ಪ್ರಿಯಾಂಕ ಗಾಂಧಿ

ಪ್ರಿಯಾಂಕ ಗಾಂಧಿ ವಾದ್ರಾ (ಜನನ ೧೨ ಜನವರಿ ೧೯೭೨)ಒರ್ವ ಭಾರತೀಯ ರಾಜಕಾರಣಿ. ಪ್ರಸ್ತುತ ಉತ್ತರ ಪ್ರದೇಶದ ಪೂರ್ವ ಭಾಗದ ಉಸ್ತುವಾರಿ ವಹಿಸಿಕೊಂಡಿರುವ ಇವರು ಎಐಸಿಸಿಯ ಪ್ರಧಾನ ಕಾರ್ಯದಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ರಾಜೀವ್ ಗಾಂಧಿ ಫೌಂಡೇಶನ್ನ ಟ್ರಸ್ಟೀ ಆಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ. ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಮಗಳು, ರಾಹುಲ್ ಗಾಂಧಿಯವರ ಸಹೋದರಿ, ಫಿರೋಝ್ ಗಾಂಧಿ ಮತ್ತು ಇಂದಿರಾ ಗಾಂಧಿಯವರ ಮೊಮ್ಮಗಳಾದ ಇವರು ನೆಹರು-ಗಾಂಧಿ ಕುಟುಂಬದ ಸದಸ್ಯರಾಗಿದ್ದಾರೆ.[೧][೨]

ಪ್ರಿಯಾಂಕ ಗಾಂಧಿ ವಾದ್ರಾ
Priyanka Gandhi Vadra (3).jpg

ಉತ್ತರ ಪ್ರದೇಶದ ಪೂರ್ವ ಭಾಗದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ
ಹಾಲಿ
ಅಧಿಕಾರ ಸ್ವೀಕಾರ 
೪ ಫೆಬ್ರವರಿ ೨೦೧೯
ರಾಷ್ಟ್ರಪತಿ ರಾಹುಲ್ ಗಾಂಧಿ
ವೈಯಕ್ತಿಕ ಮಾಹಿತಿ
ಜನನ ೧೨ ಜನವರಿ ೧೯೭೨
ನವ ದೆಹಲಿ, ಭಾರತ
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಸಂಗಾತಿ(ಗಳು) ರಾಬರ್ಟ್ ವಾದ್ರಾ
ಮಕ್ಕಳು
ತಂದೆ/ತಾಯಿ ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ
ಸಹಿ

ಜನನಸಂಪಾದಿಸಿ

ಪ್ರಿಯಾಂಕ ಗಾಂಧಿಯವರು ೧೨ ಜನವರಿ ೧೯೭೨ರಂದು ಜನಿಸಿದರು.[೩]

ವಿದ್ಯಾಭ್ಯಾಸಸಂಪಾದಿಸಿ

ಪ್ರಿಯಾಂಕ ಗಾಂಧಿಯವರು ತನ್ನ ಶಾಲಾ ಶಿಕ್ಷಣವನ್ನು ಮಾರ್ಡನ್ ಸ್ಕೂಲ್ ಹಾಗೂ ಜೀಸಸ್ ಮತ್ತು ಮೇರಿ ಕಾನ್ವೆಂಟಿನಿಂದ ಮಾಡಿದರು. ದೆಹಲಿ ವಿಶ್ವವಿದ್ಯಾಲಯದ , ಜೀಸಸ್ ಮತ್ತು ಮೇರಿ ಕಾಲೇಜಿನಿಂದ ಸೈಕಾಲಜಿ ಪದವಿ ಪಡೆದರು. ನಂತರ ೨೦೧೦ರಲ್ಲಿ ಬೌದ್ಧ ಶಿಕ್ಷಣದಲ್ಲಿ ಎಮ್.ಎ. ಮಾಡಿದರು.[೪][೫]

ರಾಜಕೀಯ ಜೀವನಸಂಪಾದಿಸಿ

೨೦೦೪ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ತಾಯಿಯ ಚುನಾವಣಾ ಅಭಿಯಾನದ ವ್ಯವಸ್ಥಾಪಕರಾಗಿದ್ದರು ಮತ್ತು ಸಹೋದರ ರಾಹುಲ್ ಗಾಂಧಿಯವರ ಚುನಾವಣಾ ಪ್ರಚಾರಣೆಗೆ ಸಹಾಯವನ್ನು ಮಾಡಿದರು. ೨೦೧೯ರ ಜನವರಿ ೨೩ರಂದು ಪ್ರಿಯಾಂಕ ಗಾಂಧಿ ರಾಜಕೀಯವನ್ನು ಪ್ರವೇಶಿಸಿದರು ಮತ್ತು ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು.[೬][೭]

ವೈಯುಕ್ತಿಕ ಜೀವನಸಂಪಾದಿಸಿ

ಅವರ ವಿವಾಹವು ದೆಹಲಿಯ ಉದ್ಯಮಿ ರಾಬರ್ಟ್ ವಾದ್ರಾರ ಜೊತೆ ೧೮ ಫೆಬ್ರವರಿ ೧೯೯೭ರಂದು ನಡೆಯಿತು. ಅವರಿಗೆ ಇಬ್ಬರು ಮಕ್ಕಳಿದ್ದಾರೆ, ಮಗ ರೈಹನ್ ಮತ್ತು ಮಗಳು ಮಿರಾಯಾ.[೮]

ಉಲ್ಲೇಖಗಳುಸಂಪಾದಿಸಿ

  1. https://www.ndtv.com/india-news/priyanka-gandhi-vadras-formal-debut-likely-on-february-4-after-kumbh-mela-dip-report-1983647
  2. https://wikibio.in/priyanka-gandhi/
  3. https://www.oneindia.com/politicians/priyanka-gandhi-71642.html
  4. https://www.oneindia.com/politicians/priyanka-gandhi-71642.html
  5. https://www.outlookindia.com/magazine/story/priyanka-gandhi-vadra/239775
  6. https://timesofindia.indiatimes.com/india/priyanka-gandhi-made-cong-general-secretary-for-up-east/articleshow/67654269.cms?from=mdr
  7. https://www.firstpost.com/politics/ground-report-amethi-rae-bareli-are-now-seeing-a-new-priyanka-1498749.html
  8. https://www.indiatoday.in/india/story/who-is-robert-vadra-118259-2012-10-10