- ಅಸ್ಸಾಂ ವಿಧಾನಸಭೆಯ ಅವಧಿ ಜೂನ್ 5, 2016 ರಂದು ಮುಕ್ತಾಯಗೊಂಒಡಿದೆ. ಮುಂದಿನ ವಿಧಾನಸಭಾ ಚುನಾವಣೆಯು ಎರಡು ಹಂತಗಳಲ್ಲಿ ಅಸ್ಸಾಂನ ಸದಸ್ಯರನ್ನು ಚುನಾಯಿಸುವ 126 ಕ್ಷೇತ್ರಗಳಲ್ಲಿ ಏಪ್ರಿಲ್ 4 ಮತ್ತು 11, 2016 ರಂದು ನಡೆದಿದೆ.
- ಬಿಜೆಪಿ ಸಂಸದೀಯ ಸಮಿತಿ ತನ್ನ ಅಸ್ಸಾಂ ಅಧ್ಯಕ್ಷ ಸರ್ವಾನಂದ ಸೋನಾವಾಲ್ ರನ್ನು ಏಪ್ರಿಲ್ 2016 ರ ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿತು.[೧]
- ಸೈಯದ್ ನಸೀಂ ಅಹ್ಮದ್ ಝೈದಿ ನೇತೃತ್ವದ ಚುನಾವಣಾ ಆಯೋಗದ ಪೂರ್ಣ ಪೀಠವು ಡಿಸೆಂಬರ್ 2015 21 ರಂದು ಅಸ್ಸಾಂ ಭೇಟಿಮಾಡಿ ಮತದಾರರ-ಪಟ್ಟಿ ಪರಿಶೀಲಿಸಿದ ಆಡಿಟ್ ಟ್ರಯಲ್‌ನ್ನು ಅಸ್ಸಾಂ ವಿಧಾನಸಭೆ ಚುನಾವಣೆಯ 10 ಕ್ಷೇತ್ರಗಳಲ್ಲಿ (2400 ಸುಮಾರು ಮತಗಟ್ಟೆ) ಪರಿಶೀಲಿಸಲಾಯಿತು. ಇವು ಕಾಮರೂಪ ಮೆಟ್ರೋ -ಜಿಲ್ಲಾ ದಿಸ್ಪುರ್, ಜಲುಕ್ಬರಿ, ಗೌಹಾತಿ ಪೂರ್ವ ಹಾಗೂ ಗುವಾಹತಿ ಪಶ್ಚಿಮ ಈ ಎಲ್ಲ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. 250 ಮತದಾನ ಕೇಂದ್ರಗಳನ್ನು ಮಾದರಿ ಮತದಾನ ಕೇಂದ್ರಗಳಾಗಿ ಮಾಡಲಾಲಾಗಿದೆ.[೨]
- ರಾಷ್ಟ್ರೀಯ ದಾಖಲಾತಿ ಆಫ್ ಭಾರತೀಯ (ಓಖಅ) ನಾಗರೀಕರ ದಾಖಲೆಯನ್ನು ಅಸ್ಸಾಂನಲ್ಲಿ ಸಕಾಲ ಆಬಿವೃದ್ಧಿ ಮಾಡಲಾಗುತ್ತಿದೆ ಮತ್ತು ಪ್ರಕ್ರಿಯೆ 1 ಜನವರಿ 2016 ಕ್ಕೆ ಪೂರ್ಣಗೊಂಡಿತು. ಅಸ್ಸಾಂನಲ್ಲಿ 