ್‌ ದಿ ಅಡ್ವಾನ್ಸ್‌ಮೆಂಟ್‌ ಆಫ್‌ ಟೀಚಿಂಗ್  (CFAT); ಕಾರ್ನೆಗೀ ಕೌನ್ಸಿಲ್ ಆನ್ ಎಥಿಕ್ಸ್ ಆಂಡ್ ಇಂಟರ್‌ನ್ಯಾಶನಲ್ ಅಫೇರ್ಸ್  (CCEIA). ಈ ಸಂಗ್ರಹಗಳು ಮುಖ್ಯವಾಗಿ  ಕಾರ್ನೆಗೀ ಲೋಕೋಪಕಾರದ ಕುರಿತು ಇವೆ ಮತ್ತು ಅವುಗಳಲ್ಲಿ ಮಿ. ಕಾರ್ನೆಗೀ ಕುರಿತ ವೈಯಕ್ತಿಕ ವಿವರಗಳು ಬಹಳ ಕಡಿಮೆ ಇವೆ.  ಕಾರ್ನೆಗೀಯವರ ಬದುಕಿನ ಕುರಿತ ಡಿಜಿಟಲೈಸ್ ಮಾಡಿರುವ ಆರ್ಕೈವ್‌ಗಳ ಆಂಡ್ಯ್ರೂ ಕಾರ್ನೆಗೀ ಸಂಗ್ರಹ Archived 2011-05-22 ವೇಬ್ಯಾಕ್ ಮೆಷಿನ್ ನಲ್ಲಿ. ವನ್ನು ಕಾರ್ನೆಗೀ ಮೆಲಾನ್  ವಿಶ್ವವಿದ್ಯಾನಿಲಯ ಮತ್ತು ಕಾರ್ನೆಗೀ ಲೈಬ್ರರಿ ಆಫ್‌ ಪಿಟ್ಸ್‌ಬರ್ಗ್‌, ಎರಡೂ  ಜಂಟಿಯಾಗಿ ನಿರ್ವಹಣೆ ಮಾಡುತ್ತಿವೆ. 

ಇವನ್ನೂ ಗಮನಿಸಿ

ಬದಲಾಯಿಸಿ
  • ಅತ್ಯಂತ ಶ್ರೀಮಂತ ಐತಿಹಾಸಿಕ ವ್ಯಕ್ತಿಗಳ ಪಟ್ಟಿ
  • ಕಾರ್ನೆಗೀಯವರು ಸೇರಿದ್ದ ಅಮೆರಿಕನ್‌ ಆಂಟಿ ಇಂಪೆರಿಯಲಿಸ್ಟ್‌ ಲೀಗ್‌
  • ಕಾರ್ನೆಗೀ ಗ್ರಂಥಾಲಯ
  • ಕಾರ್ನೆಗೀ ಇನ್‌ಸ್ಟಿಟ್ಯೂಶನ್‌ ಫಾರ್ ಸೈನ್ಸ್
  • ವ್ಯಕ್ತಿಗಳ ಹೆಸರಿನಲ್ಲಿ ಇಡಲಾದ ವಿಶ್ವವಿದ್ಯಾನಿಲಯದ ಪಟ್ಟಿ
  • ನೆಪೋಲಿಯನ್ ಹಿಲ್
  • ಥಿಂಕ್‌ ಆಂಡ್ ಗ್ರೋ ರಿಚ್‌
  • ಗಾಸ್ಪೆಲ್‌ ಆಫ್‌ ವೆಲ್ತ್‌
  • ಹ್ಯಾರಿ ವ್ಯಾಟ್ಸ್
  • ಪಬ್ಲಿಕ್ ಲೈಬ್ರರಿ ಅಡ್ವೊಕಸಿ
  • ಹಿಸ್ಟಾರಿ ಆಫ್‌ ಪಬ್ಲಿಕ್ ಲೈಬ್ರರಿ ಅಡ್ವೊಕಸಿ
  • ಸಂಯುಕ್ತ ಸಂಸ್ಥಾನದಲ್ಲಿ ಕಾರ್ನೆಗೀ ಗ್ರಂಥಾಲಯಗಳ ಪಟ್ಟಿ
  • ಇನ್‌ ಸನ್‌ ಲೈಟ್, ಇನ್‌ ಅ ಬ್ಯೂಟಿಫುಲ್ ಗಾರ್ಡನ್ , ಜೋನ್ಸ್‌ಟೌನ್‌ ಫ್ಲಡ್‌ ಕುರಿತ ಒಂದು ಕಾದಂಬರಿ

