ಅರ್ಚನಾ ಭಟ್ಟಾಚಾರ್ಯ

ಭಾರತೀಯ ಭೌತಶಾಸ್ತ್ರಜ್ಞ

ಅರ್ಚನಾ ಭಟ್ಟಾಚಾರ್ಯರವರು ಭಾರತೀಯ ಭೌತಶಾಸ್ತ್ರಜ್ಞೆ. ಅವರು ಅಯಾನುಗೋಳದ ಭೌತಶಾಸ್ತ್ರ ಮತ್ತು ಬಾಹ್ಯಾಕಾಶ ಹವಾಮಾನ ಕ್ಷೇತ್ರದಲ್ಲಿ ಪರಿಣತಿ ಹೊಂದಿದ್ದರು. ಅವರು ನವಿ ಮುಂಬೈನಲ್ಲಿರುವ ಭಾರತೀಯ ಭೂಭೌತಿಕ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದರು.[]

ಅರ್ಚನಾ ಭಟ್ಟಾಚಾರ್ಯ
ಜನನ1948 (ವಯಸ್ಸು 75–76)
ವಾಸಸ್ಥಳಭಾರತ
ರಾಷ್ಟ್ರೀಯತೆಭಾರತೀಯ
ಸಂಸ್ಥೆಗಳುಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜಿಯೋಮ್ಯಾಗ್ನಟಿಸಮ್
ಅಭ್ಯಸಿಸಿದ ವಿದ್ಯಾಪೀಠದೆಹಲಿ ವಿಶ್ವವಿದ್ಯಾಲಯ
ಪ್ರಸಿದ್ಧಿಗೆ ಕಾರಣಅಯಾನುಗೋಳದ ಭೌತಶಾಸ್ತ್ರ

ಶಿಕ್ಷಣ

ಬದಲಾಯಿಸಿ

ಡಾ.ಅರ್ಚನಾ ಭಟ್ಟಾಚಾರ್ಯರವರು ೧೯೬೭ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಬಿ.ಎಸ್ಸಿ(ಆನರ್ಸ್) ಹಾಗು ೧೯೬೯ರಲ್ಲಿ ಎಂ.ಎಸ್ಸಿ ಪದವಿಯನ್ನು ಭೌತಶಾಸ್ತ್ರದಲ್ಲಿ ಪೂರ್ಣಗೊಳಿಸಿದರು. ಡಾ.ಅರ್ಚನಾ ಭಟ್ಟಾಚಾರ್ಯರವರು ನ್ಯಾಶನಲ್ ಸೈನ್ಸ್ ಟ್ಯಾಲೆಂಟ್ ವಿದ್ಯಾರ್ಥಿವೇತನವನ್ನು(೧೯೬೪-೬೯) ಪಡೆದಿದ್ದಾರೆ. ಅವರಿಗೆ ೧೯೭೫ರಲ್ಲಿ ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಪಿ.ಎಚ್‌.ಡಿ ಪದವಿ ದೊರಕಿತು.

ವೃತ್ತಿಜೀವನ

ಬದಲಾಯಿಸಿ

೧೯೭೮ರಲ್ಲಿ ಮುಂಬೈನಲ್ಲಿರುವ ಭಾರತೀಯ ಭೂಭೌತಿಕ ಸಂಸ್ಥೆಯಲ್ಲಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜಿಯೋಮ್ಯಾಗ್ನಟಿಸಮ್‌) ಕಾರ್ಯ ನಿರ್ವಹಿಸಲು ಪ್ರಾರಂಭಿಸಿದರು. ಅವರು ಇಲಿನಾಯ್ ವಿಶ್ವವಿದ್ಯಾನಿಲಯದಲ್ಲಿ ಕೆ.ಸಿ.ಎ ಗುಂಪಿನೊಂದಿಗೆ ಕಾರ್ಯ ನಿರ್ವಹಿಸಿದರು. ಅವರು ಮೆಸ್ಯಾಚೂಸೆಟ್ಸ್‌ನಲ್ಲಿರುವ ವಾಯುಪಡೆಯ ಸಂಶೋಧನಾ ಪ್ರಯೋಗಾಲಯದಲ್ಲಿ ಹಿರಿಯ ಸಹಾಯಕ ಸಂಶೋಧಕಿಯಾಗಿದ್ದರು. ಅವರು ೨೦೦೫-೨೦೧೦ರ ಅವಧಿಯಲ್ಲಿ ಭಾರತೀಯ ಭೂಭೌತಿಕ ಸಂಸ್ಥೆಯ ನಿರ್ದೇಶಕರಾಗಿದ್ದರು. ಪ್ರಸ್ತುತ ಅವರು ಭಾರತೀಯ ಭೂಭೌತಿಕ ಸಂಸ್ಥೆಯ ನಿವೃತ್ತ ವಿಜ್ಞಾನಿ.

ಪ್ರಶಸ್ತಿಗಳು ಮತ್ತು ಗೌರವಗಳು

ಬದಲಾಯಿಸಿ

೧.೨೦೦೮ರಲ್ಲಿ ಭಾರತೀಯ ಭೂಭೌತಿಕ ಒಕ್ಕೂಟದಿಂದ (ಇಂಡಿಯನ್ ಜಿಯೋಫಿಸಿಕಲ್ ಯೂನಿಯನ್‌) ಪ್ರೊಫೆಸರ್ ಕೆ.ಆರ್.ರಾಮನಾಥನ್ ಸ್ಮಾರಕ ಉಪನ್ಯಾಸ ಮತ್ತು ಪದವಿಯನ್ನು ಪಡೆದಿದ್ದಾರೆ. ೨.೧೯೬೯ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದಿಂದ ಡಾ.ಕೆ ಎಸ್ ಕೃಷ್ಣನ್ ಚಿನ್ನದ ಪದಕ ೩.ಅವರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌) ಫೆಲೋ ಆಗಿದ್ದರು.[]

ಸಂಶೋಧನಾ ಆಸಕ್ತಿಗಳು

ಬದಲಾಯಿಸಿ

ಅಯಾನುಗೋಳ ರೇಡಿಯೊ ತರಂಗಗಳೊಂದಿಗೆ ಅಯಾನುಗೋಳವನ್ನು ಪರೀಕ್ಷಿಸುವುದು

ಅಯಾನುಗೋಳದ ಮೇಲೆ ಬಾಹ್ಯಾಕಾಶ ಹವಾಮಾನದ ಪರಿಣಾಮಗಳು.

ಭೂಕಾಂತೀಯ ಕ್ಷೇತ್ರದ ಪ್ರಾದೇಶಿಕ-ತಾತ್ಕಾಲಿಕ ವ್ಯತ್ಯಾಸಗಳು.[]

ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜಿಯೋಮ್ಯಾಗ್ನಟಿಸಮ್". Archived from the original on 2016-06-10. Retrieved 2016-03-12.
  2. "ಇಂಡಿಯನ್ ನ್ಯಾಶನಲ್ ಸೈನ್ಸ್ ಅಕಾಡೆಮಿ". Archived from the original on 2014-03-15. Retrieved 2016-03-12.
  3. "ಡಾ. ಎ ಭಟ್ಟಾಚಾರ್ಯ". web.archive.org. 15 March 2014. Archived from the original on 15 ಮಾರ್ಚ್ 2014. Retrieved 21 March 2020.{{cite web}}: CS1 maint: bot: original URL status unknown (link)