66.90 ಲಕ್ಷ ಕುಟುಂಬಗಳು ಸಲ್ಲಿಸಿದ ತಮ್ಮನ್ನು ಮೊದಲ 1951 ಅಥವಾ ಎನ್ಆರ್ ಸಿ ಮಾರ್ಚ್ 1971 ಜೊತೆ,ಪರಿಶೀಲಿಸುವ ಕೆಲಸ / ಪ್ರಕ್ರಿಯೆ ಪೂರ್ಣಗೊಂಡಿತು. ಇದಕ್ಕೆ ಭಾರತದ ಸರ್ವೋಚ್ಚ ನ್ಯಾಯಾಲಯದ ಮೇಲ್ವಿಚಾರಣೆ ಇದೆ. ಮತದಾರರ ಅಧಿಕೃತ ಪಟ್ಟಿಗಳ ಪರಿಶೀಲಿಸುವ ಕೆಲಸವನ್ನು ನಂತರ ಮಾಡಲಾಗುತ್ತದೆ. ಇಡೀ ಪ್ರಕ್ರಿಯೆ 25, ಮಾರ್ಚ್ 1971 ನಂತರ ಬಾಂಗ್ಲಾದೇಶದ ಅಕ್ರಮ ವಲಸೆ ಪತ್ತೆಗಾಗಿ ,ಅಥವಾ ಅವರ ಬಂಧನ ಮತ್ತು ಗಡಿಪಾರು ಮಾಡಲು. 1985 ರಿಂದ ಅಸ್ಸಾಂ ದಾಟಿ ಬಂದವರು 38,000 ದ ಮೇಲೆ ಅಕ್ರಮ ವಲಸಿಗರು, ವಿದೇಶಿಯರು, ಎಂದು ಅಸ್ಸಾಂನಲ್ಲಿರುವರೆಂದು ಘೋಷಿಸಿದರು. ಅಸ್ಸಾಂನ ಮತದಾರರ ಅಧಿಕೃತ ಪಟ್ಟಿಗಳಲ್ಲಿ ಸುಮಾರು 1.5 ಲಕ್ಷ ಹೆಸರುಗಳು " ಪೌರತ್ವ ಸ್ಥಿತಿಯನ್ನು ಪೂರ್ವಪ್ರತ್ಯಯ "ಡಿ" ಹೊಂದಿದೆ (ಸಂದಿಗ್ಧ- "ಖಚಿತವಾಗಿಲ್ಲ ಎಂದು.) -. ಸುಪ್ರೀಂ ಕೋರ್ಟ್ ಅಸ್ಸಾಂ ಸರಕಾರಕ್ಕೆ ಮಾರ್ಚ್ 1,2016 ಎನ್ಆರ್ ಸಿ ಹಾಗೂ ಕರಡು ಮುಂಬಡ್ತಿ ಕೊಟ್ಟು ಪೂರ್ಣಗೊಳಿಸಲು ಅಂತಿಮ ಗಡುವು ನೀಡಿದೆ. ಅಖಿಲ ಅಸ್ಸಾಂ ವಿದ್ಯಾರ್ಥಿ ಒಕ್ಕೂಟದ ಸುಪ್ರೀಂ ಕೋರ್ಟ್ ನಿರ್ದೇಶನದ ವಿರುದ್ಧ ಎನ್ಆರ್ ಸಿ ಅಪ್ಡೇಟ್ ಒಳಗೊಂಡಿದ್ದರೆನ್ನಲಾದ ಅಧಿಕಾರಿಗಳ ವರ್ಗಾವಣೆ ಮೂಲಕ ಅಪ್ಡೇಟ್ ಮುಂದೂಡುತ್ತಿದೆ ಎಂದು ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡಿದೆ.
