Alligator
American alligators (Alligator mississippiensis)
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಕುಲ:
Alligator

Daudin, 1809
Species

Alligator mississippiensis
Alligator sinensis

ಅಲಿಗೇಟರ್ ಎಂಬುದು ಎಲಿಗೆಟರಿಡೆ ಕುಟುಂಬದ ಅಲಿಗೇಟರ್ ಬುಡಕಟ್ಟಿನಲ್ಲಿರುವ ಅಲಿಗೇಟರ್ ಆಗಿರುತ್ತದೆ. ಎರಡು ಜಾತಿಯ ಅಲಿಗೇಟರ್ಗಳು ಉಪಲಬ್ಧವಿರುತ್ತದೆ: ಅಮೇರಿಕನ್ ಅಲಿಗೇಟರ್ ಮಿಸ್ಸಿಸ್ಸಿಪ್ಪಿಯೆನ್‍ಸಿಸ್ ಅಲಿಗೇಟರ್ ಮತ್ತು ಚೈನೀಸ್ ಅಲಿಗೇಟರ್ ಸಿನೆನ್‍ಸಿಸ್ ಅಲಿಗೇಟರ್ . ಅಲಿಗೇಟರ್ ಎಂಬ ಪದವು ’ಹಲ್ಲಿ’ ಜಾತಿಯ ಪ್ರಾಣಿಗೆ ಕರೆಯುವ ಸ್ಪ್ಯಾನಿಷ್ ಭಾಷೆಯ ಪದವಾದ el lagarto ದ, ಆಂಗ್ಲೀಕರಣಗೊಂಡ ಶಬ್ಧವಾಗಿದೆ. ಇದನ್ನು ಮೊದಲು ಫ್ಲೋರಿಡಾದಲ್ಲಿ ಸ್ಪ್ಯಾನಿಷ್ ಪರಿಶೋಧಕರು ಮತ್ತು ವಸಾಹತುಗಾರರು ಅಲಿಗೇಟರ್ (ಅಲಿಗೇಟರ್) ಎಂದು ಕರೆದರು. ಅಲಿಗೇಟರ್ಗಳು ಅವುಗಳ ಪರಿಸರದ ಬದಲಾವಣೆಗೆ ತಕ್ಕಂತೆ. ಅನೇಕ ಸಫಲವಾದ ಬದಲಾವಣೆಯನ್ನು ದೇಹರಚನೆಯಲ್ಲಿ ಕಂಡಿವೆ. ಅದು ಈ ಸರೀಸ್ರಪಗಳಿಗೆ 200 ಮಿಲಿಯನ್ ವರ್ಷಗಳಿಗೆ ಹೆಚ್ಹಿನ ಬದಲಾವಣೆಯಾಗದಂತೆ ಉಳಿಯಲು ಆಸ್ಪದಗೊಂಡಿದೆ.

ವಿವರಣೆ

ಬದಲಾಯಿಸಿ

ಅಲಿಗೇಟರ್‌ಗಳು ಅವುಗಳ ಭಾರಿ ಬಿಗಿ ಹಿಡಿತದ ಕಚ್ಚುವಿಕೆಗೆ ಪ್ರಖ್ಯಾತವಾಗಿದೆ. ಜೊತೆಗೆ ಇವನ್ನು "ಸಮಕಾಲೀನ ಪಳೆಯುಳಿಕೆಗಳು" ಎಂದು ಕೂಡಾ ಹೇಳಲಾಗುತ್ತದೆ. ಅವುಗಳು 200 ಮಿಲಿಯನ್ ವರ್ಷಗಳಿಗೆ ಮೊಟ್ಟ ಮೊದಲು ಮೆಸೊಜೊಯಿಕ್ ಕಾಲದಲ್ಲೂ ಉಪಲಬ್ಧವಾಗಿದೆ.[] ವಿಶೇಷ ರೀತಿಯಲ್ಲಿ ದೊಡ್ಡ ಬಗೆಯ ವಯಸ್ಕ್ಜ ಅಮೇರಿಕನ್ ಅಲಿಗೇಟರ್ಗಳ ತೂಕ800 pounds (360 kg), ಅಗಲ13 feet (4.0 m) ಉದ್ದ[ಸೂಕ್ತ ಉಲ್ಲೇಖನ ಬೇಕು] ಇರುತ್ತದೆ. ಆದರೆ ಅವುಗಳು 14.5 feet (4.4 m) ಉದ್ದದವರೆಗೂ ಮತ್ತು ತೂಕದಲ್ಲಿ1,000 pounds (450 kg)ವರೆಗು ಇರುವ ಸಾಧ್ಯತೆಯೂ ಇದೆ.[] ಎವರ‍್ಗ್ಲೇಡ್ಸ್ ನ್ಯಾಷನಲ್ ವೆಬ್‌ಸೈಟ್ ಪ್ರಕಾರ, ಫ್ಲೋರಿಡಾದಲ್ಲಿ ಕಂಡುಬಂದ 17 feet 5 inches (5.31 m) ಅಲಿಗೇಟರ್ಯೇ ಈವರೆಗೆ ದಾಖಲಾದ ಅತಿದೊಡ್ಡ ಅಲಿಗೇಟರ್ಯಾಗಿದೆ. ಆದಾಗ್ಯೂ ಫ್ಲೋರಿಡಾ ಫಿಷ್ ಅಂಡ್ ವೈಲ್ಡ್‌ ಲೈಫ್ ಕನ್ಸರ್‌ವೇಷನ್‌ ಕಮೀಷನ್ ವೆಬ್‍ಸೈಟ್‌ ಹೇಳುವ ಪ್ರಕಾರ ಸೆಮಿನೋಲ್ ಕೌಂಟಿಯಲ್ಲಿನ ಲೇಕ್ ಮೊನ್ರೋದಲ್ಲಿ ಕಂಡುಬಂದ ಗಂಡು ಅಲಿಗೇಟರ್ ದಾಖಲೆಯ 14 feet 58 inch (4.28 m)ಉದ್ದವನ್ನು ಹೊಂದಿತ್ತು ಎಂದು ದಾಖಲಿಸಿದೆ.[] ಲೂಸಿಯಾನಾದಲ್ಲಿ ಈವರೆಗೆ ದಾಖಲಾದ ಅತಿ ದೊಡ್ಡ ಅಳತೆಯ 19 feet 2 inches (5.84 m)[] ಅಲಿಗೇಟರ್ ಕಂಡುಬಂದಿದೆ. ಚೈನೀಸ್ ಅಲಿಗೇಟರ್ಗಳು ಅತಿ ಚಿಕ್ಕವು, ಅಪರೂಪವಾಗಿ ಉದ್ದದಲ್ಲಿ7 feet (2.1 m)ವರೆಗೆ ಬೆಳೆಯುತ್ತವೆ. ಅಲಿಗೇಟರ್ಗಳು ಸರಾಸರಿ 75 ಹಲ್ಲುಗಳನ್ನು ಹೊಂದಿರುತ್ತವೆ.[ಸೂಕ್ತ ಉಲ್ಲೇಖನ ಬೇಕು] ಇವುಗಳ ಸರಾಸರಿ ಆಯಸ್ಸು 50 ವರ್ಷದಷ್ಟಿರುತ್ತದೆ. ಮುಜ ಎಂಬ ಹೆಸರಿನ ಅಲಿಗೇಟರ್‌ ಸೆರ್ಬಿಯಾದಲ್ಲಿನ ಬೆಲ್‍ಗ್ರೇಡ್ ಪ್ರಾಣಿ ಸಂಗ್ರಹಾಲಯದಲ್ಲಿ 1937ರಿಂದ ಕನಿಷ್ಟ 73 ವರ್ಷಗಳವರೆಗೆ ಬದುಕಿತ್ತು. ಲಾತ್ವಿಯಾದ ರಿಗಾ ಪ್ರಾಣಿಸಂಗ್ರಹಾಲಯದಲ್ಲಿನ ಕಾಬುಲಿಟಿಸ್ ಎಂಬ ಅಲಿಗೇಟರ್ 2007ರಲ್ಲಿ ತೀರಿಕೊಂಡಾಗ ಅದಕ್ಕೆ 75 ವರ್ಷ ವಯಸ್ಸಾಗಿತ್ತು.[ಸೂಕ್ತ ಉಲ್ಲೇಖನ ಬೇಕು]

