ಅಹ್ಮದ್ ನಗರ ಜಿಲ್ಲೆ
ಅಹ್ಮದ್ ನಗರ ಜಿಲ್ಲೆ ಮಹಾರಾಷ್ಟ ರಾಜ್ಯದ ಒಂದು ಜಿಲ್ಲೆ. ಇದು ಈ ರಾಜ್ಯದ ಅತಿ ದೊಡ್ಡ ಜಿಲ್ಲೆಯೂ ಹೌದು.
ಚರಿತ್ರೆ
ಬದಲಾಯಿಸಿಈ ಜೆಲ್ಲೆಯನ್ನು ೧೮೧೮ರಲ್ಲಿಯೇ ರಚಿಸಲಾಯಿತಾದರೂ ೧೮೬೯ ರಲ್ಲಿ ನಗರ ಮತ್ತು ನಾಸಿಕ್ ಜಿಲ್ಲೆಯನ್ನು ಪ್ರತ್ಯೇಕಿಸಿದ ನಂತರ ಅಧಿಕೃತವಾಗಿ ಆಸ್ತಿತ್ವಕ್ಕೆ ಬಂದಿತು.ಈ ಪ್ರದೇಶದ ಇತಿಹಾಸದಲ್ಲಿ ಕ್ರಿ.ಶ.೫೫೦ ರಿಂದ ೭೫೭ರ ವರೇಗೆ ಇದು ಬದಾಮಿಯ ಚಾಲುಕ್ಯ ರ ಅಧೀನದಲ್ಲಿದ್ದ ಉಲ್ಲೇಖವಿದೆ.ಮುಂದೆ ಕ್ರಿ.ಶ.೯೭೩ರ ವರೇಗೆ ರಾಷ್ಟ್ರಕೂಟರು ಇದನ್ನು ಸ್ವಾಧೀನದಲ್ಲಿಟ್ಟುಕೊಂಡಿದ್ದರು.ಮುಂದೆ ಇದು ಕಲ್ಯಾಣಿಯ ಚಾಲುಕ್ಯರ, ಅನಂತರ ಕಲಚೂರ್ಯರ ಆಧೀನವಾಯಿತು.ಕ್ರಿ.ಶ.೧೧೮೭ ರ ಸುಮಾರಿಗೆ ದೇವಗಿರಿಯ ಯಾದವರ ಕೈವಶವಾದ ನಂತರ ಕ್ರಿ.ಶ.೧೩೧೮ ರಲ್ಲಿ ಮುಸಲ್ಮಾನರ ಆಕ್ರಮಿಸುವವರೇಗೆ ಯಾದವರ ಆಡಳಿತದಲ್ಲಿ ಇದ್ದಿತು.ಮುಂದೆ ದೆಹಲಿಯ ಸುಲ್ತಾನರಿಂದ ಅಳಲ್ಪಟ್ಟರೂ ಈ ಪ್ರದೇಶದಲ್ಲಿ ಅಸ್ಥಿರವಾದ ಆಡಳಿತವಿತ್ತು.ದಖ್ಖಣದ ಬಹಮನಿ ಸುಲ್ತಾನರ ಪ್ರಭಾವ ದಟ್ಟವಾಗಿದ್ದ ಕಾಲದಲ್ಲಿಯೇ ಅಂದರೆ ಕ್ರಿ.ಶ.೧೪೯೦ರಲ್ಲಿ ಇಲ್ಲಿಯ ಆಡಳಿತಗಾರ ಸ್ವತಂತ್ರನಾಗಿ ನಿಜಾಮಶಾಹಿ ವಂಶದ ಸ್ಥಾಪನೆ ಮಾಡಿದ.ಇವನು ಇಲ್ಲಿ ನಗರವನ್ನು, ಕೋಟೆಯನ್ನು ನಿರ್ಮಿಸಿದ.ಮುಂದೆ ಕ್ರಿ.ಶ.೧೬೦೦ರಲ್ಲಿ ಈ ಪ್ರದೇಶ ಮೊಘಲರ ಸ್ವಾಧೀನವಾಗುವವರೇಗೆ ಬಿಜಾಪುರ ಅರಸರು,ಖಾನ್ ದೇಶದ ಫಾರೂಕಿ ವಂಶಸ್ಥರೊಂದಿಗೆ ತನ್ನ ಅಸ್ಥಿತ್ವಕ್ಕ್ಕಾಗಿ ಹಲವಾರು ಯುದ್ಧಗಳನ್ನು ಮಾಡಬೇಕಾಯಿತು.ಮುಂದೆ ಔರಂಗಜೇಬನ ನಿಧನಾ ನಂತರ ಮರಾಠರು ಈ ಪ್ರದೇಶದ ಆಡಳಿತ ನಡೆಸಿದರು.೧೭೯೭ ರಲ್ಲಿ ಪೇಶ್ವೆಗಳು ಇದನ್ನು ಸಿಂಧಿಯಾ ವಂಶಸ್ಥರಿಗೆ ಬಿಟ್ಟುಕೊಟ್ಟರು.೧೮೦೩ರಲ್ಲಿ ವೆಲ್ಲೆಸ್ಲಿಯು ಇದನ್ನು ಕೈವಶ ಪಡಿಸಿಕೊಂಡ ನಂತರ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತು.