ಆರೀಶಿ ಕುಟುಂಬಕ್ಕೆ ಸೇರಿದ ಅಂತೂರಿಯಮ್ ಸುಂದರ ಎಲೆ ಹೂಗೊಂಚಲಿನ ಅಲ೦ಕಾರ ಸಸ್ಯ. ಬಾಲದಂತಿರುವ ಹೂಗೊಂಚಲು ಎಂಬುದು ಈ ಪದದ ಅರ್ಥ. ಇದರ ಹೂ ನಿಜವಾದ ಹೂವಲ್ಲ ಅದೊಂದು ಮಾರ್ಪಾಡಾದ ಎಲೆ. ಹೂನಾಲಿಗೆ ಎಂದು ಹೆಸರು ಪಡೆದಿರುವ ಈ ಭಾಗ ೩೦ ಸೆ.ಮೀ ಅಗಲವಿದ್ದು ದಂಟಿಗೆ ಅಂಟಿಕೊಂಡಿರುತ್ತದೆ. ಈ ನಾಲಗೆಯೊಂದಿಗೆ ಕ್ಯಾಂಡ್ಲ್ ಎಂಬ ಇನ್ನೊಂದು ಆಕರ್ಷಕ ಬಣ್ಣವಿರುವ ಭಾಗವಿದೆ. ಜಾತಿಯನ್ನನುಸರಿಸಿ ಇವುಗಳು ಬಿಳಿ, ಹಸಿರು, ಕೇಸರಿ. ಕೆಂಪು ಮೊದಲಾದ ಆಕರ್ಷಕ ಬಣ್ಣಗಳನ್ನು ಹೊಂದಿರುತ್ತದೆ. ಇದನ್ನು ಕತ್ತರಿಸಿ ಹೂದಾನಿಯಲ್ಲಿ ಇಟ್ಟರೆ ೨-೪ ವಾರಗಳವರೆಗೆ ಕೆಡುವುದಿಲ್ಲ.[]

ಅಂತೋರಿಯಂ ಬೀಜೋತ್ಪಾದನೆ

ಬದಲಾಯಿಸಿ

ಅಂತೂರಿಯಮ್ ಸಸಿಗಳನ್ನು ಬೀಜದಿಂದ, ಕುಡಿ ಸಸಿಗಳಿಂದ ಮತ್ತು ಅಂಗಾಶ ಕಸಿ ವಿಧಾನಗಳಿಂದ ಉತ್ಪಾದಿಸಲಾಗುತ್ತದೆ. ಕೃತಕ ಪರಾಗ ಸ್ಪರ್ಶ ವಿವಿಧ ಬಣ್ಣದ ಹೂನಾಲಗೆಯನ್ನು ಬಿಡುವ ಸಸ್ಯಗಳನ್ನು ಉತ್ಪಾದಿಸಬಹುದು ಗಿಡಗಳಿಗೆ ಶೇಕಡ ೭೫ ರಷ್ಟು ಅವಶ್ಯಕತೆಯಿದೆ.

ಬೆಳೆಸುವ ವಿಧಾನ

ಬದಲಾಯಿಸಿ

ಅಂತೂರಿಯಮ್ ಗಿಡಗಳನ್ನು ಕುಂಡಗಳಲ್ಲಿಯೂ, ನೆಲದ ಮೇಲೂ ಬೆಳೆಸುತ್ತಾರೆ. ಕುಂಡಗಳಲ್ಲಾಗಲೀ ನೆಲದ ಮೇಲಾಗಲಿ ಬೆಳೆಸುವಾಗ ಮಣ್ಣು ಸಡಿಲವಾಗಿದ್ದರೆ ಬೇರುಗಳಿಗೆ ಗಾಳಿಯಾಡಲು ಅವಕಾಶವಾಗುತ್ತದೆ. ಒಂದು ಗಿಡದಿಂದ ೧೦-೧೨ ಹೂವುಗಳು ದೊರೆಯುತ್ತದೆ. ಹೂವಿನ ಬೆಲೆ ಅದರ ನಾಲಿಗೆಯ ಆಕಾರ ಮತ್ತು ಗಾತ್ರ ಮತ್ತು ಬಣ್ಣಗಳನ್ನು ಹೊಂದಿಕೊಂಡಿರುತ್ತದೆ.

ಉಲ್ಲೇಖ

ಬದಲಾಯಿಸಿ
  1. http://www.gardeningknowhow.com/houseplants/anthurium/anthurium-care.htm