ಅವನಿತಾ ಬಿರ್
ಅವನಿತಾ ಬಿರ್ ಒರ್ವ ಅರ್ಥಶಾಸ್ತ್ರಜ್ಞೆ. ಪ್ರಸ್ತುತ ಇವರು ಮುಂಬೈನ ಆರ್.ಎನ್ ಪೊದಾರ್ ಶಾಲೆಯ ಪ್ರಧಾನ ನಿರ್ದೇಶಕಿಯಾಗಿದ್ದಾರೆ. ಇವರು ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ೧೫ ವರ್ಷಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಿದ್ದಾರೆ. ದೆಹಲಿಯಲ್ಲಿ ನಡೆದ ಲರ್ನ್ ಶಿಫ್ಟ್ ಇಂಡಿಯಾ ೨೦೧೨ರ ಕ್ಯುರೇಟರ್ ಆಗಿದ್ದರು. ತನ್ನ ವೃತ್ತಿಯ ಆರಂಭಿಕ ದಿನಗಳಲ್ಲಿ, ಭಾರತದ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ವಾದ್ರ ರವರಿಗೆ ಅರ್ಥಶಾಸ್ತ್ರ ಪಾಠವನ್ನು ಹೇಳಿಕೊಡಲು ನೇಮಕಗೊಂಡಿದ್ದರು.[೧]
ಅವನಿತಾ ಬಿರ್ | |
---|---|
Born | ೩೧ ಅಕ್ಟೋಬರ್ ೧೯೫೭ ಅಮೃತ್‌ಸರ್,ಭಾರತ |
Occupation | ಆರ್.ಎನ್ ಪೊದಾರ್ ಶಾಲೆಯ ಪ್ರಧಾನ ನಿರ್ದೇಶಕಿ |
Awards | ೨೦೧೩ರಲ್ಲಿ ಕಾನ್ ಬೂನ್ ಹವ್ ಸ್ಕಾಲರ್ಸ್ ಅವಾರ್ಡ್ |
Website | http://avnitabir.com |
ಜನನ
ಬದಲಾಯಿಸಿಅವನಿತಾ ಬಿರ್ ರವರು ೩೧ ಅಕ್ಟೋಬರ್ ೧೯೫೭ರಲ್ಲಿ ಅಮೃತ್‌ಸರ್ ನಲ್ಲಿ ಜನಿಸಿದರು.
ವಿದ್ಯಾಭ್ಯಾಸ
ಬದಲಾಯಿಸಿಬಿರ್ ರವರು ತಮ್ಮ ಪದವಿ ಶಿಕ್ಷಣವನ್ನು ಪಡೆದ ನಂತರ 'ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್' ನಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತರ ಪದವಿಯನ್ನು ಪಡೆದರು. ಅವರು ಯುಜಿಸಿ (ನೆಟ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.[೨]
ವೃತ್ತಿಜೀವನ
ಬದಲಾಯಿಸಿಭಾರತದ ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ಅವರು ಕಾರ್ಯ ನಿರ್ವಹಿಸಿದ್ದಾರೆ. ಮಲ್ಯ ಅದಿತಿ ಇಂಟರ್ನ್ಯಾಷನಲ್ ಸ್ಕೂಲ್ , ಹೈದರಾಬಾದ್ ಪಬ್ಲಿಕ್ ಸ್ಕೂಲ್ ಮತ್ತು ಹಲವಾರು ಇಲಾಖೆಯ ಮುಖ್ಯಸ್ಥರಾಗಿ ಹಾಗೂ ಸಂಯೋಜಕರಾಗಿ ಕೆಲಸ ಮಾಡಿದ್ದಾರೆ. ಅರ್ಥಶಾಸ್ತ್ರ ಕುರಿತಾದ ಎರಡು ಪುಸ್ತಕಗಳನ್ನು ಸಹ ಅವರು ಬರೆದಿದ್ದಾರೆ. ನವೆಂಬರ್ ೨೦೧೪ರಲ್ಲಿ ಕ್ಯಾಲಿಫೋರ್ನಿಯದ, ಮೌಂಟೇನ್ ವ್ಯೂನಲ್ಲಿ ಆಯೋಜಿಸಲಾದ ಗೂಗಲ್ ಎಜುಕೇಶನ್ ಸಿಂಪೋಸಿಯಮ್ ನಲ್ಲಿ ಸಹ-ಪ್ಯಾನಲಿಸ್ಟ್ ಆಗಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಪತ್ರಿಕೆಗಳು, ನಿಯತಕಾಲಿಕಗಳು, ಸುದ್ಧಿ ಚಾನಲುಗಳು ನಡೆಸಿದ ಬುಲೆಟಿನ್ ಗಳಲ್ಲಿ ಅವರು ಶಿಕ್ಷಣ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಷಯಗಳ ಮೇಲೆ ಕೇಂದ್ರಿಕರಿಸಿದ್ದಾರೆ. [೩][೪]
ಪ್ರಶಸ್ತಿಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ http://www.indiaspeakersbureau.in/avnita-bir/
- ↑ "ಆರ್ಕೈವ್ ನಕಲು". Archived from the original on 2019-03-27. Retrieved 2019-03-27.
- ↑ https://web.archive.org/web/20141004235522/http://in.gafesummit.com/all-presenters/avnita-bir
- ↑ https://web.archive.org/web/20130305065749/http://www.rnpodarschool.com/principal.html
- ↑ http://www.bsebti.com/litfest/avnita_bir.html
- ↑ https://web.archive.org/web/20140202155216/http://convocation.ntu.edu.sg/AboutConvocation/Pages/UniversityScholarsAward.aspx