ಉಲ್ಲೇಖಗಳು

ಬದಲಾಯಿಸಿ
  1. ಮೆಕ್‌ಕೇ ಲಿಟಲ್ ಬಾಸ್ : ಎ ಲೈಫ್ ಆಫ್ ಆಂಡ್ಯ್ರೂ ಕಾರ್ನೆಗೀ ಪು. 29.
  2. ೨.೦ ೨.೧ ೨.೨ ೨.೩ ಮೆಕ್‌ಕೇ ಲಿಟಲ್ ಬಾಸ್ : ಎ ಲೈಫ್ ಆಫ್ ಆಂಡ್ಯ್ರೂ ಕಾರ್ನೆಗೀ ಪುಟಗಳು. 23–24.
  3. ಮೆಕ್‌ಕೇ ಲಿಟಲ್ ಬಾಸ್ : ಎ ಲೈಫ್ ಆಫ್ ಆಂಡ್ಯ್ರೂ ಕಾರ್ನೆಗೀ ಪುಟಗಳು. 37–38.
  4. ಆಟೋಬಯಾಗ್ರಫಿ ಆಫ್ ಆಂಡ್ಯ್ರೂ ಕಾರ್ನೆಗೀ ಪುಟ. 34
  5. ಆಟೋಬಯಾಗ್ರಫಿ ಆಫ್ ಆಂಡ್ಯ್ರೂ ಕಾರ್ನೆಗೀ ಪುಟ. 37
  6. ನಾಸಾ, ಡೇವಿಡ್,ಆಂಡ್ಯ್ರೂ ಕಾರ್ನೆಗೀ (ನ್ಯೂಯಾರ್ಕ್‌‌: ದಿ ಪೆಂಗ್ವಿನ್ ಪ್ರೆಸ್ , 2006), ಪುಟಗಳು. 54–59, 64–65.
  7. ನಾಸಾ, ಪುಟಗಳು. 59–60.
  8. ನಾಸಾ,, ಪುಟಗಳು. 59–60; ಆಟೋಬಯಾಗ್ರಫಿ ಆಫ್ ಆಂಡ್ಯ್ರೂ ಕಾರ್ನೆಗೀ ಪುಟ. 79
  9. ನಾಸಾ, ಪುಟಗಳು. 59–60, 85–88, 102–104, 107.
  10. ನಾಸಾ, ಪುಟಗಳು. 105–107.
  11. ಜಾನ್ ಕೆ. ವಿಂಕ್ಲರ್ ಇನ್‌ಕ್ರೆಡಿಬಲ್ ಕಾರ್ನೆಗೀ , ಪುಟ. 172, ರೀಡ್ ಬುಕ್ಸ್, 2006 ಐಎಸ್‌ಬಿಎನ್‌ 978-1406729467
  12. ಜಾನ್ ಕೆ. ವಿಂಕ್ಲರ್ ಇನ್‌ಕ್ರೆಡಿಬಲ್ ಕಾರ್ನೆಗೀ , ಪುಟ. 13, ರೀಡ್ ಬುಕ್ಸ್, 2006 ಐಎಸ್‌ಬಿಎನ್‌ 978-1406729467
  13. ಸ್ವೆಟ್‌ನಮ್‌ ಜಾರ್ಜ್‌ (1980) ಆಂಡ್ಯ್ರೂ ಕಾರ್ನೆಗೀ . ಟ್ವಾಯ್ನ್‌ ಪಬ್ಲಿಷರ್ಸ್‌.
  14. ಲೈವ್‌ಸೇ ಹರೊಲ್ಡ್ (2000) "ಆಂಡ್ಯ್ರೂ ಕಾರ್ನೆಗೀ ಆಂಡ್ ದಿ ರೈಸ್ ಆಫ್‌ ಬಿಗ್ ಬಿಸೆನೆಸ್". ಅಡಿಸನ್- ವೆಸ್ಲೆ ಎಜುಕೇಶನಲ್ ಪಬ್ಲಿಶರ್ಸ್.
  15. ಆಂಡ್ಯ್ರೂ ಕಾರ್ನೆಗೀ ಟೈಮ್‌ಲೈನ್ ಆಫ್‌ ಈವೆಂಟ್ಸ್ ಅಟ್‌ ಪಿಬಿಎಸ್‌.ಆರ್ಗ್‌
  16. ರಾಬರ್ಟ್‌ ಪಿ. ಪೋರ್ಟರ್ ಇಂಡಸ್ಟ್ರಿಯಲ್ ಕ್ಯೂಬಾ , ಪುಟ. 43, ಜಿ.ಪಿ. ಪುಟ್ನಾಮ್ಸ್ ಸನ್ಸ್, 1899
  17. ಕ್ಯಾಥರಿನ್ ಹರ್ಶ್‌‌ಫೆಲ್ಡ್ ಹೆಲ್ತ್‌, ಪಾಲಿಟಿಕ್ಸ್ ಆಂಡ್ ರೆವಲ್ಯೂಶನ್ ಇನ್ ಕ್ಯೂಬಾ , ಪುಟ. 117, ಟ್ರಾನ್ಸಾಕ್ಷನ್ ಪಬ್ಲಿಶರ್ಸ್, 2008 ಐಎಸ್‌ಬಿಎನ್‌ 978-1412808637
  18. ಇಂಡಸ್ಟ್ರಿಯಲ್ ಕ್ಯೂಬಾ
  19. ದಿ ಕಾರ್ನೆಗೀ ಕಮಿಟಿ , ಕರ್ನೆಲ್ ಅಲ್ಯುಮ್ನಿ ನ್ಯೂಸ್ , II(10), 29 ನವೆಂಬರ್‌ 1899, ಪುಟ. 6
  20. ಹಿಸ್ಟರಿ ಆಫ್ ಮೌಂಟ್ ವಿಲ್ಸನ್ ಅಬ್ಸರ್ವೇಟರಿ - ಬಿಲ್ಟಿಂಗ್ ದಿ 100-ಇಂಚ್ ಟೆಲಿಸ್ಕೋಪ್ Archived 2009-02-08 ವೇಬ್ಯಾಕ್ ಮೆಷಿನ್ ನಲ್ಲಿ.. ಮೌಂಟ್ ವಿಲ್ಸನ್ ಅಬ್ಸರ್ವೇಟರಿ ಅಸೋಸಿಯೇಶನ್‌‌ (MWOA)ಗಾಗಿ 1984ರಲ್ಲಿ ಮೈಕ್‌ ಸಿಮನ್ಸ್ ಬರೆದ ಲೇಖನ