- ಮೇ 2015 ರಲ್ಲಿ, ಐತಿಹಾಸಿಕ ಭಾರತ ಬಾಂಗ್ಲಾದೇಶದ ಭೂಮಿ ಸ್ವಾಪ್ ಒಪ್ಪಂದಕ್ಕೆ ಸಹಿ ಹಾಕಿದೆ. [೩]
- ಅಕ್ಟೋಬರ್ 2015 ರಲ್ಲಿ ಪ್ರಕಟವಾದ ಕರಡು ಮತದಾರರ ಅಧಿಕೃತ ಪಟ್ಟಿಗಳ ಪ್ರಕಾರ, ಅಸ್ಸಾಂ ಮತದಾರರ ಒಟ್ಟು ಸಂಖ್ಯೆ 1.92 ಕೋಟಿ. ಚುನಾವಣಾ ಆಯೋಗ ಅಂತಿಮ ಮತದಾರರ ಅಧಿಕೃತ ಪಟ್ಟಿಗಳನ್ನು 11 ಜನವರಿ 2016 ಪ್ರಕಟಿಸಿದೆ. ಕೇಂದ್ರ ಸಚಿವ ಮತ್ತು ಲಖಿಮಪುರ್ ಸಂಸದ ಸರ್ವಾನಂದ ಸೋನೋವಾಲಾರನ್ನು ಅಸ್ಸಾಂ ಬಿಜೆಪಿ ಅಧ್ಯಕ್ಷ ಮಾಡಲಾಯಿತು ಮತ್ತು ಅವರು ಚುನಾವಣಾ ಕಮಿಟಿಯ ಮುಖ್ಯಸ್ಥರನ್ನಾಗಿ ಮಾಡಿದೆ. ಸೋನೋವಾಲಾ ಅಕ್ರಮ ಬಾಂಗ್ಲಾದೇಶ ವಲಸಿಗರಿಂದ 'ಪರಿಸ್ಥಿತಿ "ತುಂಬಾ ಅಪಾಯಕಾರಿ ಎಂದರು.
- ಸೋನೋವಾಲಾರ ಪ್ರಯತ್ನದಿಂದ ಭಾರತದ ಸರ್ವೋಚ್ಚ ನ್ಯಾಯಾಲಯವು ಡಿಸೆಂಬರ್ 2006 ರಲ್ಲಿ ವಿವಾದಾತ್ಮಕ ಕಾಯಿದೆಯನ್ನು (IMDT Act) ತಳ್ಳಿಹಾಕಿತು. ರಾಜ್ಯದ ಕಾಂಗ್ರೆಸ್' ನಾಯಕ ಹಿಮಂತ ಬಿಶ್ವಾಸ್ ಶರ್ಮಾ, ಬಿಜೆಪಿ ಸೇರಿದರು. ಬಿಜೆಪಿ ಅಸ್ಸಾಂನಲ್ಲಿ 'ಮಿಶನ್ 84' ರ ಗುರಿ ಹೊಂದಿದೆ. ಬಿಜೆಪಿ ಲೋಕಸಭಾ 2014 ರಲ್ಲಿ ಚುನಾವಣೆಯಲ್ಲಿ 69 ವಿಧಾನಸಭಾ ಕ್ಷೇತ್ರಗಳುಲ್ಲಿ ಮುಂದಿತ್ತು. ಅಸ್ಸಾಂನಲ್ಲಿ 7 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಶಕ್ತಿ ತೋರಿದೆ. ಮೊದಲ ಬಾರಿಗೆ ಬಿಜೆಪಿ ಬೋಡೋಲ್ಯಾಂಡ್ ಪ್ರಾದೇಶಿಕ ಸಮಿತಿ ಚುನಾವಣೆಗಳಲ್ಲಿ ಸ್ಪರ್ಧಿಸಿ, ಒಂದು ಸ್ಥಾನವನ್ನು ಗೆದ್ದುಕೊಂಡಿತು.[೪][೫][೬]
- ಧರ್ಮ ದತ್ತಾಂಶ
- 2011 ರ ಜನಗಣತಿಯ ಪ್ರಕಾರ, 61.5% ರಷ್ಟು ಹಿಂದೂಗಳಾಗಿದ್ದು, 34,22% ಮುಸ್ಲಿಮರಾಗಿದ್ದಾರೆ. ಕ್ರಿಶ್ಚಿಯನ್ ಅಲ್ಪಸಂಖ್ಯಾತರ (3.7%) ಪರಿಶಿಷ್ಟ ಪಂಗಡ ಜನಸಂಖ್ಯೆಯ ನಡುವೆ ಕಾಣಬಹುದು. ಅಸ್ಸಾಂನ ಪರಿಶಿಷ್ಟ ಪಂಗಡ ಜನಸಂಖ್ಯೆಯು 13%. ಇದರಲ್ಲಿ ಬೋಡೋಗಳು 40% ನಷ್ಟು ಇದ್ದಾರೆ. ಅಸ್ಸಾಮೀಸ್ ಮಾತನಾಡುವ ಮುಸ್ಲಿಮರು, ಅವರ ಪೂರ್ವಜರು ಎಂಟು ಶತಮಾನಗಳ ಹಿಂದೆ ಅಸ್ಸಾಂಗೆ ಬಂದು ನೆಲಸಿದ್ದಾರೆ. ಅವರ ಸಂಖ್ಯೆ ಸುಮಾರು 40 ಲಕ್ಷ. ಮುಸ್ಲಿಮರ ಒಟ್ಟು ಜನಸಂಖ್ಯೆಯು (1.2 ಕೋಟಿ) ಅಸ್ಸಾಂನಲ್ಲಿ 33% ಇದೆ.
