ಅರ್ನ್‌ಸ್ಟ್ ಹೈನ್ರಿಚ್ ವೇಬರ್
ಅರ್ನ್‌ಸ್ಟ್ ಹೈನ್ರಿಚ್ ವೇಬರ್ (1795-1878) ಜರ್ಮನ್ ಶರೀರವಿಜ್ಞಾನಿ.[೧][೨]
ಜೀವನ
ಬದಲಾಯಿಸಿವಿಟ್ಟೆನ್ಬರ್ಗ್ನಲ್ಲಿ 1795 ರಲ್ಲಿ ಜನಿಸಿದ. ಅಲ್ಲಿಯ ಮತ್ತು ಲೈಪ್ಝಿಗ್‌ನಲ್ಲಿಯ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ. ಮುಂದೆ ಲೈಪ್ಝಿಗ್ ವಿಶ್ವವಿದ್ಯಾಲಯದಲ್ಲಿ ಮಾನವ ಅಂಗರಚನಾವಿಜ್ಞಾನ ಪೀಠದ ಅಧ್ಯಕ್ಷನಾಗಿ ನೇಮಕನಾದ (1818).[೩] 1840ರಲ್ಲಿ ಶರೀರವಿಜ್ಞಾನ ಪೀಠಾಧ್ಯಕ್ಷನಾದ. ಅಲ್ಲಿ ವೇಬರ್, ಪ್ರಧಾನವಾಗಿ ಸ್ತನಿಗಳ ನಡುಗಿವಿ ಕುರಿತಂತೆ, ವ್ಯಾಪಕ ಭ್ರೂಣವೈಜ್ಞಾನಿಕ ಮತ್ತು ಪ್ರಾಗ್ಜೀವಿವೈಜ್ಞಾನಿಕ ಅಧ್ಯಯನಗಳನ್ನು ತುಲನಾತ್ಮಕವಾಗಿ ಮಾಡಿದ. ಜೀರ್ಣಕಾರಕ ರಸಗಳು ಗ್ರಂಥಿಗಳ ನಿರ್ದಿಷ್ಟ ಉತ್ಪನ್ನಗಳೆಂದು ಸಾಧಿಸಿದ. ಈ ಸಂಶೋಧನೆ ಶರೀರವೈಜ್ಞಾನಿಕ ಹಾಗೂ ರಾಸಾಯನಿಕ ಕ್ಷೇತ್ರಗಳಲ್ಲಿ ನೂತನ ವಿಸ್ತಾರಗಳನ್ನೇ ಅನಾವರಣಗೊಳಿಸಿತು. ಸಂವೇದೀ ಕ್ರಿಯೆಗಳ ಅಧ್ಯಯನದಲ್ಲಿ, ಅಲ್ಲಿಯೂ ಚರ್ಮದ ಸಂವೇದಕತೆ ಕುರಿತಂತೆ, ಬಲು ಆಳವಾಗಿ ಸಂಶೋಧನೆ ನಡೆಸಿದ. ಸಂವೇದೀ ದೇಹಲಿ (ಸೆನ್ಸರಿ ತ್ರಶೋಲ್ಡ್) ಪರಿಕಲ್ಪನೆಯನ್ನು ಈತ ರೂಢಿಗೆ ತಂದ. ಚರ್ಮದ ಸಂವೇದಕತೆಯನ್ನು ನಿರ್ಧರಿಸಿ ಪರಿಮಾಣೀಕರಿಸಲು (ಕ್ವಾಂಟಿಫೈ) ಒಂದು ವಿಧಾನ ರೂಪಿಸಿ 1834 ರಲ್ಲಿ ನಿರೂಪಿಸಿದ. ಇದರ ಹೆಸರು ವೇಬರ್-ಫೆಕ್ನರ್ ಉದ್ದೀಪನವೃದ್ಧಿ ನಿಯಮ.
ಉಲ್ಲೇಖಗಳು
ಬದಲಾಯಿಸಿ- ↑ "Weber,Ernst Heinrich ." Complete Dictionary of Scientific Biography. . Encyclopedia.com. 11 Dec. 2023 <https://www.encyclopedia.com>.
- ↑ Britannica, The Editors of Encyclopaedia. "Ernst Heinrich Weber". Encyclopedia Britannica, 20 Jun. 2023, https://www.britannica.com/biography/Ernst-Heinrich-Weber. Accessed 28 December 2023.
- ↑ "Professorenkatalog der Universität Leipzig". University of Leipzig. Retrieved 17 September 2023.