  21. "ಕಾರ್ನೆಗೀ ಟ್ರಸ್ಟ್ ಫಾರ್ ದಿ ಯುನಿವರ್ಸಿಟಿ ಆಫ್ ಸ್ಕಾಟ್‌ಲ್ಯಾಂಡ್". Archived from the original on 2008-05-13. Retrieved 2011-01-08.
  22. Carnegie Dunfermline Trust, Registered Charity no. SC015710 at the Office of the Scottish Charity Regulator
  23. Carnegie United Kingdom Trust, Registered Charity no. SC012799 at the Office of the Scottish Charity Regulator
  24. ಕಾರ್ನೆಗೀ ಯುನೈಟೆಡ್ ಕಿಂಗ್‌ಡಮ್ ಟ್ರಸ್ಟ್ ವೆಬ್‌ಸೈಟ್
  25. ಪೌಲ್‌ ಕ್ರಯುಸ್ ದಿ ಬ್ಯಾಟಲ್ ಫಾರ್‌ ಹೋಮ್‌ಸ್ಟಡ್ 1880–1892 , ಪುಟ. 233,ಪಿಟ್ಸ್‌ಬಗ್‌ ವಿಶ್ವವಿದ್ಯಾನಿಲಯ ಮುದ್ರಣಾಲಯ, 1992 ಐಎಸ್‌ಬಿಎನ್‌ 978-0822954668
  26. ದಿ ಅಮೆರಿಕನ್ ಎಕ್ಸ್‌ಪೀರಿಯೆನ್ಸ್ | ಆಂಡ್ಯ್ರೂ ಕಾರ್ನೆಗೀ | ಪ್ರೋಗ್ರಾಮ್‌ ಡಿಸ್ಕ್ರಿಪ್ಷನ್
  27. ಸ್ವೆಟ್ನಮ್‌, ಜಾರ್ಜ್‌. (1980) ಟ್ವಾಯ್ನ್‌ ಪಬ್ಲಿಶರ್ಸ್.
  28. "Andrew Carnegie Dies Of Pneumonia In His 84th Year. Taken Ill At Shadow Brook On Friday, He Sinks Rapidly. Wife Is At His Bedside. Estate Estimated At $500,000,000, While His Benefactions Totaled $350,695,650. Started As A Poor Boy. Funeral To Be Held Thursday In Lenox, But No Services in New York". New York Times. 12 August 1919. Archived from the original (PDF) on 2013-05-21. Retrieved 2008-08-01. Andrew Carnegie died at Shadow Brook of bronchial pneumonia at 7:10 o'clock this morning. {{cite news}}: Cite has empty unknown parameter: |coauthors= (help)