ಆವಾಸ ಸ್ಥಾನ

ಬದಲಾಯಿಸಿ
 
ಎವರ್‌ಗ್ಲೆಡ್ಸ್ ನ್ಯಾಷನಲ್ ಪಾರ್ಕ್‌ನಲ್ಲಿರುವ ವಿವಿಧ ವಯಸ್ಸಿನ ಅಲಿಗೇಟರ್‌ಗಳು.

ಅಲಿಗೇಟರ್ಗಳು ಯುನೈಟೆಡ್ ಸ್ಟೇಟ್ಸ್ ಮತ್ತು ಚೈನಾಗಳಿಗೆ ಮಾತ್ರ ದೇಶಿಯವಾದವುಗಳಾಗಿವೆ. ಅಮೇರಿಕನ್ ಅಲಿಗೇಟರ್‌ಗಳು ದಕ್ಷಿಣ ಪೂರ್ವ ಯುನೈಟೆಡ್ ಸ್ಟೇಟ್ಸ್: ಫ್ಲೋರಿಡಾದ ಎಲ್ಲ ಭಾಗಗಳಲ್ಲಿ ಮತ್ತು ಲೊಯಿಸಿಯಾನ, ಜಾರ್ಜಿಯಾದ ದಕ್ಷಿಣ ಭಾಗಗಳು,ಅಲಾಬಮಾ ಮತ್ತು ಮಿಸ್ಸಿಸಿಪ್ಪಿ, ದಕ್ಷಿಣ ಕೊಸ್ಟಲ್ ಮತ್ತು ಉತ್ತರ ಕೆರೊಲಿನ, ಪೂರ್ವ ಟೆಕ್ಸಾಸ್, ಒಕ್ಲಾಹೋಮಾ ದಕ್ಷಿಣ ಪೂರ್ವದ ಮೂಲೆಗಳಲ್ಲಿ ಮತ್ತು ಅರ್ಕಾನ್ಸಸ್‍ನ ದಕ್ಷಿಣ ತುದಿಗಳಲ್ಲಿ ದೊರೆತಿವೆ. 2005 ಸ್ಕೊಲಾಸ್ಟಿಕ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, ಅತಿಹೆಚ್ಚು ಅಲಿಗೇಟರ್‌ ಸಂಖ್ಯೆಯನ್ನು ಹೊಂದಿದ ರಾಜ್ಯ ಲೂಸಿಯಾನ ಆಗಿದೆ.[] ಅಮೇರಿಕನ್ ಅಲಿಗೇಟರ್‌ಗಳು ಬಹುಪಾಲು ಫ್ಲೊರಿಡಾ ಮತ್ತು ಲೂಸಿಯಾನದಲ್ಲಿ ಬೀಡುಬಿಟ್ಟಿದೆ. ಜೊತೆಗೆ ಪ್ರತಿ ರಾಜ್ಯದಲ್ಲಿ ಮಿಲಿಯನ್‍ಗಿಂತ ಹೆಚ್ಹಿನ ಅಲಿಗೇಟರ್ಗಳಿವೆ. ಅಮೇರಿಕನ್ ಅಲಿಗೇಟರ್‌ಗಳು ಶುದ್ಧ ನೀರಿರುವ ವಾತಾವರಣದಲ್ಲಿ, ಅಂದರೆ ಕೆರೆಗಳು, ಜವುಳು ಪ್ರದೇಶಗಳು, ತೇವಾಂಶವುಳ್ಳ ಪ್ರದೇಶಗಳಲ್ಲಿ, ನದಿಗಳು, ಸರೋವರಗಳು, ಕೆಸರು ಪ್ರದೇಶಗಳು , ಉಪ್ಪು ಉಪ್ಪಾಗಿರುವ ವಾತಾರವರಣಗಳಲ್ಲೂ ಸಹ ಜೀವಿಸುತ್ತವೆ.[ಸೂಕ್ತ ಉಲ್ಲೇಖನ ಬೇಕು] ದಕ್ಷಿಣ ಫ್ಲೋರಿಡಾ ಮಾತ್ರ ಅಲಿಗೇಟರ್ ಮತ್ತು ಮೊಸಳೆಗಳು ಒಟ್ಟೊಟ್ಟಿಗೆ ಜೀವಿಸುವ ಪ್ರದೇಶವಾಗಿದೆ. ಚೈನೀಸ್ ಅಲಿಗೇಟರ್‌ಗಳು ಈಗ ಕೇವಲ ಯಾಂಗ್ಸ್ಟಿ ನದಿ ಪ್ರದೇಶದಲ್ಲಿ ಕಂಡುಬರುತ್ತವೆ. ಕೆಲವೇ ಕೆಲವು ಅಲಿಗೇಟರ್‌ಗಳು ಮಾತ್ರ ಉಳಿದುಕೊಂಡಿರಬಹುದು ಎಂದು ನಂಬಲಾಗಿದೆ. ವಾಸ್ತವವಾಗಿ, ಚೀನಾದ ಅಲಿಗೇಟರ್‌ಗಳು ಕಾಡಿನಲ್ಲಿ ಕಂಡುಬರುವುದಕ್ಕಿಂತ ಹೆಚ್ಚಾಗಿ ಪ್ರಪಂಚದಾದ್ಯಂತದದ ಪ್ರಾಣಿ ಸಂಗ್ರಹಾಲಯದಲ್ಲಿ ಕಂಡುಬರುತ್ತವೆ. ದಕ್ಷಿಣ ಲೂಸಿಯಾನಾದಲ್ಲಿಯ ರಾಕ್‌ಫೆಲ್ಲರ್ ವೈಲ್ಡ್‌ಲೈಫ್ ರೆಫ್ಯೂಜಿಯಲ್ಲಿ ಹಲವಾರು ಅಲಿಗೇಟರ್‌ಗಳನ್ನು ಅವುಗಳ ರಕ್ಷಣೆಗಾಗಿ ಸಾಕಲಾಗುತ್ತಿದೆ. ಫ್ಲೋಲೋರಿಡಾದಲ್ಲಿನ ಮಿಯಾಮಿ ಮೆಟ್ರೋ ಪ್ರಾಣಿಸಂಗ್ರಹಾಲಯವುಕೂಡ ಒಂದು ಜೋಡಿ ಚೈನೀಸ್ ಅಲಿಗೇಟರ್‌‍ಗಳನ್ನು ಹೊಂದಿದೆ. ಸೇಂಟ್‌ ಅಗಸ್ಟೈನ್ ಅಲಿಗೇಟರ್ ಫಾರ್ಮ್ ಜೀಯಾಲಜಿಕಲ್ ಪಾರ್ಕ್, ಚೈನಾದ ಅಲಿಗೇಟರ್‌ಗಳ ಯಶಸ್ವಿ ಸಂತಾನಾಭಿವೃದ್ದಿ ಮಾಡಿದ್ದು. ಹಲವಾರು ಮರಿಗಳನ್ನು ಚೀನಾದ ಕಾಡಿನಲ್ಲಿ ಬಿಟ್ಟಿದೆ.