- ಅಸ್ಸಾಂನ 32 ಜಿಲ್ಲೆಗಳಲ್ಲಿ, 9 ಜಿಲ್ಲೆಗಳು, ಭಾರತದ 2011 ರ ಜನಗಣತಿಯ ಪ್ರಕಾರ ಮುಸ್ಲಿಂ ಬಾಹುಳ್ಯ ಹೊಂದಿದೆ. ಜಿಲ್ಲೆಗಳಲ್ಲಿ ಧುಬ್ರಿ, ಗೋವಲಪರ, (Barpeta)ಬರಪೇಟ, ಮೊರಿಗೊಅನ್(Morigaon), ನಗೊವಾನ್(Nagaon), ಕರೀಂಗಂಜ್, ಹೈಲಖಂಡಿ (Hailakandi), ದರ್ರಾಂಗ್(Darrang) ಮತ್ತು ಬೊಂಗೈಗಾಂವ್. ಬೋಡೋಗಳು -ಇದು ಹೆಚ್ಚಿನ ಕಚಾರಿ ಸಮೂಹದ ಎಲ್ಲಾ ವಿಭಾಗಗಳನ್ನು ಒಳಗೊಂಡಿರುತ್ತದೆ.ಅದು 12% ಜನಸಂಖ್ಯೆಯನ್ನು ಪಾಲನ್ನು ಹೊಂದಿವೆ. 2001 ರ ಜನಗಣತಿಯಂತೆ ಅಸ್ಸಾಂನ ಅಸ್ಸಾಮಿ ಭಾಷಿಕರ ಪಾಲು 48,80%.[೭][೮][೯][೧೦]
ಅಸ್ಸಾಂ ಅಸೆಂಬ್ಲಿ ಚುನಾವಣೆ 2016 ರ ವೇಳಾಪಟ್ಟಿ
ಬದಲಾಯಿಸಿ
ಕ್ರ.ಸಂ. |
ವಿವರ |
ಮತದಾನ ದಿನಾಂಕ (ಹಂತ 1) |
(ಹಂತ 2)
|
1. |
ಅಧಿಸೂಚನೆ |
ಮಾರ್ಚ್-11 |
ಮಾರ್ಚ್ -14 ಸಂಚಿಕೆ
|
2. |
ನಾಮನಿರ್ದೇಶನಗಳು ಮಾಡುವ ಕೊನೆಯ ದಿನಾಂಕ |
ಮಾರ್ಚ್ 18 |
ಮಾರ್ಚ್ 21
|
3. |
ನಾಮನಿರ್ದೇಶನಗಳ ಪರಿಶೀಲನೆ |
ಮಾರ್ಚ್ 19 |
ಮಾರ್ಚ್ 22
|
4. |
ಅಭ್ಯರ್ಥಿಗಳು ಹಿಂತೆಗೆದುಕೊಳ್ಳುವ ಕೊನೆಯ ದಿನಾಂಕ |
ಮಾರ್ಚ್ 21 |
ಮಾರ್ಚ್ 26
|
5. |
ಮತದಾನ ದಿನಾಂಕ |
4 ಏಪ್ರಿಲ್ 2016, |
11 ಏಪ್ರಿಲ್2016
|
6. |
ಮತಗಳ ಎಣಿಕೆ |
ಮೇ 19 |
ಮೇ 19
|
7. |
ಚುನಾವಣಾ ಪ್ರಕ್ರಿಯೆ ಮಗಿಯುವ ದಿನಾಂಕ |
ಮೇ 21 |
ಮೇ 21
|
[೧೧]
- ನರೇಂದ್ರ ಮೋದಿ ಫೆಬ್ರವರಿ 2016 5 ಆಗಮಿಸಿದಾಗ ಮೊದಲ ಶಿವಸಾಗರ ಹಿಂದಿನ ಅಹೋಮಾ ರಾಜಧಾನಿಯಲ್ಲಿ ಶ್ರೀಮಂತ ಶಂಕರದೇವ ಸಂಘದ 85 ನೇ ಸಮ್ಮೇಳನಕ್ಕೆ ಹಾಜರಾದರು. ನಂತರ ಅವರು ಮೇಲಿನ ಅಸ್ಸಾಮ್ನಲ್ಲಿರುವ ದಿಬ್ರುಘಢ್ ಜಿಲ್ಲೆಯ ಮೋರನ್ ನಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಪ್ರಚಾರ ಮಾಡಿದರು. ಮೋದಿ ದಿಬ್ರೂಗರ್'ನಿಂದ ರಾಷ್ಟ್ರದ ಅಸ್ಸಾಂ ಅನಿಲ ಕ್ರ್ಯಾಕರ್ ಯೋಜನೆಯನ್ನು ದೇಶಕ್ಕೆ ಅರ್ಪಿಸಿದರು. ಮೋದಿ ನಂತರ 2016 ರ ದಕ್ಷಿಣ ಏಷ್ಯಾದ ಕ್ರೀಡೆಗಳನ್ನು ಗೌಹಾತಿಯಲ್ಲಿ ಫೆಬ್ರವರಿ 5 ರಂದು ಉದ್ಘಾಟಿಸಿದರು.
- 2 ಮಾರ್ಚ್ 2016 ರಂದು ಬಿಜೆಪಿ ಅಸ್ಸಾಂ ಗಣ ಪರಿಷತ್ ಜೊತೆ (ಎಜಿಪಿ) ತನ್ನ ಮೈತ್ರಿಯನ್ನು ಘೋಷಿಸಿದರು. ಅಸ್ಸಾಂ ಗಣ ಪರಿಷತ್ ಗೆ 24 ಸ್ಥಾನಗಳನ್ನು ನೀಡಲಾಯಿತು.
- ಮುಖ್ಯಮಂತ್ರಿ ತರುಣ್ ಗೊಗೋಯ್ ರೂ.3,000 ಕೋಟಿಯನ್ನು ಬರಾಕ್ ವ್ಯಾಲಿಗೆ ವಿಶೇಷ ಪ್ಯಾಕೇಜ್ ಘೋಷಿಸಿದರು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಸ್ಸಾಂನಲ್ಲಿ 4 ಮತ್ತು 5 ಮಾರ್ಚ್ 2016 ರಂದು ಎರಡು ದಿನಗಳ ಭೇಟಿ ಮತ್ತು ಸಿಲ್ಚಾರ್ ಮತ್ತು ನಾಗೊನಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಭಾಷಣ ಮಾಡಿದರು. 6 ಮಾರ್ಚ್ 2016 ರಂದು ಕಾಂಗ್ರೆಸ್ ಓಡೋ ಹಾರ್ಟ್ಲ್ಯಾಂಡ್ ಮೂಲದ ಯುನೈಟೆಡ್ ಪೀಪಲ್ಸ್ ಪಾರ್ಟಿ ಯನ್ನು ಒಕ್ಕೂಟಕ್ಕೆ ಸೇರಿಸಿಕೊಂಡಿತು.[೧೨] [೧೩]
2011/ಅಸ್ಸಾಮ್ |
Party/Alliance |
India Today-Axis |
ABP Ananda |
Times Now-CVoter |
Chanakya
|
78/39.39% |
ಕಾಂಗ್ರೆಸ್ |
26-33 |
33 |
41 |
20-34
|
5/11.47% |
ಬಿಜೆಪಿ |
79-93 |
81 |
57 |
81-99
|
18/10.57% |
AIUDF |
06-10 |
10 |
18 |
06-12
|
13/30.44% |
ಇತರೆ |
01-04 |
02 |
10 |
00-02
|
12/6.13% |
BPF |