  29. "Carnegie's Estate, At Time Of Death, About $30,000,000; Will, Probated Yesterday, Distributes $10,000,000 To Friends And Philanthropies. Residue To Public Use. Wife And Daughter Provided For Long Before Last Testament Was Made. Grants Many Annuities. Total Of Philanthropic Gifts, Including Bequests, Estimatedat $371,065,653. Annuities For Associates. Carnegie's Estate About $30,000,000. Made Void By Contest. Total Benefactions $371,065,653". New York Times. 29 August 1919. Archived from the original (PDF) on 2013-05-21. Retrieved 2008-08-01. The will of Andrew Carnegie, filed here yesterday and admitted to probate immediately by Surrogate Fowler, disposes of an estate estimated at between $25,000,000 and $30,000,000. The residuary estate of about $20,000,000 goes to the Carnegie Corporation. {{cite news}}: Cite has empty unknown parameter: |coauthors= (help)
  30. "Sleepy Hollow Cemetery Map" (PDF). Sleepy Hollow Cemetery Historic Fund. 2009. Archived from the original (PDF) on 9 ಫೆಬ್ರವರಿ 2011. Retrieved 19 April 2010.
  31. ಅಲೆಕ್ಸಾಂಡರ್ ಬರ್ಕ್‌ಮನ್ ಪ್ರಿಸನ್ ಮೆಮೊಯಿರ್ಸ್ ಆಫ್‌ ಆನ್ ಅನಾರ್ಕಿಸ್ಟ್ , ಪುಟ. 67, ಮದರ್ ಅರ್ಥ್‌ ಪಬ್ಲಿಶಿಂಗ್ ಅಸೋಸಿಯೇಶನ್, 1912
  32. ಪ್ರಿಸನ್ ಮೆಮೊಯಿರ್ಸ್ ಆಫ್‌ ಆನ್ ಅನಾರ್ಕಿಸ್ಟ್ ಬೈ ಅಲೆಕ್ಸಾಂಡರ್ ಬರ್ಕ್‌ಮನ್
  33. ಮೌರಿ ಕ್ಲೆನ್ ದಿ ಚೇಂಜ್‌ ಮೇಕರ್ಸ್ , ಪುಟ. 57, ಮೆಕ್‌ಮಿಲನ್, 2004 ಐಎಸ್‌ಬಿಎನ್‌ 978-0805075182
  34. ಡ್ವೈಟ್‌ ಬರ್ಲಿಂಗೇಮ್‌ ಫಿಲಾಸಫಿ ಇನ್ ಅಮೆರಿಕಾ , ಪುಟ. 60, ಎಬಿಸಿ-ಸಿಎಲ್‌ಐಒ , 2004 ಐಎಸ್‌ಬಿಎನ್‌ 978-1576078600
  35. ಆಟೋಬಯಾಗ್ರಫಿ ಆಫ್ ಆಂಡ್ಯ್ರೂ ಕಾರ್ನೆಗೀ ಪುಟಗಳು. 255–67
  36. ನಾಸ, ಡೇವಿಡ್. ಆಂಡ್ಯ್ರೂ ಕಾರ್ನೆಗೀ (ನ್ಯೂಯಾರ್ಕ್‌‌: ದಿ ಪೆಂಗ್ವಿನ್ ಪ್ರೆಸ್ , 2006)
  37. ಕಾರ್ನೆಗೀ, ಆಂಡ್ರ್ಯೂ. ಆಟೋಬಯಾಗ್ರಫಿ ಆಫ್ ಆಂಡ್ಯ್ರೂ ಕಾರ್ನೆಗೀ (1920, 2006). ಐಎಸ್‌ಬಿಎನ್‌ 1-59986-967-5 ( ಪುಟ. 339)
  38. ದಿ ನ್ಯೂಯಾರ್ಕ್‌‌ ಟೈಮ್ಸ್ , ನವೆಂಬರ್. 29, 1918
  39. Nasaw, David (2006). Andrew Carnegie. New York: The Penguinn Press. p. 625. ISBN 1594201048.
  40. ಹಿಲ್‌, ನೆಪೋಲಿಯನ್ (1953, 1981, ಪರಿಷ್ಕೃತ 2004) ಹೌ ಟು ರೈಸ್ ಯುವರ್ ಓನ್ ಸ್ಯಾಲರಿ , ದಿ ನೆಪೋಲಿಯನ್ ಹಿಲ್‌ ಫೌಂಡೇಶನ್, ಪುಟಗಳು. 77–78, ಐಎಸ್‌ಬಿಎನ್‌ 0-9743539-4-9 [ಇದು ದಿ ವಿಸ್‌ಡಮ್ ಆಫ್ ಆಂಡ್ಯ್ರೂ ಕಾರ್ನೆಗೀ ಆಸ್ ಟೋಲ್ಡ್ ಟು ನೆಪೋಲಿಯನ್ ಹಿಲ್‌ ಎಂಬ ಹೆಸರಿನಲ್ಲಿಯೂ ಪ್ರಕಟಗೊಂಡಿದೆ, ಐಎಸ್‌ಬಿಎನ್‌ 0937539457
  41. ಹಿಲ್‌, ನೆಪೋಲಿಯನ್ ಆಂಡ್ ಕಾನ್‌ವೆಲ್, ರಾಸ್ (2004; 3ನೇ ಆವೃತ್ತಿ 2008) ಥಿಂಕ್ ಆಂಡ್ ಗ್ರೋ ರಿಚ್ : ಮೂಲ ಆವೃತ್ತಿ, ಪುನಸ್ಸಂಪಾದಿತ ಮತ್ತು ಪರಿಷ್ಕೃತ , ಅವೆಂಟೈನ್ ಪ್ರೆಸ್, ಪುಟ. 330, ಐಎಸ್‌ಬಿಎನ್‌ 1-59330-200-2
  42. ಕಾರ್ನೆಗೀ, ಆಂಡ್ರ್ಯೂ. ಆಟೋಬಯಾಗ್ರಫಿ ಆಫ್ ಆಂಡ್ಯ್ರೂ ಕಾರ್ನೆಗೀ (ಬೋಸ್ಟನ್, 1920), ಸಿಎಚ್‌. 21, ಪುಟಗಳು. 282–283
  43. ಕಾರ್ನೆಗೀ, ಆಂಡ್ರ್ಯೂ. ಅಮೆರಿಕನ್ ಫೋರ್‌-ಇನ್‌-ಹ್ಯಾಂಡ್ ಇನ್ ಬ್ರಿಟನ್ (ನ್ಯೂಯಾರ್ಕ್‌‌, 1883), ಪುಟಗಳು. 14–15
  44. ಕಾರ್ನೆಗೀ, ಆಂಡ್ರ್ಯೂ. ಟ್ರೈಂಫಂಟ್ ಡೆಮಾಕ್ರಸಿ, ಪಸ್ಸಿಮ್
  45. ಕಾರ್ನೆಗೀ, ಆಂಡ್ರ್ಯೂ. "ಅಮೆರಿಕನ್ ವರ್ಸಸ್‌ ಇಂಪೆರಿಯಲಿಸಮ್," ವಿಶೇಷವಾಗಿ. ಪುಟಗಳು. 12–13
  46. Quoted in Hendrick. Carnegie 2: p.337
  47. ಪ್ಯಾಟರ್‌ಸನ್, ಡೇವಿಡ್ ಎಸ್. ಆಂಡ್ಯ್ರೂ ಕಾರ್ನೆಗೀ'ಸ್ ಕ್ವೆಸ್ಟ್ ಫಾರ್ ವರ್ಲ್ಡ್ ಪೀಸ್ ಪ್ರೊಸೀಡಿಂಗ್ಸ್ ಆಫ್‌ ದಿ ಅಮೆರಿಕನ್ ಫಿಲಾಸಾಫಿಕಲ್ ಸೊಸೈಟಿ, ಸಂಪುಟ. 114, ಸಂಖ್ಯೆ. 5 (ಅಕ್ಟೋಬರ್ 20, 1970), ಪುಟಗಳು. 371–383
  48. ಕಾರ್ನೆಗೀ, ಆಂಡ್ರ್ಯೂ (1903). ದಿ ಸೀಕ್ರೆಟ್ ಆಪ್ ಬಿಸಿನೆಸ್ ಈಸ್ ಮ್ಯಾನೇಜ್‌ಮೆಂಟ್ ಆಫ್ ಮೆನ್
  49. "ಸ್ಕೂಲ್ ಹಿಸ್ಟರೀಸ್: ದಿ ಸ್ಟೋರೀಸ್ ಬಿಹೈಂಡ್ ದಿ ನೇಮ್ಸ್ Archived 2008-10-12 ವೇಬ್ಯಾಕ್ ಮೆಷಿನ್ ನಲ್ಲಿ.." ಹೂಸ್ಟನ್ ಇಂಟಿಂಪೆಂಡೆಂಟ್ ಸ್ಕೂಲ್ ಡಿಸ್ಟ್ರಿಕ್ಟ್ . 2008ರ ಸೆಪ್ಟೆಂಬರ್ 24ರಂದು ಮರುಸಂಪಾದಿಸಲಾಗಿದೆ. "ಇದನ್ನು ಉಕ್ಕಿನ ಸಿರಿವಂತ ವ್ಯಕ್ತಿ ಮತ್ತು ಲೋಕೋಪಕಾರಿಯಾಗಿ ಎತ್ತರಕ್ಕೆ ಏರಿದ ಪ್ರಸಿದ್ಧ ಸ್ಕಾಟಿಶ್ ವಲಸೆಗಾರ ಆಂಡ್ಯ್ರೂ ಕಾರ್ನೆಗೀಯವರ ಹೆಸರಿನಲ್ಲಿ ಇಡಲಾಗಿದೆ."


