ಅಶ್ವಿನಿ ಶೆಟ್ಟಿ ಅಕ್ಕುಂಜೆ


ಅಶ್ವಿನಿಯವರು ಭಾರತದ ಹೆಮ್ಮೆಯ ಮಹಿಳಾ ಕ್ರೀಡಾಪಟು.ಓಟಗಾರ್ತಿಯಾಗಿರುವ ಇವಳು ಅನೇಕ ಪದಕಗಳನ್ನು ಭಾರತಕ್ಕೆ ಅನೇಕ ಪದಕ್ಗಳನ್ನು ತಂದುಕೊಟ್ಟಿದ್ದಾಳೆ.

Ashwini shetty akkunje Intrnational level 400 mtr Runner

ಅಶ್ವಿನಿ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಿದ್ಧಾಪುರದ ಅಕ್ಕುಂಜೆಯ ಚಿದಾನಂದ ಶೆಟ್ಟಿ ಯಶೋದ ದಂಪತಿಯ ಕಿರಿಯ ಪುತ್ರಿ. ಬಾಲ್ಯದಿಂದಲೂ ಕ್ರೀಡಾಪಟು.

ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಆಗುವ ಕನಸು ಇಟ್ಟುಕೊಂಡಿದ್ದ ಅಶ್ವಿನಿ ಮೂರನೇ ತರಗತಿಯಿಂದಲೇ ಸಾಧನೆಯ ಮೆಟ್ಟಲೇರಲು ಆರಂಭಿಸಿದ್ದಳು. ಇವಳು ಶಾಲೆಗೆ ಹೋಗಬೇಕಾದರೆ ನಾಲ್ಕು ಕಿ.ಮೀ. ನಡೆಯಬೇಕಿತ್ತು ಬಳಿಕ ಬಸ್ಸಲ್ಲಿ ಪ್ರಯಾಣ. ಹೀಗೆ ಇವಳು ೮ ಕಿ.ಮೀ. ನಡೆಯಬೇಕಿತ್ತು. ಒಮ್ಮೊಮ್ಮೆ ಕಾಡುಕೋಣಗಳು ಎದುರಾಗುತಿದ್ದವು, ಆಗ ಓಡಬೇಕಿತ್ತು. ಹೀಗೆ ಕಷ್ಟದಿಂದ ತನ್ನ ಬಾಲ್ಯವನ್ನು ಕಳೆದ ಅಶ್ವಿನಿ ಇಂದು ಕರ್ನಾಟಕದ ಚಿನ್ನದ ಕುವರಿಯಾಗಿ ಮೆರೆದಿದ್ದಳೆ. ಕ್ರೀಡಾ ಕ್ಷೇತ್ರದಲ್ಲೇ ಮಿಂಚಲೇಬೇಕೆಂದು ಛಲದಿಂದ ಸಾಧನೆಯ ಬೆನ್ನಟ್ಟಿದ ಅಶ್ವಿನಿ 2001 ರಲ್ಲಿ ಒರಿಸ್ಸಾದ ಭುವನೇಶ್ವರದಲ್ಲಿ ನಡೆದ ಅಖಿಲ ಭಾರತ ಗ್ರಾಮೀಣ ಕ್ರೀಡಾಕೂಟ ಏಷ್ಯಾಡ್ ನಲ್ಲಿ 400 ಮೀ. ಓಟದಲ್ಲಿ ರಾಜ್ಯವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಳು. ಅಲ್ಲಿಂದ ಈಕೆ ಹಿಂತಿರುಗಿ ನೋಡಲೇ ಇಲ್ಲ. ಯಶಸ್ಸಿನ ಬಾಗಿಲು ತೆರೆಯುತ್ತ ಹೋದಳು. ನಂತರ ಈಕೆ ಬೆಂಗಳೂರಿನ ವಿದ್ಯಾನಗರದಲ್ಲಿ ಹೈಸ್ಕೂಲ್ ಮುಗಿಸಿದಳು. 