|
|
|
|
|
ಒಟ್ಟು ಸ್ಥಾನ |
126 |
126 |
126 |
126
|
[೧೪]
- ಮತ ಚಲಾವಣೆ ವಿವರ : - ಹಂತ - I & II
ಹಂತ |
ಗಂ.ಮತದಾರರು |
ಹೆಂ.ಮತದಾರರು |
ಒಟ್ಟು ಮತದಾರರುರು |
ಗಂ.ಮತದಾನ |
ಹೆಂ.ಮತದಾನ |
ಒಟ್ಟುಮತದಾನ |
ಗಂ. ಶೇ. |
ಹೆಂ.ಶೇ. |
ಒಟ್ಟು.
|
Phase-I |
4919432 |
4599635 |
9519067 |
4026298 |
3798462 |
7824760 |
81.84 |
82.58 |
82.2
|
Phase-II |
5391191 |
5037432 |
10428623 |
4700661 |
4375066 |
9075727 |
87.19 |
86.85 |
87.03
|
ಒಟ್ಟು(ಹಂತ-I&II) |
10310623 |
9637067 |
19947690 |
8726959 |
8173528 |
16900487 |
84.64 |
84.81 |
84.72
|
[೧೫]
ಬಿಜೆಪಿ**ಕಾಂಗ್ರೆಸ್'ಮತ್ತು ಇತರರ ಸ್ಪರ್ಧೆ ಮತ್ತು ಫಲಿತಾಂಶ
ಬದಲಾಯಿಸಿ
ಅಸ್ಸಾಂ ವಿಧಾನಸಭೆಯ 126 ಸದಸ್ಯರು ನೇರವಾಗಿ ವಿಧಾನಸಭಾ ಕ್ಷೇತ್ರಗಳಿಂದ ಆಯ್ಕೆಯಾಗುವರು. ಎಂಟು ಸ್ಥಾನಗಳನ್ನು ಪರಿಶಿಷ್ಟ ಜಾತಿ ಕಾಯ್ದಿರಿಸಲಾಗಿದೆ, 16 ಪರಿಶಿಷ್ಟ ಪಂಗಡಕ್ಕೆ ಕಾಯ್ದಿರಿಸಲಾಗಿದೆ, ಮತ್ತು ಇತರ 102 ಸ್ಥಾನಗಳಿಗೆ ಯಾವುದೇ ಮೀಸಲಾತಿ ಇಲ್ಲ.
- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ + =26+1; ಭಾರತೀಯ ಜನತಾ ಪಕ್ಷ+=85
- ಅಸ್ಸಾಂ ಫಲಿತಾಂಶ, ಪಡೆದ ಮತದ ಶೇ.ವಾರು: ಬಿಜೆಪಿ+ + 33.3%;ಬಿಜೆಪಿ+ಎಜಿಪಿ 42%; AIUDF + 11.9%; ಇತರೆ 12.8%
- 2016: ಫಲಿತಾಂಶ:ಎನ್'ಡಿಎ:ಬಿಜೆಪಿ+ 85 ಸ್ಥಾನಗಳು (67.5%) ;ಕಾಂಗ್ರೆಸ್ 27 ಸ್ಥಾನಗಳು (21.5%); AIUDF 12 ಸ್ಥಾನಗಳು (9.6%); ಇತರೆ 2 ಸ್ಥಾನಗಳು (1.6%).