ಹೆಚ್ಚಿನ ಓದಿಗಾಗಿ

ಬದಲಾಯಿಸಿ

ಪ್ರಾಥಮಿಕ ಮೂಲಗಳು

ಬದಲಾಯಿಸಿ

ದ್ವಿತೀಯ ಮೂಲಗಳು

ಬದಲಾಯಿಸಿ
  • ಗೋಲ್ಡಿನ್, ಮಿಲ್ಟನ್ "ಆಂಡ್ಯ್ರೂ ಕಾರ್ನೆಗೀ ಆಂಡ್ ದಿ ರಾಬರ್‌ ಬ್ಯಾರನ್ ಮಿಥ್". ಇನ್ ಮಿಥ್ ಅಮೆರಿಕಾ: ಎ ಹಿಸ್ಟಾರಿಕಲ್ ಆಂತಾ;ಜಿ, ಸಂಪುಟ II . 1997. ಗೆರ್ಸ್ಟರ್, ಪ್ಯಾಟ್ರಿಕ್ ಮತ್ತು ಕಾರ್ಡ್ಸ್, ನಿಕೋಲಸ್ (ಸಂಪಾದಕರು) ಬ್ರಾಂಡಿವೈನ್ ಪ್ರೆಸ್, ಸೇಂಟ್ ಜೇಮ್ಸ್, ಎನ್‌ವೈ, ಐಎಸ್‌ಬಿಎನ್‌ 1-881-089-97-5
  • ಜೋಸೆಫ್ಸನ್‌; ಮ್ಯಾಥ್ಯೂ. (1938, 1987). ದಿ ರಾಬರ್ ಬ್ಯಾರನ್ಸ್ : ದಿ ಗ್ರೇಟ್ ಅಮೆರಿಕನ್ ಕ್ಯಾಪಿಟಲಿಸ್ಟ್ಸ್ 1861–1901 ಐಎಸ್‌ಬಿಎನ್‌ 99918-47-99-5
  • ಕ್ರಾಸ್, ಪೀಟರ್ (2002). ಕಾರ್ನೆಗೀ ವಿಲೆ. ಐಎಸ್‌ಬಿಎನ್‌ 0-471-38630-8
  • Lanier, Henry Wysham (1901). "The Many-Sided Andrew Carnegie: A Citizen of the Republic". The World's Work: A History of Our Time. I: 618–630. {{cite journal}}: |access-date= requires |url= (help); Cite has empty unknown parameter: |coauthors= (help); External link in |title= (help); Unknown parameter |month= ignored (help)
  • ಲೆಸ್ಟರ್, ರಾಬರ್ಟ್‌ ಎಂ. (1941). ಫಾರ್ಟಿ ಈಯರ್ಸ್ ಆಫ್ ಕಾರ್ನೆಗೀ ಗಿವಿಂಗ್: ಎ ಸಮ್ಮರಿ ಆಫ್ ಬೆನೆಫ್ಯಾಕ್ಷನ್ಸ್ ಆಫ್ ಆಂಡ್ಯ್ರೂ ಕಾರ್ನೆಗೀ ಆಂಡ್ ಆಫ್ ದಿ ವರ್ಕ್‌ ಆಫ್ ದಿ ಫಿಲಾಂಥ್ರಾಪಿಕ್ ಟ್ರಸ್ಟ್ಸ್ ವಿಚ್ ಹಿ ಕ್ರಿಯೇಟೆಡ್ . ಸಿ. ಸ್ಕ್ರೈಬರ್ಸ್ ಸನ್ಸ್, ನ್ಯೂಯಾರ್ಕ್‌‌.