10ನೇ ತರಗತಿಯಲ್ಲಿದ್ದಾಗ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಮೊದಲು ರಾಷ್ಟ್ರಮಟ್ಟದ ಚಿನ್ನ ಗೆದ್ದ ಕೀರ್ತಿಗೆ ಭಾಜಳಾಗಿದ್ದಳು. ಇದಲ್ಲದೆ ಪ್ರಥಮ ಪಿ.ಯು.ಸಿಯಲ್ಲಿದ್ದಾಗ ಮಲೇಷಿಯಾದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕೂಡ ಚಿನ್ನ ಗೆದ್ದಳು. ಹೀಗೆ ಈಕೆ ಚಿನ್ನದ ಪದಕ ತನ್ನದಾಗಿಸುತ್ತ ಬಂಗಾರದ ಹಾದಿಯಲ್ಲೇ ಮುಂದುವರೆದಳು. ಬಳಿಕ ಅನೇಕ ರಾಷ್ಟ್ರಿಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾಳೆ. ಆದರೆ ಇವಳು ಪ್ರಚಲಿತಕ್ಕೆ ಬಂದುದು ಕಾಮನ್ ವೆಲ್ತ ಗೇಮ್ಸ್ ಮೂಲಕ. ಈ ಕ್ರೀಡಾಕೂಟ ಇವಳ ಬೇಟೆಗೆ ಉತ್ತಮ ಅವಕಾಶ ಕಲ್ಪಿಸಿಕೊಟ್ಟತು. ಅಕ್ಟೋಬರ್ ತಿಂಗಳಲ್ಲಿ ಡೆಲ್ಲಿಯಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬಂಗಾರ ಗೆದ್ದ ನೆನಪು ಹಸಿರಾಗಿರುವಾಗಲೇ ಕರಾವಳಿಯ . ಅದೂ ಅಲ್ಲದೆ 400 ಮೀ. ಹರ್ಡಲ್ಸ್ ನಲ್ಲಿ ವೈಯಕ್ತಿಕ ಚಿನ್ನ ಪಡೆದು ಕ್ರೀಡಾ ಮುಕುಟಕ್ಕೆ ಮತ್ತೊಂದು ಗರಿ ಪೋಣಿಸಿದರು. ಕಾಮನ್ ವೆಲ್ತ್ ಗೇಮ್ಸ್ ನಲ್ಲಿ 4×400 ಮೀ. ರಿಲೇ ಓಟದಲ್ಲಿ ಸ್ವರ್ಣ ಗೆಲ್ಲುವಲ್ಲಿ ಅಶ್ವಿನಿ ಪ್ರಮುಖ ಪಾತ್ರವಹಿಸಿ ದೇಶದ ಗಮನ ಸೆಳೆದಳು. ಈಕೆ ಈ ಹಂತಕ್ಕೆ ಬರಲು ಟಾಟಾ ಕ್ರೀಡಾ ಆಕಾಡೆಮಿ ಕೋಚ್, ಅರ್ಜುನ ಪ್ರಶಸ್ತಿ ಪುರಸ್ಕೃತ ಸತಾಮ್ ಸಿಂಗ್ ಮುಖ್ಯ ಕಾರಣ ಎಂದು ಅಶ್ವಿನಿ ಅವರನ್ನು ಸ್ಮರಿಸಿಕೊಳ್ಳುತ್ತಾಳೆ. ಅಶ್ವಿನಿ ಮೊದಲು 800 ಮೀ. ಓಡುತ್ತಿದ್ದಳು. ಆಮೇಲೆ ಅವಳು ಇದನ್ನು ಬಿಟ್ಟು 400 ಮೀ. ಹರ್ಡಲ್ಸ್ ಗೆ ಕಾಲಿಟ್ಟಳು. ಅಲ್ಲಿಂದ ಶುರುವಾಯಿತು ಇವಳ ಅದೃಷ್ಟ. ಉಕ್ರೇನ್ ನ ಕೋಚ್ ಯೂರಿ ಒಗಾರೊಡ್ನಿಕ್ ಅವರ ಮಾರ್ಗದರ್ಶನ ಅಶ್ವಿನಿ 400 ಮೀ. ಹರ್ಡಲ್ಸ್ ಓಟದಲ್ಲಿ ಹೆಚ್ಚಿನ ಸಾಧನೆ ತೋರಲು ನೆರವಾಯಿತು. ಅಶ್ವಿನಿ 400 ಮೀ. ಹರ್ಡಲ್ಸ್ ಅಭ್ಯಾಸ ಪ್ರಾರಂಭಿಸಿದ್ದೆ 2010 ಮೇ ತಿಂಗಳಿನಲ್ಲಿ. ಕೊಚ್ಚಿಯಲ್ಲಿ ನಡೆದ ರಾಷ್ಟ್ರಿಯ ಮುಕ್ತ ಅಥ್ಲೆಟಿಕ್ಸ್ ನಲ್ಲಿ ಮೊದಲು ಈ ವಿಭಾಗದಲ್ಲಿ ಭಾಗವಹಿಸಿದ್ದಳು. ಮತ್ತೆ ಅವಳು ಕಾಣಿಸಿಕೊಂಡಿದ್ದು ಕಾಮನ್ ವೆಲ್ತ್ ಕ್ರೀಡೆಗಳಲ್ಲಿ. ಆದರೆ ಹೀಟ್ಸ್ ನಲ್ಲಿ 59 ಸೆಕೆಂಡ್ ಸಾಧನೆಯೊಡನೆ ಐದನೇ ಸ್ಥಾನ ಪಡೆದು ಫೈನಲ್ ಗೆ ತಲುಪುವಲ್ಲಿ ವಿಫಲಳಾದಳು. ಆದರೆ ಈ ಸೋಲೊಪ್ಪಿಕೊಳ್ಳದ ಅಶ್ವಿನಿ ಕಠಿಣ ಪರಿಶ್ರಮಪಟ್ಟು ತನ್ನ ಸಮಯ ಸುಧಾರಣೆ ಮಾಡಿಕೊಂಡು ಚೀನಾದಲ್ಲಿ ನಡೆದ 16ನೇ ಏಷ್ಯನ್ ಗೇಮ್ಸ್ ನಲ್ಲಿ 56.15 ಸೆಕೆಂಡುಗಳೊಂದಿಗೆ ಗುರಿ ತಲುಪಿ ಚಿನ್ನಕ್ಕೆ ಭಾಜನಳಾದಳು. ಇದು ಅವಳ ಶ್ರೇಷ್ಠ ಸಾದನೆಯೆಂದೆ ಹೇಳಬಹುದು. ಈಮೂರು ಸೆಕೆಂಡುಗಳ ಸುಧಾರಣೆ ಭಾರತ ಅಥ್ಲೆಟಿಕ್ ನ ರಾಣಿಯಾಗಿದ್ದ ಪಿ.ಟಿ ಉಷಾಳ ಮೆಚ್ಚುಗೆಗೂ ಪಾತ್ರವಾಯಿತು. ಉಷಾ ಕೂಡ 400 ಮೀ ಹರ್ಡಲ್ಸ್ ಓಟಗಾರ್ತಿಯೇ. 1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕವನ್ನ ಕೂದಲೆಳೆ ಅಂತರದಲ್ಲಿ ಕಳೆದುಕೊಂಡವರು. ಆಗ ಅವರು ಓಡಿದ ಅವಧಿ (55.42ಸೆ.) ಇನ್ನೂ ರಾಷ್ಟ್ರಿಯ ದಾಖಲೆಯಾಗಗೇ ಉಳಿದಿದೆ. ಇವಳು ಏಷ್ಯನ್ ಗೇಮ್ಸ್ ನಲ್ಲಿ ಮೊದಲು ಚಿನ್ನದ ಪದಕ ಪಡೆದ ಓಟದ ರಾಣಿಯಾಗಿದ್ದಾಳು. ಇವಳ ನಂತರ ಪದಕ ಪಡೆದ ಏಕೈಕ ಓಟಗಾರ್ತಿ ಈ ಅಶ್ವಿನಿ. ಉಷಾ 1986ರ ಸೋಲ್ ಏಷ್ಯನ್ ಕ್ರೀಡೆಗಳಲ್ಲಿ ಮಿಂಚಿದ್ದರು. ಆ ಬಳಿಕ 24 ವರ್ಷದ ಅಧಿಯಲ್ಲಿ ನಮ್ಮವರ್ಯಾರು ಏಷ್ಯಾಡ್ ನಲ್ಲಿ ಚಿನ್ನ ಗೆದ್ದಿರಲೇ ಇಲ್ಲ. ಆದರೆ ಈಗ ಈ ಸ್ಥಾನವನ್ನು ಅಶ್ವಿನಿ ಅಲಂಕರಿಸಿಕೊಂಡಿದ್ದಾರೆ.