- {ಮತಗಳು% ಮತ ಎಣಿಕೆ} ರಾಷ್ಟ್ರೀಯ ಕಾಂಗ್ರೆಸ್ {31.0% 5238655} ಬಿಜೆಪಿ {29.5%, 4992185} AIUDF {13.0%, 2207945;. ಪಕ್ಷೇತರ {11.0%, 1867532} ಎಜಿಪಿ {8.1%, 1377482} BOPF {3.9%, 666057} ಸಿಪಿಎಂ {0.6%, 93508} ಎನ್ಸಿಪಿ {0.3%, 44848} ಸಿಪಿಐ {0.2%, 37243} BGanP {0.2%, 33220}
[೧೬]
[೧೭]
- 24/25-5-2015:ರಾಜ್ಯದಲ್ಲಿ ಭಾರತೀಯ ಜನತಾಪಕ್ಷ ಬಹುಮತ ಗಳಿಸಿದ್ದರಿಂದ ಸರ್ವಾನಂದ ಸೋನೋವಾಲ್ ಅವರು ಅಸ್ಸಾಂನ 14ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ರಾಜ್ಯಪಾಲ ಪಿ. ಬಿ. ಆಚಾರ್ಯ ಅವರು ಸೋನೋವಾಲ್ ಮತ್ತು ಇತರ 10 ಸಚಿವರಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ಭೋದಿಸಿದರು. ಸೋನೋವಾಲ್ ಜತೆ ಸಂಪುಟ ದರ್ಜೆಯ ಎಂಟು ಸಚಿವರು, ಇಬ್ಬರು ಸ್ವತಂತ್ರ ಖಾತೆಯ ರಾಜ್ಯ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಸಚಿವರ ಖಾತೆಯನ್ನು ನಂತರ ಹಂಚಲಾಗುತ್ತದೆ. ಬಿಜೆಪಿಯ ಚುನಾವಣೆ ಉಸ್ತುವಾರಿ ಹೊತ್ತಿದ್ದ ಹಿಮಂತಾ ಬಿಸ್ವಾಸ್ ಶರ್ಮಾ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರಣಜಿತ್ ದತ್ತಾ, ಮಾಜಿ ಸಚಿವ ಹಾಗೂ ಬಿಜೆಪಿಯ ಪ್ರಮುಖ ನಾಯಕ ಚಂದ್ರಮೋಹನ್ ಪಟ್ವಾರಿ, ಬಿಜೆಪಿ ಮಿತ್ರ ಪಕ್ಷವಾದ ಎಜಿಪಿಯ ಕಾರ್ಯಾಧ್ಯಕ್ಷ ಅತುಲ್ ಬೋರಾ, ಕೇಶವ್ ಮಹಾಂತ, ಬಿಪಿಎಫ್‌ನ ಪ್ರಮೀಳಾ ರಾಣಿ ಬ್ರಹ್ಮಾ ಮತ್ತು ರಿಹೊನ್ ದಿಯಾಮೇರಿ ಅವರು ಸಂಪುಟ ದರ್ಜೆಯ ಸಚಿವರಾಗಿದ್ದಾರೆ. ಇದಲ್ಲದೆ ದಕ್ಷಿಣ ಅಸ್ಸಾಂನ ಹಿರಿಯ ಧುರೀಣ ಪರಿಮಾಲ್ ಶುಕ್ಲಾ ವೈದ್ಯ ಅವರೂ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾನ ವಚನ ಸ್ವೀಕರಿಸಿದರು. ಬಿಜೆಪಿಯ ಪಲ್ಲವ್ ಲೋಚನ್ ದಾಸ್ ಮತ್ತು ಎಜಿಪಿಯ ನಬ ಕುಮಾರ್ ಡೋಲೆ ಅವರು ಸ್ವತಂತ್ರ ಖಾತೆಯ ರಾಜ್ಯ ಸಚಿವರಾಗಿದ್ದಾರೆ.
[೧೮]