ನಡವಳಿಕೆ

ಬದಲಾಯಿಸಿ

ದೊಡ್ಡ ಗಂಡು ಅಲಿಗೇಟರ್‌ಗಳು ನಿರ್ಜನ ಪ್ರದೇಶದ ಪ್ರಾಣಿಗಳಾಗಿವೆ. ಚಿಕ್ಕ ಅಲಿಗೇಟರ್‌ಗಳನ್ನು ಆಗಾಗ್ಗೆ ಹೆಚ್ಹಿನ ಸಂಖ್ಯೆಯಲ್ಲಿ ಪರಸ್ಪರ ಹತ್ತಿರದಲ್ಲಿ ಕಾಣಬಹುದಾಗಿದೆ. ಬಹುಪಾಲು ಅಲಿಗೇಟರ್‌ಗಳು (ಗಂಡು ಮತ್ತು ಹೆಣ್ಣು ಎರಡೂ) ಪ್ರಮುಖ ಪ್ರದೇಶಗಳಲ್ಲಿ ಕಾಪಾಡಿದಲ್ಪಟ್ಟಿದೆ; ಅತಿಚಿಕ್ಕ ಅಲಿಗೇಟರ್‌ಗಳು ಚಿಕ್ಕ ಗಾತ್ರದ ಶ್ರೇಣಿಯೊಳಗೆ ಇತರ ಅಲಿಗೇಟರ್‌ಗಳಿಗಿಂತ ಹೆಚ್ಹಿನ ಸೈರಣೆಯನ್ನು ಹೊಂದಿರುತ್ತವೆ. ಆದಾಗ್ಯೂ ಅಲಿಗೇಟರ್‌ಗಳು ಭಾರವಾದ ಶರೀರ ಮತ್ತು ನಿಧಾನ ಚಯಾಪಚಯ ಕ್ರಿಯೆಯನ್ನುಹೊಂದಿರುತ್ತವೆ. ಅತೀ ಕಡಿಮೆ ವೇಗದಲ್ಲಿ ಚಯಾಪಚಯ ಕ್ರಿಯೆಯನ್ನು ಅಲಿಗೇಟರ್ ಹೊಂದಿದ್ದು. ಸಣ್ಣ ಶ್ವಾಸಕೋಶವನ್ನು ಹೊಂದಿರುತ್ತವೆ. ಒಂದೇ ಬಾರಿಗೆ ಹಿಡಿದು ನುಂಗಲು ಸಾಧ್ಯವಾಗುವಂತಹ ಸಣ್ಣ ಪ್ರಾಣಿಗಳು ಅಲಿಗೇಟರ್‌ಗಳ ಮುಖ್ಯ ಆಹಾರವಾಗಿದೆ. ಅಲಿಗೇಟರ್‌ಗಳು ದೊಡ್ಡ ಬೇಟೆಯನ್ನು ಎಳೆದುಕೊಂಡು ನೀರಿನಲ್ಲಿ ಮುಳುಗಿಸಿ ಕೊಲ್ಲಬಲ್ಲವಾಗಿವೆ. ಅಲಿಗೇಟರ್‌ಗಳು ಆಹಾರವನ್ನು ಕೊಳೆತು ಹೋಗುವುದಕ್ಕೆ ಅವಕಾಶ ಕೊಡುವುದರಿಂದ ಅಥವಾ ತಿಂದು ಮತ್ತು ಇದ್ದಲ್ಲೆ ಸುತ್ತುವುದರಿಂದ ಅಥವಾ ತಿಂದ ಗಾತ್ರದ ಭಾಗವು ಪಚನವಾಗುವವರೆಗೆ ಬೇಟೆಯನ್ನು ಹಿಡಿದು ರಭಸವಾಗಿ ಅಲ್ಲಾಡಿಸುವ ಮೂಲಕ ತುಂಡಾಗಿಸಿ ಸೇವಿಸುತ್ತವೆ. ಇದನ್ನು "ಮ್ರತ್ಯು ಸುರುಳಿ" ಎಂದು ಉಲ್ಲೇಖಿಸಲಾಗುತ್ತದೆ. ಈ ಭಯಂಕರ ಕ್ರಿಯೆಯನ್ನು ಮಿಲಿಯನ್‍ಗಳಿಗಿಂತಲೂ ಹೆಚ್ಹಿನ ವರ್ಷಗಳ ಬೆಳವಣಿಗೆಯಲ್ಲಿ ಅಲಿಗೇಟರ್‌ಗಳ ವಂಶವಾಹಿಯಲ್ಲಿ ಸೇರಿಕೊಂಡಿದೆ. ಆದ್ದರಿಂದ ಸಣ್ಣ ಮಾಂಸದ ತುಂಡು ಸಿಕ್ಕಾಗಲೂ ಕೂಡ ಕೆಲವು ಅಲಿಗೇಟರ್‌ಗಳು ಈ ಕ್ರಿಯೆಯನ್ನು