  • ಲಿವ್‌ಸೇ, ಹರಾಲ್ಡ್ ಸಿ. (1999). ಆಂಡ್ಯ್ರೂ ಕಾರ್ನೆಗೀ ಆಂಡ್ ದಿ ರೈಸ್ ಆಫ್ ಬಿಗ್ ಬಿಸೆನೆಸ್ , 2ನೇ ಆವೃತ್ತಿ. ಐಎಸ್‌ಬಿಎನ್‌ 0-321-43287-8 (ಸಂಕ್ಷಿಪ್ತ ಜೀವನಚರಿತ್ರೆ)
  • Lorenzen, Michael. (1999). "Deconstructing the Carnegie Libraries: The Sociological Reasons Behind Carnegie's Millions to Public Libraries". Illinois Libraries. 81 (2): 75–78.
  • ಮೋರಿಸ್, ಚಾರ್ಲ್ಸ್ ಆರ್.(2005). ದಿ ಟೈಕೂನ್ಸ್: ಹೌ ಆಂಡ್ಯ್ರೂ ಕಾರ್ನೆಗೀ,ಜಾನ್ ಡಿ ರಾಕ್‌ಫೆಲ್ಲರ್, ಜೇ ಗುಲ್ಡ್ ಆಂಡ್ ಜೆ.ಪಿ. ಮೋರ್ಗಾನ್ ಇನ್‌ವೆಂಟೆಡ್ ದಿ ಅಮೆರಿಕನ್ ಸೂಪರ್‌ಎಕಾನಮಿ . ಟೈಮ್ಸ್ ಬುಕ್ಸ್. ಐಎಸ್‌ಬಿಎನ್‌ 0-8050-7599-2
  • ನಾಸಾ, ಡೇವಿಡ್. (2005). ಆಂಡ್ಯ್ರೂ ಕಾರ್ನೆಗೀ ದಿ ಪೆಂಗ್ವಿನ್ ಪ್ರೆಸ್, ನ್ಯೂಯಾರ್ಕ್‌‌. (ವಾಲ್‌ ಅವರೊಂದಿಗೆ ಸೇರಿ ಬರೆದ ಅತ್ಯಂತ ವಿವರವಾದ ವಿದ್ವತ್‌ಪೂರ್ಣ ಜೀವನಚರಿತ್ರೆ)
  • Patterson, David S. "Andrew Carnegie's Quest for World Peace". Proceedings of the American Philosophical Society. 114 (5): 371–383.
  • ರೀಸ್, ಜೋನಾಥನ್. (1997). "ಹೋಮ್‌ಸ್ಟೆಡ್ ಇನ್‌ ಕಂಟೆಕ್ಸ್ಟ್: ಆಂಡ್ಯ್ರೂ ಕಾರ್ನೆಗೀ ಆಂಡ್ ದಿ ಡೆಕ್ಲಿನ್ ಆಫ್ ದಿ ಅಮಾಲ್ಗಮೇಟೆಡ್ ಅಸೋಸಿಯೇಶನ್ ಆಫ್ ಐರನ್ ಆಂಡ್ ಸ್ಟೀಲ್ ವರ್ಕರ್ಸ್." ಪೆನ್ಸಿಲ್ವೇನಿಯಾ ಹಿಸ್ಟರಿ 64(4): 509–533. ಐಎಸ್‌ಎಸ್‌ಎನ್: 0031-4528