ಅಶ್ವಿನಿ ಕ್ರೀಡೆಯನ್ನು ಮಾತ್ರ ಹವ್ಯಾಸವಾಗಿಟ್ಟುಕೊಳ್ಳದೆ, ಸಂಗೀತ, ನೃತ್ಯ, ಯೋಗ, ಪ್ರಾಣಾಯಾಮಗಳನ್ನು ಮಾಡುತ್ತಾಳೆ. ದಿನಕ್ಕೆ ಐದು ಗಂಟೆ ಕಠಿಣ ಅಭ್ಯಾಸ ಮಾಡುತ್ತಾಳೆ. ಉತ್ತಮ ಅಹಾರ ತೆಗೆದುಕೊಳ್ಳುತ್ತಾಳೆ. ಇವಳು ತರಬೇತಿಯನ್ನು ಉಕ್ರೇನ್ ಮತ್ತು ಪಟಿಯಾಲಾಗಳಲ್ಲಿ ಮಾಡುತ್ತಿದ್ದಾಳೆ. ತನ್ನ ಈ ಊರಿಗೆ ಬರುವುದು ಕನಸಿನ ಮಾತು. ವರ್ಷಕ್ಕೊಮ್ಮೆ ಬರುವುದು ಉಂಟು. ಊರಿಗೆ ಬಂದರೆ ಅಭ್ಯಾಸ ತಪ್ಪಿಹೋಗುತ್ತದೆ. ಕಾಯಿಲೆಗಳು ಬರುತ್ತದೆ ಎಂದು ಹೆದರಿ ಬರುವುದೇ ಇಲ್ಲ. ಸಾಧನೆ ಮಾಡಬೇಕಾದರೆ ಎಲ್ಲವನ್ನು ಸಹಿಸಿಕೊಳ್ಳಲೇ ಬೇಕು. ಅಶ್ವಿನಿಗೆ ಕ್ರೀಡೆ ರಕ್ತಗತವಾಗಿ ಬಂದದ್ದು ಯಾಕೆಂದರೆ ಅವಳ ಅಪ್ಪ, ಅಮ್ಮ, ಅಣ್ಣ, ಅಕ್ಕ ಎಲ್ಲರೂ ಕೂಡ ಉತ್ತಮ ಅಥ್ಲೀಟ್ ಗಳೇ ಆಗಿದ್ದರು. ಇವರೆಲ್ಲರ ಪ್ರೋತ್ಸಾಹದಿಂದ ಇಂದು ಅಶ್ವಿನಿ ಉತ್ತಮ ಸ್ಥಾನದಲ್ಲಿದ್ದಾಳೆ. ಅಶ್ವಿನಿಯ ಸಾಧನೆಯನ್ನು ಗುರುತಿಸಿ . ಅದಲ್ಲದೆ ಈಕೆಯನ್ನು ಸಂಸ್ಥೆಗಳು ಕೂಡ ಸನ್ಮಾನಿಸಿದವು. ಒಂದು ಕುಗ್ರಾಮದಲ್ಲಿ ಹುಟ್ಟಿ ಬೆಳೆದ ಅಶ್ವಿನಿಯನ್ನು ಇಂದು ಇಡೀ ದೇಶವೇ ಗುರುತಿಸುವಂತೆ ಆಯಿತು. ಎಲ್ಲರ ಬಾಯಲ್ಲೂ ಚಿನ್ನದ ಕುವರಿಯಾದಳು. 2010 ಇವಳ ಅದೃಷ್ಟ ವರ್ಷವಾಗಿತ್ತು. ಮೂರು ಪದಕಗಳನ್ನು ತನ್ನದಾಗಿಸಿಕೊಂಡು ದೇಶಕ್ಕೆ ಚಿನ್ನದ ರಾಣಿಯಾದಳು. ಕ್ರೀಡೆಗಾಗಿ ಒಂದು ವರ್ಷದ 2 ತಿಂಗಳ ಕಾಲ ಕಠಿಣ ತರಬೇತಿ ಪಡೆದು