ಅಭಿವ್ಯಕ್ತಿಸುತ್ತವೆ. ಅಲಿಗೇಟರ್‌ಗಳ ಈ ಮೃತ್ಯು ಸುರುಳಿಯನ್ನು ಅಭಿವ್ಯಕ್ತಿಸಲು ಅದರ ಬಾಲವು ದೇಹಕ್ಕೆ ತಕ್ಕುದಾಗಿ ಸಹಕಾರವನ್ನು ನೀಡಬೇಕಾಗುತ್ತದೆ. ಅಲಿಗೇಟರ್‌ಗಳಿಗೆ ಬಾಲವಿಲ್ಲದೆ ಈ ಮೃತ್ಯು ಸುರುಳಿಯನ್ನು ಅಭಿವ್ಯಕ್ತಿಸಲು ಸಾಧ್ಯವಿಲ್ಲ.[]

ಅಲಿಗೇಟರ್‌ಗಳ ದವಡೆಯಲ್ಲಿಯ ಎಲ್ಲ ಸ್ನಾಯುಗಳು ಹೆಚ್ಚಾಗಿ ಬೇಟೆಯನ್ನು ಕಚ್ಚಲು ಸಹಕಾರಿಯಾಗುವಂತಿವೆ. ದವಡೆ ಮುಚ್ಚಲು ಸಹಕಾರಿಯಾಗುವಂತಹ ಸ್ನಾಯುಗಳು ಹೆಚ್ಚು ಬಲಿಷ್ಠವಾಗಿರುತ್ತವೆ. ಆದರೆ ಇದಕ್ಕೆ ಹೋಲಿಸಿದರೆ ದವಡೆ ತೆರೆಯಲು ಸಹಾಯಕವಾಗುವಂತಹ ಸ್ನಾಯುಗಳು ಕಡಿಮೆ ಶಕ್ತಿಯನ್ನು ಹೊಂದಿರುವಂತವಾಗಿವೆ. ಅದಕ್ಕಾಗಿಯೇ ಮನುಷ್ಯ ಸರಳವಾಗಿ ತನ್ನ ಕೈಯಲ್ಲಿ ಮುಚ್ಚಿರುವ ಅಲಿಗೇಟರ್ ದವಡೆಯನ್ನು ತೆರೆಯದಂತೆ ಹಿಡಿದುಕೊಳ್ಳಬಲ್ಲ. ಪ್ರೌಢ ಅಲಿಗೇಟರ್‌ಗಳನ್ನು ಬೇರೆಡೆಗೆ ಸಾಗಿಸುವಾಗ ಅವುಗಳ ದವಡೆಗೆ ಅಂಟಿನ ಟೇಪ್ ಸುತ್ತುವುದು ಸಾಮಾನ್ಯವಾಗಿದೆ.[] ಅಲಿಗೇಟರ್‌ಗಳು ಸಾಧಾರಣವಾಗಿ ಮನುಷ್ಯರು ಸಂಪರ್ಕಕ್ಕೆ ಅಂಜುವಂತವಾಗಿದ್ದು. ಮನುಷ್ಯರನ್ನು ಕಂಡಾಗ ತಪ್ಪಿಸಿಕೊಂಡು ಹೋಗಲು ಹವಣಿಸುತ್ತವೆ. ಇದರಿಂದಾಗಿಯೇ ಕೆಲವರು ಹೆದರುವ ಈ ಅಲಿಗೇಟರ್‌ಗಳ ಗೂಡುಗಳ ಹತ್ತಿರ ಹೋಗುವ ಕಾರ್ಯಕ್ಕೆ ಹವಣಿಸಿ ಅವುಗಳು ದಾಳಿ ಮಾಡಲು ಪ್ರಚೋದನೆ ನೀಡುವಂತಾಗಿದೆ. ಫ್ಲೋರಿಡಾ ರಾಜ್ಯದಲ್ಲಿ ಅಲಿಗೇಟರ್‌ಗಳಿಗೆ ಆಹಾರ ನೀಡುವುದನ್ನು ಕಾನೂನು ಬಾಹಿರ ಎಂದು ಪರಿಗಣಿಸಲಾಗುತ್ತದೆ. ಒಟ್ಟಾರೆಯಾಗಿ, ಅಲಿಗೇಟರ್‌ಗಳಿಗೆ ಆಹಾರ ನೀಡುವುದನ್ನು ರೂಡಿಯಾಗಿಸಿಕೊಂಡರೆ ಅವು ಮನುಷ್ಯರ ಜೊತೆ ಸಹಜವಾಗಿ ಬೆರೆಯುವುದನ್ನು ಕಲಿಯುವ ಮೂಲಕ ಕಲಿಯುವುದರಿಂದ ಜನರಿಗೆ ಅಪಾಯಕಾರಿಯಾಗಬಹುದು ಎಂಬುದು ಇದರ ಹಿಂದಿನ ಉದ್ದೇಶ.[]