  • ರಿಟ್‌ ಜ್ಯೂನಿಯರ್ ಮೈಕೆಲ್ ಜೆ. ಆಂಡ್ ಕ್ರಿಕ್ ಲ್ಯಾಂಡರ್ಸ್. (1995). ಎ ಲೈಫ್‌ಟೈಮ್ ಆಫ್‌ ರಿಚಸ್‌: ದಿ ಬಯಾಗ್ರಫಿ ಆಫ್ ನೆಪೋಲಿಯನ್ ಹಿಲ್ ಐಎಸ್‌ಬಿಎನ್‌ 0525940014
  • ವ್ಯಾನ್‌ಸ್ಲಿಕ್, ಅಬಿಗೈಲ್ ಎ. "'ದಿ ಅಟ್‌‌ಮೋಸ್ಟ್ ಅಮೌಂಟ್ ಆಫ್‌ ದಿ ಇಫೆಕ್ಟಿವ್ ಅಕಾಮಡೇಶನ್ ': ಆಂಡ್ಯ್ರೂ ಕಾರ್ನೆಗೀ ಆಂಡ್ ದಿ ರಿಫಾರ್ಮ್‌ ಆಫ್‌ ದಿ ಅಮೆರಿಕನ್ ಲೈಬ್ರರಿ." ಜರ್ನಲ್ ಆಫ್‌ ದಿ ಸೊಸೈಟಿ ಆಫ್‌ ಆರ್ಕಿಟೆಕ್ಚರಲ್ ಹಿಸ್ಟರಿಯನ್ಸ್ 1991 50(4): 359–383. ಐಎಸ್‌ಎಸ್‌ಎನ್: 0037-9808 (ಪೂರ್ಣಪಠ್ಯ: ಜಸ್ಟರ್‌ನಲ್ಲಿ)
  • ವಾಲ್‌, ಜೋಸೆಫ್‌ ಫ್ರೇಜರ್. ಆಂಡ್ಯ್ರೂ ಕಾರ್ನೆಗೀ (1989). ಐಎಸ್‌ಬಿಎನ್‌ 0-8229-5904-6 (ನಾಸ ಅವರೊಂದಿಗೆ ಸೇರಿ ಬರೆದ ಅತ್ಯಂತ ವಿವರವಾದ ವಿದ್ವತ್‌ಪೂರ್ಣ ಜೀವನಚರಿತ್ರೆ)
  • ವೇಪಲ್ಸ್, ರಾಬರ್ಟ್. Archived 2006-12-16 ವೇಬ್ಯಾಕ್ ಮೆಷಿನ್ ನಲ್ಲಿ."ಆಂಡ್ಯ್ರೂ ಕಾರ್ನೆಗೀ" Archived 2006-12-16 ವೇಬ್ಯಾಕ್ ಮೆಷಿನ್ ನಲ್ಲಿ., ಇಎಚ್‌. ನೆಟ್ ಎನ್‌ಸೈಕ್ಲೋಪಿಡಿಯಾ ಆಫ್‌ ಎಕಾನಾಮಿಕ್ ಆಂಡ್ ಬ್ಯುಸಿನೆಸ್ ಹಿಸ್ಟರಿ .

ಬಾಹ್ಯ ಕೊಂಡಿಗಳು

ಬದಲಾಯಿಸಿ

ವರ್ಕ್ಸ್ ಬೈ ಕಾರ್ನೆಗೀ

ಬದಲಾಯಿಸಿ

ಕಾರ್ನೆಗೀ ಅವರ ಗೌರವಾರ್ಥ ಹೆಸರಿಸಲಾದ ಸಂಸ್ಥೆಗಳು

ಬದಲಾಯಿಸಿ

ಸಾಮಾನ್ಯ ಆಸಕ್ತಿ

ಬದಲಾಯಿಸಿ
Academic offices
Preceded by Rector of the University of St Andrews
1901–1907
Succeeded by