ತುಂಬ ಕಷ್ಟಪಟ್ಟಿದ್ದೇನೆ. ಆ ತ್ಯಾಗ ಫಲ ನೀಡಿದೆ ಎಂಬುದು ಅಶ್ವಿನಿ ಅಭಿಪ್ರಾಯ. ಇವಳ ಈ ಸಾಧನೆಗೆ ಬೆನ್ನೆಲುಬಾಗಿ ಈಕೆಯ ಕೋಚ್ ರಮೇಶ್, ಮಂಜುನಾಥ್, ಅರ್. ಎಸ್. ಸಿದ್ದು, ಸತ್ನಾಮ್ ಸಿಂಗ್, ಜಾರ್ಕಂಡ್ ಸರ್ಕಾರ, ಅಮೆಚೂರ್ ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾ ಜಮ್ಷೆಡ್ಪುರದ ಟಾಟಾ ಕ್ರೀಡಾ ಅಕಾಡೆಮಿಯ ಬೆಂಬಲ ಇದೆ ಎಂದು ಎಲ್ಲರ ಸಹಕಾರವನ್ನು ಸ್ಮರಿಸಿಕೊಳ್ಳುತ್ತಾಳೆ. ರೈಲ್ವೆ ಉದ್ಯೋಗಿಯಾಗಿರುವ ಅಶ್ವಿನಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಕಲಿಗಳಿಗಿಂತಲೂ ಒಂದು ಹೆಜ್ಜೆ ಮುಂದಿನ ಸಾಧನೆ ಮಾಡಿ ಯಶಸ್ಸಿನ ಒಂದೊಂದೇ ಮೆಟ್ಟಿಲು ಏರುತ್ತಿರುವ ಈ ಭಾರತದ ಭರವಸೆಯ ಓಟಗಾರ್ತಿಯ ಮುಂದಿನ ಕನಸೇನೆಂದರೆ ಮುಂದಿನ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕವನ್ನು ಗೆಲ್ಲುವುದಾಗಿದೆ.

ಪಡೆದ ಪದಕಗಳು

ಬದಲಾಯಿಸಿ
  • ಅಶ್ವಿನಿ 16ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಎರಡು ಬಂಗಾರದ ಪದಕ ತಂದು ಭಾರತೀಯ ಅಥ್ಲೆಟಿಕ್ ರಂಗವನ್ನು ಉತ್ತುಂಗಕ್ಕೆ ಕೊಂಡೊಯ್ದು ಮಹಾನ್ ಸಾಧಕಿ ಎನಿಸಿಕೊಂಡಿದ್ದಾಳೆ

ಪ್ರಶಸ್ತಿ

ಬದಲಾಯಿಸಿ
  • ಕರ್ನಾಟಕ ಸರ್ಕಾರ ಅವಳಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು

ಉಲ್ಲೇಖ

ಬದಲಾಯಿಸಿ