ಆಹಾರ ಕ್ರಮ

ಬದಲಾಯಿಸಿ

ಎಳೆಯ ಅಲಿಗೇಟರ್‌ಗಳು (ಅಲಿಗೇಟರ್)ಮೀನು, ಕೀಟಗಳು, ಬಸವನ ಹುಳುಗಳು, ವಲ್ಕವಂತ ಪ್ರಾಣಿಗಳು, ಮತ್ತು ಹುಳಗಳನ್ನು ತಿನ್ನುತ್ತವೆ. ಪ್ರೌಡ ಅಲಿಗೇಟರ್‌ ದೊಡ್ಡ ಗಾತ್ರದ ಆಹಾರವನ್ನು ಸೇವಿಸುತ್ತವೆ ಅವೆಂದರೆ ದೊಡ್ಡ ಮೀನುಗಳಾದ ಗಾರ್, ಆಮೆಗಳು, ವಿವಿಧ ಸಸ್ತನಿಗಳು, ಪಕ್ಷಿಗಳು, ಜಿಂಕೆ ಮತ್ತಿತರ ಸರೀಸೃಪಗಳನ್ನು ತಿನ್ನುತ್ತವೆ. ಅವುಗಳ ಹೊಟ್ಟೆಯಲ್ಲಿ ಕೆಲವೊಮ್ಮೆ ಗಿಝಾರ್ಡ್ ಕಲ್ಲುಗಳಿರುತ್ತವೆ. ಅವು ಬಹಳ ಹಸಿದಿರುವಾಗ ಕೊಳೆತ ಆಹಾರವನ್ನೂ ಸೇವಿಸುತ್ತವೆ. ಪ್ರೌಢ ಅಲಿಗೇಟರ್‌ಗಳು ರೇಜರ್‌ಬಾಕ್‌ಗಳನ್ನು ಮತ್ತು ಜಿಂಕೆಗಳನ್ನು ಮತ್ತು ಚಿಕ್ಕ ಅಲಿಗೇಟರ್‌‍ಗಳನ್ನು ಸೇವಿಸುತ್ತವೆ. ಕೆಲವು ಸಂದರ್ಭಗಳಲ್ಲಿ ದೊಡ್ಡ ಅಲಿಗೇಟರ್‌ಗಳು ಹೊಂಚುಹಾಕಿ ನಾಯಿಗಳು, ಫ್ಲೊರಿಡಾ ಚಿರತೆಗಳನ್ನು ಮತ್ತು ಕಪ್ಪು ಕರಡಿಗಳನ್ನು ಹಿಡಿದು ತಿನ್ನುವ ಮೂಲಕ ಅತ್ಯುನ್ನತ ಪರಭಕ್ಷಕ ಎನಿಸಿಕೊಂಡಿವೆ. ಅಲಿಗೇಟರ್‌ಗಳ ವಾಸಸ್ಥಾನಕ್ಕೆ ಮನುಷ್ಯರು ದಾಳಿ ಮಾಡುವುದರಿಂದ ಅವು ದಾಳಿ ಮಾಡುತ್ತವೆ ಎಂದು ನಂಬಲಾದರು ಕೂಡ ಗಮನಕ್ಕೆ ಬಂದಿರುವುದು ಕಡಿಮೆ ಇವೆ. ಅಲಿಗೇಟರ್‌ಗಳು ದೊಡ್ಡ ಮೊಸಳೆಗಳಂತಲ್ಲದಿದ್ದರೂ ತಮ್ಮ ರಕ್ಷಣೆಗಾಗಿ ಮನುಷ್ಯರ ಮೇಲೆ ದಾಳಿ ಮಾಡುವ ಸಂಭವ ಇದೆ.

ಸಂತಾನೋತ್ಪತ್ತಿ

ಬದಲಾಯಿಸಿ
 
ಅಲಿಗೇಟರ್‌ಗಳ ಮೊಟ್ಟೆಗಳು ಮತ್ತು ಯೌವನಾವಸ್ಥೆ.
 
ಮರಿ ಅಲಿಗೇಟರ್‌ಗಳು
 
ಅಪರೂಪದ ಬಿಳಿ ಬಣ್ಣದ ಅಮೆರಿಕಾದ ಅಲಿಗೇಟರ್

ಪ್ರೌಢ ಅಲಿಗೇಟರ್‌ಗಳು 6 feet (1.8 m) ಉದ್ದವಿರುತ್ತದೆ. ವಸಂತ ಋತುವಿನ ಕೊನೆಯಲ್ಲಿ ಇವುಗಳು ಸಂತಾನೋತ್ಪತ್ತಿ ಕ್ರಿಯೆ ನಡೆಸುತ್ತವೆ. ಎಪ್ರಿಲ್ ಮತ್ತು ಮೇಯಲ್ಲಿ ಅಲಿಗೇಟರ್ಗಳು ಸಾಂಘೀಕ ಸಾಲಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುವ "bellowing choruses" ಅನ್ನು ಉಂಟು ಮಾಡುತ್ತವೆ. ದೊಡ್ಡ ಗುಂಪುಗಳಲ್ಲಿ ದಿನದಲ್ಲಿ ಕಲವು ಸಲ ಕೆಲವು ನಿಮಿಷಗಳು ಸಾಮಾನ್ಯವಾಗಿ ಸೂರ್ಯೋದಯದ ಸಮಯದಲ್ಲಿ ಒಂದರಿಂದ ಮೂರು ಘಂಟಗಳ ಕಾಲ ಹೊರಬರುತ್ತವೆ. ಅಮೇರಿಕಾದ ಗಂಡು ಅಲಿಗೇಟರ್‌‍ಗಳು ಜೋರಾಗಿ ಕೂಗುತ್ತದೆ. ಗಂಡು ಅಲಿಗೇಟರ್‌‍ಗಳ ಇನ್ನೊಂದು ಲಕ್ಷಣವೆಂದರೆ ತಲೆಯನ್ನು ಬಡಿದುಕೊಳ್ಳುತ್ತವೆ.[]. ಇತ್ತೀಚಿನ ಸಂಶೋಧನೆಯ ಪ್ರಕಾರ ವಸಂತ ರಾತ್ರಿಗಳಲ್ಲಿ ಅಲಿಗೇಟರ್‌ಗಳು ಬೃಹತ್ ಪ್ರಮಾಣದಲ್ಲಿ ಒಟ್ಟಿಗೆ ಸೇರುತ್ತವೆ. ಇದನ್ನು "ಅಲಿಗೇಟರ್ ನೃತ್ಯ" ಎಂದು ಕರೆಯಲಾಗುತ್ತದೆ.[೧೦]. ಬೇಸಿಗೆಯಲ್ಲಿ ಹೆಣ್ಣು ಅಲಿಗೇಟರ್ಗಳು ಸಸ್ಯಗಳ ಭಾಗಗಳಿಂದ ಗೂಡನ್ನು ಕಟ್ಟುತ್ತವೆ, ಸಸ್ಯಗಳು ಕೊಳೆಯುವುದರಿಂದ ಉಂತಾಗುವ ಶಾಖದಿಂದ ಮೊಟ್ಟೆಗಳನ್ನು ಮರಿ ಮಾಡುತ್ತವೆ. ಮರಿಗಳ ಲಿಂಗವನ್ನು ಗೂಡಿನಲ್ಲಿನ ತಾಪಮಾನದಿಂದ ಕಂಡುಹಿಡಿಯಲಾಗುವುದು ಮತ್ತು ಇದು 7ರಿಂದ 21 ದಿನಗಳಲ್ಲಿ ಮರಿಮಾಡಲು ಆರಂಭಿಸುತ್ತವೆ. ಮರಿಮಾಡುವ ತಾಪಮಾನವು 86 °F (30 °C) ಅಥವಾ ಕಡಿಮೆಯಾದರೆ ಹೆಣ್ಣಾಗುತ್ತದೆ; ತಾಪಮಾನವು 93 °F (34 °C) ಅಥವಾ ಹೆಚ್ಚಾದರೆ ಗಂಡಾಗುತ್ತದೆ. ಎಲೆಗಳಿಂದ ರಚಿಸಿದ ಗೂಡು ಜವಳು ಮಣ್ಣಿನಿಂದ ರಚಿಸಿದ ಗೂಡಿಗಿಂತ ಹೆಚ್ಚು ಬಿಸಿಯಾಗಿರುತ್ತವೆ, ಮೊದಲು ಗಂಡುಗಳು ಹೊರಬರುತ್ತದೆ ನಂತರ ಹೆಣ್ಣುಗಳು ಹೊರಬರುತ್ತದೆ. ಸಹಜವಾಗಿ ಐದು ಹೆಣ್ಣುಗಳು ಹೊರಬಂದಾಗ ಒಂದು ಗಂಡು ಹೊರಬರುತ್ತದೆ. ಹೆಣ್ಣುಗಳು ಮೊಟ್ಟೆಯಿಂದ ಹೊರಬರುವಾಗ 86 °F (30 °C) ತೂಕವಿರುತ್ತದೆ ಮತ್ತು ಗಂಡುಗಳು 93 °F (34 °C)[೧೧] ಹೆಣ್ಣುಗಳಿಗಿಂತ ಕಡಮೆ ತೂಕವಿರುತ್ತದೆ. ತಾಯಿಯು ಗೂಡನ್ನು ಪರಭಕ್ಷಕಗಳಿಂದ ರಕ್ಷಿಸುತ್ತವೆ ಮತ್ತು ಹೊಸಮರಿಗಳಿಗೆ ನೀರಿಗೆ ತೆರಳಲು ಸಹಕರಿಸುತ್ತದೆ. ಅವುಗಳು ಅದೇ ಪ್ರದೇಶದಲ್ಲಿದ್ದರೆ ಒಂದು ವರ್ಷಗಳ ಕಾಲ ರಕ್ಷಣೆಯನ್ನೊದಗಿಸುತ್ತದೆ. ಮರಿ ಅಲಿಗೇಟರ್‌‍ಗಳು ಪ್ರೌಢ ಅಲಿಗೇಟರ್‌ಗಳು ತಿನ್ನುತ್ತವೆ. ಮರಿ ಅಲಿಗೇಟರ್‌ಗಳು ಮೊಟ್ಟೆಹಲ್ಲುಗಳನ್ನು ಹೊಂದಿದ್ದು ಮರಿ ಹೊರಬರುವ ಸಂದರ್ಭದಲ್ಲಿ ಸಹಾಯಕವಾಗಿವೆ.ಒಂದು ವರ್ಷದೊಳಗೆ ಐವತ್ತು ಪ್ರತಿಶತ ಮರಿಗಳನ್ನು ಪ್ರೌಡ ಪರಭಕ್ಷಕಗಳು ತಿಂದುಹಾಕುತ್ತವೆ. ಮೊದಲು ಅಲಿಗೇಟರ್‌ಗಳ ಬೇಟೆಯನ್ನು ನಿಷೇಧಿಸಿದ ತಕ್ಷಣ.ಅಲಿಗೇಟರ್‌ಗಳ ಮರಿಗಳ ಮರಣದ ಪ್ರಮಾಣ ಕಡಿಮೆಯಾದದ್ದರಿಂದ ಅಲಿಗೇಟರ್‌ಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ.

ಅಂಗರಚನಾ ಶಾಸ್ತ್ರ

ಬದಲಾಯಿಸಿ

ಕೇವಲ ಅಲಿಗೇಟರ್‌ಗಳು ಮಾತ್ರ ಏಕ-ಮಾರ್ಗದ ಉಸಿರಾಟವನ್ನು ಹೊಂದಿರುವ ಹಾರದಿರುವ ಜಾತಿಗೆ ಸೇರಿದ ಪ್ರಾಣಿಯಾಗಿದೆ. ಇದೇ ರೀತಿಯ ಉಸಿರಾಟದ ರೀತಿಯನ್ನು ಇನ್ನುಳಿದ ಅಲಿಗೇಟರ್ ಜಾತಿಗೆ ಸೇರಿದ ಮೊಸಳೆಗಳಲ್ಲಿಯೂ ಇದೇ ರೀತಿಯ ಉಸಿರಾಟವನ್ನು ಹೊಂದಿದೆ ಎಂಬುದರ ಕುರಿತಾದ ಸಂಶೋಧನೆ ನಡೆಯಬೇಕಾಗಿದೆ.[೧೨] ಇತರ ಎಲ್ಲಾ ಹಾರಾಡದ ಪ್ರಾಣಿಗಳು ದ್ವಿಮುಖ ಮಾರ್ಗದ ಉಸಿರಾಟವನ್ನು ಹೊಂದಿರುತ್ತವೆ. ದ್ವಿಮುಖ ಉಸಿರಾಟದಲ್ಲಿ ಗಾಳಿಯು ಶ್ವಾಸಕೋಶದ ಮೂಲಕ ಕವಲೊಡೆದು ಶ್ವಾಸನಾಳಿಕೆಗಳ ಮೂಲಕ ಸಾಗಿ ಕಿರುಗುಳಿಗಳ ಕವಾಟದಲ್ಲಿ ಕೊನೆಗೊಳ್ಳುತ್ತದೆ. ಗಾಳಿಯು ಶ್ವಾಸನಾಳಿಕೆಗಳಲ್ಲಿ ಎರಡೂ ದಿಕ್ಕಿನಲ್ಲಿ ಸಾಗುತ್ತದೆ. ಅಲಿಗೇಟರ್‌ಗಳಲ್ಲಿ ಗಾಳಿಯು ಶ್ವಾಸನಳಿಕೆಗಳ ಸುತ್ತ ಶ್ವಾಸನಾಳಿಕೆಗಳಲ್ಲಿ ಒಂದೇ ಮಾರ್ಗದಲ್ಲಿ ಸುತ್ತುತ್ತದೆ. ಗಾಳಿಯು ಮೊದಲು ಹೊರಕವಲನ್ನು ಪ್ರವೇಶಿಸಿ ಸಣ್ಣದಾದ ಶ್ವಾಸನಾಳಿಕೆಗಳ ಮೂಲಕ ಶ್ವಾಸಕೋಶಗಳ ಪ್ರವೇಶಿಸುತ್ತದೆ ಮತ್ತು ಒಳಗಿನ ಕವಲಿನ ಮೂಲಕ ಶ್ವಾಸಕೋಶದಲ್ಲಿ ನೆಲೆಸುತ್ತದೆ. ಶ್ವಾಸನಾಳಿಕೆಗಳಲ್ಲಿ ಆಮ್ಲಜನಕದ ಬದಲಾವಣೆಯೇರ್ಪಡುತ್ತದೆ.[೧೩] ಕೆಲವು ಅಲಿಗೇಟರ್‌ಗಳು ವಂಶಾವಳಿಯಿಂದ ಬಂದ ಜೀನನ್ನು ಮೆಲನಿನ್‌ನಿಂದ ಕಳೆದುಕೊಳ್ಳುತ್ತದೆ, ಹೀಗಾಗಿ ಅವು ಬಿಳಿಚಾಗಿರುತ್ತವೆ. ಈ ಅಲಿಗೇಟರ್‌ಗಳು ಈಗ ಅತ್ಯಂತ ವಿರಳವಾಗಿವೆ ಮತ್ತು ಇವುಗಳನ್ನು ಕಾಡುಗಳಲ್ಲಿ ಕಾಣುವುದು ಅಸಾಧ್ಯವಾಗಿದೆ. ಬೆಳಕು ಕಡಿಮೆಯಿರುವ ಪ್ರದೇಶದಲ್ಲಿ ಬದುಕುಳಿಯುತ್ತವೆ ಇತರ ಬಿಳುಚಾದ ಪ್ರಾಣಿಗಳಂತೆ ಇವೂ ಬೆಳಕಿನಿಂದ ಮತ್ತು ಪರಭಕ್ಷಕಗಳಿಂದ ದೂರವಿರುತ್ತದೆ.[೧೪] ಸಮತಲ ಸ್ನಾಯು ಇರುವ ಬಾಲ ಹೊಂದಿರುವುದರಿಂದ ಈಜುವಾಗ ಅವುಗಳು ಮುಂದಕ್ಕೆ ನೂಕಲು ಸಹಾಯಕವಾಗುತ್ತವೆ.

ಮಾನವ ಬಳಕೆ

ಬದಲಾಯಿಸಿ

ಅಲಿಗೇಟರ್‌ಗಳನ್ನು ಅವುಗಳ ಚರ್ಮ ಮತ್ತು ಮಾಂಸಕ್ಕಾಗಿ ಸಾಯಿಸಲಾಗುತ್ತದೆ, ಇದನ್ನು ಚೀಲಗಳು ಮತ್ತು ಪಾದರಕ್ಷೆಗಳ ತಯಾರಿಕೆಯಲ್ಲಿ ಬಳಸುತ್ತಾರೆ.

ಇವನ್ನೂ ನೋಡಿ

ಬದಲಾಯಿಸಿ
  • ಅಲಿಗೇಟೊರಿಡೆ
  • ಅಮೇರಿಕಾದ ಅಲಿಗೇಟರ್ಗಳು
  • ಅಮೇರಿಕಾದ ಅಲಿಗೇಟರ್ಗಳು
  • ಸೈಮನ್‌
  • ಅಲಿಗೇಟರ್ಗಳು
  • ಸಂಯುಕ್ತ ಸಂಸ್ಥಾನಗಳ ದಶಕದ ಅವಶ್ಯ ಅಲಿಗೇಟರ್ಗಳ ದಾಳಿಯ ಪಟ್ಟಿ

ಉಲ್ಲೇಖಗಳು

ಬದಲಾಯಿಸಿ
  1. "American alligator, Wildlife Species Information: U.S. Fish and Wildlife Service". Ecos.fws.gov. Archived from the original on 2008-12-20. Retrieved 2008-12-11.
  2. "American Alligator and our National Parks". Eparks.org. Retrieved 2008-10-14.
  3. "Largest alligators". Archived from the original on 2009-02-23. Retrieved 2009-01-29.
  4. "Louisiana Alligator Advisory Council". Archived from the original on 2016-03-05. Retrieved 2010-03-07.
  5. 2005 ಸ್ಕೊಲಾಸ್ಟಿಕ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ಸ್
  6. Fish, Frank E. (2007-08-09). "Death roll of the alligator: mechanics of twist feeding in water". The Journal of Experimental Biology. 210 (Pt 16). The Company of Biologists: 2811–2818. doi:10.1242/jeb.004267. PMID 17690228. Retrieved 2008-09-27. {{cite journal}}: External link in |publisher= (help); Unknown parameter |coauthors= ignored (|author= suggested) (help)
  7. ಕ್ರೊಕೊಡೈಲಿಯನ್ ಕ್ಯಾಪ್ಟೀವ್ ಕೇರ್ ಎಫ್‌ಎಕ್ಯೂ: Archived 2011-07-25 ವೇಬ್ಯಾಕ್ ಮೆಷಿನ್ ನಲ್ಲಿ. ಹೌ ಟು ಪ್ರಾಪರ್ಲೀ ಹ್ಯಾಂಡಲ್/ಟ್ರಾನ್ಸ್‌ಪೋರ್ಟ್ ಕ್ರೊಕೊಡಲಿಯನ್ಸ್ ಇತ್ಯಾದಿ.
  8. "ಲಿವಿಂಗ್ ವಿತ್ ಅಲಿಗೇಟರ್ಸ್". Archived from the original on 2010-11-26. Retrieved 2010-11-08.
  9. Garrick, L.D. and Lang, J.W. (1977). "Social Displays of the American Alligator". American Zoologist. 17 pp.: 225–239.{{cite journal}}: CS1 maint: multiple names: authors list (link)
  10. Dinets, V.L. (2010). "Nocturnal behavior of the American Alligator (Alligator mississippiensis) in the wild during the mating season". Herpetological Bulletin. 111 pp.: 4–11.
  11. "Temperature of egg incubation determines sex in Alligator mississippiensis". Nature.com. Retrieved 2008-12-11.
  12. Farmer, C.G., and Sanders, K. (2010). "Unidirectional Airflow in the Lungs of Alligators". Science. 327. no. 5963, pp. (5963): 338–340. doi:10.1126/science.1180219. PMID 20075253. Retrieved 2010-05-29. {{cite journal}}: Unknown parameter |month= ignored (help)CS1 maint: multiple names: authors list (link)
  13. ಸೈನ್ಸ್ ನ್ಯೂಸ್; ಫೆಬ್ರವರಿ 13, 2010; ಪುಟ 11
  14. "White albino alligators". .softpedia.com. Archived from the original on 2008-05-31. Retrieved 2008-10-27.


ಬಾಹ್ಯ ಕೊಂಡಿಗಳು

ಬದಲಾಯಿಸಿ

ಸುದ್ದಿಯಲ್ಲಿ ಅಲಿಗೇಟರ್‌ಗಳು

ಬದಲಾಯಿಸಿ